ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ರಾಜ್ ಕುಮಾರ್ (20) ತಂದೆ: ಮಡಿವಾಳಪ್ಪ ವಾಸ: ಹುಡ್ಗಿ ಹುಡ್ಗಿ ಗ್ರಾಮ ಹುಮ್ನಾಬಾದ್ ತಾಲೂಕು, ಬಿದರ್ ಇವರು ದಿನಾಂಕ 31/03/2022 ರಂದು ಮೊಬೈಲ್ ಟವರ್ ಕಾಮಗಾರಿ ಸಲುವಾಗಿ ಅವರ ಇಂಡಿಕಾ ಕಾರು ನಂಬ್ರ KA-20 51 D-4839 ನೇದರಲ್ಲಿ ಮಂಗಳೂರಿನಿಂದ ಭಟ್ಕಳಕ್ಕೆ ಸಂದೀಪ ಹಾಗೂ ಹರೀಶ ರೊಂದಿಗೆ ಹೊರಟು, ಸಂದೀಪನು ಕಾರನ್ನು ಚಲಾಯಿಸುತ್ತಿದ್ದು. ಆತನ ಪಕ್ಕದಲ್ಲಿ ಹರೀಶನು ಕುಳಿತುಕೊಂಡಿದ್ದು ಅವರು ರಾಷ್ಟ್ರೀಯ ಹೆದ್ದಾರಿ 66ರ ಕುಂದಾಪುರ -ಭಟ್ಕಳ ಮಾರ್ಗದ ಚತುಷ್ಫಥ ರಸ್ತೆಯಲ್ಲಿ ಕಿರಿಮಂಜೇಶ್ವರ ಗ್ರಾಮದ ನಾಗೂರು ಮಸೀದಿ ಎದುರುಗಡೆಯ ಯು ಟರ್ನ ಬಳಿ ಕಾರನ್ನು ಚಲಾಯಿಸಿಕೊಂಡು ಬರುತ್ತಿರುವಾಗ ಸಂಜೆ ಸಮಯ ಸುಮಾರು 5:30 ಗಂಟೆಗೆ ರಾಜ್ ಕುಮಾರ್ ರವರ ಎದುರುಗಡೆಯಿಂದ ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದ KA-35-8134 ನೇ ಟಿಪ್ಪರ್ ಲಾರಿ ಚಾಲಕನು ಆತನ ಟಿಪ್ಪರ್ ನ್ನು ಯಾವುದೇ ಸೂಚನೆ ನೀಡದೇ ಒಮ್ಮೇಲೆ ಬಲಕ್ಕೆ ಯು ಟರ್ನ ನತ್ತ ತಿರುಗಿಸಿದ ಪರಿಣಾಮ  ರಾಜ್ ಕುಮಾರ್ ರವರು ಸಂಚರಿಸುತ್ತಿದ್ದ ಕಾರಿನ ಚಾಲಕ ಸಂದೀಪನಿಗೆ ಕಾರಿನ ನಿಯಂತ್ರಣ ತಪ್ಪಿ ಟಿಪ್ಪರ್ ನ ಬಲ ಭಾಗಕ್ಕೆ ಹೋಗಿ ಡಿಕ್ಕಿ ಹೊಡೆದನು. ಪರಿಣಾಮ ಕಾರು ಜಖಂಗೊಂಡು, ರಾಜ್ ಕುಮಾರ್ ರವರಿಗೆ ಹಣೆಗೆ ಮತ್ತು ಕಣ್ಣಿಗೆ ರಕ್ತಗಾಯ, ಹರೀಶನಿಗೆ ತಲೆ ಹಾಗೂ ಹಣೆಗೆ ರಕ್ತಗಾಯವಾಗಿರುತ್ತದೆ. ಕಾರಿನ ಚಾಲಕ ಸಂದೀಪನಿಗೆ ಯಾವುದೇ ಗಾಯವಾಗಿರುವುದಿಲ್ಲ. ಗಾಯಾಗೊಂಡ ರಾಜ್ ಕುಮಾರ್ ರವರನ್ನು ಹಾಗೂ ಹರೀಶನನ್ನು ಟಿಪ್ಪರ್ ಚಾಲಕ ಹಾಗೂ ಇತರರು ಎತ್ತಿ ಉಪಚರಿಸಿ ಒಂದು ಅಂಬುಲೆನ್ಸ್ ವಾಹನದಲ್ಲಿ  ಕುಂದಾಪುರ  ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷೀಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಕಳುಹಿಸಿದ್ದು ಅಲ್ಲಿನ ವೈದ್ಯರು ಪರೀಕ್ಷೀಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ. ದಿನಾಂಕ 01/04/2022 ರಂದು ಬೆಳಿಗ್ಗೆ ಹರೀಶನಿಗೆ ತಲೆಯ ಒಳಭಾಗದಲ್ಲಿ ರಕ್ತಗಾಯವಾಗಿರುವುದರಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಗೆ ಕಳುಹಿಸಿಕೊಟ್ಟಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 68/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಿರ್ವಾ: ಪಿರ್ಯಾದಿದಾರರಾದ ಶೈಲೇಶ್‌ (29) ತಂದೆ: ಚಂದ್ರಶೇಖರ ಸಾಲ್ಯಾನ್‌, ವಾಸ: ಶ್ರೀಮಾತಾ ಹೌಸ್‌, ಬಲ್ಲಾಡಿ, ಶಿರ್ವ ಅಂಚೆ ಮತ್ತು ಗ್ರಾಮ, ಕಾಪು ತಾಲೂಕು, ಉಡುಪಿ ಇವರ ಮಾವ ಶಂಕರ ಮಡಿವಾಳ (55)ರವರು ವಿಪರೀತವಾಗಿ ಕುಡಿತದ ಚಟವನ್ನು ಹೊಂದಿದ್ದು. ದಿನಾಂಕ 31/03/2022  ರಂದು ಬೆಳಿಗ್ಗೆ ವಿಪರೀತವಾಗಿ ಕುಡಿದು ಶಿರ್ವ ಗ್ರಾಮದ ಶಿರ್ವ ಮಿಲನ್ ಬಾರ್‌ ಎದುರುಗಡೆ ಖಾಲಿ ಜಾಗದಲ್ಲಿ ಮಲಗಿರುವುದಾಗಿ ಸಾರ್ವಜನಿಕರು ಶೈಲೇಶ್‌ ರವರಿಗೆ  ಸಾಯಂಕಾಲ 06:30 ಗಂಟೆಗೆ ತಿಳಿಸಿದ್ದು, ಶೈಲೇಶ್‌ ರವರು ಬಂದು ನೋಡಲಾಗಿ ಶಂಕರ ಮಡಿವಾಳ (55) ರವರು ಮೃತಪಟ್ಟಿರುತ್ತಾರೆ. ದಿನಾಂಕ 31/03/2022 ರಂದು ಬೆಳಿಗ್ಗೆ 7:30 ಗಂಟೆಯಿಂದ ಸಾಯಂಕಾಲ 6:30 ಗಂಟೆಯ ನಡುವಿನ ಅವಧಿಯಲ್ಲಿ ಶಿರ್ವ ಮಿಲನ್‌ಬಾರ್‌ ಎದುರುಗಡೆ ವಿಪರೀತವಾಗಿ ಕುಡಿದು ಮಲಗಿದವರು ಹೃದಯಾಘಾತದಿಂದ ಮೃತಪಟ್ಟಿರುತ್ತಾರೆ. ಸದ್ರಿಯವರ ಮರಣದಲ್ಲಿ ಬೇರೆ  ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 06/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿದಾರರಾದ ಶ್ರೀಮತಿ ಅಕ್ಕಮ್ಮ (70) ಗಂಡ: ದಿ|| ಚಂದು ನಾಯ್ಕ್  ವಾಸ: ‘ಶ್ರೀದೇವಿ ನಿಲಯ’ , ಮುತ್ತುರ್ಮೆ  ದರ್ಖಾಸು, ಪೆರ್ಡೂರು ಗ್ರಾಮ ಉಡುಪಿ ಇವರ ಕೊನೆಯ ಮಗನಾದ ಕುಶಲ್ ನಾಯ್ಕ್ ನು ದಿನಾಂಕ 01/04/2022 ರಂದು ಬೆಳಿಗ್ಗೆ 8:30 ಗಂಟೆಗೆ ಅತನ ಮೋಟಾರು ಸೈಕಲ್‌ ನಂಬ್ರ  KA-20-X-4464 ನೇದರಲ್ಲಿ  ಮನೆಯ  ಹತ್ತಿರ  ಬಂದು ಶ್ರೀಮತಿ ಅಕ್ಕಮ್ಮ ರವರನ್ನು ಉದ್ದೇಶಿಸಿ ನೀನು ಇಲ್ಲಿ ಇರುವುದು ಬೇಡ ಈ ಮನೆ ನನ್ನ ಪಾಲಿಗೆ ಬರುತ್ತದೆ. ನೀನು ಈ ಮನೆಯನ್ನು ಬಿಟ್ಟು ಹೋಗಬೇಕು’’  ಎಂದು ಹೇಳಿ ಅಂಗಳದಲ್ಲಿದ್ದ  ದೊಣ್ಣೆಯನ್ನು ಹಿಡಿದುಕೊಂಡು ಶ್ರೀಮತಿ ಅಕ್ಕಮ್ಮ ರವರಿಗೆ ಹೊಡೆದು ಹಾಗೂ ಅವಾಚ್ಯವಾಗಿ ಬೈದು ಅವರನ್ನು ಹಿಡಿದು ಎಳೆದಾಡಿ ಮನೆಗೆ ಬೀಗ ಹಾಕಿ ನೀನು ಮನೆಯಿಂದ ಹೊರಗೆ ಹೋಗದಿದ್ದರೆ  ಜೀವ ಸಮೇತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿ ಹೋಗಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 16/2022 ಕಲಂ: 324, 504, 506, 354 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 02-04-2022 09:43 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080