ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ : ದಿನಾಂಕ 29/06/2022 ರಂದು ಮಧ್ಯಾಹ್ನ  12:30  ಗಂಟೆಗೆ ಪಿರ್ಯಾದಿ ರಮೇಶ್ ಶೆಟ್ಟಿ (57)ತಂದೆ: ವಿಠಲ ಶೆಟ್ಟಿ  ವಾಸ: ಮಂಜೊಟ್ಟು ರೆಂಜಾಳ ಗ್ರಾಮ ಕಾರ್ಕಳ  ಇವರ ಮನೆಯ ಮುಂಭಾಗ ಕಾರ್ಕಳ ತಾಲೂಕು ರೆಂಜಾಳ ಗ್ರಾಮದ ಮಂಜೊಟ್ಟು ಎಂಬಲ್ಲಿ ಹಾದುಹೋಗುವ ಜೋಡುಕಟ್ಟೆ ರೆಂಜಾಳ ಸಾರ್ವಜನಿಕ ರಸ್ತೆಯಲ್ಲಿ ಮೋಟಾರ್ ಸೈಕಲ್ ನಂಬ್ರ KA20EF6705 ನೇದರ ಸವಾರನು ಜೋಡುಕಟ್ಟೆಯಿಂದ ರೆಂಜಾಳ ಕಡೆಗೆ ಸವಾರಿ ಮಾಡಿಕೊಂಡು ಹೋಗುವಾಗ ನಾಯಿಯೊಂದು ಏಕಾಏಕಿ ರಸ್ತೆಗೆ ಬಂದುದ್ದನ್ನು  ಕಂಡು ಮೋಟಾರ್ ಸೈಕಲ್ ಸವಾರ ಅಶೋಕ ಶೆಟ್ಟಿ ಇವರು ಮೋಟಾರ್ ಸೈಕಲಿನ ಬ್ರೇಕ್ ನ್ನು ನಿರ್ಲಕ್ಷತನದಿಂದ ಅದುಮಿದ ಕಾರಣ ಮೋಟಾರ್ ಸೈಕಲ್ ಸ್ಕಿಡ್ ಆಗಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ,ಪರಿಣಾಮ ಸವಾರನ ತಲೆಗೆ ಹಾಗೂ ಮುಖಕ್ಕೆ ಗಂಭೀರ ಸ್ವರೂಪದ ಗಾಯವಾಗಿರುತ್ತದೆ, ಚಿಕಿತ್ಸೆ ಬಗ್ಗೆ ಗಾಯಗೊಂಡವರನ್ನು  ಮಂಗಳೂರು ಕೆ. ಎಂ ಸಿ ಆಸ್ಪತ್ರೆ ದಾಖಲಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆ  ಅಪರಾಧ ಕ್ರಮಾಂಕ  91/2022 ಕಲಂ 279, 338 IPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಕಾಪು: ದಿನಾಂಕ 01-07-2022  ರಂದು ಪಿರ್ಯಾದಿ ದಿನೇಶ್‌ ಪ್ರಾಯ : 38 ವರ್ಷ ತಂದೆ : ದಿ: ಕೃಷ್ಣಪ್ಪ ತಿಂಗಳಾಯ  ವಾಸ :  4-52 ಸುರಕ್ಷಾ ಗುಂಡಡ್ಕ ಮಟ್ಟು  ಇವರು ತನ್ನ ಅಣ್ಣ ಗಣೇಶ್‌ ಪ್ರಾಯ 45 ವರ್ಷ ರವರೊಂದಿಗೆ ಎಂದಿನಂತೆ ಮೀನು ಹಿಡಿಯಲು ಬೆಳಿಗ್ಗೆ 10:00 ಗಂಟೆಗೆ ಮಟ್ಟುಗ್ರಾಮದ  ಪಾಪನಾಶಿನಿ ನದಿಗೆ ದೊಣಿಯಲ್ಲಿ ಹೋಗಿದ್ದು, ಮೀನು ಹಿಡಿಯುತ್ತಿರುವಾಗ ಸಮಯ ಸುಮಾರು 12:30 ಗಂಟೆಗೆ ಫಿರ್ಯಾಧಿದಾರರ ಅಣ್ಣನಿಗೆ ಎದೆ ನೋವು ಕಾಣಿಸಿಕೊಂಡಿದ್ದು,ಈ ವೇಳೆ  ಗಣೇಶ್‌ರವರು ದೋಣಿಯಿಂದ ನೀರಿಗೆ ಬಿದ್ದಿದ್ದು,ಆ ಕೂಡಲೇ ಫಿರ್ಯಾಧಿದಾರರು ಅಲ್ಲಯೇ ಬೇರೆ ದೋಣಿಯಲ್ಲಿ ಮೀನು ಹಿಡಿಯುತ್ತಿದ್ದವರನ್ನು ಕೂಗಿ ಕರೆದು ಅವರ ಸಹಾಯದಿಂದ ನೀರಿಗೆ ಬಿದ್ದಿದ್ದ ಗಣೇಶ್‌ರವರನ್ನು ಮೇಲಕ್ಕೆ ಎತ್ತಿ ದಡಕ್ಕೆ ಬಂದು ನೋಡಿದ್ದು, ಗಣೇಶ್‌ರವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದು ಅವರನ್ನು ಕೂಡಲೇ ಮಟ್ಟುವಿನ ಕ್ಲಿನಿಕ್‌ಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ಅಲ್ಲಿನ ನರ್ಸ ಉಡುಪಿಯ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು, 108 ನೇ ಆಂಬುಲೆನ್ಸ್‌ ನಲ್ಲಿ ಗಣೇಶ್‌ರವರನ್ನು ಉಡುಪಿಯ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಸಮಯ ಸುಮಾರು 3:00 ಗಂಟೆಗೆ ಪರೀಕ್ಷಿಸಿದ ಅಲ್ಲಿನ ವೈದ್ಯರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಯು.ಡಿ.ಆರ್‌.ನಂಬ್ರ 22-2022 ಕಲಂ 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 02-07-2022 10:31 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080