ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 30/04/2022  ರಂದು ರಾತ್ರಿ 8:00 ಗಂಟೆಗೆ,  ಕುಂದಾಪುರ  ತಾಲೂಕಿನ, ಹಂಗಳೂರು  ಗ್ರಾಮದ,  ವಿನಾಯಕ  ಟಾಕೀಸ್‌ ಬಳಿ ಪೂರ್ವ ಬದಿಯ  NH 66 ರಸ್ತೆಯಲ್ಲಿ ಆಪಾದಿತ  ರಂಗನಾಥ  ಪೈ  KA-20-MA-7891 ನೇ ಕಾರನ್ನು ಕುಂದಾಪುರ ಕಡೆಯಿಂದ  ಉಡುಪಿ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ  ಚಲಾಯಿಸಿ ಕೊಂಡು ಬಂದು NH 66 ರಸ್ತೆ ದಾಟಲು ನಿಂತುಕೊಂಡಿದ್ದ  ಸುಭಾಸ್ ರವರಿಗೆ ಡಿಕ್ಕಿ ಹೊಡೆದ ಪರಿಣಾಮ, ಸುಭಾಸ ರವರ ತಲೆಗೆ, ಕಾಲುಗಳಿಗೆ  ಒಳಜಖಂ ಉಂಟಾದ ಗಾಯ ಹಾಗೂ  ಮೈ ಕೈಗೆ  ತರಚಿದ ಗಾಯವಾಗಿ  ಕೊಟೇಶ್ವರ  ಸರ್ಜನ್‌ ಆಸ್ಪತ್ರೆ ಹಾಗೂ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್‌‌ಲಾಕ್‌‌ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 58/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಶಿರ್ವಾ: ಪಿರ್ಯಾದಿದಾರರಾದ ಶ್ರೀಮತಿ ರಾಧಿಕಾ (29), ಗಂಡ:ಆನಂದ, ವಾಸ:ರಾಧಾಕೃಷ್ಣ ರವರ ಬಾಡಿಗೆ ಮನೆ, ಅರಸೀಕಟ್ಟೆ, ಗಿರಿನಗರ, ಕುರ್ಕಾಲು ಗ್ರಾಮ, ಕುಂಜಾರುಗಿರಿ ಅಂಚೆ,  ಕಾಪು ತಾಲೂಕು ಇವರ ತಂದೆ ನಟರಾಜ (62) ರವರು ಮದ್ಯಪಾನ ಸೇವಿಸುವ ಚಟಹೊಂದಿದ್ದು, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಈ ಹಿಂದೆ ಹಲವಾರು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದವರು, ದಿನಾಂಕ 30/4/2022 ರಂದು ಮನೆಯೊಳಗಡೆ ಯಾರೂ ಇಲ್ಲದ ಸಮಯ ಮೈಗೆ ಸೀಮೆಎಣ್ಣೆ ಸುರಿದುಕೊಂಡಿದ್ದು ನಂತರ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 01/5/2022 ರಂದು ಬೆಳಿಗ್ಗೆ 09.25 ಗಂಟೆಗೆ ಮೃತಪಟ್ಟಿರುವುದಾಗಿದೆ.ಈ ಬಗ್ಗೆ ಶಿರ್ವಾ ಪೊಲೀಸ ಠಾಣೆ ಯುಡಿಆರ್ ಕ್ರಮಾಂಕ 10/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ವಂಚನೆ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ  ಶ್ರೀಮತಿ ಭಾಗೀರಾಥಿ (52), ಗಂಡ: ನಾರಾಯಣ, ವಾಸ: ನಂ. 1-122, ಆಸ್ರಯ ಕಾಲೋನಿ ಸೂಡ, ಸೂಡಾ ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರ ತಂದೆ ಮಾಯಿಲ ಅಸ್ಲರ್ ಇವರಿಗೆ ಕಾರ್ಕಳ ತಾಲೂಕು ಸೂಡಾ ಗ್ರಾಮದಲ್ಲಿ ಸರ್ವೆ ನಂಬ್ರ 224/1 ರಲ್ಲಿ 2 ಎಕ್ರೆ 26 ಸೆಂಟ್ಸ್ ಜಾಗ ಸಾಗುವಳಿ ಚೀಟಿ ಮೂಲಕ ಮಂಜೂರಾಗಿದ್ದು, ಮಾಯಿಲ ಅಸ್ಲರ್ ರವರು ಜೀವಿತ ಕಾಲದಲ್ಲಿ ಜಾಗವನ್ನು ಯಾವುದೇ ದಾಖಲೆಗಳನ್ನು ಮಾಡಿಸದೇ ದಿನಾಂಕ 10/05/1979 ರಂದು ಮೃತಪಟ್ಟಿದ್ದು, ಪಿರ್ಯಾದಿದಾರರ ತಮ್ಮ ಶಂಕರ ಮೇರ ಪಿರ್ಯಾದಿದಾರರಿಗೆ ಮತ್ತು ಅವರ ಉಳಿದ ಸಹೋದರಿಯರಾದ ಭವಾನಿ, ಗುಲಾಬಿ, ವಿನೋದ ಇವರುಗಳಿಗೆ ಮೋಸ ಮತ್ತು  ವಂಚನೆ ಎಸಗುವ ಉದ್ದೇಶದಿಂದ ತನ್ನ ತಂದೆ, ತಾಯಿಯವರಿಗೆ ತಾನೊಬ್ಬನೇ ವಾರಸುದಾರರ ಎಂದು ಊರಿನ ಸ್ಥಳೀಯರ ಜೊತೆ ಸೇರಿ ಸುಳ್ಳು ದಾಖಲೆಯನ್ನು ಸೃಷ್ಠಿಸಿ ಪಿರ್ಯಾದಿದಾರರ ಮತ್ತು ಅವರ ಸಹೋದರಿಯರ ಹಕ್ಕಿನ ಆಸ್ತಿಯನ್ನು ಲಪಟಾಯಿಸಿ ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲಿಸ್ ಠಾಣೆ ಅಪರಾಧ ಕ್ರಮಾಂಕ 51/2022 ಕಲಂ: 465, 406, 468 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಇನಾಯತ್ (32), ತಂದೆ: ಬಾಬ್ಜಾನ್, ವಾಸ: ಬಂಗ್ಲೆಗುಡ್ಡೆ ಮನೆ, ಕಸಬಾ ಗ್ರಾಮ,  ಕಾರ್ಕಳ ತಾಲೂಕು  ಇವರ ಸಂಬಂಧಿ ಅಲ್ತಾಫ್ ಎಂಬುವವರ ಹೆಂಡತಿ ಆಸ್ಮಾ ಎಂಬುವವರು ತನ್ನ ಹೆಸರಿನಲ್ಲಿ ಬಜಾಜ್ ಫೈನಾನ್ಸ್ ನಿಂದ ಸಾಲ ತೆಗೆದುಕೊಂಡು ದೊಡ್ಡದಾದ ಟಿ ವಿ ತೆಗೆದುಕೊಡುತ್ತೇನೆ ಕಂತನ್ನು ಕಟ್ಟುತ್ತಾ ಬನ್ನಿ ಎಂದು ಹೇಳಿದ್ದು ಪಿರ್ಯಾದಿದಾರರು ಒಪ್ಪಿ ಟಿವಿಯನ್ನು ಖರೀದಿಸಿ ಮನೆಯಲ್ಲಿ ಇಟ್ಟಿರುತ್ತಾರೆ. ದಿನಾಂಕ 01/05/2022 ರಂದು ಮಧ್ಯಾಹ್ನ 14:40 ಗಂಟೆಗೆ ಅಪಾದಿತರಾದ ಅಲ್ತಾಫ್, ಅದ್ನಾನ್, ಅತೀಫ್, ಅಜೀಮ್ ಮತ್ತು ಶಬೀರ್‌ರವರು ಸೇರಿಕೊಂಡು ಮಾರಕಾಯುಧ ಹಿಡಿದುಕೊಂಡು ಕಾರ್ಕಳ ಕಸಬಾದ ಬಂಗ್ಲೆಗುಡ್ಡೆಯಲ್ಲಿರುವ ಪಿರ್ಯಾದಿದಾರರ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಅಲ್ತಾಫ್ ಶಬೀರ್ ಹಾಗೂ ಅಜೀಮ್‌ರವರು ಪಿರ್ಯಾದಿದಾರರನ್ನುದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಕರೆದಾಗ ಪಿರ್ಯಾದಿದಾರರ ತಾಯಿ ಬೀಬಿ ಭಾನು(57) ರವರು ಏನೆಂದು ವಿಚಾರಿಸಲು ಮನೆಯೊಳಗಿನಿಂದ ಹೊರಗೆ ಬಂದಾಗ ಅಪಾದಿತರಾದ ಅಲ್ತಾಫ್, ಅದ್ನಾನ್ ಹಾಗೂ ಅತೀಫ್‌ರವರು  ಕೈಯಿಂದ ಮಣ್ಣನ್ನು  ಪಿರ್ಯಾದಿದಾರರ ತಾಯಿಯ ಮೇಲೆ ಎಸೆದು ಅಲ್ತಾಫ್ ಮತ್ತು ಅದ್ನಾನ್‌ರವರು ಅವರ ಬಲಕೈಯನ್ನು ಹಿಡಿದು ತಿರುಗಿಸಿ ಹಲ್ಲೆ ಮಾಡಿದ್ದು, ಅವರು ಬೊಬ್ಬೆ ಹಾಕಿದಾಗ ಪಿರ್ಯಾದಿದಾರರು ಅವರಿಂದ ತಾಯಿಯನ್ನು ಬಿಡಿಸಲು ಬಂದಾಗ ಅಜೀಮ್  ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡ್‌ನಿಂದ ಹಣೆಗೆ ಮತ್ತು ಮೂಗಿಗೆ ಹೊಡೆದ ಪರಿಣಾಮ ಮೂಗಿನಿಂದ  ರಕ್ತ ಬಂದಿದ್ದು ಶಬೀರನು ನೆಲಕ್ಕೆ  ದೂಡಿ ಹಾಕಿ  ಎರಡೂ ಕಾಲುಗಳಿಗೆ ತುಳಿದಿರುತ್ತಾನೆ. ಗಾಯಗೊಂಡ ಪಿರ್ಯಾದಿದಾರರನ್ನು ಮತ್ತು ಬಿಬಿ ಭಾನುರವರನ್ನು ಪಿರ್ಯಾದಿದಾರರ ಬಾವ ಮಹಮ್ಮದ್ ಶಫಿರವರು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ಇಬ್ಬರನ್ನೂ ಒಳರೋಗಿಯಾಗಿ ದಾಖಲಿಸಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 66/2022 ಕಲಂ:143, 147, 148, 447, 354, 323, 324, 504,  ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಅಜೆಕಾರು: ದಿನಾಂಕ 01/05/2022 ರಂದು 21:00 ಗಂಟೆಗೆ ಪಿರ್ಯಾದಿದಾರರಾದ ಕರುಣಾಕರ ರಾವ್ (46), ತಂದೆ: ದಿ. ಸಂಜೀವ, ವಾಸ: ಬೋರ್ಲುಬೆಟ್ಟು ಹೌಸ್, ಅಂಡಾರು ಗ್ರಾಮ, ಹೆಬ್ರಿ ತಾಲೂಕು ಇವರು ತನ್ನ ದೊಡ್ಡಪ್ಪನ ಮಗ ರತ್ನಾಕರ ರಾವ್ ಹಾಗೂ ತನ್ನ ಸ್ನೇಹಿತ ರಾಜೇಶನೊಂದಿಗೆ ಹೆಬ್ರಿ ತಾಲೂಕು ಅಂಡಾರು ಗ್ರಾಮದ ಬೋರ್ಲುಬೆಟ್ಟು ಹೌಸ್ ಎಂಬಲ್ಲಿನ ತನ್ನ  ಮನೆಯಲ್ಲಿ ಸಾರಾಯಿ ಸೇವಿಸುತ್ತಿದ್ದ ಸಮಯ ಆರೋಪಿತ ರತ್ನಾಕರ ರಾವ್ ಕೆಟ್ಟದಾಗಿ ಮಾತನಾಡಿದ್ದು, ಪಿರ್ಯಾದಿದಾರರು ಆರೋಪಿತನಲ್ಲಿ ನೀನ್ಯಾಕೆ ಕೆಟ್ಟದಾಗಿ ಮಾತನಾಡುತ್ತೀಯಾ ಎಂದು ಕೇಳಿದಾಗ ಆರೋಪಿತನು ಒಮ್ಮೆಲೇ ಖಾಲಿ ಸರಾಯಿ ಬಾಟಲಿಯನ್ನು ಒಡೆದು ಪಿರ್ಯಾದಿದಾರರನ್ನು ನೆಲಕ್ಕೆ ಬೀಳಿಸಿ ಬಾಟಲಿಯಿಂದ ಕುತ್ತಿಗೆ, ಗಲ್ಲದ ಎಡಭಾಗ, ಎದೆಯ ಎಡಭಾಗ ಹಾಗೂ ಬೆನ್ನಿಗೆ ಹಲ್ಲೆ ಮಾಡಿ ರಕ್ತಗಾಯಗೊಳಿಸಿ, ನಿನ್ನನ್ನು ಈಗಲೇ ಕೊಂದು ಹಾಕುತ್ತೇನೆ ಎಂಬುದಾಗಿ ಬಾಟಲಿ ಚೂರಿನಿಂದ ಪಿರ್ಯಾದಿದಾರರ ಕುತ್ತಿಗೆಗೆ ಹಲ್ಲೆ ಮಾಡಲು ಬಂದಾಗ ಶ್ರೀಮತಿ. ನಯನ ಹಾಗೂ ರಾಜೇಶ್‌ರವರು ಸೇರಿ ಆರೋಪಿಯನ್ನು ತಡೆದು ಬೊಬ್ಬೆ ಹಾಕಿದಾಗ ಆರೋಪಿತನು ಬಾಟಲಿ ಚೂರನ್ನು ಅಲ್ಲಿಯೇ ಬಿಸಾಡಿ ಓಡಿ ಹೋಗಿರುವುದಾಗಿ ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 15/2022  ಕಲಂ: 324, 307, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 02-05-2022 09:47 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080