ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕೋಟ: ಪಿರ್ಯಾದಿದಾರರಾದ ಭರತ್ (32), ತಂದೆ: ಗೋಪಾಲ ಗಾಣಿಗ, ವಾಸ: ಕಲ್ಮಾಡಿ ರೋಡ್ ಕೋಟ ತಟ್ಟು  ಗ್ರಾಮ ಬ್ರಹ್ಮಾವರ ತಾಲೂಕು ಇವರು ದಿನಾಂಕ 01/06/2022  ರಂದು ಕೆಲಸದ ನಿಮಿತ್ತ  ಕೋಟ ದಿಂದ ಬ್ರಹ್ಮಾವರದ ಕಡೆಗೆ ಹೋಗುತ್ತಿರುವಾಗ  ಕುಂದಾಪುರದಿಂದ ಉಡುಪಿ ಕಡೆಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ  ಪಾಂಡೇಶ್ವರ ಗ್ರಾಮದ ಛಾಯಾನಂದನ ಕ್ಲಿನಿಕ್ ಎದುರು ಹೋಗುತ್ತಿರುವಾಗ  AP-27-BE-8199  ನೇ  ಕಾರು ಚಾಲಕ ಕೆ. ಕರಿ ವೀರಾಚಾರಿ ತನ್ನ ಕಾರನ್ನು ಅತೀವೇಗ ಹಾಗೂ ಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಭಾಗಕ್ಕೆ ಬಂದು  ರಸ್ತೆಯ ಪೂರ್ವದ ಅಂಚಿನ ಬಳಿಯಲ್ಲಿ  ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯು  ರಸ್ತೆಗೆ ಬಿದ್ದಿದ್ದು  ಅವರ ತಲೆಗ ತೀವೃ ಸ್ವರೂಪದ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಬ್ರಹ್ಮಾವರ ಮಹೇಶ ಆಸ್ಪತ್ರೆಗೆ ದಾಖಲಿಸಲಿಸಿರುವುದಾಗಿದ. ಗಾಯಗೊಂಡವರು ಶಂಕರ ಎಂಬುವುದಾಗಿ ನಂತರ ತಿಳಿದಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 78/2022 ಕಲಂ: 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾಪು: ಪಿರ್ಯಾದಿದಾರರಾದ ಶ್ರೀಮತಿ ಸಾವಿತ್ರಿ (32), ಗಂಡ : ನಾಗಪ್ಪ ಯಲ್ಲಪ್ಪ ಕವಾಸ್ತ, ವಾಸ : ನಾಗೇಶ ರವರ ಬಾಡಿಗೆ ಮನೆ , ಆಶಮ್ ಟ್ರೇಡರ್ಸ್ ಏಣಗುಡ್ಡೆ  ಗ್ರಾಮ ಕಟಪಾಡಿ ಕಾಪು ತಾಲ್ಲೂಕು ಉಡುಪಿ ಜಿಲ್ಲೆ ಇವರ ಗಂಡ ನಾಗಪ್ಪ ಯಲಪ್ಪ ಕವಾಸ್ತ (47) ರವರು ದಿನಾಂಕ 30/05/2022 ರಂದು ಸಂಜೆ 7:50 ಗಂಟೆಗೆ ಮೂಡಬೆಟ್ಟು ಗ್ರಾಮದ ಸಾಕ್ಷಿ ಅಗ್ರೋದ ಸಮೀಪ ರಸ್ತೆಯನ್ನು ದಾಟಲು ಉಡುಪಿ ಮಂಗಳೂರು ರಸ್ತೆಯನ್ನು ದಾಟಿ ಮಧ್ಯದಲ್ಲಿರುವ ಡಿವೈಡರ್‌ನ್ನು ದಾಟಿ  ಮಂಗಳೂರು ಉಡುಪಿ ರಸ್ತೆಯನ್ನು ದಾಟಲು ಎಡಕಾಲನ್ನು ರಸ್ತೆಗೆ ಇಟ್ಟಿರುವ ಸಮಯ  ಕಾಪು ಕಡೆಯಿಂದ ಕಟಪಾಡಿ ಕಡೆಗೆ ಧೀರಜ್ ಪೂಜಾರಿ ತನ್ನKA-20-EA-7327 ನೇ ಸ್ಕೂಟರ್‌‌‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು  ಬಂದು ನಾಗಪ್ಪರವರ ಎಡಕಾಲಿಗೆ ಢಿಕ್ಕಿ ಹೊಡೆದ ಪರಿಣಾಮ ನಾಗಪ್ಪ ರವರು ಡಿವೈಡರ್ ಮೇಲೆ ಬಿದ್ದಿದ್ದು, ಅವರಿಗೆ ಎಡಕಾಲಿನ ಮೂಳೆ ಮುರಿತದ ಒಳನೋವಾಗಿದ್ದು, ಸ್ಥಳೀಯರ ಸಹಾಯದಿಂದ ಜೊತೆಗಿದ್ದ ಪಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ಉಡುಪಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ಅಲ್ಲಿನ  ವೈದ್ಯರು ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುತ್ತಾರೆ.  ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 53/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೊಲ್ಲೂರು: ಪಿರ್ಯಾದಿದಾರರಾದ ಪ್ರವೀಣ ಪುರುಷೋತ್ತಮ್‌(24), ತಂದೆ: ಪುರುಷೋತ್ತಮ್‌, ವಾಸ: ಮನೆ ನಂಬ್ರ: 1-318 ಎ  ಮಾನಿಕಾಟು ಕುಡಿಯಲ್‌ ಉದಯ ನಗರ ಮುದೂರು ಗ್ರಾಮ ಬೈಂದೂರು ತಾಲೂಕು ಇವರು  ದಿನಾಂಕ 31/05/2022 ರಂದು ರಾತ್ರಿ 9:45 ಗಂಟೆಗೆ ಕುಂದಾಪುರದಲ್ಲಿ ಇಲೆಕ್ಟ್ರಿಶಿಯನ್‌ ಮುಗಿಸಿ ರೋಬಿನ್‌ ವರ್ಗೀಸ್‌ರವರ KA-20-EW-9198 ನೇ ಮೋಟಾರ್ ಸೈಕಲ್‌ನಲ್ಲಿ ಹಿಂಬದಿ ಸಹ ಸವಾರನಾಗಿ ಕುಳಿತು ಕುಂದಾಪುರ ಕಡೆಯಿಂದ ಮುದೂರಿಗೆ ಹೋಗುತ್ತಿರುವಾಗ ರೋಬಿನ್‌ ವರ್ಗೀಸ್‌ ಮೋಟಾರು ಸೈಕಲ್‌ನ್ನು  ಅತೀ ವೇಗವಾಗಿ  ಅಜಾಗರೂಕತೆಯಿಂದ ಚಲಾಯಿಸಿ  ಕುಂದಾಪುರ ತಾಲೂಕು ಇಡೂರು- ಕುಂಜ್ಞಾಡಿ ಗ್ರಾಮದ ರಾಜ್ಯ ಹೆದ್ದಾರಿ ಜನ್ನಾಲ್‌ ಎಂಬಲ್ಲಿ ತಲುಪಿದಾಗ  ರಸ್ತೆಯಲ್ಲಿ ಕಾಡು ಹಂದಿ ಅಡ್ಡ ಓಡಿ ಬಂದಿದ್ದು ನೋಡಿ ಗಲಿಬಿಲಿಗೊಂಡು ಮೋಟಾರು ಸೈಕಲ್‌ನ ವೇಗವನ್ನು ನಿಯಂತ್ರಿಸಲಾಗದೇ ಕಾಡು ಹಂದಿಗೆ ಡಿಕ್ಕಿ ಹೊಡೆದು  ಮೋಟಾರು ಸೈಕಲ್‌ ಸಮೇತ ಬಿದ್ದು ಆರೋಪಿಗೆ ಹಂದಿ ಹಲ್ಲೆ ಮಾಡಿದ್ದು ಅಪಘಾತದ  ಪರಿಣಾಮ ಪಿರ್ಯಾದಿದಾರರಿಗೆ ತಲೆಗೆ  ರಕ್ತಗಾಯ,  ಮತ್ತು ಬಲ ಕೈ ಗೆ  ತರಚಿದ  ರಕ್ತಗಾಯ  ಹಾಗೂ ಎಡ ಭುಜ  ಎಡಕಾಲು ಹಿಮ್ಮಡಿಗೆ ಮೂಳೆ ಮುರಿತದ ನೋವು ಉಂಟಾಗಿರುತ್ತದೆ.  ಹಾಗೂ ಆರೋಪಿಗೆ  ಎಡ ಭುಜ ಮತ್ತು ಎಡ ಕೈಯಲ್ಲಿ ರಕ್ತಗಾಯ ಹಾಗೂ ಎದೆಗೆ ಗುದ್ದಿದ ಒಳನೋವು  ಉಂಟಾಗಿರುತ್ತದೆ.  ಪಿರ್ಯಾದಿದಾರರನ್ನು  ಮತ್ತು ಆರೋಪಿ ರೋಬಿನ್‌ ವರ್ಗಿಸ್‌ರವರು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 30/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ದಿನಾಂಕ 01/06/2022 ರಂದು ಮಧ್ಯಾಹ್ನ 12:45 ಗಂಟೆಗೆ ಕಾರ್ಕಳ ತಾಲೂಕು, ಬೋಳ ಗ್ರಾಮದ ನೆಲ್ಲಿಗುರಿ ಎಂಬಲ್ಲಿ ಪಿರ್ಯಾದಿದಾರರಾದ ಉಮೇಶ್ ಮೂಲ್ಯ (49), ತಂದೆ: ಕರಿಯ ಮೂಲ್ಯ,  ವಾಸ: ಕೆಂಪು ಜಾರಾ, ಬೋಳ ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರು ತನ್ನ KA-20-C-1574 ನೇ ನಂಬ್ರದ ರಿಕ್ಷಾವನ್ನು ಬೋಳ ಕಡೆಯಿಂದ ಮಂಜರಪಲ್ಕೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಮಂಜರಪಲ್ಕೆ ಕಡೆಯಿಂದ ಬೋಳ ಕಡೆಗೆ KA-19-EB-9122 ನೇ ನಂಬ್ರದ ಬೈಕ್ ಸವಾರ ಪ್ರಸನ್ನ ಶೆಟ್ಟಿ ತನ್ನ ಬೈಕ್ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಭಾಗಕ್ಕೆ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ರಿಕ್ಷಾದ ಬಲಭಾಗಕ್ಕೆ ಢಿಕ್ಕಿ ಹೊಡೆದು ಅಟೋ ರಿಕ್ಷಾ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದು, ಬೈಕ್ ಸವಾರ ಪ್ರಸನ್ನ ಶೆಟ್ಟಿ ಹಾಗೂ ಸಹಸವಾರ ಸುಧಾಕರ ಶೆಟ್ಟಿ ಯವರು ಬೈಕ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಬೈಕ್ ಸವಾರನ ಬಲಕಾಲಿಗೆ ಸಣ್ಣಪುಟ್ಟ ಗಾಯವಾಗಿದ್ದು, ಸಹಸವಾರನ  ಬಲಕಾಲಿಗೆ ತೀವ್ರ ಸ್ವರೂಪದ  ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 74/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಹಿರಿಯಡ್ಕ: ಪಿರ್ಯಾದಿದಾರರಾದ ಸುಮತಿ (50) ಇವರು ಕಾರ್ಕಳ ತಾಲೂಕು ಆಹಾರ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು ದಿನಾಂಕ 01/06/2022 ರಂದು ಕಣಜಾರು ಗ್ರಾಮದ ಕಣಜಾರಿನಿಂದ ಕಣಜಾರು ಪೇಟೆ ಕಡೆಗೆ ಟಾಟಾ ಏಸ್ ಟೆಂಪೋದಲ್ಲಿ ಸರಕಾರದ ಉಚಿತ ಅನ್ನ ಬಾಗ್ಯ ಯೋಜನೆಗೆ ಸಂಬಂದಿಸಿದ ಅಕ್ಕಿಯನ್ನು ಯಾವುದೇ  ಪರವಾನಿಗೆ ಇಲ್ಲದೇ ಸಾಗಾಟ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಈ ಬಗ್ಗೆ  ಸ್ಥಳಕ್ಕೆ ದಾಳಿ ನಡೆಸಲು ಕಣಜಾರು  ಗ್ರಾಮದ ಗ್ರಾಮ ಲೆಕ್ಕಿಗ ಸುಚಿತ್ರ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಅಂಕಿತಾ ನಾಯಕ್ ರವರನ್ನು ಜೊತೆಯಲ್ಲಿ ಕರೆದುಕೊಂಡು ಹಿರಿಯಡಕ ಪೊಲೀಸ್ ಠಾಣೆಯ ಸಿಬ್ನಂದಿಯವರೊಂದಿಗೆ ಹೊರಟು  ಕಣಜಾರು ಗ್ರಾಮದ ರಾಜೀವ ನಗರ ಎಂಬಲ್ಲಿ ಎಲಿಯನ್ ರೊಬೆಲ್ಲೋ ರವರ ಮನೆಯ ಬಳಿ ಎದುರಿನಿಂದ ಒಂದು ಟಾಟಾ ಏಸ್ ವಾಹನ ಬರುತ್ತಿದ್ದನ್ನು  ಪೊಲೀಸರ ಸಹಾಯದಿಂದ 03:00  ಗಂಟೆಗೆ ನಿಲ್ಲಿಸಿ  ಪರೀಶಿಲಿಸಿದಾಗ ಅದರ ನಂಬ್ರ KA-20-B-6585 ಆಗಿದ್ದು ಅದರ ಹಿಂಬಾಗ  ಪರೀಶಿಲಿಸಿದಾಗ ಬಿಳಿ ಪಾಲಿಥಿನ್ ಚೀಲ ಹಾಗೂ ಗೋಣಿ ಚೀಲಗಳಲ್ಲಿ ಅಕ್ಕಿಯನ್ನು ತುಂಬಿಸಿರುವುದು ಕಂಡು ಬಂದಿದ್ದು, ವಾಹನದ ಚಾಲಕ ಮೊಹಮ್ಮದ್ ಅಬ್ದುಲ್ ರಹಿಮಾನ್ ನಲ್ಲಿ ಅಕ್ಕಿ ಸಾಗಾಟ ಮಾಡುವ ಪರವಾನಿಗೆ ಬಗ್ಗೆ ವಿಚಾರಿಸಿದಾಗ ಪರವಾನಿಗೆ ಇಲ್ಲವಾಗಿ ತಿಳಿಸಿದ್ದು, ಬಳಿಕ  ಟೆಂಪೋದಲ್ಲಿದ್ದ ಅಕ್ಕಿ ಚೀಲಗಳನ್ನು ಪರಿಶೀಲಿಸಲಾಗಿ 07 ಗೋಣಿ ಚೀಲಗಳಲ್ಲಿ ಹಾಗೂ 34 ಪ್ಲಾಸ್ಟಿಕ್  ಚೀಲಗಳಲ್ಲಿ ಒಟ್ಟು1184.100 ಕೆಜಿ. ಕುಚ್ಚಿಗೆ ಅಕ್ಕಿ 260.600 ಕೆ ಜಿ ಬೆಳ್ತಿಗೆ ಅಕ್ಕಿ, ಒಟ್ಟು 41 ಚೀಲಗಳಲ್ಲಿ  1444.700 ಕೆಜಿ ತೂಕದ  ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿ ಇರುತ್ತದೆ.  ಅಕ್ಕಿಯ ಒಟ್ಟು ಮೌಲ್ಯ ರೂಪಾಯಿ 31,000/- ರೂಪಾಯಿ ಆಗಿರುತ್ತದೆ. ವಾಹನದಲ್ಲಿದ ಒಟ್ಟು 41 ಚೀಲ ಅಕ್ಕಿ, ಟಾಟಾ ಏಸ್ ವಾಹನ , ಬ್ಯಾಟರಿ ಚಾಲಿತ ಮಾಪನ ಹಾಗೂ ವಾಹನದಲ್ಲಿದ್ದ  ಖಾಲಿ 6 ಗೋಣಿ ಚೀಲಗಳನ್ನು  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಆಪಾದಿತ ಅಬ್ದುಲ್ ರಹಿಮಾನ್ ಸರಕಾರದಿಂದ ಉಚಿತವಾಗಿ ಪಡಿತರ ಚೀಟಿದಾರರಿಗೆ ವಿತರಿಸಿದ ಅಕ್ಕಿಯನ್ನು ಯಾರಿಂದಲೋ ಖರೀದಿಸಿ ಹೆಚ್ಚಿನ ಬೆಲೆಗೆ ಅಂಗಡಿಗಳಿಗೆ ಮಾರಾಟ ಮಾಡುವ ಉದ್ದೇಶದಿಂದ 1444.700 ಕೆಜಿಯಷ್ಟು ಅಕ್ಕಿಯನ್ನು ಅಕ್ರಮವಾಗಿ ಕಾನೂನು ಬಾಹಿರವಾಗಿ ಸಂಗ್ರಹಿಸಿ ಅದನ್ನು ಯಾವುದೇ ದಾಖಲೆಗಳಿಲ್ಲದೇ ಅಕ್ರಮವಾಗಿ  ಸಾಗಾಟ ಮಾಡುತ್ತಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 30/2022  ಕಲಂ: 3, 7 ಅವಶ್ಯಕ ವಸ್ತುಗಳ ಕಾಯ್ದೆ 1955 ರಂತೆ ಪ್ರಕರಣ ದಾಖಲಾಗಿರುತ್ತದೆ.


ಇತ್ತೀಚಿನ ನವೀಕರಣ​ : 02-06-2022 09:36 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080