ಅಭಿಪ್ರಾಯ / ಸಲಹೆಗಳು


ಅಪಘಾತ ಪ್ರಕರಣಗಳು

  • ಶಿರ್ವ: ದಿನಾಂಕ: 02/8/2022 ರಂದು ಬೆಳಿಗ್ಗೆ 09.30 ಗಂಟೆಗೆ ಪಿರ್ಯಾದಿ ಸಚಿನ್, 42 ವರ್ಷ, ತಂದೆ: ತುಕ್ರ ಪೂಜಾರಿ, ವಾಸ: ನಮನ ನಿಲಯ, ಗುಂಡಳಿಕೆ ಮನೆ, ಕಣಂಜಾರು ಗ್ರಾಮ ಮತ್ತು ಅಂಚೆ, ಕಾರ್ಕಳ ಇವರು ತನ್ನ ಮೋಟಾರು ಸೈಕಲ್‌ನಲ್ಲಿ ನಾಗರಪಂಚಮಿಯ ನಿಮಿತ್ತ ಸೂಡಾ ದೇವಸ್ಥಾನಕ್ಕೆ ಹೋಗುತ್ತಿರುವಾಗ ಅದೇ ಸಮಯ ಪಿರ್ಯಾದಿದಾರರ ಅಕ್ಕ ಪುಷ್ಪ(49ವರ್ಷ)ರವರನ್ನು ತಮ್ಮ ರಾಜೇಶ್ ರವರು  ತನ್ನ ಬಾಬ್ತು ಮೋಟಾರು ಸೈಕಲ್ ನಂ ಕೆಎ19ಇಕ್ಯೂ2614 ನೇದರಲ್ಲಿ ಹಿಂಬದಿ ಸವಾರಳಾಗಿ ಕುಳ್ಳಿರಿಸಿಕೊಂಡು ಮನೆಯಿಂದ ಸೂಡಾ ದೇವಸ್ಥಾನಕ್ಕೆ  ಹೋಗುವರೇ ಪಳ್ಳಿಯಿಂದ ಸೂಡಾ ಕಡೆಗೆ ಹಾದುಹೋಗಿರುವ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಬರುತ್ತಿರುವಾಗ ಮೋಟಾರು ಸೈಕಲ್ ಸವಾರ ರಾಜೇಶ್ ನು ತನ್ನ ಮೋಟಾರು ಸೈಕಲ್ ನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಮಕ್ಕೇರಿಬೈಲು ಎಸ್ ಕೆ ಸಾಲ್ಯಾನ್ ರವರ ಗದ್ದೆ  ಬಳಿ ತಲುಪುವಾಗ ಸಮಯ ಸುಮಾರು ಬೆಳಿಗ್ಗೆ 10.10 ಗಂಟೆಗೆ ಹಿಂಬದಿ ಸವಾರಳಾಗಿ ಕುಳಿತಿದ್ದ ಪುಷ್ಪಾರವರು ಆಯತಪ್ಪಿ ಬೈಕ್ ನಿಂದ ಡಾಮಾರು ರಸ್ತೆಗೆ ಮಗುಚಿ ಬಿದ್ದರು. ಪರಿಣಾಮ ಪುಷ್ಪಾರವರು ತಲೆಗೆ ತೀವ್ರವಾಗಿ  ಗಾಯಗೊಂಡು ಮಾತನಾಡದೇ ಇದ್ದು, ಕೂಡಲೇ ಉಡುಪಿ ಅಜ್ಜರಕಾಡು ಸರಕಾರಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಪುಷ್ಪಾರವರು ಈಗಾಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಅಫಘಾತಕ್ಕೆ ಕೆಎ 19ಇಕ್ಯೂ 2614ನೇ ಮೋಟಾರು ಸೈಕಲ್ ನ ಸವಾರ ರಾಜೇಶ್ ನ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯೇಕಾರಣವಾಗಿರುತ್ತದೆ.  ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  47/22, ಕಲಂ 279, 304(A) IPC ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ:  ಪಿರ್ಯಾದಿ ಸುಚಿತ್ರ ಹೆಚ್. ಟಿ ಪ್ರಾಯ 28 ವರ್ಷ     ಗಂಡ: ಸುಕೇಶ್ ವಾಸ: ಹೊನ್ನೆಕೊಪ್ಪ, ಹಾತೂರು ಗ್ರಾಮ ಬೆಳ್ಳೂರು ಅಂಚೆ, ಎನ್.ಆರ್ ಪುರ ತಾಲೂಕು    ಚಿಕ್ಕಮಗಳೂರು ಜಿಲ್ಲೆ ಇವರ ತಮ್ಮ ಸುಜಿತ್‌ರವರು ದಿನಾಂಕ 31/07/2022 ರಂದು ರಾತ್ರಿ ಅಂಬಾಗಿಲಿನಲ್ಲಿ ಬೇಕರಿ ಕೆಲಸ ಮುಗಿಸಿ ವಾಪಾಸು ಅಂಬಾಗಿಲಿನಿಂದ ಮನೆಯಾದ ಮಣಿಪಾಲ ಶಾಂತಿನಗರಕ್ಕೆ KA19EV5716ನೇ ಸ್ಕೂಟರ್‌ನಲ್ಲಿ ಅಂಬಾಗಿಲು – ನಿಟ್ಟೂರು ಮಾರ್ಗವಾಗಿ ರಾಹೆ-66 ನೇ ಸಾರ್ವಜನಿಕ ರಸ್ತೆಯಲ್ಲಿ ಹೋಗುತ್ತಿರುವಾಗ ಸಮಯ ಸುಮಾರು ರಾತ್ರಿ 10:30 ಗಂಟೆಗೆ ಪುತ್ತೂರು ಗ್ರಾಮದ ಬಾಳಿಗಾ ಜಂಕ್ಷನ್ ಎದುರುಗಡೆ ಹಾದು ಹೋಗಿರುವ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಕೊಡಂಕೂರು ಕಡೆಯಿಂದ ನಿಟ್ಟೂರು ಕಡೆಗೆ  KA63N1317 ನೇ ಕಾರಿನ ಚಾಲಕ ಅನಿಲ್‌ರವರು ತಾನು ಚಲಾಯಿಸುತ್ತಿದ್ದ ಕಾರನ್ನು ಯಾವುದೇ ಸೂಚನೆಯನ್ನು ನೀಡದೇ ಒಮ್ಮಲೇ ರಾಹೆ-66 ನೇ ಸಾರ್ವಜನಿಕ ಡಾಮಾರು ರಸ್ತೆಗೆ ಚಲಾಯಿಸಿಕೊಂಡು ಬಂದು ರಸ್ತೆ ಕ್ರಾಸ್ ಮಾಡುವಾಗ ಪಿರ್ಯಾದಿದಾರರ ತಮ್ಮ ಸುಜಿತ್ ರವರು ಸವಾರಿ ಮಾಡಿಕೊಂಡು ಬರುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದನು ಪರಿಣಾಮ ಸುಜಿತ್‌ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಹಿಂಬದಿ ತಲೆಗೆ ರಕ್ತಗಾಯವಾಗಿರುತ್ತದೆ. ಅಲ್ಲದೇ ಬಲಕೈಗೆ ಮತ್ತು ಬೆನ್ನಿಗೆ ಗುದ್ದಿದ ಜಖಂ ಆಗಿರುತ್ತದೆ. ಈ ಬಗ್ಗೆ ಸುಜಿತ್‌ರವರು ಚಿಕಿತ್ಸೆಗಾಗಿ ಉಡುಪಿ ಆದರ್ಶ ಆಸ್ವತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 61/2022 ಕಲಂ: 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣಗಳು

  • ಗಂಗೊಳ್ಳಿ: ಫಿರ್ಯಾದಿ ಮಹೇಶ ದೇವಾಡಿಗ ರಕ್ಷಣಾಧಿಕಾರಿ (ಸಾಂಸ್ಥಿಕ) ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರಜತಾದ್ರಿ ಮಣಿಪಾಲ ರವರು ಮಣಿಪಾಲ ರಜತಾದ್ರಿಯಲ್ಲಿರುವ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿಯಾಗಿದ್ದು (ಸಾಂಸ್ಥಿಕ) ಗಂಗೊಳ್ಳಿ ಗ್ರಾಮದ ಗುಡ್ಡೆಕೇರಿ ನಿವಾಸಿಯಾಗಿರುವ ಶ್ರೀಧರ್ ಹಾಗೂ ರಾಜೇಶ್ವರಿ ದಂಪತಿಗಳು ಕಾನೂನು ಬಾಹಿರವಾಗಿ ಮಗುವನ್ನು ದತ್ತುಪಡೆದಿರುವ ಬಗ್ಗೆ  ದಿನಾಂಕ: 25-07-2022 ರಂದು ದೂರವಾಣಿ ಕರೆ ಮಾಡಿದಂತೆ ದಿನಾಂಕ: 26-07-2022   ರಂದು ಶ್ರೀದರ್ ಹಾಗೂ ರಾಜೇಶ್ವರಿಯವರ ವಿಳಾಸಕ್ಕೆ ಭೇಟಿ ನೀಡಿ ವಿಚಾರಿಸಲಾಗಿ  ದಿನಾಂಕ:16-07-2022 ರಂದು 9 ತಿಂಗಳಿನ ಹೆಣ್ಣು ಮಗುವನ್ನು ಉತ್ತರಕನ್ನಡ ಜಿಲ್ಲೆಯ ಶಿರಸಿಯಿಂದ ಯಾವುದೇ ದಾಖಲೆಗಳಿಲ್ಲದೇ ಅನಧಿಕೃತವಾಗಿ ತಂದು ಸಾಕುತ್ತಿರುವುದಾಗಿ ತಿಳಿದುಬಂದಿದ್ದು ಹಾಗೂ ಮಗುವನ್ನು ಯಾರಿಂದ ಪಡೆದುಕೊಂಡಿದ್ದಾರೆ ಎಂಬ ಬಗ್ಗೆ ಸರಿಯಾದ ಮಾಹಿತಿ ನೀಡಿರುವುದಿಲ್ಲ. ಮಗುವಿನ ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ಮಗುವನ್ನು ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರ ಮೌಖಿಕ ಆದೇಶದ ಮೇರೆಗೆ ಕೃಷ್ಣಾನುಗ್ರಹ ಅರ್ಹ ದತ್ತು ಸಂಸ್ಥೆ ಸಂತೆಕಟ್ಟೆಯಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಆಪಾದಿತರ ಬಳಿ ಮಕ್ಕಳ ಕಲ್ಯಾಣ ಸಮಿತಿಗೆ ಮಗುವಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಹಾಜರಾಗುವಂತೆ ತಿಳಿಸಿದ್ದು ಆಪಾದಿತರು ಈವೆರೆಗೂ ಮಗುವಿನ ಬಗ್ಗೆ ಯಾವುದೇ ದಾಖಲೆಗಳನ್ನು ಹಾಜರುಪಡಿಸಿರುವುದಿಲ್ಲ.ಸದ್ರಿ ಆಪಾದಿತವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಕೋರಿಕೆ   ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 68 /2022 ಕಲಂ: 80 ಜೆಜೆ ಆಕ್ಟ್ ಯಂತೆ ಪ್ರಕರಣ ದಾಖಲಿಸಲಾಗಿದೆ.

ಮನುಷ್ಯಕಾಣೆ ಪ್ರಕರಣ

  • ಗಂಗೊಳ್ಳಿ: ಫಿರ್ಯಾದಿ ನಟರಾಜ್ ದೇವಾಡಿಗ ಪ್ರಾಯ: 31 ವರ್ಷ, ತಂದೆ: ನಾರಾಯಣ ದೇವಾಡಿಗ, ವಾಸ: ತೆಂಕಿನ ಮನೆ, ಹಡವು ಅಂಚೆ ಮತ್ತು ಗ್ರಾಮ, ಬೈಂದೂರು ತಾಲೂಕು ರವರು ತನ್ನ ತಂದೆ ನಾರಾಯಣ ದೇವಾಡಿಗ ಪ್ರಾಯ: 55 ವರ್ಷ ರವರ ಜೊತೆಯಲ್ಲಿ ಹವ್ಯಾಸದಂತೆ ದಿನಾಂಕ: 01-08-2022 ರಂದು ಸಂಜೆ 5:30 ಗಂಟೆಗೆ ಮೀನು ಹಿಡಿಯುವ ಬಗ್ಗೆ ಮೀನು ಹಿಡಿಯುವ ಬಲೆಯನ್ನು ತೆಗೆದುಕೊಂಡು ಮನೆ ಹತ್ತಿರ ಇರುವ ಬೈಂದೂರು ತಾಲೂಕು ಹಡವು ಗ್ರಾಮದ ಅತ್ತಿಕೋಣೆ ಸೌಪರ್ಣಿಕ ಹೊಳೆಯ ತೀರದಲ್ಲಿ ಬಲೆ ಹಾಕುತ್ತಿದ್ದಾಗ  ಸಂಜೆ ಸಮಯ ಸುಮಾರು 6:15 ಗಂಟೆಗೆ ಫಿರ್ಯಾದಿದಾರರ ತಂದೆ ನಾರಾಯಣ ದೇವಾಡಿಗರವರು ನದಿಯ ದಡದಿಂದ ಆಕಸ್ಮಿಕವಾಗಿ ಕಾಲು ಜಾರಿ ನದಿಯ ನೀರಿಗೆ ಬಿದ್ದಿದ್ದು ನೀರು ರಭಸವಾಗಿ ಹರಿಯುತ್ತಿದ್ದುದರಿಂದ  ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಕಾಣೆಯಾಗಿರುತ್ತಾರೆ. ಫಿರ್ಯಾದಿದಾರರು ಹಾಗೂ ನೆರೆಕೆರೆಯವರು ನೀರಿನಲ್ಲಿ ಕೊಚ್ಚಿಹೋದ ನಾರಾಯಣ ದೇವಾಡಿಗರವರ ಪತ್ತೆಯ ಬಗ್ಗೆ ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ.ವ್ಯಕ್ತಿಯ ಚಹರೆ: ಸಾಧಾರಣ ಶರೀರ ,ಎಣ್ಣೆ ಕಪ್ಪು  ಮೈಬಣ್ಣಕಪ್ಪು ಬಿಳಿ ಮಿಶ್ರಿತ ಗಡ್ಡ ಎತ್ತರ: 5  ಅಡಿ 5 ಇಂಚು ಬೂದು ಬಣ್ಣದ ತುಂಬು ತೋಳಿನ ಶರ್ಟ್ ಕಪ್ಪು ಬಿಳಿ ಬಣ್ಣ ಮಿಶ್ರಿತ ಪಂಚೆ ಧರಿಸಿರುತ್ತಾರೆ.  ಈ ಬಗ್ಗೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 68/2022  ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 02-08-2022 06:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080