ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣಗಳು

  • ಪಡುಬಿದ್ರಿ : ದಿನಾಂಕ: 01.08.2022 ರಂದು ನೊಂದಾಯಿತ ಅಂಚೆ ಮೂಲಕ ಬಂದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿ ಶಶಿರೇಖಾ, ಪ್ರಾಯ: 45 ವರ್ಷ, ಗಂಡ: ಶೇಸು ಎರ್ಮಾಳು, ವಾಸ: ರೋಹಿತ್ ನಿಲಯ, ಪೂಂದಾಡು ದರ್ಖಾಸು, ತೆಂಕ ಎರ್ಮಾಳು ಗ್ರಾಮ, ಕಾಪು ತಾಲೂಕು ಇವರು ಕಾಪು ತಾಲೂಕು  ತೆಂಕ ಎರ್ಮಾಳು ಗ್ರಾಮ ಪೂಂದಾಡುವಿನಲ್ಲಿ ಸಂಸಾರದೊಂದಿಗೆ ವಾಸವಾಗಿದ್ದು, ಪರಿಶಿಷ್ಟ ಜಾತಿಯ ಮುಂಡಾಳ ಜಾತಿಗೆ ಸೇರಿದವರಾಗಿರುತ್ತಾರೆ. ಪಿರ್ಯಾದಿದಾರರು ದಿನಾಂಕ: 30.07.2022 ರಂದು ಮಧ್ಯಾಹ್ನ 13:00 ಗಂಟೆಯ ವೇಳೆಗೆ ಅವರ ಮಗನನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬಂದಾಗ, ಪಿರ್ಯಾದಿದಾರರ ಬಾಬ್ತು ಮನೆಯಲ್ಲಿ ಬಾಡಿಗೆಗೆ ವಾಸವಾಗಿರುವ ರಾಜೀವಿ ಪೂಜಾರ್ತಿ ಎಂಬುವವರು, ಪಿರ್ಯಾದುದಾರರನ್ನು ಉದ್ದೇಶಿಸಿ, ಜಾತಿ ನಿಂದನೆ ಮಾಡಿ, ಅವಾಚ್ಯ ಶಬ್ಧಗಳಿಂದ ಬೈದು, ಗೇಟಿನೊಳಗೆ ಬಂದರೆ ಕತ್ತಿಯಿಂದ ಕಡಿದು ಹಾಕುವುದಾಗಿ ಹೇಳುತ್ತಾ ಹತ್ತಿರ ಬಂದು ಪಿರ್ಯಾದಿದಾರರನ್ನು ಹಾಗೂ ಅವರ ಮಗನ ಮೈಗೆ ಕೈಹಾಕಿ ದೂಡಿ ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಪಿರ್ಯಾದಿದಾರರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್‌ಠಾಣೆ ಅಪರಾಧ ಕ್ರಮಾಂಕ 94/2022 ಕಲಂ: 504, 506, 323 ಐಪಿಸಿ ಮತ್ತು ಕಲಂ: 3(1)(r), 3(1)(s), 3(2)(v-a) SC/ST (POA) Act ದೂರು ದಾಖಲಿಸಿಕೊಳ್ಳಲಾಗಿದೆ.

ಅಪಘಾತ ಪ್ರಕರಣಗಳು : 

  • ಬ್ರಹ್ಮಾವರ : ದಿನಾಂಕ 01.08.2022 ರಂದು ಪಿರ್ಯಾದಿ ಪುಸ್ಪಾವತಿ (45), ಗಂಡ: ಭಾಸ್ಕರ ನಾಯಕ್‌, ವಾಸ: ಮಟಪಾಡಿ ಬಲ್ಜಿ, ಮಟಪಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಇವರು ತಾನು ಕೆಲಸ ಮಾಡಿಕೊಂಡಿದ್ದ ವಾರಂಬಳ್ಳಿ ಗ್ರಾಮದ ಬ್ರಹ್ಮಾವರ ಮಾರ್ಕೇಟ್‌ನಲ್ಲಿರುವ ಆಲ್‌ಹುದಾ ಇಂಟರ್‌ ಲಾಕ್‌ ಅಂಗಡಿಯ ಎದುರು ತನ್ನ ಬಾಬ್ತು KA.20.EU.0545ನೇ ಸ್ಕೂಟರ್‌ನ್ನು ಪಾರ್ಕಿಂಗ್‌ ಮಾಡಿ ನಿಲ್ಲಿಸಿದ್ದು, ಬೆಳಿಗ್ಗೆ 11:45 ಗಂಟೆಯ ಸಮಯಕ್ಕೆ ಪಿರ್ಯಾದಿದಾರರ ಅಂಗಡಿಯ ಎದುರು ಇರುವ ಗಾಂಧಿ ಮೈದಾನದಲ್ಲಿ ನಿಲ್ಲಿಸಿದ್ದ KA.20.MC.6046ನೇ ವ್ಯಾಗನರ್‌ ಕಾರನ್ನು ಆರೋಪಿಯು ಗೇಟಿನ ಮೂಲಕ ಕಾರನ್ನು ಚಲಾಯಿಸಿ ಮಾರ್ಕೇಟ್‌ ರಸ್ತೆಯ ಮೇಲ್ಬಾಗಕ್ಕೆ ಬರುತ್ತಲೇ, ಒಮ್ಮೇಲೆ ಆರೋಪಿಯು ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿದಾರರು ನಿಲ್ಲಿಸಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿರುವುದಾಗಿದೆ. ಪರಿಣಾಮ ಸ್ಕೂಟರ್‌ನ ಹಿಂಭಾಗ ಬಾಡಿಯು ಸಂಪೂರ್ಣ ಜಖಂಗೊಂಡಿರುತ್ತದೆ. ಈ ಬಗ್ಗೆ ಪಿರ್ಯಾದಿದಾರರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 131/2022 ಕಲಂ :279, IPC ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕಾರ್ಕಳ : ದಿನಾಂಕ: 01/08/2022 ರಂದು 16:00 ಗಂಟೆಗೆ ಕಾರ್ಕಳ ತಾಲೂಕು ಮಾಳ ಗ್ರಾಮದ ಮಾಳ ಘಾಟಿಯ ಓಟೆಹಳ್ಳ ಎಂಬಲ್ಲಿ ಹಾದು ಹೋಗಿರುವ ಮಾಳ –ಶ್ರಂಗೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶ್ರಂಗೇರಿ ಕಡೆಯಿಂದ ಮಾಳ ಕಡೆಗೆ KA36N1935ನೇ ನಂಬ್ರದ ಕ್ರೂಸರ್ ವಾಹನದ ಚಾಲಕ ಶ್ರೀಕಾಂತನು ತನ್ನ ವಾಹನವನ್ನು ರಸ್ತೆಯ ತಿರುವಿನಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಮಾಳ ಕಡೆಯಿಂದ ಶ್ರಂಗೇರಿ ಕಡೆಗೆ ಪಿರ್ಯಾದು ಅಜಿತ್, ಪ್ರಾಯ 28 ವರ್ಷ, ತಂದೆ: ಚಂದ್ರು, ವಾಸ: ಕಂಚಿನಕೆರೆ, ಕಳಸ ಅಂಚೆ, ಮಾವಿನಕೆರೆ ಗ್ರಾಮ, ಕಳಸ  ತಾಲೂಕು, ಚಿಕ್ಕಮಂಗಳೂರು ಇವರು ಚಲಾಯಿಸಿಕೊಂಡು ಹೋಗುತ್ತಿದ್ದ KA19AD7108 ನೇ ನಂಬ್ರದ ಟಿಪ್ಪರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕ್ರೂಸರ್ ಚಾಲಕ ಶ್ರೀಕಾಂತ್ ಹಾಗೂ ಕ್ರೂಸರ್ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಹೆಂಗಸರು, ಮೂವರು ಮಕ್ಕಳು ಹಾಗೂ ಇಬ್ಬರು ಗಂಡಸರಿಗೆ ರಕ್ತಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಈ ಅಪಘಾತದಿಂದಾಗಿ ಎರಡೂ ವಾಹನಗಳು ಜಖಂಗೊಂಡಿದ್ದು, ಪಿರ್ಯಾದಿದಾರರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 100/2022 ಕಲಂ : 279, 337 IPC ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಸ್ವಾಭಾವಿಕ ಮರಣ

  • ಕುಂದಾಪುರ : ಪಿರ್ಯಾದು ಅಕ್ಷತಾ, ಪ್ರಾಯ:23 ವರ್ಷ, ಗಂಡ: ಸೂರ್ಯ ಪೂಜಾರಿ, ವಾಸ: ಬಾವಿಕಟ್ಟೆ ಕಡಿದ ಹೆದ್ದಾರಿ,ಕಾರ್ಕಡ ಗ್ರಾಮ, ಸಾಲಿಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ ಇವರ ತಂಗಿ ಸುಮಾರು 16 ವರ್ಷ ಪ್ರಾಯದ ಅನನ್ಯ ಎಂಬುವವರು  ಕುಂದಾಪುರ ತಾಲೂಕು ಕುಂಭಾಶಿ ಗ್ರಾಮದ ಕೊರವಡಿ ಎಂಬಲ್ಲಿ ತನ್ನ ಅಜ್ಜಿ ಹಾಗೂ ಮಾವನೊಂದಿಗೆ ವಾಸವಾಗಿದ್ದು, ಮಣೂರು ಪಡುಕೆರೆ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿರುವುದಾಗಿದೆ. ದಿನಾಂಕ 01/08/2022 ರಂದು ಪಿರ್ಯಾದಿದಾರರು  ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದಾಗ  ಪಿರ್ಯಾದಿದಾರರ ಮಾವ ನಾಗರಾಜ ಎನ್ನುವವರು ಬೆಳಿಗ್ಗೆ 09:30 ಗಂಟೆಗೆ  ಕರೆ ಮಾಡಿ ಅನನ್ಯಳು ಕುಂಭಾಶಿ ಗ್ರಾಮದ ಕೊರವಡಿಯ ತನ್ನ ಮನೆಯಲ್ಲಿ ಬೆಳಿಗ್ಗೆ 07:45 ಗಂಟೆಗೆ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡವಳನ್ನು ಚಿಕಿತ್ಸೆ ಬಗ್ಗೆ ಕೆ.ಎಂ.ಸಿ ಆಸ್ಪತ್ರೆ ಮಣಿಪಾಲಕ್ಕೆ ಸೇರಿಸಿರುವುದಾಗಿ ತಿಳಿಸಿದ್ದು ಕೂಡಲೇ ಪಿರ್ಯಾದಿದಾರರು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಬಂದು ನೋಡಿದಾಗ  ಪಿರ್ಯಾದಿದಾರರ ತಂಗಿ ಅನನ್ಯಾಳು ಸುಟ್ಟ ಗಾಯದಿಂದ ಬೆಳಿಗ್ಗೆ 10:25 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಅನನ್ಯಾಳು ಓದಿನ ವಿಚಾರದಲ್ಲಿ ಬಹಳ ಹಿಂದೆ ಇದ್ದು ಇದೇ ವಿಚಾರದಲ್ಲಿ ಮನನೊಂದು ಜೀವನದಲ್ಲಿ  ಜಿಗುಪ್ಸೆಗೊಂಡು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ : 26/2022 ಕಲಂ: 174 CrPC ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಮಣಿಪಾಲ : ಪಿರ್ಯಾದಿ ಸುಧೀರ್ ಶೆಟ್ಟಿ ಪ್ರಾಯ: 54 ವರ್ಷ ತಂದೆ:ದಿ: ಹೆಚ್. ವಿಠಲ ಶೆಟ್ಟಿ, ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್, ಆರ್.ಪಿ.ಎಫ್. ಇಂದ್ರಾಳಿ, ರೈಲ್ವೇ ಸ್ಟೇಷನ್,ಕೊಂಕಣ ರೈಲ್ವೇ, ಉಡುಪಿ ಇವರು ಇಂದ್ರಾಳಿ ರೈಲ್ವೇ ಪೊಲೀಸ್ ಠಾಣೆಯಲ್ಲಿ ಸುಮಾರು 1 ವರ್ಷದಿಂದ ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿರುತ್ತಾರೆ. ದಿನಾಂಕ : 01.08.2022 ರಂದು ಪಿರ್ಯಾದಿದಾರರು ರೈಲ್ವೇ ಸ್ಟೇಷನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ 14.13. ಗಂಟೆಗೆ ಉಡುಪಿ – ಬಾರ್ಕೂರು 689/7-8 ಬಳಿ ಓರ್ವ ಅಪರಿಚಿತ ವ್ಯಕ್ತಿಯು ರೈಲ್ವೇ ಹಳಿಯ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಲೋಕೋ ಪೈಲಟ್ ರೈಲಿನ ಹಾರ್ನ್ ನ್ನು ಹಾಕಿದರೂ ಕೂಡ ಆ ಅಪರಿಚಿತ ವ್ಯಕ್ತಿ ರೈಲ್ವೇ ಹಳಿ ಬಿಟ್ಟು ಪಕ್ಕಕ್ಕೆ ಸರಿಯದೇ ಇದ್ದ ಕಾರಣ ಆ ವ್ಯಕ್ತಿಗೆ  12133 ಸಿ.ಎಸ್.ಟಿ- ಮಂಗಳೂರು ಎಕ್ಸ್ ಪ್ರೆಸ್ ರೈಲು ಡಿಕ್ಕಿ ಹೊಡೆದಿರುತ್ತದೆ ಎಂಬುದಾಗಿ  ಲೋಕೋ ಫೈಲಟ್ ನಿಂದ ಸ್ಟೇಷನ್ ಮಾಸ್ಟರ್ ರವರಿಗೆ ಮಾಹಿತಿ ಬಂದಿರುತ್ತದೆ. ಸ್ಟೇಷನ್ ಮಾಸ್ಟರ್ ಕರ್ತವ್ಯದಲ್ಲಿದ್ದ ಪಿರ್ಯಾದಿದಾರರಿಗೆ  ಈ ವಿಷಯವನ್ನು ತಿಳಿಸಿದ್ದು, ಸದ್ರಿ ದೊಡ್ಡಣಗುಡ್ಡೆ ಆದಿಶಕ್ತಿ ದೇವಸ್ಥಾನ ಬಳಿಯ ರೈಲ್ವೇ ಹಳಿಯಲ್ಲಿ 689/7-8 ಬಳಿ ಸ್ಥಳಕ್ಕೆ ಹೋಗಿ ಪರಿಶೀಲಿಸಲಾಗಿ ರೈಲು ಆ ವ್ಯಕ್ತಿಗೆ ಡಿಕ್ಕಿ ಹೊಡೆದಿರುತ್ತದೆ. ಅಪರಿಚಿತ ಗಂಡಸಿನ ಪ್ರಾಯ ಸುಮಾರು 35 ರಿಂದ 40 ವರ್ಷ ಪ್ರಾಯದವನಾಗಿದ್ದು, ಅವನು ಮೃತನಾಗಿರುತ್ತಾನೆ ಹಾಗು  ಆತನ ಮುಖ ಮತ್ತು ದೇಹ ಛಿದ್ರವಾಗಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ಠಾಣೆ ಯುಡಿಆರ್‌ಕ್ರಮಾಂಕ : 28/2022 ಕಲಂ: 174 ಸಿ ಆರ್ ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 02-08-2022 11:02 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080