ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ:ಪಿರ್ಯಾದಿ: ತೋನ್ಸೆ  ಮಾಧವ ಪೈ (25)    ತಂದೆ: ದಿವಂಗತ ಶೇಷಗಿರಿ ಪೈ ವಾಸ: ಸುರೇಖ ಸದನ ಮಲ್ಪೆ ಕ್ರಾಸ್ ರಸ್ತೆ ಪುತ್ತೂರು ಗ್ರಾಮ ಇವರು ಟಿಪ್ಪರ್ ಇಟ್ಟುಕೊಂಡು ವ್ಯವಹಾರ ನಡೆಸಿಕೊಂಡಿರುವುದಾಗಿದೆ. ದಿನಾಂಕ 01/03/2023 ರಂದು ಪಿರ್ಯಾದಿದಾರರು ಮನೆಯಲ್ಲಿರುವಾಗ  ಸಮಯ ಸುಮಾರು 08: 40 ಗಂಟೆಗೆ ತನ್ನ ಬಾಪ್ತು 407 ಚಾಲಕ ವಿಠ್ಠಲ ಎಂಬುವವರು ದೂರವಾಣಿ ಕರೆ ಮಾಡಿ ಅಂಬಲಪಾಡಿ ಗ್ರಾಮದ ಕರಾವಳಿ ಜಂಕ್ಷನ್ ಹತ್ತಿರ ಶಾಂತಿ ಬಿಲ್ಡಿಂಗ್ ಮೆಟೀರಿಯಲ್ ಎದುರುಗಡೆ ಹಾದುಹೋಗಿರುವ ರಾಹೆ -66 ನೇ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಮಣಿಪಾಲ್ ಇನ್ ಕಡೆಯಿಂದ ಉಡುಪಿ ಕರಾವಳಿ  ಕಡೆಗೆ  ಪಿರ್ಯಾದಿದಾರ ಬಾಪ್ತು KA20D6675 ನ 407 ರಲ್ಲಿ ವಿಠ್ಠಲ್ ರವರು ಚಲಾಯಿಸಿಕೊಂಡು ಬರುತ್ತಿರುವಾಗ  KA20EU6567 ನೇ ಸ್ಕೂಟರ್ ಸವಾರ ಗಣಪತಿ ಪೈ  ಎಂಬಾತನು ತಾನು ಸವಾರಿ ಮಾಡುತ್ತಿದ್ದ ಸ್ಕೂಟರ್ ನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ತನ್ನ ಮುಂದೆ ಹೋಗುತ್ತಿದ್ದ ಅಂದರೆ ಕರಾವಳಿ ಕಡೆಯಿಂದ ಸಂತೆಕಟ್ಟೆ ಕಡೆಗೆ ಹೋಗುತ್ತಿದ್ದ KSRTC ಬಸ್ಸನ್ನು ಓವರ್ ಟೇಕ್ ಮಾಡಿ ರಸ್ತೆಯ ತೀರಾ ಬಲಭಾಗಕ್ಕೆ ಬಂದು 407 ಗೆ ಡಿಕ್ಕಿ ಹೊಡೆದ ಪರಿಣಾಮ  ಸ್ಕೂಟರ್ ಸವಾರ ಗಣಪತಿ ಪೈ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಹಿಂಬದಿ ತಲೆಗೆ ಮತ್ತು ಎರಡೂ ಕಾಲುಗಳಿಗೆ ಮತ್ತು ಕೈಗಳಿಗೆ ಗಂಬೀರ ಸ್ವರೂಪದ ಗಾಯವಾಗಿರುತ್ತದೆ. ಅಲ್ಲದೇ ಹಾಗೂ ಮೋಟರ್ ಸೈಕಲ್ ಸಹ ಜಖಂಗೊಂಡಿದ್ದು 407 ನ ಮುಂಭಾಗ ಜಖಂಗೊಂಡಿರುತ್ತದೆ. ಗಾಯಾಳು ಗಣಪತಿ ಪೈ ರವರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ರಾತ್ರಿ 9.40 ಕ್ಕೆ ಪರೀಕ್ಷಿಸಿದ ವೈಧ್ಯರು ಗಾಯಾಳು ಗಣಪತಿ ಪೈ ರವರು ಮೃತರಾಗಿರುವುದಾಗಿ ತಿಳಿಸಿರುತ್ತಾರೆ.  ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 22/2023 ಕಲಂ: 279,304(ಎ) ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಉಡುಪಿ:  ದಿನಾಂಕ: 01-03-2023 ರಂದು ಸಂಜೆ 5:35 ಗಂಟೆಗೆ ಪುತ್ತೂರು ಗ್ರಾಮದ ಆಶೀರ್ವಾದ ಪೆಟ್ರೋಲ್ ಬಂಕ್ ಎದುರುಗಡೆ ಹಾದುಹೋಗಿರುವ ರಾಹೆ-66 ನೇ ಸಾರ್ವಜನಿಕ ಡಾಮಾರು ರಸ್ತೆಯ  ವಿಭಾಜಕ ತೆರೆವು ಇರುವ ಜಾಗದಲ್ಲಿ ಆರೋಪಿ ಅನಿಲ್ ಎಂಬಾತನು KL36A3751 ನೇ ಟಿಪ್ಪರ್ ನ್ನು ಯಾವುದೇ ಸೂಚನೆಯನ್ನು ನೀಡದೇ ಏಕಾಏಕಿಯಾಗಿ ದುಡುಕುತನ ಮತ್ತು ಮತ್ತು ನಿರ್ಲಕ್ಷ್ಯತನದಿಂದ ವಿಭಾಜಕ ತೆರವು ಇರುವ ಜಾಗದಲ್ಲಿ ತಿರಿಗಿಸಿದರ ಪರಿಣಾಮ ಅದೇ ರಸ್ತೆಯಲ್ಲಿ ಪಿರ್ಯಾದಿ ನಿತಿನ್ (20) ವರ್ಷ, ತಂದೆ: ದಿನೇಶ್ ಆಚಾರ್ಯ, ವಾಸ: ಮನೆ ನಂ: 1-97 ಕೆಳಾರ್ಕಳಬೆಟ್ಟು  ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರ, ಕೆಳಾರ್ಕಳ ಗ್ರಾಮ ಇವರು ಸಂತೆಕಟ್ಟೆ ಕಡೆಯಿಂದ ಉಡುಪಿ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿದ್ದ KA19EE3911 ನೇ ಮೊಟಾರ್ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಬೈಕ್ ಸಮೇತ ರಸ್ತೆಗೆ ಬಿದ್ದು, ಎಡಕಾಲಿಗೆ ಮೂಳೆಮುರಿತದ ಜಖಂ, ಹಣೆಗೆ ಮೂಗಿಗೆ ಬಾಯಿಗೆ ರಕ್ತಗಾಯವಾಗಿ ಅಲ್ಲದೇ ಕುತ್ತಿಗೆಯ ಬಳಿ ಗುದ್ದಿದ ಒಳಜಖಂ ಆಗಿ ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಗೆ ದಾಖಲಾಗಿ ಪ್ರಥಮ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ: 23/2023 ಕಲಂ: 279, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿ: ಗುಲಾಬಿ ಶೆಡ್ತಿ (48 ವರ್ಷ) ಗಂಡ: ಭುಜಂಗ ಶೆಟ್ಟಿ ವಾಸ: ಅಂಗಡಿಬೆಟ್ಟು ಮನೆ, ಕೋಣ್ಕಿ  ನಾಡ ಗ್ರಾಮ ಇವರ ಗಂಡ ಭುಜಂಗ ಶೆಟ್ಟಿ (59 ವರ್ಷ) ರವರು  ಬೈಂದೂರು ತಾಲೂಕು ನಾಡ ಗ್ರಾಮದ ಕೋಣ್ಕಿ ಅಂಗಡಿಬೆಟ್ಟು ಮನೆ ಎಂಬ ಪಿರ್ಯಾದಿದಾರರ ಮನೆಯ ತೋಟದಲ್ಲಿ ದಿನಾಂಕ: 02.03.2023 ರಂದು ಅಡಿಕೆ ಮರದಲ್ಲಿರುವ ಅಡಿಕೆಯನ್ನು ಕೊಯ್ಯಯಲು ಹೋಗಿ ಕಬ್ಬಿಣದ ಪೈಪ್‌ ಗೆ ಕತ್ತಿಯನ್ನು ಕಟ್ಟಿಕೊಂಡು ಅಡಿಕೆ ಮರದಿಂದ ಅಡಿಕೆಯನ್ನು ಕೊಯ್ಯುತ್ತೀರುವಾಗ ಸಮಯ ಸುಮಾರು ಬೆಳಿಗ್ಗೆ 10:20 ಗಂಟೆಗೆ ಆಕಸ್ಮೀಕವಾಗಿ ಕಬ್ಬಿಣದ ಪೈಪ್‌  ಸದ್ರಿ ತೋಟದಲ್ಲಿ ಹಾದು ಹೋಗಿರುವ ಹೈಟೆನಕ್ಷನ್‌ ವಿಧ್ಯುತ್‌ ತಂತಿಗೆ  ತಾಗಿ  ಕಬ್ಬಿಣದ ಪೈಪ್‌  ಮೂಲಕ ಭುಜಂಗ್‌ ಶೆಟ್ಟಿ ಯವರಿಗೆ ವಿಧ್ಯುತ್‌ ಪ್ರವಾಹಿಸಿ ಬಾಗಶಃ ಸುಟ್ಟು ಹೋಗಿ ಸ್ಥಳದಲ್ಲಿಯೇ  ಮೃತಪಟ್ಟಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ಠಾಣೆ: ಯು.ಡಿ.ಆರ್ 06/2023ಕಲಂ: 174 ಸಿ.ಆರ್‌.ಪಿ.ಸಿ   ಯಂತೆ ಪ್ರಕರಣ ದಾಖಲಿಸಲಾಗಿದೆ. 

ಇತ್ತೀಚಿನ ನವೀಕರಣ​ : 02-03-2023 06:38 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080