ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಮಲ್ಪೆ: ಪಿರ್ಯಾದಿ ನೀಲಾ ಬಾಯಿ ಇವರ  ಮಗ ಪ್ರವೀಣ್ ನಾಯ್ಕ (6 ವರ್ಷ)   ಈತನು ಮಲ್ಪೆ ಫಿಶರೀಸ್ ಶಾಲೆಯಲ್ಲಿ  1ನೇ  ತರಗತಿ  ವಿದ್ಯಾಭ್ಯಾಸ ಮಾಡುತ್ತಿದ್ದು ,ಈ ದಿನ ದಿನಾಂಕ: 1-09-2022 ರಂದು  ಪ್ರವೀಣ್ ತನ್ನ ಅಣ್ಣಂದಿರೊಂದಿಗೆ ಮಲ್ಪೆ ಮಹಾಲಕ್ಷ್ಮೀ ಹೋಟೆಲ್ ಕಡೆಯಿಂದ  ಕೊರನೆಟ್ ನಲ್ಲಿರುವ ಪಿರ್ಯಾದಿದಾರರ ರೂಮಿಗೆ  ಬರುತ್ತಿರುವಾಗ ಮಧ್ಯಾಹ್ನ ಸಮಯ 12:45 ಗಂಟೆಗೆ  ಮಲ್ಪೆ ಕೊರನೆಟ್ ಪೆಟ್ರೋಲ್ ಬಂಕ್ ನಿಂದ ಸ್ವಲ್ಪ ಮುಂದೆ  ಐಸ್ ಪ್ಲಾಂಟ್   ಎದುರು  ಓರ್ವ ಕಾರು  ಚಾಲಕನು ತನ್ನ ಕಾರನ್ನು ಪಿರ್ಯಾದಿದಾರರ ಮಗನಾದ ಪ್ರವೀಣ್  ಗೆ ಢಿಕ್ಕಿ ಹೊಡೆದ ವಿಚಾರ ತಿಳಿದು ಪಿರ್ಯಾದಿದಾರರ ಮಗಳು ಅಲ್ಲಿಗೆ  ಹೋಗಿ ನೋಡಲಾಗಿ ಅಲ್ಲಿ ಅಫಘಾತ ನೋಡಿದ ಸಾರ್ವಜನಿಕರು KA 20D3710  ನೇ ಕಾರು  ಚಾಲಕನು  ನಿರ್ಲಕ್ಷ್ಯತನ ಹಾಗೂ  ಅಜಾಗರೂಕತೆಯಿಂದ  ವಢಬಾಂಡೇಶ್ವರ ಕಡೆಯಿಂದ ಮಲ್ಪೆ ಕಡೆಗೆ  ಕಾರನ್ನು ಚಲಾಯಿಸಿಕೊಂಡು  ಬಂದು  ರಸ್ತೆ ಬದಿ ನಡೆದುಕೊಂಡು ಬರುತ್ತಿದ್ದ  ಪಿರ್ಯಾದಿದಾರರ ಮಗ ಪ್ರವೀಣ್  ನಿಗೆ ಡಿಕ್ಕಿ ಹೊಡೆದಿರುವುದಾಗಿ  ಅಲ್ಲದೆ ಕಾರಿನ ಚಾಲಕ  ಚಿಕಿತ್ಸೆ ಬಗ್ಗೆ  ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ವಿಚಾರ ತಿಳಿಸಿರುವುದಾಗಿ ಪಿರ್ಯಾದಿದಾರರಿಗೆ ಮಗಳು ಹೇಳಿದ್ದು.ಪಿರ್ಯಾದಿದಾರರು ಕೂಡಲೆ ಹೈಟೆಕ್ ಆಸ್ಪತ್ರೆಗೆ ಹೋಗಿ ವಿಚಾರಿಸಲಾಗಿ  ಪ್ರವೀಣ್ ನನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ  ಕೆಎಂಸಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿಸಿದಂತೆ ,ಪಿರ್ಯಾದಿದಾರರು ಕೆಎಂಸಿ ಮಣಿಪಾಲ ಆಸ್ಪತ್ರೆಗೆ ಹೋಗಿ  ನೋಡಲಾಗಿ ಪ್ರವೀಣ ನನ್ನು ಐಸಿಯು ಘಟಕದಲ್ಲಿ  ದಾಖಲಿಸಿದ್ದು  ಆತನಿಗೆ ತಲೆ ಹಾಗೂ ಹೊಟ್ಟೆಗೆ  ತೀವ್ರತರಹದ  ಒಳಜಖಂ ಉಂಟಾಗಿರುವುದಾಗಿ ವೈದ್ಯರು ತಿಳಿಸಿರುತ್ತಾರೆ.  ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 75/2022 ಕಲಂ 279,338 ಐ,ಪಿ,ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 • ಬ್ರಹ್ಮಾವರ: ದಿನಾಂಕ 02.09.2022 ರಂದು ಪಿರ್ಯಾದಿದಾರರಾದ ವಿಠಲ ಶೆಟ್ಟಿ ರವರು ಅವರ  ಬಾಬ್ತು KA.20.V.4169 ನೇ ನಂಬ್ರದ ಹೊಂಡ ಮ್ಯಾಟ್ರಿಕ್ಸ್‌ ಸ್ಕೂಟರ್‌ನಲ್ಲಿ ಅವರ ಮನೆಯ ಹತ್ತಿರದ ವಾಸಿ ಥೋಮಸ್‌ ಡಿಸೋಜಾ  ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಮನೆಯಿಂದ ಭದ್ರಗಿರಿ ಕ್ರಾಸ್‌ ಬಳಿ ಇರುವ ಹಾಲು ಡೈರಿ ಕಡೆಗೆ ಸವಾರಿ ಮಾಡಿಕೊಂಡು ಬೆಳಿಗ್ಗೆ 07:30 ಗಂಟೆಯ ಸುಮಾರಿಗೆ ಬೈಕಾಡಿ ಗ್ರಾಮದ, ಮೂಡು ಬೈಕಾಡಿ ಕ್ರಾಸ್‌ಗೆ ಬಂದು ಬೈಕಾಡಿ- ಭಧ್ರಗಿರಿ ಕ್ರಾಸ್‌ ರಸ್ತೆಯ ಸ್ವಲ್ಪ ಮುಂದಕ್ಕೆ ಭದ್ರಗಿರಿ ಕ್ರಾಸ್‌ ಕಡೆಗೆ ಹೋಗುವಾಗ ಅವರ ಹಿಂದಿನಿಂದ ಅಂದರೆ ಬೈಕಾಡಿ ಕಡೆಯಿಂದ ಆರೋಪಿಯು ಅವರ ಬಾಬ್ತು KA.20.AA.1057 ನೇ ನೊಂದಣಿ ನಂಬ್ರದ ಟೆಂಪೋ ಟ್ರಾವೆಲ್ಲರ್‌ ವಾಹನವನ್ನು ಅತೀವೇಗ ಹಾಗೂ ಅಜಾಗರೂರುಕತೆಯಿಂದ ಚಾಲಾಯಿಸಿ ಕೊಂಡು ಬಂದು ಪಿರ್ಯಾದಿದಾರರ ಸ್ಕೂಟರ್‌ನ ಹಿಂಬದಿಗೆ ಡಿಕ್ಕಿ ಹೊಡೆದಿರುವುದಾಗಿದೆ. ಈ ಅಪಘಾತದ ಪರಿಣಾಮ ಪಿರ್ಯಾದಿದಾರರು ಹಾಗೂ ಥೋಮಸ್‌ ಡಿಸೋಜಾ ರವರು ಸ್ಕೂಟರ್‌ ಸಮೇತ ತಾರು ರಸ್ತೆಯ ಮೇಲೆ ಬಿದ್ದು, ಪಿರ್ಯಾದಿದಾರರ ತಲೆಯ ಹಿಂಬದಿಗೆ, ಕೈಕಾಲುಗಳಿಗೆ, ಬೆನ್ನಿಗೆ ಹಾಗೂ ಸೊಂಟಕ್ಕೆ ಅಲ್ಲಲ್ಲಿ ತರಚಿದ ಗಾಯವಾಗಿದ್ದು ಹಾಗೂ ಥೋಮಸ್‌ ಡಿಸೋಜಾ ರವರ ತಲೆಯ ಹಿಂಭಾಗ, ಹಣೆಗೆ ತೀವ್ರ ರಕ್ತಗಾಯ ಹಾಗೂ ಕೈಕಾಲುಗಳಿಗೆ ಅಲ್ಲಲ್ಲಿ ಗಾಯವಾಗಿರುತ್ತದೆ. ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಬ್ರಹ್ಮಾಔರ ಮಹೇಶ್‌ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಪಿರ್ಯಾದಿದಾರರನ್ನು ದಾಖಲಿಸಿಕೊಂಡಿದ್ದು,  ಥೋಮಸ್‌ ಡಿಸೋಜಾ ರವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 147/2022 ಕಲಂ : 279, 337, 338 ಐ,ಪಿ,ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಹಲ್ಲೆ ಪ್ರಕರಣ

 • ಕಾರ್ಕಳ: ದಿನಾಂಕ: 31/08/2022 ರಂದು 22:30 ಗಂಟೆಗೆ ಪಿರ್ಯಾದಿ ನಾಗರಾಜ್ ಪೂಜಾರಿ ಇವರು ಕಾರ್ಕಳ ತಾಲೂಕು ಮಾಳ ಗ್ರಾಮದ ಹಳೆಪಳ್ಳಿ ಎಂಬಲ್ಲಿ ಇರುವ ತನ್ನ ಅಣ್ಣನ ಮಗ ಸಂತೋಷ್ ರವರ ಮನೆಯ ಜಗುಲಿಯಲ್ಲಿ ಸಂತೋಷನ ಮನೆಯಲ್ಲಿ ಡ್ರೈವರ್ ಕೆಲಸ ಮಾಡಿಕೊಂಡಿರುವ ಬಾಳೆಹೊನ್ನೂರು ವಾಸಿ ಭರತ್ ಎಂಬವರೊಂದಿಗೆ ಮಾತನಾಡಿಕೊಂಡಿದ್ದು ಭರತ್ ನು ಕೈಯಲ್ಲಿ ಚೂರಿಯನ್ನು ಹಿಡಿದುಕೊಂಡಿದ್ದನ್ನು ಪಿರ್ಯಾದುದಾರರು ಚೂರಿಯನ್ನು ಕೈಯಲ್ಲಿ ಹಿಡಿದುಕೊಳ್ಳಬೇಡ ಎಂದು ಹೇಳಿದ್ದು ಈ ವಿಚಾರದಲ್ಲಿ ಪಿರ್ಯುದುದಾರರಿಗೂ ಹಾಗೂ ಭರತ್ ನಿಗೂ ಮಾತಿಗೆ ಮಾತಾಗಿದ್ದು ಭರತ್ ನು ಕೈಯಲ್ಲಿ ಇದ್ದ ಚೂರಿಯಿಂದ ಒಮ್ಮೆಲೆ ಪಿರ್ಯಾದುದಾರರ ಹೊಟ್ಟೆಯ ಬಲಭಾಗಕ್ಕೆ ಇರಿದು ಗಾಯಗೊಳಿಸಿದ್ದು ಪಿರ್ಯಾದುದಾರನ್ನು ಚಿಕಿತ್ಸೆ ಬಗ್ಗೆ ಕಾರ್ಕಳ ಗಾಜ್ರಿಯಾ ಆಸ್ಪತ್ರೆಗೆ ಕರೆತಂದಿದ್ದು ವೈದ್ಯರು ಹೊರರೋಗಿಯಾಗಿ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿಕೊಟ್ಟಿದ್ದು ಪಿರ್ಯಾದುದಾರರು ಭರತ್ ನು ತನ್ನ ಸ್ನೇಹಿತ ಎಂಬ ಕಾರಣಕ್ಕೆ ಈ ಬಗ್ಗೆ ಠಾಣೆಗೆ ದೂರು ನೀಡದೇ ಇದ್ದು ನಿನ್ನೆ ದಿನ ಸಂಜೆ ಪಿರ್ಯಾದುದಾರರಿಗೆ ನೋವು ಜಾಸ್ತಿಯಾಗಿದ್ದರಿಂದ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ,ಎಂ,ಸಿ ಆಸ್ಪತ್ರೆಗೆ ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 112/2022 ಕಲಂ : 504,324 ಐ,ಪಿ,ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

 

ಇತರ ಪ್ರಕರಣ

 • ಕೋಟ: ಪಿರ್ಯಾದಿ ಅಜಿತ್ ಕುಮಾರ್ ಶೆಟ್ಟಿ ಇವರಿಗೆ ದಿನಾಂಕ 31/08/2022 ರಂದು ಸಂಜೆ 4.59  ಗಂಟೆಗೆ ಸರಿಯಾಗಿ ವಾಟ್ಸಾಪ್‌  ಕರೆ ಬಂದಿದ್ದು ಸ್ವೀಕರಿಸದೇ ಇದ್ದಾಗ  ಪದೇ ಪದೇ ಕರೆ ಮಾಡುತ್ತಿದ್ದು ನಂತರ ಕರೆಯನ್ನು ಸ್ವೀಕರಿಸಿದಾಗ ತಾನು ಭರತ್ ದಾಸ ಎಂಬುವುದಾಗಿ ತಿಳಿಸಿದ್ದು  ನೀನು ನನಗೆ 10.00.000 ಹಣವನ್ನು ಕೂಡಲೇ  ನೀಡಿ ಬಿಡು ಇಲ್ಲವಾದಲ್ಲಿ ನಿನ್ನನ್ನು  ಕೊಲ್ಲಿಸುವುದಾಗಿ  ಬೆದರಿಸಿರುತ್ತಾನೆ.  ಸ್ವಲ್ಪ ಸಮಯದ ನಂತರ  ಸದ್ರಿ ವ್ಯಕ್ತಿಯು ವಾಟ್ಸಾಪ್ ನಲ್ಲಿ ಧ್ವನಿ ಮುದ್ರಿತ ಮೇಸೇಜ ನ್ನು ಕಳುಹಿಸಿದ್ದು ಅದನ್ನು ನೋಡಲಾಗಿ ಅವಾಚ್ಯ ವಾಗಿ ನಿಂದಿಸಿ ಬೆಳಿಗ್ಗೆ ಆಗುವುದರೊಳಗೆ  ತೆಗೆದು ಬಿಡುತ್ತೇನೆ.ನಿನ್ನನ್ನು ಎಂದು ಬೆದರಿಸಿರುತ್ತಾನೆ. ಇನ್ನೊಂದು ಮೆಸೇಜಗ ನೋಡಲಾಗಿ  ಜೀವ ಬೆದರಿಕೆ ಹಾಕಿರುತ್ತಾನೆ. ಈ ಬಗ್ಗೆ ಕೋಟ  ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 139/2022 ಕಲಂ: 384.387.504  ಐ,ಪಿ,ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 • ಬ್ರಹ್ಮಾವರ: ಪಿರ್ಯಾದಿ  ಪ್ರಜ್ಞಾ.ಜೆ  ಇವರು ದಿನಾಂಕ: 21.11.2021 ರಂದು ಕೊಕ್ಕರ್ಣೆಯ 1ನೇ ಆರೋಪಿ ಭರತ್ ರಾಜ್ ನೊಂದಿಗೆ  ಹಿರಿಯರ ಒಪ್ಪಿಗೆಯಿಂದ ಪೆರ್ಡೂರಿನ ಅನಂತ ಸೌರಭ ಹಾಲ್‌ನಲ್ಲಿ ಮದುವೆಯಾಗಿದ್ದು, ಅವನು ಪ್ರಸ್ತುತ ಪೇತ್ರಿ  ಎಸ್‌ಸಿಡಿಸಿಸಿ ಬ್ಯಾಂಕಿನಲ್ಲಿ ಗುಮಾಸ್ತರಾಗಿದ್ದು, ಪಿರ್ಯಾದುದಾರರು ಬೆಳುವಾಯಿ ಎಸ್‌ಸಿಡಿಸಿಸಿ ಬ್ಯಾಂಕಿನಲ್ಲಿ  ಗುಮಾಸ್ತೆಯಾಗಿ ಕೆಲಸ ಮಾಡಿಕೊಂಡಿರುವುದಾಗಿದೆ. ಮದುವೆಯ ಸಮಯ ಪಿರ್ಯಾದುದಾರರಿಗೆ  ತವರು ಮನೆಯಿಂದ 20 ಪವನ್ ಚಿನ್ನ ಹಾಗೂ 10 ಲಕ್ಷ ಹಣ ಮದುವೆಯ ಬಾಬ್ತು ಖರ್ಚುವೆಚ್ಚ ಮಾಡಿರುವುದಾಗಿದೆ. ಮದುವೆಯ ಮುಂಚಿತವಾಗಿ 1ನೇ ಆರೋಪಿತರು ಪಿರ್ಯಾದುದಾರರಿಂದ ಒಂದು ಲಕ್ಷ ಹಣವನ್ನು ಪಡೆದುಕೊಂಡಿದ್ದು, ಇನ್ನೂ ಹೆಚ್ಚಿನ ಹಣದ ಬಗ್ಗೆ ಬೇಡಿಕೆ ಇಡುತ್ತಿದ್ದರು. ಮದುವೆಯ ದಿನದಿಂದ ಹಿಡಿದು ಪ್ರತೀ ದಿನ ಹೆಚ್ಚಿನ ಹಣದ ಬೇಡಿಕೆ ಇಡುತ್ತಿದ್ದು, ಸರಿಯಾಗಿ ಸಂಸಾರ ಮಾಡದೇ ಇದ್ದು ಇಬ್ಬರ ಮಧ್ಯೆ ಮನಸ್ತಾಪ ಹೆಚ್ಚಾಗಿತ್ತು. 2ನೇ ಆರೋಪಿ ಮಾವ  ಸದಾನಂದ ರವರು ಕೂಡಾ ಹಣಕ್ಕಾಗಿ ಬೇಡಿಕೆ ಇಟ್ಟು, ಹಣ ತರದೇ ಇದ್ದಲ್ಲಿ  ಮಗನಿಗೆ ಬೇರೆ ಮದುವೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು. 3 ಆರೋಪಿ ಅತ್ತೆ  ಪ್ರಭಾವತಿ ಮತ್ತು 4ನೇ ಆರೋಪಿ ನಾದಿನಿ ಭಾರತಿ ಕೂಡಾ ಪಿರ್ಯಾದುದಾರರಿಗೆ ಕೆಲಸ ಬಿಡು, ತವರು ಮನೆಗೆ ಹೋಗಬಾರದು. ಮನೆಯಲ್ಲಿ ನಡೆದ ವಿಷಯವನ್ನು ಅವರಿಗೆ ಹೇಳಬಾರದು ಎಂದೆಲ್ಲಾ ಬೈಯುತ್ತಿದ್ದರು. ನಂತರ ಪಿರ್ಯಾದುದಾರರ ತಂದೆ  ಇವರಿಬ್ಬರಿಗೆ ಹಿರಿಯಡ್ಕದಲ್ಲಿ ಬಾಡಿಗೆ ಮನೆಯನ್ನು ಮಾಡಿಕೊಟ್ಟಿದ್ದು, ಅಲ್ಲಿ ಕೂಡಾ 1ನೇ ಆರೋಪಿಯು ಪಿರ್ಯಾದುದಾರರೊಂದಿಗೆ ಗಲಾಟೆ ಮಾಡಿ ಹೊಡೆದಿರುತ್ತಾರೆ. ಅಲ್ಲದೆ ಪಿರ್ಯಾದುದಾರರ  ಚಿಕ್ಕಪ್ಪ ನೊಂದಿಗೆ ಸಂಬಂಧ ಕಲ್ಪಿಸಿ ಬೈದಿರುತ್ತಾರೆ. ಕೊಕ್ಕರ್ಣೆಯಿಂದ ಬೆಳುವಾಯಿಗೆ ಕೆಲಸಕ್ಕೆ ಕಳುಹಿಸಿ, ಪ್ರತೀದಿನವೂ ನಿನ್ನ ಸಂಬಳದ ಹಣಕೊಡು. ತಂದೆಯವರ ನಿವೃತ್ತಿಯ  ಹಣ ತಂದು ಕೊಡೆಂದು ಎಲ್ಲರೂ ಪೀಡಿಸುತ್ತಿದ್ದರು, ಅಲ್ಲದೆ ದಿನಾಂಕ:31-08-2022 ರಂದು ಸಂಜೆ 5.00 ಗಂಟೆಗೆ ಕೊಕ್ಕರ್ಣೆಯ ಗಣೇಶ ಉತ್ಸವಕ್ಕೆ ಹೋಗಿ ಬಂದ ನಂತರ ಪಿರ್ಯಾದುದಾರರಿಗೆ ಇನ್ನು ಎಲ್ಲಿಗೂ ಹೋಗಬಾರದೆಂದು ಎಲ್ಲರೂ ಒಟ್ಟಾಗಿ ಬೈದಿರುತ್ತಾರೆ. ಅದೇ ದಿನ ರಾತ್ರಿ  ಸುಮಾರು 10.15 ಗಂಟೆಗೆ ಪಿರ್ಯಾದುದಾರರು ರೂಮಿನಲ್ಲಿ ಮಲಗಿರುವಾಗ, 1ನೇ ಆರೋಪಿ ರೂಮಿನ ಬಾಗಿಲನ್ನು ಹಾಕದೇ ಒಳಗೆ ಬಂದು ಮಲಗಿದಾಗ, ಪಿರ್ಯಾದುದಾರರು ರೂಮಿನ ಬಾಗಿಲು ಹಾಕಿ ಎಂದು ಹೇಳಿದ್ದಕ್ಕೆ 1 ರಿಂದ 3 ನೇ ಆರೋಪಿತರು ರೂಮಿನೊಳಗೆ ಬಂದಿದ್ದು, 1ನೇ ಆರೋಪಿಯು ಕೋಲಿನಿಂದ ಪಿರ್ಯಾದುದಾರರಿಗೆ ಹೊಡೆದು ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆಯನ್ನು ಎರಡೂ ಕೈಗಳಿಂದ ಜೋರಾಗಿ ಒತ್ತಿ ಹಿಡಿದು ಉಸಿರಾಡದಂತೆ ಮಾಡಿ , 2ನೇ ಆರೋಪಿಯು ಪಿರ್ಯಾದುದಾರರ ಸೊಂಟದ ಮೇಲೆ ಕುಳಿತು ಜುಟ್ಟನ್ನು ಹಿಡಿದು ಅವಳನ್ನು ಸಾಯಿಸು ಎಂದು ಕೂಗಿ ಹೇಳುತ್ತಿದ್ದು, 3ನೇ ಆರೋಪಿತರು ಕೂಡಾ ಪಿರ್ಯಾದಿಗೆ ಕಾಲಿನಿಂದ  ತುಳಿದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ, ಎಲ್ಲರೂ ಒಟ್ಟಾಗಿ ನಿನ್ನನ್ನು ಇವತ್ತೇ  ಮುಗಿಸಿ ಬಿಡುತ್ತೇವೆ ಎಂದು ಹೇಳಿರುತ್ತಾರೆ. ಅಲ್ಲದೇ ಘಟನೆಯ ವೇಳೆ 1ನೇ ಆರೋಪಿಯು ಪಿರ್ಯಾದುದಾರರ ಚಲನವಲನ ಗಳನ್ನು ವೀಡಿಯೋ  ಚಿತ್ರೀಕರಣ ಮಾಡಿರುವುದಾಗಿದೆ.   1 ರಿಂದ 4 ನೇ ಆರೋಪಿತರು ಸಮಾನ ಉದ್ದೇಶದಿಂದ ಕಳೆದ 9 ತಿಂಗಳಿನಿಂದಲೂ ಪಿರ್ಯಾದುದಾರರಿಗೆ ವಿಪರೀತ ದೈಹಿಕ ಮತ್ತು  ಮಾನಸಿಕ ಕಿರುಕುಳ ನೀಡಿರುವುದಾಗಿದೆ. ಈ ಎಲ್ಲಾ  ಘಟನೆಗಳಿಗೂ 5 ರಿಂದ 8 ನೇ ಆರೋಪಿತರಾದ 5,ಜಯಕುಮಾರ್ 6.ನವಮಿ 7,ನಿಹಾಲ್ 8.ರತ್ನಾಕರ ಇವರು ಕುಮ್ಮಕ್ಕು ನೀಡಿರುವುದಾಗಿದೆ ಎಂಬಿತ್ಯಾದಿ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 146/2022 ಕಲಂ : 498(ಎ),323 324,504,506,307 R/W 149 ಐಪಿಸಿ ಮತ್ತು ಕಲಂ 3,4 ಡಿ.ಪಿ.ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 02-09-2022 06:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080