ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಮಹಮ್ಮದ್ ಮುಝಮ್ಮಿಲ್ (22), ತಂದೆ ಅಬ್ದುಲ್  ಲತೀಫ್ , ಜನತಾ  ಹೌಸ್ , ಇಮಾಯತ್ ಇಸ್ಲಾಮ್ ಮಸೀದಿ ಹತ್ತಿರ, ಪೊಲ್ಯ,  ಉಚ್ಚಿಲ , ಬಡಾ ಗ್ರಾಮ, ಕಾಪು ತಾಲೂಕು ಇವರು ಕಾರ್ಕಳದಿಂದ ಕೆರ್ವಾಶೆಗೆ ಹೋಗುವ KA-20-B-7557  ನೋಂದಣಿ ಸಂಖ್ಯೆಯ ಸರ್ವಿಸ್ ಬಸ್ಸಿನ  ನಿರ್ವಾಹಕರಾಗಿದ್ದು, ದಿನಾಂಕ 01/03/2023 ರಂದು  ಬಸ್ಸನ್ನು ಶಾಕಿರ್ ಅಹಮದ್ ರವರು ಚಲಾಯಿಸುತ್ತಿದ್ದು, ಸಂಜೆ 06:50 ಗಂಟೆಗೆ  ಕಾರ್ಕಳ ಬಸ್ ಸ್ಟಾಂಡ್‌ನಿಂದ ಅಜೆಕಾರ್ ಮೂಲಕ ಕೆರ್ವಾಶೆಗೆ ಹೊರಟಿದ್ದು,  ರಾತ್ರಿ 07:20 ಗಂಟೆಗೆ ಕಾರ್ಕಳ – ಹೆಬ್ರಿ ರಾಜ್ಯ  ಹೆದ್ದಾರಿಯ  ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಆತ್ರಿ ಎಸ್ಟೇಟ್‌‌ ಎಂಬಲ್ಲಿ ಬಸ್ಸಿನಿಂದ ಪ್ರಯಾಣಿಕರನ್ನು ಇಳಿಸಲು ಬಸ್ಸನ್ನು  ಚಾಲಕನು ರಸ್ತೆಯ ಬದಿಯಲ್ಲಿ ನಿಲ್ಲಿಸಿ, ಬಸ್ಸಿನಿಂದ ಪ್ರಯಾಣಿಕರನ್ನು ಇಳಿಸುತ್ತಿದ್ದಂತೆಯೇ ಕಾರ್ಕಳ ಕಡೆಯಿಂದ  ಹೆಬ್ರಿ ಕಡೆಗೆ  KA-20-EF-2210 ನೇ ಟಿವಿಎಸ್ ಕಂಪೆನಿಯ ಅಪ್ಪಾಚಿ  ಮೋಟಾರ್ ಸೈಕಲನ್ನು ಅದರ ಸವಾರ ಹಿರ್ಗಾನ ಗ್ರಾಮದ ಹಂಕರಬೆಟ್ಟು ಮನೋಹರ (43)ಇವರು ಹೆಲ್ಮೆಟ್‌  ಧರಿಸಿಕೊಂಡು  ಅತೀ ವೇಗ ಹಾಗೂ  ಅಜಾಗರೂಕತೆಯಿಂದ ಚಲಾಯಿಸಿಕೊಂಡು  ಬಂದು ರಸ್ತೆಯ ಬದಿ ನಿಂತಿದ್ದ ಬಸ್ಸಿನ ಹಿಂಬದಿ ಬಲಬದಿಗೆ ಡಿಕ್ಕಿ ಹೊಡೆದ ರಭಸಕ್ಕೆ ಆತನ ಕೈಕಾಲು, ಮುಖ ಹಾಗೂ ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ  ಚಿಕಿತ್ಸೆಯ ಬಗ್ಗೆ ರಾತ್ರಿ 08:00 ಗಂಟೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಮೋಟಾರ್ ಸೈಕಲ್ ಸವಾರ ಮನೋಹರರವರು  ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 24/2023  ಕಲಂ: 279, 338, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ 01/03/2023  ರಂದು 09:30 ಗಂಟೆಗೆ ಪಿರ್ಯಾದಿದಾರರಾದ ಸುರೇಶ್ ದೇವಾಡಿಗ (59), ತಂದೆ:ದಿ.ಲಕ್ಷ್ಮಣ ದೇವಾಡಿಗ, ಗುಡ್ಡಿಮನೆ ಹಳ್ನಾಡು ಕಾವ್ರಾಡಿ ಗ್ರಾಮ ಕುಂದಾಪುರ ತಾಲುಕು    ಇವರು ಕುಂದಾಪುರ   ತಾಲೂಕಿನ  ಅಂಪಾರು ಗ್ರಾಮದ  ಕಂಚಾರು ಜಂಕ್ಷನ್ ನಿಂದ ಕಂಚಾರು ಶ್ರೀರಾಮ್ ಕ್ಯಾಶ್ಯೂ ಇಂಡಸ್ಟ್ರೀಗೆ ಹೋಗುವ ಡಾಂಬರು ರಸ್ತೆಯ ಕಂಚಾರು ಗರಡಿ ಹತ್ತಿರ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ  ಎದುರಿನಿಂದ KA-20-EK-3554 ನೇ ಮೋಟಾರ್ ಸೈಕಲ್ ನ ಸವಾರ ಶ್ರೀರಾಮ  ಕ್ಯಾಶ್ಯೂ ಇಂಡಸ್ಟ್ರೀ ಕಡೆಯಿಂದ ಕಂಚಾರು ಜಂಕ್ಷನ್ ಕಡೆಗೆ  ಮೋಟಾರ್ ಸೈಕಲ್  ಸವಾರ ಪ್ರಮೋದ ಕುಮಾರ್   ಅತೀ  ವೇಗ   ಹಾಗೂ  ಅಜಾಗರೂಕತೆ ಯಿಂದ ಚಲಾಯಿಸಿ ಪಾದಚಾರಿಗೆ ಮೋಟಾರ್ ಸೈಕಲ್‌ನ್ನು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ರಸ್ತೆಗೆ ಬಿದ್ದು  ಚಿಕಿತ್ಸೆಯ ಬಗ್ಗೆ ಕುಂದಾಪುರ ಚಿನ್ಮಯಿ  ಆಸ್ಪತ್ರೆಗೆ  ಕರೆದುಕೊಂಡು  ಹೋಗಿದ್ದು, ಅಲ್ಲಿ ಅವರನ್ನು  ಪರೀಕ್ಷಿಸಿದ ವೈಧ್ಯರು  ಚಿಕಿತ್ಸೆ  ನೀಡಿ ಎಡಕೈ ಮೂಳೆ ಮುರಿತ ಆಗಿದ್ದು ಬೆನ್ನು ಮೂಳೆ ಹಾಗೂ ಎದೆಗೆ ಗುದ್ದಿದ  ನೋವಾಗಿದೆ  ಎಂದು  ತಿಳಿಸಿ  ಒಳರೋಗಿಯನ್ನಾಗಿ ದಾಖಲು ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 19/2023  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹಿರಿಯಡ್ಕ: ದಿನಾಂಕ 01/03/2023 ರಂದು ಮದ್ಯಾಹ್ನ 2:30 ಗಂಟೆಗೆ ಕಾರ್ಕಳ-ಉಡುಪಿ ಮುಖ್ಯ ರಸ್ತೆಯ ಲ್ಲಿರುವ ಹಿರಿಯಡಕ ಸರಕಾರಿ ಪ್ರಾಥಮಿಕ ಶಾಲೆಯ ಬಳಿ ಕಾರ್ಕಳ ಕಡೆಯಿಂದ ಹಿರಿಯಡ್ಕ ಕಡೆಗೆ MH-03-BS- 8505 ಕಾರನ್ನು ಅದರ  ಚಾಲಕ ಪ್ರವೀಣ ಮುಂದಿನಿಂದ ಹೋಗುತ್ತಿದ್ದ KA-20-EL-1713  ಸ್ಕೂಟರನ್ನು ಓವರ್‌ಟೇಕ್ ಮಾಡುವ ಭರದಲ್ಲಿ  ಕಾರನ್ನು  ಅತೀ ವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು  ಒಮ್ಮೆಲೆ  ಎಡಕ್ಕೆ  ಚಲಾಯಿಸಿದ ಕಾರಣ ಕಾರು ಸ್ಕೂಟರ್‌‌ನ ಹಿಂಭಾಗಕ್ಕೆ ಢಿಕ್ಕಿ ಹೊಡೆದು ಕಾರು ಚಾಲಕನು ಕಾರಿನ ನಿಯಂತ್ರಣ ಕಳೆದುಕೊಂಡು ರಸ್ತೆಯ ಎಡಭಾಗದಲ್ಲಿ ನಿಲ್ಲಿಸಲಾಗಿದ್ದ ಹೊಸ ಟ್ರಕ್‌‌ನ  ಹಿಂಭಾಗಕ್ಕೆ ಡಿಕ್ಕಿ ಹೊಡೆರುತ್ತದೆ. ಸ್ಕೂಟರ್‌ಗೆ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟರ್‌ ಸವಾರನು ಮುಂದಕ್ಕೆ ಎಸೆಯಲ್ಪಟ್ಟು  ಟ್ರಕ್‌‌ನ ಹಿಂಭಾಗಕ್ಕೆ ಗುದ್ದಿ ನೆಲಕ್ಕೆ ಬಿದ್ದಿರುತ್ತಾನೆ. ಈ ಅಪಘಾತದಿಂದ  ಸ್ಕೂಟರ್‌ ‌ಸವಾರ ನ   ಬಲ ಕೈ ಮೂಳೆ ಮುರಿತ, ಎದೆಗೆ ತೀವ್ರ  ಸ್ವರೂಪದ  ಗುದ್ದಿದ ಗಾಯ ಉಂಟಾಗಿದ್ದು ಆತನು ಪ್ರಜ್ಞಾ ಹೀನ  ಸ್ಥಿತಿಗೆ ತಲುಪಿರುತ್ತಾನೆ.  ಈ ಅಪಘಾತದಿಂದ ಮೂರು ವಾಹನಗಳು  ಜಖಂಗೊಂಡಿರುತ್ತದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 11/2023  ಕಲಂ:  279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾಪು: ಪಿಯಾ೯ದಿದಾರರಾದ ದಯಾನಂದ ಸುವಣ೯, ತಂದೆ:ಕೆ.ಬಿ.ಕೋಟ್ಯಾನ್‌, ವಾಸ:ಸುವಣ೯ ಕೃಪಾ ಪಡು ಗ್ರಾಮ ಕಾಪು ತಾಲೂಕು ಉಡುಪಿ ಜಿಲ್ಲೆ ಇವರ ತಾಯಿ ಜಾನಕಿರವರಿಗೆ ಕಾಪು ತಾಲೂಕು ಪಡು ಗ್ರಾಮದ ಸವೆ೯ ನಂಬ್ರ 66/10 ರಲ್ಲಿ ಸ್ಥಿರಾಸ್ತಿಯಿದ್ದು, ಪಿಯಾ೯ದಿದಾರರ ತಾಯಿ ಜಾನಕಿ ಕೋಟ್ಯಾನ್‌ರವರು ಮರಣ ಹೊಂದಿದ ಬಳಿಕ ವಾರೀಸು ನೆಲೆಯಲ್ಲಿ ಸ್ಥಿರಾಸ್ತಿಯನ್ನು ಅನುಭವಿಸಿಕೊಂಡು ಬರುತ್ತಿದ್ದಾರೆ. ಸ್ಥಿರಾಸ್ತಿಯಲ್ಲಿರುವ   ಮನೆಯಲ್ಲಿ  5 ವಷ೯ದ ಹಿಂದೆ ಆರೋಪಿ 1ನೇ ಹೇಮಂತ್‌ ಕೋಟ್ಯಾನ್‌̧  ತಂದೆ:ವಾಮನ ಪುತ್ರ̧̧̧ನ್‌, ವಾಸ:ಪಡು ಗ್ರಾಮ  ಕಾಪು ತಾಲೂಕು ಇವರು ಬಾಡಿಗೆಗೆ ವಾಸವಾಗಿದ್ದು ಬಳಿಕ ಮನೆ ಬಿಟ್ಟು ಬೇರೆ ಕಡೆಗೆ ಹೋಗಿರುತ್ತಾರೆ. ನಂತರ ಪಿಯಾ೯ದಿದಾರರ ಸಂಬಂಧಿಕರಾಗಿರುವ  ಆರೋಪಿ 2. ಲೀಲಾಧರ ಕೋಟ್ಯಾನ್‌,  ತಂದೆ:ಹರಿಯಪ್ಪ ಕೋಟಯಾನ್‌,  ಪಡು ಗ್ರಾಮ ಕಾಪು ತಾಲೂಕು, 3.ಯಶೋಧ, ಗಂಡ:ನೀಲಾಧರ ಕೋಟ್ಯಾನ್‌,  ಪಡು ಗ್ರಾಮ ಕಾಪು ತಾಲೂಕು ಇವರು ಮನೆಯಲ್ಲಿ ಬಾಯ್ದೆರೆಯಲ್ಲಿ ವಾಸಮಾಡಿಕೊಂಡಿರುತ್ತಾರೆ. ಬಳಿಕ ಮನೆಯನ್ನು ಪಿಯಾ೯ದಿದಾರರಿಗೆ ಬಿಟ್ಟುಕೊಡದೇ ಇದ್ದು ಈ ಬಗ್ಗೆ ಮಾನ್ಯ ಹೆಚ್ಚುವರಿ ಸಿವಿಲ್‌ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುತ್ತದೆ.  ಸ್ಥಿರಾಸ್ತೀಯಲ್ಲಿರುವ ನಾಗಬನದ ಅಭಿವೃದ್ದಿ ಮತ್ತು ಜಿಣೊ೯ದ್ಧಾರಕ್ಕಾಗಿ “ಶ್ರೀ ಆಶ್ವಥ ನಾರಾಯಣ ನಾಗ ಸನ್ನಿಧಿ ಟ್ರಸ್ಟ್”‌ ಇದ್ದು ಪೂಜಾ ವಿಧಾನಗಳನ್ನು ನೆಡೆಸಿಕೊಂಡು ಬರುತ್ತಾರೆ.  ಪಿಯಾ೯ದಿದಾರರು ಟ್ರಸ್ಟ್‌ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದು ನಾಗಬನದ ಜೀಣೋ೯ದ್ದಾರಕ್ಕಾಗಿ  ಸರಕಾರದಿಂದ ಬರುವ ಅನುಧಾನ ಪಡೆಯಲು ಅಜಿ೯ ಸಲ್ಲಿಸಿದ್ದು, 1 ರಿಂದ 3 ನೇ ಆರೋಪಿಗಳು ಸೇರಿ  ಸಕಾ೯ರಿ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ಆಕ್ಷೇಪಣೆಯನ್ನು ಸಲ್ಲಿಸಿ, ಮಹಜರುಗಳಿಗೆ ನಕಲಿ ಸಹಿಗಳನ್ನು ತಯಾರಿಸಿ ಅನುದಾನ ಮಂಜೂರಾಗದಂತೆ ಮಾಡಿರುತ್ತಾರೆ. ಆರೋಪಿಗಳು ಈ ಎಲ್ಲಾ ವಿಚಾರಗಳಿಂದ ಪಿಯಾ೯ದಿದಾರರ ಮನೆಗೆ ಅಕ್ರಮ ಪ್ರವೇಶ ಮಾಡಿ  ಸರಕಾರಿ ಅಧಿಕಾರಿಗೆ ಸುಳ್ಳು ಮಾಹಿತಿಯನ್ನು ನೀಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಿಯಾ೯ದಿದಾರರಿಗೆ ನಷ್ಟ ಹಾಗೂ ನಂಬಿಕೆ ದ್ರೋಹ ಎಸಗಿರುವುದಾಗಿ ನೀಡಿದ ದೂರಿನಂತೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 33/2023 ಕಲಂ: 199, 200, 407, 427,468, 471 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.         

ಇತ್ತೀಚಿನ ನವೀಕರಣ​ : 02-03-2023 09:43 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080