ಅಭಿಪ್ರಾಯ / ಸಲಹೆಗಳು

 • ಹಲ್ಲೆ ಪ್ರಕರಣ

  ಕೋಟ: ಫಿರ್ಯಾದಿ ಪ್ರೇಮಾ ಇವರು ದಿನಾಂಕ 30/06/2021 ರಂದು ಮನೆಯಲ್ಲಿರುವಾಗ ಸಮಯ ಸುಮಾರು 15.30 ಗಂಟೆಯ ಸಮಯಕ್ಕೆ ದೇವರ ಹಾವು ಮನೆಯ ಬಳಿ ಬಂದಿದ್ದು, ಅದನ್ನು ಮನೆಯಲ್ಲಿದ್ದ  ಪಿರ್ಯಾದಿದಾರರ ಅತ್ತಿಗೆ ಗಂಡ ನಾರಾಯಣ ಹಾಗೂ ಸೊಸೆ ನಂದಿನಿರವರುಗಳು ಅದನ್ನು ಓಡಿಸಲು ಹೋಗಿದ್ದು, ಆ ಸಮಯ ಪಿರ್ಯಾದಿದಾರರ ಮನೆಯ ಎದುರಿನ ಶಶಿಕಲಾ ಎಂಬವರು ಬಂದು ನಂದಿನಿ ಮತ್ತು ನಾರಾಯಣ ಎಂಬವರಲ್ಲಿ ಹಾವನ್ನು ನಮ್ಮ ಮನೆಯ ಕಡೆಗೆ ಓಡಿಸಬೇಡಿ ಎಂದಿದ್ದು ಅದಕ್ಕೆ ನಾರಾಯಣ ಮತ್ತು ನಂದಿನಿಯವರು ಹಾವನ್ನು ನಿನ್ನ ಮನೆಯ ಹತ್ತಿರ ಓಡಿಸುತ್ತಿಲ್ಲವಾಗಿ ಹೇಳಿದ್ದು  ಆಗ ಶಶಿಕಲಾ ನಾರಾಯಣ ಹಾಗೂ ನಂದಿನಿಯಯವರಿಗೆ  ಬೈದು ಕಲ್ಲುಗಳನ್ನು ಮನೆಯ ಕಡೆಗೆ ಬಿಸಾಡಿದಳು.ಮನೆಯ ಕಿಟಕಿಯ ಗಾಜು ಒಡೆದಿದ್ದು. ಪಿರ್ಯಾದುದಾರರು ಕಲ್ಲನ್ನು  ಬಿಸಾಡಬೇಡ ಎಂದು ಹೇಳಿದ್ದಕ್ಕೆ,ಶಶಿಕಲಾ ಮನೆಯ ಬಳಿ ಬಂದು ಪಿರ್ಯಾದಿದಾರರಿಗೆ ಬೆನ್ನಿಗೆ  ಕೈಯಿಂದ ಹೊಡೆದಿದ್ದು ಅಲ್ಲದೇ ಸೊಸೆ ನಂದಿನಿಗೂ ಹೊಡೆದಿದ್ದು  ಅಷ್ಟರಲ್ಲಿ ಪಿರ್ಯಾದಿದಾರರ ಗಂಡ ಕೃಷ್ಣ ಬಂದು ಗಲಾಟೆಯನ್ನು ಬಿಡಿಸುತ್ತಿರುವಾಗ ಶಶಿಕಲಾ ಕಲ್ಲಿನಿಂದ ಬಲಕಾಲ ಪಾದಕ್ಕೆ ಹೊಡೆದಿರುತ್ತಾಳೆ. ಹಲ್ಲೆಯಿಂದ ಪಿರ್ಯಾದಿದಾರರ  ಬೆನ್ನಿಗೆ ಒಳ ಗಾಯಗಿದ್ದು, ಸೊಸೆ ನಂದಿನಿಗೆ ಎಡ ಕೈ ತೋಳಿಗೆ ಬಲ ಕಾಲು ಮೊಣ ಗಂಟಿಗೆ ರಕ್ತಗಾಯ ವಾಗಿದ್ದು, ಗಂಡ ಕೃಷ್ಣನ ಪಾದದಲ್ಲಿ ಗುದ್ದಿದ ಒಳ ಗಾಯವಾಗಿದ್ದು, ಗಲಾಟೆ ಬಿಡಿಸಿಕೊಂಡ ಬಳಿಕ ನಂದಿನಿ ಹಾಗೂ ಕೃಷ್ಣ ಸಾಯಿಬ್ರಕಟ್ಟೆಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಿರುತ್ತಾರೆ . ಅನಂತರದಲ್ಲಿ ಶಶಿಕಲಾರವರ ತಂದೆ ತಾಯಿ ಲಕ್ಷ್ಮಿ ರವರುಗಳು ಪಿರ್ಯಾದಿದಾರರನ್ನ  ಉದ್ದೇಶಿಸಿ ಬೈದು  ಅವರ ತಂಟೆಗೆ ಬಂದರೆ ಬಿಡುವುದಿಲ್ಲವಾಗಿ ಬೆದರಿಕೆ ಯನ್ನು ಹಾಕಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 130/2021 ಕಲಂ: 447.427.323.324.504.506 r/w 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

 • ಅಜೆಕಾರು: ಪ್ರಕರಣದ ಸಾರಾಂಶವೇನೆಂದರೆ ಪಿರ್ಯಾದಿ ಶಂಕರ ಸೇರ್ವೆಗಾರ್ ಇವರ ಮಗನಾದ ಉದಯ ಸೇರ್ವೆಗಾರ್ (39) ರವರು ಸುಮಾರು 5 ವರ್ಷಗಳಿಂದ ಕಾರ್ಕಳ ತಾಲೂಕು ಕೆರ್ವಾಶೆ ಗ್ರಾಮದ ಕುರೆದ್ದು ಎಂಬಲ್ಲಿ ಪಿರ್ಯಾದಿಯವರ ಮನೆಯ ಪಕ್ಕದಲ್ಲಿ ಬೇರೆ ಮನೆ ಮಾಡಿಕೊಂಡು ತನ್ನ ಹೆಂಡತಿ ಮಗನೊಂದಿಗೆ ವಾಸ ಮಾಡಿಕೊಂಡಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಈತನು ಸುಮಾರು 20 ವರ್ಷಗಳಿಂದ ಸಾರಾಯಿ ಕುಡಿಯುವ ಅಭ್ಯಾಸ ಹೊಂದಿದ್ದು ತನ್ನ ಹೆಂಡತಿ ಮಗನೊಂದಿಗೆ ಹೊಂದಾಣಿಕೆ ಇಲ್ಲದೇ ಹೆಂಡತಿ ತನ್ನ ಗಂಡನ ಮನೆಯಿಂದ ತನ್ನ ಮಗನೊಂದಿಗೆ ತನ್ನ ತವರು ಮನೆಯಾದ ಕಾಸರಗೋಡಿನಲ್ಲಿ ವಾಸವಾಗಿದ್ದರು. ಉದಯ ಸೇರ್ವೆಗಾರ್ ನು ಈ ಹಿಂದೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದು ಈ ಬಗ್ಗೆ ಚಿಕಿತ್ಸೆ ನೀಡಲಾಗಿತ್ತು. ಈತನು ವಿಪರೀತ ಸಾರಾಯಿ ಕುಡಿಯುವ ಚಟ ಹೊಂದಿದ್ದು ಹಾಗೂ ಹೊಟ್ಟೆ ನೋವಿನಿಂದ ಬಲಳುತ್ತಿದ್ದು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ:01/07/2021 ರಂದುಬೆಳಿಗ್ಗೆ 08:00 ಗಂಟೆಗೆ ತನ್ನ ವಾಸದ ಮನೆಯಲ್ಲಿ ಹುಲ್ಲು ಸಾಯಲು ಬಿಡುವ ಔಷಧಿಯನ್ನು ಸೇವಿಸಿ ಬೊಬ್ಬೆ ಹಾಕುತ್ತಿದ್ದವನನ್ನು ಪಿರ್ಯಾದಿಯವರು ಉಪಚರಿಸಿ ಒಂದು ವಾಹನದಲ್ಲಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 01/07/2021 ರಂದು ರಾತ್ರಿ 23:31 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 08/2021 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ವಸಂತ ಕುಮಾರ್ ಪ್ರಾಯ 58 ವರ್ಷ ರವರು ವಿಪರೀತ ಮದ್ಯಪಾನ ಮಾಡುವ ಅಭ್ಯಾಸ ಹೊಂದಿದ್ದು ಇತ್ತೀಚೆಗೆ ಮಾನಸಿಕದಂತೆ ವರ್ತಿಸುತ್ತಿದ್ದು  ದಿನಾಂಕ:30/06/2021 ರಂದು ಸಂಜೆ ಸುಮಾರು 7-00 ಗಂಟೆಯ ಸಮಯಕ್ಕೆ ಮನೆಯಲ್ಲಿ ದೇವರಿಗೆ ದೀಪ ಹಚ್ಚಿ ಮನೆಯಿಂದ ಹೊರಗೆ ಹೋದವರು  ವಾಪಾಸ್ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಾಡಿ  ನೆರೆಕೆರೆ ಸಂಬಂಧಿಕರಲ್ಲಿ ವಿಚಾರಿಸಿದಲ್ಲಿ ಮಾಹಿತಿ ದೊರೆತಿರುವುದಿಲ್ಲ ದಿನಾಂಕ: 02/07/2021 ರಂದು ಅವರ ಮೃತ ದೇಹವು ಪಳ್ಳಿಕೆರೆ ಎಂಬಲ್ಲಿ ತೇಲುತ್ತಿರುವುದಾಗಿ ತಿಳಿಸಿದಂತೆ  ಬಂದು ನೋಡಿದಲ್ಲಿ  ಅವರು ವಿಪರೀತ ಮದ್ಯಸೇವನೆ ಮಾಡಿಕೊಂಡು  ಹಳೆಕೇರಿ ಮಾರ್ಗದಲ್ಲಿ ನಡೆದುಕೊಂಡು ಬರುವಾಗ ಆಯಾ ತಪ್ಪಿ ಪಳ್ಳಿಕೆರೆಯ ನೀರಿಗೆ  ಬಿದ್ದು  ನೀರಿನಲ್ಲಿ  ಮುಳುಗಿ  ದಿನಾಂಕ: 30/06/2021 ರಂದು   ಸಂಜೆ 07  -00ಗಂಟೆಯಿಂದ ದಿನಾಂಕ:02/07/2021 ರ  10:10 ಗಂಟೆಯ  ಮದ್ಯಾವದಿ  ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 16/2021 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ಪಿರ್ಯಾದಿ ಪ್ರಮೀಳಾ ಶೆಟ್ಟಿ ಇವರ ಪತಿ ಸುರೇಶ ಶೆಟ್ಟಿ (43) ಇವರು ಕಾರ್ಕಳ ತಾಲೂಕು ಮಾಳ ಗ್ರಾಮದ   ಮಾಳ ಚೌಕಿ,  ಸಾಯಿ ಸದನ ಮನೆ  ಎಂಬಲ್ಲಿ   ವಾಸ ಮಾಡಿಕೊಂಡಿದ್ದರು.  ಪಿರ್ಯಾದಿದಾರರ ಪತಿ  ಸಕ್ಕರೆ ಖಾಯಿಲೆಯಿಂದ  ಬಳಲುತ್ತಿದ್ದು ಹಾಗೂ ಬೆಂಗಳೂರಿನಲ್ಲಿ ಜೂಸ್ ಅಂಗಡಿ ಇಟ್ಟುಕೊಂಡಿದ್ದು ಈಗ ಲಾಕಡೌನ್ ನಿಂದ ಮನೆಯಲ್ಲಿದ್ದು ತನ್ನ ಮುಂದಿನ ಜೀವನದ ಬಗ್ಗೆ ಚಿಂತಿಸುತ್ತಿದ್ದು ಇದರಿಂದ  ಮಾನಸಿಕ ಖಿನ್ನತೆ ಒಳಗಾಗಿದ್ದು ಇದೇ ಕಾರಣದಿಂದ ಮನನೊಂದು ದಿನಾಂಕ  01/07/2021 ರಂದು ರಾತ್ರಿ 09:00 ಗಂಟೆಯಿಂದ ದಿನಾಂಕ 02/07/2021 ರ ಬೆಳಿಗ್ಗೆ  05:00 ಗಂಟೆಯ ನಡುವೆ ಪಿರ್ಯಾದಿದಾರರ ಮನೆಯಲ್ಲಿ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 19/2021 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

 • ಕುಂದಾಪುರ: ದಿನಾಂಕ 01/07/2021 ರಂದು ರಂದು ಬೆಳಿಗ್ಗೆ  ಸುಮಾರು 11:00  ಗಂಟೆಗೆ, ಕುಂದಾಪುರ  ತಾಲೂಕಿನ ವಡೇರಹೋಬಳಿ  ಗ್ರಾಮದ  ಬಿಸಿ  ರಸ್ತೆಯ,  ಕಾರಂತರ ಮನೆಯ ಬಳಿಯ SH 52 ಡಾಮಾರು ರಸ್ತೆಯಲ್ಲಿ,  ಆಪಾದಿತ ಮನೋಜ್‌  ಎಂಬವರು  KA20-AA-9839 ನೇ ಟಾಟಾ ಏಸ್‌‌  ಗೂಡ್ಸ್ ವಾಹನವನ್ನು ಕುಂದಾಪುರ ಕಡೆಯಿಂದ ಬಸ್ರೂರು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಾಲನೆ  ಮಾಡಿಕೊಂಡು ಬಂದು, ಅದೇ ದಿಕ್ಕಿನಲ್ಲಿ ಪಿರ್ಯಾದಿದಾರರಾದ ಸಂತೋಷ ರವರು KA20-EE-0290ನೇ ಹೀರೋ ಪ್ಯಾಶನ್‌‌ ಪ್ರೋ ಬೈಕಿನಲ್ಲಿ ಅವರ ಹೆಂಡತಿ  ನೇತ್ರಾವತಿ ಹಾಗೂ 3 ವರ್ಷದ ಮಗ ಶುಭನ್‌‌‌  ಸಹ ಸವಾರರಾಗಿ  ಕುಳ್ಳಿರಿಸಿಕೊಂಡು  ಸವಾರಿ ಮಾಡಿಕೊಂಡು ಹೋಗುತ್ತಿದ್ದ  ಸದ್ರಿ ಬೈಕಿಗೆ  ಹಿಂದಿನಿಂದ  ಅಪಘಾತಪಡಿಸಿದ  ಪರಿಣಾಮ,  ಪಿರ್ಯಾದಿದಾರರ  ಬಲಕಾಲಿಗೆ, ಸೊಂಟಕ್ಕೆ, ಹಾಗೂ ಬಲ ಕೈಗೆ ತರಚಿದ ಗಾಯ  ಹಾಗೂ  ಒಳ ನೋವು,  ನೇತ್ರಾವತಿಯವರಿಗೆ  ಬಲ ಕೈಗೆ, ಎಡ& ಬಲಕಾಲಿಗೆ, ಸೊಂಟಕ್ಕೆ  ತರಚಿದ ರಕ್ತಗಾಯ ಮತ್ತು ಒಳನೋವು  ಮತ್ತು   ಶುಭನ್‌‌‌  ನ ಬಲ ಹಣೆ ಹಾಗೂ ಕೆನ್ನೆಗೆ ತರಚಿದ ಗಾಯವಾಗಿ ಕುಂದಾಪುರ  ಚಿನ್ಮಯಿ  ಆಸ್ಪತ್ರೆಯಲ್ಲಿ  ಚಿಕಿತ್ಸೆ  ಪಡೆದಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 59/2021 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 02-07-2021 06:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080