ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಮಲ್ಪೆ: ದಿನಾಂಕ 01/07/2021 ರಂದು ಪಿರ್ಯಾದಿದಾರರಾದ ಕೆ ಚಂದ್ರಶೇಖರ (49), ತಂದೆ: ಜಬ್ಬ ಮರಕಾಲ, ವಾಸ: ಶ್ರಿ  ವಿಷ್ಣು ಪ್ರಸಾದ್   ಬಾರಿಕೆರೆ  ಕೋಟ, ಕೊಟತಟ್ಟು ಗ್ರಾಮ ಇವರು KA-20-X-9753 ನೇ ಮೋಟಾರು ಸೈಕಲ್ ನಲ್ಲಿ ಪಿರ್ಯಾದಿದಾರರು ಸವಾರರಾಗಿ , ಮಗ ನಿತಿನ್ ನನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಮನೆ ಗೃಹ ಪ್ರವೇಶದ ಕಾರ್ಯಕ್ರಮದ ನಿಮಿತ್ತ  ಹೂಡೆ ತೋನ್ಸೆಗೆ ಹೋಗಲಿಕ್ಕೆ ಮನೆಯಿಂದ  11:15 ಗಂಟೆಗೆ ಹೊರಟು ಸಂತೆಕಟ್ಟೆ ನೇಜಾರು ಮಾರ್ಗವಾಗಿ ಹೋಗುತ್ತಿರುವಾಗ 11:50 ಗಂಟೆಗೆ ನೇಜಾರು ಜ್ಯೋತಿನಗರ ಬಳಿ ತಲುಪುವಾಗ ಅವರ ಹಿಂದಿನಿಂದ ಸಂತೆಕಟ್ಟೆಯಿಂದ ಹಂಪನಕಟ್ಟೆಯ ಕಡೆಗೆ KA-19-MC-6091 ನೇ ಕಾರು ಚಾಲಕನು ಅತೀವೇಗ ಹಾಗೂ ಅಜಾಗರುಕತೆಯಿಂದ ಕಾರನ್ನು ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲ್ ಗೆ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು  ಪಿರ್ಯಾದಿದಾರರ ಎಡಕೈಗೆ ರಕ್ತಗಾಯ ಹಾಗೂ ಬಲಕಾಲಿನ ಪಾದದ ಬಳಿ ಗಂಟಿಗೆ ಮೂಳೆ ಮುರಿತ ಒಳ ನೋವು ಉಂಟಾಗಿದ್ದು , ಸಹಸವಾರರಾದ ನಿತಿನ್ ರವರಿಗೆ  ಸಣ್ಣ ಪುಟ್ಟ ಗಾಯವಾಗಿದ್ದು , ಪಿರ್ಯಾದಿದಾರರು  ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಯಲ್ಲಿ  ಒಳ ರೋಗಿಯಾಗಿ ದಾಖಲಾಗಿದ್ದು , ಹಾಗೂ ಸಹಸವಾರರು ಹೊರ  ರೋಗಿಯಾಗಿ  ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 80/2021  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಬೈಂದೂರು: ಬೈಂದೂರು ಪಟ್ಟಣ ಪಂಚಾಯತ್ ಆಡಳಿತಕ್ಕೆ ಒಳಪಟ್ಟ ಪಡುವರಿ ಗ್ರಾಮದ ಮಾಸ್ತಿಕಟ್ಟೆ ಬಳಿ 2016-17 ನೇ ಸಾಲಿನ STP & TSP ಯೋಜನೆಯಡಿಯಲ್ಲಿ ಅನುಷ್ಠಾನ ಮಾಡಲಾದ ಶುದ್ದ ಕುಡಿಯುವ ನೀರಿನ ಘಟಕಕ್ಕೆ ದಿನಾಂಕ 21/06/2021 ರಂದು ಪಂಪ್ ಚಾಲಕರು ಭೇಟಿ ನೀಡಿದಾಗ ಯಥಾಸ್ಥಿತಿಯಲ್ಲಿದ್ದು ದಿನಾಂಕ 01/07/2021 ರಂದು ಪರಿಶೀಲಿಸಿದಾಗ ಯಾರೋ ಬೀಗ ಮುರಿದು ಬಾಗಿಲು ಒಡೆದು 40.000/- ರೂಪಾಯಿ ಮೌಲ್ಯದ  Caim box (Senson, UV,Circuit), Battery, Dosage Chemical Drum,  Aluminium Double Door With Glass ಮಿಷನರಿಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನವೀನ್ ಕುಮಾರ್ ಸಿ ಎಸ್, ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯತ್ ಬೈಂದೂರು ಇವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 111/2021 ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣಗಳು

 • ಕೋಟ: ದಿನಾಂಕ 30/06/2021 ರಂದು ಪಿರ್ಯಾದಿದಾರರಾದ ಶಶಿಕಲಾ (23), ತಂದೆ: ಶೇಖರ, ವಾಸ: ಕೆದ್ಲಹಕ್ಲು ಸೈಬ್ರಕಟ್ಟೆ ಅಂಚೆ  ಶಿರಿಯಾರ ಗ್ರಾಮ ಬ್ರಹ್ಮಾವರ ತಾಲೂಕು ಇವರು ತನ್ನ ಮನೆಯಲ್ಲಿರುವಾಗ 15:30 ಗಂಟೆಗೆ ಪಿರ್ಯಾದಿದಾರರ ನೆರೆಮನೆಯ ನಾರಾಯಣ ಎಂಬುವವರು ರಸ್ತೆಯಲ್ಲಿ ಹೋಗುತ್ತಿದ್ದ ಹಾವೊಂದನ್ನು ಕೋಲಿನಿಂದ ಪಿರ್ಯಾದಿದಾರರ ಮನೆಯ ಕಡೆಗೆ ಓಡಿಸಿದ್ದರಿಂದ ಹಾವು ಪಿರ್ಯಾದಿದಾರರ ಮನೆಯ ಕೊಟ್ಟಿಗೆಯ ಒಳಗೆ ಹೋಗಿದ್ದು ಆಗ ಪಿರ್ಯಾದಿದಾರರು ನಮ್ಮ ಮನೆಯ ಕಡೆಗೆ ಯಾಕೆ ಓಡಿಸಿದಿರಿ ಎಂದು ಕೇಳಿದ್ದಕ್ಕೆ, ನಂದಿನಿ ಎಂಬುವವರು ಬೈದಿದ್ದು, ಆಗ ನಾನೇನು ತಪ್ಪು ಮಾಡಿದೆ ಎಂದು ಪಿರ್ಯಾದಿದಾರರು ಕೇಳಿದಾಗ ಕೃಷ್ಣ ಹಾಗೂ ನಾರಾಯಣ ಎಂಬುವವರು ಪಿರ್ಯಾದಿದಾರರಿಗೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ದೂಡಿದರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 127/2021 ಕಲಂ: 354. 323. 504. 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ಪಿರ್ಯಾದಿದಾರರಾದ ಉಷಾ (55), ತಂದೆ: ವೆಂಕಟೇಶ ಹೆರ್ಳೆ,  ವಾಸ: ಆರಾಧನಾ ನಿಲಯ, ಮೂಡು ಗಿಳಿಯಾರು, ಗಿಳಿಯಾರು ಗ್ರಾಮ ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ ಇವರ ಗಂಡ ಹಾಗೂ ಅವರ ತಮ್ಮಂದಿರಾದ ಮಾದವ ಹೆರ್ಳೆ ಮತ್ತು  ನಾಗರಾಜ ಹೆರ್ಳೆ ರವರ ನಡುವೆ ಜಾಗದ ವಿಚಾರದಲ್ಲಿ ತಕರಾರು ಇದ್ದು ಆಗ್ಗಾಗ್ಗೆ ಗಲಾಟೆ ಮಾಡಿಕೊಳ್ಳುತ್ತಿದ್ದು ಆದರೆ ಪಿರ್ಯಾದಿದಾರರು ಇವರ ಜಾಗದ ತಕರಾರು ವಿಚಾರದಲ್ಲಿ ತಲೆ ಹಾಕುತ್ತಿರಲಿಲ್ಲ.  ಆದರೆ ದಿನಾಂಕ 01/07/2021 ರಂದು ಸಂಜೆ 7:00 ಗಂಟೆಗೆ ಪಿರ್ಯಾದಿದಾರರ ಗಂಡನ ತಮ್ಮ ಮಾದವ ಹೆರ್ಳೆರವರು ಪಿರ್ಯಾದಿರಾರರ ಮನೆಯ ನಾಯಿಗೆ ಕಲ್ಲಲ್ಲಿ ಹೊಡೆಯತ್ತಿರುವಾಗ ಪಿರ್ಯಾದಿರಾರರು ಕೇಳಿದ್ದಕ್ಕೆ ಮಾಧವ ಹೆರ್ಳೆ ಪಿರ್ಯಾದಿದಾರರ  ಮನೆಗಯ  ಅಂಗಳಕ್ಕೆ  ಅಕ್ರಮ  ಪ್ರವೇಶ  ಮಾಡಿ  ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಪಿಯಾದಿರಾರರಿಗೆ ಹಲ್ಲೆ ಮಾಡಿ ಪಿರ್ಯಾದಿದಾರರನ್ನು ಮತ್ತು ಅವರ ಗಂಡ ಹಾಗೂ  ಮಕ್ಕಳನ್ನು  ಕೊಲ್ಲದೆ  ಬಿಡುವುದಿಲ್ಲವೆಂದು  ಹೇಳಿ  ಪಿರ್ಯಾದಿದಾರರನ್ನು ನೆಲಕ್ಕೆ ದೂಡಿ ಕಾಲಿನಿಂದ ತುಳಿದಿದ್ದು, ಆಗ ಮಾದವ ಹೆರ್ಳೆ ರವರ ಹೆಂಡತಿ ಸುಶೀಲ ಕೂಡ  ಪಿರ್ಯಾದಿದಾರರು ಬಿದ್ದ ಸ್ಥಳಕ್ಕೆ ಬಂದು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಕಾಲಿನಿಂದ ತುಳಿದಿರುತ್ತಾರೆ. ಮಾದವ ಹೆರ್ಳೆಯು ಹಲ್ಲೆ ಮಾಡುವಾಗ ಪಿರ್ಯಾದಿದಾರರ ಚಿನ್ನದ  ಸರವನ್ನು  ಹರಿದು ಬಿಸಾಡಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 128/2021 ಕಲಂ: 354(b), 447, 323, 427, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ಪಿರ್ಯಾದಿದಾರರಾದ ಸುಶೀಲ (36), ಗಂಡ : ಮಾದವ ಹೆರ್ಳೆ, ವಾಸ:ಸೂರ್ಯವಿ. ನಿಲಯ , ಮೂಡು ಗಿಳಿಯಾರು, ಗಿಳಿಯಾರು ಗ್ರಾಮ ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ ಇವರ ಗಂಡ ಮಾಧವ ಹೆರ್ಳೆ ಹಾಗೂ ಅವರ ಸಂಬಂಧಿಕರ ನಡುವೆ ಜಾಗದ ವಿಚಾರದಲ್ಲಿ ತಕರಾರು ಇದ್ದು ಆಗ್ಗಾಗ್ಗೆ ಗಲಾಟೆ ಮಾಡಿಕೊಳ್ಳುತ್ತಿದ್ದು ಆದರೆ ಪಿರ್ಯಾದಿದಾರರು ಇವರ ಜಾಗದ ತಕರಾರು ವಿಚಾರದಲ್ಲಿ ತಲೆ ಹಾಕುತ್ತಿರಲಿಲ್ಲ.  ಆದರೆ ದಿನಾಂಕ 01/07/2021 ರಂದು ಸಂಜೆ 7:00 ಗಂಟೆಗೆ ಪಿರ್ಯಾದಿದಾರಿಗೆ ಅಕ್ಷಯ, ಉಷಾ ಮತ್ತು ಅಕ್ಷತ  ಇವರುಗಳು ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ ನಂತರ ಪಿರ್ಯಾದಿದಾರರಿಗೆ ಹಲ್ಲೆ ಮಾಡುವಾಗ ಪಿರ್ಯಾದಿದಾರರ  ಕತ್ತಿನಲ್ಲಿ ಇದ್ದ ಚಿನ್ನದ ಸರವನ್ನು ಹರಿದು ಬಿಸಾಡಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 129/2021 ಕಲಂ: 354(b), 427,504 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 02-07-2021 10:03 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080