ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು:

  •  ಉಡುಪಿ:  ದಿನಾಂಕ:02-03-2022ರಂದು ಪಿರ್ಯಾದಿ ಟಿ. ಕೃಷ್ಣಾನಂದ ಪೈ ಪ್ರಾಯ 46 ವರ್ಷ, ತಂದೆ: ಟಿ.ಶ್ರೀಧರ.ಪೈ , ವಾಸ:  ಮನೆ ನಂ: 3-44ಎ ಗರಡಿ ಮಜಲು , ತೆಂಕನಿಡಿಯೂರು  ಗ್ರಾಮ, ತೊಟ್ಟಂ ಅಂಚೆ, ಇವರ ತಮ್ಮನಾದ ಟಿ. ಗಣೇಶ್ ಪೈ ರವರು ತನ್ನ KA20Y3561ನೇ ಟಿ.ವಿ ಎಸ್ ಎಕ್ಸ್.ಎಲ್ ಸೂಪರ್ ಹೆವಿ ಡ್ಯೂಟಿ ದ್ವಿಚಕ್ರ ವಾಹನದಲ್ಲಿ ತನ್ನ ಮಗಳಾದ ಗಾಯತ್ರಿಯವರನ್ನು ಹಿಂಬದಿ ಕುಳ್ಳೀರಿಸಿ ಸವಾರಿ ಮಾಡಿಕೊಂಡು ರಾ.ಹೆ 66 ರ ಸಂತೆಕಟ್ಟೆ ಜಂಕ್ಷನ್ ನಲ್ಲಿ ಬ್ರಹ್ಮಾವರದಿಂದ ಉಡುಪಿ ಕಡೆಗೆ ವಾಹನಗಳು ಹೋಗುವ ಏಕಮುಖ ರಸ್ತೆಯನ್ನು ದಾಟಿ ಉಡುಪಿ ಕಡೆಯಿಂದ ಬ್ರಹ್ಮಾವರದ ಕಡೆಗೆ ಹೋಗುವ ಡಾಮಾರುರಸ್ತೆಯನ್ನು ದಾಟಿ ರಸ್ತೆಯ ಅಂಚಿನಲ್ಲಿ ತಲುಪುವಾಗಸಮಯ ಸುಮಾರು ಮುಂಜಾನೆ 05-30 ಗಂಟೆಗೆಉಡುಪಿ ಕಡೆಯಿಂದ ಬ್ರಹ್ಮಾವರದ ಕಡೆಗೆ KL01CD5451ನೇ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಸನೀಶ್ ಮೋಹನ್ .ಕೆ ಎಂಬಾತ ತನ್ನ ಬಸ್ ನ್ನು ಸಂತೆಕಟ್ಟೆ ಜಂಕ್ಷನ್ ನಲ್ಲಿ ದುಡುಕುತನ ಮತ್ತು ನಿರ್ಲಕ್ಷತನದಿಂದ ತೀರಾ ಎಡಬದಿಗೆ ಚಲಾಯಿಸಿ ಗಣೇಶ್ ಪೈಯವರು ಸವಾರಿಮಾಡುತ್ತಿದ್ದ KA20Y3561ನೇ ಟಿ.ವಿ ಎಸ್ ಎಕ್ಸ್.ಎಲ್ ಸೂಪರ್ ಹೆವಿ ಡ್ಯೂಟಿ ದ್ವಿಚಕ್ರ ವಾಹನಕ್ಕೆ ಎಡ ಬದಿಗೆ ಹಿಂಬದಿ ಸವಾರರು ಎಡಬದಿ ಕಾಲು ಇಡುವ ಫೂಟ್ ರೆಸ್ಟ್ ಗೆ ಡಿಕ್ಕಿ ಹೊಡೆದ ಪರಿಣಾಮ ದ್ಚಿಚಕ್ರ ವಾಹನದಲ್ಲಿದ್ದ ಸವಾರ ಟಿ. ಗಣೇಶ್.ಪೈ (58)  ಮತ್ತು ಸಹ ಸವಾರಳಾದ ಗಾಯತ್ರಿ (27)ಯವರುರಸ್ತೆಗೆ ಎಸೆಯಲ್ಪಟ್ಟು ಇಬ್ಬರಿಗೂ ತಲೆಗೆ ಗಂಭೀರ ಗಾಯವಾಗಿರುತ್ತದೆ. ಸಹಸವಾರೆಯಾದ ಗಾಯತ್ರಿಯವರನ್ನು 108 ಆಂಬ್ಯೂಲೆನ್ಸ್ ನಲ್ಲಿ ಉಡುಪಿ ಜಿಲ್ಲಾ ಸರಕಾರಿ  ಆಸ್ಪತ್ರೆಗೆ ತಂದಾಗ ಪರೀಕ್ಷಿಸಿದ ವೈದ್ಯರು ಗಾಯತ್ರಿಯವರು ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ. ಸವಾರರಾದ ಟಿ. ಗಣೇಶ್ ಪೈರವರನ್ನು ಹೈಟೆಕ್ ಆಸ್ಪತ್ರೆಗೆ ಚಿಕಿತ್ಸೆ ಕರೆದುಕೊಂಡು ಹೋಗಿದ್ದು,ನಂತರ ಅಲ್ಲಿಂದ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು,ಪರೀಕ್ಷಿದ ವೈದ್ಯರು ಟಿ. ಗಣೇಶ್ ಪೈ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಉಡುಪಿ ಸಂಚಾರ ಠಾಣೆ  ಅಪರಾಧ ಕ್ರಮಾಂಕ : 19/2022 ಕಲಂ: 279, 304(A) ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ:

  • ಉಡುಪಿ:  ಪಿರ್ಯಾದಿ ಶ್ರೀಮತಿ ರಮಣಿ ಪ್ರಾಯ: 50 ವರ್ಷ ವಿಳಾಸ: ಪ್ರಭಾರ ಮುಖ್ಯ ಶಿಕ್ಷಕಿ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಹನುಮಂತ ನಗರ, ಪುತ್ತೂರು ಗ್ರಾಮ, ಇವರು ಪುತ್ತೂರು ಗ್ರಾಮದ ಹನುಮಂತನಗರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ದಿನಾಂಕ 28/02/2022 ರಂದು 16:15 ಗಂಟೆಯಿಂದ ದಿನಾಂಕ 02/03/2022 ರಂದು ಬೆಳಿಗ್ಗೆ09:00 ಗಂಟೆ ನಡುವಿನ ಸಮಯದಲ್ಲಿ ಯಾರೋ ಕಿಡಿಗೇಡಿಗಳು ಶಾಲೆಯ ಕಟ್ಟಡದ ಹಂಚಿಗೆ ದೊಡ್ಡ ದೊಡ್ಡ ಕಲ್ಲುಗಳನ್ನು ಬಿಸಾಡಿ, ಸಾರ್ವಜನಿಕ ಸೊತ್ತು ಆಗಿರುವ ಶಾಲೆಯ ಕಟ್ಟಡದ ಮಾಡಿನ ಸುಮಾರು 100 ರಷ್ಟು ಹಂಚುಗಳನ್ನು ಹಾನಿಗೊಳಿಸಿ, ಅಂದಾಜು ರೂ. 25,000/- ನಷ್ಟವನ್ನುಂಟು ಮಾಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಅಪರಾಧ ಕ್ರಮಾಂಕ ಪೊಲೀಸ್ ಠಾಣೆ  40/2022, ಕಲಂ: 427  IPC   & ಕಲಂ: 3  PREVENTION OF DAMAGE TO PUBLIC PROPERTY ACT, 1984 ರಂತೆ ಪ್ರಕರಣ ದಾಖಲಿಸಲಾಗಿದೆ.
  • ಕೋಟ: ಪಿರ್ಯಾದಿ ಆನಂದ ಶೆಟ್ಟಿ ಪ್ರಾಯ 53 ವರ್ಷ ತಂದೆ: ಮಂಜಯ್ಯ ಶೆಟ್ಟಿ ಮುಖ್ಯ ಶಿಕ್ಷಕರು  ಸರಕಾರಿ ಪ್ರೌಡ ಶಾಲೆ  ವಡ್ಡರ್ಸೆ ಬನ್ನಾಡಿ ಅಂಚೆ  ಇವರು  ಸರಕಾರಿ ಪ್ರೌಢ  ಶಾಲೆ  ವಡ್ಡರ್ಸೆ ಯ ಮುಖ್ಯ ಶಿಕ್ಷಕರ ರಾಗಿದ್ದು, ದಿನಾಂಕ 28/02/2022 ಸಂಜೆ 05.30 ರಿಂದ ದಿನಾಂಕ 02/03/2022 ರ ಬೆಳಿಗ್ಗೆ 09.00 ಗಂಟೆಯ ಮಧ್ಯಾವಧಿ ಯಲ್ಲಿ ಯಾರೋ ಕಿಡಿಗೇಡಿಗಳು ಶಾಲೆಯ ಒಳಗೆ ಅಕ್ರಮ ಪ್ರವೇಶ ಮಾಡಿದ್ದು ಶಾಲೆಯ ಕಿಟಕಿಗೆ ಅಳವಡಿಸಿದ 5 ಕಿಟಕಿಯ ಗ್ಲಾಸ್ ,ನೀರು ಸರಬರಾಜು  ಉದ್ದೇಶಕ್ಕೆ ಅಳವಡಿಸಿದ ಪಿವಿಸಿ ಪೈಪ್ ಮತ್ತು ಶೌಚಾಲಯಕ್ಕೆ ಅಳವಡಿಸಿದ್ದ  5 ಕಿಟಕಿಯ ಗ್ಲಾಸ್, ಶಾಲೆಯ ರೂಫ್ ಮೇಲೆ ಅಳವಡಿಸಿದ ನೀರು ಸಂಗ್ರಹಣಾ ಸಿಂಟೆಕ್ಸ ಟ್ಯಾಂಕನ್ನು ಒಡೆದು ಹಾಕಿದ್ದು ಸರಕಾರಿ ಸೊತ್ತಿಗೆ ಹಾನಿ ಮಾಡಿ ಶಾಲೆಗೆ ಸುಮಾರು 50000/- ನಷ್ಟ ವುಂಟು ಮಾಡಿರುತ್ತಾರೆ. ಇದರಿಂದಾಗಿ ಶಾಲೆಯ ಬಿಸಿ ಊಟದ ವ್ಯವಸ್ಥೆಗೆ ತೊಂದರೆ ಯಾಗಿರುತ್ತದೆ . ಈ ಬಗ್ಗೆ ಕೋಟ ಠಾಣಾ ಅಪರಾಧ.ಕ್ರಮಾಂಕ  27/2022  ಕಲಂ: 447.427  IPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಗಂಡಸು ಕಾಣೆ:

  • ಕಾರ್ಕಳ : ಕಾರ್ಕಳ ತಾಲೂಕು ನಿಟ್ಟೆಗ್ರಾಮದ ಪರನೀರು ಪಾದೆ, ಲೆಮಿನಾಕ್ರಾಸ್ ನಿವಾಸಿ ಶ್ರೀಮತಿ ಝಾನ್ಸಿ ಇವರ ಗಂಡ ರವಿಕಿರಣ್, ಪ್ರಾಯ 35 ವರ್ಷ, ಇವರು ದಿನಾಂಕ 16/02/2022 ರಂದು ಮಧ್ಯಾಹ್ನ 3:00 ಗಂಟೆಗೆ, ತಾನು ಚಿಕ್ಕಮಂಗಳೂರಿನ ಗಾಲಿಯಲ್ಲಿರುವ ತನ್ನ ತಂದೆ, ತಾಯಿಯವರ ಮನೆಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋದವರು ತಂದೆ, ತಾಯಿಯ ಮನೆಗೂ, ಸಂಬಂಧಿಕರ ಮನೆಗೂ ಹೋಗದೇ, ಇದುವರೆಗೆ ಮನೆಗೆ ವಾಪಾಸು ಬಾರದೇ ಕಾಣೆಯಾಗಿರುತ್ತಾರೆ.ಕಾಣೆಯಾದ ವ್ಯಕ್ತಿಯ ವಿವರ: ಹೆಸರು: ರವಿ ಕಿರಣ್, ವಯಸ್ಸು 35 ವರ್ಷ, ತಂದೆ: ಜಯಣ್ಣ, ಮುಖ: ದುಂಡು ಮುಖ, ಎತ್ತರ : 166 ಸೆಂ.ಮೀ, ಕೂದಲು: ಕಪ್ಪುಮೈ ಬಣ್ಣ: ಎಣ್ಣೆ ಕಪ್ಪು, ಮೈಕಟ್ಟು : ಧೃಡಕಾಯ ಶರೀರ ನೀಲಿ ಬಣ್ಣದ ಷರ್ಟ್ ನೀಲಿ ಬಣ್ಣದ ಜೀನ್ಸ್ ಫ್ಯಾಂಟ್ ಧರಿಸಿದ್ದು, ತಮಿಳು, ಕನ್ನಡ, ತುಳು, ತೆಲುಗು, ಭಾಷೆ ಮಾತನಾಡುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆ ಅಪರಾಧ .ಕ್ರಮಾಂಕ 25/2022   ಕಲಂ ಗಂಡಸು ಕಾಣೆ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು:

  • ಬೈಂದೂರು: ಪಿರ್ಯಾದು ರಾಘವೇಂದ್ರ ಶೇರುಗಾರ  ಪ್ರಾಯ: 47 ವರ್ಷ ತಂದೆ: ಸದಾಶಿವ ಶೇರುಗಾರ ವಾಸ: ತಿಮ್ಮಜ್ಜನ ಮನೆ ಬಿಜೂರು ಗ್ರಾಮ ಇವರು ದಿನಾಂಕ 02/03/2022 ರಂದು ಬೆಳಿಗ್ಗೆ 09;00 ಗಂಟೆ ಸಮಯಕ್ಕೆ ಬಿಜೂರು ಗ್ರಾಮದ ಸುಮನಾವತಿ ಹೊಳೆಯ ಬದಿಯಲ್ಲಿ  ಅವರ ತೋಟದಲ್ಲಿ  ತೆಂಗಿನಕಾಯಿ ತರುವರೇ ಹೋಗುತ್ತಿರುವಾಗ ಹೊಳೆಯ ದಡದ ಬಳಿ ನೀರಿನಲ್ಲಿ  ಒಂದು ಗಂಡಸಿನ ಮೃತ ದೇಹವು ತೇಲಿ ಬರುತ್ತಿದ್ದುದನ್ನುಕಂಡು ಮನೆಯ ಹತ್ತಿರದವರನ್ನು ಕರೆಯಿಸಿ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿ ಮೃತ ದೇಹವನ್ನು ಮೇಲಕ್ಕೆ ಎತ್ತಿ ಪರಿಶೀಲಿಸಿದಲ್ಲಿ  ಸುಮಾರು 40 ವರ್ಷ ಪ್ರಾಯದ ಗಂಡಸಿನ ಮೃತ ದೇಹವಾಗಿದ್ದು  ಮೃತನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಮೃತನು ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು  ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಯುಡಿಅರ್‌ ನಂಬ್ರ 10/2022 ಕಲಂ 174 ಸಿಅರ್‌ಪಿಸಿ. ಯಂತೆ ಪ್ರಕರಣ ದಾಖಲಿಸಲಾಗಿದೆ. 
  • ಹೆಬ್ರಿ: ಫಿರ್ಯಾದಿ ಕೋಚ ಪೂಜಾರಿ ಪ್ರಾಯ 85 ವರ್ಷ ತಂದೆ: ದಿ.ಒಬಯ್ಯ ಪೂಜಾರಿ ವಾಸ: ಹೆಬ್ಬಾಗಿಲುಮನೆ ಹೊಸುರು ಹೆಬ್ರಿ ಗ್ರಾಮ ಇವರ ಪತ್ನಿ ಅಪ್ಪಿ ಪೂಜಾರ್ತಿ ಪ್ರಾಯ 78 ವರ್ಷ ರವರು ಪ್ರಾಯಸ್ಥರಾಗಿದ್ದು ಸುಮಾರು 15-20 ವರ್ಷಗಳಿಂದ ಅವರು ಬೆನ್ನು ನೋವಿನಿಂದ ಬಳಲುತ್ತಿದ್ದರು ಈ ಬಗ್ಗೆ ಅವರಿಗೆ ಹೆಬ್ರಿ ರಾಘವೇಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿದರೂ ಗುಣಮುಖರಾಗಿರುವುದಿಲ್ಲ. ಇದೇ ವಿಚಾರದಲ್ಲಿ ಅವರು ಮನನೊಂದು ದಿನಾಂಕ:02/03/2022 ರಂದು ಮಧ್ಯಾಹ್ನ 12:00 ಗಂಟೆಯಿಂದ 12:30 ಗಂಟೆಯ ಮಧ್ಯಾವಧಿಯಲ್ಲಿ ಹೆಬ್ರಿ ಗ್ರಾಮದ  ಹೆಬ್ಬಾಗಿಲುಮನೆ ಹೊಸೂರು  ಎಂಬಲ್ಲಿರುವ ಅವರ ಮನೆಯಲ್ಲಿ ಯಾರೂ ಇಲ್ಲದ ಸಮಯ ಮನೆಯ ಬಚ್ಚಲು ಮನೆಯ ಒಳಗೆ ಹೋಗಿ ಬಾಗಿಲಿನ ಒಳಗಿನ ಚಿಲಕವನ್ನು ಹಾಕಿಕೊಂಡು ಬಚ್ಚಲು ಕೋಣೆಯ ಮೇಲಿನಪಕ್ಕಾಸಿಗೆ ನೈಲಾನ್ ಹಗ್ಗವನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯವಿಲ್ಲ .ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ.UDR NO 11/2022 U/s 174 CRPC ಯಂತೆ ಯಂತೆ ಪ್ರಕರಣ ದಾಖಲಿಸಲಾಗಿದೆ. 

ಇತ್ತೀಚಿನ ನವೀಕರಣ​ : 02-03-2022 06:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080