ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಹಿರಿಯಡ್ಕ: ಪಿರ್ಯಾದಿದಾರರಾಧ ಶ್ರೀಮತಿ ಶ್ರೀದೇವಿ (32) ಗಂಡ : ಶ್ರೀಶ ಕಾರಂತ್ : ವಾಸ: ಶ್ರೀಕೃಷ್ಣ ಕುಟೀರ ರಜತ ಗಿರಿ ಕಾಲೋನಿ ಕುರ್ಕಾಲು ಗ್ರಾಮ ಸುಭಾಸ್ ನಗರ ಇವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯಡ್ಕದಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 31/08/2021 ರಂದು ಕೆಲಸಕ್ಕೆ ಬರುವರೇ  ಬೆಳಿಗ್ಗೆ 08:45 ಗಂಟೆಗೆ ಮನೆಯಿಂದ ಹೊರಟು ತನ್ನ ಗಂಡನವರ ಮೋಟಾರ್  ಸೈಕಲ್ ನಂಬ್ರ ಕೆಎ-20-ಇಬಿ-1094 ನೇ ದರಲ್ಲಿ ಸಹ ಸವಾರಳಾಗಿ ಕುಳಿತಿದ್ದು, ಮೋಟಾರ್ ಸೈಕಲನ್ನು ಶ್ರೀಮತಿ ಶ್ರೀದೇವಿ ರವರ ಗಂಡ ಸವಾರಿ ಮಾಡಿಕೊಂಡಿದ್ದರು. ಮೂಡುಬೆಳ್ಳೆಯಾಗಿ ಕೊಡಿಬೆಟ್ಟು ರಸ್ತೆಯಿಂದ ಹಿರಿಯಡ್ಕಕ್ಕೆ ಬರುತ್ತಿರುವಾಗ ಬೆಳಿಗ್ಗೆ 09:25 ಗಂಟೆಗೆ ಅಂಜಾರು ಗ್ರಾಮದ ಮುಗ್ಗೇರಿ ಜೆಡ್ಡು ಎಂಬಲ್ಲಿ ಓಂತಿಬೆಟ್ಟು ಕಡೆಯಿಂದ ಪೆರ್ಣಂಕಿಲ ಕಡೆಗೆ ಕಾರು ನಂಬ್ರ ಕೆಎ-20-ಎಮ್ ಡಿ-4726 ನೇದನ್ನು ಅದರ ಚಾಲಕ ಲಕ್ಷ್ಮೀ ನಾರಾಯಣ ಕಾರಂತರವರು ನಿರ್ಲಕ್ಷತನದಿಂದ ಹಾಗೂ ದುಡುಕುತನದಿಂದ ಚಲಾಯಿಸಿ ರಸ್ತೆಯ ತೀರಾ ಬಲ ಭಾಗಕ್ಕೆ ಬಂದು ಮೋಟಾರ್  ಸೈಕಲ್ ಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಶ್ರೀಶ ಕಾರಂತರವರಿಗೆ ಎಡ ಹಣೆಯ ಬಳಿ ಗಾಯವಾಗಿ ಎಡ ಕಣ್ಣಿನ ಹುಬ್ಬು ಕಪ್ಪು ಕಲೆ ಗಟ್ಟಿದ್ದು, ಎರಡೂ  ಕಾಲುಗಳಿಗೆ ತರಚಿದ  ಗಾಯವಾಗಿರುತ್ತದೆ. ಶ್ರೀಮತಿ ಶ್ರೀದೇವಿ ರವರಿಗೆ ಅಲ್ಪ ಸ್ವಲ್ಪ  ತರಚಿದ್ದು ಯಾವುದೇ ಗಾಯ ನೋವು ಉಂಟಾಗಿರುವುದಿಲ್ಲ. ಕಾರಿನಲ್ಲಿದ್ದ ಅನಂತೇಶ ಎಂಬ ಹುಡುಗನ ಬಲ ಕೈಗೆ  ರಕ್ತ ಗಾಯವಾಗಿರುತ್ತದೆ. ಗಾಯಗೊಂಡ ಶ್ರೀಶ ಕಾರಂತ್ ರವರನ್ನು ಕೆಎಂಸಿ ಮಣಿಪಾಲ ಆಸ್ಪತ್ರೆ ಗೆ  ಚಿಕಿತ್ಸೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 48/2021 ಕಲಂ: 279 , 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು: ಪಿರ್ಯಾದಿದಾರರಾಧ ಯೊಗೇಶ  ಪೂಜಾರಿ (28) ತಂದೆ: ಶೇಷು ಪೂಜಾರಿ    ವಾಸ: ಹನೆಬೆಟ್ಟು ಹೌಸ್ ಜೊಗೂರು ಪಡುವರಿ ಗ್ರಾಮ ಬೈಂದೂರು ಇವರು ದಿನಾಂಕ 31/08/2021 ರಂದು 17:15 ಗಂಟೆಯ ಸುಮಾರಿಗೆ ತಮ್ಮ ಕಾರಿನಲ್ಲಿ ಬಾಡಿಗೆಯಿಂದ ವಾಪಸಾಗಿ ಶಿರೂರು ನೀರ್ಗದ್ದೆ ಪೆಟ್ರೋಲ್ ಬಂಕ್ ಬಗ್ಗೆ ಪೆಟ್ರೋಲ್ ಹಾಕಲು ತೆರಳಿ ನೀರ್ಗದ್ದೆಯ ಯೂ ಟರ್ನ್ ಬಳಿ ಕಾರು ನಿಲ್ಲಿಸಿ ನಿಂತುಕೊಂಡಿರುವಾಗ ಭಟ್ಕಳ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 66 ರ ಪೂರ್ವ ಬದಿಯ ರಸ್ತೆಯಲ್ಲಿ ಲಾರಿ ನಂಬ್ರ GA-04-T-5254 ನೇಯದನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕೋಣ್ಮಕ್ಕಿ ಕ್ರಾಸ್ ಬಳಿ ಬಿಡಾಡಿ ದನವೊಂದು ರಸ್ತೆಗೆ ಅಡ್ಡ ಬಂದ ಕಾರಣ ಲಾರಿಚಾಲಕನು ಲಾರಿಯನ್ನು ಒಮ್ಮೆಲೆ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿದ ಪರಿಣಾಮ ಕೋಣ್ಮಕ್ಕಿ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಬರಲು ನಿಂತಿದ್ದ ಮೋಟಾರು ಸೈಕಲ್ ನಂಬ್ರ KA-20-EU-3497 ನೇಯದಕ್ಕೆ ಢಿಕ್ಕಿ ಹೊಡೆದ ಪರಿಣಾಮ  ಮೋಟಾರು ಸೈಕಲ್ ಸವಾರ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು, ಮೋಟಾರು ಸೈಕಲ್ ಸವಾರ ಸುರೇಶ ಬವರ ಡ ಕಾಲಿಗೆ. ಹಣೆಗೆ ಮುಖಕ್ಕೆ ರಕ್ತಗಾಯವಾಗಿದ್ದು. ಗಾಯಾಳುವನ್ನು IRB  ಅಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 146/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ವಂಚನೆ ಪ್ರಕರಣ

 • ಮಲ್ಪೆ: ಮಾನ್ಯ ನ್ಯಾಯಾಲಯದ ಖಾಸಗಿ ದಂತೆ ಪಿರ್ಯಾದಿದಾರರಾದ ವಿಶ್ವನಾಥ ಆಚಾರ್ಯ, (50) ತಂದೆ: ಸಮರಾಯ ಆಚಾರ್ಯ, ವಾಸ: ಶ್ರೀ ಮಂಜುನಾಥ ಬಡನಿಡಿಯೂರು ಉಡುಪಿ ತಾಲೂಕುರು ದಿನಾಂಕ 05/12/2016 ರಂದು ಆರೋಪಿ 1)  ಅನಿಲ್ (48) ತಂದೆ: ಸೂರ್ಯ ಗುಣಕರನ್, ವಾಸ: ಜನನಿ ಹೌಸ್, ಬ್ರಹ್ಮಾವರ ಇವರಿಂದ 1,50,000/- ರೂಪಾಯಿ ಹಣದ ಚೆಕ್ ಪಡೆದು ಫೆಡರಲ್ ಬ್ಯಾಂಕ್ ಉಡುಪಿ ಯಲ್ಲಿ ಹಣ ಡ್ರಾ ಮಾಡಿಕೊಂಡು ಅದರಲ್ಲಿ 50,000/- ರೂಪಾಯಿ ಹಣವನ್ನು ಆರೋಪಿ 1 ನೇಯವರು ತಿಳಿಸಿದ ಸೂರಜ್ ರವರಿಗೆ ನೀಡಿರುತ್ತಾರೆ. ತದನಂತರ ವಿಶ್ವನಾಥ ಆಚಾರ್ಯ ಇವರಿಂದ ಕ್ರಮವಾಗಿ 3,00,000/- ರೂಪಾಯಿ ಹಣವನ್ನು ಮದ್ಯವರ್ತಿಯಾದ ರಾಮಕೃಷ್ಣ ರವರು ಪಡೆದು ಆರೋಪಿ 1ನೇ ರವರಿಗೆ ನೀಡಿರುತ್ತಾರೆ. ವಿಶ್ವನಾಥ ಆಚಾರ್ಯ ರವರು ಆರೋಪಿ 1ನೇಯವರಿಗೆ ನೀಡಿದ ಚೆಕ್‌ ಅನ್ನು ಆರೋಪಿ 1 ನೇಯವರು ಆರೋಪಿ 2 ಪ್ರಕಾಶ್ ಪ್ರಾಯ:40 ವರ್ಷ, ತಂದೆ:ಶೇಷಪ್ಪ, ವಾಸ: ಹೇರೂರು ಬ್ರಹ್ಮಾವರ ಇವರ ಮುಖಾಂತರ ಚೆಕ್ ಅಮಾನ್ಯವಾದಂತೆ ವಕೀಲ ನೋಟಿಸನ್ನು ನೀಡಿ ಅದರಲ್ಲಿ 3 ಲಕ್ಷ ಹಣವನ್ನು ನೀಡಬೇಕೆಂದು ನೋಟಿಸ್ ನೀಡಿರುತ್ತಾರೆ. ವಿಶ್ವನಾಥ ಆಚಾರ್ಯ ರವರಿಗೆ ಪರಿಚಯವಿಲ್ಲದ 2 ನೇ ಆರೋಪಿಗೆ 1 ನೇ ಆರೋಪಿಯು ಮೋಸದಿಂದ ಚೆಕ್ ನೀಡಿ ಅಮಾನ್ಯಗೊಳಿಸಿರುತ್ತಾರೆ. ನಂತರ ಆರೋಪಿ 1 ನೇಯವರು 7,00,000/- ರೂಪಾಯಿಯನ್ನು ನೀಡ ಬೇಕೆಂದು ಇವರಿಗೆ ಬೇಡಿಕೆ ಇಟ್ಟಿದ್ದು ವಿಶ್ವನಾಥ ಆಚಾರ್ಯ ರವರಿಗೆ ಹಣದ ವಿಷಯದಲ್ಲಿ ಆರೋಪಿ 1 ಮತ್ತು ಆರೋಪಿ 2 ನೇಯವರು ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 98/2021 ಕಲಂ:405, 409, 415, 416, 420, 421, 425, ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಅಜೆಕಾರು: ಪಿರ್ಯಾದಿದಾರರಾಧ ಸಂತೋಷ್ ಕುಮಾರ್ (29) ತಂದೆ: ಬಾಬು ಪೂಜಾರಿ ವಾಸ: ಬೊರ್ದಲ್ಕೆ ಮನೆ ಹಾಡಿಯಂಗಡಿ ಅಂಚೆ ಶಿರ್ಲಾಲು ಗ್ರಾಮ ಕಾಕ್ಲ ತಾಲೂಕು ಇವರ ತಂದೆಯಾದ ಬಾಬು ಪೂಜಾರಿ (69) ಎಂಬುವವರು ಮೊದಲಿನಿಂದಲೂ ವಿಷರೀತ ಮಧ್ಯಪಾನ ಮಾಡುವ ಅಭ್ಯಾಸವಿದ್ದು, ದಿನಾಂಕ 01/09/2021 ರಂದು ಮಧ್ಯಾಹ್ನ 11:00 ಗಂಟೆಗೆ ಜಗದೀಶ ಎಂಬವರು ಪೋನ್ ಕರೆ ಮಾಡಿ ಬಾಬು ಪೂಜಾರಿಯವರು ವಿಷರೀತ ಕುಡಿದುಕೊಂಡಿದ್ದಾರೆ ಎಂದು ತಿಳಿಸಿದ್ದು, ಅವರು ಮಧ್ಯಾಹ್ನ 2:00 ಗಂಟೆಗೆ ಪುನಃ ಪೋನ್ ಮಾಡಿ ನಿಮ್ಮ ತಂದೆಯವರು ಕುಡಿದ ಅಮಲಿನಲ್ಲಿ ಮನೆಯ ಹಿಂಬದಿಯಲ್ಲಿ ಬಿದ್ದು ಕೊಂಡಿದ್ದು ಸ್ಥಿತಿ ಗಂಬೀರವಾಗಿದೆ ಎಂದು ತಿಳಿಸಿದ ಮೇರೆಗೆ ಸಂತೋಷ್ ಕುಮಾರ್ ರವರು ತನ್ನ ತಾಯಿಯವರಿಗೆ ಪೋನ್ ಕರೆ ಮಾಡಿ ತಂದೆಯವರನ್ನು ಆಸ್ವತ್ರೆಗೆ ಕರೆದು ಕೊಂಡು ಹೊಗುವರೇ ತಿಳಿಸಿದಂತೆ, ಕಾರ್ಕಳ ಸರಕಾರಿ ಆಸ್ವತ್ರೆಗೆ ಸಂಜೆ ಸುಮಾರು 5:15 ಗಂಟೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ. ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 13/2021 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

 • ಕಾರ್ಕಳ: ದಿನಾಂಕ 31/08/2021 ರಂದು 09:00 ಗಂಟೆಗೆ  ಕಾರ್ಕಳ ತಾಲೂಕು  ಬೆಳ್ಮಣ್ ಗ್ರಾಮದ ಬೆಳ್ಮಣ್ ಪೇಟೆಯಲ್ಲಿರುವ ಬಸ್ ನಿಲ್ದಾಣದ ಬಳಿ  ಆರೋಪಿ ಸುಂದರ ಸಾಲ್ಯಾನ್  ತನ್ನ ಸ್ವಂತ ಲಾಭಗೋಸ್ಕರ 1 ರೂ ಗೆ 70 ರೂಪಾಯಿ ನೀಡುವುದಾಗಿ ಸಾರ್ವಜನಿಕರಿಂದ ಹಣವನ್ನು ಪಣವಾಗಿಟ್ಟು ಹಣವನ್ನು ಪಡೆದುಕೊಂಡು ಮಟ್ಕಾ ಜುಗಾರಿ ಆಟ ಆಡುತ್ತಿದ್ದ  ಬಗ್ಗೆ ಖಚಿತ ಮಾಹಿತಿಯಂತೆ ತೇಜಸ್ವಿ ಪಿಎಸ್ಐ  ಕಾರ್ಕಳ ಗ್ರಾಮಾಂತರ ಠಾಣೆ ಇವರು ಸಿಬ್ಬಂಧಿಯವರೊಂದಿಗೆ ಸದ್ರಿ ಸ್ಥಳಕ್ಕೆ 10:00 ಗಂಟೆಗೆ  ದಾಳಿ ನಡೆಸಿ ಆರೋಪಿ ಸುಂದರ ಸಾಲ್ಯಾನ್, ಪ್ರಾಯ 65 ವರ್ಷ, ತಂದೆ: ಕೃಷ್ಣಪ್ಪ, ವಾಸ: ಕೊಕ್ರಣಿ ಮನೆ, ಕಕ್ವ ಅಂಚೆ, ಹೆಜಮಾಡಿ ಗ್ರಾಮ, ಉಡುಪಿ ಇತನನ್ನು ವಶಕ್ಕೆ  ಪಡೆದು ಆರೋಪಿ  ವಶದಲ್ಲಿ ಮಟ್ಕಾ ಜುಗಾರಿ  ಆಟದಿಂದ  ಸಂಗ್ರಹಿಸಿದ  ನಗದು ರೂ 950/-,  ಮಟ್ಕಾ ಬರೆದ ಚೀಟಿ ಮತ್ತು ಬಾಲ್‌ ಪೆನ್‌ -01 ನ್ನು  ಮಹಜರು ಮುಖೇನ  ವಶಕ್ಕೆ  ಪಡೆದು ಎನ್,ಸಿ ಅರ್ಜಿ ದಾಖಲಿಸಿಕೊಂಡಿದ್ದು, ಈ ದಿನ ಮಾನ್ಯನ್ಯಾಯಾಲಯದ ಆದೇಶ ಡಿಸ್ ನಂಬ್ರ: 2128/2021   ದಿನಾಂಕ 01/09/2021 ರಂತೆ ಅನುಮತಿ ಪಡೆದುಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 103 /2021 ಕಲಂ 78 (i)(iii) ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣ

 • ಕಾರ್ಕಳ: ಪಿರ್ಯಾದಿದಾರರಾಧ ಅಕ್ಷತ್‌ ಹೆಗ್ಡೆ (25) ತಂದೆ: ಕೃಷ್ಣ ಮೂರ್ತಿ  ಹೆಗ್ಡೆ, ವಾಸ: ಗುಂಡಿಬೈಲು ಮನೆ, ಯರ್ಲಪಾಡಿ ಗ್ರಾಮ ಮತ್ತು ಅಂಚೆ, ಕಾರ್ಕಳ ತಾಲೂಕು ಇವರು ಕೂಲಿ ಕೆಲಸ  ಮಾಡಿಕೊಂಡಿರುತ್ತಾರೆ. ದಿನಾಂಕ 31/08/2021 ರಂದು ರಾತ್ರಿ 8:00 ಗಂಟೆಯ ಹೊತ್ತಿಗೆ ತನ್ನ ಸ್ನೇಹಿತ ಸಂದರ್ಶನ ಜೊತೆ  ಗೊವಿಂದೂರು ಮಾವಿನಕಟ್ಟೆಯ ಬಳಿ ಕುಳಿತುಕೊಂಡು ಮಾತನಾಡುತ್ತಿರುವಾಗ ನಿತೀಶ್‌ ಕರ್ಕೇರನು ಆತನ ಮೊಬೈಲ್‌  ಸಂಖ್ಯೆಯಿಂದ ಸಂದರ್ಶನ ಹೆಗ್ಡೆಯ ಮೊಬೈಲ್‌  ಸಂಖ್ಯೆಯಕ್ಕೆ  ಕರೆ ಮಾಡಿ ಅಕ್ಷತ್‌ ಹೆಗ್ಡೆ ರವರ  ತಂದೆ ತಾಯಿಗೆ ತುಳು  ಭಾಷೆಯಲ್ಲಿ ಕೀಳುಮಟ್ಟದಲ್ಲಿ  ಬೈಯ್ಯುತ್ತಾ, ಕೊಲೆ ಬೆದರಿಕೆ ಹಾಕಿರುತ್ತಾನೆ. ಅಲ್ಲದೆ  ಅಕ್ಷತ್‌ ಹೆಗ್ಡೆ ರವರ ಜಾತಿ ಹೆಗ್ಗಡೆ ಸಮುದಾಯದ ಬಗ್ಗೆ ಕೆಟ್ಟದಾಗಿ ತುಳುವಿನಲ್ಲಿ ಜಾತಿ ನಿಂದನೆ ಮಾಡಿರುತ್ತಾನೆ. ಅಲ್ಲದೇ ದಿನಾಂಕ 01/09/2021 ರಂದು ಬೆಳಿಗ್ಗೆ 8:00 ಗಂಟೆಯ ಹೊತ್ತಿಗೆ ಅಕ್ಷತ್‌ ಹೆಗ್ಡೆ ರವರು  ಕೆಲಸಕ್ಕೆ ಗೊವಿಂದೂರು ಶಾಲೆಯ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ನಿತೀಶ್‌ ಕರ್ಕೆರನು ಮೋಟಾರ್‌ ಸೈಕಲಿನಲ್ಲಿ ಬಂದು ಮೋಟಾರ್‌ ಸೈಕಲನ್ನು ಅಡ್ಡವಾಗಿ ಇಟ್ಟು ಮೋಟಾರ್‌ ಸೈಕಲಿನಿಂದ ಇಳಿದು ಬಂದು ಕೈಯಿಂದ ಇವರ ಕೆನ್ನೆಗೆ ಹಾಗೂ ಮೈಗೆ ಮಾರಾಣಾಂತಿಕ ಹಲ್ಲೆ  ನಡೆಸಿರುತ್ತಾರೆ ಮತ್ತು ನಿನ್ನನ್ನು ಸದ್ಯದಲ್ಲೇ ಕೊಲೆ ಮಾಡುತ್ತೇನೆಂದು ಬೆದರಿಕೆ ಹಾಕಿ ಸವಾರಿ ಮಾಡಿಕೊಂಡು ಬಂದ ಮೋಟಾರ್‌ ಸೈಕಲಿನಲ್ಲಿ  ಹೊರಟು ಹೋಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 107/2021  ಕಲಂ: 323,341,504,506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 02-09-2021 10:16 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ