ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 02/08/221 ರಂದು ಮಧ್ಯಾಹ್ನ 12:00 ಗಂಟೆಗೆ ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಬಜಗೋಳಿ ಕಂಬಳ ಕ್ರಾಸ್ ಎಂಬಲ್ಲಿ ಹಾದು ಹೋಗುವ ಬಜಗೋಳಿ-ಕಾರ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ನಂಬ್ರ KA-20-MA-8985 ನೇಯದರ ಚಾಲಕನು ಕಾರ್ಕಳ ಕಡೆಯಿಂದ ಬಜಗೋಳಿ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಶೇಖರ ದೇವಾಡಿಗ ಎಂಬುವವರು ದ್ವಿಚಕ್ರ ವಾಹನ ನಂಬ್ರ KA-20-EE-7634 ನೇಯದರಲ್ಲಿ ಹುಕ್ರ ಎಂಬವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು  ಬಜಗೋಳಿ ಕಡೆಯಿಂದ ಕಂಬಳ ಕ್ರಾಸ್ ಕಡೆಗೆ ಸವಾರಿ ಮಾಡಿಕೊಂಡು ಬಂದು ಕಂಬಳ ಕ್ರಾಸ್‌ನಲ್ಲಿ  “U” ಟರ್ನ್ ಪಡೆದು ಮರಳಿ ಬಜಗೋಳಿ ಕಡೆಗೆ ಹೋಗುತ್ತಿರುವಾಗ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಸವಾರ ಮತ್ತು ಸಹಸವಾರರಿಬ್ಬರು ದ್ವಿಚಕ್ರ ವಾಹನ ಸಮೇತ ಡಾಮಾರು ರಸ್ತೆಗೆ ಬಿದ್ದು ತೀವೃ ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಸರಕಾರಿ ಆಸ್ಪತ್ರೆಯ ವೈದ್ಯರು ಗಾಯಾಳು ಶೇಖರ ದೇವಾಡಿಗರವರು ದಾರಿ ಮಧ್ಯೆ ಮೃತಪಟ್ಟಿದ್ದು, ಸಹಸವಾರ ಹುಕ್ರ ಇವರ ಎಡಕಾಲಿನ ಕೋಲು ಕಾಲಿಗೆ ಮೂಳೆ ಮುರಿತವಾಗಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 92/2021 ಕಲಂ: 279, 338, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಹೆಬ್ರಿ: ಪಿರ್ಯಾದಿದಾರರಾದ ಪ್ರಕಾಶ್ ಪೂಜಾರಿ (35), ತಂದೆ: ಬಾಬು ಪೂಜಾರಿ, ವಾಸ; ಅದ್ಯುತ್ ನಿಲಯ, ಚರ್ಚ್ ರಸ್ತೆ, ಹೆಬ್ರಿ ಇವರಿಗೆ ಹೆಬ್ರಿ ಕೆಳಪೇಟೆಯಲ್ಲಿ ಪ್ರಕಾಶ ಕುಶನ್ ವರ್ಕ್ಸ್ ಎಂಬ ಅಂಗಡಿ ಇದ್ದು ಅವರ ಅಂಗಡಿಯ ಬಳಿ  ದಿನಾಂಕ 01/08/2021 ರಂದು ಸಂಜೆ 07:00 ಗಂಟೆಯಿಂದ ದಿನಾಂಕ 02/08/2021 ರಂದು ಬೆಳಿಗ್ಗೆ 08:30 ಗಂಟೆಯ ಮಧ್ಯಾವಧಿಯಲ್ಲಿ 55 ರಿಂದ 60 ವರ್ಷದ ಅಪರಿಚಿತ ಗಂಡಸಿನ ಮೃತದೇಹವು ಮಲಗಿದ ಸ್ಥಿತಿಯಲ್ಲಿದ್ದು  ಅತನ ಬದಿಯಲ್ಲಿ ಒಂದು ಕಪ್ಪು ಸ್ಕೂಲ್ ಬ್ಯಾಗ್ ನಲ್ಲಿ ಎರಡು ಶರ್ಟ್ ಗಳು, ಬಾಚಣಿಗೆ, ಅಸ್ಪತ್ರೆಯ ಟ್ಯಾಬೇಟ್ ಗಳು ಇದ್ದು, ನೋಡುವಾಗ ಬಿಕ್ಷುಕನಂತೆ ಕಂಡು ಬರುತ್ತಿದ್ದು, ಪ್ರಾಯಸ್ಥನಾಗಿದ್ದು ಈತನು ಅನ್ನಾಹಾರ ಇಲ್ಲದೇ ಆಥವಾ ಯಾವುದೊ ಕಾಯಿಲೆಯಿಂದ ಅಥವಾ ವಯೋಸಹಜದಿಂದ ಮೃತ ಪಟ್ಟಿರುವ ಸಾದ್ಯತೆ ಇರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್‌ ಕ್ರಮಾಂಕ 25/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಅಜೆಕಾರು: ದಿನಾಂಕ 01/08/2021ರಂದು 13:50 ಗಂಟೆ ಸಮಯಕ್ಕೆ ಕಾರ್ಕಳ ತಾಲೂಕು ಕಡ್ತಲ  ಗ್ರಾಮದ ಕಂಟೆಬೆಟ್ಟು ಎಂಬಲ್ಲಿ ನಾರಾಯಣ ಪೂಜಾರಿ ಎಂಬುವವರ ಕೋವಿಯನ್ನು ಸಂಜೀವ ಪೂಜಾರಿರವರು ತಮ್ಮ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಕರುಣಾಕರ ಮೇರ ಎಂಬುವವರಿಗೆ ತೋಟದಲ್ಲಿನ ಮಂಗಗಳನ್ನು ಓಡಿಸಲು ನೀಡಿದ್ದು ಕರುಣಾಕರ ಮೇರ ಇವರು ಸಂಜೀವ ಪೂಜಾರಿ ಇವರೊಂದಿಗೆ ಕೋವಿಯನ್ನು ಹಿಡಿದುಕೊಂಡು ಸಂಜೀವ ಪೂಜಾರಿ ಇವರ ತೋಟಕ್ಕೆ ಮಂಗಗಳನ್ನು ಓಡಿಸಲು ನಡೆದುಕೊಂಡು ಹೋಗುತ್ತಿದ್ದಾಗ ನೆಲದಲ್ಲಿ ಇದ್ದ ಕಲ್ಲು ತಾಗಿ ಕಾಲು ಜ್ಯಾರಿ ನೆಲಕ್ಕೆ ಬಿದ್ದಿದ್ದು ಆ ಸಮಯ ಕರುಣಾಕರ ಮೇರ ಇವರು ಹಿಡಿದುಕೊಂಡಿದ್ದ ಕೋವಿಯಿಂದ ಆಕಸ್ಮಿಕವಾಗಿ ಗುಂಡು ಸಿಡಿದು ಕರುಣಾಕರ ಮೇರ ಇವರ ಬಲಕಿವಿಯ ಬಳಿ ತಾಗಿ ರಕ್ತಗಾಯವಾಗಿದ್ದು ಗುಂಡು ಸಿಡಿದ ಶಬ್ದ ಕೇಳಿ ಪಿರ್ಯಾದಿದಾರರಾದ ಸುಕೇಶ್ ಹೆಗ್ಡೆ (41), ತಂದೆ: ಎಮ್ ಸದಾಶಿವ ಹೆಗ್ಡೆ, ವಾಸ: ಕುಂಜಕ್ಯಾರು ಹೌಸ್, ಕಡ್ತಲ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಹಾಗೂ ಕರುಣಾಕರ ಇವರ ಹಿಂದಿನಿಂದ ನಡೆದುಕೊಂಡು ಹೋಗುತ್ತಿದ್ದ ಸಂಜೀವ ಪೂಜಾರಿಯವರು ಸೇರಿ ಗಾಯಾಳು ಕರುಣಾಕರ ಮೇರನನ್ನು ಎತ್ತಿ ಉಪಚರಿಸಿ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 20/2021  ಕಲಂ: 338 ಐಪಿಸಿ ಮತ್ತು ಕಲಂ: 3, 25, 30 ಇಂಡಿಯನ್ ಆರ್ಮ್ಸ್ ಆ್ಯಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 02-08-2021 05:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080