ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ಅವಿನಾಶ್, (32)  ತಂದೆ: ಕೆ ನಾರಾಯಣ ಆಚಾರ್ಯ, ವಾಸ: ತ್ರಿಮೂರ್ತಿ ನಿಲಯ, ಜಯಂತಿನಗರ, ಕುಕ್ಕಂದೂರು ಗ್ರಾಮ, ಕಾರ್ಕಳ ಇವರು ಕಾರ್ಕಳದ ಮೆಹರಾಜ್ ಡಿಸ್ಟ್ರಿಬ್ಯೂಟರ್ ಎಂಬ ಸಂಸ್ಥೆಯಲ್ಲಿ ಸೇಲ್ಸ್‌‌ಮೆನ್ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 01/06/2021 ರಂದು KA-20-C-1160 ನೇ ನಂಬ್ರದ  ಗೂಡ್ಸ್ ಟಾಟಾ 407 ಟೆಂಪೋದಲ್ಲಿ  ದಿನಸಿ ಸಾಮಗ್ರಿಗಳನ್ನು ತುಂಬಿಸಿ ಡೆಲಿವರಿ ಬಾಯ್ ಚೇತನ್ ಹಾಗೂ ಚಾಲಕ ವೆಸ್ಲಿ ಅಂಚನ್ ರವರ ಮುಖಾಂತರ ಹೆಜಮಾಡಿಯ ರಮಾ ಏಜೆನ್ಸಿಗೆ ಕೊಟ್ಟು ಬರುವಂತೆ ಕಳುಹಿಸಿದ್ದು, ಅದರಂತೆ ರಾಜ್ಯ ರಸ್ತೆ-01 ರಲ್ಲಿ ಕಾರ್ಕಳದಿಂದ ಪಡುಬಿದ್ರಿ ಕಡೆಗೆ ಬರುತ್ತಾ, ಸದ್ರಿ ಟೆಂಪೋ ಚಾಲಕ ವೆಸ್ಲಿ ಅಂಚನ್ ಎಂಬುವರು ಟೆಂಪೋವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಸಮಯ 10:20 ಗಂಟೆಯ ವೇಳೆಗೆ ಕಾಪು ತಾಲೂಕು ಸಾಂತೂರು ಗ್ರಾಮದ ಸುಬ್ರಹ್ಮಣ್ಯ ದೇವಸ್ಥಾನದ ಸ್ವಾಗತ ಗೋಪುರದ ಎದುರು ತಿರುವು ಹಾಗೂ ಇಳಿಜಾರಾದ ರಸ್ತೆಯಲ್ಲಿ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಟೆಂಪೋ ಜಖಂಗೊಂಡಿದ್ದು, ಅದರ ಚಾಲಕ  ವೆಸ್ಲಿ ಅಂಚನ್ ಹಾಗೂ ಡೆಲಿವರಿ ಬಾಯ್ ಚೇತನ್ ರವರಿಗೆ ಸಾಮಾನ್ಯ ಸ್ವರೂಪದ ಗಾಯಗಳಾಗಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 52/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾಧ ಶ್ರೀದೇವಿ(43) ಗಂಡ:ಜಯಪ್ರಕಾಶ ವಾಸ:SLRM ಘಟಕದ ಮೇಲ್ವಿಚಾರಕಿ, ನೇತಾಜಿನಗ ರವರು ದಿನಾಂಕ 31/05/2021 ರಂದು ಸಂಜೆ 5:30 ಗಂಟೆಗೆ ಘಟಕಕ್ಕೆ ಬೀಗವನ್ನು ಹಾಕಿ ಮನೆಗೆ ಹೋಗಿದ್ದು, ಶ್ರೀದೇವಿ ರವರು ದಿನಾಂಕ 01/06/2021 ರಂದು ಬೆಳಿಗ್ಗೆ 08:00 ಗಂಟೆಗೆ SLRM ಘಟಕಕ್ಕೆ ಬಂದಾಗ, ಮುಖ್ಯ ಬಾಗಿಲು ತೆರೆದ ಸ್ಥಿತಿಯಲ್ಲಿದ್ದು, ಪರಿಶೀಲಿಸಿದಾಗ ಯಾರೋ ಕಳ್ಳರು ಚಿಲಕದ ಕೊಂಡಿಯನ್ನು ಯಾವುದೋ ಆಯುಧದಿಂದ ತುಂಡು ಮಾಡಿ ಒಳ ಪ್ರವೇಶಿಸಿ S.T.P Plant ಹಾಗೂ ಸಿವಿಲ್ ಕೆಲಸಕ್ಕೆ ಸಂಬಂಧಪಟ್ಟ ಗ್ಯಾಸ್ ಸಿಲಿಂಡರ್, ಗ್ಯಾಸ್ ಸ್ಟೌವ್, ಹೊಲಿಗೆ  ಯಂತ್ರ, ತೆಂಗಿನಕಾಯಿ ತುರಿಯುವ ಮಣೆ, ಅಲ್ಯೂಮಿನಿಯಂ ಪಾತ್ರೆಗಳು 10, ಮೆಜರ್ ಮೆಂಟ್ ಟೇಪ್, ಸ್ಪಿರೀಟ್ ಲೆವೆಲ್, ಕಬ್ಬಿಣ ಕಟ್ ಮಾಡುವ ಮಿಷನ್, ಟಬ್ ಗಳು 4 ಇವು ಕಳವಾದ ಸ್ವತ್ತುಗಳಾಗಿದ್ದು, ಕಳವಾದ ಸ್ವತ್ತುಗಳ ಅಂದಾಜು ಮೌಲ್ಯ ಸುಮಾರು 20,000/- ರೂಪಾಯಿ ಆಗಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 75/2021 ಕಲಂ 457,454,380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಬಾವಿಕ ಮರಣ ಪ್ರಕರಣ

  • ಮಲ್ಪೆ: ದಿನಾಂಕ 30/05/2021 ರಂದು ಪಿರ್ಯಾದಿದಾರರಾಧ ವಿಗ್ನೇಶ್ ಗೌಡ ತಂದೆ;ಬೊಮ್ಮು ಗೌಡ  ಉಲಾವರೆ ಉತ್ತರಕನ್ನಡ    ಇವರ ಜೊತೆಯಲ್ಲಿ ಮಲ್ಪೆ ಬಂದರಿನ ಎಸ್ ಓ.ಟಿ  ಮೀನು ಕಟ್ಟಿಂಗ್ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ  ಇವರ ಊರಿನವನಾದ ರಮೇಶ(23) ಎಂಬಾತನು ದಿನಾಂಕ 31/05/2021 ರಂದು  ಬೆಳಿಗ್ಗೆ 10:00 ಗಂಟೆಗೆ ರೂಮಿನಲ್ಲಿರುವಾಗ ವಾಂತಿ ಮಾಡಿಕೊಂಡಿದ್ದವರನ್ನು ವಿಗ್ನೇಶ್ ಗೌಡ ರವರು  ಚಿಕಿತ್ಸೆಯ ಬಗ್ಗೆ ಮಲ್ಪೆ ನರ್ಸಿಂಗ್ ಹೋಂಗೆ ಕರೆತಂದು ಚಿಕಿತ್ಸೆಯನ್ನು ಕೊಡಿಸಿ ರೂಮಿನಲ್ಲಿ ವಿಶ್ರಾಂತಿಯಲ್ಲಿದ್ದರು ರಾತ್ರಿ ಸುಮಾರು 12:30 ಗಂಟೆಗೆ  ರೂಮಿನಲ್ಲಿ ವಿಗ್ನೇಶ್ ಗೌಡ ರವರು ಹಾಗೂ  ಇತರರು ಜೊತೆಯಲ್ಲಿ ಮಲಗಿರುವಾಗ ಏನೋ ಶಬ್ದ ಕೇಳಿ ಎಚ್ಚರವಾಗಿ ಎದ್ದು  ನೋಡುವಾಗ ರಮೇಶನು  ರೂಮಿನ ಹೊರಗಡೆ ವರಾಂಡದಲ್ಲಿ  ಬಿದ್ದುಕೊಂಡು ಅಸ್ವಸ್ತ್ಯಗೊಂಡವರನ್ನು ಅವನ ಬಾಯಿಯಲ್ಲಿ ಜೊಲ್ಲು ಸೋರುತ್ತಿದ್ದು ಉಪಚರಿಸುವಾಗ ಯಾವುದೇ ಮಾತನಾಡದೇ ಅಸ್ವಸ್ಥಗೊಂಡವರನ್ನು ಕೂಡಲೇ ಚಿಕಿತ್ಸೆಯ ಬಗ್ಗೆ ಉಡುಪಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಪರೀಕ್ಷಿಸಿದ ವೈದ್ಯರು ದಿನಾಂಕ 1/06/2021 ರಂದು 2:20 ಗಂಟೆಗೆ ರಮೇಶನು ಈಗಾಗಲೇ ಮೃತಪಟ್ಟಿರುತ್ತಾರೆ ಎಂದು ತಿಳಿಸಿರುವುದಾಗಿದೆ. ಈ ಬಗ್ಗೆ ಮಲ್ಪೆ  ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 28/2021 ಕಲಂ: 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕಾರ್ಕಳ : ಪಿರ್ಯಾದಿ ಕೆ.ಪಿ ದಿನೇಶ್‌‌ ಪ್ರಭು, (54) ತಂದೆ: ಕೆ.ಪಿ ಅನಂತಪ್ರಭು, ವಾಸ: ಮಾತೃ ಸ್ಮೃತಿ, ಹವಾಲ್ದಾರ ಬೆಟ್ಟು, ಕಸಬ ಗ್ರಾಮ, ಕಾರ್ಕಳ ತಾಲೂಕು ಇವರ ತಂದೆ ಕೆ.ಪಿ ಅನಂತ ಪ್ರಭು ಹಾಗೂ ತಾಯಿ ಶ್ರೀಮತಿ ಕೆ.ಪಿ ಪದ್ಮಾ ಪ್ರಭು ರವರು ಪಿರ್ಯಾದಿದಾರರ ಮನೆ ಬದಿಯಲ್ಲಿ ಪ್ರತ್ಯೇಕ ಮನೆಯಲ್ಲಿ ವಾಸ್ತವ್ಯ ಮಾಡಿಕೊಂಡಿದ್ದು, ಪಿರ್ಯಾದಿದಾರರ ತಾಯಿ ಅನಾರೋಗ್ಯದಿಂದ ಬಳಲುತಿದ್ದರು ಇದೇ ಕಾರಣದಿಂದ ಪಿರ್ಯಾದಿದಾರರ ತಂದೆ ತಾಯಿಯವರು ದಿನಾಂಕ 31/05/2021 ರಂದು ಹವಾಲ್ದಾರಬೆಟ್ಟು ಮನೆಯಲ್ಲಿ ವಿಷ ಪದಾರ್ಥ ಸೇವಿಸಿದ್ದವರನ್ನು ಚಿಕಿತ್ಸೆ ಬಗ್ಗೆ ಮಂಗಳೂರು ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಪಿರ್ಯಾದಿದಾರರ  ತಂದೆ ಕೆ.ಪಿ ಅನಂತ ಪ್ರಭು ರವರು ದಿನಾಂಕ 01/06/2021 ಬೆಳಗ್ಗೆ 11.20 ಗಂಟೆಗೆ ಪಿರ್ಯಾದಿದಾರರ ತಾಯಿ ಕೆ.ಪಿ ಪದ್ಮಾ ಪ್ರಭು (82 ವರ್ಷ) ಮದ್ಯಾಹ್ನ 12.25 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇವರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ. ಈ ಬಗ್ಗೆ ಕಾರ್ಕಳ ನಗರ ಠಾಣಾ ಯುಡಿಆರ್‌ ನಂ 18/2021 ಕಲಂ 174 ಸಿ.ಆರ್.ಪಿ.ಸಿ. ರಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣಗಳು

  • ಅಮಾಸೆಬೈಲು: ದಿನಾಂಕ 01/06/2021 ಪಿರ್ಯಾದಿದಾರರಾದ ಸುಬ್ಬಣ್ಣ ಬಿ ಪೊಲೀಸು ಉಪನಿರೀಕ್ಷಕರು ಅಮಾಸೆಬೈಲು ಪೊಲೀಸ್‌ ಠಾಣೆ ಇವರು ಠಾಣಾ ಸಿಬ್ಬಂದಿಗಳಾದ ಎ ಎಸ್ ಐ ಉಮೇಶ್ ನಾಯ್ಕ, ಧನಂಜಯ ಜೀಪು ಚಾಲಕ ಗೋಪಾಲ ಇವರುಗಳೊಂದಿಗೆ ಇಲಾಖಾ ಜೀಪಿನಲ್ಲಿ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದು ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 24/05/2021  ರಿಂದ 07/06/2021 ರವರೆಗೆ ಕೋವಿಡ್ – 19  ಸಾಂಕ್ರಾಮಿಕ  ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಆದೇಶ ಹೊರಡಿಸಿದ್ದು ಅನಗತ್ಯ ವಾಹನಗಳ ಓಡಾಟವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದು ಮಧ್ಯಾಹ್ನ 13:00 ಗಂಟೆಗೆ ಶೇಡಿಮನೆ ಗ್ರಾಮದ ಅರಸಮ್ಮಕಾನ್ ಜಂಕ್ಷನ್ ಬಳಿ ಮದ್ಯಾಹ್ನ ಸುಮಾರು 13:00 ಗಂಟೆ ಸಮಯಕ್ಕೆ  ವಾಹನ ತಪಾಸಣೆ ಮಾಡಿಕೊಂಡಿರುವಾಗ KA-20-EV-4250 ನೇ Activa Honda Scooty ಯನ್ನು   ಸಕಾರಣವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ಬಂದಿರುವುದು, ಸದ್ರಿ ಮೇಲ್ಕಂಡ ಸ್ಕೂಟಿ ಸವಾರನು ಕೋವಿಡ್–2019 ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ಅನಾವಶ್ಯಕವಾಗಿ ಸಕಾರಣವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ  ಸಂಚರಿಸಿಕೊಂಡು ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯಲ್ಲಿನ ಕೊರೊನಾ ವೈರಸ್ ಕಾಯಿಲೆ ತಡೆಗಟ್ಟುವ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯಕರವಾದಂಥ ರೋಗವು ಹರಡುವ ಸಾಧ್ಯತೆ ಉಂಟು ಮಾಢಿರುವುದರಿಂದ ಸದ್ರಿ ಸ್ಕೂಟಿಯನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 26/2021  ಕಲಂ:269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರಾದ ಮಾನ್ಯ ಜಿ.ಜಗದೀಶ ಐ.ಎ.ಎಸ್ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ, ಉಡುಪಿ ಜಿಲ್ಲೆ, ಉಡುಪಿ ಇವರು ಫೇಸ್‌ಬುಕ್‌ ಖಾತೆಯನ್ನು ಹೊಂದಿರುತ್ತಾರೆ. ದಿನಾಂಕ 31/05/2021 ರಂದು ಯಾರೋ ಅಪರಿಚಿತ ವ್ಯಕ್ತಿಗಳು DC Udupi ಎಂಬ ಇನ್ನೊಂದು ನಕಲಿ ಫೇಸ್ ಬುಕ್ ಖಾತೆಯನ್ನು ಸೃಷ್ಟಿಸಿ, ಈಔರ ಫೋಟೋವನ್ನು Profile ಗೆ ಹಾಕಿ ದುರ್ಬಳಕೆ ಮಾಡಿಕೊಂಡು ಸಾರ್ವಜನಿಕರಿಗೆ ಹಣ ಕೇಳಿ ಸಂದೇಶ ಕಳುಹಿಸಿ ಅವರ ವೈಯಕ್ತಿಕ ಗೌರವಕ್ಕೆ ದಕ್ಕೆ ಉಂಟು ಮಾಡುವ ಉದ್ದೇಶದಿಂದ ಸದ್ರಿ ನಕಲಿ ಫೇಸ್ ಬುಕ್ ಖಾತೆಯನ್ನು ತೆರೆದ ಆರೋಪಿಗಳ ವಿರುದ್ದ ಉಡುಪಿ ಸೆನ್‌ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 34/2021 ಕಲಂ 66(c), 66(d)  ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕಾರ್ಕಳ: ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 07/06/2021 ರವೆರೆಗೆ ಕೋವಿಡ್ ಕರ್ಪ್ಯೂ ವಿಧಿಸಿ ಆದೇಶ ಹೊರಡಿಸಿದ್ದು ಈ ಕರ್ಪ್ಯೂ ಜಾರಿಗೊಳಿಸುವ ಬಗ್ಗೆ ಪೋಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು ಈ ಸಮಯದಲ್ಲಿ ಅನಗತ್ಯವಾಗಿ ಸಾರ್ವಜನಿಕರ ಓಡಾಟಕ್ಕೆ ನಿಷೇಧ ಇದ್ದು ತೇಜಸ್ವಿ ಟಿ ಐ ಪಿಎಸ್ ಐ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಇವರು ದಿನಾಂಕ 01/06/2021  ಸಿಬ್ಬಂದಿಯವರಾದ, ಸತೀಶ್ ಬಟ್ವಾಡಿ, ಇವರೊಂದಿಗೆ ಇಲಾಖಾ ಜೀಪು ನಂಬ್ರ ಕೆ-ಎ20-ಜಿ-162 ನೇದರಲ್ಲಿ ಚಾಲಕನಾಗಿ ಸತೀಶ್ ನಾಯ್ಕ ಇವರೊಂದಿಗೆ 15:00 ಗಂಟೆಯಿಂದ 15:45 ಗಂಟೆಯ ತನಕ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ದೂಪದಕಟ್ಟೆ ಎಂಬಲ್ಲಿ ಅನಗತ್ಯವಾಗಿ ಜನರ ಹಾಗೂ ವಾಹನಗಳ ಓಡಾಟವನ್ನು ತಪಾಸಣೆ ಮಾಡುತ್ತಿರುವಾಗ,  ಅನಗತ್ಯವಾಗಿ ಓಡಾಡಿ ಘನ ಕರ್ನಾಟಕ ಸರಕಾರವು ಕೋವಿದ್ ಮಹಾಮಾರಿ ಕರೋನಾ ಸೋಂಕನ್ನು ತಡೆಯುವ ಬಗ್ಗೆ  ಹೊರಡಿಸಿರುವ ನಿಯಮಗಳ ಬಗ್ಗೆ ಹಾಗೂ ಕೋವಿದ್ ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗವಾಗಿರುವ ಬಗ್ಗೆ ತಿಳುವಳಿಕೆ ಇದ್ದರೂ ಅನಗತ್ಯವಾಗಿ ವಾಹನಗಳಲ್ಲಿ ತಿರುಗಾಡಿ ಕೋವಿಡ್ ನಿಯಮ ಉಲ್ಲಂಘಿಸಿ ಅಪರಾಧ ಎಸಗಿದ್ದು ಕೆಎ-20-ಇಕ್ಯೂ-8279 ನೇ ನಂಬ್ರದ ಬೈಕ್, ಕೆಎ20-ಇಬಿ-5217 ನೇ ನಂಬ್ರದ ಬೈಕ್, ಕೆಎ20-ಕ್ಯೂ-5511 ನೇ ನಂಬ್ರದ ಬೈಕ್ , ಕೆಎ-19-EW-0216 ನೇ ನಂಬ್ರದ ಬೈಕ್, ಕೆಎ19-Z-6692 ನೇ ನಂಬ್ರದ ಕಾರನ್ನು ಮುಂದಿನ ಕ್ರಮದ ಬಗ್ಗೆ ವಶಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 66/2021  ಕಲಂ:269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಗಂಗೊಳ್ಳಿ: ದಿನಾಂಕ 01/06/2021 ರಂದು ಠಾಣಾ ಪ್ರೊಬೇಷನರಿ ಪಿ.ಎಸ್.ಐ ವಿನಯ ಕೊರ್ಲಹಳ್ಳಿ ಯವರು ನಾಗರಾಜ ಕುಲಾಲ್, ಚಂದ್ರಶೇಖರ ರವರೊಂದಿಗೆ 16:00 ಗಂಟೆಗೆ ಗಂಗೊಳ್ಳಿ ಗ್ರಾಮದ ಮೇಲ್ಗಂಗೊಳ್ಳಿ ಚೆಕ್ಪೋಸ್ಟ್ ನಲ್ಲಿ ಸಮವಸ್ತ್ರದಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿರುವಾಗ ಗಂಗೊಳ್ಳಿ ಮುಖ್ಯ ರಸ್ತೆಯಲ್ಲಿ KA-20-X-6232 AVENGER ಮೋಟಾರ್ ಸೈಕಲನ್ನು ಅದರ ಸವಾರ ವಸಾಮ ಹಾಗೂ KA-20-EN-4101 FTR APACHE ಮೋಟಾರ್ ಸೈಕಲನ್ನು ಅದರ ಸವಾರ ಪ್ರವೀಣ ಎಂಬುವವರು ಸಕಾರಣವಿಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸುವ ಮೂಲಕ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತವು ಕೋವಿಡ್-19 ತಡೆಗಟ್ಟಲು ಹೊರಡಿಸಿದ ಲಾಕ್ಡೌನ್ ಆದೇಶ/ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದು, ಮಾನವನ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್-19 ಸೋಂಕು ಹರಡುವ ಸಂಭವ ಇದೆ ಎಂದು ತಿಳಿದೂ ನಿರ್ಲಕ್ಷತನ ತೋರಿದ್ದರಿಂದ ಪ್ರೊಬೇಷನರಿ ಪಿ.ಎಸ್.ಐ ವಿನಯ ಕೊರ್ಲಹಳ್ಳಿ ಯವರು ಆಪಾದಿತರ ವಾಹನಗಳನ್ನು ವಶಕ್ಕೆ ವಶಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 49/2021  ಕಲಂ:269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಪಿರ್ಯಾದಿದಾರರಾದ ದೇವಕಿ, (48) ಗಂಡ: ಚಂದ್ರಶೇಖರ, ವಾಸ: ಹೆದ್ದಾರಿಮನೆ, ಪಡುಕಾಡೂರು, ಕಾಡೂರು ಗ್ರಾಮ, ಬ್ರಹ್ಮಾವರ ತಾಲೂಕು ಇವರು ತನ್ನ ತಾಯಿಯ ಅಣ್ಣನ ಮಗನಾದ  ಆರೋಪಿ ಚಂದ್ರಶೇಖರರವನ್ನು ಮನೆಯವರ ಒಪ್ಪಿಗೆ ಇಲ್ಲದೇ ಪ್ರೀತಿಸಿ  1992ನೇ ಇಸವಿ ಮಾರ್ಚ್ ತಿಂಗಳಲ್ಲಿ  ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ತಾಳಿಕಟ್ಟಿ ಹಾರ ಬದಲಾಯಿಸಿ ಮದುವೆಯಾಗಿರುತ್ತಾರೆ.  ಮದುವೆಯಾದ ನಂತರ ಪಿರ್ಯಾದಿದಾರರು ಗಂಡನ ಮನೆಯಾದ ಕಳಸದಲ್ಲಿ ವಾಸವಾಗಿದ್ದು, ಪ್ರಸ್ತುತ ಬ್ರಹ್ಮಾವರ ತಾಲೂಕು ಕಾಡೂರು ಗ್ರಾಮದ, ಪಡುಕಾಡೂರು, ಹೆದ್ದಾರಿಮನೆ ಎಂಬಲ್ಲಿರುವ  ಪಿರ್ಯಾದಿದಾರರ ತಾಯಿ ಮನೆಯಲ್ಲಿ  ತನ್ನ ಕೊನೆಯ ಮಗಳು ನಮಿತಾ ಹಾಗೂ ಆರೋಪಿಯಾದ ಅವರ ಗಂಡ ಚಂದ್ರಶೇಖರ ಎಂಬವರೊಂದಿಗೆ ವಾಸವಾಗಿರುವುದಾಗಿದೆ. ಅವರ ಉಳಿದ ಎರಡು ಹೆಣ್ಣು ಮಕ್ಕಳಿಗೆ ಮದುವೆ ಆಗಿರುತ್ತದೆ. ಆರೋಪಿ ಚಂದ್ರಶೇಖರ ರವರು ಕೂಲಿ ಕೆಲಸ ಮಾಡಿಕೊಂಡಿದ್ದು, ವಿಪರೀತ ಮಧ್ಯಪಾನ ಮಾಡುವ ಚಟ ಹೊಂದಿರುತ್ತಾರೆ. ಮದುವೆಯಾದ ಪ್ರಾರಂಭದಲ್ಲಿ ಒಳ್ಳೇಯ ರೀತಿಯಲ್ಲಿ ಸಂಸಾರ ಮಾಡುತ್ತಿದ್ದು , ಬರ ಬರುತ್ತಾ ಮದ್ಯಪಾನ ಮಾಡಿಕೊಂಡು ಬಂದು ಕ್ಷುಲಕ ಕಾರಣಕ್ಕೆ ದೇವಕಿ, ಇವರೊಂದಿಗೆ ಜಗಳವಾಡಿ ಬೈದು ಹಲ್ಲೆ ಮಾಡುತ್ತಿದ್ದರು, ಆರೋಪಿಯು ಸರಿಯಾಗಿ ಕೆಲಸಕ್ಕೆ ಹೊಗದೇ ಮದ್ಯಪಾನ ಮಾಡಿಕೊಂಡು ಮನೆಯಲ್ಲಿಯೇ ಇದ್ದು,  ಮದ್ಯಪಾನ ಮಾಡಲು ದೇವಕಿ, ರವರು ಹಣ ಕೊಡದಿದ್ದಾಗ ಅವರ ಮೇಲೆ ಹಲ್ಲೆ ಮಾಡುತ್ತಿದ್ದರು. ಹೀಗೆ ಅನೇಕ ವರ್ಷಗಳಿಂದ ಆರೋಪಿಯು ದೇವಕಿ, ರವರಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಾ ಬಂದಿರುತ್ತಾರೆ. ದಿನಾಂಕ 29/05/2021 ರಂದು ರಾತ್ರಿ  ಸುಮಾರು 10:00 ಗಂಟೆಯ ಸಮಯಕ್ಕೆ ದೇವಕಿ, ರವರು ಅವರ ಮಗಳು ನಮಿತಾ ಮತ್ತು ನಮಿತಾಳನ್ನು ಮದುವೆಯಾಗುವ ಗಂಡು ಅನಿಲ್ ಎಂಬವರು ಮನೆಯಲ್ಲಿ ಇರುವಾಗ ಆರೋಪಿಯು ಮದ್ಯಪಾನ ಮಾಡಿಕೊಂಡು ಮನೆಗೆ ಬಂದವರೇ, ಅನಿಲ್‌ನನ್ನು ನೋಡಿ ದೇವಕಿ, ಇವರನ್ನು ಉದ್ದೇಶಿಸಿ ನೀನು ಮನೆಯಲ್ಲಿ ಯಾರ್‌ ಯಾರನ್ನ ಕರೆದು ತಂದು ಕೂರಿಸುತ್ತಿಯಾ ಎಂದು ಬೈದಿದ್ದು, ಆಗ ದೇವಕಿ, ರವರು ಅವನು ನಮಿತಾಳನ್ನು ಮದುವೆಯಾಗುವ ಗಂಡು ಎಂದು ಹೇಳಿದ್ದಕ್ಕೆ ಆರೋಪಿಯು ಮನೆಯಲ್ಲಿದ್ದ ಅಡಿಕೆ ದಬ್ಬೆ ಕೋಲನ್ನು ತೆಗೆದು ದೇವಕಿ, ರವರ ತಲೆಗೆ ಹೊಡೆದು, ಕಾಲಿನಿಂದ ತುಳಿದಿರುತ್ತಾರೆ. ನಮಿತಾ ಮತ್ತು ಅನಿಲ್ ಹೊಡೆಯುವುದನ್ನು ತಪ್ಪಿಸಿದ್ದು, ಆಗ ಆರೋಪಿಯು ಈಗ ನೀನು ಬಚಾವ್ ಆಗೀದ್ದಿಯಾ, ಮುಂದಕ್ಕೆ ನೀನ್ನನ್ನು ಮುಗಿಸದೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಮನೆಯಿಂದ ಹೋಗಿರುತ್ತಾರೆ. ಆರೋಪಿ ಮಾಡಿದ ಹಲ್ಲೆಯಿಂದ ದೇವಕಿ, ರವರ ತಲೆಯ ಬಲ ಭಾಗಕ್ಕೆ ರಕ್ತಗಾಯ ಹಾಗೂ ಕಾಲಿನಿಂದ ತುಳಿದು ಬೀಳಿಸಿದ್ದರಿಂದ ಸೊಂಟಕ್ಕೆ ಒಳನೋವು ಆಗಿದ್ದು, ಬ್ರಹ್ಮಾವರ ಮಹೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 106/2021 ಕಲಂ: 504, 323, 324, 506 498A ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 25/05/2021 ರಿಂದ ದಿನಾಂಕ 07/06/2021 ರ ವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು ಈ ಕರ್ಫ್ಯೂ ಜಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು ಈ ಬಗ್ಗೆ ದಿನಾಂಕ 01/06/2021 ರಂದು ಸಂಗೀತಾ ಪಿಎಸ್ಐ ಬೈಂದೂರು ಪೊಲೀಸ್ ಠಾಣೆ, ಇವರು ಸಿಬ್ಬಂದಿಯವರೊಂದಿಗೆ ಬೈಂದೂರು ಠಾಣಾ  ಸರಹದ್ದಿನ ಶಿರೂರು ಗ್ರಾಮದ ಕೆಳಪೇಟೆ ಎಂಬಲ್ಲಿ ವಾಹನ ತಪಾಸಣಾ ಕರ್ತವ್ಯದಲ್ಲಿರುವಾಗ ಸಮಯ ಸುಮಾರು 13:00 ಗಂಟೆಗೆ ಸಕಾರಣವಿಲ್ಲದೆ ಅನಗತ್ಯವಾಗಿ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡಿದ್ದ, 1) ಹೊಂಡಾ ಆಕ್ವೀವ ಮೋಟಾರ್ ಸೈಕಲ್  ನಂಬ್ರ KA 20 X 4415, 2) ಟಿವಿಎಸ್ ಜುಪಿಟರ್  ಮೋಟಾರು ಸೈಕಲ್ ನಂಬ್ರ KA 20 EQ 2323 , 3) ಹೊಂಡಾ ಆಕ್ವೀವ ಮೋಟಾರ್ ಸೈಕಲ್  ನಂಬ್ರ KA 20 EF 8573, 4) ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂಬ್ರ   KA 20 EB 6250, ಸದ್ರಿ ಮೇಲ್ಕಂಡ ದ್ವಿ-ಚಕ್ರ ವಾಹನದ ಸವಾರರು ಕೋವಿಡ್-19 ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವು ಕೊರೋನ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರು ಕೂಡ ಸಾರ್ವಜನಿಕರ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೊಂಕನ್ನು ಹರಡುವ ಸಂಭವ ಇದೆ ಎಂದು ತಿಳಿದು ಕೂಡ ಸಕಾರಣವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ನಿರ್ಲಕ್ಷ್ಯತನದಿಂದ ಸರ್ಕಾರ ಹಾಗೂ ಜಿಲ್ಲಾಡಳಿತ ಮಾರ್ಗಸೂಚಿಗಳಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯಕಾರಿಯಾದಂತಹ ರೋಗವು ಹರಡುವಂತೆ ಮಾಡಿ ನಿರ್ಲಕ್ಷ್ಯತನ ತೋರಿರುವದರಿಂದ ಸದ್ರಿ ವಾಹನಗಳನ್ನು ಸ್ವಾದೀನ ಪಡೆಸಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 88/2021  ಕಲಂ:269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಶಂಕರನಾರಾಯಣ: ದಿನಾಂಕ 01/06/2021 ರಂದು 18:40 ಘಂಟೆಗೆ ಕುಂದಾಪುರ ತಾಲೂಕಿನ ಕೊಡ್ಲಾಡಿ ಗ್ರಾಮದ ಬಾಂಡ್ಯ ಉಬ್ಬು ಎಂಬಲ್ಲಿ ಇರುವ ಸ್ಕಂದ  ಚಿಕನ್ & ಫಿಶ್  ಸೆಂಟರ್‌ ಎಂಬ ಹೆಸರಿನ ಅಂಗಡಿಯನ್ನು ಆರೋಪಿ ಕೋವಿಡ್ -19 ಸೋಂಕು ಪ್ರಕರಣಗಳು ಉಲ್ಬಣ ಗೊಳ್ಳುತ್ತಿರುವ ಕಾರಣದಿಂದ ಕರೋನಾ ಸೊಂಕನ್ನು ತಡೆಗಟ್ಟಲು ಉಡುಪಿ ಜಿಲ್ಲೆಯಾದ್ಯಂತ ಉಡುಪಿ ಜಿಲ್ಲಾಡಳಿತ ನಿಷೇದಾಜ್ಜೆಯನ್ನು ಜಾರಿಗೊಳಿಸಿದ್ದು, ಉಡುಪಿ ಜಿಲ್ಲಾಡಳಿತದ ಹಾಗೂ ಘನ  ಸರಕಾರದ ಆದೇಶವನ್ನು ಉಲ್ಲಂಘಿಸಿ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ, ಸಾಮಾಜಿಕ ಅಂತರ ಪಾಲಿಸದೇ ಆದೇಶವನ್ನು ಉಲ್ಲಂಘಿಸಿ ಅವಧಿ ಮೀರಿ ಅಂಗಡಿ ತೆರೆದುಕೊಂಡು ಅಂಗಡಿಯಲ್ಲಿ ಸುಧಾಕರ ಪೂಜಾರಿ ತಂದೆ ಮಂಜು ಪೂಜಾರಿ ವಾಸ, ಅಡಿಗದ್ದೆ ಮನೆ ಮುಡುಕುಂದ ಬೆಳ್ಳಾಲ ಗ್ರಾಮ  ಕುಂದಾಪುರ  ಇವರು ವ್ಯಾಪಾರ  ವಹಿವಾಟು  ಮಾಡಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 63/2021 ಕಲಂ:269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಕುಂದಾಪುರ: ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 24/05/2021 ರಿಂದ 01/06/2021 ರವರೆಗೆ ಕೋವಿಡ್ ಕರ್ಪ್ಯೂ ವಿಧಿಸಿದ್ದು ಕರ್ಪ್ಯೂ ಜ್ಯಾರಿಗೊಳಿಸುವ ಬಗ್ಗೆ ಆದೇಶ ಹೊರಡಿಸಿದ್ದು  ದಿನಾಂಕ 01/06/2021 ರಂದು ಕುಂದಾಪುರ ಪೊಲೀಸ್ ಠಾಣಾ ಪಿಎಸ್‌ಐ ಸದಾಶಿವ ಆರ್. ಗವರೋಜಿ ರವರು ಠಾಣಾ ವ್ಯಾಪ್ತಿಯಲ್ಲಿ ಸಿಬ್ಬಂದಿಗಳೊಂದಿಗೆ  ಕುಂದಾಪುರ ವಡೇರಹೋಬಳಿ ಗ್ರಾಮದ ಶಾಸ್ತ್ರಿ ಪಾರ್ಕ್ ಸರ್ಕಲ್ ನಲ್ಲಿ KA-20-G-263 ಇಲಾಖಾ ವಾಹನವನ್ನು ನಿಲ್ಲಿಸಿಕೊಂಡು ವಾಹನ ತಪಾಸಣೆ ನಡೆಸುತ್ತಿರುವಾಗ ಸುಮಾರು 16:00 ಗಂಟೆಯಿಂದ 18:00 ಗಂಟೆಯ ಮಧ್ಯಾವಧಿಯಲ್ಲಿ ಸದ್ರಿ ರಸ್ತೆಯ ಮೂಲಕ ಈ ಕೆಳಕಂಡ ವಾಹನಗಳನ್ನು ಅದರ ಚಾಲಕರು ಚಲಾಯಿಸಿಕೊಂಡು ಬರುತ್ತಿದ್ದನ್ನು ಕಂಡು ನಿಲ್ಲಿಸಿ ತಪಾಸಣೆ ಮಾಡಿ ವಾಹನ ಸವಾರರನ್ನು ವಿಚಾರಿಸಲಾಗಿ ಸಕಾರಣವಿಲ್ಲದೇ ತಿರುಗಾಡುತ್ತಿರುವುದು ಕಂಡುಬಂದಿರುತ್ತದೆ. ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಹೊರಡಿಸಿದ ಮಾರ್ಗ ಸೂಚಿಗಳು ಹಾಗೂ ಮಾನ್ಯ ಉಡುಪಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಗಳು ದಿನಾಂಕ 24/05/2021 ರಿಂದ 07/06/2021 ರ ತನಕ ಕೆಲವೊಂದು ಸಾರ್ವಜನಿಕ ಚಟುವಟಿಕೆಗಳನ್ನು ನಿರ್ಬಂಧಿಸಿ ಹೊರಡಿಸಿರುವ  ಆದೇಶದನ್ವಯ  ಈ ಅವಧಿಯಲ್ಲಿ ಸಕಾರಣವಿಲ್ಲದೆ ಅನಗತ್ಯವಾಗಿ ವಾಹನದಲ್ಲಿ ಸಂಚರಿಸುವ ಬಗ್ಗೆ ನಿರ್ಬಂಧದ ಆದೇಶ ಇರುತ್ತದೆ. ತಪಾಸಣಾ ಸಮಯ ಸಕಾರಣವಿಲ್ಲದೆ ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳ ಹಾಗೂ ಅದ ಸವಾರರ ವಿವರ  ಈ ಕೆಳಗಿಂತಿದೆ. 1) KA.20 ES.2808 ದ್ವಿಚಕ್ರ ವಾಹನ ಸವಾರ:  ಶ್ರೀಧರ, 6) KA.20 EV.9965 ದ್ವಿಚಕ್ರ ವಾಹನದ ಸವಾರ ಶರತ್ ತಂದೆ  ಮಹಾಬಲ ವಾಸ: ಶ್ರೀಗುರುಕೃಪ ದೇವರ ಬೈಲು ಕೋಣಿ  ಗ್ರಾಮ  ಕುಂದಾಪುರ ತಾಲೂಕು, ಸದ್ರಿ  ಮೇಲ್ಕಂಡ ವಾಹನ ಸವಾರರು ಕೋವಿಡ್ – 2019  ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು  ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು  ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ಅನಾವಶ್ಯಕವಾಗಿ ಸಕಾರಣವಿಲ್ಲದೆ ಸಾರ್ವಜನಿಕ  ಸ್ಥಳದಲ್ಲಿ  ಸಂಚರಿಸಿಕೊಂಡು ನಿರ್ಲಕ್ಷತನದಿಂದ ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯಕರವಾದಂಥ ರೋಗವು ಹರಡುವಂತೆ ಮಾಡಿ ನಿರ್ಲಕ್ಷತನ ತೋರಿರುವುದರಿಂದ ಸದ್ರಿ ವಾಹನಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 73/2021 ಕಲಂ:269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಬೈಂದೂರು: ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 25/05/2021 ರಿಂದ ದಿನಾಂಕ 07/06/2021 ರ ವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು ಈ ಕರ್ಫ್ಯೂ ಜಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು ಈ ಬಗ್ಗೆ ದಿನಾಂಕ 01/06/2021 ರಂದು ಸಂಗೀತಾ ಪಿಎಸ್ಐ ಬೈಂದೂರು ಪೊಲೀಸ್ ಠಾಣೆ, ಇವರು ಸಿಬ್ಬಂದಿಯವರೊಂದಿಗೆ ಬೈಂದೂರು ಠಾಣಾ  ಸರಹದ್ದಿನ ಶಿರೂರು ಗ್ರಾಮದ ಕೆಳಪೇಟೆ ಎಂಬಲ್ಲಿ ವಾಹನ ತಪಾಸಣಾ ಕರ್ತವ್ಯದಲ್ಲಿರುವಾಗ ಸಮಯ ಸುಮಾರು 13:00 ಗಂಟೆಗೆ ಸಕಾರಣವಿಲ್ಲದೆ ಅನಗತ್ಯವಾಗಿ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡಿದ್ದ, 1)ಹೊಂಡಾ ಆಕ್ವೀವ ಮೋಟಾರ್ ಸೈಕಲ್  ನಂಬ್ರ KA 20 X 4415, 2) ಟಿವಿಎಸ್ ಜುಪಿಟರ್  ಮೋಟಾರು ಸೈಕಲ್ ನಂಬ್ರ KA 20 EQ 2323 , 3) ಹೊಂಡಾ ಆಕ್ವೀವ ಮೋಟಾರ್ ಸೈಕಲ್  ನಂಬ್ರ KA 20 EF 8573, 4) ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂಬ್ರ KA 20 EB 6250, ಸದ್ರಿ ಮೇಲ್ಕಂಡ ದ್ವಿ-ಚಕ್ರ ವಾಹನದ ಸವಾರರು ಕೋವಿಡ್-19 ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವು ಕೊರೋನ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರು ಕೂಡ ಸಾರ್ವಜನಿಕರ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೊಂಕನ್ನು ಹರಡುವ ಸಂಭವ ಇದೆ ಎಂದು ತಿಳಿದು ಕೂಡ ಸಕಾರಣವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ನಿರ್ಲಕ್ಷ್ಯತನದಿಂದ ಸರ್ಕಾರ ಹಾಗೂ ಜಿಲ್ಲಾಡಳಿತ ಮಾರ್ಗಸೂಚಿಗಳಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯಕಾರಿಯಾದಂತಹ ರೋಗವು ಹರಡುವಂತೆ ಮಾಡಿ ನಿರ್ಲಕ್ಷ್ಯತನ ತೋರಿರುವದರಿಂದ ಸದ್ರಿ ವಾಹನಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು  ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 96/2021 ಕಲಂ:269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಮಣಿಪಾಲ: ದಿನಾಂಕ:01/06/2021 ರಂದುರೋನಾ ವೈರಸ್ಕಾಯಿಲೆ ಸೊಂಕುಹರಡುವುದನ್ನು ತಡೆಗಟ್ಟುವನಿಟ್ಟಿನಲ್ಲಿ ಅನಾವಶ್ಯಕವಾಗಿ ಸಂಚರಿಸುವವರ ವಿರುದ್ದ ಕ್ರಮಕೈಗೊಳ್ಳುವ ಬಗ್ಗೆ ಮಣಿಪಾಲ  ಠಾಣಾ ಪಿ.ಎಸ್.ಐ ರಾಜಶೇಖರ ರವರು ಹೆ169(A) ರಸ್ತೆ ಬಳಿಯಲ್ಲಿ ಕರ್ತವ್ಯದಲ್ಲಿದ್ದಾಗ ಬೆಳಿಗ್ಗೆ 09:45 ಗಂಟೆಯಿಂದ 10:00 ಗಂಟೆಯ ಮಧ್ಯಾವಧಿಯಲ್ಲಿ ಆಪಾದಿತರಾದ 1)  ಸುಶಾಂತ್‌, ಪ್ರಾಯ: 20 ವರ್ಷ, ತಂದೆ:ರಮೇಶ್‌, ವಾಸ: ಮಾರಿಕಾಂಬ, ಪಡುಅಲೆವೂರು, ದುರ್ಗಾನಗರ, ಅಲೆವೂರುಗ್ರಾಮ, ಉಡುಪಿ 2) ನಿತಿನ್‌ ಆಚಾರ್ಯ, ಪ್ರಾಯ:33 ವರ್ಷ, ತಂದೆ: ವಿಠ್ಠಲ ಆಚಾರ್ಯ, ವಾಸ:ಮನೆ ನಂ. 4-32, ಯಲ್ಲೂರು ಗ್ರಾಮ, ಪಣಿಯೂರು, ಉಡುಪಿ. ಇವರುಗಳು ಸೈಕಲ್‌ಗಳಲ್ಲಿ ಅನಾವಶ್ಯಕವಾಗಿ ಸಂಚರಿಸುತ್ತಿದ್ದು, ಸದರಿ ಆರೋಪಿತರು ಕೋವಿಡ್‌ ಸೋಂಕು 2ನೇ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಲಾಕ್ಡೌನ್ ಇದ್ದು ಉಡುಪಿಯ ಮಾನ್ಯ ಜಿಲ್ಲಾಧಿಕಾರಿಗಳು ಅನಗತ್ಯ ಸಂಚಾರ ನಿರ್ಭಂಧಿಸಿ ಆದೇಶವನ್ನು ಹೊರಡಿಸಿರುವ ವಿಚಾರವನ್ನು ತಿಳಿದಿದ್ದರೂ ಕೂಡಾಯಾವುದೇ ಸಕಾರಣವಿಲ್ಲದೇ ಪ್ರಾಣಕ್ಕೆ ಅಪಾಯಕಾರಿ ಯಾದರೋಗದ ಸೊಂಕನ್ನು ಹರಡುವ ಸಂಭವವಿರುವ ಬಗ್ಗೆನಿರ್ಲಕ್ಷ್ಯ ವಹಿಸಿ ತಿರುಗಾಡುತ್ತಿದ್ದರಿಂದ ಸದರಿ ಆರೋಪಿಗಳನ್ನು ಹಾಗೂ ಆರೋಪಿಗಳು ಸವಾರಿ ಮಾಡುತ್ತಿದ್ದ ಒಟ್ಟು2 ಮೋಟಾರ್‌ ಸೈಕಲ್‌‌ಗಳನ್ನುವಶಕ್ಕೆಪಡೆಯಲಾಗಿರುತ್ತದೆ. ಈ ಬಗ್ಗೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 74/2021 ಕಲಂ 269 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕೋಟ: ದಿನಾಂಕ 01/06/2021 ರಂದು ಪಿರ್ಯಾದಿ ಸಂತೋಷ ಬಿ.ಪಿ ಪೊಲೀಸ್ ಉಪನಿರೀಕ್ಷಕರು (ಕಾ & ಸು) ಕೋಟ ಪೊಲೀಸ್‌  ಠಾಣೆ, ಇವರು ಸಿಬ್ಬಂದಿಗಳೊಂದಿಗೆ  ಠಾಣಾ  ವ್ಯಾಪ್ತಿಯಲ್ಲಿ  ರೌಂಡ್ಸ್‌  ಕರ್ತವ್ಯದಲ್ಲಿರುವಾಗ 17:30 ಗಂಟೆಗೆ  ಬೀಟ್‌  ಸಿಬ್ಬಂದಿ  ನೀಡಿದ ಮಾಹಿತಿಯಂತೆ ಉಡುಪಿ ಜಿಲ್ಲೆ ಬ್ರಹ್ಮಾವರ  ತಾಲೂಕು ಕೋಟತಟ್ಟು ಗ್ರಾಮದ  ಮದ್ರಾಸ ರಸ್ತೆಯಲ್ಲಿರುವ ಕೋಸ್ಟಲ್ ಫಿಶ ಕಟ್ಟಿಂಗ್ ಬಳಿ ಸಮುದ್ರ ಕಿನಾರೆಯ ಸಾರ್ವಜನಿಕ ಸ್ಥಳದಲ್ಲಿ KA20.ER.4485 ನೇ ನಂಬ್ರದ ಮೋಟಾರು ಸೈಕಲ್ ನಲ್ಲಿ ರತ್ನಾಕರ ಪ್ರಾಯ:46 ವರ್ಷ, ತಂದೆ: ಮಹಾಬಲ ಮೊಗವೀರ ವಾಸ: ಪಡುಕೆರೆ, ಕೋಟತಟ್ಟು ಗ್ರಾಮ, ಬ್ರಹ್ಮಾವರ ತಾಲೂಕು, ಇವರು   ಕೋಟದ ಅಮೃತ್ ಬಾರ್ ನಿಂದ  ಟೆಟ್ರಾ ಪ್ಯಾಕ್‌ಗಳನ್ನು ಪಡೆದುಕೊಂಡು ಕೋವಿಡ್‌-19 ವೈರಾಣು ಪ್ರಯುಕ್ತ ಜಿಲ್ಲಾಡಳಿತದ ಆದೇಶದಂತೆ ಕರ್ಪ್ಯೂ ನಿಷೇಧಾಜ್ಞೆ ಸಂದರ್ಭದಲ್ಲಿ ಮೋಟಾರು ಸೈಕಲ್ KA20.ER.4485  ನೇದರಲ್ಲಿ ಯಾವುದೇ ಪರವಾನಿಗೆ  ಇಲ್ಲದೆ  ಸದ್ರಿ ಮದ್ಯದ  ಟೆಟ್ರಾ  ಪ್ಯಾಕ್‌ಗಳನ್ನು  ಲಾಭದ  ಉದ್ದೇಶದಿಂದ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಾರಾಟ  ಮಾಡುತ್ತಿದ್ದನು. ಅಲ್ಲದೇ ಸಾರ್ವಜನಿಕರು ಆತನಿಂದ ಟೆಟ್ರಾ ಪ್ಯಾಕ್‌ಗಳನ್ನು ಪಡೆದುಕೊಂಡು ಟೆಟ್ರಾ ಪ್ಯಾಕ್‌ಗಳನ್ನು ಅಲ್ಲಿಯೇ ಕಟ್‌  ಮಾಡಿ ಮದ್ಯವನ್ನು  ಪ್ಲಾಸ್ಟಿಕ್‌ ಲೋಟಗಳಿಗೆ ಹಾಕಿ ಕುಡಿದು ಖಾಲಿ ಟೆಟ್ರಾ ಪ್ಯಾಕ್‌ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಬಿಸಾಡುತ್ತಿದ್ದು ,ಸ್ಥಳದಲ್ಲಿದ್ದ ಖಾಲಿ ಟೆಟ್ರಾ ಪ್ಯಾಕ್ -3 ,ಖಾಲಿ ಪ್ಲಾಸ್ಟಿಕ್  ಲೋಟ-4 . ನಗದು 1900/ ಹಾಗೂ  ಲಾಭದ  ಉದ್ದೇಶದಿಂದ ಸಾರ್ವಜನಿಕರಿಗೆ ಮಾರಾಟ  ಮಾಡುತ್ತಿದ್ದ ಆರೋಪಿಯನ್ನು 18-30 ಗಂಟೆಗೆ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡು  ಆತನಲ್ಲಿದ್ದ  Original Choice 180 ml 05 Tetra Pack ಗಳಿದ್ದು ಸದ್ರಿ ಮದ್ಯದ ಒಟ್ಟು ಪ್ರಮಾಣ 900/  ml ಆಗಿದ್ದು, ಮೌಲ್ಯ  350-/- ರೂಪಾಯಿ ಆಗಿದ್ದು, ಆರೋಪಿ ಮತ್ತು  ಸ್ವತ್ತುಗಳನ್ನು  ಹಾಗೂ  ಮದ್ಯ  ಮಾರಾಟಕ್ಕೆ  ಬಳಸಿ  ಮೋಟಾರು ಸೈಕಲ್ ನ್ನು  ಪಂಚರ  ಸಮಕ್ಷಮ ಮಹಜರು ಮುಖೇನ  ಸ್ವಾಧೀನ ಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ 109/2021 ಕಲಂ: 269 IPC 15 (A), 32(3) K.E.Act  ಜೊತೆಗೆ 269 ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.
  • ಕುಂದಾಪುರ: ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 24-05-2021 ರಿಂದ 07-06-2021 ರವರೆಗೆ ಕೋವಿಡ್ ಕರ್ಪ್ಯೂ ವಿಧಿಸಿದ್ದು ಕರ್ಪ್ಯೂ ಜ್ಯಾರಿಗೊಳಿಸುವ ಬಗ್ಗೆ ಆದೇಶ ಹೊರಡಿಸಿದ್ದು ಈ ಬಗ್ಗೆ  ದಿನಾಂಕ: 06-06-2021 ರಂದು ಪಿರ್ಯಾದಿ ಪ್ರಕಾಶ್ ಸಾಲಿಯಾನ್, ಪಿಎಸ್ಐ-2, ಕುಂದಾಪುರ ಸಂಚಾರ ಪೊಲೀಸ್ ಠಾಣೆ. ಇವರು ಕೋಟೇಶ್ವರ ಗ್ರಾಮದ ಹಾಲಾಡಿ ಬೈಪಾಸ್ ಬಳಿ ವಾಹನ ತಪಾಸಣೆ ಕರ್ತವ್ಯದಲ್ಲಿರುವಾಗ  12:00  ಗಂಟೆಯಿಂದ  19.00 ಗಂಟೆಯ ಮದ್ಯಾವಧಿಯಲ್ಲಿ KA 19 ER 1880 ಮೋಟಾರ್ ಸೈಕಲನ್ನು ಆಪಾದಿತ ಶ್ರೀನಿಧಿ, ಪ್ರಾಯ: 26 ವರ್ಷ, ತಂದೆ: ಶೀನಪ್ಪ ಶೆಟ್ಟಿ, ವಾಸ: ಸಳ್ವಾಡಿ, ಕಾಳಾವರ ಗ್ರಾಮ, ಇವರು ಚಲಾಯಿಸಿಕೊಂಡು ಬರುತ್ತಿದ್ದನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ  ಸಕಾರಣವಿಲ್ಲದೆ ಅನಗತ್ಯವಾಗಿ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ಬಂದಿರುವುದು ಕಂಡು ಬಂದಿರುತ್ತದೆ. ಆಪಾದಿತರು  ಕೋವಿಡ್ – 2019  ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು  ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು  ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ಅನಾವಶ್ಯಕವಾಗಿ ಸಕಾರಣವಿಲ್ಲದೆ ಸಾರ್ವಜನಿಕ  ಸ್ಥಳದಲ್ಲಿ  ಸಂಚರಿಸಿಕೊಂಡು ನಿರ್ಲಕ್ಷತನದಿಂದ ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯಕರವಾದಂಥ ರೋಗವು ಹರಡುವಂತೆ ಮಾಡಿ ನಿರ್ಲಕ್ಷತನ ತೋರಿರುವುದಾಗಿದೆ.  ಈ ಬಗ್ಗೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 75/2021  ಕಲಂ 269 IPC, ರಂತೆ ಪ್ರಕರಣ ದಾಖಲಿಸಲಾಗಿದೆ.
  • ಕುಂದಾಪುರ: ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 24/05/2021 ರಿಂದ 07/06/2021 ರವರೆಗೆ ಕೋವಿಡ್ ಕರ್ಪ್ಯೂ ವಿಧಿಸಿದ್ದು ಕರ್ಪ್ಯೂ ಜ್ಯಾರಿಗೊಳಿಸುವ ಬಗ್ಗೆ ಆದೇಶ ಹೊರಡಿಸಿದ್ದು  ದಿನಾಂಕ 01/06/2021 ರಂದು ಕುಂದಾಪುರ ಸಂಚಾರ ಪೊಲೀಸ್ ಠಾಣಾ ಪಿಎಸ್‌ಐ ಸುದರ್ಶನ ರವರು ಠಾಣಾ ವ್ಯಾಪ್ತಿಯಲ್ಲಿ ಸಿಬ್ಬಂದಿಗಳೊಂದಿಗೆ  ಕುಂದಾಪುರ ವಡೇರಹೋಬಳಿ ಗ್ರಾಮದ ಶಾಸ್ತ್ರಿ ಪಾರ್ಕ್ ಸರ್ಕಲ್ ಮತ್ತು ಕೆಎಸ್‌ಆರ್ ಟಿಸಿ  ಬಸ್ ನಿಲ್ದಾಣದ ಸಮೀಪ KA-20-G-287  ಇಲಾಖಾ ವಾಹನವನ್ನು ನಿಲ್ಲಿಸಿಕೊಂಡು ವಾಹನ ತಪಾಸಣೆ ನಡೆಸುತ್ತಿರುವಾಗ ಸುಮಾರು 10:00 ಗಂಟೆಯಿಂದ 18:00 ಗಂಟೆಯ ಮಧ್ಯಾವಧಿಯಲ್ಲಿ ಸದ್ರಿ ರಸ್ತೆಯ ಮೂಲಕ ಈ ಕೆಳಕಂಡ ವಾಹನಗಳನ್ನು ಅದರ ಚಾಲಕರು ಚಲಾಯಿಸಿಕೊಂಡು ಬರುತ್ತಿದ್ದನ್ನು ಕಂಡು ನಿಲ್ಲಿಸಿ ತಪಾಸಣೆ ಮಾಡಿ ವಾಹನ ಸವಾರರನ್ನು ವಿಚಾರಿಸಲಾಗಿ ಸಕಾರಣವಿಲ್ಲದೇ ತಿರುಗಾಡುತ್ತಿರುವುದು ಕಂಡುಬಂದಿರುತ್ತದೆ. ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಹೊರಡಿಸಿದ ಮಾರ್ಗ ಸೂಚಿಗಳು ಹಾಗೂ ಮಾನ್ಯ ಉಡುಪಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಗಳು ದಿನಾಂಕ 24/05/2021 ರಿಂದ 07/06/2021 ರ ತನಕ ಕೆಲವೊಂದು ಸಾರ್ವಜನಿಕ ಚಟುವಟಿಕೆಗಳನ್ನು ನಿರ್ಬಂಧಿಸಿ ಹೊರಡಿಸಿರುವ ಆದೇಶದನ್ವಯ ಈ ಅವಧಿಯಲ್ಲಿ ಸಕಾರಣವಿಲ್ಲದೆ ಅನಗತ್ಯವಾಗಿ ವಾಹನದಲ್ಲಿ ಸಂಚರಿಸುವ ಬಗ್ಗೆ ನಿರ್ಬಂಧದ ಆದೇಶ ಇರುತ್ತದೆ. ತಪಾಸಣಾ ಸಮಯ ಸಕಾರಣವಿಲ್ಲದೆ ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳ ಹಾಗೂ ಅದ ಸವಾರರ ವಿವರ  ಈ ಕೆಳಗಿಂತಿದೆ. 1) KA.20 EQ.8913  ದ್ವಿಚಕ್ರ ವಾಹನ ಸವಾರ:  ನಿತೀನ್, 2) KA.20 ED.2545  ದ್ವಿಚಕ್ರ ವಾಹನದ ಸವಾರ ಸಂದೀಪ, 3)KA20EJ 7468  ದ್ವಿಚಕ್ರ ವಾಹನದ ಸವಾರ  ಸುರೇಶ್ ಸದ್ರಿ  ಮೇಲ್ಕಂಡ ವಾಹನ ಸವಾರರು ಕೋವಿಡ್–2019  ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು  ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು  ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ಅನಾವಶ್ಯಕವಾಗಿ ಸಕಾರಣವಿಲ್ಲದೆ ಸಾರ್ವಜನಿಕ  ಸ್ಥಳದಲ್ಲಿ  ಸಂಚರಿಸಿಕೊಂಡು ನಿರ್ಲಕ್ಷತನದಿಂದ ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯಕರವಾದಂಥ ರೋಗವು ಹರಡುವಂತೆ ಮಾಡಿ ನಿರ್ಲಕ್ಷತನ ತೋರಿರುವುದರಿಂದ ಸದ್ರಿ ವಾಹನಗಳನ್ನು ಸ್ವಾಧೀನಪಡಿಸಿ ಆಪಾದಿತರ ವಿರುದ್ಧ  ಕಲಂ: 269 ಐಪಿಸಿ,. ರಂತೆ ಪ್ರಕರಣ ದಾಖಲಿಸಲಾಗಿದೆ, ಸ್ವಾಧೀನ ಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 74/2021 ಕಲಂ: 269 ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾರ್ಕಳ: ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ಕೋವಿಡ್ ಕರ್ಪ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಪ್ಯೂ ಜಾರಿಗೊಳಿಸುವ ಬಗ್ಗೆ ಪೋಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಸಮಯದಲ್ಲಿ ಅನಗತ್ಯವಾಗಿ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ನಿಷೇಧ ಇರುತ್ತದೆ, ಮಧು ಬಿ.ಇ ಪೊಲೀಸ್ ಉಪನಿರೀಕ್ಷಕರು (ಕಾ& ಸು) ಕಾರ್ಕಳ ನಗರ ಠಾಣೆ ರವರು ದಿನಾಂಕ 01/06/2021 ರಂದು ಸಂಜೆ ಠಾಣಾ ಸಿಬ್ಬಂದಿಯವರೊಂದಿಗೆ ಕಾರ್ಕಳ ನಗರ ಠಾಣಾ ಸರಹದ್ದಿನ ಕಾರ್ಕಳ ಕಸಬ  ಗ್ರಾಮದ  ಪತ್ತೋಂಜಿಕಟ್ಟೆ-ಕಾರ್ಕಳ ರಸ್ತೆಯ ಗುಂಡ್ಯ ಬಳಿ ಸಾರ್ವಜನಿಕ ರಸ್ತೆಯಲ್ಲಿ 18:00 ಗಂಟೆಗೆ ಅನಗತ್ಯವಾಗಿ ವಾಹನಗಳ ಓಡಾಟದ ಬಗ್ಗೆ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಅನಗತ್ಯವಾಗಿ ಓಡಾಡುತ್ತಿದ್ದ KA-20-EA-6144 ನೇ ನಂಬ್ರದ ಟಿವಿಎಸ್ ಕಂಪೆನಿ  ತಯಾರಿಕೆಯ ವೆಗೋ ಮಾದರಿಯ ದ್ವಿ ಚಕ್ರ ವಾಹನ ಮತ್ತು  KA-20-EW-5844 ನೇ ನಂಬ್ರದ ಟಿವಿಎಸ್ ಕಂಪೆನಿ ತಯಾರಿಕೆಯ ನ್ಯಾಟ್ರೋ ಮಾದರಿಯ ದ್ವಿ ಚಕ್ರ ವಾಹನಗಳನ್ನು ತಡೆದು ನಿಲ್ಲಿಸಿ ಅವರಲ್ಲಿ ವಿಚಾರಿಸಲಾಗಿ ಸಮಂಜಸವಾಗಿ ಉತ್ತರಿಸದೇ ಇದ್ದುದ್ದಲ್ಲದೆ   ಆಪಾದಿತರಿಗೆ ಘನ ಕರ್ನಾಟಕ ಸರಕಾರವು ಕೋವಿಡ್ ಮಹಾಮಾರಿ ಕರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ನಿಯಮಗಳ ಬಗ್ಗೆ ತಿಳುವಳಿಕೆ ಇದ್ದರೂ ಅನಗತ್ಯವಾಗಿ ಸರಕಾರ ಮತ್ತು ಜಿಲ್ಲಾಡಳಿತ ಆದೇಶ, ಕೋವಿಡ್ ನಿಯಮ ಉಲ್ಲಂಘಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 71/2021 ಕಲಂ: 269 ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.
  • ಮಲ್ಪೆ: ದಿನಾಂಕ 01/6/2021 ರಂದು 17:00 ಗಂಟೆಗೆ ಜನಾರ್ದನ ದೇವಾಡಿಗ  ಎ.ಎಸ್.ಐ ಮಲ್ಪೆ ಪೊಲೀಸ್ ಠಾಣೆ,  ಉಡುಪಿ. ರವರು ಇಲಾಖಾ ವಾಹನದಲ್ಲಿ ಮಲ್ಪೆ ಠಾಣಾ ಸರಹದ್ದಿನ ಕೊಡವೂರು ಗ್ರಾಮದ ಇರುವಾಗ ತೊಟ್ಟಂ ಚರ್ಚ ಬಳಿ ರಸ್ತೆಯಲ್ಲಿ ಕದಿಕೆ ಕಡೆಯಿಂದ ಮಲ್ಪೆ ಕಡೆಗೆ ಬರುತ್ತಿದ್ದ  KA-20-W-5031 ನೇ ಮೋಟಾರು ಸೈಕಲ್  ಸವಾರ ಮಾಸ್ಕ ಧರಿಸದೇ ಸಕಾರಣ ಇಲ್ಲದೆ ಸ್ವೆಚ್ಚಾಚಾರದಿಂದ ತಿರುಗಾಡಿಕೊಂಡಿದ್ದವನನ್ನು ಗಮನಿಸಿ ವಾಹನ ನಿಲ್ಲಿಸಲು ಸೂಚಿಸಿದ್ದು ಅವನಲ್ಲಿ ಎಲ್ಲಿಗೆ ಹೋಗುತ್ತಿಯಾ  ಎಂದು ವಿಚಾರಿಸಲಾಗಿ ತಾನು ತಿರುಗಾಡಲು ಹೋಗುತ್ತಿರುವುದಾಗಿ ತಿಳಿಸಿರುತ್ತಾನೆ. ಸದ್ರಿಯವನು  ಮಾರಣಾಂತಿಕ ಕಾಯಿಲೆ ಹರಡದಂತೆ ಮುಂಜಾಗೃತ ಕ್ರಮವಾಗಿ ಮುಖಕ್ಕೆ ಯಾವುದೇ ಮಾಸ್ಕ್ ಧರಿಸದೆ ತಿರುಗಾಡುತ್ತಿದ್ದು ಕಂಡು ಬಂದಿದ್ದು. ಸದ್ರಿ  ಮೋಟಾರು ಸೈಕಲ್ ಸವಾರನ ಹೆಸರು  ವಿಳಾಸ ವಿಚಾರಿಸಲಾಗಿ  ತನ್ನ  ಹೆಸರು ಆಸ್ಟಿನ್ ಪುಟಾರ್ಡೋ (30) ತಂದೆ: ದೋನತ್ ಪುಟಾರ್ಡೋ ವಾಸ: ಪುಟಾರ್ಡೋ ಮೆನ್ ಷನ್, ತೊಟ್ಟಂ ವೈನ್ ಶಾಪ್ ಬಳಿ ಬಡಾನಿಡಿಯೂರು ಗ್ರಾಮ ಎಂದು ತಿಳಿಸಿರುತ್ತಾನೆ. ಸದ್ರಿ ವ್ಯಕ್ತಿ ಮಾರಣಾಂತಿಕ ಕೋವಿಡ್ 19 ಸೋಂಕನ್ನು ಸಾರ್ವಜನಿಕರಿಗೆ ಹರಡುವ ಸಂಭವ ವಿರುವುದರಿಂದ ಸಾರ್ವಜನಿಕರ ಹಿತದೃಷ್ಠಿಯಿಂದ ಸರಕಾರದ ಸ್ವಷ್ಟ ಆದೇಶವಿದ್ದರೂ ಸಹಾ ಆದೇಶವನ್ನು ಪಾಲಿಸದೆ ಸ್ವೆಚ್ಛಾಚಾರದಿಂದ ಹಾಗೂ ನಿರ್ಲಕ್ಷ್ಯತನದಿಂದ ಪರಿಸರದಲ್ಲಿ ಯಾವುದೇ ಅಗತ್ಯ ಕಾರಣವಿಲ್ಲದೆ ಸಂಚಾರ ಮಾಡಿ ಕಾನೂನು ಉಲ್ಲಂಘಿಸಿದ್ದು ಸದ್ರಿ ಆರೋಪಿತರನ್ನು ಹಾಗೂ ಅವನು ತಿರುಗಾಡಲು ಉಪಯೋಗಿಸಿದ  ದ್ವಿಚಕ್ರ ವಾಹನವನ್ನು   ಸ್ವಾಧೀನಪಡಿಸಿಕೊಂಡಿರುವುದಾಗಿದೆ, ಈ ಬಗ್ಗೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ 69/2021 ಕಲಂ: 269 ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 02-06-2021 11:31 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080