ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಗಂಗೊಳ್ಳಿ: ದಿನಾಂಕ 01/03/2021 ರಂದು  ಪಿರ್ಯಾದಿದಾರರಾದ ಶೀನಪ್ಪ ಶೆಟ್ಟಿ(60), ತಂದೆ: ಮಂಜಯ್ಯ ಶೆಟ್ಟಿ, ವಾಸ: ನಾರ್ಕಳಿ ಮೇಲ್ಮನೆ, ಹರ್ಕೂರು ಗ್ರಾಮ, ಕುಂದಾಪುರ ತಾಲೂಕು ಇವರ ಅತ್ತಿಗೆಯ ಮಗ ಪ್ರದೀಪ್‌ ಶೆಟ್ಟಿ ಎಂಬುವವರು ಪಿರ್ಯಾದಿದಾರರ ಮನೆಯ ಕೆಲಸಕ್ಕೆ ಬರುವ ನಾರ್ಕಳಿ ನಡುಬೆಟ್ಟುವಿನ ರಾಮಣ್ಣ ಶೆಟ್ಟಿ ಯವರನ್ನು ತನ್ನ ಮೊಟಾರು ಸೈಕಲ್‌ ನಂಬ್ರ KA-20-EM-8785 ರಲ್ಲಿ ಸಹ ಸವಾರನಾಗಿ ಕುಳ್ಳರಿಸಿಕೊಂಡು  10:30 ಗಂಟೆಗೆ ಪಿರ್ಯಾದಿದಾರರ ಮನೆಯ ಸಮೀಪ ಕೋಡ್ಗಿ ಪಾರೆ ಬಳಿ ಮೋಟಾರು ಸೈಕಲ್‌ನ್ನು ಇಳಿಜಾರು ರಸ್ತೆಯಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಮೋಟಾರು ಸೈಕಲ್‌ ನಿಯಂತ್ರಣ ತಪ್ಪಿ ಬಿದ್ದಿದ್ದು ಸಹ ಸವಾರರಾದ ರಾಮಣ್ಣ ಶೆಟ್ಟಿರವರ ಬಲಕಾಲಿಗೆ ಮೋಟಾರು ಸೈಕಲ್‌ನ ಚಕ್ರ ಸಿಲುಕಿ ಮೂಳೆ ಮುರಿತ ಉಂಟಾಗಿರುತ್ತದೆ. ರಾಮಣ್ಣ ಶೆಟ್ಟಿ ಯವರನ್ನು ಚಿಕಿತ್ಸೆಯ ಬಗ್ಗೆ ಪಿರ್ಯಾದಿದಾರರು ಚಿನ್ಮಯಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 23/2021 ಕಲಂ: 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 02-03-2021 09:49 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ