ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 01/05/2023 ರಂದು ಸಂಜೆ 4:45 ಗಂಟೆಗೆ ಪಿರ್ಯಾದಿದಾರರಾದ ಯೋಗೀಶ್‌ ಆಚಾರ್ಯ (20),  ತಂದೆ: ಮಂಜುನಾಥ ಆಚಾರ್ಯ,  ವಾಸ: ಕಜಕೆ ಮನೆ, ಯರ್ಲಪಾಡಿ ಗ್ರಾಮ, ಕಾರ್ಕಳ ತಾಲೂಕು ಇವರು ತನ್ನ ತಂದೆ ಮಂಜುನಾಥ ಆಚಾರ್ಯ ಇವರೊಂದಿಗೆ ಹಿಂಬದಿ ಸವಾರನಾಗಿ ನಿಟ್ಟೆ ಗ್ರಾಮದ ದೂಪದ ಕಟ್ಟೆ ಜಂಕ್ಷನ್‌ ಬಳಿ ಬೆಳ್ಮಣ್‌ ಕಡೆಗೆ ಹೋಗಲು ರಸ್ತೆ ಬದಿಯಲ್ಲಿ ಸ್ಕೂಟರ್‌ KA-20-ED-7371 ರಲ್ಲಿ ನಿಂತುಕೊಂಡಿದ್ದಾಗ, ಬೆಳ್ಮಣ್‌ ಕಡೆಯಿಂದ ಕಾರು ಒಂದು ಬಂದು ಪಿರ್ಯಾದಿದಾರರ ತಂದೆ ಚಲಾಯಿಸುತ್ತಿದ್ದ ಸ್ಕೂಟರಿಗೆ ಅತೀ ವೇಗ ಮತ್ತು ಅಜಗರೂಕತೆಯಿಂದ ಚಲಾಯಿಸಿ ಡಿಕ್ಕಿ ಹೊಡೆದ ಪರಿಣಾಮ, ಪಿರ್ಯಾದಿದಾರರು ಹಾಗೂ ಸ್ಕೂಟರ್‌ ಚಲಾಯಿಸುತ್ತಿದ್ದ ಪಿರ್ಯಾದಿದಾರರ ತಂದೆ ಮಂಜುನಾಥ ಆಚಾರ್ಯ ರವರು ರಸ್ತೆಗೆ ಬಿದ್ದಿದ್ದು, ಕೂಡಲೇ ಅಲ್ಲಿ ಸೇರಿದ ಕಾರು ಚಾಲಕ ಮತ್ತು ಸಾರ್ವಜನಿಕರು ಸೇರಿ ಉಪಚರಿಸಿದ್ದು, ಪಿರ್ಯಾದಿದಾರರ ತಂದೆಗೆ ಬಲಕಾಲಿನ ಮಣಿಗಂಟಿಗೆ ಗಾಯವಾಗಿದ್ದು, ಈ ಬಗ್ಗೆ  ಚಿಕಿತ್ಸೆಯ ಸಲುವಾಗಿ  ಕಾರ್ಕಳ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಗಾಯಗೊಂಡ ಮಂಜುನಾಥ ಆಚಾರ್ಯ ರವರಿಗೆ ಮೂಳೆ ಮುರಿತ ಗಾಯವಾಗಿರುವುದಾಗಿ ವೈದ್ಯರು ತಿಳಿಸಿರುತ್ತಾರೆ. ಪಿರ್ಯಾದಿದಾರರಿಗೆ ಯಾವುದೇ ಗಾಯವಾಗಿರುವುದಿಲ್ಲ. ಡಿಕ್ಕಿ ಹೊಡೆದ ಕಾರು ನಂಬ್ರ KA-02-AF-7493 ಆಗಿದ್ದು, ಅಪಘಾತಗೊಂಡ ಕಾರು ಮತ್ತು ಬೈಕ್‌ ಜಖಂಗೊಂಡಿರುತ್ತದೆ.  ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 59/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಿರ್ವಾ: ಪಿರ್ಯಾದಿದಾರರಾದ ಶ್ರೀಮತಿ ರತ್ನಾ (45), ಗಂಡ: ಮಂಜುನಾಥ ಮರಕಾಲ, ಅಲ್ತಾರು ಗುಡ್ಡಿಮನೆ, ಯಡ್ತಾಡಿ ಪೋಸ್ಟ್ ಮತ್ತು  ಗ್ರಾಮ , ಬ್ರಹ್ಮಾವರ ತಾಲೂಕು ಇವರು ದಿನಾಂಕ 30/04/2023 ರಂದು ತನ್ನ ಸ್ಕೂಟರ್ KA-20-ET-8743ನೇ ದ್ವಿಚಕ್ರ ವಾಹನದಲ್ಲಿ ಶಂಕರಪುರದಿಂದ ತನ್ನ ಮನೆಗೆ ಶಂಕರಪುರ-ಕಟಪಾಡಿ ಮಾರ್ಗವಾಗಿ ಹೋಗುತ್ತಿರುವಾಗ ಕುರ್ಕಾಲು ಗ್ರಾಮದ ಶಂಕರಪುರ ಪ್ರಭು ಸ್ಟೋರ್ ಬಳಿ ಸಾರ್ವಜನಿಕ ರಸ್ತೆಯಲ್ಲಿ ಮಧ್ಯಾಹ್ನ 01:30 ಗಂಟೆಗೆ ತಲುಪುವಾಗ ಎದುರುಗಡೆಯಿಂದ ಕಟಪಾಡಿ-ಶಿರ್ವಾ ಕಡೆಗೆ ಟೆಂಪೋ ನಂಬ್ರ KA-37-B-4556ನೇದರ ಚಾಲಕನು ಟೆಂಪೋವನ್ನು ಅತಿವೇಗ ಮತ್ತು  ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ಸಾರ್ವಜನಿಕ  ರಸ್ತೆಗೆ  ಬಿದ್ದುದರಿಂದ ಸ್ಕೂಟರ್ ಸಂಪೂರ್ಣ ಜಖಂಗೊಂಡಿದ್ದು, ಪಿರ್ಯಾದಿದಾರರಿಗೆ ಗದ್ದಕ್ಕೆ ,ಎಡಕಾಲಿಗೆ ತರಚಿದ ರಕ್ತಗಾಯ ಹಾಗೂ ಹೊಟ್ಟೆಗೆ ಒಳನೋವು ಉಂಟಾಗಿರುತ್ತದೆ. ಈ ಆಫಘಾತ ಪಡಿಸಿದ ಟೆಂಪೋ ಚಾಲಕನು ಟೆಂಪೋವನ್ನು ನಿಲ್ಲಿಸದೇ ಪಿರ್ಯಾದಿದಾರರನ್ನು ಉಪಚರಿಸದೇ ಹೋಗಿರುತ್ತಾನೆ. ಅಲ್ಲಿ ಸೇರಿದ ಸ್ಥಳೀಯರು ಪಿರ್ಯಾದಿದಾರರನ್ನು ಉಪಚರಿಸಿ ಉಡುಪಿಯ ಹೈಟೆಕ್ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿರುವುದಾಗಿದೆ.  ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 40/2023, ಕಲಂ: 279,337 ಐಪಿಸಿ ಮತ್ತು 134(a)(b) IMV ACT  ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಅಮಾಸೆಬೈಲು: ಪಿರ್ಯಾದಿದಾರರಾದ ಓಂ ಪ್ರಕಾಶ್ ಕಂಗಾಲಿ (21), ತಂದೆ: ಜಗದೀಶ ಕಂಗಾಲಿ, ವಾಸ: ಹಿರ್ಬ್  ಗರ್ ಹರಿಯಾಗರ್ ಜುನ್ನಾರ್ಡೋ ತಾಲೂಕು ಚಿಂದ್ ವಾಡಾ ಜಿಲ್ಲೆ ಮಧ್ಯ ಪ್ರದೇಶ ಇವರು Sterilite Technologies   ಕಂಪೆನಿಯ ಏರ್ ಟೆಲ್ ಕೇಬಲ್ ಅಳವಡಿಸುವ ಕಂಪೆನಿಯವರೊಂದಿಗೆ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದು, ಸಿದ್ದಾಪುರದಲ್ಲಿ ಬಾಡಿಗೆ ರೂಂ ಮಾಡಿಕೊಂಡು ವಾಸವಾಗಿದ್ದು ದಿನಾಂಕ  30/04/2023 ರಂದು ಕಾರ್ಕಳದ ಬಜಗೋಳಿ ಎಂಬಲ್ಲಿಗೆ ಕೂಲಿ ಕೆಲಸದ ಬಗ್ಗೆ ಜೊತೆ ಕೆಲಸಗಾರರಾದ ರವಿನ್ ವಟ್ಟಿ ,ಮಹುಲಾಲ್ ವಟ್ಟಿ, ಗೋಲು ಇವನಾಟಿ,, ದಿವಾನ್ ಶಾ ,ಗುಲಾಬ್ ದುರ್ವೆ, ಇವರುಗಳೊಂದಿಗೆ ಪಿಕಪ್ ವಾಹನ ನಂಬ್ರ KA-20-A-1440 ರಲ್ಲಿ ಹೋಗಿದ್ದು ಕೆಲಸ ಮುಗಿಸಿಕೊಂಡು ವಾಪಾಸು ಸಿದ್ದಾಪುರಕ್ಕೆ ಬರಲೆಂದು ಪಿಕಪ್ ವಾಹನದಲ್ಲಿ ಅಮಾಸೆಬೈಲು ಮಾರ್ಗವಾಗಿ ಸಿದ್ದಾಪುರಕ್ಕೆ ಬರುತ್ತಿರುವಾಗ ಮಚ್ಚಟ್ಟು ಗ್ರಾಮದ ಕಳಿನಜಡ್ಡು ಮಿರಾಂಡ ಎಸ್ಟೇಟ್  ಬಳಿ   ಅಮಾಸೆಬೈಲು ಸಿದ್ದಾಪುರ ರಸ್ತೆಯಲ್ಲಿ ಪಿಕಪ್ ವಾಹನವನ್ನು ಅದರ ಚಾಲಕ ಆದಾಮ್ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಪಿಕಪ್ ವಾಹನವು ರಸ್ತೆಯಲ್ಲಿ ಮಗುಚಿ ಬಿದ್ದ ಪರಿಣಾಮ ಪಿಕಪ್ ವಾಹನದಲ್ಲಿ ಡ್ರೈವರ್ ಸೀಟ್ ಪಕ್ಕ ಕುಳಿತಿದ್ದ ಗೋಲು ಇವನಟ್ಟಿ ಮತ್ತು ದಿವಾನ್ ಶಾ ಎಂಬುವವರಿಗೆ ಮೈ ಕೈಗೆ  ಕಾಲಿಗೆ   ರಕ್ತ ಗಾಯವುಂಟಾಗಿರುವುದಾಗಿ ಚಿಕಿತ್ಸೆ ಬಗ್ಗೆ ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 14/2023 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಮಹೇಶ್ ಕೋತ್ವಾಲ್ ಕೆ (43) ,ತಂದೆ: ದಿ. ಲಕ್ಷ್ಮಣ ಕೋತ್ವಾಲ್, ವಾಸ: 2/32-13, ಮಾತೃಶ್ರೀ, ಪ್ರಸಾದ್ ಲೇಔಟ್, ಆಶೀರ್ವಾದ ನಗರ ಸಂತೆಕಟ್ಟೆ ತೆಂಕನಿಡಿಯೂರು ಗ್ರಾಮ ಉಡುಪಿ ತಾಲೂಕು ಇವರು ದಿನಾಂಕ 30/04/2023 ರಂದು ಸಂಜೆ 4:15 ಗಂಟೆಗೆ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಸಂಖ್ಯೆ KA-20-EY-1230 ರಲ್ಲಿ  ಮನೆಯಿಂದ ಉಡುಪಿ ಕಡೆಗೆ ಹೋಗುತ್ತಿರುವಾಗ ಪುತ್ತೂರು ಗ್ರಾಮದ ಗೋಪಾಲಪುರ ವೆಲೆಂಟೆನ್‌ಡಿಸೋಜ ರವರ ಮನೆಯ ಬಳಿ ತಲುಪುವಾಗ ಅದೇ ರಸ್ತೆಯಲ್ಲಿ KA-20-AA-8737 ನೇ ಗೂಡ್ಸ್ ರಿಕ್ಷಾ ಚಾಲಕ ಕರುಣಾಕರ ಮೂಲ್ಯ ತನ್ನ ಗೂಡ್ಸ್ ರಿಕ್ಷಾವನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಯಾವುದೇ ಸೂಚನೆಯನ್ನು ನೀಡದೆ ಒಮ್ಮೆಲೆ ಬಲಕ್ಕೆ ತಿರುಗಿಸಿದ ಪರಿಣಾಮ ಪಿರ್ಯಾದುದಾರರು  ಸವಾರಿ ಮಾಡುತ್ತಿದ್ದ ಸ್ಕೂಟರಿಗೆ ಡಿಕ್ಕಿ ಹೊಡೆದು ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಬಲಕಾಲಿಗೆ ಮೂಳೆಮುರಿತದ ಜಖಂ ಹಾಗೂ ಕೈಗಳಿಗೆ ತರಚಿದ ರಕ್ತಗಾಯವಾಗಿರುತ್ತದೆ. ಆ ಸಮಯ ಗೂಡ್ಸ್ ರಿಕ್ಷಾ ಚಾಲಕ ಹಾಗೂ ಅಲ್ಲಿ ಸೇರಿದ ಜನರು ಪಿರ್ಯಾದಿದಾರರನ್ನು ಒಂದು ವಾಹನದಲ್ಲಿ ಕರೆದುಕೊಂಡು ಹೋಗಿ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿದ್ದು ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 44/2023 ಕಲಂ: 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಶಿವರಾಜ್ (29), ತಂದೆ: ಮಂಜುನಾಥ, ವಾಸ: ದುರ್ಗಾಪರಮೇಶ್ವರಿ ಟೆಂಪಲ್ ಬಳಿ ಹೆರಂಜಾಲು ಗ್ರಾಮ, ಬೈಂದೂರು ತಾಲೂಕು ಇವರು ದಿನಾಂಕ 30/04/2023 ರಂದು ಹೆರೂರು ಗ್ರಾಮದ ಮೇಕೋಡು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾಲಿಗ್ರಾಮ ಮೇಳದ ಯಕ್ಷಗಾನ ಪ್ರದರ್ಶನಕ್ಕೆ  ಹೋಗಲು  ಹೆರೂರು ಗ್ರಾಮದ ಮೇಕೋಡು ನೂಜಾಡಿ ಹಾಲಿನ ಡೈರಿ ಬಳಿ  ಹೋಗುತ್ತಿರುವಾಗ ರಾತ್ರಿ ಸಮಯ 7:45 ಗಂಟೆಗೆ ಮಣಿರಾಜ್ KA-20-EP-8482 ನೇ ಮೋಟಾರು ಸೈಕಲನ್ನು ಹೇರೂರು ಕಡೆಯಿಂದ ನಾಗೂರು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹಾಲು ಡೈರಿ ಬಳಿ ತಿರುವಿನಲ್ಲಿ  ನಾಗೂರು ಕಡೆಯಿಂದ ಹೆರೂರು ಕಡೆಗೆ ಬರುತ್ತಿದ್ದ ಶಿವರಾಜ್ ರವರ KA-20-ET-9409 ನೇ  ಮೋಟಾರು ಸೈಕಲ್ ಗೆ ಎದುರಿನಿಂದ ಡಿಕ್ಕಿ ಹೊಡೆದ  ಪರಿಣಾಮ ಎರಡು ಮೋಟಾರು ಸೈಕಲ್ ಸವಾರರು ರಸ್ತೆಗೆ ಬಿದ್ದಿದ್ದು KA-20-ET-9409 ನೇ  ಮೋಟಾರು ಸೈಕಲ್ ಸವಾರ ಶಿವರಾಜ ರವರ ತಲೆಯು ಒಡೆದು ಹಿಂಭಾಗ ರಕ್ತಗಾಯ, ಬಲಗೈ ಮಣಿಗಂಟಿಗೆ  ಮೂಳೆ ಮುರಿತ ಹಾಗೂ ಎಡ ಕೆನ್ನೆ ಮೂಳೆ ಜಖಂ ಉಂಟಾಗಿರುತ್ತದೆ, KA-20-EP-8482 ನೇ ಮೋಟಾರು ಸೈಕಲ ಸವಾರ ಮಣಿರಾಜನಿಗೆ  ಸಣ್ಣ ಪುಟ್ಟ ತರಚಿದ ಗಾಯವಾಗಿರುತ್ತದೆ, ಗಾಯಾಳುವನ್ನು ಫಿರ್ಯಾದಿದಾರರು ಹಾಗೂ  ಮಣಿರಾಜ್  ಇಬ್ಬರು  ಸೇರಿ 108 ವಾಹನದಲ್ಲಿ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 68/2023 ಕಲಂ:  279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

  • ಕೋಟ: ದಿನಾಂಕ 01/05/2023 ರಂದು ಮಧು ಬಿ.ಇ, ಪೊಲೀಸ್‌ ಉಪನಿರೀಕ್ಷಕರು, ಕೋಟ ಪೊಲೀಸ್ ಠಾಣೆ ಇವರು  ಸಿಬ್ಬಂದಿಯವರೊಂದಿಗೆ  ರೌಂಡ್ಸ್ ಕರ್ತವ್ಯದಲ್ಲಿರುತ್ತಾ ಕೋಟ ಮೂರುಕೈ ಕಡೆಯಿಂದ ಸೈಬ್ರಕಟ್ಟೆ ಕಡೆಗೆ  ಬರುತ್ತಿರುವಾಗ  ಅಚ್ಲಾಡಿ ಗ್ರಾಮದ ಮಧುವನ  ರೈಲ್ವೆ ಬ್ರಿಡ್ಜ ಬಳಿಯಲ್ಲಿ ಒಬ್ಬ ವ್ಯಕ್ತಿ ನಿಂತಿದ್ದು ಆತನ ಸುತ್ತಲೂ 4-5 ಜನರು ಸುತ್ತುವರೆದು ನಿಂತಿದ್ದರು.  ಅವರು ಮೊಬೈಲ್‌‌‌‌‌‌ನ್ನು ಹಿಡಿದುಕೊಂಡು ಪಾರ್ಕರ್ ವೆಬ್ ಸೈಟ್ ನ ಮೂಲಕ  ಕ್ರಿಕೆಟ್‌‌‌ ಬೆಟ್ಟಿಂಗ್‌‌‌ನಲ್ಲಿ  ಹಣ ಹಾಕಿದರೆ ಹೆಚ್ಚು  ಹಣ ಕೊಡುವುದಾಗಿ ಸಾರ್ವಜನಿಕರಿಗೆ  ಹೇಳಿ ನಂತರ ಹೆಚ್ಚು ಹಣ ಸಂಗ್ರಹಿಸಿದ್ದಲ್ಲಿ  ಕುಂದಾಪುರದ ವಸಂತ ಎಂಬುವವರಿಗೆ ನೀಡುತ್ತಿರುವುದಾಗಿ ಕ್ರಿಕೆಟ್ ಬೆಟ್ಟಿಂಗ್  ಜೂಜಾಟ  ನಡೆಸುತ್ತಿರುವುದು ಕಂಡು ಬಂದಿದ್ದು, ದಾಳಿ ನಡೆಸಿ ಮೊಬೈಲ್ ಜೂಜಾಟದಲ್ಲಿ ನಿರತರಾಗಿದ್ದ ಉಮೇಶ ಪೂಜಾರಿ (34), ತಂದೆ: ದಿ. ಸದಾಶಿವ ಪೂಜಾರಿ, ವಾಸ: ಲಕ್ಷ್ಮೀ ನಿಲಯ ಬಾರಿಕೆರೆ ಕೋಟತಟ್ಟು ಗ್ರಾಮ ಬ್ರಹ್ಮಾವರ ತಾಲೂಕು  ಎಂಬಾತನನ್ನು ಹಾಗೂ vivo ಕಂಪೆನಿಯ ಮೊಬೈಲ್-1  ಮತ್ತು ಜೂಜಾಟಕ್ಕೆ ಬಳಸಿದ 14300/- ಹಣವನ್ನು ಸ್ವಾಧಿನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ  77/2023  ಕಲಂ: 78(1)(3) KP ACT ರಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಉದಯ ಶೆಟ್ಟಿ(46) ರವರು ಪಿರ್ಯಾದಿದಾರರಾದ ಶರತ್‌ (30), ತಂದೆ: ಹೆಚ್‌. ಆನಂದ ಶೆಟ್ಟಿ, ವಾಸ: ಚಾವಡಿ ಮನೆ, ಸಳ್ವಾಡಿ ಅಂಚೆ, ಕಾಳಾವರ ಗ್ರಾಮ, ಕುಂದಾಪುರ ತಾಲೂಕು ಇವರ ಗ್ಲೋರಿಯಾ ಬಾರ್ & ರೆಸ್ಟೋರೆಂಟ್ನಲ್ಲಿ ಕಳೆದ 1 ವಾರದಿಂದ ಸಪ್ಲೇಯರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರು.  ದಿನಾಂಕ 01/05/2023 ರಂದು ಸಂಜೆ 5:00 ಗಂಟೆಗೆ ಬಾರ್‌ ನ  ರೆಸ್ಟ್ ರೂಂನಲ್ಲಿರುವ ಕುರ್ಚಿಯಲ್ಲಿ ಕುಳಿತಿದ್ದವರು ಅಸ್ವಸ್ಥಗೊಂಡು ಕೆಳಗೆ ಬಿದ್ದಿದ್ದು ಕೂಡಲೇ ಬಾರ್‌ ನ ಸಿಬ್ಬಂದಿಗಳು ಮತ್ತು ಪಿರ್ಯಾದಿದಾರರು ಉಪಚರಿಸಿ ಚಿಕಿತ್ಸೆಯ ಬಗ್ಗೆ ಒಂದು ಆಟೋ ರಿಕ್ಷಾದಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ಆದರೆ ಉದಯ ಶೆಟ್ಟಿ ರವರು ದಾರಿಯ ಮದ್ಯೆ  ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್‌  ಕ್ರಮಾಂಕ 13/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿದಾರರಾದ ಸದಾಶಿವ ಸಾಲಿಯಾನ್‌ (68), ತಂದೆ: ದಿ. ಶೀನಾ ಸಾಲಿಯಾನ್‌, ವಾಸ:ಶೀಂಬ್ರಾ ಶಿವಳ್ಳಿ ಗ್ರಾಮ ಉಡುಪಿ ತಾಲೂಕು ಮತ್ತು ಜಿಲ್ಲೆ ಇವರ ಸಂಬಂಧಿ ಜಯಕುಮಾರ್‌ ಸಾಲಿಯಾನ್‌ ಎಂಬುವವರ ಮಗ ಧೀರಜ್‌ ಜೆ ಸಾಲಿಯಾನ್‌(28) ರವರು ಮಂಗಳೂರಿನ Prajna Infratech pvt ltd ಕಂಪನಿಯಲ್ಲಿ ಸಬ್‌ ಕಾಂಟ್ರ್ಯಾಕ್ಟರ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ.  ದಿನಾಂಕ 30/04/2023 ರಂದು ರಾತ್ರಿ 09:30 ಗಂಟೆಯಿಂದ ದಿನಾಂಕ 01/05/2023 ರಂದು ಬೆಳಿಗ್ಗೆ 10:00 ಗಂಟೆಯ ನಡುವಿನ ಸಮಯದಲ್ಲಿ ಧೀರಜ್‌ ಜೆ ಸಾಲಿಯಾನ್‌ ರವರು ಯಾವುದೋ ಕಾರಣಕ್ಕೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಶೀಂಬ್ರಾ ಬ್ರಿಡ್ಜ್‌ ಸಮೀಪ ಸ್ವರ್ಣ ನದಿಯ ನೀರಿನ ಬಳಿ ಹೋದವರು ಆಕಸ್ಮಿಕವಾಗಿ ಕಾಲು ಜಾರಿ ನದಿಯ ನೀರಿಗೆ ಬಿದ್ದು ಮೃತಪಟ್ಟಿರುವುದಾಗಿದೆ . ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 18/2023 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿದಾರರಾದ ಮಧುಸೂದನ ಪ್ರಭು (59), ತಂದೆ: ದಿ. ರಾಮದಾಸ ಪ್ರಭು, ವಾಸ: ಮನೆ ನಂಬ್ರ 7-227 2ನೇ ಕ್ರಾಸ್‌ ಸಗ್ರಿ ಚಕ್ರತೀರ್ಥ ಶಿವಳ್ಳಿ ಗ್ರಾಮ ಕುಂಜಿಬೆಟ್ಟು ಪೋಸ್ಟ್.‌ ಉಡುಪಿ ತಾಲೂಕು ಮತ್ತು ಜಿಲ್ಲೆ ಇವರ ತಮ್ಮ ದಾಮೋದರ ಪ್ರಭು (53) ಎಂಬುವವರು ಡ್ರೈವರ್‌ ಕೆಲಸ ಮಾಡಿಕೊಂಡಿದ್ದು,  ದಿನಾಂಕ 01/05/2023 ರಂದು ಬೆಳಿಗ್ಗೆ 10:30 ಗಂಟೆಯಿಂದ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಚಕ್ರತೀರ್ಥ 2 ನೇ ಕ್ರಾಸ್‌ ನಲ್ಲಿ ಮನೆಯ ಸಮೀಪ ದಾಮೋದರ ಪ್ರಭು ರವರು ಮರಕ್ಕೆ ಏಣಿಯನ್ನು ಹಾಕಿ ಮರವನ್ನು ಹತ್ತಿ ಕಬ್ಬಿಣದ ಕೊಕ್ಕೆಯಿಂದ ಮರದಲ್ಲಿರುವ ಹೆಬ್ಬಲಸನ್ನು ತೆಗೆಯುತ್ತಿರುವ ಸಮಯ ಕಬ್ಬಿಣಕದ ಕೊಕ್ಕೆಯು ಮರದ ಸಮೀಪವಿದ್ದ ವಿದ್ಯುತ್‌ ತಂತಿಗೆ ತಾಗಿದ ಪರಿಣಾಮ ದಾಮೋದರ ಪ್ರಭು ಇವರಿಗೆ ಕರೆಂಟ್‌ ಶಾಕ್‌ ಹೊಡೆದು ಮರದಿಂದ ನೆಲಕ್ಕೆ ಬಿದ್ದು ಅವರನ್ನು ಕೆ ಎಂ ಸಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯಾಧಿಕಾರಿಗಳು 12:30 ಗಂಟೆಗೆ ಪರೀಕ್ಷಿಸಿ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 19/2023 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಸುರೇಶ (39), ತಂದೆ: ಬಸವ ಕುಲಾಲ್, ವಾಸ: ಸುಗೋಡಿ ಹಾರ್ದಳ್ಳಿ-ಮಂಡಳ್ಳಿ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 28/04/2023 ರಂದು 18:00 ಗಂಟೆಗೆ ಹಾರ್ದಳ್ಳಿ-ಮಂಡಳ್ಳಿ ಗ್ರಾಮದ ಬಿದ್ಕಲಕಟ್ಟೆಯ ರಿಕ್ಷಾ ನಿಲ್ದಾಣಲ್ಲಿ ಇರುವಾಗ ಆರೋಪಿ ಗುರುರಾಜ ಕುಲಾಲ್  ಬಂದು ಅವಾಚ್ಯ ಶಬ್ದಗಳಿಂದ ಬೈದಿದ್ದು ಹಾಗೂ ಅದೇ ದಿನ ರಾತ್ರಿ ಪಿರ್ಯಾದಿದಾರರಿಗೆ ಕರೆ ಮಾಡಿ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿರುತ್ತಾರೆ. ಪಿರ್ಯಾದಿದಾರರು ಆರೋಪಿ ಸರಿ ಆಗಬಹುದು ಎಂದು ತಿಳಿದು ಠಾಣೆಗೆ ಬಂದು ದೂರು ನೀಡದೇ ಸುಮ್ಮನೇ ಇದ್ದರು.  ನಂತರ ದಿನಾಂಕ 30/04/2023 ರಂದು18:30 ಗಂಟೆಗೆ ಹಾರ್ದಳ್ಳಿ-ಮಂಡಳ್ಳಿ ಗ್ರಾಮದ ಬಿದ್ಕಲಕಟ್ಟೆಯ ಬ್ರಹ್ಮಲಿಂಗೇಶ್ವರ ಮೆಡಿಕಲ್ ಬಳಿ ಪಿರ್ಯಾದಿದಾರರು ರಿಕ್ಷಾ ದಲ್ಲಿ ಕುಳಿತಿರುವಾಗ ಆರೋಪಿಯು ಆತನ ಪಿಕಪ್ ವಾಹನವನ್ನು ರಿಕ್ಷಾಗೆ ಅಡ್ಡಲಾಗಿ ಇಟ್ಟು ಗಾಡಿಯಿಂದ ಇಳಿದು ಅವಾಚ್ಯವಾಗಿ ಬೈದು ಬೆದರಿಕೆ ಹಾಕಿದ್ದು,  ಪಿರ್ಯಾದಿದಾರರು ರಿಕ್ಷಾವನ್ನು ತೆಗೆದುಕೊಂಡು ಅಲ್ಲಿಂದ ಹೋರಡುವಾಗ ಆರೋಪಿಯು ಪಿಕ್ ಅಪ್ ವಾಹನವನ್ನು ಅರೀ ವೇಗವಾಗಿ ಚಲಾಯಿಸಿಕೊಂಡು ಬಂದು ರಿಕ್ಷಾಕ್ಕೆ ಡಿಕ್ಕಿ ಹೊಡೆಸಿರುತ್ತಾರೆ. ರಿಕ್ಷಾದ ಒಳಗಡೆ ಇದ್ದ ಪಿರ್ಯಾದಿದಾರರು ಹೊರಗೆ ಎಸೆಯಲ್ಪಟ್ಟು ನೆಲಕ್ಕೆ ಬಿದ್ದಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 76/2023  ಕಲಂ: 504, 506, 341, 323, 427 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಪಿರ್ಯಾದಿದಾರರಾದ ಮಹೇಂದ್ರ ಕುಮಾರ್‌ (41), ತಂದೆ: ದಿ. ಪದ್ಮನಾಭ, ವಾಸ: ಕಲುವಿನ ಬೆಟ್ಟು, ನೀಲಾವರ ಗ್ರಾಮ, ಬ್ರಹ್ಮಾವರ ತಾಲೂಕು ಇವರು ನೀಲಾವರ ಗ್ರಾಮ ಪಂಚಾಯತ್‌ ನ ಅಧ್ಯಕ್ಷರಾಗಿದ್ದು, ಅವರು ಈ ಹಿಂದೆ ತಮ್ಮ ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಬರುವ ನಿವಾಸಿಗಳಾದ ನರಸಿಂಹ ಶೆಟ್ಟಿ ಮತ್ತು ವಿಠಲ ಮರಕಾಲ  ರವರಿಗೂ ಹಾಗೂ ಆರೋಪಿ ಪ್ರಸನ್ನ ಪುತ್ರಾಯ, ಎಳ್ಳಂಪಳ್ಳಿ, ನೀಲಾವರ ಗ್ರಾಮ ಇವರ ಮಧ್ಯೆ ತಕರಾರು ಇರುವ ದಾರಿಯ ಮತ್ತು ಜಾಗದ ವಿಷಯದಲ್ಲಿ ಪಿರ್ಯಾದಿದಾರರು ರಾಜಿ ಪಂಚಾಯಿತಿ ಮಾಡಿದ್ದು, ಇದೇ ವಿಷಯದಲ್ಲಿ ಆರೋಪಿಯು ಪಿರ್ಯಾದಿದಾರರ ಮೇಲೆ ಅಸಮಧಾನಗೊಂಡಿದ್ದು. ದಿನಾಂಕ 26/04/2023 ರಂದು ಮಧ್ಯಾಹ್ನ 03:30 ಗಂಟೆಗೆ ಪಿರ್ಯಾದಿದಾರರು ನೀಲಾವರ ಗ್ರಾಮದ  ಪಂಚಮಿಕಾನ ಜೋಡುಕಟ್ಟೆ  ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಆರೋಪಿಯು ಅಡ್ಡಕಟ್ಟಿ, ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು, ಇನ್ನೂ ಮುಂದಕ್ಕೆ ನಮ್ಮ ಜಾಗದ ತಕರಾರಿನ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿಕೊಂಡು ಬಂದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 92/2023 ಕಲಂ: 341, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ:  ಪಿರ್ಯಾದಿದಾರರಾದ ಗುರುರಾಜ ಕುಲಾಲ್ (34), ತಂದೆ: ಬಾಡು ಕುಲಾಲ್, ವಾಸ: ಬೆಮ್ಮರ್ಕಿ ಯಡ್ಯಾಡಿ-ಮತ್ಯಾಡಿ  ಗ್ರಾಮ ಬ್ರಹ್ಮಾವರ ತಾಲೂಕು ಇವರು ದಿನಾಂಕ 30/04/2023 ರಂದು 18:30 ಗಂಟೆಗೆ ಹಾರ್ದಳ್ಳಿ-ಮಂಡಳ್ಳಿ ಗ್ರಾಮದ ಬಿದ್ಕಲಕಟ್ಟೆ ಯ ಬ್ರಹ್ಮಶ್ರೀ ಮೆಡಿಕಲ್ ಬಳಿ ಪಿಕಪ್ ವಾಹನವನ್ನು ಇಟ್ಟುಕೊಂಡು ಪರಿಚಯದ ನಾಗಪ್ಪ ಎಂಬುವವರೊಂದಿಗೆ ಮಾತನಾಡಿಕೊಂಡಿರುವಾಗ ಪಿರ್ಯಾದಿದಾರರ ಪರಿಚಯದ ಸುರೇಶ, ಕೃಷ್ಣ ಮತ್ತು ಶೇಖರ ಎಂಬುವವರು ಒಂದು ರಿಕ್ಷಾದಲ್ಲಿ ಬಂದು ಪಿರ್ಯಾದಿದಾರರು ನಿಲ್ಲಿಸಿಕೊಂಡಿದ್ದ ಪಿಕಪ್ ಗೆ ಅಡ್ಡ ಇಟ್ಟು  ಅವಾಚ್ಯವಾಗಿ ಬೈದು ಪಿರ್ಯಾದಿದಾರರ ಅಂಗಿಯ ಕಾಲರನ್ನು ಹಿಡಿದು ಕೈಯಿಂದ ಹೊಡೆದಿದ್ದು, ಆ ಸಮಯ ಜೊತೆಯಲ್ಲಿದ್ದ ನಾಗಪ್ಪರವರು ಯಾಕೆ ಸುಮ್ಮನೆ ಗಲಾಟೆ ಮಾಡುತ್ತೀರಿ ಎಂದು ಕೇಳಿದ್ದು  ಆಗ ಆರೋಪಿಗಳಾದ ಸುರೇಶ, ಕೃಷ್ಣ ಮತ್ತು ಶೇಖರ ರವರು  ಬೈದು, ಸುರೇಶನು ಪಿರ್ಯಾದಿದಾರರ ಕೈಯ್ಯಲ್ಲಿದ್ದ ಪಿಕಪ್ ವಾಹನದ ಕೀ ಯನ್ನು ತೆಗೆದುಕೊಳ್ಳಲು ಪಿರ್ಯಾದಿದಾರರ ಬಳಿ ಬಂದಿದ್ದು ಹಾಗೂ ರಿಕ್ಷಾದಲ್ಲಿರುವ ಕಬ್ಬಿಣದ ರಾಡನ್ನು ತೆಗೆದುಕೊಂಡು ಬಂದು  ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 74/2023  ಕಲಂ: 323, 341, 504, 506(2)  ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 02-05-2023 10:01 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080