ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣಗಳು

 • ಶಂಕರನಾರಾಯಣ: ದಿನಾಂಕ 01/06/2021 ರಂದು 18:15 ಗಂಟೆಗೆ ಆರೋಪಿಯು ಕೆಎ-20-ಇಕ್ಯೂ-4714  ನೇ  ನಂಬ್ರದ ಸ್ಕೂಟಿಯಲ್ಲಿ ಪಿರ್ಯಾದಿದಾರರಾದ ಸುಭಾಷ ಶೆಟ್ಟಿ (47) ತಂದೆ, ಮಹಾಬಲ ಶೆಟ್ಟಿ ವಾಸ, ಇಸ್ಕಾಬೇರು ಕಮಲಶಿಲೆ ಆಜ್ರಿ ಗ್ರಾಮ ಕುಂದಾಪುರ ಇವರನ್ನು ಸಹ ಸವಾರನಾಗಿ ಕುಳ್ಳಿರಿಸಿ ಕೊಡು ಕುಂದಾಪುರ ತಾಲೂಕಿನ ಕಮಲಶಿಲೆ ಗ್ರಾಮದ ಕಳಂಜಿ ಮೌರಿ ಎಂಬಲ್ಲಿ ಕಮಲಶಿಲೆ ಕಡೆಯಿಂದ ಆಜ್ರಿ ಕಡೆಗೆ ಬರುತ್ತಿರುವಾಗ ಆರೋಪಿಯು ಸ್ಕೂಟಿಯನ್ನು ಅತೀ ವೇಗ ಹಾಗೂ ಅಜಾಗರೂಕತೆ ಯಿಂದ ಚಲಾಯಿಸಿದ   ಪರಿಣಾಮ ರಸ್ತೆಯ ತಿರುವಿನಲ್ಲಿ ಸ್ಕೂಟಿ ಆರೋಪಿಯ ಹತೋಟಿ ತಪ್ಪಿ ರಸ್ತೆಯ ಬದಿಯ ಚರಂಡಿಗೆ  ಬಿದ್ದಿರುತ್ತದೆ, ಇದರ ಪರಿಣಾಮ ಸವಾರ ಅನಿಲ್ ಶೆಟ್ಟಿ ಹಾಗೂ ಸುಭಾಷ ಶೆಟ್ಟಿ ರವರಿಗೆ ರಕ್ತಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ  ಕರೆದುಕೊಂಡು ಹೋದಾಗ ಅಲ್ಲಿ ಸವಾರ ಅನಿಲ್ ಶೆಟ್ಟಿ   ಗಂಭೀರ ಸ್ವರೂಪದ ಗಾಯದಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ, ಹಾಗೂ ಸುಭಾಷ ಶೆಟ್ಟಿ ರವರು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕುಂದಾಪುರ ವಿನಯ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 64/2021 ಕಲಂ: 279, 338, 304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
 • ಬ್ರಹ್ಮಾವರ: ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 20/05/2021 ರಿಂದ ದಿನಾಂಕ 07/06/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ನೀಡಿದ್ದು, ಈ ಬಗ್ಗೆ ಗುರುನಾಥ ಬಿ. ಹಾದಿಮನಿ ಪಿ.ಎಸ್.ಐ. ಬ್ರಹ್ಮಾವರ ಪೊಲೀಸ್ ಠಾಣೆ ಇವರು ದಿನಾಂಕ 02/06/2021 ರಂದು ಸಿಬ್ಬಂದಿಯವರೊಂದಿಗೆ  ಇಲಾಖಾ ವಾಹನದಲ್ಲಿ ಕಾಡೂರು ಗ್ರಾಮದ ಕಾಡೂರು ಗುಡ್ಡೆಯಂಗಡಿ ಬಳಿ ಕೂರಾಡಿ – ಕಾಡೂರು ರಸ್ತೆಯಲ್ಲಿ ಅನಗತ್ಯವಾಗಿ ಜನರ ಮತ್ತು ವಾಹನಗಳ ಓಡಾಟವನ್ನು ತಪಾಸಣೆ ಮಾಡುತ್ತಿರುವಾಗ ಸಮಯ ಬೆಳಿಗ್ಗೆ 11:15 ಗಂಟೆಗೆ ಕಾಡೂರು ಕಡೆಯಿಂದ ಕೂರಾಡಿ ಕಡೆಗೆ KA-20-MB-1807 ನೋಂದಣಿ ನಂಬ್ರದ ಕೆಂಪು ಬಣ್ಣದ ಮಾರುತಿ ಸುಜುಕಿ ಬ್ರೀಜಾ ಕಾರನ್ನು ಆರೋಪಿಯು ಚಲಾಯಿಸಿಕೊಂಡು ಬರುತ್ತಿದ್ದು, ಗುರುನಾಥ ಬಿ. ಹಾದಿಮನಿ ರವರು ಹಾಗೂ ಸಿಬ್ಬಂದಿಯವರು ಕಾರನ್ನು ನಿಲ್ಲಿಸಲು ಕೈ ಸನ್ನೆ ಮಾಡಿ ಸೂಚನೆ ನೀಡಿದಾಗ ಆರೋಪಿಯು ಕಾರನ್ನು ನಿಲ್ಲಿಸದೇ ಕೂರಾಡಿ ಕಡೆಗೆ ಚಲಾಯಿಸಿಕೊಂಡು ಹೋಗಿರುತ್ತಾನೆ. ಸದ್ರಿಯವನು ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಅನಗತ್ಯವಾಗಿ ಕಾರಿನಲ್ಲಿ ತಿರುಗಾಡಿ ಕೋವಿಡ್‌-19 ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 107/2021 ಕಲಂ: 269 ಐಪಿಸಿ  & 119, 177 ಐಎಮ್ವಿ ಆ್ಯಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.   
 • ಮಣಿಪಾಲ: ದಿನಾಂಕ 01/06/2021 ರಂದು ಕರೋನಾ ವೈರಸ್ ಕಾಯಿಲೆ ಸೊಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅನಾವಶ್ಯಕವಾಗಿ ಸಂಚರಿಸುವವರ ವಿರುದ್ದ  ಕ್ರಮ ಕೈಗೊಳ್ಳುವ ಬಗ್ಗೆ ಠಾಣಾ ಪಿ.ಎಸ್.ಐ ರಾಜಶೇಖರ ವಂದಲಿರವರು ಪ್ರಸನ್ನ, ಮತ್ತು ಸಂತೋಷರವರು ಮಣಿಪಾಲ ಸಿಂಡಿಕೇಟ್ ಸರ್ಕಲ್ ಬಳಿಯ ಚಕ್ ಪೋಸ್ಟ್ ಮಣಿಪಾಲ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 169(A) ರಸ್ತೆ ಬಳಿಯಲ್ಲಿ ಕರ್ತವ್ಯದಲ್ಲಿದ್ದಾಗ ಬೆಳಿಗ್ಗೆ 09:45 ಗಂಟೆಯಿಂದ 10:00ಗಂಟೆಯ ಮಧ್ಯಾವಧಿಯಲ್ಲಿ ಆಪಾದಿತರಾದ ಸುಶಾಂತ್‌ ಹಾಗೂ ನಿತಿನ್ ಆಚಾರ್ಯ ಎಂಬುವರು ತಮ್ಮ ಮೋಟಾರ್‌ ಸೈಕಲ್‌ಗಳಲ್ಲಿ ಅನಾವಶ್ಯಕವಾಗಿ ಸಂಚರಿಸುತ್ತಿದ್ದು, ಸದರಿ ಆರೋಪಿತರು ಕೋವಿಡ್ ಸೊಂಕು 2ನೇ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಲಾಕ್ ಡೌನ್ ಇದ್ದು ಉಡುಪಿಯ ಮಾನ್ಯ ಜಿಲ್ಲಾಧಿಕಾರಿಗಳು ಅನಗತ್ಯ ಸಂಚಾರ ನಿರ್ಭಂಧಿಸಿ ಆದೇಶವನ್ನು ಹೊರಡಿಸಿರುವ ವಿಚಾರವನ್ನು ತಿಳಿದಿದ್ದರೂ ಕೂಡಾ ಯಾವುದೇ ಸಕಾರಣವಿಲ್ಲದೇ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೊಂಕನ್ನು ಹರಡುವ ಸಂಭವವಿರುವ ಬಗ್ಗೆ ನಿರ್ಲಕ್ಷ್ಯ ವಹಿಸಿ  ತಿರುಗಾಡುತ್ತಿದ್ದರಿಂದ ಸದರಿ ಆರೋಪಿಗಳನ್ನು  ಹಾಗೂ ಆರೋಪಿಗಳು ಸವಾರಿ ಮಾಡುತ್ತಿದ್ದ  ಒಟ್ಟು 2 ಮೋಟಾರ್‌ ಸೈಕಲ್‌‌ಗಳನ್ನು ವಶಕ್ಕೆ ಪಡೆಯಲಾಗಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 74/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಅಮಾಸೆಬೈಲು: ದಿನಾಂಕ 02/06/2021  ರಂದು ಸುಬ್ಬಣ್ಣ ಬಿ ಪೊಲೀಸು ಉಪನಿರೀಕ್ಷಕರು ಅಮಾಸೆಬೈಲು ಪೊಲೀಸು ಠಾಣೆ, ರವರು ಠಾಣಾ ಸಿಬ್ಬಂದಿಗಳಾದ ಎ ಎಸ್ ಐ ಉಮೇಶ್ ನಾಯ್ಕ, ಪ್ರದೀಪ್ ಶೆಟ್ಟಿ , ಪಾರ್ವತಮ್ಮ ಇವರುಗಳೊಂದಿಗೆ ಇಲಾಖಾ ಜೀಪಿನಲ್ಲಿ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದು ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 24/05/2021  ರಿಂದ 07/06/2021 ರವರೆಗೆ ಕೋವಿಡ್-19 ಸಾಂಕ್ರಾಮಿಕ  ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಆದೇಶ ಹೊರಡಿಸಿದ್ದು ಅನಗತ್ಯ ವಾಹನಗಳ ಓಡಾಟವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದು ಮದ್ಯಾಹ್ನ 12:30 ಗಂಟೆಗೆ ಮಚ್ಚಟ್ಟು ಗ್ರಾಮದ ಕಳಿನಜೆಡ್ಡು ಸೇತುವೆ ಬಳಿ ಆಪಾದಿತನು KA-20-EQ-2891 ನೇ Jupiter ZX Scooty ಯನ್ನು ಚಲಾಯಿಸಿಕೊಂಡು ಸಕಾರಣವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ಬಂದಿರುವುದು ಕಂಡು ಬಂದಿರುತ್ತದೆ. ಸದ್ರಿ  ಮೇಲ್ಕಂಡ ದ್ವಿಚಕ್ರ ವಾಹನ ಸವಾರ ಕೋವಿಡ್– 2019  ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ಅನಾವಶ್ಯಕವಾಗಿ ಸಕಾರಣವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ನಿರ್ಲಕ್ಷತನದಿಂದ ಕೋವಿಡ್ ನಿಯಮವನ್ನು ಉಲ್ಲಂಘಿಸಿ ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯಕರವಾದಂಥ ರೋಗವು ಹರಡುವ ಸಾಧ್ಯತೆ ಉಂಟು ಮಾಡಿ ನಿರ್ಲಕ್ಷತನ ತೋರಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 27/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
 • ಕಾರ್ಕಳ: ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವೆರೆಗೆ ಕೋವಿಡ್ ಕರ್ಪ್ಯೂ ವಿಧಿಸಿ ಆದೇಶ ಹೊರಡಿಸಿದ್ದು ಈ ಕರ್ಪ್ಯೂ ಜಾರಿಗೊಳಿಸುವ ಬಗ್ಗೆ ಪೋಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು ಈ ಸಮಯದಲ್ಲಿ ಅನಗತ್ಯವಾಗಿ ಸಾರ್ವಜನಿಕರ ಓಡಾಟಕ್ಕೆ ನಿಷೇಧ ಇದ್ದು ಜನಾರ್ಧನ ಅಪರಾಧ ಪಿಎಸ್ ಐ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಇವರು ದಿನಾಂಕ 02/06/2021  ರಂದು ಸಿಬ್ಬಂದಿಯವರಾದ ಪಿ,ಸಿ, 1224 ಹಾಗೂ ನಿಟ್ಟೆ ಗ್ರಾಮ ಪಂಚಾಯತ್ ನ ಪಂಚಾಯತ್ ಅಭಿವೃದ್ದಿ ಅದಿಕಾರಿ ಶೇಖರ ಪೂಜಾರಿ, ಗ್ರಾಮ ಪಂಚಾಯತ್ ನ ಸದಸ್ಯರಾದ ಸಂತೋಷ್ ಕುಮಾರ್, ಸುರೇಂದ್ರ ಅಮೀನ್, ಸುಭಾಶ್ಚಂದ್ರ ಹೆಗ್ಡೆ, ನಿತಿನ್  ಇವರೊಂದಿಗೆ 12:00 ಗಂಟೆಯಿಂದ 12:35 ಗಂಟೆಯವರೆಗೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ದೂಪದಕಟ್ಟೆ ಎಂಬಲ್ಲಿ ತಪಾಸಣೆ ಮಾಡುತ್ತಿರುವಾಗ ಅನಗತ್ಯವಾಗಿ ಓಡಾಡಿ ಘನ ಕರ್ನಾಟಕ ಸರಕಾರವು ಕೋವಿಡ್ ಮಹಾಮಾರಿ ಕರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ನಿಯಮಗಳ ಬಗ್ಗೆ ತಿಳುವಳಿಕೆ ಇದ್ದರೂ ಅನಗತ್ಯವಾಗಿ ವಾಹನಗಳಲ್ಲಿ ತಿರುಗಾಡಿ ಕೋವಿಡ್ ನಿಯಮ ಉಲ್ಲಂಘಿಸಿ ಅಪರಾಧ ಎಸಗಿರುವುದಾಗಿದೆ ಕೆಎ-20-ಇಹೆಚ್-0260 ನೇ ನಂಬ್ರ ಬೈಕ್ ನ್ನು ವಶಕ್ಕೆ ಪಡೆದು  ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 67/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೊಲ್ಲೂರು: ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 24/05/2021 ರಿಂದ ದಿನಾಂಕ 07/06/2021 ರ ವರೆಗೆ ಕೋವಿಡ್‌ ಕರೋನಾ ವೈರಸ್‌ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‌ಡೌನ್‌ ಕರ್ಪ್ಯೂ ವಿಧಿಸಿದ್ದು ಕರ್ಪ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು ದಿನಾಂಕ 02/06/2021 ರಂದು ನಾಸೀರ್ ಹುಸೈನ್ PSI ಕೊಲ್ಲೂರು ಪೊಲೀಸ್ ಠಾಣೆ ರವರು ಇಲಾಖಾ ವಾಹನ ನಂಬ್ರ KA-20-G-346 ರಲ್ಲಿ ಠಾಣಾ ಸಿಬ್ಬಂದಿ ಲಕ್ಷ್ಮಣ ಗಾಣಿಗ ಮತ್ತು ಇಲಾಖಾ ಜೀಪು ಚಾಲಕ ರವಿರಾಜ ಕೊಠಾರಿ ಇವರೊಂದಿಗೆ ಠಾಣಾ ಸರಹದ್ದಿನ ಬೈಂದೂರು ತಾಲೂಕು ಜಡ್ಕಲ್‌ ಗ್ರಾಮದ ಹುಲಿಪಾರೆ ಎಂಬಲ್ಲಿ ವಾಹನ ತಪಾಸಣೆ ಕರ್ತವ್ಯದಲ್ಲಿರುವಾಗ ಬೆಳಗ್ಗೆ ಸುಮಾರು 10:00 ಗಂಟೆಯಿಂದ 12:00 ಗಂಟೆಯ ತನಕ ವಾಹನ ತಪಾಸಣೆ ಮಾಡಿಕೊಂಡಿದಾಗ ಈ ಕೆಳಕಂಡ ದ್ವಿಚಕ್ರ ವಾಹನಗಳನ್ನು ಅದರ ಸವಾರರು ಚಲಾಯಿಸಿಕೊಂಡು ಬರುತ್ತಿದ್ದನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ ದ್ವಿಚಕ್ರ ವಾಹನಗಳನ್ನು ಅದರ ವಾಹನ ಸವಾರರು ಚಲಾಯಿಸಿಕೊಂಡು ಸಕಾರಣ ವಿಲ್ಲದೆ ಅನಗತ್ಯವಾಗಿ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು  ಬಂದಿರುವುದು  ಕಂಡು ಬಂದಿರುತ್ತದೆ. ಸದ್ರಿ ದ್ವಿಚಕ್ರ  ವಾಹನಗಳ ಸವಾರರ ವಿವರ ಹಾಗೂ ನೊಂದಣಿ  ಸಂಖ್ಯೆ ಈ ರೀತಿ ಇರುತ್ತದೆ.1] KA 20 EH 1663 ನೇ ಹಿರೋ ಹೊಂಡಾ ಕಂಪನಿಯ  ಮೋಟಾರು ಸೈಕಲ್‌ ಅದರ ಸವಾರ ಗೋವಿಂದ ಪೂಜಾರಿ (48) ತಂದೆ:ದೇವ ಪೂಜಾರಿ ವಾಸ:ತಲ್ಕಣ ಮೆಕ್ಕೆ ಜಡ್ಕಲ್‌ಗ್ರಾಮ ಬೈಂದೂರು ತಾಲೂಕು, 2] KA-20-R-6618  ನೇ ಬಜಾಜ್‌ಕಂಪನಿಯ ಮೋಟಾರು ಸೈಕಲ್‌ ಅದರ ಸವಾರ ಚಂದ್ರ ನಾಯ್ಕ (40) ತಂದೆ: ದಿ: ಬಡಿಯ ನಾಯ್ಕ ವಾಸ: ಹಾರಕಿ ಮನೆ ಮುದೂರು ಗ್ರಾಮ ಬೈಂದೂರು ತಾಲೂಕು, 3] KA-20-Y-9390  ನೇ ಟಿ.ವಿ.ಎಸ್‌ ಕಂಪನಿಯ ವಿಗೋ ಮೋಟಾರು ಸೈಕಲ್‌ ಅದರ ಸವಾರ ರಕ್ಷಿತ್‌ (28) ತಂದೆ: ರಾಮ ಪೂಜಾರಿ ವಾಸ: ಚಿತ್ತೂರು ಪೇಟೆ ಚಿತ್ತೂರು  ಗ್ರಾಮ ಕುಂದಾಪುರ  ತಾಲೂಕು.       ಸದ್ರಿ ಮೇಲ್ಕಂಡ ದ್ವಿಚಕ್ರ ವಾಹನ ಸವಾರರು ಕೋವಿಡ್‌-19 ಮಹಾಮಾರಿ ಕೊರೋನಾ ವೈರಸ್‌ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರಕಾರವು ಹೊರಡಿಸಿದ ಮಾರ್ಗ ಸೂಚಿಗಳು ಹಾಗೂ ಮಾನ್ಯ ಉಡುಪಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಗಳು ಕರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿ ಯಾದ ರೋಗದ ಸೋಂಕನ್ನು ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ಅನಾವಶ್ಯಕವಾಗಿ ಸಕಾರಣವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ನಿರ್ಲಕ್ಷತನದಿಂದ  ಸರಕಾರ  ಹಾಗೂ ಜಿಲ್ಲಾಡಳಿತದ ಮಾರ್ಗ ಸೂಚಿಯಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ  ಅಪಾಯಕಾರವಾದಂಥ  ರೋಗವು ಹರಡುವಂತೆ ಮಾಡುವ ನಿರ್ಲಕ್ಷತನ ತೋರಿರುವುದರಿಂದ ಸದ್ರಿ ವಾಹನಗಳನ್ನು  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 21/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

  

 

 

 

ಇತ್ತೀಚಿನ ನವೀಕರಣ​ : 02-06-2021 06:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080