ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಣಿಪಾಲ: ದಿನಾಂಕ 01/04/2021 ರಂದು ಸಂಜೆ 4:15 ಗಂಟೆಗೆ ಅಲೆವೂರು  ಜೋಡು ರಸ್ತೆಯಲ್ಲಿನ ನಿರ್ಮಲ್‌ ಬಾರ್ ಮುಂಭಾಗದಲ್ಲಿ  ಹಾದು ಹೋಗಿರುವ ದೆಂದೂರು ಕಟ್ಟೆ - ಉಡುಪಿ ಸಾರ್ವಜನಿಕ  ರಸ್ತೆಯಲ್ಲಿ KA-20-AB-0477  ನೇ  ನೋಂದಣಿ ನಂಬರ್‌ನ ಟಿಪ್ಪರ್‌ ‌ಟೆಂಪೋವನ್ನು ಅದರ ಚಾಲಕ ಕೃಷ್ಣ ದೆಂದೂರು ಕಟ್ಟೆಯಿಂದ  ಉಡುಪಿ ಕಡೆಗೆ  ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ಎಡಬದಿಗೆ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ  ಉಡುಪಿ ಕಡೆಗೆ ಹೋಗುತ್ತಿದ್ದ  ಸೈಕಲ್‌‌ಗೆ ಡಿಕ್ಕಿ ಹೊಡೆದ ಪರಿಣಾಮ ಸೈಕಲ್‌ ಸವಾರ ಮಾರ್ಪಳ್ಳಿಯ ವಿಘ್ನೇಶ್‌ (12) ಸೈಕಲ್‌ ಸಮೇತ ರಸ್ತೆಗೆ ಬಿದ್ದು ತಲೆಗೆ ತೀವ್ರ ಸ್ವರೂಪದ ರಕ್ತ ಗಾಯ ಉಂಟಾಗಿದ್ದು ಆತನು  ಪ್ರಜ್ಞಾಹೀನನಾಗಿದ್ದು  ಆತನನ್ನು  ಪಿರ್ಯಾದಿದಾರರಾದ ಸ್ವಾತಿಕ್‌ (31), ತಂದೆ: ಪಿ.ನಾರಾಯಣ, ವಿಳಾಸ: ಕೃಷ್ಣ ನಿವಾಸ, ಉದ್ಯಾವರ , ಗುಡ್ಡೆಅಂಗಡಿ, ಉದ್ಯಾವರ ಪೋಸ್ಟ್ ಮತ್ತು  ಗ್ರಾಮ, ಉಡುಪಿ ತಾಲೂಕು ಮತ್ತು ಸ್ವಾತಿಕ್‌‌, ಸುಧಾಕರ್‌ ಪೂಜಾರಿ , ಸುದರ್ಶನ್ ನಾಯ್ಕರವರು ಆಟೋರಿಕ್ಷಾದಲ್ಲಿ ಚಿಕಿತ್ಸೆ  ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ದಾಖಲಿಸಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 43/2021 ಕಲಂ : 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ರಾಕಿ ರೆಬೆಲ್ಲೋ (33), ತಂದೆ: ದಿ ರಾಬರ್ಟ್ ರೆಬೆಲ್ಲೋ, ವಾಸ: ರೆಬೆಲ್ಲೋ ಹೌಸ್ ಬೊಬ್ಬರ್ಯ ದೇವಸ್ಥಾನ ಹತ್ತಿರ, ಉಪ್ಪಿನಕುದ್ರು  ಗ್ರಾಮ, ಕುಂದಾಪುರ ತಾಲೂಕು ಇವರು ದಿನಾಂಕ 01/04/2021 ರಂದು ಸಂಜೆ 04:30 ಗಂಟೆಗೆ ಅವರ ಜಾಗದಲ್ಲಿ ಕಲ್ಲು ಕಂಬವನ್ನು ಹುಗಿಯುತ್ತಿರುವಾಗ ಆಪಾದಿತ ಉಪೇಂದ್ರ ಶೇರಿಗಾರ್ ಪಿರ್ಯಾದಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರಲ್ಲಿ ನಡೆದಾಡುವ ದಾರಿಗೆ  ತಾಗಿ ಯಾಕೆ ಕಲ್ಲು ಕಂಬವನ್ನು ಹುಗಿಯುತ್ತಿಯಾ ಎಂದು ಕೇಳಿದ್ದು ಆಗ ಪಿರ್ಯಾದಿದಾರರು ನನ್ನ ಜಾಗದಲ್ಲಿ ಕಂಬವನ್ನು ಹುಗಿಯುತ್ತಿರುವುದಾಗಿ  ಹೇಳಿದ್ದು  ಆಗ ಆಪಾದಿತನು ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ರಾಡ್‌ನಿಂದ ತಲೆಗೆ ಹೊಡೆದು ಕೈಯಿಂದ ಎದೆಗೆ, ಕುತ್ತಿಗೆಗೆ ಸೊಂಟಕ್ಕೆ ಹೊಡೆದಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 40/2021  ಕಲಂ: 447, 504, 324, 323, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಪಿರ್ಯಾದಿದಾರರಾದ ಉಪೇಂದ್ರ ಶೇರಿಗಾರ್ (40), ತಂದೆ: ದಿ. ಕುಷ್ಟಪ್ಪ, ವಾಸ: ಪಂಡಿ ಮನೆ ಉಪ್ಪಿನಕುದ್ರು  ಗ್ರಾಮ, ಕುಂದಾಪುರ ತಾಲೂಕು ಇವರು ದಿನಾಂಕ 01/04/2021 ರಂದು ಸಂಜೆ 04:15 ಗಂಟೆಗೆ  ಹಾಲು ಡೈರಿಗೆ ಹೋಗಿ ವಾಪಾಸ್ಸು ಬರುವಾಗ ಆಪಾದಿತ ರಾಕಿ ರೆಬೆಲ್ಲೋ ನಡೆದಾಡುವ ದಾರಿಗೆ ಕಲ್ಲು ಕಂಬವನ್ನು ಹುಗಿಯುತ್ತಿದ್ದು ಆಗ ಪಿರ್ಯಾದಿದಾರರು ನಡೆದಾಡುವ ದಾರಿಗೆ ತಾಗಿ ಯಾಕೆ ಕಲ್ಲು ಕಂಬವನ್ನು ಹುಗಿಯುತ್ತೀಯಾ ಎಂದು ಕೇಳಿದಾಗ ಆಪಾದಿತನು ಅವಾಚ್ಯ ಶಬ್ದಗಳಿಂದ ಬೈದು ಅಡ್ಡಗಟ್ಟಿ ತಡೆದು ನಿಲ್ಲಿಸಿ ಕೈಯಿಂದ ಕೆನ್ನೆಗೆ, ಎದೆಗೆ, ಹೊಟ್ಟೆಗೆ, ಹೊಡೆದು ಕಾಲಿನಿಂದ ತುಳಿದು ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 41/2021  ಕಲಂ: 504, 341,323, 506   ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     

ಇತ್ತೀಚಿನ ನವೀಕರಣ​ : 02-04-2021 09:17 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ