ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಬ್ರಹ್ಮಾವರ: ಪಿರ್ಯಾದಿದಾರರಾದ ಉದಯ (48) ತಂದೆ: ದಿ. ಗೋವಿಂದ, ವಾಸ: ಟೋಲ್‌ಗೇಟ್ ಬಳಿ, ಸಾಸ್ತಾನ, ಗುಂಡ್ಮಿ ಗ್ರಾಮ, ಬ್ರಹ್ಮಾವರ ರವರು ದಿನಾಂಕ 01/09/2021 ರಂದು ಬೈಕಾಡಿಗೆ ಹೋಗಲು ತನ್ನ KA-20-U-5798 ನೇ TVS Victor GX ಮೋಟಾರ್ ಸೈಕಲ್‌ನಲ್ಲಿ ಉಡುಪಿ ಸಂತೆಕಟ್ಟೆಯಿಂದ ಹೊರಟು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ಬೆಳಿಗ್ಗೆ 11:30 ಗಂಟೆಗೆ ಉಪ್ಪೂರು ಗ್ರಾಮದ, ಹೇರಾಯಿಬೆಟ್ಟು ಕ್ರಾಸ್ ಬಳಿ ತಲುಪುವಾಗ ಅವರ ಎದುರಿನಲ್ಲಿ ಬ್ರಹ್ಮಾವರ ಕಡೆಗೆ ಆರೋಪಿ ಯುಸೂಫ್ ನವಾಜ್ ಎಂಬವರು ಅವರ KA-20-Z-3944 ನೇ ಮಾರುತಿ ECO ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿ ಯಾವುದೇ ಸೂಚನೇ/ಸಿಗ್ನಲ್ ನೀಡದೇ ಏಕಾ ಏಕಿ ಒಮ್ಮೇಲೆ ಆತನ ಬಲ ಬದಿಗೆ “U” Turn ಮಾಡಿದ್ದು , ಅದೇ ಸಮಯ ಸದ್ರಿ ಕಾರಿನ ಬಲ ಭಾಗ ಉದಯ ರವರ ಮೋಟಾರ್ ಸೈಕಲ್‌ನ ಎಡಬದಿಯ ಹ್ಯಾಂಡಲ್‌ಬಾರ್‌ಗೆ ಡಿಕ್ಕಿಯಾಗಿ ಇವರು ಆಯಾತಪ್ಪಿ ಮೋಟಾರ್ ಸೈಕಲ್ ಸಮೇತ ತಾರು ರಸ್ತೆಯ ಮೇಲೆ ಬಿದ್ದಿರುವುದಾಗಿದೆ. ಈ ಅಪಘಾತದ ಪರಿಣಾಮ ಉದಯ ರವರ ಎಡಕೈ ಕಿರು ಬೆರಳಿಗೆ ತೀವ್ರ ಮೂಳೆ ಮುರಿತದ ಜಖಂ ಗಾಯ, ಎಡಕಾಲಿಗೆ ಅಲ್ಲಲ್ಲಿ ತರಚಿದ ಗಾಯ ವಾಗಿರುತ್ತದೆ. ಗಾಯದ ಚಿಕಿತ್ಸೆ  ಬಗ್ಗೆ ಇವರು ಬ್ರಹ್ಮಾವರ ಮಹೇಶ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 162/2021 ಕಲಂ: 279, 337, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ಶೈಲೇಶ ಶೆಟ್ಟಿ (36) ತಂದೆ : ದಿ. ಜಯರಾಮ ಶೆಟ್ಟಿ ವಾಸ: ಕೊಡಮಜಲು, ಬಳಕಂಜೆ ಅಂಚೆ, ಮನೆ ಮಂಗಳೂರು ಇವರು ನವಯುಗ ಕಂಪೆನಿಯಲ್ಲಿ ಸೇಪ್ಟಿ ಆಫೀಸರ್ ಆಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 01/09/2021 ರಂದು ಕಾಪು ತಾಲೂಕು ಉಳಿಯಾರಗೋಳಿ ಗ್ರಾಮದ ಕೋತ್ವಾಲ್ ಕಟ್ಟೆ  ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಮಂಗಳೂರು ಉಡುಪಿ ರಸ್ತೆಯಲ್ಲಿ ಮಧುಚಂದ್ರ ಎಂಬವರು ತನ್ನ ಕಾರು ನಂಬ್ರ KA-19-MJ-6204 ನೇ ದನ್ನು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಹೋಗಿ ಸುಜಯ ಇಂಜಿನಿಯರಿಂಗ್ ವರ್ಕ್ಸ್ ಸಮೀಪ ರಸ್ತೆ ವಿಭಜಕದ ಮೇಲೆ ಹತ್ತಿಸಿದ್ದು ಪರಿಣಾಮ ನವಯುಗ ಕಂಪೆನಿಯ ELECTRICAL POLE ಕಟ್ ಆಗಿರುವುದಾಗಿ ಮಾಹಿತಿ ಬಂದಂತೆ ನವಯುಗ ಕಂಪೆನಿಯ ಸಂತೋಷ್ ಎಂಬವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಘಟನೆಗೆ ಸಂಬಂದಿಸಿದಂತೆ ಶೈಲೇಶ ಶೆಟ್ಟಿ ರವರಿಗೆ ದಿನಾಂಕ 02/09/2021 ರಂದು ಮಾಹಿತಿ ನೀಡಿದಂತೆ ಶೈಲೇಶ ಶೆಟ್ಟಿ ರವರು ಸ್ಥಳಕ್ಕೆ ಹೋಗಿ ಪರಿಶೀಲಿಸಿ ಮಧುಚಂದ್ರ ರವರು ತನ್ನ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆ ವಿಭಜಕದ ಮೇಲೆ ಹತ್ತಿಸಿದ ನವಯುಗ ಕಂಪೆನಿಯ ELECTRICAL POLE DAMAGE ಗೊಳಿಸಿದ್ದು ಇದರಿಂದ ಕಂಪೆನಿಗೆ ಸುಮಾರು 2,04,622/- ರೂಪಾಯಿ ನಷ್ಟವಾಗಿರುತ್ತದೆ. ಈ ಅಪಘಾತಕ್ಕೆ ಕಾರು ನಂಬ್ರ KA-19-MJ-6204 ನೇ ದರ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 144/2021 ಕಲಂ: 279, 427 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾದ ಧರ್ಮರಾಜ್‌(33) ತಂದೆ: ಶೀನ ಶ್ರೀಯಾನ್ ವಾಸ: ಅಕ್ಷಲ್‌ಹಿತ್ಲು ಮರವಂತೆ ಗ್ರಾಮ, ಬೈಂದೂರು ಇವರ ಅಣ್ಣ ನಾಗರಾಜ ಶ್ರೀಯಾನ್‌(45) ರವರು ಮರವಂತೆ ಗ್ರಾಮದ ಪುಟ್ಟಮ್ಮ ನಿಲಯ ಎಂಬಲ್ಲಿ ಒಬ್ಬರೇ ಒಂಟಿಯಾಗಿ ವಾಸ ಮಾಡಿಕೊಂಡಿದ್ದು ಅವರಿಗೆ ಮದ್ಯಸೇವನೆ ಅಭ್ಯಾಸವಿದ್ದು ಲಿವರ್‌ಸಮಸ್ಯೆ ಇರುತ್ತದೆ. ದಿನಾಂಕ 01/09/2021 ರಂದು ಸುಮಾರು 15:00 ಗಂಟೆಗೆ ಇವರ ಅಕ್ಕ ರೇಣುಕ ರವರು ಮಲ್ಲಿಗೆ ಹೂ ತೆಗೆಯುವರೇ ಮೃತರ ಮನೆಯ ಬಳಿಗೆ ಹೋಗಿದ್ದು ಮನೆಯ ಬಾಗಿಲು ತೆರೆದಿದ್ದು ಒಳಗಡೆ ಹೋಗಿ ನೋಡಿದಾಗ ಮೃತ ನಾಗರಾಜ ಶ್ರೀಯಾನ್‌ರವರು ಸೋಪಾದಲ್ಲಿ ಕುಳಿತಿರುವುದನ್ನು ಕಂಡು ಮಾತನಾಡಿಸಿದ್ದು ಮಾತನಾಡದೇ ಇದ್ದು ಅವರನ್ನು ಚಿಕಿತ್ಸೆ ಬಗ್ಗೆ ಸಂಜೆ 6:15 ಗಂಟೆಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅವರನ್ನು ಪರೀಕ್ಷಿಸಿದ ವೈಧ್ಯರು ದಾರಿಯಲ್ಲಿಯೇ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ, ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 25/2021 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 02-09-2021 06:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080