ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ಇಲಿಯಾಸ್ ಪಾರೆ, (42) ತಂದೆ: ದಿ. ಕೆ.ಎಂ.ಅಬ್ದುಲ್ ಗೈಸ್, ವಾಸ: ಅರಾಫಾ ರೆಸಿಡೆನ್ಸಿ, ಅಲ್‌‌ಇಹ್ಸಾನ್ ಶಾಲೆಯ ಬಳಿ, ಮೂಳೂರು ಗ್ರಾಮ, ಕಾಪು ತಾಲೂಕು, ಇವರು ದಿನಾಂಕ 01/05/2022 ರಂದು ಅವರ ಕುಟುಂಬದವರೊಂದಿಗೆ ಮಂಗಳೂರಿಗೆ ಹೋಗಿ ಬಟ್ಟೆ ಖರೀದಿ ಮಾಡಿಕೊಂಡು ವಾಪಾಸ್ಸು ಬರುತ್ತಾ, ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿಯ ಆಪ್ನಾ ಸೂಪರ್ ಮಾರ್ಕೆಟ್‌‌ನಲ್ಲಿ ಮನೆಗೆ ಅಗತ್ಯದ ದಿನಸಿ ಸಾಮಗ್ರಿಗಳನ್ನು ತೆಗೆದುಕೊಳ್ಳಲು ಹೋಗಿದ್ದು, ಇಲಿಯಾಸ್‌ ಪಾರೆ ಇವರ ಮಗ ಮೊಹಮ್ಮದ್ ಇನಾಜ್ (17) ಎಂಬುವರು ಪಡುಬಿದ್ರಿ ಪೇಟೆಯಲ್ಲಿರುವ ಬೇಕರಿಯೊಂದರಲ್ಲಿ ಬೇಕರಿ ಸಾಮಗ್ರಿಗಳನ್ನು ತೆಗೆದುಕೊಂಡು ಪಡುಬಿದ್ರಿಯ ಪೇಟೆಯಿಂದ ಆಪ್ನಾ ಸೂಪರ್ ಮಾರ್ಕೆಟ್ ಕಡೆಗೆ ಸರ್ವಿಸ್ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯ ಸುಮಾರು 20:45 ಗಂಟೆಗೆ KA-19-EB-8169 ನೇ ನಂಬ್ರದ ಹೀರೋ ಹೊಂಡ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ಸವಾರ ಶಿವರಾಜ, ಕೊಪ್ಪಳ ಜಿಲ್ಲೆ ಎಂಬಾತನು ತನ್ನ ಮೋಟಾರ್ ಸೈಕಲ್ಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೊಹಮ್ಮದ್ ಇನಾಜ್ ರವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದಿದ್ದು, ಮೋಟಾರ್ ಸೈಕಲ್ ಸವಾರ ಕೂಡಾ ಮೋಟಾರ್‌ ಸೈಕಲ್ ಸಮೇತ ರಸ್ತೆಗೆ ಬಿದ್ದಿರುತ್ತಾನೆ. ಸದ್ರಿ ಅಪಘಾತದಿಂದ ಮೊಹಮ್ಮದ್ ಇನಾಜ್ ರವರ ಎಡ ಕಣ್ಣಿನ ಬಳಿ ಒಳ ನೋವು, ತಲೆಗೆ ತಿವ್ರ ತರಹದ ಪೆಟ್ಟಾಗಿದ್ದು, ಆರೋಪಿತನ ಎಡ ಕಾಲಿನ ಮೊಣ ಗಂಟಿಗೆ, ಮುಖಕ್ಕೆ ತರಚಿದ ಗಾಯವಾಗಿದ್ದು, ಗಾಯಾಳುಗಳಿಗೆ ಪಡುಬಿದ್ರಿಯ ಸಿದ್ದಿವಿನಾಯಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಕೊಡಿಸಿ, ನಂತರ ಮೊಹಮ್ಮದ್ ಇನಾಜ್‌ನಲ್ಲಿ ಉಡುಪಿಯ ಹೈಟೆಕ್‌ ‌ಆಸ್ಪತ್ರೆಯಲ್ಲಿ ದಾಖಲಿಸಿ, ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಒಳರೋಗಿಯಾಗಿ ದಾಖಲಿಸಿದ್ದು, ಪಿರ್ಯಾದಿದಾರರು ಗಾಯಾಳುವಿನ ಆರೈಕೆಯಲ್ಲಿದ್ದುದರಿಂದ ದೂರು ನೀಡಲು ವಿಳಂಬವಾಗಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 52/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಿರ್ವಾ: ಪಿರ್ಯಾದಿದಾರರಾದ ಪದ್ಮನಾಭ ವಿ.ಕೋಟ್ಯಾನ್‌ (47) ತಂದೆ:  ವೆಂಕಪ್ಪ  ಸಾಲಿಯಾನ್‌,  ವಾಸ: ಮನ್ನಾಲ  ಕುರ್ಕಾಲು ಗ್ರಾಮ, ಸುಭಾಸ್‌ನಗರ ಅಂಚೆ, ಕಾಪು ಇವರು ಸುಮಾರು 10 ದಿನಗಳ ಹಿಂದೆ  ಹೊಸ ಬುಲೆಟ್‌ ದ್ವಿಚಕ್ರ ವಾಹನವನ್ನು  ಖರೀದಿ ಮಾಡಿರುತ್ತಾರೆ. ಸದ್ರಿ ವಾಹನದ  ದಾಖಲಾತಿಗಳು  ಆರ್.ಟಿ.ಒ. ಕಚೇರಿಯಿಂದ ಬರಲು ಬಾಕಿ ಇರುತ್ತದೆ. ದಿನಾಂಕ 01/05/2022 ರಂದು ಸದ್ರಿ ದ್ವಿ ಚಕ್ರ  ವಾಹನದಲ್ಲಿ ಕೆಲಸ ಮುಗಿಸಿಕೊಂಡು ಕಟಪಾಡಿ-ಶಿರ್ವ ಸಾರ್ವಜನಿಕ ರಸ್ತೆಯ ಸುಭಾಸ್‌ ನಗರ ಜಂಕ್ಷನ್‌ನಿಂದ ಬಗಡಿಕಲ್‌ ಕ್ರಾಸ್  ಕಡೆಗೆ ಸವಾರಿ ಮಾಡಿಕೊಂಡು ಬರುತ್ತಾ ಹಳೆಯ ನವರಂಗ ಬಾರ್‌ ಸಮೀಪ  ಸಮಯ ಸುಮಾರು  ಬೆಳಿಗ್ಗೆ   11:00  ಗಂಟೆಗೆ  ತಲುಪುವಾಗ ಸಾರ್ವಜನಿಕ  ರಸ್ತೆಯ  ಹಿಂದಿನಿಂದ ಅಂದರೆ ಶಿರ್ವ ಕಡೆಯಿಂದ  ಕಟಪಾಡಿ  ಕಡೆಗೆ ಆರೋಪಿ ಶಶಾಂಕ ಎಂಬಾತನು KA-20 X-9669 ನೇ ಸ್ಕೂಟರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಪದ್ಮನಾಭ ವಿ.ಕೋಟ್ಯಾನ್‌ ರವರು ಸವಾರಿ ಮಾಡುತ್ತಿದ್ದ ಬುಲೆಟ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪದ್ಮನಾಭ ವಿ.ಕೋಟ್ಯಾನ್‌ ರವರು ಬುಲೆಟ್‌ ಸಮೇತ ರಸ್ತೆಗೆ ಬಿದ್ದು, ಬಲ ಕೈ ಭುಜದ ಬಳಿ ಒಳ ಜಖಂ, ಎಡ ಕಣ್ಣಿನ ಬಳಿ  ತರಚಿದ  ಗಾಯ,  ಬಲ ಕಿವಿಯ ಮೇಲ್ಗಡೆ ತರಚಿದ ಗಾಯ, ಹಾಗೂ ಬಲ ಕೈಯ ಮೊಣಗಂಟಿನ ಬಳಿ ತರಚಿದ ಗಾಯವಾಗಿರುತ್ತದೆ. ಅಪಘಾತ ಪಡಿಸಿದ ದ್ವಿಚಕ್ರ ವಾಹನ ಸವಾರನಿಗೂ ತರಚಿದ ಗಾಯವಾಗಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 22/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕುಂದಾಪುರ: ದಿನಾಂಕ 30/04/2022  ರಂದು ರಾತ್ರಿ ಸುಮಾರು 8:00 ಗಂಟೆಗೆ, ಕುಂದಾಪುರ ತಾಲೂಕಿನ, ಹಂಗಳೂರು ಗ್ರಾಮದ ವಿನಾಯಕ ಟಾಕೀಸ್‌ ಬಳಿ ಪೂರ್ವ ಬದಿಯ NH 66 ರಸ್ತೆಯಲ್ಲಿ, ಆಪಾದಿತ  ರಂಗನಾಥ  ಪೈ ಎಂಬವರು, KA-20-MA-7891 ನೇ ಕಾರನ್ನು ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ  ಚಲಾಯಿಸಿ ಕೊಂಡು ಬಂದು, NH 66 ರಸ್ತೆ ದಾಟಲು ನಿಂತುಕೊಂಡಿದ್ದ  ಸುಭಾಸನಿಗೆ ಡಿಕ್ಕಿ ಹೊಡೆದ ಪರಿಣಾಮ, ಸುಭಾಸನ ತಲೆಗೆ, ಕಾಲುಗಳಿಗೆ ಒಳಜಖಂ ಉಂಟಾದ ಗಾಯ ಹಾಗೂ ಮೈ ಕೈಗೆ ತರಚಿದ ಗಾಯವಾಗಿ ಕೊಟೇಶ್ವರ ಸರ್ಜನ್‌ ಆಸ್ಪತ್ರೆ ಹಾಗೂ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್‌‌ಲಾಕ್‌‌ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 58/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಅಸ್ವಾಭಾವಿಕ ಮರಣ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಗಗನ್ (19) ತಂದೆ: ಕಮಲಾಕ್ಷ ಕುಮಾರ ವಾಸ: ಮನೆ ನಂಬ್ರ 9-145 ಸಿಂಡಿಕೇಟ್ ಬಳಿ ಪಿತ್ರೋಡಿ ಉದ್ಯಾವರ ಗ್ರಾಮ ಉಡುಪಿ ರವರ ತಂದೆ ಕಮಲಾಕ್ಷ ಕುಮಾರ (58) ರವರಿಗೆ  ಬಿ.ಪಿ. ಶುಗರ್ ಮತ್ತು ಉಬ್ಬಸ್ ಖಾಯಿಲೆಯಿದ್ದು, ಈ ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದು, ಕಮಲಾಕ್ಷ ಕುಮಾರ ಇವರ ಮನೆಯಿಂದ ಗಗನ್‌ ರವರಿಗೆ ಫೋನ್ ಮಾಡಿ, ನಿಮ್ಮ ತಂದೆಗೆ ದಿನಾಂಕ 02/05/2022 ರಂದು 00:30 ಗಂಟೆಯ ಸಮಯಕ್ಕೆ ಉಬ್ಬಸ್ ಖಾಯಿಲೆ ಜಾಸ್ತಿಯಾಗಿ ಅಸ್ವಸ್ಥರಾಗಿ ಮಾತನಾಡದೇ ಇದ್ದು, ಅವರನ್ನು  ಉಡುಪಿ ಟಿ.ಎಮ್.ಎ. ಪೈ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು 02:10 ಗಂಟೆಗೆ ಪರೀಕ್ಷಿಸಿ ಈಗಾಗಲೇ ಮೃತ ಪಟ್ಟಿರುವುದಾಗಿ ತಿಳಿಸಿರುವುದಾಗಿ ತಿಳಿಸಿದಂತೆ ಗಗನ್‌ ರವರು ಕೂಡಲೇ ಮಾವ ಮಾಧವ ರವರೊಂದಿಗೆ ಉಡುಪಿಗೆ ಬಂದು ಉಡುಪಿ ಸರ್ಕಾರಿ ಆಸ್ಪತ್ರೆಯಲ್ಲಿರುವ ಅವರ ತಂದೆಯ ಮೃತ ಶರೀರವನ್ನು ನೋಡಿ ಗುರುತಿಸಿರುವುದಾಗಿದೆ. ಪಿರ್ಯಾದಿದಾರರ ತಂದೆಗೆ ಉಬ್ಬಸ್ ಅಥವಾ ಬೇರೆ ಯಾವುದೋ ಖಾಯಿಲೆಯಿಂದ ಮೃತ ಪಟ್ಟಿರುವುದಾಗಿ ಸಾಧ್ಯತೆ ಇರುತ್ತದೆ. ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಕಾಫು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 11/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 02-05-2022 06:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080