ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು:

  • ಕಾರ್ಕಳ ನಗರ: ದಿನಾಂಕ 01-02-2022 ರಂದು ಫಿರ್ಯಾದಿ ನಿಹಾಲ್ ಎಸ್, ಪ್ರಾಯ 18 ವರ್ಷ, ತಂದೆ ಸಂತೋಷ ನಾಯಕ್, ವಾಸ ಅಂಗಡಿ ಹೌಸ್, ನೀರೆ ಪೋಸ್ಟ್, ಕಾರ್ಕಳ ಇವರ  ತಂದೆ ಸಂತೋಷ ನಾಯಕ್, ಪ್ರಾಯ 48 ವರ್ಷ ಎಂಬವರು ತನ್ನ ಹೆಂಡತಿಯೊಂದಿಗೆ  ವಾಕಿಂಗ್ ಮಾಡಲು ಹೋಗಿದ್ದವರು ನೀರೆ ಬಾದಾಮಿಕಟ್ಟೆಯಿಂದ ಬೈಲೂರು ಕಡೆಗೆ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಬರುತ್ತಿರುವ ಸಮಯ  ರಾತ್ರಿ 19-15 ಗಂಟೆಗೆ KA20EN4604 ನೇ ನೊಂದಣಿ ಸಂಖ್ಯೆಯ ಹೀರೋ ಪ್ಯಾಶನ್ ದ್ವಿಚಕ್ರ ವಾಹನ ಸವಾರನು ದ್ವಿಚಕ್ರ ವಾಹನವನ್ನು ಉಡುಪಿ – ಕಾರ್ಕಳ ಮುಖ್ಯರಸ್ತೆಯಲ್ಲಿ ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ನೀರೆ ಗ್ರಾಮದ ಅಂಗಡಿ ಹೌಸ್ ಎಂಬಲ್ಲಿ ಸಂತೋಷ ನಾಯಕ್ ರವರ ಹಿಂಬದಿಗೆ ಡಿಕ್ಕಿಹೊಡೆದ ಪರಿಣಾಮ ಸಂತೋಷ ನಾಯಕ್‌ರವರು ರಸ್ತೆಗೆ ಬಿದ್ದು ತಲೆಯ ಹಿಂಬದಿ ಹಾಗೂ ಸೊಂಟಕ್ಕೆ ತೀವ್ರ ಸ್ವರೂಪದ ಗಾಯಗೊಂಡವರನ್ನು  ಚಿಕಿತ್ಸೆಯ ಬಗ್ಗೆ   ಬೈಲೂರಿನ ಕೆಎಸ್ ಹೆಗ್ಡೆ ಆಸ್ಪತ್ರೆಗೆ ಹಾಗೂ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಉಡುಪಿ  ಅಜ್ಜರಕಾಡು ಆಸ್ಪತ್ರೆಗೆ  ಚಿಕಿತ್ಸೆಗೆ ದಾಖಲಿಸಿದ್ದು ಸಂತೋಷ ನಾಯಕ್‌ರವರು  ಚಿಕಿತ್ಸೆಗೆ ಸ್ಪಂದಿಸದೇ ಈ ದಿನ ದಿನಾಂಕ 02-02-2022 ರಂದು ಬೆಳಿಗ್ಗೆ 05-00 ಗಂಟೆಗೆ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. ದ್ವಿಚಕ್ರ  ವಾಹನ ಸವಾರ ಸಹಾ ಘಟನೆ ಸಮಯ  ರಸ್ತೆಗೆ ಬಿದ್ದು ಗಾಯಗೊಂಡಿರುತ್ತಾನೆ. ಈ ಘಟನೆಗೆ  KA20EN4604 ನೇ ದ್ವಿಚಕ್ರ ವಾಹನಸವಾರನ ಅತೀ ವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ  ಅಪರಾಧ ಕ್ರಮಾಂಕ 22/2022 ಕಲಂ 279,304(ಎ) ಐಪಿಸಿ ಯಂತೆ ಪ್ರಕರಣ ದಾಕಲಿಸಲಾಗಿದೆ.
  • ಕೋಟ: ಪಿರ್ಯಾದಿ ಶಬರೀಶ ಪ್ರಾಯ25 ವರ್ಷ ತಂದೆ: ಗೋಪಾಲ ಪೂಜಾರಿ ವಾಸ: ಕುಂಬಾರ ಬೆಟ್ಟು ವಡ್ಡರ್ಸೆ ಗ್ರಾಮ  ಇವರು ದಿನಾಂಕ 01/02/022 ರಂದು  ತನ್ನತಾಯಿಯಾದ ರತ್ನರವರೊಂದಿಗೆ ಶಿರಿಯಾರದಲ್ಲಿ ಸ್ತ್ರೀ ಶಕ್ತಿ  ಸಂಘದ ಮೀಟಿಂಗ ಮುಗಿಸಿಕೊಂಡು ತನ್ನ ಸ್ಕೂಟಿ ಟಿವಿಎಸ್ ಜುಪಿಟರ್  KA 20EN 1752 ನೇದರಲ್ಲಿ  ತನ್ನ ತಾಯಿಯನ್ನು ಹಿಂದುಗಡೆ ಸಹ ಸವಾರಳಾಗಿ ಕುಳ್ಳಿರಿಸಿಕೊಂಡು ವಾಪಾಸ್ಸು ಮನೆಗೆ ಬರುತ್ತಿರುವಾಗ ಸಮಯ ಸುಮಾರು ಮಧ್ಯಾಹ್ನ 1.45 ಗಂಟೆಗೆ  ಸೈಬ್ರಕಟ್ಟೆ ಕೋಟ ರಸ್ತೆಯಲ್ಲಿ ಬರುವಾಗ ಮಧುವನ ರೈಲ್ವೆ ಬಿಡ್ಜ ದಾರಿ ಕೆ ಇಬಿ ಕಚೇರಿ  ಎದುರು ಬರುವಾಗ  ಪಿರ್ಯಾದಿದಾರರ ಹಿಂದಿನಿಂದ KA51MB7884 ನೇ ನಂಬ್ರದ ಕಾರು ಚಾಲಕ ಪವನ್ ಕುಮಾರ್ ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ,ಪಿರ್ಯಾದಿದಾರರ ಸ್ಕೂಟಿಗೆಹಿಂದಿನಿಂದ ಢಿಕ್ಕಿ ಹೊಡೆದನು. ಪರಿಣಾಮ ಪಿರ್ಯಾದಿದಾರರ ತಾಯಿ ಮುಖ ಹಾಗೂ ಬಲ ಕಾಲಿಗೆ ದೊಡ್ಡಗಾಯವಾಗಿದ್ದು ಹಾಗೂ ಪಿರ್ಯಾದಿದಾರರ ಬಲಕೈಗೆ ಹಾಗೂ   ಎಡ ಕಾಲಿಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ 12/2022  ಕಲಂ: 279.337,338 IPC ಯಂತೆ ಪ್ರಕರಣ ದಾಕಲಿಸಲಾಗಿದೆ.
  • ಕುಂದಾಪುರ: ದಿನಾಂಕ 01/02/2022 ರಂದು ಸಂಜೆ ಸುಮಾರು 5:00 ಗಂಟೆಗೆ,  ಕುಂದಾಪುರ  ತಾಲೂಕಿನ, ಬಳ್ಕೂರು ಗ್ರಾಮದ ಬಳ್ಕೂರು ಶಾಲೆಯ ಬಳಿ, ರಾಜ್ಯ ರಸ್ತೆಯಲ್ಲಿ, ಆಪಾದಿತ ಉದಯ ನಾಯ್ಕ ಎಂಬವರು KA20-EV-0832ನೇ ಹೊಂಡ ಡಿಯೋ ಸ್ಕೂಟರ್‌‌ನಲ್ಲಿ ಪಿರ್ಯಾದಿ ಪ್ರದೀಪ್‌ ಪ್ರಭು    ಪ್ರಾಯ  37   ವರ್ಷ ತಂದೆ : ದಿ  ಗಿರಿಧರ ಪ್ರಭು ವಾಸ: ಕಂಚಾರು ಶ್ರೀ ರಾಮ ಭಜನಾ ಮಂದಿರ ಹತ್ತಿರ   ಕಂಚಾರು, ಅಂಪಾರು ಇವರ ಪತ್ನಿ ಗುಲಾಬಿ, 4 ವರ್ಷದ ಮಗಳಾದ ಪ್ರಣಮ್ಯಳನ್ನು  ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಅಂಪಾರು  ಕಡೆಯಿಂದ  ಕುಂದಾಪುರ ಕಡೆಗೆ  ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ  ಸವಾರಿ ಮಾಡಿಕೊಂಡು ಬಂದು, ಎದುರುಗಡೆಯಿಂದ ಬಂದ ವಾಹನಕ್ಕೆ  ಜಾಗ ನೀಡಲು ಸ್ಕೂಟರ್‌ ನ್ನು ರಸ್ತೆಯ ತೀರ ಎಡಬದಿಗೆ ಚಲಾಯಿಸಿದಾಗ ಸ್ಟೂಟರ್‌‌ ಹತೋಟಿ ತಪ್ಪಿ  ರಸ್ತೆಯ  ಎಡಬದಿಯ ಚರಂಡಿ ಕಟ್ಟೆಗೆ ಡಿಕ್ಕಿ ಹೊಡೆದು ಬಳಿಕ ವಾಹನದಿಂದ  ರಸ್ತೆಗೆ ಎಸೆಯಲ್ಪಟ್ಟು ಗುಲಾಬಿಯವರ ಮುಖ, ಎಡಕೈ ಮೊಣಗಂಟಿಗೆ ಒಳಪೆಟ್ಟು ಹಾಗೂ ರಕ್ತಗಾಯ,  ಬಲ ಕಣ್ಣಿಗೆ, ಎರಡೂ ಕಾಲುಗಳಿಗೆ, ತಲೆಗೆ, ಕುತ್ತಿಗೆ  ತರಚಿದ ರಕ್ತಗಾಯ ಹಾಗೂ ಉದಯ ನಾಯ್ಕರವರಿಗೆ  ಬಲಭುಜ, ತಲೆಗೆ, ಹೊಟ್ಟೆಗೆ  ಹಾಗೂ ಕೈ ಕಾಲುಗಳಿಗೆ   ಒಳಪೆಟ್ಟು ಹಾಗೂ ತರಚಿದ ಗಾಯವಾಗಿ ಕುಂದಾಪುರ ಸರಕಾರಿ  ಆಸ್ಬತ್ರೆಯಲ್ಲಿ ಪ್ರಥಮ ಚಿಕಿತ್ಸೆ  ಪಡೆದು  ಹೆಚ್ಚಿನ  ಚಿಕಿತ್ಸೆ ಬಗ್ಗೆ ಮಣಿಪಾಲ  ಕೆ. ಎಂ.ಸಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಪ್ರಣಮ್ಯಳು ಯಾವುದೇ  ಚಿಕಿತ್ಸೆ ಪಡೆದಿರುವುದಿಲ್ಲ. ಈ ಬಗ್ಗೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ :20/2022 ಕಲಂ:279,338 ಭಾ,ದಂ,ಸಂ ಯಂತೆ ಪ್ರಕರಣ ದಾಕಲಿಸಲಾಗಿದೆ.  

    ಗಂಗೊಳ್ಳಿ: ಫಿರ್ಯಾದಿ ರಾಮ ಗೋವಿಂದ ಪ್ರಾಯ: 74 ವರ್ಷ, ತಂದೆ: ಗೋವಿಂದ , ವಾಸ: ಶ್ರೀನಿವಾಸ ನಿಲಯ , ಕಟ್ಟು, ಹೆಮ್ಮಾಡಿ ರಾಮ ಗೋವಿಂದ ಪ್ರಾಯ: 74 ವರ್ಷ, ತಂದೆ: ಗೋವಿಂದ , ವಾಸ: ಶ್ರೀನಿವಾಸ ನಿಲಯ , ಕಟ್ಟು, ಹೆಮ್ಮಾಡಿ ರವರು ದಿನಾಂಕ: 01-02-2022 ರಂದು ಮಾರುತಿ ಓಮ್ನಿ ಕಾರು ನಂಬ್ರ KA-20 C-0383 ನೇದರಲ್ಲಿ ತನ್ನ ಹೆಂಡತಿ ಮುತ್ತು, ಮಗಳು ವನಜ, ಸುಮತಿ, ಹಾಗೂ ಮೊಮ್ಮಗಳು ಮಾನಸಿಯವರನ್ನು ಪ್ರಯಾಣಿಕರಾಗಿ ಕುಳ್ಳಿರಿಸಿಕೊಂಡು  ಬೈಂದೂರು ಬಡಾಕೆರೆಯಿಂದ ಹೆಮ್ಮಾಡಿ  ಕಡೆಗೆ ರಾ.ಹೆ 66 ರಸ್ತೆಯಲ್ಲಿ ಹೋಗುತ್ತಿರುವಾಗ  ಸಮಯ ಸುಮಾರು ರಾತ್ರಿ 7:20 ಗಂಟೆಗೆ ಕುಂದಾಪುರ ತಾಲೂಕು ತ್ರಾಸಿ ಗ್ರಾಮದ ತ್ರಾಸಿ ಪ್ರವಾಸಿ ಮಂದಿರದ ಬಳಿ ತಲುಪುವಾಗ್ಗೆ ಹಿಂದುಗಡೆಯಿಂದ ಬಸವರಾಜ ತಳವಾರ್ ಎಂಬವರು KA-22 D-6999 ನೇ ಲಾರಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಾರಿನ ಹಿಂದುಗಡೆ ಬಲಬದಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ರಸ್ತೆಯ ಬಲಭಾಗದ ವಿಭಾಜಕಕ್ಕೆ ಹೊಡೆದು ತಿರುಗಿ ಮಗುಚಿ ಬಿದ್ದಿರುತ್ತದೆ. ಕಾರಿನಲ್ಲಿದ್ದ ಮುತ್ತು, ವನಜ, ಸುಮತಿ, ಮಾನಸಿ ಹಾಗೂ  ಫಿರ್ಯಾದಿದಾರರಿಗೆ ರಕ್ತಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಆದರ್ಶ ಆಸ್ಪತ್ರೆಗೆ ಹೋದಲ್ಲಿ ವೈದ್ಯರು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ.ಈ ಬಗ್ಗೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 15 /2022 ಕಲಂ:279,337  ಐಪಿಸಿ  ಯಂತೆ ಪ್ರಕರಣ ದಾಕಲಿಸಲಾಗಿದೆ. 
  • ಕಾರ್ಕಳ: ದಿನಾಂಕ 28/01/2022 ರಂದು ಸಂಜೆ 6:15 ಗಂಟೆಗೆ ಪಿರ್ಯಾದಿ ಎವರೆಸ್ಟ್ ಪಾಯಸ್ (65) ತಂದೆ: ತಿಮೋತಿ ಪಾಯಸ್ ವಾಸ: ಹೆನೊಟ್ಟು ಹೊಸ ಕಂಪೌಂಡ್ ನಿಟ್ಟೆ  ಗ್ರಾಮ ಇವರ ಹೆಂಡತಿ ಟ್ರಿಸಾ ಪಾಯಸ್ ರವರು KA20C4817 ನೇ ನಂಬ್ರದ  ರಿಕ್ಷಾದಲ್ಲಿ ಮೂಡುಬೆಳ್ಳೆಯಿಂದ ಮನೆಗೆ ಕಡೆಗೆ ಬರುತ್ತಿದ್ದಾಗ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಬಜಕಳ ಎಂಬಲ್ಲಿ ತಲುಪುವಾಗ ರಿಕ್ಷಾ ಚಾಲಕ ಮುದ್ದು  ಪೂಜಾರಿಯು ತನ್ನ  ರಿಕ್ಷಾವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ರಿಕ್ಷಾ ಹತೋಟಿ ತಪ್ಪಿ ರಸ್ತೆಗೆ ಮಗುಚಿ ಬಿದ್ದಿದ್ದು, ಪರಿಣಾಮ ಪಿರ್ಯಾದಿದಾರರ ಹೆಂಡತಿಯ ಬಲ ಕೈಗೆ ಪೆಟ್ಟಾಗಿದ್ದು, ಚಿಕಿತ್ಸೆ ಬಗ್ಗೆ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಪಿರ್ಯಾದಿದಾರರು  ಹೆಂಡತಿಯ ಆರೈಕೆಯಲ್ಲಿರುವುದರಿಂದ  ತಡವಾಗಿ ಠಾಣೆಗೆ ಬಂದು ದೂರು ನೀಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆ ಅಪರಾಧ ಕ್ರಮಾಂಕ  12/2021 ಕಲಂ 279, 337, ಐಪಿಸಿ  ಯಂತೆ ಪ್ರಕರಣ ದಾಕಲಿಸಲಾಗಿದೆ.  

ಇತರ ಪ್ರಕರಣ

  • ಮಲ್ಪೆ:  ಆರೋಪಿತರಾದ ಅಭಿಲಾಷ , ರಾಜೀವಕುಮಾರ , ಮಧುಕರ ಬೋಜ ಸುವರ್ಣ, ಪಿರ್ಯಾದಿ ರವೀಂದ್ರ ಆರ್ ಕೋಟ್ಯಾನ್ ತಂದೆ:ದಿ. ರಾಮ ಕೋಟ್ಯಾನ್ವಾಸ:  ಹೊನ್ನಪ್ಪಕುದ್ರು  ಮೂನಾಗನಕಟ್ಟೆ ಎದುರು  ಮೂಡುಬೆಟ್ಟು ಕೊಡವೂರು ಗ್ರಾಮ ಇವರಿಗೆ ಪರಿಚಯದವರಾಗಿದ್ದು ,ಆರೋಪಿತರು  ಮರಿಯಂ ಸೀ ಪುಡ್ ಉದ್ಯಮದಲ್ಲಿ ಪಾಲುದಾರರಾಗಿ ಮಾಡಿಕೊಳ್ಳುತ್ತೇವೆ ತುಂಬಾ ಲಾಭದಾಯವಾಗಿರುತ್ತದೆ ಎಂಬುದಾಗಿ ಪಿರ್ಯಾದಿದಾರರನ್ನು ನಂಬಿಸಿ ಪಿರ್ಯಾದಿದಾರರಿಂದ  ದಿನಾಂಕ 18-06-2020 ರಂದು ಕೆನರಾ ಬ್ಯಾಂಕ್ ಕೊಡವೂರು ಶಾಖೆಯಲ್ಲಿ 5 ಲಕ್ಷ ರೂಪಾಯಿ ಪಿರ್ಯಾದಿದಾರರು ಆರೋಪಿತರ ಖಾತೆಗೆ ಜಮಾ ಮಾಡಿದ್ದು ,  ,ಆರೋಪಿತರು  ಪಿರ್ಯಾದಿದಾರರನ್ನು ಮರಿಯಂ ಸೀ ಪುಡ್  ಉದ್ಯಮದ ಪಾಲುದಾರರನ್ನಾಗಿ  ಮಾಡಕೊಳ್ಳದೆ ,ಪಿರ್ಯಾದಿದಾರರು ಪದೇ ಪದೇ ವ್ಯವಹಾರದ ಬಗ್ಗೆ ಕೇಳಿಕೊಂಡಾಗ ಒಂದಲ್ಲಾ ಒಂದು ರೀತಿಯ ನೆಪವೋಡ್ಡಿ ಪಿರ್ಯಾದಿದಾರಿಗೆ  ನಂಬಿಸಿ  ಹಣ ಪಡೆದುಕೊಂಡು ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  14/2022 ಕಲಂ 406,417, 420 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಕಲಿಸಲಾಗಿದೆ.
  • ಗಂಗೊಳ್ಳಿ:ಪಿರ್ಯಾದಿ ಮೊಹಮ್ಮದ್‌ ರಯಾನ್‌ ಪ್ರಾಯ 21  ವರ್ಷ ತಂದೆ: ಅಬ್ದುಲ್‌ ಮಂಜಿಲ್‌  ವಾಸ: ರಯಾನ್‌ ಮಂಜಿಲ್‌ ಜೆ.ಎಂ ರಸ್ತೆ ಗಂಗೊಳ್ಳಿ ಗ್ರಾಮ ಇವರು ಗಂಗೊಳ್ಳಿ ಗ್ರಾಮದ ಜೆ.ಎಂ ರಸ್ತೆಯಲ್ಲಿರುವ ರಯಾನ್‌ ಮಂಜಿಲ್‌ ಮನೆಯ ಮೊದಲನೆ ಮಹಡಿಯ ಕೋಣೆಯಲ್ಲಿ ಮಲಗಿರುವಾಗ ದಿನಾಂಕ 02.02.2022 ರಂದು ಬೆಳಗಿನ ಜಾವ ಸಮಯ ಸುಮಾರು 2:00 ಗಂಟೆಗೆ ಪಿರ್ಯಾದಿದಾರರು ಮಲಗಿದ್ದ ಕೋಣೆಯ ಕಿಟಕಿಯ ಗಾಜಿಗೆ ಕಲ್ಲು ಹೊಡೆದ ಶಬ್ದ ಕೇಳಿಸಿದ್ದು ಪಿರ್ಯಾದಿದಾರರು ಎದ್ದು ನೋಡಿದಾಗ ಕಿಟಕಿಯ ಗಾಜು ಪುಡಿಯಾಗಿದ್ದು ಹಾಗೂ ಅಲ್ಲೇ ಕಿಟಕಿಯ ಕೆಳಗೆ ಶಿಲೆ ಕಲ್ಲಿನ ತುಂಡು ಬಿದ್ದಿದ್ದು ನಂತರ ಪಿರ್ಯಾದಿದಾರು ಮನೆಯವರಿಗೆ ವಿಚಾರ ತಿಳಿಸಿ  ಮನೆಯವರೆಲ್ಲಾ ಹೊರಗೆ ಬಂದು ನೋಡಿದಾಗ ಪಿರ್ಯಾದಿದಾರರ ಮನೆಯ ಕಂಪೌಂಡ್‌ ಒಳಗೆ ಬಿಯರ್ ಬಾಟಲಿ ಒಡೆದು ಬಿದ್ದಿರುತ್ತದೆ . ಆಸುಪಾಸಿನಲ್ಲಿ ಯಾವುದೇ ವ್ಯಕ್ತಿಗಳು ಕಂಡು ಬಂದಿರುವುದಿಲ್ಲ. ಯಾರೋ ಅಪರಿಚಿತ ಆರೋಪಿತರು ಪಿರ್ಯಾದಿದಾರ ಮನೆಯ ಕಂಪೌಂಡ್ ಒಳಗೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರ ಮನೆಯ ಕಿಟಕಿಯ ಗಾಜಿಗೆ ಕಲ್ಲು ಹೊಡೆದು ಕಂಪೌಂಡ್‌ ಒಳಗೆ ಬಿಯರ್ ಬಾಟಲಿ ಒಡೆದು ಹಾಕಿರುತ್ತಾರೆ.ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 14/2022 ಕಲಂ  447, 427 ಐ.ಪಿ.ಸಿ ಯಂತೆ ಪ್ರಕರಣ ದಾಕಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ: ಫಿರ್ಯಾದಿ ಸುರೇಶ್‌ ಪೈ ಪ್ರಾಯ: 60 ವರ್ಷ ತಂದೆ: ದಿ. ನಾರಾಯಣ ಪೈ ವಾಸ: ಮನೆ ನಂಬ್ರ: 5-2-66B, ವಿಕಾಸ್‌, ಕೊಳಂಬೆ 5ನೇ ಅಡ್ಡರಸ್ತೆ, 76-ಬಡಗುಬೆಟ್ಟು ಇವರ ಕಿರಿಯ ಮಗನಾದ ಕಾರ್ತಿಕ್‌ ಪೈ (31 ವರ್ಷ) ರವರು ತನ್ನ ಹೆಂಡತಿಯೊಂದಿಗೆ ಅಂಬಲಪಾಡಿಯ ಮಜ್ಜಿಗೆಪಾದೆ ಬಳಿಯ  ಮಾನಸ  ರೆಸಿಡೆನ್ಸಿಯ ಫ್ಲ್ಯಾಟ್‌ ನಂ:101ರಲ್ಲಿ ವಾಸವಾಗಿದ್ದವರು,  ಕೆಲವು ಸಮಯದಿಂದ ಮಾನಸಿಕ ಖಿನ್ನತೆಗೊಳಗಾಗಿದ್ದವರು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆ  ಹೊಂದಿ, ದಿನಾಂಕ: 02/02/2022 ರಂದು  ಬೆಳಿಗ್ಗೆ 08:15 ಗಂಟೆಯ ಸುಮಾರಿಗೆ ತಾನು ವಾಸವಿದ್ದ ಫ್ಲ್ಯಾಟಿನ ಬಾತ್‌ರೂಮಿನ ಕಿಟಕಿಯ ಗ್ರಿಲ್‌ಗೆ ಬಾತ್‌ಟವಲ್‌ ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿ ಆರ್ ನಂ 10/2022 ಕಲಂ 174  CrPC ಯಂತೆ ಪ್ರಕರಣ ದಾಕಲಿಸಲಾಗಿದೆ.

ಇತ್ತೀಚಿನ ನವೀಕರಣ​ : 02-02-2022 06:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080