ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 31/07/2021 ರಂದು ಸಂಜೆ 6:30 ಗಂಟೆಗೆ ಪಿರ್ಯಾದಿದಾರರಾದ ಸುಕೇಶ ಬಿ ಮಲ್ಯ (41), ತಂದೆ: ಕೆ ಭಾಸ್ಕರ ಮಲ್ಯ, ವಾಸ: ಕೃಷ್ಣಕೃಪಾ, ಬಿ ವೆಂಕಟೇಶ ಪೈ ಕಂಪೌಂಡ್‌, ಮಾರ್ಕೇಟ್‌ ಇವರ ತಂದೆ ಕೆ ಭಾಸ್ಕರ ಮಲ್ಯ ರವರು ಕಾರ್ಕಳ ಪುರಸಭೆ ಬಳಿ ಕೆನರ ಬ್ಯಾಂಕ್‌ ಎದುರುಗಡೆ ಹಾದು ಹೋಗಿರುವ ಸಾರ್ವಜನಿಕ ರಸ್ತೆಯಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿರುವಾಗ KA-19-M-6731 ನೇ ನೊಂದಣಿ ಸಂಖ್ಯೆಯ ಕಾರನ್ನು ಅದರ ಚಾಲಕ ನಿತೇಶ ಅನಂತಶಯನ ಕಡೆಯಿಂದ ಕಾರ್ಕಳ ಬಸ್ ಸ್ಟಾಂಡ್ ಕಡೆಗೆ ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಅವರ ಬಲಕಾಲಿನ ಪಾದದ ಗಂಟಿನ ಬಳಿ ರಕ್ತ ಗಾಯವಾಗಿರುತ್ತದೆ. ವಿಚಾರ ತಿಳಿದು ಸ್ಥಳಕ್ಕೆ ಬಂದ ಪಿರ್ಯಾದಿದಾರರು ಕೆ ಭಾಸ್ಕರ ಮಲ್ಯರವರನ್ನು ಚಿಕಿತ್ಸೆಯ ಬಗ್ಗೆ ಕಾರ್ಕಳದಲ್ಲಿರುವ ನಿಟ್ಟೆ ಗಾಜ್ರಿಯ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಅಲ್ಲಿನ ವೈದ್ಯರು ಭಾಸ್ಕರ ಮಲ್ಯರವರನ್ನು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 93/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 01/08/2021 ರಂದು ಪಿರ್ಯಾದಿದಾರರಾದ ಬಾಬು ದೇವ ಸಹಾಯಂ ( 39), ತಂದೆ: ದೇವಸಹಾಯಂ, ವಾಸ: ಎನ್‌‌‌. ಆರ್‌‌.ಶೆಟ್ಟಿ , ಬ್ಯಾಂಕರ್ಸ್‌ಕಾಲೋನಿ ವಾರಂಬಳ್ಳಿ ಗ್ರಾಮ, ಬ್ರಹ್ಮಾವರ ತಾಲೂಕು ಇವರು ವಾರಂಬಳ್ಳಿ ಗ್ರಾಮದ ಜಯಂತಿ ಸ್ಟೋರ್‌ ‌‌ಬಳಿ ಸಂಜೆ 5:45 ಗಂಟೆಗೆ ನಿಂತುಕೊಂಡಿರುವಾಗ ರಾಷ್ಟ್ರೀಯ ಹೆದ್ದಾರಿ 66 ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಓರ್ವ ಬೈಕ್‌ ಸವಾರ ಆತನ KA-20-EB-0334 ನೇ ನೊಂದಣಿ ನಂಬ್ರದ ಹಿರೋ ಹೊಂಡಾ ಸ್ಪ್ಲೆಂಡರ ಮೋಟಾರ ಸೈಕಲ್‌‌ನಲ್ಲಿ ರಸ್ತೆಯ ಎಡ ಬದಿಯಲ್ಲಿ ಚಲಾಯಿಸಿಕೊಂಡು ಬ್ರಹ್ಮಾವರ ಕಡೆಗೆ ಹೋಗುತ್ತಿರುವಾಗ ವಾರಂಬಳ್ಳಿ ಗ್ರಾಮದ ಮಂಜುಶ್ರಿ ಗ್ರಾನೇಟ್‌‌ ಎದುರು ಅದೇ ದಿಕ್ಕಿನಿಂದ ಬರುತ್ತಿದ್ದು ಓರ್ವ ಕಾರು ಚಾಲಕ ಆತನ ಕಾರನ್ನು ಆತನ ಎದುರಿನ ಒಂದು ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓವರ್‌ಟೇಕ್‌ ಮಾಡಿ ರಸ್ತೆಯ ತೀರ ಎಡ ಭಾಗಕ್ಕೆ ಚಲಾಯಿಸಿ ಬೈಕ್‌ಗೆ ಡಿಕ್ಕಿ ಹೊಡೆದು ಅದೇ ರಭಸದಲ್ಲಿ ಕಾರನ್ನು ನಿಲ್ಲಿಸದೇ ಬ್ರಹ್ಮಾವರದ ಕಡೆಗೆ ಹೋಗಿರುತ್ತಾನೆ. ಇದರ ಪರಿಣಾಮ ಬೈಕ್‌ಸವಾರ ಬೈಕ್‌ ಸವೇತ ರಸ್ತೆಗೆ ಬಿದ್ದವನನ್ನು ಕೂಡಲೇ ಪಿರ್ಯಾದಿದಾರರು ಹಾಗೂ ಇತರರು ಬಂದು ರಸ್ತೆಯಲ್ಲಿ ಬಿದ್ದ ವ್ಯಕ್ತಿಯನ್ನು ಉಪಚರಿಸಿ ವಿಚಾರಸಿದಾಗ ಅವರ ಹೆಸರು ಶಂಕರ ಪೂಜಾರಿ ಎಂದು ತಿಳಿಯಿತು, ಅಪಘಾತದಿಂದ ತಲೆಯ ಹಿಂಬದಿ ತೀವ್ರ ರಕ್ತ ಗಾಯವಾಗಿರುತ್ತದೆ. ಹಾಗೂ ಅವರ ಬೈಕ್‌ನ ಬಲ ಬದಿಯ ಮೀರರ್‌‌, ಸೇಪ್ಟಿಗಾರ್ಡ್‌, ಸೈಲೆನ್ಸರ್‌‌ ತರಚಿದ್ದು ಮುಂಭಾಗ ಡ್ಯೂಂ, ಹಾಗೂ ಹಿಂಭಾಗದ ಬಲ ಇಂಡಿಕೇಟರ್‌ ಜಖಂ ಗೊಂಡಿರುತ್ತದೆ. ಕೂಡಲೇ ಒಂದು ವಾಹನದಲ್ಲಿ ಬ್ರಹ್ಮಾವರದ ಪ್ರಣಮ್‌‌ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಕೆ.ಎಂ.ಸಿ ಆಸ್ಪತ್ರೆ ಮಣಿಪಾಲಕ್ಕೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಒಳ ರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ.ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 148/2021 ಕಲಂ: 279, 338 ಐಪಿಸಿ ಮತ್ತು ಸೆಕ್ಷನ್134(ಎ)(ಬಿ) ಜೊತೆಗೆ 187 ಐಎಂವಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 02-08-2021 10:12 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080