ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಕೋಟ: ದಿನಾಂಕ 31/01/2021 ರಂದು  ಪಿರ್ಯಾದಿದಾರರಾದ ಆನಂದ ಕಾಂಚನ್‌ (67), ತಂದೆ:  ದಿ. ಅಣ್ಣಯ್ಯ ಬಂಗೇರ, ವಾಸ:  ಆರಾಧನ  ನಿಲಯ,ಮಣೂರು  ಪಡುಕೆರೆ, ಕೋಟತಟ್ಟು  ಅಂಚೆ, ಮಣೂರು  ಗ್ರಾಮ, ಬ್ರಹ್ಮಾವರ ತಾಲೂಕು,  ಉಡುಪಿ ಜಿಲ್ಲೆ ಇವರು  ನೆರೆಮನೆಯ ರತ್ನಾಕರ ದೇವಾಡಿಗ ರವರ  ಮೋಟಾರ್‌ ಸೈಕಲ್‌ ನಂಬ್ರ  KA-20-EP-3951 ನೇದರ  ಸಹಸವಾರನಾಗಿ ಮೀನು ತರಲು ರಾಷ್ಟ್ರೀಯ ಹೆದ್ದಾರಿ 66 ರ ಉಡುಪಿ-ಕುಂದಾಪುರ  ಏಕಮುಖ  ರಸ್ತೆಯಲ್ಲಿ  ಮಣೂರು  ಕಡೆಯಿಂದ  ತೆಕ್ಕಟ್ಟೆ  ಕಡೆಗೆ  ಹೊರಟಿದ್ದು  ಮೋಟಾರ್‌ ಸೈಕಲನ್ನು  ರತ್ನಾಕರ  ದೇವಾಡಿಗ ರವರು ಸವಾರಿ  ಮಾಡಿಕೊಂಡಿದ್ದು ಸಂಜೆ  6:10 ಗಂಟೆಗೆ  ತೆಕ್ಕಟ್ಟೆ  ಗ್ರಾಮದ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರ  ತಲುಪುಷ್ಟರಲ್ಲಿ ಹಿಂದಿನಿಂದ ಕೋಟ  ಕಡೆಯಿಂದ  ಕುಂದಾಪುರ  ಕಡೆಗೆ  ಕಾರ್‌‌ ನಂಬ್ರ KA-25-N-4531 ನೇದನ್ನು  ಅದರ  ಚಾಲಕ  ರಾಘವೇಂದ್ರ  ಅಡಿಗ ಅತೀ  ವೇಗ  ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು  ಸಹಸವಾರರಾಗಿದ್ದ ಮೋಟಾರ್‌ಸೈಕಲ್‌ಗೆ  ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಸವಾರ ಮತ್ತು ಸಹಸವಾರರು ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದಿದ್ದು, ಪಿರ್ಯಾದಿದಾರರ ಬಲ ಕಾಲ ಮೊಣಗಂಟಿಗೆ ತರಚಿದ ರಕ್ತಗಾಯವಾಗಿದ್ದು ಭುಜದ ಬಲಬದಿ ಮತ್ತು ಸೊಂಟದ  ಬಲಬದಿ ಗುದ್ದಿದ ಒಳಗಾಯವಾಗಿರುತ್ತದೆ.  ಸವಾರ  ರತ್ನಾಕರ ದೇವಾಡಿಗ ರವರಿಗೆ  ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು ಕೈ ಕಾಲುಗಳಿಗೆ ಅಲ್ಲಲ್ಲಿ ತರಚಿದ ರಕ್ತ ಗಾಯವಾಗಿದ್ದು  ಮಾತನಾಡುವ ಸ್ಥಿತಿಯಲ್ಲಿ ಇಲ್ಲದೆ ಇರುವವರನ್ನು ಚಿಕಿತ್ಸೆ ಬಗ್ಗೆ ಕೋಟೇಶ್ವರ  ಎನ್‌.ಆರ್‌.ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪಿರ್ಯಾದಿದಾರರನ್ನು ಅಲ್ಲಿ ಒಳರೋಗಿಯಾಗಿ ದಾಖಲಿಸಿದ್ದು, ಸವಾರ ರತ್ನಾಕರ ದೇವಾಡಿಗ ರವರನ್ನು ಹೆಚ್ಚಿನ  ಚಿಕಿತ್ಸೆಗೆ ವೈಧ್ಯರ ಸೂಚನೆಯಂತೆ  ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು  ಹೋಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 19/2021  ಕಲಂ: 279,  337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 31/01/2021 ರಂದು ಮಧ್ಯಾಹ್ನ 3:20  ಗಂಟೆಗೆ ಕುಂದಾಪುರ  ತಾಲೂಕಿನ, ಕೊರ್ಗಿ  ಗ್ರಾಮದ  ಚಾರುಕೊಟ್ಟಿಗೆ ಅರ್ಚನಾ ಬಾರ್‌‌ ‌ಬಳಿ ರಸ್ತೆಯಲ್ಲಿ,  ಆಪಾದಿತ ಶಂಬು ಶಂಕರ ಶೆಟ್ಟಿ  ಎಂಬುವವರು KA-20-N-8911ನೇ ಸ್ಯಾಂಟ್ರೋ ಕಾರನ್ನು ದಬ್ಬೆಕಟ್ಟೆ ಕಡೆಯಿಂದ ಕೆದೂರು  ಕಡೆಗೆ  ಅತೀವೇಗ  ಹಾಗೂ  ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು  ಬಂದು ಕಾರನ್ನು  ರಸ್ತೆಯ ಬಲಬದಿಗೆ ಚಲಾಯಿಸಿ, ಕೆದೂರು  ಕಡೆಯಿಂದ ದಬ್ಬೆಕಟ್ಟೆ ಕಡೆಗೆ  ವಿಜಯ ಎಂಬುವವರು  KA-20-S-6838ನೇ ಬೈಕಿನಲ್ಲಿ ವಿನಾಯಕರವರನ್ನು  ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಹೋಗುತ್ತಿದ್ದ  ಬೈಕಿಗೆ  ಎದುರುಗಡೆಯಿಂದ ಡಿಕ್ಕಿ ಹೊಡೆದ  ಪರಿಣಾಮ, ವಿಜಯ ರವರ ತಲೆಗೆ, ಮೂಗಿಗೆ, ಎಡಕಣ್ಣಿಗೆ ಒಳ ಜಖಂ ಉಂಟಾದ  ಗಾಯ, ಹಾಗೂ ವಿನಾಯಕರವರಿಗೆ  ಎಡಕಾಲಿಗೆ, ಎಡಕೈಗೆ ರಕ್ತಗಾಯವಾಗಿ,  ಕೊಟೇಶ್ವರ NR ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆದಿದ್ದು,  ಗಂಭೀರ ಗಾಯಗೊಂಡ  ವಿಜಯ ರವರು ಹೆಚ್ಚಿನ ಚಿಕಿತ್ಸೆ ಬಗ್ಗೆ  ಮಣಿಪಾಲದ KMC  ಆಸ್ಪತ್ರೆಗೆ  ಹೋಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 15/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 01/02/2021 ರಂದು ಬೆಳಿಗ್ಗೆ 10:15 ಗಂಟೆಗೆ, ಕುಂದಾಪುರ ತಾಲೂಕಿನ, ಬಸ್ರೂರು  ಗ್ರಾಮದ, ಕೊಳ್ಕೆರೆ ರಘು ಶೆಟ್ಟಿಯವರ ಮನೆಯ  ಹತ್ತಿರ ಕಾಂಕ್ರೀಟ್‌ ರಸ್ತೆಯಲ್ಲಿ, ಆಪಾದಿತ ಮೊಹಮ್ಮದ್‌ ‌ಸೈಯದ್‌ ಶಾಮಿಮ್‌‌ ಎಂಬುವವರು KA-20-EG-6344 ನೇ ಸ್ಕೂಟರ್‌ನ್ನು ಬಸ್ರೂರು  ಕಡೆಯಿಂದ ಉಳ್ಳೂರು  ಕಡೆಗೆ ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ  ಸವಾರಿ ಮಾಡಿಕೊಂಡು  ಸ್ಕೂಟರ್‌ನ್ನು ಕಾಂಕ್ರೀಟ್‌ ರಸ್ತೆಯ ಬಲಬದಿಗೆ ಸವಾರಿ ಮಾಡಿ, ಉಳ್ಳೂರು  ಕಡೆಯಿಂದ  ಬಸ್ರೂರು ಕಡೆಗೆ ದತ್ತಾತ್ರೇಯ(13) ಇವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ  ಸೈಕಲ್‌ಗೆ ಎದುರುಗಡೆಯಿಂದ  ಡಿಕ್ಕಿ ಹೊಡೆದ  ಪರಿಣಾಮ ದತ್ತಾತ್ರೇಯ ರವರ  ಎರಡೂ ಕಾಲುಗಳಿಗೆ,  ಬಲಕೈಗೆ,  ಬಲಕೆನ್ನೆಗೆ ರಕ್ತಗಾಯವಾಗಿ ಕುಂದಾಪುರ ಚಿನ್ಮಯಿ  ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 16/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ಅರುಣ (40), ಗಂಡ: ರಮೇಶ್‌ ಆಚಾರ್ಯ, ವಾಸ:ಮಸೀದಿಯ ಹತ್ತೀರ ಬೈಲೂರು ಕೌಡೂರು ಗ್ರಾಮ ಕಾರ್ಕಳ ಇವರ ಗಂಡ ರಮೆಶ್‌ ಆಚಾರ್ಯ(42) ರವರು ದಿನಾಂಕ 30/01/2021 ರಂದು ಬೈಲೂರಿನಲ್ಲಿ ಕೆಲಸ ಮಾಡುತ್ತಿರುವಾಗ ಹೊಟ್ಟೆಗೆ ಟೇಬಲ್‌ ತಾಗಿದ್ದು ಆ ದಿನ ರಾತ್ರಿ ಹೊಟ್ಟೆ ನೋವು ಆದ ಕಾರಣ ಮದ್ದಿಗೆ ಹೋಗಿ ಬಂದಿದ್ದು ನಂತರ ದಿನಾಂಕ 31/01/2021 ರಂದು ನಿಟ್ಟೆ ಗಾಜ್ರೀಯಾ ಆಸ್ಪತ್ರೆ ಮತ್ತು ಕಾರ್ಕಳ ಅಮರ ಜ್ಯೋತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಗುಣವಾಗದ ಕಾರಣ  ದಿನಾಂಕ 01/02/2021 ರಂದು ಬೈಲೂರು ಆರೂರು ನರ್ಸಿಂಗ್‌ಹೋಂಗೆ ಚಿಕಿತ್ಸೆಯ ಬಗ್ಗೆ ಹೋದಾಗ ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕಾರ್ಕಳಕ್ಕೆ  ಹೋಗಲು ತಿಳಿಸಿದಂತೆ ಮಧ್ಯಾಹ್ನ 3:20 ಗಂಟೆಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಬಂದಾಗ ರಮೇಶ್‌ರವರು ಮೃತಪಟ್ಟಿರುವುದಾಗಿ ಪರೀಕ್ಷಿಸಿದ ವೈದ್ಯರು ತಿಳಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 02/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.        

 ಇತರ ಪ್ರಕರಣಗಳು

  • ಮಲ್ಪೆ: ಪಿರ್ಯಾದಿದಾರರಾದ ಶ್ರೀಮತಿ ಸರಸ್ವತಿ ಪೂಜಾರ್ತಿ, ಗಂಡ: ಸುಂದರ ಪೂಜಾರಿ, ವಾಸ: ಸರಸ್ವತಿ ನಿವಾಸ ಹೊನ್ನಪ್ಪಕುದ್ರು ಮೂಡುತೋನ್ಸೆ ಗ್ರಾಮ ಇವರು ದಿನಾಂಕ 01/02/2021 ರಂದು ಅವರ ಮನೆಯಲ್ಲಿ ಗಂಡ ಹಾಗೂ ಮಗನಾದ ವಿಜಯನೊಂದಿಗೆ  ಇರುವಾಗ ಬೆಳಿಗ್ಗೆ 08:30 ಗಂಟೆಗೆ ನೆರೆಮನೆಯ  ವಿಶ್ವನಾಥ, ಶೋಭ, ಸ್ವಾತಿ, ಕಾರ್ತಿಕ್ ರವರು  ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ  ಪಿರ್ಯಾದಿದಾರರ  ಮನೆ ಬಳಿ ಬಂದು ನಾಯಿ ಯು ಕೋಳಿಗೆ ಕಚ್ಚಿದ ವಿಚಾರದಲ್ಲಿ ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ಪಿರ್ಯಾದುದಾರರು  ಮೊಬೈಲ್ ನಲ್ಲಿ ಪೊಟೋ ತೆಗೆದಿದ್ದು , ಅದಕ್ಕೆ ಆರೋಪಿತರು ಸೇರಿ ಪಿರ್ಯಾದಿದಾರರ ಮೊಬೈಲ್ ನ್ನು ಎಳೆದುಕೊಂಡು ಕಲ್ಲಿಗೆ   ಬಡಿದು ಜಖಂ ಗೊಳಿಸಿ ಅವರುಗಳ ಕೈಯಲ್ಲಿ ಇದ್ದ ದೊಣ್ಣೆ  ಹಾಗೂ ಕೊತ್ತಳಿಕೆಯಿಂದ ಪಿರ್ಯಾದಿದಾರರಿಗೆ ಹೊಡೆದು ತಪ್ಪಿಸಲು ಬಂದ  ವಿಜಯ ನ ಎದೆಗೆ ಪರಚಿರುತ್ತಾರೆ , ಶೋಭ ಪಿರ್ಯಾದಿದಾರರ ಕೂದಲನ್ನು ಎಳೆಯುವ ಸಮಯ ಪಿರ್ಯಾದಿದಾರರ ಎಡ ಕಿವಿಯ ಬೆಂಡೋಲೆ  ಕಿವಿಯು ಹರಿದು ಕೆಳಗೆ ಬಿದ್ದು ಸಿಕ್ಕಿರುವುದಿಲ್ಲ  ಹಾಗೂ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 09/2021 ಕಲಂ: 323, 324, 427, 447, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿದಾರರಾದ ಶೋಭ(50), ಗಂಡ:  ವಿಶ್ವನಾಥ, ವಾಸ: ಹೊನ್ನಪ್ಪಕುದ್ರು , ಮೂಡುತೋನ್ಸೆ ಗ್ರಾಮ  ಇವರ ಮನೆಯ  ಕೋಳಿಗೆ  ನೆರೆಮನೆಯ  ಸರಸ್ವತಿ ರವರ ನಾಯಿಯು ಕಚ್ಚಿದ  ವಿಚಾರದಲ್ಲಿ ದಿನಾಂಕ 01/02/2021 ರಂದು 11:00 ಗಂಟೆಗೆ  ಸರಸ್ವತಿ ರವರ ಮಗ ವಿಜಯನಲ್ಲಿ ನಾಯಿಯನ್ನು ಕಟ್ಟಿ ಹಾಕಲು ಹೇಳಿದ್ದಕ್ಕೆ  ವಿಜಯನು ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದು ಅಲ್ಲಿಯೆ ಇದ್ದ ಸರಸ್ವತಿ  ಕುತ್ತಿಗೆಯನ್ನು  ಹಿಡಿದು ಆ ಸಮಯ ವಿಜಯನು ಕೋಲಿನಿಂದ ಪಿರ್ಯಾದಿದಾರರ ಎಡಕಾಲಿಗೆ ಹೊಡೆದು ಕೈಯಿಂದ ಮುಖಕ್ಕೆ ಹೊಡೆದಿರುತ್ತಾನೆ. ಸರಸ್ವತಿಯು ಪಿರ್ಯಾದಿದಾರರನ್ನು ದೂಡಿದ ಪರಿಣಾಮ ನೆಲಕ್ಕೆ ಬಿದ್ದಾಗ ಅವರ ಎಡಕಾಲಿಗೆ ಕಚ್ಚಿರುತ್ತಾರೆ ಆ ಸಮಯ ತಪ್ಪಿಸಲು ಬಂದ ಮಗಳು  ಕನ್ನಿಕಳಿಗೆ ವಿಜಯನು  ಕೈಹಿಡಿದು ಎಳೆದು ಮೊಬೈಲ್ ನ್ನು  ಎಳೆದು ನೆಲಕ್ಕೆ  ಕುಟ್ಟಿ ಜಖಂ ಗೊಳಿಸಿರುತ್ತಾರೆ ಅಲ್ಲದೆ ಜುಟ್ಟು ಎಳೆದಿರುತ್ತಾನೆ. ಹಾಗೂ ವಿಜಯ ನು ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 10/2021 ಕಲಂ: 324, 323, 504, 506, 427 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಪಡುಬಿದ್ರಿ: ಪಿರ್ಯಾದಿದಾರರಾದ ಜಾಹಿದುಲ್ ಇಸ್ಲಾಂ (20), ತಂದೆ: ಫುಲ್ಸಾನ್ ಆಲಿ, ವಾಸ: ಮನೆ ನಂಬ್ರ ಬಿ-102, ಧುಮೇರ್‌ಗುರಿ ಗ್ರಾಮ ಮತ್ತು ಅಂಚೆ,  ಬೊಂಗಾಯ್‌ಗಾನ್‌ ಜಿಲ್ಲೆ, ಅಸ್ಸಾಂ ರಾಜ್ಯ ಹಾಗೂ ಆಲಂ ಹುಸೇನ್ ರವರು ಮೂಡಬಿದ್ರಿಯ ರೋನಾಲ್ಡ್‌ ರೋಶನ್ ಸಿಕ್ವೆರ ಎಂಬುವವರ R&D ಜಾಹೀರಾತು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ಆರೋಪಿತನು ಆಲಂ ಹುಸೇನ್ ಗೆ, ಹೆರಾಲ್ಡ್ ರೋಡ್ರೀಗಸ್ ಹಾಗೂ ಗಾಯಾಳುವಿಗೆ ನಂದಿಕೂರು ಗ್ರಾಮದ ನಂದಿಕೂರು ಕೈಗಾರಿಕಾ ಪ್ರದೇಶದಲ್ಲಿ ಅಳವಡಿಸಿದ ಕಬ್ಬಿಣದ ಕಂಬ ಹಾಗೂ  ಕಬ್ಬಿಣದ ಪಟ್ಟಿಯನ್ನು ಅಳವಡಿಸಿದ ಎತ್ತರದ ಪ್ಲೆಕ್ಸ್ ಬೋರ್ಡಿಗೆ ಮಯೂರಿ ಸಿಲ್ಕ್ ಎಂಬ ಪ್ಲೆಕ್ಸ್ ಬ್ಯಾನರ್ ನ್ನು ಅಳವಡಿಸುವಂತೆ ತಿಳಿಸಿದ ಮೇರೆಗೆ, ಪಿರ್ಯಾದಿದಾರರು ಹಾಗೂ ಗಾಯಾಳು  ಆಲಂ ಹುಸೇನ್ ಮತ್ತು ಹೆರಾಲ್ಡ್‌ರೋಡ್ರಿಗಸ್‌ ರವರು ದಿನಾಂಕ 30/01/2021 ರಂದು ಮಧ್ಯಾಹ್ನ 13:30 ಗಂಟೆಗೆ ಕಾಪು ತಾಲೂಕು ನಂದಿಕೂರು ಕೈಗಾರಿಕಾ ಪ್ರದೇಶದ ಹತ್ತಿರ ಹೈಟೆಂಕ್ಷನ್ ವಿದ್ಯುತ್ ಪ್ರವಹಿಸುವ ವಿದ್ಯುತ್ ತಂತಿಯ ಕೆಳ ಭಾಗದಲ್ಲಿ ಅಳವಡಿಸಿದ ಕಬ್ಬಿಣದ ಕಂಬ ಹಾಗೂ ಪಟ್ಟಿ ಅಳವಡಿಸಿದ ಬ್ಯಾನರ್ ಬೋರ್ಡಿಗೆ ಮಯೂರಿ ಫ್ಲೆಕ್ಸ್ ಬ್ಯಾನರ್ ನ ಮೇಲಂಚಿನಲ್ಲಿ ಪ್ಲೆಕ್ಸ್‌ನ್ನು ಅಳವಡಿಸುವ ಕೆಲಸ ಮಾಡುತ್ತಿರುವ ಸಮಯ ಒಮ್ಮೇಲೆ ವಿದ್ಯುತ್ ತಂತಿಯ ವಿದ್ಯುತ್ ಆಘಾತದಿಂದ ಭಾರಿ ಶಬ್ದ ಉಂಟಾಗಿ ಆಲಂ ಹುಸೇನ್‌ನ ಬಟ್ಟೆಗೆ, ಮೈಗೆ ಬೆಂಕಿ ತಗುಲಿ ಕೆಳಗೆ ಬಿದ್ದು ಎಡಕೈಮೂಳೆ ಮುರಿತ ಹಾಗೂ ತೀವ್ರ ತರಹದ ಸುಟ್ಟ ಗಾಯ ಉಂಟಾಗಿದ್ದು, ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ  ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಯಲ್ಲಿರುತ್ತಾರೆ .ಆರೋಪಿ  ರೋನಾಲ್ಡ್ ಸಿಕ್ವೆರಾನು ಭಾರಿ ವಿದ್ಯುತ್ ಪ್ರವಹಿಸುವ ಹೈಟೆಂಕ್ಷನ್ ವಿದ್ಯುತ್ ತಂತಿಯ ಕೆಳಭಾಗದಲ್ಲಿ ನಿರ್ಲಕ್ಷವಾಗಿ ಬೋರ್ಡನ್ನು ಅಳವಡಿಸಿ, ನಿರ್ಲಕ್ಷವಾಗಿ ಬ್ಯಾನರ್ ನ್ನು ಅಳವಡಿಸಲು ಹೇಳಿದ್ದು ಆಲಂ ಹುಸೇನ್ ನನಿಗೆ ಬ್ಯಾನರ್ ಅಳವಡಿಸುವ ಸಮಯದಲ್ಲಿ ವಿದ್ಯುತ್ ಆಘಾತವಾಗಿ ತೀವ್ರ ಗಾಯ ಉಂಟಾಗಲು ಕಾರಣವಾಗಿರುವುದಾಗಿ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 09/2021 ಕಲಂ: 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 31/01/2021ರಂದು ಪಿರ್ಯಾದಿದಾರರಾದ ಕೃಷ್ಣ (20), ತಂದೆ: ಉದಯ್‌, ವಾಸ: ರೂಂ.ನಂ. ಬಿ-503, ಮಾಂಡವಿ ಎಮಾರಾಲ್ಡ್‌, ಡಿ.ಸಿ ಕಚೇರಿ ರಸ್ತೆ, ಮಣಿಪಾಲ, ಉಡುಪಿ ಇವರು ತನ್ನ ಸೇಹಿತೆ ದಿವ್ಯಾಂಶ್‌‌ರವರೊಂದಿಗೆ ಮಣಿಪಾಲ ಸಿಂಡಿಕೇಟ್‌ ಸರ್ಕಲ್‌ ‌ಬಳಿಯ ಕೆ.ಎಫ್‌.ಸಿ ಮೆಟ್ಟಿಲಿನಲ್ಲಿ ಕುಳಿತುಕೊಂಡಿರುವಾಗ MH-04-CT-1339ನೇ ಕೆಂಪು ಕಾರಿನಲ್ಲಿ ಬಂದ ವ್ಯಕ್ತಿಯು ಪಿರ್ಯಾದಿದಾರರ ಬಳಿ ಬಂದು ಇಲ್ಲಿ ಸಿಗರೇಟ್‌ ಎಲ್ಲಿ ಸಿಗುತ್ತದೆ ಎಂದು ಕೇಳಿದಾಗ ನಮಗೆ ಗೊತ್ತಿಲ್ಲ ಎಂದು ಪಿರ್ಯಾದಿದಾರರು ಹೇಳಿರುತ್ತಾರೆ. ಆ ಸಮಯ ಆತನು ಕೈಯಲ್ಲಿ ಚಾಕುವನ್ನು ಹಿಡಿದುಕೊಂಡು ನಿಮ್ಮಲ್ಲಿರುವ ವಸ್ತುಗಳನ್ನು ಕೊಡಿ ಇಲ್ಲದಿದ್ದರೆ ನಿಮ್ಮನ್ನು ಬಿಡುವುದಿಲ್ಲ, ಬೊಬ್ಬೆ ಹಾಕಿದರೆ ನಿಮ್ಮನ್ನು ಸಾಯಿಸುತ್ತೇವೆ ಎಂದು ಬೆದರಿಸಿ ಪಿರ್ಯಾದಿದಾರರ ಬಳಿ ಇದ್ದ 2 ಮೊಬೈಲ್‌ ಪೋನ್‌, ಟೈಟಾನ್‌ ವಾಚ್‌‌‌, 250/- ರೂಪಾಯಿ ನಗದು, ಎಂ.ಐ.ಟಿ ಐಡಿ ಕಾರ್ಡನ್ನು ಕಸಿದುಕೊಂಡಿರುತ್ತಾರೆ.  ಬಳಿಕ ಕಾರಿನಿಂದ ಇನ್ನೊಬ್ಬ ವ್ಯಕ್ತಿ ಇಳಿದು ಬಂದಿದ್ದು, ಬಳಿಕ ಇಬ್ಬರೂ ಪಿರ್ಯಾದಿದಾರರಿಂದ ಸುಲಿಗೆ ಮಾಡಿಕೊಂಡ ವಸ್ತುಗಳೊಂದಿಗೆ ಕಾರಿನಲ್ಲಿ ಹೋಗಿರುವುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 14/2021 ಕಲಂ : 392, 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 02-02-2021 11:10 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080