ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ :

  • ಕಾರ್ಕಳ : ಪಿರ್ಯಾದು ಇಂದಿರಾ ನಾಯ್ಕ, ಪ್ರಾಯ: 45 ವರ್ಷ, ಗಂಡ: ತಿಮ್ಮಪ್ಪ ನಾಯ್ಕ, ವಾಸ: ಅಂಗಡಿ ಬೆಟ್ಟು, ದರ್ಖಾಸು ಮನೆ, ರಂಗನಪಲ್ಕೆ, ಕೌಡೂರು ಗ್ರಾಮ, ಕಾರ್ಕಳ ಇವರು ದಿನಾಂಕ 01.10.2021 ರಂದು ಬೆಳಿಗ್ಗೆ 10:00 ಗಂಟೆಗೆ ಮನೆಗೆ ಬೀಗ ಹಾಕಿ ರಂಗನಪಲ್ಕೆಗೆ ಬೀಡಿ ಬ್ರಾಂಚ್‌ಗೆ ಹೋಗಿದ್ದು 11:00 ಗಂಟೆಗೆ ವಾಪಾಸು ಬಂದು ನೋಡಿದಾಗ ಮನೆಯ ಮುಂದಿನ ಬಾಗಿಲಿಗೆ ಹಾಕಿದ ಬೀಗವನ್ನು ಯಾರೋ ಕಳ್ಳರು ಬಲಪ್ರಯೋಗದಿಂದ ಮುರಿದು ಒಳಪ್ರವೇಶಿಸಿ ಮನೆಯ ಒಳಗೆ ಸೂಟ್‌ಕೇಸ್‌ನಲ್ಲಿದ್ದ ಬಟ್ಟೆಬರೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಮಗಳ ಪರ್ಸ್ ನಲ್ಲಿದ್ದ 150/- ರೂ ನಗದು, ಪೆಟ್ಟಿಗೆ ಒಳಗೆ ಪ್ಲಾಸ್ಟಿಕ್ ಡಬ್ಬದಲ್ಲಿದ್ದ 1 ಜೊತೆ ಬೆಳ್ಳಿಯ ಕಾಲುಚೈನು, 2 ಜೊತೆ ತುಂಡಾದ ಮಕ್ಕಳ ಕಾಲುಚೈನು, ಹಳೆಯ ಬೆಳ್ಳಿಯ ಬಳೆಗಳು 1 ಜೊತೆ 1 ಬೆಳ್ಳಿಯ ಡಿಸ್ಕೋ ಚೈನು ಇವುಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಬೆಳ್ಳಿಯ ಆಭರಣಗಳ ಮೌಲ್ಯ ರೂ. 8,100/- ಆಗಿರುತ್ತದೆ. ನಗದು ಹಾಗೂ ಬೆಳ್ಳಿಯ ಆಭರಣ ಸೇರಿ ಕಳುವಾದ ಸ್ವತ್ತುಗಳ ಒಟ್ಟು ಮೌಲ್ಯ ರೂ. 8250/- ಆಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 122/2021 ಕಲಂ 454,380 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ :

  • ಕುಂದಾಪುರ : ಫಿರ್ಯಾದು ಸವಿತ (45) ಗಂಡ: GD ಮಂಜು ಪೂಜಾರಿ ವಾಸ: ದೇವರ ಹಳ್ಳಿಮನೆ ಗುಲ್ವಾಡಿ ಗ್ರಾಮ ಕುಂದಾಪುರ ದಾರರ ನೆರೆಮೆನೆಯ ವರಾದ ರೀತಾ ಶೆಟ್ಟಿಯವರ ತಾಯಿ ರಾಜೀವಿ ಶೆಟ್ಟಿಯವರು ಕ್ಯಾನ್ಸ್ ರ್ ಖಾಯಿಲೆಯಿಂದ ಬಳಲುತಿದ್ದು ಅವರ ಆರೈಕೆಯ ಬಗ್ಗೆ ನಿಕಿತಾ ಹೋಮ ನರ್ಸ ಸರ್ವಿಸಸ್ ಎಂಬ ಏಜನ್ಸಿಸ್ ರವರಿಂದ ಮಂಜುಳಾ ಬರೆದೇಲಿ ಎಂಬರನ್ನು ಇರಿಸಿಕೊಂಡಿದ್ದು ದಿನಾಂಕ 10-10-2021 ರಂದು ಮದ್ಯಾಹ್ನ 13:40 ಗಂಟೆಗೆ ಮಂಜುಳಾ ಬಗ್ಗೆ ಕೂಗುತ್ತಿದ್ದು ಪಿರ್ಯಾದಿದಾರರು ಬಂದು ವಿಚಾರಿಸಿದಾಗ ಮಂಜುಳಾ ಮಧ್ಯಾಹ್ನ 13:10ಗೆ ಊಟ ಮಾಡಿದ ನಂತರ ಕಾಣದೇ ಇರುವ ಬಗ್ಗೆ ತಿಳಿಸಿದ್ದು, ಹುಡುಕಾಡಿದಲ್ಲಿ ರೀತಾ ಶೆಡ್ತಿಯವರ ಮನೆಯ ಬಾವಿಯ ನೀರನಲ್ಲಿ ಮಂಜುಳಾರವರ ಮೃತ ದೇಹ ತೇಲುವ ಸ್ಥಿತಿಯಲ್ಲಿ ಪತ್ತೆಯಾಗಿರುತ್ತದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಯುಡಿಆರ್ ಕ್ರಮಾಂಕ : 29/2021 ಕಲಂ. 174 ಸಿಆರ್ ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಪಘಾತ ಪ್ರಕರಣ :

  • ಕುಂದಾಪುರ : ದಿನಾಂಕ 01/10/2021 ರಂದು ಸಂಜೆ ಸುಮಾರು 6:45 ಗಂಟೆಗೆ, ಕುಂದಾಪುರ ತಾಲೂಕಿನ, ಬಳ್ಕೂರು ಗ್ರಾಮದ ರಾಮ ಮೊಗವೀರರವರ ಮನೆಯ ಬಳಿ, ಎಸ್‌.ಹೆಚ್‌52 ರಸ್ತೆಯಲ್ಲಿ, ಆಪಾದಿತ ರಾಕೇಶ್‌ಕುಮಾರ್‌ಎಂಬವರು MH06-AL-3980ನೇ ಕ್ರೇನ್‌‌ನ್ನು ಬಸ್ರೂರು ಕಡೆಯಿಂದ ಕಂಡ್ಲೂರು ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು, ಕ್ರೇನ್‌ನ್ನು ರಸ್ತೆಯ ತೀರ ಎಡಬದಿಗೆ ಚಲಾಯಿಸಿ, ಅದೇ ದಿಕ್ಕಿನಲ್ಲಿ ಎಸ್‌.ಹೆಚ್‌ರಸ್ತೆಯ ಬದಿಯಲ್ಲಿ ಪಿರ್ಯಾದಿ ದಾಮೋಧರ ಆಚಾರ್ಯರವರ ಜೋತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅವರ ತಂದೆ ಸುಬ್ರಾಯ ಆಚಾರ್‌ರವರಿಗೆ ಹಿಂದಿನಿಂದ ಡಿಕ್ಕಿ ಹೊಡೆದಾಗ ರಸ್ತೆಗೆ ಬಿದ್ದ ಸುಬ್ರಾಯ ಆಚಾರ್‌ರವರ ತಲೆಯ ಮೇಲೆ ಕ್ರೇನ್‌‌‌ನ ಚಕ್ರ ಹಾದು ಹೋಗಿ ಸುಬ್ರಾಯ ಆಚಾರ್‌ಅವರ ತಲೆಯು ಸಂಪೂರ್ಣ ಜಖಂಗೊಂಡು ಮೆದುಳು ಹೊರಗೆ ಬಂದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 75/2021 ಕಲಂ:279, 304(ಎ) ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 02-10-2021 10:21 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080