ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಹಿರಿಯಡ್ಕ: ಪಿರ್ಯಾದಿದಾರರಾದ ಸಂತೋಷ (28), ತಂದೆ: ಭಾಸ್ಕರ್ ಮರಕಾಲ, ವಾಸ: ಲಕ್ಷ್ಮೀ ನಿಲಯ ಕನ್ಯಾರು ಚೇರ್ಕಾಡಿ ಗ್ರಾಮ ಬ್ರಹ್ಮಾವರ ತಾಲೂಕು ಇವರು ದಿನಾಂಕ 01/03/2022 ರಂದು ತನ್ನ KA-19-P-4475 ನೇ ವ್ಯಾಗನಾರ್ ಕಾರಿನಲ್ಲಿ ಸಂಬಂದಿಯವರಾದ ರತಿ, ಸೀತಾ, ಶ್ರವಣರವರೊಂದಿಗೆ  ಪಿರ್ಯಾದಿದಾರರು ಚಾಲಕರಾಗಿ ಕುಕ್ಕೆಹಳ್ಳಿ ದೇವಸ್ಥಾನಕ್ಕೆ ಬರುವುದಕ್ಕಾಗಿ ಪೇತ್ರಿ- ಕುಕ್ಕೆಹಳ್ಳಿಯಲ್ಲಿ ರಸ್ತೆಯಲ್ಲಿ ಬರುತ್ತಾ ಕುಕ್ಕೆಹಳ್ಳಿ ದೇವಸ್ಥಾನದ ಬಳಿ ಮದ್ಯಾಹ್ನ 13:10 ಗಂಟೆಗೆ ತಲುಪುವಾಗ ಎದುರಿನಿಂದ KA-20-ES-7897 ನೇ ಸ್ಕೂಟಿ ಸವಾರ ಪೆಡ್ರಿಕ್ ತನ್ನ ಸ್ಕೂಟಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ರಸ್ತೆಯ ತೀರಾ ಬಲ ಭಾಗಕ್ಕೆ ಬಂದು ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದು ಸ್ಕೂಟಿ ಸಮೇತ ರಸ್ತೆಗೆ ಬಿದ್ದು ಸೊಂಟಕ್ಕೆ ಗುದ್ದಿದ ಒಳ ಜಖಂ ಹಾಗೂ ಬಲ ಕಾಲಿನ ಕೋಲು ಕಾಲಿಗೆ  ತರಚಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಪೆಡ್ರಿಕ್ ರವರ ಮಗ ಮಹೇಶ್ ಆಸ್ಪತ್ರೆ ಬ್ರಹ್ಮಾವರಕ್ಕೆ ಕರೆದುಕೊಂಡು ಹೋಗಿ ದಾಖಲು ಮಾಡಿರುವುದಾಗಿದೆ. ಈ ಅಪಘಾತದಲ್ಲಿ ಎರಡೂ ವಾಹನಗಳು ಜಖಂಗೊಂಡಿರುತ್ತವೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 08/2022  ಕಲಂ :279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಪಡುಬಿದ್ರಿ: ಪಿರ್ಯಾದಿದಾರರಾದ ನವೀನ್ ಪೂಜಾರಿ (40), ತಂದೆ: ದಿ. ಬಾಬು ಪೂಜಾರಿ ವಾಸ: ಶಾರದ ನಿವಾಸ, ಐಕಳ ಅಂಚೆ, ತಾಳಪಾಡಿ ಗ್ರಾಮ, ಕಿನ್ನಿಗೋಳಿ, ಮಂಗಳೂರು ತಾಲೂಕು, ದ.ಕ. ಜಿಲ್ಲೆ ಇವರು ಕಿನ್ನಿಗೊಳಿಯ ಡಿಜೆ ವೀನಸ್ ಸಂಸ್ಥೆಯಲ್ಲಿ ಸರ್ವೇಯರ್ ಆಗಿ ಕೆಲಸ ಮಾಡಿಕೊಂಡಿದ್ದು, ರಘುರಾಜ್ (23) ಎಂಬುವವರು ಚೈನ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ಪಡುಬಿದ್ರಿ ಬೀಡು ವಾಸಿ  ಭವಾನಿ ಶಂಕರ್ ಹೆಗ್ಡೆ ಎಂಬುವವರು ಅವರ ಜಾಗದ ಡಿಜಿಟಲೀಕರಣ ಮಾಡಿಕೊಡಲು ಹೇಳಿದಂತೆ ದಿನಾಂಕ 01/03/2022 ರಂದು ಪಿರ್ಯಾದಿದಾರರು ಮತ್ತು ರಘುರಾಜ್ ರವರು ಬೀಡುವಿಗೆ ತಲುಪಿ ಸರ್ವೇ ಮಾಡುತ್ತಾ ಇದ್ದಾಗ ಮಧ್ಯಾಹ್ನ. 12:50 ಗಂಟೆಗೆ ರಘುರಾಜ್ ರವರು ರಾಷ್ಟ್ರೀಯ ಹೆದ್ದಾರಿ 66 ರ ಉಡುಪಿ -ಮಂಗಳೂರು ಏಕಮುಖ ರಸ್ತೆಯ ಪೂರ್ವ ಬದಿಯ ಮಣ್ಣು ರಸ್ತೆಯಲ್ಲಿ ನಿಂತು ಎಲೆಕ್ಟ್ರಾನಿಕ್ ಟೋಟಲ್ ಸ್ಟೇಷನ್ ಹೆಸರಿನ ಉಪಕರಣದಲ್ಲಿ ನೋಡುತ್ತಿದ್ದಾಗ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ KA-19-HG-6788 ನಂಬ್ರದ ಸ್ಕೂಟಿಯನ್ನು ಅದರ ಸವಾರ ಸಂತೋಷ  ಅತೀವೇಗವಾಗಿ ಚಲಾಯಿಸಿಕೊಂಡು ಬಂದು ತೀರಾ ನಿರ್ಲಕ್ಷತನದಿಂದ ಮಣ್ಣು ರಸ್ತೆಯಲ್ಲಿ ಚಲಾಯಿಸಿ ರಘುರಾಜ್ ರವರಿಗೆ ಮತ್ತು (ETS) ಉಪಕರಣಕ್ಕೆ ಡಿಕ್ಕಿಹೊಡೆದು ಸುಮಾರು 20 ಮೀ. ನಷ್ಟು ಮುಂದಕ್ಕೆ ಚಲಿಸಿ  ರಸ್ತೆಗೆ ಬಿದ್ದು, ಸ್ಕೂಟಿ ಸಮೇತ ಉರುಳಿಕೊಂಡು ಹೋಗಿ ಡಿವೈಡರ್ ಬಳಿ ಬಿದ್ದಿದ್ದು, ಅಫಘಾತದಿಂದ ರಘುರಾಜ್ ರವರ ಎಡ ಕಾಲಿಗೆ ಮೂಳೆ ಮುರಿತವಾಗಿ ಕಾಲು ತಿರುಚಿಕೊಂಡಿದ್ದು, ಬಲ ಕಾಲಿಗೂ ಕೂಡಾ ತೀವ್ರ ಗಾಯವಾಗಿದ್ದು, ಅಲ್ಲದೇ (ETS) ಉಪಕರಣ ಜಖಂಗೊಂಡಿರುತ್ತದೆ. ಅಪಘಾತ ಮಾಡಿದ ಸ್ಕೂಟಿಯ ಸವಾರನಿಗೂ ತಲೆಗೆ ಮತ್ತು ಕೈ ಕಾಲಿಗೆ ತೀವ್ರ ಗಾಯವಾಗಿರುತ್ತದೆ. ರಘುರಾಜ್ ರವರನ್ನು  ಚಿಕಿತ್ಸೆ ಬಗ್ಗೆ ಸುರತ್ಕಲ್ ನ ಅಥರ್ವ ಆಸ್ಫತ್ರೆಗೆ ಹಾಗೂ ಸಂತೋಷ್ ರವರನ್ನು ಮುಕ್ಕ ಶ್ರೀನಿವಾಸ ಆಸ್ಫತ್ರೆಗೆ ದಾಖಲಿಸಿದ್ದು, ಅಫಘಾತದಿಂದ (ETS) ಉಪಕರಣ ಜಖಂಗೊಂಡು ಸಂಸ್ಥೆಗೆ 50,000-/ ನಷ್ಟವಾಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 23 /2022 ಕಲಂ: 279, 338, 427 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.      

ಅಸ್ವಾಭಾವಿಕ ಮರಣ ಪ್ರಕರಣ

 • ಮಲ್ಪೆ: ಪಿರ್ಯಾದಿದಾರರಾದ ಜಯರಾಮ್ ಸಿಂಗ್(32), ತಂದೆ: ಬೀರಸುರಸಿಂಗ್, ಹಾಲಿ ವಾಸ: ತೋಟದ ಮನೆ, ಪಡುಕುದ್ರು, ಗಜನಿ, ತೊನ್ಸೆವೆಸ್ಟ್ ಉಡುಪಿ ಇವರು ಮತ್ತು  ಬಾಲಿರಾಮ್  ಮತ್ತು ಅರ್ಜುನ್ ಪ್ರದಾನ್ ಪಡುಕುದ್ರು  ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ,  ದಿನಾಂಕ 28/02/2022 ರಂದು ರಾತ್ರಿ ಊಟ ಮಾಡಿ  11:00 ಗಂಟೆಗೆ ಎಲ್ಲರೂ ಮಲಗಿದ್ದು, ದಿನಾಂಕ 01/03/2022 ರಂದು ಬೆಳಿಗ್ಗೆ 5:40 ಗಂಟೆಗೆ ಎದ್ದಾಗ ಅರ್ಜುನ್ ಪ್ರದಾನ್ (29)  ಉಸಿರು ಕಟ್ಟಿದವನಂತೆ  ಓದ್ದಾಡುತ್ತಿದ್ದು , ಅಲ್ಲದೆ ಅಲ್ಲಿಯೆ ಮೂತ್ರ ವಿಸರ್ಜನೆ ಮಾಡಿರುತ್ತಾನೆ , ಪಿರ್ಯಾದಿದಾರರು  ಅವರ ಮಾಲೀಕರಿಗೆ ವಿಷಯ ತಿಳಿಸಿದ್ದು ,ಕೂಡಲೆ ಉಪಚರಿಸಿ ಅರ್ಜುನ್ ಪ್ರದಾನ್ ನನ್ನು ಕೆಎಂಸಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಬೆಳಿಗ್ಗೆ  06:20 ಗಂಟೆಗೆ ಅರ್ಜುನ್ ಪ್ರದಾನ್ ಈ ಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ , ಅರ್ಜುನ್ ಪ್ರದಾನ್ ಯಾವುದೋ ಅನಾರೋಗ್ಯದಿಂದಲೋ ಅಥವಾ  ಇನ್ಯಾವುದೋ ಕಾರಣದಿಂದ ಅಸ್ವಸ್ಥಗೊಂಡು  ಮೃತಪಟ್ಟಿರುವುದಾಗಿದೆ . ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 09 /2022  ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಗಂಗೊಳ್ಳಿ; ಪಿರ್ಯಾದಿದಾರರಾದ ವಿನಯ ಶೆಟ್ಟಿ (51), ಗಂಡ:ಶಂಕರ ಶೆಟ್ಟಿ ವಾಸ: ಸರ್ಗೇರ್  ಮನೆ ಸೇನಾಪುರ ಗ್ರಾಮ , ಕುಂದಾಪುರ  ತಾಲೂಕು ಇವರು ತನ್ನ ಗಂಡ ಶಂಕರ ಶೆಟ್ಟಿ, ತಂಗಿ ರುಕ್ಮೀಣಿ, ತಮ್ಮ ಜೋಗೇಶ ಶೆಟ್ಟಿ ರವರೊಂದಿಗೆ ಸೇನಾಪುರ ಗ್ರಾಮದ ಸರ್ಗೇರ್ ಮನೆಯಲ್ಲಿ ವಾಸವಾಗಿದ್ದು, ರುಕ್ಮೀಣಿ(49) ರವರು ದಿನಾಂಕ 01/03/2022 ರಂದು ಮದ್ಯಾಹ್ನ 12:00 ಗಂಟೆಯಿಂದ 2:15 ಗಂಟೆಯ  ನಡುವೆ ಪಿರ್ಯಾದಿದಾರರ ಮನೆಯ ಬಳಿ ಇರುವ ತೋಟದಲ್ಲಿನ ಕೆರೆಯಲ್ಲಿ ಬಿದ್ದಿದ್ದ ತೆಂಗಿನ ಕಾಯಿಯನ್ನು ಕೊಕ್ಕೆಯಿಂದ ತೆಗೆಯುವಾಗ ಆಕಸ್ಮೀಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಕೆರೆಯ ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 03/2022 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಅಜೆಕಾರು: ಪಿರ್ಯಾದಿದಾರರಾದ ದೀಪಕ್ ಶೆಟ್ಟಿ  (34), ತಂದೆ: ಭೋಜ ಶೆಟ್ಟಿ, ವಾಸ: ಪರಾರಿ ಮನೆ ಅಂಡಾರು ಗ್ರಾಮ ಹೆಬ್ರಿ  ತಾಲೂಕು ಇವರು 2007 ರಲ್ಲಿ ಅಂಡಾರುವಿನ ಶ್ರೀ ರಾಮ ಗುಡ್ಡೆಯ ಬಳಿ ಹೊಸ ಮನೆಯೊಂದನ್ನ ಕಟ್ಟಿದ್ದು, ತಾಯಿ ಮನೆಯಲ್ಲಿ ದೈವ ದೇವರುಗಳು ಇರುವ ಕಾರಣ ಹೊಸ ಮನೆಯಲ್ಲಿ ಇರದೆ ತಾಯಿಯ ಮನೆಯಲ್ಲಿಯೇ ಇರುವುದಾಗಿದೆ. ಪಿರ್ಯಾದಿದಾರರ ತಂದೆ ಭೋಜ ಶೆಟ್ಟಿ ಯವರು ತಾಯಿ ಮನೆಯಲ್ಲಿ ಇರದೇ ಹೊಸ ಮನೆಯಲ್ಲಿಯೇ ಒಬ್ಬರೆ ವಾಸ ಮಾಡಿಕೊಂಡಿದ್ದು, 2-3 ದಿನಗಳಿಗೊಮ್ಮೆ ಮನೆಗೆ ಬಂದು ಹೋಗುತ್ತಿರುವುದಾಗಿದೆ. ಅವರಿಗೆ 7-8 ವರ್ಷಗಳಿಂದ ಅಸ್ತಮಾ ಖಾಯಿಲೆಯು ಇದ್ದು, ಈ ಬಗ್ಗೆ ಮದ್ದನ್ನು ಪಡೆದುಕೊಳ್ಳುತ್ತಿದ್ದು,  ಅಲ್ಲದೇ ವಿಪರೀತ ಮಧ್ಯ ಸೇವನೆಯನ್ನು ಕೂಡಾ ಮಾಡುತ್ತಿದ್ದರು.  ದಿನಾಂಕ; 01/03/2022 ರಂದು ಪಿರ್ಯಾದಿದಾರರ ಪರಿಚಯದ ಸುಂದರ ನಾಯ್ಕ್ ಎಂಬುವವರು ಕರೆ ಮಾಡಿ ಭೋಜ ಶೆಟ್ಟಿಯವರು ಶ್ರೀ ರಾಮ ಗುಡ್ಡೆಯ ಮನೆಯ ಮುಂದಿನ ಮಾವಿನ ಮರದ ಕೊಂಬೆಗೆ ನೇಣು ಬಿಗಿದು ಮೃತಪಟ್ಟಿರುವ ವಿಚಾರ ತಿಳಿಸಿದ ಮೇರೆಗೆ ಪಿರ್ಯಾದಿದಾರರು ಸ್ಥಳಕ್ಕೆ ಬಂದು ನೋಡಲಾಗಿ ಮನೆಯ ಮುಂದಿನ ಮಾವಿನ ಮರದ ಕೊಂಬೆಗೆ ನೈಲಾನ್ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಭೋಜ ಶೆಟ್ಟಿಯವರ ಮೃತದೇಹವನ್ನು ಕಂಡಿರುತ್ತಾರೆ. ಮೃತ ಭೋಜ ಶೆಟ್ಟಿಯವರು 7-8 ವರ್ಷಗಳಿಂದ ಅಸ್ತಮಾ, ಟಿ.ವಿ ಖಾಯಿಲೆಗಳಿಂದ ಬಳಲುತ್ತಿದ್ದು, ಅಲ್ಲದೇ ವಿಪರೀತ ಮಧ್ಯ ಸೇವನೆಯ ಚಟವನ್ನು ಕೂಡಾ ಹೊಂದಿದ್ದು ಇದೇ ಕಾರಣಗಳಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮಾವಿನ ಮರದ ಕೊಂಬೆಗೆ ನೈಲಾನ್ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 05/2022 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ

ಇತ್ತೀಚಿನ ನವೀಕರಣ​ : 02-03-2022 09:55 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080