ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಭರತ ಗಾಣಿಗ (35), ತಂದೆ: ಗೋಪಾಲ ಗಾಣಿಗ, ವಾಸ: ಕಲ್ಮಾಡಿ ರೋಡ್ 191/1ಕ ಕಾರಂತ ಥೀಂ ಪಾರ್ಕ ಬಳಿ ಕೋಟ ತಟ್ಟು ಕೋಟ ಬ್ರಹ್ಮಾವರ ತಾಲೂಕು ಇವರು ದಿನಾಂಕ 31/01/2022 ರಂದು ಸಂಜೆ 19:30 ಗಂಟೆ ಸಮಯಕ್ಕೆ ಚಿತ್ರಪಾಡಿ ಗ್ರಾಮದ ಕೋಟ ಮೂರು ಕೈ ಬಳಿಯಲ್ಲಿರುವಾಗ ಸೈಬ್ರಕಟ್ಟೆ ಕಡೆಯಿಂದ KA-20-EX-9353 ನಂಬ್ರದ ಮೋಟಾರ್ ಸೈಕಲ್ ಸವಾರನು ತನ್ನ ಮೋಟಾರ್ ಸೈಕಲನ್ನು ಚಲಾಯಿಯಿಸಿಕೊಂಡು ಬಂದು ಕೋಟ ಮೂರು ಕೈ ಜಂಕ್ಷನ್ ನಲ್ಲಿ ಉಡುಪಿ ಕಡೆಯಿಂದ ಕುಂದಾಪುರದ ಕಡೆಗೆ ಹಾದು ಹೋಗುವ  ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆಗೆ ಹೋಗಲು ಮೋಟಾರ್ ಸೈಕಲನ್ನು ತಂದು ನಿಲ್ಲಿಸಿ ನಿಧಾನವಾಗಿ  ರಸ್ತೆಗೆ ಬರುವಾಗ KA-47-V-6488 ಮೋಟಾರ್ ಸೈಕಲ್ ಸವಾರ ಸಾಯಿಲ್  ಹಿಂಬದಿ ಸಹ ಸವಾರನಾಗಿ ಇಸ್ಮಾಯಿಲ್ ರವರನ್ನು ಕುಳ್ಳಿರಿಸಿಕೊಂಡು ಉಡುಪಿ ಕಡೆಯಿಂದ ಕುಂದಾಪುರದ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಗೆ ಬರುತ್ತಿದ್ದ KA-20-EX-9353 ಮೋಟಾರ್ ಸೈಕಲಿಗೆ ಎಡ ಬದಿಗೆ ಗುದ್ದಿದ್ದು ಇದರಿಂದ ಮೋಟಾರ್ ಸೈಕಲ್ ಎರಡೂ ರಸ್ತೆಗೆ ಬಿದ್ದಿದ್ದು , ಈ  ಅಪಘಾತದಿಂದ KA-20-EX-9353 ನೇ ಮೊಟಾರ್ ಸೈಕಲ್ ಸವಾರ ಗಿರೀಶ ಹಂದೆ ಹಾಗೂ ಢಿಕ್ಕಿಗೊಳಿಸಿದ KA-47-V-6488 ಮೋಟಾರ್ ಸೈಕಲ್ ಸವಾರ ಸಾಯಿಲ್ ಹಾಗೂ ಸಹ ಸವಾರ ಇಸ್ಮಾಯಿಲ್ ರವರಿಗೆ ತೀವೃ ಸ್ವರೂಪದ ರಕ್ತಗಾಯವಾಗಿ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 11/2022  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ಪಿರ್ಯಾದಿದಾರರಾದ ರಾಮಚಂದ್ರ ನಾವಡ (47), ತಂದೆ: ಪರಮೇಶ್ವರ ನಾವಡ, ವಾಸ: ಪಟೇಳರ ಮನೆ, ಅರಾಟೆ, ಹೊಸಾಡು ಗ್ರಾಮ, ಕುಂದಾಫುರ ತಾಲೂಕು ಇವರು ದಿನಾಂಕ 31/01/2022 ರಂದು ತನ್ನ ಮೋಟಾರ್ ಸೈಕಲ್ ನಲ್ಲಿ  ರಾಷ್ಟ್ರೀಯ ಹೆದ್ದಾರಿ 66 ರಸ್ತೆಯಲ್ಲಿ ತ್ರಾಸಿ ಕಡೆಯಿಂದ ಅರಾಟೆ ಕಡೆಗೆ  ಹೋಗುತ್ತಿರುವಾಗ ರಾತ್ರಿ 8:00 ಗಂಟೆಗೆ ಕುಂದಾಪುರ ತಾಲೂಕು ತ್ರಾಸಿ ಗ್ರಾಮದ ತ್ರಾಸಿ ಅಣ್ಣಪ್ಪಯ್ಯ ಸಭಾ ಭವನದ ಎದುರು ತಲುಪುವಾಗ ಎದುರುಗಡೆಯಲ್ಲಿ  ದೇವರಾಯ ಎಂಬುವವರು KA-20-AA-3510 ನೇ ಆಟೋ ರಿಕ್ಷಾವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ತ್ರಾಸಿ ಕಡೆಯಿಂದ ಮುಳ್ಳಿಕಟ್ಟೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದ  ಪಾದಾಚಾರಿ ಚಂದ್ರ ಶೆಟ್ಟಿಗಾರ್ ಎಂಬುವವರಿಗೆ ಡಿಕ್ಕಿ ಹೊಡೆದ ಪರಿಣಾಮ ಚಂದ್ರ ಶೆಟ್ಟಿಗಾರ್ ರವರು ರಸ್ತೆಗೆ ಬಿದ್ದು  ತಲೆಗೆ, ಸೊಂಟದ ಭಾಗಕ್ಕೆ ಪೆಟ್ಟಾಗಿದ್ದು  ಚಿಕಿತ್ಸೆ ಬಗ್ಗೆ ಕುಂದಾಪುರ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 12/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ಪಿರ್ಯಾದಿದಾರರಾದ ಪಾರ್ವತಿ (50), ಗಂಡ: ರಾಜೀವ ಪೂಜಾರಿ, ವಾಸ: ನಾಗಮ್ಮ ನಿಲಯ, ಆನಗೋಡು, ಚುಟ್ಟಿತ್ತಾರ್, ತ್ರಾಸಿ ಗ್ರಾಮ ಕುಂದಾಪುರ ತಾಲೂಕು ಇವರು ಪಾರ್ವತಿಯವರು ತನ್ನ ಮಗ ಪ್ರಜ್ವಲ್ ಪೂಜಾರಿಯವರೊಂದಿಗೆ KA-20-MC-7712 ನೇ ಕಾರಿನಲ್ಲಿ ತ್ರಾಸಿಯಿಂದ ಆನಗೋಡು ಕಡೆಗೆ ಹೋಗುತ್ತಿರುವಾಗ ಕಾರನ್ನು ಪ್ರಜ್ವಲ್ ಪೂಜಾರಿಯವರು ಕಾರನ್ನು ಚಲಾಯಿಸಿಕೊಂಡಿದ್ದು ಮದ್ಯಾಹ್ನ 12:00 ಗಂಟೆಗೆ ಕುಂದಾಪುರ ತಾಲೂಕು ತ್ರಾಸಿ ಗ್ರಾಮದ ಆನಗೋಡು ರಾಲ್ಪಿಯವರ ಮನೆಯ ಬಳಿ ತಲುಪುವಾಗ ನಾಯಿಯೊಂದು ಕಾರಿಗೆ ಅಡ್ಡ ಬಂದಿದ್ದು ಅದನ್ನುತಪ್ಪಿಸುವ ಭರದಲ್ಲಿ ಕಾರು ಚಾಲಕ ಪ್ರಜ್ವಲ್ ಪೂಜಾರಿಯವರು ಕಾರನ್ನುಒಮ್ಮೆಲೇ ಬಲಕ್ಕೆ ತಿರುಗಿಸಿದ ಪರಿಣಾಮ ಕಾರು ಬಲಕ್ಕೆ ಹೋಗಿ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದಿದ್ದು ಪರಿಣಾಮ ಕಾರಿನ ಮುಂಭಾಗ ಜಖಂಗೊಂಡಿರುತ್ತದೆ. ಕಾರಿನಲ್ಲಿದ್ದವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 13 /2022 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 31/01/2022 ರಂದು ಸಂಜೆ 06:05 ಗಂಟೆಗೆ ಪಿರ್ಯಾದಿದಾರರಾದ ಹರಿಕಿಶನ್ ಬಿ ಶೆಟ್ಟಿ (31), ತಂದೆ: ಬಾಲಕೃಷ್ಣ ಶೆಟ್ಟಿ, ವಾಸ: ಪ್ಲಾಟ್ ನಂ: 202, ಡಿ ವಿಂಗ್, ಸಾಯಿರಾಧಾ ಪ್ರೈಡ್, ಬ್ರಹ್ಮಗಿರಿ ಸರ್ಕಲ್ ಹತ್ತಿರ, ಉಡುಪಿ ಇವರು ತನ್ನ KA-20-ET-0192 ನೇ ಮೋಟಾರ್ ಸೈಕಲ್ ನಲ್ಲಿ ಸಹೋದ್ಯೋಗಿ ಪ್ರಜ್ಞಾ ಎಂಬುವವರನ್ನು ಸಹಸವಾರಳನ್ನಾಗಿ ಕುಳ್ಳರಿಸಿಕೊಂಡು ಅಲೆವೂರು-ಮಣಿಪಾಲ ಸಾರ್ವಜನಿಕ ರಸ್ತೆಯಲ್ಲಿ  ವೇಣುಗೋಪಾಲ ದೇವಸ್ಥಾನದ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದಾಗ RSB ಸಭಾ ಭವನ ಜಂಕ್ಷನ್ ಬಳಿ ವೇಣು ಗೋಪಾಲ ದೇವಸ್ಥಾನದ ಕಡೆಯಿಂದ ಮಣಿಪಾಲ ಕಡೆಗೆ KA-41-E-2791 ನೇ ಮೋಟಾರ್ ಸೈಕಲನ್ನು ಅದರ ಸವಾರ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್ ಬಲ ಭಾಗಕ್ಕೆ ಡಿಕ್ಕಿ ಹೊಡೆದು ನಂತರ ಪಿರ್ಯಾದಿದಾರರ ಹಿಂದಿನಿಂದ ಬರುತ್ತಿದ್ದ KA-21-B-3336 ನೇ ಆಟೋ ರಿಕ್ಷಾಕ್ಕೂ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸಹ ಸವಾರೆ ಪ್ರಜ್ಞಾ ಹಾಗೂ ಅಪಘಾತವೆಸಗಿದ ಮೋಟಾರ್ ಸೈಕಲ್ ಸವಾರ ಹಾಗೂ ಸಹ ಸವಾರೆ ಕೆಳಕ್ಕೆಬಿದ್ದು ಪಿರ್ಯಾದಿದರರ ಬಲ ಸೊಂಟಕ್ಕೆ ಗುದ್ದಿದ ಒಳ ನೋವು, ಪ್ರಜ್ಞಾರವರ ಬಲಕಾಲಿನ ಮೂಳೆ ಮುರಿತ ಗಾಯ, ಹಣೆಗೆ ತರಚಿದ ಗಾಯ, ಮೂಗಿನ ಮೇಲೆ ರಕ್ತ ಗಾಯ ಹಾಗೂ ಆರೋಪಿತನಿಗೆ ಹಾಗೂ ಅಪಘಾತವೆಸಿಗಿದ ಮೋಟಾರ್ ಸೈಕಲ್ ಸಹಸವಾರಳಿಗೂ ಹಾಗೂ ಆಟೋ ಚಾಲಕನಿಗೂ ಗಾಯ ಉಂಟಾಗಿದ್ದು ಮಣಿಪಾಲ KMC ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 14/2022  ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 01/02/2022 ರಂದು ಬೆಳಿಗ್ಗೆ 10:45 ಗಂಟೆಗೆ ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದ ಚಾರುಕೊಟ್ಟಿಗೆಯ  ಸಂತೋಷ ಕಾಂಪ್ಲೆಕ್ಸ್‌ ಬಳಿ ರಸ್ತೆಯಲ್ಲಿ  ಆಪಾದಿತ ಹರೀಶ್‌ ಕುಮಾರ್‌ ಶೆಟ್ಟಿ KA-20-EM-9085 ನೇ ಬೈಕಿನಲ್ಲಿ ಅವರ  ಪತ್ನಿ ಜಯಶ್ರಿ ಯವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಚಾರುಕೊಟ್ಟಿಗೆ ಕಡೆಯಿಂದ ಮೊಗೆಬೆಟ್ಟು ಕಡೆಗೆ ವೇಗ  ಹಾಗೂ ನಿರ್ಲಕ್ಷ್ಯತನದಿಂದ  ಸವಾರಿ ಮಾಡಿಕೊಂಡು ಬಂದು ಯಾವುದೇ ಸೂಚನೆ ನೀಡದೇ  ರಸ್ತೆಯ ಬಲ  ಬದಿಯಿಂದ ರಸ್ತೆಯ  ಎಡಬದಿಯ ಸಂತೋಷ ಕಾಂಪ್ಲೆಕ್ಸ್‌ ಕಡೆಗೆ  ತಿರುಗಿಸಿ, ಮೊಗೆಬೆಟ್ಟು ಕಡೆಯಿಂದ  ಚಾರುಕೊಟ್ಟಿಗೆ  ಕಡೆಗೆ ಪಿರ್ಯಾದಿದಾರರಾದ ಅಜಿತ್‌ಕುಮಾರ್‌ I.J  (23), ತಂದೆ :  ಜ್ಞಾನೇಂದ್ರ,  ವಾಸ:   ಸಳ್ಳೆಮುಂಡು, ಚಾರುಕೊಟ್ಟಿಗೆ , ಹೊಸಮಠ, ಅಂಚೆ, ಕೊರ್ಗಿ ಗ್ರಾಮ ,  ಕುಂದಾಪುರ ತಾಲೂಕು ಇವರು ಸವಾರಿ ಮಾಡಿಕೊಂಡು ಬರುತ್ತಿದ್ದ KA-20-EH-0129ನೇ  ಹೀರೋ ಮೆಸ್ಟ್ರೋ  ಸ್ಕೂಟರ್‌‌ಗೆ ಡಿಕ್ಕಿ ಹೊಡೆದು ಪಿರ್ಯಾದಿದಾರರು, ಹರೀಶ್‌ ಕುಮಾರ್‌ ಶೆಟ್ಟಿ ಹಾಗೂ ಜಯಶ್ರಿಯವರು ಗಾಯಗೊಂಡು ಕೊಟೇಶ್ವರ ಎನ್‌. ಆರ್‌ಆಚಾರ್ಯ  ಆಸ್ಪತ್ರೆಯಲ್ಲಿ ಪಿರ್ಯಾದಿದಾರರು ಹಾಗೂ  ಆಪಾದಿತ ಹರೀಶ್‌ಕುಮಾರ್‌ ಶೆಟ್ಟಿಯವರು ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದು, ಮತ್ತು  ಜಯಶ್ರಿಯವರನ್ನು ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 19/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ರಾಮಯ್ಯ ಗೌಡ (74),  ತಂದೆ:ದಿ. ಬಾಲ ಗೌಡ, ವಾಸ: ಹುಂತನಹೊಳೆ ಕಾಲ್ತೋಡು ಗ್ರಾಮ ಬೈಂದೂರು ತಾಲೂಕು ಇವರು  ಮಗಳು ಲಲಿತ (36) ರವರು ಪಿರ್ಯಾದಿದಾರರ  ಜೊತೆಯಲ್ಲಿ ಕಾಲ್ತೋಡು ಗ್ರಾಮದ ಹುಂತನಹೊಳೆ ಎಂಬಲ್ಲಿ  ಗಂಡ ಹಾಗೂ ಮಕ್ಕಳ ಜೊತೆ ವಾಸ ಮಾಡಿಕೊಂಡಿದ್ದು ಕೃಷಿ ಕೆಲಸ ಮಾಡಿಕೊಂಡಿರುತ್ತಾರೆ. ಮೃತ ಲಲಿತಾ ರವರು ಹುಟ್ಟಿನಿಂದಲೇ ಎಡ ಕೈ ಊನಳಾಗಿರುತ್ತಾರೆ. ದಿನಾಂಕ 31/01/2022 ರಂದು ಮೃತ ಲಲಿತಾ ರವರು ತನ್ನ ಸಹೋದರಿಯೊಂದಿಗೆ  ಅಡಿಕೆ ಮರದ ಬುಡಕ್ಕೆ ತರಗೆಲೆಗಳನ್ನು ತರಲು ಹೋದವರು  ವಾಪಾಸ್ಸು ಮನೆಗೆ ಬರುವ ಸಮಯ ಬೆಳಿಗ್ಗೆ  9:45 ಗಂಟೆಗೆ ಮನೆಯ ಬಳಿಯ ಇಳಿಜಾರಿನಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದವರನ್ನು ಚಿಕಿತ್ಸೆಯ ಬಗ್ಗೆ  ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ  ಕರೆದುಕೊಂಡು ಹೋದಲ್ಲಿ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ್ದು, ವೈದ್ಯರ ಸಲಹೆಯಂತೆ  ಕೆ ಎಂ ಸಿ ಮಣಿಪಾಲ ಆಸ್ಪತ್ರೆಗೆ ಕರೆತಂದಲ್ಲಿ ಅಲ್ಲಿನ ವೈದ್ಯರು ಪರೀಕ್ಷೀಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್  ಆಸ್ಪತ್ರೆಗೆ ಹೋಗುವಂತೆ ತಿಳಿಸಿದ ಮೇರೆಗೆ  ಮಂಗಳೂರು  ವೆನ್ಲಾಕ್  ಆಸ್ಪತ್ರೆಯಲ್ಲಿ  ಒಳರೋಗಿಯಾಗಿ  ದಾಖಲಾಗಿ ಚಿಕಿತ್ಸೆಯಲ್ಲಿದ್ದವರು ದಿನಾಂಕ 01/02/2022 ರಂದು ಬೆಳಿಗ್ಗೆ 9:46 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ  ಮೃತಪಟ್ಟಿರುವುದಾಗಿ ವೈದ್ಯರು ದೃಢೀಕರಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 04/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಡಾ. ಚಂದ್ರಶೇಖರ ಶೆಟ್ಟಿ(48), ಸುಜಾತಾ ಕ್ಲಿನಿಕ್, ಕಾಲ್ತೋಡು ಗ್ರಾಮ ಬೈಂದೂರು ತಾಲೂಕು ಇವರು ಬಿ.ಎ.ಎಂ.ಎಸ್ ಅಯುರ್ವೇದ ಪದವಿಯನ್ನು  ಪಡೆದುಕೊಂಡು 20 ವರ್ಷ ಗಳಿಂದ ಆಯುರ್ವೇದ  ವೈದ್ಯರಾಗಿ ವೃತ್ತಿಯನ್ನು ನಡೆಸಿಕೊಂಡಿದ್ದು ಕಾಲ್ತೋಡಿನಲ್ಲಿ ಸುಜಾತ ಕ್ಲಿನಿಕ್ ಎಂಬ ಕ್ಲಿನಿಕ್ ನ್ನು ನಡೆಸಿಕೊಂಡು ಬರುತ್ತಿರುವುದಾಗಿದೆ. ದಿನಾಂಕ 22/01/2022 ರಂದು ಆರೋಪಿ ಕಿರಣ ಪೂಜಾರಿ ಎಂಬಾತನು ಪಿರ್ಯಾದಿದಾರರ ವೈದ್ಯಕೀಯ ವೃತ್ತಿಯನ್ನು ಪ್ರಶ್ನಿಸಿ  ಮತ್ತು ಅವರ ವೈದ್ಯ ವೃತ್ತಿಯನ್ನು ಅವಮಾನಿಸಿ ಪಿರ್ಯಾದಿದಾರರಲ್ಲಿ  ಯಾರೂ ಚಿಕಿತ್ಸೆಯನ್ನು ಪಡೆದುಕೊಳ್ಳಬಾರದೆಂಬ ದುರುದ್ದೇಶದಿಂದ  ಹೊಸಕಿರಣ ಎಂಬ ಹೆಸರಿನ  ಫೇಸ್ ಬುಕ್ ಪೇಜಿನಲ್ಲಿ ಪಿರ್ಯಾದಿದಾರರ ಮಾನ ಹಾನಿಮಾಡಿರುತ್ತಾರೆ. ಪಿರ್ಯಾದಿದಾರರ ವೈದ್ಯಕೀಯ ವೃತ್ತಿಗೆ ಅಡ್ಡಿಯಾಗುವಂತೆ ಸಾರ್ವಜನಿಕರಲ್ಲಿ  ಪಿರ್ಯಾದಿದಾರರ  ಬಗ್ಗೆ  ಕೆಟ್ಟ ಅಭಿಪ್ರಾಯ ಮೂಡುವಂತೆ ಆರೋಪಿ ಕಿರಣ್ ಪೂಜಾರಿ  ಹೊಸ ಕಿರಣ ಎಂಬ ಪೇಸ್ ಬುಕ್ ಖಾತೆಯಲ್ಲಿ ಅವಹೇಳನಕಾರಿ ಬರಹಗಳನ್ನುಪೋಸ್ಟ್  ಮಾಡಿ ಪಿರ್ಯಾದಿದಾರರು ವೈದ್ಯಕೀಯ ವೃತ್ತಿಯನ್ನು ನಿರ್ವಹಿಸಲು ಅಡ್ಡಿಪಡಿಸುತ್ತಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 33/2022 ಕಲಂ:4 The Karnataka Prohibition of violence against Medicare Service personnel and Damege of property in medicare service institution act 2009 ರಂತೆ ಪ್ರಕರಣ ದಾಖಲಾಗಿರುತ್ತದೆ.   
  • ಬೈಂದೂರು: ಪಿರ್ಯಾದಿದಾರರಾದ ಮಹಾಲಕ್ಷ್ಮೀ (36), ತಾಯಿ: ಕುಸುಮಾ, ವಾಸ: ಕೆಂಪಿನಿಕೇರಿ ಬಾಡ ಬೈಂದೂರು ಗ್ರಾಮ ಬೈಂದೂರು ತಾಲೂಕು ಇವರಉ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಪಿರ್ಯಾದಿದಾರರ ತಾಯಿಯ ಅಜ್ಜ ಚಿಕ್ಕ ಎಂಬುವವರ ಹೆಸರಿಗೆ ಬೈಂದೂರು ಗ್ರಾಮದ ಜಾಗ ಸ. ನಂ 369/3 ರಲ್ಲಿ 1.21 ಎಕ್ರೆ ಹಾಗೂ ಸ. ನಂ 369/4 ರಲ್ಲಿ 1.25 ಎಕ್ರೆ ಭೂಮಿಯು ಸರ್ಕಾರದಿಂದ ಮಂಜೂರಾಗಿದ್ದು, ಪಿರ್ಯಾದಿದಾರರ ಮನೆಯವರು 60 ವರ್ಷಗಳಿಂದ ಅನುಭವಿಸಿಕೊಂಡು ಬಂದಿರುತ್ತಾರೆ. 2018 ಡಿಸೆಂಬರ್ ತಿಂಗಳಲ್ಲಿ ಆರೋಪಿತ ಮಹಮ್ಮದ್ ರಿಜ್ವಾನ್ ಎಂಬುವವರು ಪಿರ್ಯಾದುದಾರರಿಗೆ ಸಂಬಂಧಿಸಿದ ಜಾಗವನ್ನು ಸರ್ವೇ ಮಾಡಲು ಸರ್ವೇ ಅಧಿಕಾರಿಗಳೊಂದಿಗೆ ಬಂದಿದ್ದು, ಪಿರ್ಯಾದಿದಾರರು ಆಕ್ಷೇಪಿಸಿ ತಹಶೀಲ್ದಾರರು ಹಾಗೂ ಸರ್ವೇ ಅಧಿಕಾರಿಗಳಿಗೆ ಲಿಖಿತ ದೂರನ್ನು ನೀಡಿರುತ್ತಾರೆ. 2021ರ ಆಗಸ್ಟ್ ತಿಂಗಳಲ್ಲಿ ಬೈಂದೂರು ಸರ್ಕಲ್ ಇನ್ಸಪೆಕ್ಟರ್ ರವರು ಪಿರ್ಯಾದಿದಾರರಿಗೆ ಠಾಣೆಗೆ ಬರಲು ಹೇಳಿದ್ದು ಅದರಂತೆ ಪಿರ್ಯಾದಿದಾರರು ತನ್ನ ಗಂಡನೊಂದಿಗೆ ವೃತ್ತ ನಿರೀಕ್ಷಕರ ಕಛೇರಿಗೆ ಹೋಗಿ ಭೇಟಿ ಮಾಡಿದಾಗ  ಜಾಗದ ಬಗ್ಗೆ ಪ್ರಸ್ತಾಪಿಸಿ ಆರೋಪಿ ಮಹಮ್ಮದ್ ರಿಜ್ವಾನ್ ರವರ ತಾಯಿ ಸೀತ್ತಿ ಐಷಾ ಗಂಡ: ಮುಲ್ಲಾ ಹಾಜಿ ಸಾಹೇಬ್ ಹೆಸರಿನಲ್ಲಿ ಸ.ನಂ 369/3 ರಲ್ಲಿ 0.38 ಎಕ್ರೆ ಸ್ಥಳದಲ್ಲಿ ಸುಳ್ಳಾಗಿ ಸೃಷ್ಟಿಸಿದವು ಸರಿಯಾಗಿದೆ ಎಂದು ಒಪ್ಪಿಕೊಂಡು ಸ. ನಂ 369/4 ರಲ್ಲಿ ಬರುವಾ ಎಲ್ಲಾ ಜಾಗವನ್ನು ಮಹಮ್ಮದ್ ರಿಜ್ವಾನ್ ರವರಿಗೆ ಬಿಟ್ಟುಕೊಡು ಎಂದು ಬೆದರಿಸಿ ಒತ್ತಡ ಹೇರಿ ಮಾನಸಿಕ ಕಿರುಕುಳ ನೀಡಿರುತ್ತಾರೆ. ದಿನಾಂಕ 25/01/2022 ರಂದು ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ ಕಾಯ್ಕಿಣಿ   ರವರು ಆರೋಪಿ ಮಹಮ್ಮದ್ ರಿಜ್ವಾನ್ ನೊಂದಿಗೆ ಪಿರ್ಯಾದಿದಾರರ ಮನೆಗೆ ಬಂದು ಪಿರ್ಯಾದಿದಾರರ ಭೂಮಿಯನ್ನು ರಾಜಿ ಮೂಲಕ ಸರಿಪಡಿಸಿ ಮಹಮ್ಮದ್ ರಿಜ್ವಾನ್ ರವರಿಗೆ ಬಿಟ್ಟುಕೊಡು ಬೇಕಾದರೇ ತಾನೇ ಮುಂದೆ ನಿಂತು ಇದನ್ನು ಬಗೆಹರಿಸುತ್ತೇನೆ ಎಂದು ಹೇಳಿ, ನ್ಯಾಯಾಲಯದ ತೀರ್ಪು ಬರಲು 15-20 ವರ್ಷ ಕಳೆಯಬಹುದು ಎಂದು ಹೆದರಿಸಿ ಇದಕ್ಕೆ ಒಪ್ಪಿಗೆ ಇದ್ದರೆ ಒಪ್ಪಿ ಇಲ್ಲ ಅಂದರೆ ನಿಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸಿ ಓಡಿಸುತ್ತೇವೆ ಎಂದು ಬೆದರಿಕೆ ಹಾಕಿರುತ್ತಾರೆ. ದಿನಾಂಕ 25/01/2022 ರಮದು ಆರೋಪಿ ಮಹಮ್ಮದ್ ರಿಜ್ವಾನ್ ಸಂಜೆ 5:00 ಗಂಟೆಗೆ ಪಿರ್ಯಾದಿದಾರರ ಮನೆಗೆ ಹೋಗಿ ಸರ್ಕಲ್ ಇನ್ಸಪೆಕ್ಟರ್ ಹೇಳಿದಂತೆ ಮಾಡಿ ಎಂಬುದಾಗಿ  ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 34/2022 ಕಲಂ: 506 ಜೊತೆ 34 ಐಪಿಸಿ ಮತ್ತು ಕಲಂ: 3(1) (f), 3(1) (g),  3(1)(z) SC St Act ರಂತೆ ಪ್ರಕರಣ ದಾಖಲಾಗಿರುತ್ತದೆ.    

ಇತ್ತೀಚಿನ ನವೀಕರಣ​ : 02-02-2022 05:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080