ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ

  • ಕುಂದಾಪುರ: ಪಿರ್ಯಾದಿ ಶ್ರೀನಾಥ ರೆಡ್ಡಿ ಪಿ ಎಸ್ ಐ ಕೊಪ್ಪ ಪೊಲೀಸ್ ಠಾಣೆ ಇವರು ಕೊಪ್ಪ ಪೊಲೀಸ್ ಠಾಣಾ ಅಕ್ರ 58/2021 ಪ್ರಕರಣದ ಆರೋಪಿ ಡ್ಯಾನಿಶ್ ಮತ್ತು ಕೃತ್ಯಕ್ಕೆ ಬಳಸಿದ್ದ ಸ್ವತ್ತು ಪತ್ತೆ ಬಗ್ಗೆ ತಮ್ಮ ಠಾಣಾ  ಎ.ಎಸ್.ಐ ಗಂಗ ಶೆಟ್ಟಿ ಮತ್ತು ಸಿಬ್ಬಂದಿಯವರಾದ ಸಿಪಿಸಿ  ಪ್ರಶಾಂತ್, ಸಿಪಿಸಿ  ಅಮಿತ್ ಚೌಗಳೆ ರವರೊಂದಿಗೆ ಖಾಸಗಿ ವಾಹನದಲ್ಲಿ ದಿನಾಂಕ 01/07/2022 ರಂದು ಸಂಜೆ ಕೊಪ್ಪದಿಂದ ಹೊರಟು ಕುಂದಾಪುರಕ್ಕೆ ಬಂದು  ಈ ದಿನ ದಿನಾಂಕ 02/07/2022 ರಂದು ಬೆಳಿಗ್ಗೆಸುಮಾರು 10:00 ಘಂಟೆಗೆ ಕೃತ್ಯಕ್ಕೆ ಬಳಸಿದ್ದ KA 50-8605 ನೇ ವಾಹನ ನೊಂದಣಿ ಮಾಲೀಕರಾದ ಇಕ್ಬಾಲ್ ತಂದೆ: ಅಬ್ದುಲ್ ಹಮೀದ್ ವಾಸ: ಮಾವಿನಕಟ್ಟೆ, ಗುಲ್ವಾಡಿ ಗ್ರಾಮ ರವರ ವಿಳಾಸದ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಿಂದ ಮಾಹಿತಿ ಪಡೆದು ಸ್ಥಳೀಯ ಪೊಲೀಸರ ಸಹಾಯದಿಂದ ಸದ್ರಿ ವಾಹನ ಮಾಲೀಕರಾದ ಇಕ್ಬಾಲ್ ರವರನ್ನು ಭೇಟಿ ಮಾಡಿ ವಿಚಾರಿಸಲಾಗಿ ಸದ್ರಿ ವಾಹನವನ್ನು ತನ್ನ ಮಗ ಡ್ಯಾನಿಶ್ ರವರು ಕೋಟೇಶ್ವರ ಕಡೆ ತೆಗೆದುಕೊಂಡು ಹೋಗಿರುವುದಾಗಿ ತಿಳಿಸಿದ್ದು, ಅದರಂತೆ ಇಕ್ಬಾಲ್ ರವರನ್ನು ವಾಹನದಲ್ಲಿ ಕುಳ್ಳಿರಿಸಿಕೊಂಡು ಬೆಳಿಗ್ಗೆ 11:45 ಗಂಟೆಗೆ ಕೋಟೇಶ್ವರ ಗ್ರಾಮದ ಕಟ್ಕೇರಿ ತಲುಪಿದಾಗ ರಸ್ತೆಯಲ್ಲಿ ಆಪಾದಿತನಾದ ಅಬ್ದುಲ್ ರವೂಫ್ ನು ಸ್ಕೂಟಿ ನಂಬ್ರ KA 20 EY 0491 ನೇಯದರಲ್ಲಿ ಹಾಗೂ ಇನ್ನೊಬ್ಬ ಆಪಾದಿತ  ನಿಜಾಮ್ ಬ್ರಿಜಾ ಕಾರು ನಂಬ್ರ:KA14 W 7943 ನೇದರಲ್ಲಿ  ವೇಗವಾಗಿ ಬಂದು ಪಿರ್ಯಾದಿದಾರರು ಬರುತ್ತಿದ್ದ ವಾಹನವನ್ನು ಓವರ್ ಟೇಕ್ ಮಾಡಿ, ಅಡ್ಡಗಟ್ಟಿ ನಿಲ್ಲಿಸಿ, ಇಳಿದು ಬಂದು ಪಿರ್ಯಾದಿದಾರರ ವಾಹನವನ್ನು ತಡೆದಿದ್ದು ಪಿರ್ಯಾದಿದಾರರು ವಾಹನ ನಿಲ್ಲಿಸಿ, ನಾವು ಪೊಲೀಸ್ ರೆಂದು ಹೇಳಿದರೂ “ನೀವು ಪೊಲೀಸ್ ರಾದರೇ ನಮಗೇನು, ನಮ್ಮ ಮನೆಗೆ ಬಂದು ಮರ್ಯಾದೆ ತೆಗೆಯುತ್ತೀರಾ, ಎಂದು ಅವಾಚ್ಯ ಶಬ್ದದಿಂದ ಬೈಯ್ದು “ನೀವು ಹೇಗೆ ಇಲ್ಲಿಂದ ಹೋಗುತ್ತೀರಾ, ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ” ಎಂದು ಹೇಳಿ, ದ್ವಿಚಕ್ರ ವಾಹನದಲ್ಲಿ ಬಂದ ಅಬ್ದುಲ್ ರವೂಫ್ ನು ಅಲ್ಲೇ ಇದ್ದ ಒಂದು ಕಲ್ಲನ್ನು ತೆಗೆದು ಪಿರ್ಯಾದಿದಾರರನ್ನು ಕೊಲ್ಲುವ ಉದ್ದೇಶದಿಂದ ಪಿರ್ಯಾದಿದಾರರ ತಲೆಗೆ ಗುರಿಯಿಟ್ಟು ಎಸೆದಿದ್ದು ಅಷ್ಟರಲ್ಲಿ ಪಿರ್ಯಾದಿದಾರರ ಜೊತೆ ಇದ್ದ ಎ.ಎಸ್.ಐ ಗಂಗ ಶೆಟ್ಟಿರವರು ಪಿರ್ಯಾದಿದಾರರನ್ನು ಪಕ್ಕಕ್ಕೆ ಎಳೆದುಕೊಂಡಿದ್ದು, ಕೂದಲೆಳೆ ಅಂತರದಿಂದ ತಪ್ಪಿಸಿಕೊಂಡಿರುತ್ತಾರೆ. ಅಲ್ಲದೇ ಕಾರಿನಲ್ಲಿ ನಿಜಾಮ್ ಈತನು ಜೊತೆಗಿದ್ದ ಇತರ ಪೊಲೀಸ್ ರನ್ನು ಎಳೆದಾಡಿದ್ದು ಅಲ್ಲದೇ ಕಲ್ಲು ಎಸೆದ ವ್ಯಕ್ತಿ ಪಿರ್ಯಾದಿದಾರರನ್ನು ದೂಡಿ ಎಳೆದಾಡಿದ್ದು, ಆ ಸಮಯ ಪಿರ್ಯಾದಿದಾರರು ಮತ್ತು ಉಳಿದ ಸಿಬ್ಬಂದಿಯವರು ತಾವು ಪೊಲೀಸರು,ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಬೇಡಿ ಎಂದು ಗುರುತಿನ ಚೀಟಿ ತೋರಿಸಿದರೂ ಅವಾಚ್ಯ ಶಬ್ದದಿಂದ ಬೈಯ್ದು ಮುಂದಕ್ಕೆ ಹೋಗದಂತೆ ತಡೆದಿರುತ್ತಾರೆ. ನಂತರ ಸಾರ್ವಜನಿಕರು ಸೇರಿದ್ದನ್ನು ಕಂಡು ಅವರಿಬ್ಬರು ತಮ್ಮವಾಹನದಲ್ಲಿ ತಪ್ಪಿಸಿಕೊಂಡು ಹೋಗಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 66/2022  ಕಲಂ: 441, 307, 504, 353 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿ ಶ್ರೀಮತಿ ರಶೀದಾ ಬಾನು ಇವರು  ದಿನಾಂಕ:02-07-2022ರಂದು  ತನ್ನ ಬಾಬ್ತು KA20EW1984ನೇ ಸ್ಕೂಟರ್ ನಲ್ಲಿ ಕೆ.ಎಮ್. ಮಾರ್ಗದ ಕಡೆಯಿಂದ ಉಡುಪಿ ಬಸ್ ನಿಲ್ದಾಣದ  ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 10-45 ಗಂಟೆಗೆ  ಮೂಡನಿಡಂಬೂರು ಗ್ರಾಮದ ಉಡುಪಿ ಶೂ ಮಹಲ್ ಅಂಗಡಿಯ ಎದುರುಗಡೆ  ತಲುಪುವಾಗ KA20C1303ನೇ ಕಾರಿನ ಚಾಲಕ ಮೊಹಮ್ಮದ್ ಸಫ್ವಾನ್ ಎಂಬಾತನು ತನ್ನ ಕಾರನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಪಿರ್ಯಾದಿದಾರರ ಸ್ಕೂಟರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದಿದಾರರ ಎಡಕೈಯ ಮೊಣಗಂಟಿನ ಕೆಳಗಡೆ ಮೂಳೆ ಮುರಿತದ ತೀವ್ರ ಸ್ವರೂಪದ ಜಖಂ ಉಂಟಾಗಿದ್ದು, ಈ ಬಗ್ಗೆ ಉಡುಪಿ ಸಿ.ಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಠಾಣೆ ಅಪರಾಧ ಕ್ರಮಾಂಕ ಮಲ್ಪೆ ಠಾಣೆ ಅಪರಾಧ ಕ್ರಮಾಂಕ 52/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ಕಳವು ಪ್ರಕರಣ

  • ಉಡುಪಿ: ಪಿರ್ಯಾದಿ ಇಂದಿರಾ ಬಾಯಿ ಇವರ ಮಾಲೀಕತ್ವದ ಫ್ಯಾಷಿನೋ (ಯಮಹಾ) ಸ್ಕೂಟರ್ ನಂಬ್ರ: KA 51 EV 7235 (Chassis No: ME1SE77F7G0238052, Engine No: E3N8E0347558)ನೇದನ್ನು ದಿನಾಂಕ: 23/06/2022 ರಂದು ಪಿರ್ಯಾದುದಾರರ ತಮ್ಮನಾದ ಸುಂದರ್‌ ಬಿ. ಪೂಜಾರಿಯವರು ಕೆಲಸದ ಸಲುವಾಗಿ ತೆಗೆದುಕೊಂಡು ಹೋಗಿದ್ದು, ಸಮಯ ಸುಮಾರು 11:00 ಗಂಟೆಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಕಿದಿಯೂರು ಹೋಟೆಲಿನ ಎದುರುಗಡೆ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದು, ವಾಪಾಸು 11:30 ಗಂಟೆಗೆ ಬಂದು ನೋಡಲಾಗಿ, ಸ್ಕೂಟರ್ ನಿಲ್ಲಿಸಿದ ಜಾಗದಲ್ಲಿ ಇಲ್ಲದೆ ಇದ್ದು, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸ್ಕೂಟರ್‌ ನ ಅಂದಾಜು ಮೌಲ್ಯ ರೂ. 50,000/- ಆಗಬಹುದು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 104/2022 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿ ವಿನೋದ ಇವರು  ಮಲ್ಪೆ ಕೊಳ -1  ರಲ್ಲಿರುವ ಅಂಗನವಾಡಿ ಕೇಂದ್ರ ದಲ್ಲಿ ಶಿಕ್ಷಕಿ ಆಗಿ ಕೆಲಸ  ಮಾಡಿಮಾಡಿಕೊಂಡಿದ್ದು , ಪಿರ್ಯಾದಿದಾರರು ದಿನಾ ಬೆಳಿಗ್ಗೆ 09:30 ಗಂಟೆಗೆ  ಅಂಗನವಾಡಿ ಗೆ ಬಂದು ಬಾಗಿಲು ತೆಗೆದು ಕರ್ತವ್ಯ ನಿರ್ವಹಿಸಿ ಸಂಜೆ 4:30 ಗಂಟೆಗೆ ಬಾಗಿಲು ಹಾಕಿ ಹೋಗುತ್ತಿದ್ದು ,  ನಿನ್ನೆ ದಿನ ದಿನಾಂಕ: 01-07-2022 ರಂದು ಜಿಲ್ಲಾಧಿಕಾರಿಗಳ ಆದೇಶದಂತೆ ರಜೆ ಇದ್ದು ,ಈ ದಿನ ದಿನಾಂಕ: 02-07-2022 ರಂದು  ಪಿರ್ಯಾದಿದಾರರು ಮತ್ತು ಅಂಗನವಾಡಿ ಸಹಾಯಕಿ  ಸುಮಂಗಳಾರವರೊಂದಿಗೆ  ಬೆಳಿಗ್ಗೆ 09:30  ಗಂಟೆ ಗೆ ಅಂಗನವಾಡಿಗೆ ಬಂದು ನೋಡಿದಾಗ  ಅಂಗನವಾಡಿಯ ಎದುರಿನ ಮುಖ್ಯ  ಕಬ್ಬಿಣದ ಬಾಗಿಲಿನ ಡ್ರಿಲ್ ನ   ಚಿಲಕವನ್ನು ಯಾರೋ ಕಳ್ಳರು  ಯಾವುದೋ ಆಯುಧದಿಂದ  ತುಂಡು ಮಾಡಿದ್ದು ಕಂಡುಬಂದಿದ್ದು  ,ಪಿರ್ಯಾದಿದಾರರು  ಅಂಗನವಾಡಿಯ ಒಳಗೆ ಪ್ರವೇಶಿಸಿ  ನೋಡಿದಾಗ ಕೊಠಡಿಯ ಕೋಣೆಯ ಒಳಗಡೆ ಇದ್ದ ಬೀರುವನ್ನು ತೆರೆದಿದ್ದು,  ಅದರೊಳಗಿದ್ದ LGW10   ಮೊಬೈಲ್ ಪೋನ್ ಅಂದಾಜು ಮೌಲ್ಯ 3000 ರೂ ,  ಹಾಗೂ ಸ್ತ್ರೀಶಕ್ತಿ  ಸಂಘದ ಡಬ್ಬದಲ್ಲಿದ್ದ  ಸುಮಾರು 10900 ರೂ ಹಣವು ಇರದೆ ಇದ್ದು ಯಾರೋ ಕಳ್ಳರು ದಿನಾಂಕ:30-06-2022 ರಂದು  ಸಂಜೆ  4: 00 ಗಂಟೆಯಿಂದ  ಈ ದಿನ ದಿನಾಂಕ: 02-07-2022 ರ ಬೆಳಿಗ್ಗೆ09:30 ಗಂಟೆಯ ಮಧ್ಯಾವಧಿಯಲ್ಲಿ ಅಂಗನವಾಡಿಯ ಮುಖ್ಯ ಬಾಗಿಲಿನ ಯಾವುದೋ ಆಯುಧದಿಂದ ಬಲತ್ಕಾರವಾಗಿ  ಮೀಟಿ ಬೀಗವನ್ನು ತುಂಡು ಮಾಡಿ  ಒಳಪ್ರವೇಶಿಸಿ ಮೊಬೈಲ್ ಹಾಗೂ ನಗದನ್ನು ಕಳವು ಮಾಡಿದ್ದು,ಕಳವಾದ  ಹಣ ಹಾಗೂ ಸ್ವತ್ತಿನ ಒಟ್ಟು ಮೌಲ್ಯ 13900 ರೂ ಆಗಿರುತ್ತದೆ. ಈ ಬಗ್ಗೆ  ಮಲ್ಪೆ ಠಾಣೆ ಅಪರಾಧ ಕ್ರಮಾಂಕ 58/2022 . ಕಲಂ 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ವಂಚನೆ ಪ್ರಕರಣ

  • ಶಂಕರನಾರಾಯಣ: ಫಿರ್ಯಾದಿ ಸಂತೋಷ  ಕುಮಾರ್ ಶೆಟ್ಟಿ ಇವರು ಕುಂದಾಪುರ ತಾಲೂಕಿನ ಶಂಕರನಾರಾಯಣ  ಗ್ರಾಮದ  ಶಂಕರನಾರಾಯಣದಲ್ಲಿ ಶ್ರೀ ಬ್ರಹ್ಮಲಿಂಗೇಶ್ವರ ಎಂಬ ಹೆಸರಿನ ಹಾರ್ಡವೇರ್ ಅಂಗಡಿ ಇಟ್ಟುಕೊಂಡು  ವ್ಯವಹಾರ  ಮಾಡಿಕೊಂಡಿರುತ್ತಾರೆ ಹಾಗೂ ಪಿಡ್ಬ್ಲುಡಿ ಗುತ್ತಿಗೆದಾರರು  ಆಗಿರುತ್ತಾರೆ,  2017  ರಲ್ಲಿ ಆಪಾದಿತ ಚಂದ್ರಪ್ಪ  ಪ್ರಾಐ 50 ವರ್ಷ ತಂದೆ, ಮಂಜಪ್ಪ ವಾಸ, ಸಂಜನಾ  ಎಂಟ್ರಪ್ರಸೆಸ್  ನಂ 786/1/30   ಮತ್ತು  31 3 ನೇ ಮುಖ್ಯ  ರಸ್ತೆ  2 ನೇ   ಕ್ರಾಸ್  ಮುನೇಶ್ವರ  ದೇವಸ್ಥಾನದ  ಹಿಂಬದಿ   ಶ್ರೀರಾಂ ಪುರ  ಜಕೂರು  ಬೆಂಗಳೂರು ಈತನು ಭದ್ರಾ  ಪವರ್  ಪ್ರೊಜೆಕ್ಟ ಹಾಗೂ  ಕಾರ್ಗಲ್  ಪ್ರೊಜ್ರಕ್ಟ ನ್ನು  43,00,000/- ರೂಪಾಯಿಗೆ  ಗುತ್ತಿಗೆ ವಹಿಸಿಕೊಂಡುವುದಾಗಿ  ಹೇಳಿ  ಫಿರ್ಯಾದುದಾರರನ್ನು  ನಂಬಿಸಿ  ಅವರಿಂದ   18,50,000/- ರೂಪಾಯಿಯನ್ನು   ನೀಡುವಂತೆ ತಿಳಿಸಿರುತ್ತಾನೆ,  ಅದನ್ನು  ನಂಬಿದ ಫಿರ್ಯಾದುದಾರರ   ಆರೋಪಿಯ  ಖಾತಗೆ  18,50,000/-ರೂಪಾಯಿಯನ್ನು ವರ್ಗಾವಣೆ   ಮಾಡಿರುತ್ತಾನೆ,  ಆ  ಬಳಿಕ   ಆರೋಪಿಯ   ಸುಳ್ಳು   ಹೇಳಿ  ಗುತ್ತಿಗೆಯನ್ನು  ವಹಿಸಿಕೊಂಡದೇ 1,00,000/- ಹಣವನ್ನು ವಾಪಾಸು ನೀಡಿ ಉಳಿದ  17,50,000/- ರೂ  ಹಣವನ್ನು  ಸಹ   ವಾಪಾಸು  ನೀಡದೇ ಮೋಸ ಮಾಡಿರುತ್ತಾನೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 68/2022  ಕಲಂ:   417,418,420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ಚಾವಂಡಿಬೆಟ್ಟು ನಿವಾಸಿ ಪಿರ್ಯಾದಿ ಸುಶಾಂತ್  ಇವರ ತಂದೆ ನಾರಾಯಣ ಪೂಜಾರಿ, ಪ್ರಾಯ 63 ವರ್ಷ,  ಇವರು ಕುಡಿತದ ಚಟವನ್ನು ಹೊಂದಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದರು, ದಿನಾಂಕ 30/06/2022 ರಂದು ರಾತ್ರಿ ಸಮಯದಿಂದ ದಿನಾಂಕ 02/07/2022 ರಂದು ಬೆಳಿಗ್ಗೆ 6:30 ಗಂಟೆಯ ನಡುವಿನ ಅವಧಿಯಲ್ಲಿ ಕರಿಯ ಶೆಟ್ಟಿರವರ ಮನೆಗೆ ಹೋಗುವ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಾ ಆಕಸ್ಮಿಕವಾಗಿ ಕಾಲು ಜಾರಿ ಕಾಲುದಾರಿಯ ಬಳಿ ಇರುವ ಹಳ್ಳದ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 20/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 02-07-2022 06:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080