ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ರಾಘವೇಂದ್ರ ಬಿ ಪ್ರಾಯ (41), ತಂದೆ: ವೆಂಕಟ್ರಮಣ ಶೇರುಗಾರ್, ವಾಸ: ಬೆಳಗಿ ಮನೆ, ಬಾಡಾ ಮಯ್ಯಾಡಿ ಪೋಸ್ಟ್ , ಬೈಂದೂರು ತಾಲೂಕು ಇವರು ದಿನಾಂಕ 31/01/2023 ರಂದು 15:45 ಗಂಟೆಗೆ  ಅವರ  KA-20-D-5573 ನೇ ಮಿನಿ ಗೂಡ್ಸ್ ವಾಹನದಲ್ಲಿ ಸೆಂಟ್ರಿಂಗ್  ಸರಕುಗಳನ್ನು ತುಂಬಿಸಿಕೊಂಡು ಬಾಡಿಗೆ ಬಗ್ಗೆ ರಾಷ್ಟ್ರೀಯ  ಹೆದ್ದಾರಿ 66 ರಲ್ಲಿ ಬೈಂದೂರಿನಿಂದ  ಕಂಬದಕೋಣೆಗೆ  ಚಲಾಯಿಸಿಕೊಂಡು ಹೋಗುತ್ತಿರುವಾಗ  ಉಪ್ಪುಂದ ಗ್ರಾಮದ ಉಪ್ಪುಂದ ಪೇಟೆ ಮೇಲ್ ಸೇತುವೆಯಲ್ಲಿ ಅವರ ಗೂಡ್ಸ್ ವಾಹನದ ಬಲಭಾಗದ ಹಿಂಬದಿಯ ಚಕ್ರದ ಟಯರ್ ಪಂಚರ್ ಆದ ಕಾರಣ ಟೆಂಪೋವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿಕೊಂಡು ಬೇರೆ ವಾಹನಗಳಿಗೆ  ಸೂಚನೆಗಾಗಿ ಗೂಡ್ಸ ವಾಹನದ ಹಿಂಬಾಗದಲ್ಲಿ ಮರದ ಹಲಗೆಯನ್ನು ಇಟ್ಟು ಕೊಂಡು   ಪಂಚರ್ ಆದ ಟಯರನ್ನು ಬಿಚ್ಚಿ  ಸ್ಟೆಪ್ನಿ ಟಯರ್ ನ್ನು  ಅಳವಡಿಸುತ್ತಿರುವ  ಸಮಯ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ KA-01-AM-2652 ನೇ ಈಚರ್ ವಾಹನದ ಚಾಲಕ ಪ್ರಮೋದ ಆತನ ವಾಹನವನ್ನು  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು  ಬಂದು ಪಿರ್ಯಾದಿದಾರರ  ಮಿನಿ ಟೆಂಪೂ ದ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು  ಜಖಂ ಗೊಂಡಿರುತ್ತದೆ. ಅಪಘಾತದ ಪರಿಣಾಮ ಪಿರ್ಯಾದಿದಾರರಿಗೆ  ಬಲಕಾಲಿಗೆ ಸಣ್ಣ ಪುಟ್ಟ ತರಚಿದ ಗಾಯವಾಗಿದ್ದು  ಈಚರ್ ವಾಹನ ಚಾಲಕ ಪ್ರಮೋದ್ ರವರಿಗೆ  ಬಲಕಾಲಿನ ತೊಡೆಗೆ  ಒಳನೋವು ಹಾಗೂ ಕಾಲಿಗೆ ತರಚಿದ ಗಾಯ ಉಂಟಾಗಿದ್ದು ಗಾಯಗೊಂಡ ಪ್ರಮೋದ  ರವರನ್ನು ಪಿರ್ಯಾದಿದಾರರು ಅಂಬುಲೆನ್ಸ್ ವಾಹನದಲ್ಲಿ  ಚಿಕಿತ್ಸೆ ಬಗ್ಗೆ ಕುಂದಾಪುರ ಕಡೆಗೆ ಕಳುಹಿಸಿದ್ದು ನಂತರ ಪ್ರಮೋದರವರನ್ನು ಚಿಕಿತ್ಸೆ ಬಗ್ಗೆ  ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ದಾಖಲಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 21/2023 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
 • ಬ್ರಹ್ಮಾವರ: ಪಿರ್ಯಾದಿದಾರರಾದ ಪ್ರಶಾಂತ (44), ತಂದೆ: ದಿವಂಗತ ಕೆಂಚ ಕೊರಗ , ವಾಸ: ಮಾತೃಛಾಯ, ರಂಗನಕೆರೆ, ಬಾರ್ಕೂರು ಪೋಸ್ಟ್‌, ಹೇರಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಇವರು ದಿನಾಂಕ 25/01/2023 ರಂದು ಅವರ ಮನೆಯ ಎದುರು ನಿಂತುಕೊಂಡಿರುವಾಗ ರಾತ್ರಿ 8:30 ಗಂಟೆಗೆ ಅವರ ತಾಯಿಯ ತಂಗಿಯ ಮಗ ಅಜೀತ್‌ರವರು ಬಾರ್ಕೂರು ಕಡೆಯಿಂದ ಮಂದಾರ್ತಿ ಕಡೆಗೆ ಹೋಗುವ ಸಾರ್ವಜನಿಕ ರಸ್ತೆಯನ್ನು ದಾಟಿ ಈಚೆಗೆ ಬರಲು  ರಸ್ತೆಯ ಮೇಲೆ ನಿಂತುಕೊಂಡಿರುವಾಗ ಮಂದಾರ್ತಿ ಕಡೆಯಿಂದ KA-20-EE-1601 ಹೊಂಡಾ ಡಿಯೋ ಸವಾರ ಆಶೋಕ ಕೊಠಾರಿಯವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಆತನ ದ್ವಿಚಕ್ರವನ್ನು ಸವಾರಿಕೊಂಡು ಬಂದು ಎದುರಿನ ಒಂದು ವಾಹನವನ್ನು ಓವರ್‌ ಟೇಕ್‌ ಮಾಡಿಕೊಂಡು ರಸ್ತೆಯ ತೀರಾ ಬಲ ಭಾಗಕ್ಕೆ ಸವಾರಿ ಮಾಡಿಕೊಂಡು  ಅಜೀತ್‌ನಿಗೆ ಡಿಕ್ಕಿ ಹೊಡೆದ ಪರಿಣಾಮ ಅಜೀತ್‌ ಅಂಗಾತನೆ ಬಿದ್ದು ತಲೆಯ ಹಿಂಬದಿಗೆ ತೀವ್ರ ರಕ್ತ ಗಾಯವಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 13/2023 : ಕಲಂ 279,  338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

 • ಗಂಗೊಳ್ಳಿ: ದಿನಾಂಕ 31/01/2023 ರಂದು ವಿನಯ ಎಂ ಕೊರ್ಲಹಳ್ಳಿ, ಪೊಲೀಸ್ ಉಪನಿರೀಕ್ಷಕರು, ಗಂಗೊಳ್ಳಿ ಪೊಲೀಸ್ ಠಾಣೆ ಇವರಿಗೆ ಗಂಗೊಳ್ಳಿ ಗ್ರಾಮದ  ಮತ್ಸ ಸೌಧ ಸೈಟಿನ ಎದುರು ಸಾರ್ವಜನಿಕ ಸ್ಥಳದಲ್ಲಿ  ಕೆಲವು ಜನರು ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಜುಗಾರಿ ಆಟವಾಡುತ್ತಿದ್ದ ಬಗ್ಗೆ ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳಾದ 1.ಅಂತೋನಿ ಬ್ರೋನ್ಸನ್ ಫೆರ್ನಾಂಡೀಸ್ (39), ತಂದೆ: ಮೈಕಲ್ ಫೆರ್ನಾಂಡೀಸ್, ವಾಸ: ಮನೆ ನಂಬ್ರ 89/86, ಗಂಗೊಳ್ಳಿ ಐಸ್‌ ಪ್ಲ್ಯಾಂಟ್‌ ಹತ್ತಿರ, ಬಂದರ್‌ ರೋಡ್‌, ಗಂಗೊಳ್ಳಿ ಗ್ರಾಮ, ಕುಂದಾಪುರ , 2.ಉತ್ತಮ್ ಖಾರ್ವಿ (46), ತಂದೆ; ಮಂಜುನಾಥ ಖಾರ್ವಿ, ವಾಸ: ಚರ್ಚ್ ರೋಡ್‌, ಗಂಗೊಳ್ಳಿ ಗ್ರಾಮ, ಕುಂದಾಪುರ, 3) ಡಿಲೆಕ್ಸ್‌ ಪಿಂಟೋ (62), ತಂದೆ: ಜಾರ್ಜ್ ಪಿಂಟೋ, ವಾಸ: ಕೆ.ಎಫ್‌.ಡಿ.ಸಿ ಕ್ವಾಟ್ರಸ್ ಬಳಿ, ಬಂದರ್‌ ರೋಡ್, ಗಂಗೊಳ್ಳಿ ಗ್ರಾಮ, ಕುಂದಾಪುರ, 4) ಅಲೆಕ್ಸ್‌  ಫೆರ್ನಾಂಡೀಸ್ (56), ತಂದೆ: ದಿ ಇನಾಸ್ ಫೆರ್ನಾಂಡೀಸ್, ವಾಸ: ಕೆ.ಎಫ್‌.ಡಿ.ಸಿ ಕ್ವಾಟ್ರಸ್ ಬಳಿ, ಬಂದರ್‌ ರೋಡ್, ಗಂಗೊಳ್ಳಿ ಗ್ರಾಮ, ಕುಂದಾಪುರ , 5.ಫೆಲಿಕ್ಸ್ ಫೆರ್ನಾಂಡೀಸ್ (66), ತಂದೆ: ನೆಪೋಲಿಯನ್ ಫೆರ್ನಾಂಡೀಸ್, ವಾಸ; ಚರ್ಚ್‌ ರೋಡ್‌, ಗಂಗೊಳ್ಳಿ ಗ್ರಾಮ, ಕುಂದಾಪುರ, 6) ಜಾನ್‌ ಫೆರ್ನಾಂಡೀಸ್ (55), ತಂದೆ: ದಿ. ತಿಯೋದರ್‌ ಫೆರ್ನಾಂಡೀಸ್, ವಾಸ: ಕೆ.ಎಫ್‌.ಡಿ.ಸಿ ಕ್ವಾಟ್ರಸ್ ಬಳಿ, ಬಂದರ್‌ ರೋಡ್, ಗಂಗೊಳ್ಳಿ ಗ್ರಾಮ, ಕುಂದಾಪುರ ಇವರನ್ನು ವಶಕ್ಕೆ ಪಡೆದು ಇಸ್ಪಿಟ್ ಜುಗಾರಿ ಆಟಕ್ಕೆ ಉಪಯೋಗಿಸಿದ ನಗದು ಹಣ 1,910/ ರೂಪಾಯಿ, ಇಸ್ಪೀಟ್ ಎಲೆ-52, ಆಟಕ್ಕೆ ಉಪಯೋಗಿಸಿದ  ಹಳೆಯ ನ್ಯೂಸ್‌ ಪೇಪರ್‌ಅನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 13/2023  ಕಲಂ: 87 ಕೆ.ಪಿ ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

 • ಕೋಟ: ಚಿತ್ರಪಾಡಿ ಗ್ರಾಮದ ನರ್ತಕಿ ಬಾರ್‌‌‌‌ನ ಮಾಲಕರಾದ ರಿತೇಶ್‌‌‌‌‌‌‌‌ ಮತ್ತು ಅವರ ತಮ್ಮ ಪಿರ್ಯಾದಿದಾರರಾದ  ರಾಹುಲ್‌ ಸುಕುಮಾರ್‌ ಶೆಟ್ಟಿ  (31), ತಂದೆ: ಸುಕುಮಾರ್‌ಶೆಟ್ಟಿ, ವಾಸ: ರತ್ನವನ, ಅಂಕದಕಟ್ಟೆ, ಕೋಟೇಶ್ವರ ಗ್ರಾಮ, ಕುಂದಾಪುರ ತಾಲೂಕು ಇವರು ಈ ಹಿಂದೆ ಬಾರ್‌‌‌‌‌‌ನಲ್ಲಿ ಆರೋಪಿತರಾದ 1) ರೋಹಿತ್, 2) ರಂಜಿತ್, 3) ಸುಚಿನ್,4) ಶಶಾಂಕ್ , 5) ವಿಘ್ನೇಶ್ ಇವರು ಬಂದು ಗಲಾಟೆ ಮಾಡಿದಾಗ ಎಚ್ಚರಿಕೆ ಕೊಟ್ಟಿರುವ ವಿಚಾರದಲ್ಲಿ ನರ್ತಕಿ ಬಾರ್‌‌‌‌ನ ಮಾಲಕರ ಮೇಲಿನ ದ್ವೇಷದಿಂದ ಕೊಲೆ ಮಾಡುವ ಸಮಾನ ಉದ್ದೇಶದಿಂದ ಆರೋಪಿತರುಗಳಾದ ರೋಹಿತ್‌‌‌‌‌, ರಂಜಿತ್‌,‌‌‌‌‌ ಸುಚಿನ್‌‌, ಶಶಾಂಕ ಮತ್ತು ವಿಘ್ನೇಶ್‌‌‌‌ರವರು ಸೇರಿ ದಿನಾಂಕ 01/02/2023 ರಂದು ಸಂಜೆ 7:00 ಗಂಟೆಯಿಂದ ರಾತ್ರಿ 10:00 ಗಂಟೆಯ ಮಧ್ಯಾವಧಿಯಲ್ಲಿ ಚಿತ್ರಪಾಡಿ ಗ್ರಾಮದ ಸಾಲಿಗ್ರಾಮದಲ್ಲಿರುವ ನರ್ತಕಿ ಬಾರಿ‌‌‌‌ನ 1 ನೇ ಮಹಡಿಯಲ್ಲಿ ಅನಾವಶ್ಯಕವಾಗಿ ಗಲಾಟೆ ಎಬ್ಬಿಸಿ ಬಾರಿನ ಮಾಲಕರಾದ ರಿತೇಶ್‌ ‌‌‌‌‌‌ಮತ್ತು ರಾಹುಲ್‌‌ರವರು ಬಂದು ಏನು ಗಲಾಟೆ ಎಂದು  ಕೇಳಿದಾಗ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿ ಬಿಯರ್‌ ‌‌‌‌ಬಾಟಲಿಯಿಂದ ಹಾಗೂ ಕೈಯಿಂದ ಹೊಡೆದು ನೆಲಕ್ಕೆ ದೂಡಿ ಕಾಲಿನಿಂದ ತುಳಿದ ಪರಿಣಾಮ ರಾಹುಲ್‌ ‌‌‌‌‌‌ಸುಕುಮಾರ ಶೆಟ್ಟಿ ರವರಿಗೆ ತಲೆಯ ಎಡಭಾಗ ಹಾಗೂ ಎಡಕಣ್ಣಿಗೆ ಗುದ್ದಿದ ಗಾಯ ಮತ್ತು ಎಡಭುಜಕ್ಕೆ ಒಳನೋವು ಆಗಿರುತ್ತದೆ.  ರಿತೇಶ್‌‌‌‌‌‌‌ರವರಿಗೂ ರಕ್ತಗಾಯವಾಗಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 16/2023  ಕಲಂ: 143, 147, 323, 324, 307, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 02-02-2023 09:38 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080