ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಗಣೇಶ (45) ತಂದೆ: ನಾರಾಯಣ ಮರಕಾಲ ವಾಸ: ಶ್ರೀ ನರಸಿಂಹ ಕೆಮ್ಮಣ್ಣು ಕೆರೆ ಪಾರಂಪಳ್ಳಿ ಗ್ರಾಮ ಬ್ರಹ್ಮಾವರ ಇವರು ದಿನಾಂಕ 1/04/2022 ರಂದು ಪಾರಂಪಳ್ಳಿಯ ತನ್ನ ಮನೆಯಿಂದ ಕೋಟ ಮೂರು ಕೈಗೆ ಹಾಲು ತರುವ ಬಗ್ಗೆ ಅಂಬಾಗಿಲು ಕೆರೆ ರಸ್ತೆಯಿಂದ ರಾ ಹೆ 66 ರಲ್ಲಿ ತನ್ನ KA-20 EE-0851 ನೇ ಹೀರೋ ಹೊಂಡ ಸೂಪರ್ ಸ್ಪ್ಲೆಂಡರ್ ಮೊಟಾರ್ ಸೈಕಲಿನಲ್ಲಿ ಸವಾರಿ ಮಾಡಿಕೊಂಡು ಬಂದು ಕೋಟ ವಿವೇಕ ಹೈಸ್ಕೂಲಿನ ಗೇಟಿನ ಎದುರು ರಾ ಹೆ 66 ರಲ್ಲಿ ಬರುತ್ತಿರುವಾಗ ರಾತ್ರಿ ಸುಮಾರು 07:45 ಗಂಟೆಯ ಸಮಯಕ್ಕೆ ಗಣೇಶ ರವರ ಹಿಂಬದಿಯಿಂದ KA-20 Y-0570 ನೆ ಮೊಟಾರ್ ಸೈಕಲ್ ಸವಾರನು ತನ್ನ ಮೋಟಾರ್ ಸೈಕಲನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಗಣೇಶ ರವರ ಮೋಟಾರ್ ಸೈಕಲಿನ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ಗಣೇಶ ರವರು ಮಣ್ಣು ರಸ್ತೆಗೆ ಬಿದ್ದಿರುತ್ತಾರೆ. ಗಣೇಶ ರವರ ಎಡ ಕಾಲಿನ ಹೆಬ್ಬೆರಳಿಗೆ ಹಾಗೂ ಎಡ ಕೈಯ ಕಿರು ಬೆರಳಿಗೆ ತೀವೃ ಸ್ವರೂಪದ ರಕ್ತಗಾಯ ಆಗಿರುತ್ತದೆ ಚಿಕಿತ್ಸೆಯ ಬಗ್ಗೆ ಕುಂದಾಪುರದ ನ್ಯೂ ಮೆಡಿಕಲ್ ಸೆಂಟರ್ ಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 39/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿದಾರರಾದ ಮನೋಹರ್ ಮರಾಠೆ (53) ತಂದೆ:ದಿ ಪುರುಷೋತ್ತಮ ಮರಾಠೆ .ವಾಸ: ಮಾತ್ರ ಛಾಯ , 82 ಕುಡಿ ಅಂಚೆ ಹಿರಿಯಡ್ಕ ಇವರು ದಿನಾಂಕ 01/04/2022 ರಂದು ಸಂಜೆ 04:30 ರಂದು ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲ ಲಕ್ಷೀಂದ್ರ ನಗರದ ಜನ ಔಷಧಿ ಕೇಂದ್ರಕ್ಕೆ ಹೋಗಲು ಉಡುಪಿ-ಮಣಿಪಾಲ ರಾ.ಹೆ. 169(ಎ) ನ್ನು ದಾಟುವ ಸಮಯದ ಉಡುಪಿ ಕಡೆಯಿಂದ KA 20 ES 7338 TVS WEGO ಮೋಟಾರ್ ಸೈಕಲ್ ನ ಸವಾರ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ದಾಟುಲು ನಿಂತಿದ್ದ ಮನೋಹರ್ ಮರಾಠೆ ರವರಿಗೆ ಎಡ ಕಾಲಿಗೆ ಢಿಕ್ಕಿ ಹೊಡೆದ ಪರಿಣಾಮ ಎಡ ಕಾಲಿಗೆ ಮೂಳೆ ಮುರಿತ ಗಾಯ, ಮುಖಕ್ಕೆ ತರಚಿದ ಗಾಯ ಹಾಗೂ ಕಿವಿ ಒಳಗೆ ರಕ್ತ ಗಾಯ ಉಂಟಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 50/2022 ಕಲಂ: 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ

ಇತರ ಪ್ರಕರಣಗಳು

  •  ಕುಂದಾಪುರ: ಪಿರ್ಯಾದಿದಾರರಾದ ಭಾಲಕೃಷ್ಣ ರೈ (55) ತಂದೆ: ಶಾಂತಪ್ಪರೈವಾಸ:ಕೊಂಗರ ಕಾನ್ ಶ್ರೀದೇವಿ ನಿಲಯ ಕರ್ಕುಂಜೆ ಗ್ರಾಮ ಕುಂದಾಪುರ ತಾಲೂಕು ಉಡುಪಿ ಇವರು ದಿನಾಂಕ 01/04/2022 ರಂದು ಮಧ್ಯಾಹ್ನ 02:00 ಗಂಟೆಯ ಸಮಯಕ್ಕೆ ಮನೆಗೆ ದಿನಸಿ ಸಾಮಾನುಗಳನ್ನು ತಗೆದುಕೊಂಡು ಹೋಗುವಾಗ ಬೀದಿ ನಾಯಿಯೊಂದು ಭಾಲಕೃಷ್ಣ ರೈ ರವರ ಬಳಿ ಬರುವುದನ್ನು ಕಂಡು ಹೋಗು ಬೀದಿ ನಾಯಿ ಎಂದು ಓಡಿಸಿರುತ್ತಿರುವಾಗ ಅಲ್ಲೆ ಸಮೀಪದಲ್ಲಿದ್ದ ರೋಹಿತ ಹಾಗೂ ಆತನ ಸ್ನೇಹಿತನು ಭಾಲಕೃಷ್ಣ ರೈ ರವರನ್ನು ತಡೆದು ನಿಲ್ಲಿಸಿ ನೀನು ಯಾರಿಗೆ ಬೈದಿದ್ದು ಎಂದು ಕೆಟ್ಟದಾಗಿ ಬೈದು ತಮ್ಮ ಕೈಗಳಿಂದ ಇವರ ಮೈಕೈಯಿಗೆ ಹೊಡೆದು ಕೆಳಗೆ ದೂಡಿ ಹಾಕಿ ಆರೋಪಿತ ರೋಹಿತನು ತನ್ನ ಕಾಲಿನಿಂದ ಭಾಲಕೃಷ್ಣ ರೈ ರವರ ಎದೆಗೆ ಬೆನ್ನಿಗೆ ತುಳಿದಿರುತ್ತಾನೆ.ಬಳಿಕ ಭಾಲಕೃಷ್ಣ ರೈ ರವರು ಮೇಲೆದ್ದು ಸುಧಾರಿಸಿಕೊಂಡಿದ್ದು ಅಲ್ಲೇ ಇವರ ಸಮೀಪ ಇದ್ದ ಸತೀಶ ಎಂಬಾತನು ರಿಕ್ಷಾದಲ್ಲಿ ಮನೆಗೆ ಹೋಗುವಂತೆ ತಿಳಿಸಿದ ಮೇರೆಗೆ ಮನೆಗೆ ಹೋಗಿರುತ್ತಾರೆ. ಹಲ್ಲೆಯ ಪರಿಣಾಮ ಭಾಲಕೃಷ್ಣ ರೈ ಇವರಿಗೆ ನೋವು ಹೆಚ್ಚಾದ ಕಾರಣ ಹೆಂಡತಿಯ ಅಕ್ಕನ ಮಗನದ ಅಭಿಜಿತನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಭಾಲಕೃಷ್ಣ ರೈ ರವರು ಒಳ ರೋಗಿಯಾಗಿಯಾಗಿ ದಾಖಲಾಗಿರತ್ತಾರೆ. ಹಲ್ಲೆಯ ಪರಿಣಾಮ ಭಾಲಕೃಷ್ಣ ರೈ ಇವರಿಗೆ ಒಳ ಜಖಂ ಆಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ14/2022 ಕಲಂ: 341,323,504 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿದಾರರಾದ ಮಾಧವ ಕಾಮತ್ (71 ವ) ತಂದೆ: ನರಸಿಂಹ ರಾಮ ಕಾಮತ್ ವಾಸ: ದುರ್ಗಾಸದನ, ಕಿನ್ನಿಮೂಲ್ಕಿ ಕಡೇಕಾರು ಗ್ರಾಮ ಇವರು KA-20 Y-0570 HONDA ACTIVA ಆರ್ ಸಿ ಮಾಲಕರಾಗಿದ್ದು. ದಿನಾಂಕ 01/04)2022 ರಂದು ಮಾಧವ ಕಾಮತ್ ರವರು ಮನೆಯಿಂದ ಉಡುಪಿ ಪೇಟೆಗೆ KA-20 Y-0570 ಸ್ಕೂಟರ್ ನಲ್ಲಿ ಹೋಗಿ ವಾಪಸ್ಸು ಬಂದು ಸ್ಕೂಟರ್ ನ್ನು ಪಿರ್ಯಾಧಿದಾರರ ಮನೆಯ ಕಂಪೌಂಡ್ ಒಳಗಡೆ ಸಂಜೆ ಸುಮಾರು 5:15 ಗಂಟೆಗೆ ನಿಲ್ಲಿಸಿ 15 ನಿಮಿಷ ಮನೆಯಲ್ಲಿ ವಿಶ್ರಾಂತಿ ಪಡೆದು ಬಳಿಕ ಮನೆಯ ಹೊರಗಡೆ ಬಂದು ನೋಡಿದಾಗ ನಿಲ್ಲಿಸಿದ ಜಾಗದಲ್ಲಿ ದ್ವಿಚಕ್ರ ವಾಹನ ಇರುವುದಿಲ್ಲ ಎಲ್ಲಾ ಕಡೆ ಹುಡುಕಾಡಿದರೂ ಈವರೆಗೂ ಸಿಕ್ಕಿರುವುದಿಲ್ಲವಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 29/2022 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಸುರೇಂದ್ರ ನಾಯಕ್, (41) ತಂದೆ: ಶಂಕರ್ ನಾಯಕ್, ವಾಸ: ಲಕ್ಷ್ಮೀ ಕೃಪಾ, ಸದ್ಬಾವನಾ ನಗರ, ಬಂಗ್ಲೆಗುಡ್ಡೆ, ಕಸಬಾ ಗ್ರಾಮ ಕಾರ್ಕಳ ತಾಲೂಕು ಇವರು ಕಾರ್ಕಳ ಕಸಬಾ ಗ್ರಾಮದ ಸದ್ಭಾವನಾ ನಗರ ಶ್ರೀ ವಿದ್ಯಾಸರಸ್ವತಿ ಭಜನಾ ಮಂದಿರ ಇದರ ಅಧ್ಯಕ್ಷರಾಗಿದ್ದು ದಿನಾಂಕ 02/04/2022 ರಂದು ಭಜನಾ ಮಂದಿರದ ಸಿಸಿ ಕೆಮರಾ ಫೂಟೇಜನ್ನು ಪರಿಶಿಲಿಸುತ್ತಿರುವಾಗ ದಿನಾಂಕ 02/04/2022 ರ ಬೆಳಗ್ಗಿನ ಜಾವ 02:50 ಗಂಟೆಗೆ ಮೂರು ಜನ ವ್ಯಕ್ತಿಗಳು ಬಂಗ್ಲೆಗುಡ್ಡೆ ಕಡೆಯಿಂದ ಬಿಳಿ ಬಣ್ಣದ ಕಾರನ್ನು ಚಲಾಯಿಸಿಕೊಂಡು ಬಂದು ಭಜನಾ ಮಂದಿರದ ಬಳಿ ಕಾರನ್ನು ನಿಲ್ಲಿಸಿ ಕಾರಿನಿಂದ ಇಳಿದು ಬಂದು ಭಜನಾಮಂದಿರದ ಬಳಿ ಇದ್ದ ಕಪ್ಪು ಬಣ್ಣದ ಒಂದು ದನವನ್ನು ಮಾಂಸ ಮಾಡುವ ಉದ್ದೇಶದಿಂದ ಕಳವು ಮಾಡಿ ಹಿಂಸಾತ್ಮಕವಾಗಿ ಕಾರಿನಲ್ಲಿ ತುಂಬಿಸಿ ಪತ್ತೊಂಜಿಕಟ್ಟೆ ಕಡೆಗೆ ಚಲಾಯಿಸಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 45/2022 ಕಲಂ: 379 ಐಪಿಸಿ ಮತ್ತು 4,5,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂದಕ ಮತ್ತುಸಂರಕ್ಷಣಾ ಆದ್ಯಾದೇಶ-2020 ರಂತೆ ಪ್ರಕರಣ ದಾಖಲಾಗಿರುತ್ತದೆ

ಇತ್ತೀಚಿನ ನವೀಕರಣ​ : 02-04-2022 06:46 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080