ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾಪು: ಪಿರ್ಯಾದಿ ಶೈಲೇಶ್ ಶೆಟ್ಟಿ ಇವರು ನವಯುಗ ಕಂಪೆನಿಯಲ್ಲಿ ಸೇಫ್ಟಿ ಆಫಿಸರ್ ಆಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ: 02-10-2021 ರಂದು ಸ್ಥಳೀಯರೊಬ್ಬರು ಅವರಿಗೆ ಪೋನ್ ಮಾಡಿ ಬೆಳಿಗಿನ ಜಾವ 00:50 ಗಂಟೆಗೆ ಓರ್ವ ಲಾರಿ ಚಾಲಕ ತನ್ನ ಬಾಬ್ತು ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮಂಗಳೂರು ಕಡೆಯಿಂದ ರಾ.ಹೆ.66 ರ ಮಂಗಳೂರು ಉಡುಪಿ ರಸ್ತೆಯಲ್ಲಿ ಚಲಾಯಿಸಿಕೊಂಡು ಬಂದು ಕಟಪಾಡಿ ಜಂಕ್ಷನ್ ನ ಡಿವೈಡರ್ ತಿರುವಿನಲ್ಲಿ ಅಳವಡಿಸಿರುವ ನವಯುಗ ಕಂಪೆನಿಯ ಸೋಲಾರ್ ಕಂಬ, ಕ್ರ್ಯಾಷ್ ಬ್ಯಾರಿಯರ್ ಮತ್ತು ಪೊಲೀಸ್ ಇಲಾಖೆಯ ಸಿ.ಸಿ. ಕ್ಯಾಮರಕ್ಕೆ ಢಿಕ್ಕಿ ಹೊಡೆದು ಜಖಂಗೊಳಿಸಿರುವುದಾಗಿ ಮಾಹಿತಿ ನೀಡಿದಂತೆ ಪಿರ್ಯಾದಿದಾರರು ಕೂಡಲೇ ಕಟಪಾಡಿ ಜಂಕ್ಷನ್ ಗೆ ಹೋಗಿ ನೋಡುವಾಗ ಮಂಗಳೂರು ಉಡುಪಿ ಮತ್ತು ಉಡುಪಿ ಮಂಗಳೂರು ರಾ.ಹೆ 66 ರ ಮಧ್ಯದಲ್ಲಿನ ಡಿವೈಡರ್ ತಿರುವಿನಲ್ಲಿ ಅಳವಡಿಸಿದ ನವಯುಗ ಕಂಪೆನಿಗೆ ಸಂಬಂಧಪಟ್ಟ ಸೋಲಾರ್ ಕಂಬ, ಕ್ರ್ಯಾಷ್ ಬ್ಯಾರಿಯರ್ ಜಖಂಗೊಂಡಿದ್ದು ಸುಮಾರು 50,000/- ರೂ ನಷ್ಟ ಉಂಟಾಗಿದ್ದು ಅಲ್ಲದೇ ಪೊಲೀಸ್ ಇಲಾಖೆಯವರು ಅಳವಡಿಸಿರುವ ಸಿ.ಸಿ. ಕ್ಯಾಮರದ ಕಂಬ ಮತ್ತು 03 ಸಿ.ಸಿ. ಕ್ಯಾಮರ ಜಖಂಗೊಂಡಿರುವುದು ಕಂಡುಬಂದಿದ್ದು ಅಂದಾಜು 1,50,000/- ರೂ ನಷ್ಟ ಉಂಟಾಗಿರುವುದಾಗಿ ತಿಳಿದು ಬಂದಿರುತ್ತದೆ. ಅಪಘಾತ ನಡೆಸಿದ ಲಾರಿ ಅಲ್ಲಿಯೇ ನಿಂತಿದ್ದು ಅದರ ನಂಬ್ರ KA 47 9011 ಆಗಿದ್ದು ಚಾಲಕನ ಹೆಸರು ಶಂಕರಪ್ಪ ಎಂದು ತಿಳಿಯಿತು ಈ ಅಪಘಾತಕ್ಕೆ ಲಾರಿ ನಂಬ್ರ KA 47 9011 ನೇ ದರ ಚಾಲಕ ಶಂಕರಪ್ಪ ನವರ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 154/2021  ಕಲಂ 279, 427 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ದಿನಾಂಕ: 02/10/2021 ರಂದು 14:20 ಗಂಟೆಗೆ  ಕಾರ್ಕಳ ತಾಲೂಕು ಬೋಳ ಗ್ರಾಮದ ಬೋಳಕೋಡಿ ಹಡ್ಯಾಲು ಎಂಬಲ್ಲಿ  ಹಾದು ಹೋಗಿರುವ ಸಚ್ಚರಿಪೇಟೆ-ಮಂಜರಪಲ್ಕೆ ಡಾಮಾರು ರಸ್ತೆಯಲ್ಲಿ ಕೆ,ಎ20-ಇ,ಎಕ್ಸ್-5509 ನೇ ನಂಬ್ರದ ಬೈಕ್ ಸವಾರ ಆದಿತ್ಯ ಎಂಬವರು ಪ್ರಜ್ವಲ್ ಎಂಬವರನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ಮಂಜರಪಲ್ಕೆ ಕಡೆಯಿಂದ ಸಚ್ಚರಿಪೇಟೆ ಕಡೆಗೆ ಅತೀವೇಗ ಹಾಗೂ ಅಜಾಗರೂತೆಯಿಂದ ರಸ್ತೆಯ ತೀರಾ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಸಚ್ಚರಿಪೇಟೆ ಕಡೆಯಿಂದ ಮಂಜರಪಲ್ಕೆ ಕಡೆಗೆ ಹೋಗುತ್ತಿದ್ದ  ಕೆ,ಎ20-ಎಮ್,ಬಿ-5581 ನೇ ನಂಬ್ರದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನ ತಲೆಗೆ ಗಾಯ ಹಾಗೂ ಸಹಸವಾರನ ಕೈಕಾಲುಗಳಿಗೆ ಗಾಯವಾಗಿದ್ದು ಎರಡೂ ವಾಹನಗಳು ಜಖಂಗೊಂಡು ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಕಾರ್ಕಳ ತಾಲೂಕು ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 114/2021ಕಲಂ: 279, 337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಮಣಿಪಾಲ: ದಿನಾಂಕ: 01.10.2021 ರಂದು ಬೆಳಿಗ್ಗೆ 10:30 ಗಂಟೆಯಿಂದ ರಾತ್ರಿ 08:45 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಪಿರ್ಯಾದಿ ಅಶ್ವಿನ್ ಕುಮಾರ್ ಇವರು ವಾಸವಿರುವ 80 ಬಡಗಬೆಟ್ಟು ಗ್ರಾಮದ, ಮಂಚಿಕೆರೆ ಎಂಬಲ್ಲಿರುವ ಮನೆಯ ಹಾಲಿನ ಹಿಂಭಾಗದ ಬಾಗಿಲನ್ನು ಬಲವಾಗಿ ಗುದ್ದಿ ಮನೆಯ ಒಳಗೆ ಪ್ರವೇಶಿಸಿ ಮಾಸ್ಟರ್ ಬೆಡ್ ರೂಮ್ ನಲ್ಲಿನ ಗೋದ್ರೇಜ್ ನಲ್ಲಿಟ್ಟಿದ್ದ  1) 72 ಗ್ರಾಂ ತೂಕದ ಹವಳದ ಬಂಗಾರದ ಸರ 2) 40 ಗ್ರಾಂ ತೂಕದ ಚಿನ್ನದ ಸರ (ನವಿಲಿನ ಪೆಂಡೆಂಟ್ ಇರುತ್ತದೆ) 3) 8 ಗ್ರಾಂ ತೂಕದ ಚಿನ್ನದ ಚೈನ್ 4) 8 ಗ್ರಾಂ  ತೂಕದ ಸೊಂಟದ ಚೈನ್ 5) 8 ಗ್ರಾಂ ತೂಕದ ಮಕ್ಕಳ ಹಳವದ ಚೈನ್ 6) 20 ಗ್ರಾಂ ತೂಕದ ಮುತ್ತಿನ ಬಳೆಗಳು- 2 7) 16 ಗ್ರಾಂ ತೂಕದ ಬಳೆಗಳು -2 8) ಸ್ಯಾಮ್‌‌‌‌‌‌‌ಸಂಗ್ ಮೊಬೈಲ್ ಪೋನ್  ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಕಳವಾದ ಸ್ವತ್ತುಗಳ ಒಟ್ಟು ಅಂದಾಜು ಮೌಲ್ಯ ಸುಮಾರು 4,00,000/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 126/2021 ಕಲಂ: 454, 457.380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ

 • ಕೋಟ: ಪಿರ್ಯಾದಿ ಸುನೀತಾ ರಾಜಾರಾಂ ಇವರ ಗಂಡ ರಾಜಾರಾಂ ಪ್ರಾಯ 59 ವರ್ಷದವರು ದಿನಾಂಕ 24/08/2021 ಸಂಜೆ 05.30 ಗಂಟೆಗೆ ಎಂದಿನಂತೆ ಮನೆಯಿಂದ ಹೊರಗಡೆ ಹೋದವರು ರಾತ್ರಿ ಕಳೆದರೂ ಮನೆಗೆ ವಾಪಾಸ್ಸು ಬಂದಿರುವುದಿಲ್ಲ. ನಂತರ ಸಂಬಂಧಿಕರಲ್ಲಿ ಸ್ನೇಹಿತರಲ್ಲಿ ವಿಚಾರಿಸಿ ಹುಡುಕಾಡಿ ಪತ್ತೆಯ ಬಗ್ಗೆ ಪ್ರಯತ್ನಿಸಿದಲ್ಲಿ ಈ ತನಕ ಪತ್ತೆಯಾಗದೇ ಇದ್ದು ಹಾಗೂ ಇವರು ಈ ಹಿಂದೆಯೂ ಸುಮಾರು 5 ತಿಂಗಳ ಹಿಂದೆ ಯಾರಿಗೂ ಹೇಳದೇ ಮನೆಯಿಂದ ಹೋದವರು ಒಂದು ತಿಂಗಳ ಬಳಿಕ ಮನೆಗೆ ವಾಪಾಸ್ಸು ಬಂದಿದ್ದು, ಆದರೆ ದಿನಾಂಕ 24/08/2021 ಸಂಜೆ 05.30 ಗಂಟೆಗೆ ಎಂದಿನಂತೆ ಮನೆಯಿಂದ ಕಾಣೆಯಾದವರು ಈ ತನಕ ವಾಪಾಸ್ಸು ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 171//2021 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 •  ಶಿರ್ವ: ಆರೋಪಿ 1 ನೇ ದೀಪಕ್‌ (33) ತಂದೆ: ದಿ: ಶ್ರೀನಿವಾಸ ಶೆಟ್ಟಿಗಾರ್‌ ಈತನು ಯವನು ಪಿರ್ಯಾದಿ ಸುಷ್ಮಾ ಇವರ ಗಂಡನಾಗಿದ್ದು, ಆರೋಪಿ 2 ನೇ ಚೇತನ್‌ (30) ದಿ: ಶ್ರೀನಿವಾಸ ಶೆಟ್ಟಿಗಾರ್‌ ಈತನು ಪಿರ್ಯಾದಿದಾರರ ಗಂಡನ ಸಹೋದರನಾಗಿದ್ದು ಮತ್ತು ಆರೋಪಿ 3 ನೇ ಇಂದಿರಾ ಶೆಟ್ಟಿಗಾರ್‌ ಇವರು ಪಿರ್ಯಾದಿದಾರ ಅತ್ತೆಯಾಗಿದ್ದು, ಪಿರ್ಯಾದಿದಾರರು ದಿನಾಂಕ 20/05/2015 ರಂದು ಉಡುಪಿ ಚಿಟ್ಪಾಡಿ ಶ್ರೀಶಾರದಾಂಭ ದೇವಸ್ಥಾನದ ಸಭಾಭವನದಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ಆರೋಪಿ 1ನೇರವರೊಂದಿಗೆ ಮದುವೆಯಾಗಿದ್ದು, ಮದುವೆಯಾದ ಬಳಿಕ ಆರೋಪಿ 1 ನೇಯವನು ವಿದೇಶವಾದ ಇಸ್ರೇಲಿಗೆ ಹೋಗಿರುತ್ತಾನೆ. ಪಿರ್ಯಾದಿದಾರರು ಆರೋಪಿತರ ಮನೆಯಲ್ಲಿರುವಾಗ ಆರೋಪಿ 1 ನೇರವರ ತಂದೆ ಮತ್ತು ಆರೋಪಿ 3 ನೇರವರು ವಿನಾ ಕಾರಣ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದು, ಇದನ್ನು ಪಿರ್ಯಾದಿದಾರರು ಆಕ್ಷೇಪಿಸಿದಾಗ ಪಿರ್ಯಾದಿದಾರರ ಕುತ್ತಿಗೆಗೆ ಕೈಹಾಕಿ ಮನೆಯಿಂದ ಹೊರಗೆ ಹಾಕಿರುವುದಾಗಿದೆ. ಅಲ್ಲದೇ ಆರೋಪಿ 2 ನೇಯವನು ಪಿರ್ಯಾದಿದಾರರಿಗೆ ಮೊಬೈಲ್ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ತಂದೆ ಮನೆಗೆ ಹೋದರೆ ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿದ್ದು, ಅಲ್ಲದೇ ಆರೋಪಿ 1 ನೇಯವನು ಕೂಡಾ ವಿದೇಶದಿಂದ ಪಿರ್ಯಾದಿದಾರರಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ನನ್ನ ತಾಯಿಗೆ ಬೈದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಕೊಲೆ ಬೆದರಿಕೆ ಹಾಕಿದ್ದು ಅಲ್ಲದೇ ಆರೋಪಿ 1 ನೇಯವನು ದಿನಾಂಕ 19/08/2021 ರಂದು ಹಣಕ್ಕಾಗಿ ಬೇಡಿಕೆ ಮಾಡಿ ಪಿರ್ಯಾದಿದಾರರ ಮೊಬೈಲಿಗೆ ಸಂದೇಶಗಳನ್ನು ಹಾಕಿರುವುದಾಗಿದೆ. ಈ ಬಗ್ಗೆ ನ್ಯಾಯಾಲಯದ ಖಾಸಗಿ ದೂರಿನಂತೆ ಶಿರ್ವ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 47/2021 ಕಲಂ 498(A), 504, 506 R/W 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಶಿರ್ವ: ದಿನಾಂಕ 28/09/2021 ರಂದು ಮದ್ಯಾಹ್ನ 3:00 ಗಂಟೆಗೆ ಶಿರ್ವಾ ಗ್ರಾಮದ ಪಂಜಿಮಾರು ಮುಲ್ಕಾಡಿ ಎಂಬಲ್ಲಿರುವ ಪಿರ್ಯಾಧಿ ವಿಜಯ ಹೆಗ್ಡೆ  ಇವರ ಅತ್ತೆಯ ಮನೆಯಲ್ಲಿ ಅಪಾದಿತರಾದ ಉಮೇಶ್ ಶೆಟ್ಟಿ ಮತ್ತು ಸದಾನಂದ ಶೆಟ್ಟಿ ಎಂಬವರು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಅವಾಚ್ಯ ಶಬ್ದಗಳಿಂದ ಬೈದು,  ಕೈಯಿಂದ ಕೆನ್ನಗೆ, ತಲೆಗೆ, ಬೆನ್ನಿಗೆ ಹಾಗೂ ಮೂಗಿಗೆ ಹೊಡೆದು ಹಲ್ಲೆಮಾಡಿದ್ದು ಅಲ್ಲದೇ  ಪಿರ್ಯಾದಿದಾರರಿಗೆ, ಹೆಂಡತಿ ವಿನಯ ಮತ್ತು ಪಿರ್ಯಾದಿದಾರರ ತಂದೆಯವರನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಕೊಲೆ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 48/2021 ಕಲಂ 341,504,323,506 R/W 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಹೆಬ್ರಿ: ಪಿರ್ಯಾದಿ ಜಯಂತ ನಾಯ್ಕ ಇವರ ತಂದೆ ಶಂಕರ ನಾಯ್ಕ್ (63 ವರ್ಷ) ಇವರು ಕೂಲಿ ಕೆಲಸ ಮಾಡಿಕೊಂಡಿದ್ದು. ಅವರು ಸುಮಾರು ವರ್ಷಗಳಿಂದ ಉಬ್ಬಸ ಕಾಯಿಲೆಯಿಂದ ಬಳಲುತ್ತಿದ್ದು. ಈ ಬಗ್ಗೆ ಅವರಿಗೆ ಮದ್ದನ್ನು ಮಾಡಿಸಲಾಗಿದೆ. ಅಲ್ಲದೇ ಅವರಿಗೆ ಮದ್ಯಪಾನ ಮಾಡುವ ಅಬ್ಯಾಸವಿರುತ್ತದೆ. ದಿನಾಂಕ: 01/10/2021 ರಂದು ಸಂಜೆ 6-30 ಗಂಟೆಗೆ ಶಂಕರ ನಾಯ್ಕ್ ರವರು ತನ್ನ ಮನೆಯಾದ ಚಾರಾ ಗ್ರಾಮದ ಹುತ್ತುರ್ಕೆ ಎಂಬಲ್ಲಿನ ಮಂಡಾಡಿಜೆಡ್ಡು ಎಂಬಲ್ಲಿರುವಾಗ ಅವರಿಗೆ ಮೇಲಿನ ಕಾಯಿಲೆಯು ಉಲ್ಬಣಗೊಂಡ ಕಾರಣ ಅವರನ್ನು ಚಿಕಿತ್ಸೆಯ ಬಗ್ಗೆ ಒಂದು ವಾಹನದಲ್ಲಿ ಉಡುಪಿ ಅಜ್ಜರಕಾಡು ಅಸ್ಪತ್ರೆಗೆ ರಾತ್ರಿ 7-55 ಗಂಟೆಗೆ ಕರೆದು ಕೊಂಡು ಹೋಗಿ ವೈದ್ಯರಲ್ಲಿ ತೋರಿಸಿದಾಗ ವೈದ್ಯರು ಪರೀಕ್ಷಿಸಿ ಅವರು ದಾರಿ ಮದ್ಯೆ ಮೃತ ಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 27/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಕೋಟ: ಪಿರ್ಯಾದಿ ಶ್ರೀಧರ ಇವರ ತಾಯಿ ಸಣ್ಣಮ್ಮ ಮರಕಾಲ್ತಿ ಪ್ರಾಯ 68 ವರ್ಷ ರವರು ದಿನಾಂಕ: 02/10/2021 ರಂದು  ಬೆಳಿಗ್ಗೆ 08.00 ಗಂಟೆಗೆ ದನ ಕರುಗಳನ್ನು ಮೇಯಲು ಬಿಟ್ಟು ಬರುವುದಾಗಿ ಹೋದವರು ವಾಪಾಸ್ಸು ಮನೆಗೆ ಬಾರದೇ ಇದ್ದಾಗ ಸುತ್ತಮುತ್ತ ಹುಡುಕಾಡಿದಾಗ ಸಿಗದೇ ಇದ್ದು. ದಿನಂಪ್ರತಿ ಅವರು ದನಕರುಗಳನ್ನು ಕಟ್ಟುವ ಯಡಾಡಿ ಮತ್ಯಾಡಿ ಗ್ರಾಮದ ಗಾಂದಾರಡಿ ಎಂಬಲ್ಲಿರುವ  ಉದಯ ಹೆಗ್ಡೆಯವರಿಗೆ ಸಂಬಂಧಿಸಿದ ಜಾಗದಲ್ಲಿ ಹುಡುಕಾಡಿದಾಗ ಸದ್ರಿ ಜಾಗದ ಆವರಣವಿಲ್ಲದ ಬಾವಿಯಲ್ಲಿ ನೋಡಿದಾಗ ಸಣ್ಣಮ್ಮ ಮರಕಾಲ್ತಿಯವರ ಮೃತ ದೇಹ ದೊರೆತಿರುತ್ತದೆ. ಮೃತ ಸಣ್ಣಮ್ಮ ಮರಕಾಲ್ತಿಯು 02/10/2021 ರಂದು  ಬೆಳಿಗ್ಗೆ 08.00 ಗಂಟೆಯಿಂದ 09.15 ಗಂಟೆಯ ಮಧ್ಯಾವಧಿಯಲ್ಲಿ ದನ ಕರುಗಳನ್ನು ಮೇಯಲು ಬಿಟ್ಟು ಬರುವಾಗ ಆವರಣವಿಲ್ಲದ ಬಾವಿಗೆ ಆಕಸ್ಮಿಕವಾಗಿ ಕಾಲು ಜ್ಯಾರಿ ಬಿದ್ದು ಅಥವಾ ಇನ್ನಾವುದೋ ರೀತಿಯಿಂದ ಬಾವಿಗೆ ಬಿದ್ದು ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 35/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೊಲ್ಲೂರು: ಪಿರ್ಯಾದಿ ನಿಖಾದ್ದೀನ್ ಹಾರುನ್ ಇವರ ಅಣ್ಣನ ಮಗ ಅರ್ಮನ್ ಉರಾಂಗ್ (21)ಎಂಬುವವನ್ನು ಪಿರ್ಯಾದಿದಾರರು ಕಳೆದ 10 ದಿನಗಳ ಹಿಂದೆ ಅಸ್ಸಾಂ ನಿಂದ ತನ್ನ ಜೊತೆಯಲ್ಲಿ ತೋಟದ ಕೆಲಸಕ್ಕಾಗಿ ಹೊಸೂರು ಗ್ರಾಮ ಕದಳಿ ಎಂಬಲ್ಲಿರುವ ರಮಾನಂದ ಮದ್ಯಸ್ಥರ ಮನೆಗೆ ಕರೆದುಕೊಂಡು ಬಂದಿದ್ದು. ಅಲ್ಲಿಯೇ ವಾಸ ಮಾಡಿಕೊಂಡಿದ್ದ ವೇಳೆ ಅರ್ಮನ್ ಉರಾಂಗ್ ನಿಗೆ ಕಳೆದ 2 ದಿನಗಳ ಹಿಂದೆ ಜ್ವರ ಕಾಣಿಸಿಕೊಂಡು ವಂಡ್ಸೆ ಸರ್ಕಾರಿ ಆಸ್ಪತ್ರೆಯಲ್ಲಿ ಮದ್ದು ತೆಗೆದುಕೊಂಡು ಬಂದಿದ್ದು ಜ್ವರ ಗುಣವಾಗದೇ ದಿನಾಂಕ: 01.10.2021 ರಂದು ವಂಡ್ಸೆ ಐತಾಳ್ ಕ್ಲಿನಿಕ್ ನಲ್ಲಿ ಮದ್ದು ತೆಗೆದುಕೊಂಡು ಬಂದವರು ರಾತ್ರಿ ಊಟ ಮಾಡಿ ಮಲಗಿಕೊಂಡ ವೇಳೆ  ರಾತ್ರಿ 11ಗಂಟೆಯಿಂದ ದಿನಾಂಕ 02.10.2021 ರಂದು  ಬೆಳಗ್ಗಿನ ಜಾವ 06-00 ಗಂಟೆಯ ನಡುವಿನ ಅವಧಿಯಲ್ಲಿ ಜ್ವರ ಉಲ್ಬಣಗೊಂಡು ಅಥವಾ ಹೃದಯ ಸಂಬಂಧಿ ಸಮಸ್ಯೆಗಳಿಂದ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 13/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 02-10-2021 06:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080