ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 01/05/2023 ರಂದು ರಾತ್ರಿ 23:30 ಗಂಟೆಗೆ ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ಪರಪ್ಪಾಡಿ ಎಂಬಲ್ಲಿ ಹಾದು ಹೋಗುವ ಕಾರ್ಕಳ-ಧರ್ಮಸ್ಥಳ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಪಿರ್ಯಾದಿ: ಶಾಹಿಲ್ ಅಹಮ್ಮದ್, (23), ತಂದೆ: ಅಬ್ದುಲ್ ಜಲೀಲ್, ವಾಸ: ಬದ್ರಿಯಾ ಮಂಜಿಲ್, ನಿಟ್ಟೆ ಪ್ರಥಮಿಕ ಆರೋಗ್ಯ ಕೇಂದ್ರದ ಬಳಿ, ನಿಟ್ಟೆ ಅಂಚೆ ಮತ್ತು ಗ್ರಾಮ ಇವರ ತಂದೆ KA-19-D-0060 ನೇ ನಂಬ್ರದ ಸ್ವಿಫ್ ಡಿಸೈಯರ್ ಕಾರನ್ನು ಚಲಾಯಿಸಿಕೊಂಡು ಬರುತ್ತಿರುವಾಗ KA-20-ME-0383 ನೇ ಹುಂಡೈ ಕಾರಿನ ಚಾಲಕ ವಿಶ್ವಾಸ್ ಕಾಮತ್ ಆತನ ಬಾಬ್ತು ಕಾರನ್ನು ಹೊಸ್ಮಾರು ಕಡೆಯಿಂದ ಬಜಗೋಳಿ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಪಿರ್ಯಾದಿದಾರರ ತಾಯಿಯ ಬಲಬದಿಯ ಭುಜ ಮತ್ತು ಬೆನ್ನಿಗೆ ಗುದ್ದಿದ ನೋವು ಹಾಗೂ ಪಿರ್ಯಾದಿದಾರರ ಬೆನ್ನಿಗೆ ಗುದ್ದಿದ ನೋವು ಹಾಗೂ ಆರೋಪಿ ಕಾರಿನಲ್ಲಿದ್ದವರಿಗೂ ಚಿಕ್ಕ ಪುಟ್ಟ ಗಾಯವಾಗಿದ್ದು. ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ. ಈ  ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 60/2023 ಕಲಂ 279, 337 ಐಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಶಿರ್ವ: ಪಿರ್ಯಾದಿ: ಅಜಿತ್ (37)  ತಂದೆ: ಭಾಸ್ಕರ, ವಾಸ: ಪೆರ್ನಾಲ್‌ಫಾತಿಮಾ  ಚರ್ಚ್ ಬಳಿ, ಪೆರ್ನಾಲ್‌, ಪಿಲಾರು ಗ್ರಾಮ ಇವರು ದಿನಾಂಕ 01.05.2023  ರಂದು ತನ್ನ  ಹೆಂಡತಿ  ಬಾಬ್ತು KA20EC1914 ನೇ ದ್ವಿಚಕ್ರ ವಾಹನದಲ್ಲಿ  ಶಿರ್ವ  ಪೇಟೆಯಿಂದ ಕೆಲಸ  ಮುಗಿಸಿಕೊಂಡು ತನ್ನ ಮನೆಯಾದ  ಪಿಲಾರ್‌ಕಡೆಗೆ ಸಾರ್ವಜನಿಕ  ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಶಿರ್ವ  ಗ್ರಾಮದ  ಶಿರ್ವ ಪದವು ಜೀವನ್‌ರವರ  ಮನೆ ಬಳಿ  ಸಮಯ ಸುಮಾರು ಸಂಜೆ 3:20 ಗಂಟೆಗೆ  ತಲುಪುವಾಗ ಹಿಂದುಗಡೆಯಿಂದ ಒಂದು  ಓಮ್ನಿಕಾರು ಓವರ್‌ಟೇಕ್‌ಮಾಡುವ  ಭರದಲ್ಲಿ ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ  ದ್ವಿಚಕ್ರ ವಾಹನದ ಬಲ ಬದಿಗೆ  ಡಿಕ್ಕಿಹೊಡೆದ ಪರಿಣಾಮ ನಿಯಂತ್ರಣ  ತಪ್ಪಿ ದ್ವಿಚಕ್ರ  ವಾಹನ  ಸಮೇತ ರಸ್ತೆಗೆ  ಬಿದ್ದ  ಪರಿಣಾಮ ಪಿರ್ಯಾದಿದಾರರ ಬಲಕಾಲಿನ ಕಿರುಬೆರಳು, ಮೊಣಗಂಟಿಗೆ, ತೊಡೆಗೆ ಹಾಗೂ ಬಲಕೈಗೆ ತರಚಿದ ಗಾಯವಾಗಿರುತ್ತದೆ.  ಅಪಘಾತ ಪಡಿಸಿದ ಒಮ್ನಿ ಕಾರು ಮುಂದಕ್ಕೆ  ಹೋಗಿ ನಿಂತಿದ್ದು, ಕಾರಿನ ನಂಬ್ರ  ನೋಡಲಾಗಿ KA19N3935 ಆಗಿದ್ದು, ನನ್ನನ್ನು  ಅಲ್ಲಿ ಸೇರಿದ  ಸಾರ್ವಜನಿಕರು ಹಾಗೂ ಕಾರಿನ ಚಾಲಕನು ಉಪಚರಿಸಿದ್ದು, ಚಾಲಕನ ಹೆಸರು  ರಿಚರ್ಡ್‌ ಎಂಬುದಾಗಿ ತಿಳಿಯಿತು.  ಈ ಅಪಘಾತಕ್ಕೆ KA19N3935 ನೇ  ಒಮ್ನಿ ಕಾರಿನ  ಚಾಲಕನ ಅತೀ ವೇಗ  ಹಾಗೂ  ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ  41/23 ಕಲಂ 279, 337   ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 03-05-2023 10:15 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080