ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣಗಳು

  • ಶಂಕರನಾರಾಯಣ : ದಿನಾಂಕ  01.03.2021 ರಂದು 21:15 ಘಂಟೆಗೆ ಫಿರ್ಯಾದು ಭಾಸ್ಕರ ಶೆಟ್ಟಿ ಪ್ರಾಯ 42 ವರ್ಷ ತಂದೆ : ನಾಗಯ್ಯ ಶೆಟ್ಟಿ. ವಾಸ, ದೈವದ  ಮನೆ  ಕೊಡ್ಲಾಡಿ ಗ್ರಾಮ ಕುಂದಾಪುರ ತಾಲೂಕು ಇವರು ಕುಂದಾಪುರ ತಾಲೂಕಿನ ಕೊಡ್ಲಾಡಿ ಗ್ರಾಮದ ಬಾರಾಳಿ ಆನಂದ ಶೆಟ್ಟಿ ಎಂಬುವರ ಮನೆಯಲ್ಲಿ ನಡೆಯುತ್ತಿದ್ದ ಯಕ್ಷಗಾನ ನೋಡಲು ಹೋಗಿದ್ದು, ಈ ಸಮಯ ಆರೋಪಿ ಸದಾನಂದ ಶೆಟ್ಟಿ ಕೊಡ್ಲಾಡಿ ಗ್ರಾಮ ಇವರು ಫಿರ್ಯಾದುದಾರರಲ್ಲಿ ನನನ್ನು ಯಾಕೇ ಗುರಾಯಿಸುತ್ತೀಯಾ ಎಂದು ಹೇಳಿ ಅವರ ಹಿಂದಿನಿಂದ ಬಂದು ಕಬಿಣ್ಣದ ರಾಡ್‌ನಿಂದ ತಲೆಯ ಹಿಂಬದಿಗೆ ಹೊಡೆದಿರುತ್ತಾನೆ, ಈ ಸಮಯ ಯಕ್ಷಗಾನ ನೋಡುತ್ತಿದ್ದವರು ಬಂದು ಜಗಳ ತಪ್ಪಿಸಿದ್ದು, ಆದರೂ ಸಹ ಆರೋಪಿಯು ಪುನ: ಫಿರ್ಯಾಧುದಾರರನ್ನು ಅಡ್ಡಗಟ್ಟಿ ಕೈಯಿಂದ ದೂಡಿ ಹಾಕಿ ಅವಾಚ್ಯ ಶಬ್ದಗಳಿಂದ ಬೈದು, ನಿನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾನೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 27/2021 ಕಲಂ: 341, 323, 324, 504, 506 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕಾರ್ಕಳ  : ದಿನಾಂಕ: 28/02/2021 ರಂದು ಕಾರ್ಕಳ ತಾಲೂಕು ದುರ್ಗಾ ಗ್ರಾಮದ ತೆಳ್ಳಾರು ಶ್ರೀ ಜಲದುರ್ಗಾ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ದಂತಿ ಉತ್ಸವ ಪ್ರಯುಕ್ತ ರಾತ್ರಿ ವೇಳೆ ನಡೆಯುತ್ತಿದ್ದ ಯಕ್ಷಗಾನಕ್ಕೆ ಪಿರ್ಯಾದಿ ಹರೀಶ್ ಶೆಟ್ಟಿ ಪ್ರಾಯ: 32 ವರ್ಷ ತಂದೆ: ದಿ ಶಂಕರ ಶೆಟ್ಟಿ  ವಾಸ: ದ ರ್ಖಾಸುಮನೆ ತೆಳ್ಳಾರು ಅಂಚೆ ದುರ್ಗಾ ಗ್ರಾಮ ಕಾರ್ಕಳ ತಾಲೂಕು ಉಡುಪಿ ಈವರು ರಾತ್ರಿ 8:00 ಗಂಟೆಗೆ ದೇವಸ್ಥಾನಕ್ಕೆ ಹೋಗಿ ದೇವಸ್ಥಾನದ ವಠಾರದಲ್ಲಿರುವ ಯಕ್ಷಗಾನವನ್ನು ನೋಡಿ ಮುಕ್ತಾಯವಾದ ಬಳಿಕ ಬೆಳಗಿನ ಜಾವ 03:00 ಗಂಟೆ ಸಮಯಕ್ಕೆ ದೇವಸ್ಥಾನ ಮುಂಭಾಗದ ರಸ್ತೆಯಲ್ಲಿ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಪರಿಚಯದ ಶಿವಾನಂದ ಯಾನೆ ಸುನಿಲ್ ನು  ಯಾರಿಗೋ ಬೈಯುತ್ತಿದ್ದನ್ನು ಕಂಡು ನೀನು ಯಾರಿಗೆ ಬೈಯುತ್ತಿ ಎಂದು ಕೇಳಿದಾಗ ಆರೋಪಿಯು ಅವಾಚ್ಯ ಶಬ್ದಗಳಿಂದ ಬೈದು ರಸ್ತೆಯಲ್ಲಿದ್ದ ಒಂದು ಕಲ್ಲಿನಿಂದ ಪಿರ್ಯಾದಿದಾರರ ತಲೆಯ ಹಿಂಬದಿಗೆ, ಮುಖಕ್ಕೆ ಹೊಡೆದು ಹಲ್ಲೆ ಮಾಡಿರುವುದಾಗಿದೆ. ಪಿರ್ಯಾದಿದಾರರು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 24/2021 ಕಲಂ: 504, 324 ಐಪಿಸಿ ಯಂತೆ ಪ್ರಕ ರಣ ದಾಖಲಿಸಿಕೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿ ಚೆನ್ನಬಸಪ್ಪ(72), ತಂದೆ: ದಿ: ಕಲ್ಲಪ್ಪ, ವಾಸ: ತಿಪ್ಪೇಗುಂಡೇರಾ ಮನೆ, ಆಲಗಟ್ಟಿ ಅಂಚೆ, ಓಬವ್ವ ನಾಗತಿಹಳ್ಳಿಗ್ರಾಮ, ಚಿತ್ರಾದುರ್ಗಾ ತಾಲೂಕು ಮತ್ತು ಜಿಲ್ಲೆ ಇವರ ಮಗ ಟಿ.ಸಿ ಶಿವ ಕುಮಾರ್(39)  ರವರು  ದಿನಾಂಕ: 28/02/2021 ರಂದು ರಾತ್ರಿ 12:00 ಗಂಟೆಗೆ ಅಕ್ಕಪಕ್ಕದ ಸಂಬಧಿಕರೆಲ್ಲರೂ ಸೇರಿ  ಒಟ್ಟು 13 ಜನ ಸಿಂಗದೂರು, ಧರ್ಮಸ್ಥಳ, ಉಡುಪಿ ಕಡೆಗೆ ಪ್ರವಾಸ ಹೊರಟಿದ್ದು, ದಿನಾಂಕ: 01/03/2021 ರಂದು ರಾತ್ರಿ 9:30 ಗಂಟೆಗೆ ಮನೆಯ ಪಕ್ಕದ ಹನುಮಂತಪ್ಪ ಎಂಬುವವರು ಪ್ರವಾಸಕ್ಕೆ ಹೋದ ಟಿ.ಸಿ ಶಿವ ಕುಮಾರ್ ಉಡುಪಿ ಜಿಲ್ಲೆಯ ಹಿರಿಯಡ್ಕ ದಲ್ಲಿ ಅಸ್ವಸ್ಥಗೊಂಡಿದ್ದವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋದಲ್ಲಿ ದಾರಿ ಮದ್ಯೆ ಮೃತಪಟ್ಟಿರುವುದಾಗಿ ತಿಳಿಸಿದಂತೆ ಪಿರ್ಯಾಧಿದಾರರು ಕೂಡಲೇ ಚಿತ್ರದುರ್ಗದಿಂದ ಹೊರಟು ಮಣಿಪಾಲಕ್ಕೆ ಬಂದು ವಿಚಾರಿಸಿದಲ್ಲಿ ಪ್ರವಾಸಕ್ಕೆ ಬಂದ ಟಿ.ಸಿ ಶಿವ ಕುಮಾರ್ ನು ಆಗಾಗ ಗಾಡಿಯಿಂದ ಇಳಿದು ಮಧ್ಯಪಾನ ಮಾಡುತ್ತಿದ್ದು, ಸರಿಯಾಗಿ ಊಟವನ್ನು ಮಾಡುತ್ತಿರಲಿಲ್ಲ. ದಿನಾಂಕ: 01/03/2021 ರಂದು ಧರ್ಮಸ್ಥಳಕ್ಕೆ ಹೋಗುವರೇ ಉಡುಪಿ ಕಾರ್ಕಳ ರಸ್ತೆಯಾಗಿ ಹಿರಿಯಡ್ಕ ಬಳಿ ಪೆಟ್ರೋಲ್ ಬಂಕ್ ಬಳಿ ಸಮಯ ರಾತ್ರಿ 7:45 ಗಂಟೆಗೆ ತಿಂಡಿ ತಿನ್ನಲೂ ಎಲ್ಲರೂ  ಇಳಿದಾಗ ಶಿವ ಕುಮಾರ್ ನನಗೆ ಹೊಟ್ಟೆ ಸರಿಯಿಲ್ಲ ನಾನು ಗಾಡಿಯಲ್ಲಿಯೇ   ಉಳಿಯುತ್ತೇನೆ ಎಂದು ಹೇಳಿದ್ದು, ಉಳಿದವರೆಲ್ಲರೂ ಅಲ್ಲೇ ಪಕ್ಕದಲ್ಲಿ ಅಂಗಡಿಯಲ್ಲಿ ತಿಂಡಿ ತಿಂದು ವಾಪಾಸು ಬಂದು ನೋಡಿದಾಗ ಶಿವ ಕುಮಾರ್ ಕುಳಿತಲ್ಲಿಂದ ಕೆಳಗೆ ಬಿದ್ದಿದ್ದು ಮಾತಾನಾಡುತ್ತಿರಲಿಲ್ಲ. ನಂತರ ಕೂಡಲೇ  ಮಣಿಪಾಲ ಕೆಎಂಸಿ ಆಸ್ಪತ್ರೆಗೆ   ಕರೆದುಕೊಂಡು  ಹೋಗಿದಲ್ಲಿ  ಪರೀಕ್ಷಿಸಿದ ವೈಧ್ಯರು ಅದಾಗಲೇ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿ ತಿಳಿಸಿರುತ್ತಾರೆ. ಪಿರ್ಯಾದಿದಾರರ ಮಗ ಟಿ ಸಿ ಶಿವಕುಮಾರ್ ಗೆ ಮಧ್ಯಪಾನ ಮಾಡುವ ಚಟವನ್ನು ಹೊಂದಿದ್ದು,  ಅನಾರೋಗ್ಯದಿಂದ ಅಸ್ವಶ್ಥಗೊಂಡು ಅಥವಾ ಇನ್ಯಾವುದೋ ಕಾರಣದಿಂದ  ಅಸ್ವಸ್ಥಗೊಂಡು ಮೃತಪಟ್ಟಿದ್ದು, ಆತನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ ಎಂಬುದಾಗಿ ನೀಡಿದ ದೂರಿನಂತೆ ಹಿರಿಯಡಕ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ : 07/2021 ಕಲಂ: 174 ಸಿಆರ್ ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 02-03-2021 06:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080