ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಗಂಗೊಳ್ಳಿ: ಪಿರ್ಯಾದಿ ಸತೀಶ ಆಚಾರ್ಯ ಇವರು ದಿನಾಂಕ 01/02/2021 ರಂದು KA.20.EM.6215 ನೇ ಸ್ಕೂಟರ್‌ ನಲ್ಲಿ ಬಂಟ್ವಾಡಿಯಿಂದ ಹಕ್ಲಾಡಿ ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು ಸಂಜೆ 6:30 ಗಂಟೆಗೆ ಹಕ್ಲಾಡಿ ಭಜನಾ ಮಂದಿರದ ಬಳಿ ತಲುಪುವಾಗ್ಯೆ ಆಲೂರು ಕಡೆಯಿಂದ ಬಂಟ್ವಾಡಿ ಕಡೆಗೆ KA.30.MA-3475 ಜೀಪ್ ನ್ನು ಅದರ ಚಾಲಕ ರಾಜೀವ ಶೆಟ್ಟಿ ಎಂಬುವವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರ ಬೈಕ್‌ ಗೆ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದುದಾರರು ಕೆಳಗೆ ಬಿದ್ದು, ತೀವ್ರ ಸ್ವರೂಪದ ಗಾಯಗೊಂಡು ಚಿಕಿತ್ಸೆ ಬಗ್ಗೆ ಕುಂದಾಪುರದ ಚಿನ್ಮಯಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ: 10/2021 ಕಲಂ ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿ ಅರವಿಂದ ವಿ  ಇವರು  ದಿನಾಂಕ 02/02/2021 ರಂದು ಬೆಳಿಗ್ಗೆ ಅಗತ್ಯ ಕೆಲಸದ ನಿಮಿತ್ತ   ಉಡುಪಿ ಸಿಟಿ  ಬಸ್ಸ  ನಿಲ್ದಾಣದಿಂದ   ಎಮ್‌ಜಿಎಮ್ ಕಡೆಗೆ ಹೋಗುತ್ತಿರುವಾಗ, ಕಲ್ಸಂಕ ಜಂಕ್ಷನ್ ಬಳಿ ಪಿರ್ಯಾದಿದಾರರ ಎದುರಿನಿಂದ  KA 20 EH 3859 ನೇ  ಸ್ಕೂಟರ ಸವಾರ ಅಕ್ಷಯ್ ಕುಮಾರ್ ಎಂಬಾತನು ತನ್ನ ಮೋಟಾರು ಸೈಕಲಿನಲ್ಲಿ ಹಿಂದೆ ಸಹಸವಾರಳಾಗಿ ಸುಮಿತ್ರ  ಎಂಬವರನ್ನು ಕುಳ್ಳಿರಿಸಿಕೊಂಡು ಕಲ್ಸಂಕದಿಂದ  ಎಂ ಜಿ ಎಂ  ಕಡೆಗೆ  ಸವಾರಿ  ಮಾಡಿಕೊಂಡು   ಹೋಗುತ್ತಿರುವಾಗ  ಸಮಯ  ಸುಮಾರು     ಬೆಳಿಗ್ಗೆ 8.30 ಗಂಟೆಗೆ  ಶಿವಳ್ಳಿ ಗ್ರಾಮದ ಕಲ್ಸಂಕ ಜಂಕ್ಷನ್ ನಿಂದ ಸ್ವಲ್ಪ ಮುಂದೆ ಬಸ್ ನಿಲ್ದಾಣದ ಎದುರು  ರಾ.ಹೆ 169(ಎ) ರಲ್ಲಿ ನಿಲ್ಲಿಸಿದ ಹಾಳಾದ ಬಸ್ಸಿನ ಹಿಂದೆ ಮುಂಜಾಗ್ರತಾ ಕ್ರಮವಾಗಿ ಇರಿಸಿದ್ದ ಬ್ಯಾರಿಕೇಡ್ ಗೆ ದುಡುಕುತನ ಹಾಗೂ ನಿರ್ಲಕ್ಷತನದಿಂದ  ಸವಾರಿ  ಮಾಡಿ ಡಿಕ್ಕಿಹೊಡೆದ ಪರಿಣಾಮ  ಸ್ಕೂಟರ  ಸವಾರ  ಅಕ್ಷಯ  ಕುಮಾರ  ಹಾಗು  ಸಹಸವಾರಳಾದ ಸುಮಿತ್ರಾ ರವರು  ಸ್ಕೂಟರ   ಸಮೇತ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಸುಮಿತ್ರಾ ರವರ ತಲೆಗೆ  ಗಂಭೀರ ಗಾಯವಾಗಿ ರಕ್ತ ಬರುತ್ತಿದ್ದವರನ್ನು ಸಾರ್ವಜನಿಕರ ಸಹಕಾರದೊಂದಿಗೆ ಕೆಎಮ್‌ಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.  ಹಾಗು  ಈ  ಅಪಘಾತದಿಂದ ಮೋಟಾರು ಸೈಕಲ್ ಸವಾರ ಅಕ್ಷಯ  ಕುಮಾರ ಗೆ  ತರಚಿದ  ಗಾಯವಾಗಿರುತ್ತದೆ.  ಈ ಬಗ್ಗೆ ಉಡುಪಿ ಸಂಚಾರ ಠಾಣಾ ಅಪರಾಧ ಕ್ರಮಾಂಕ: 09/2021  ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

 • ಮಣಿಪಾಲ:ದಿನಾಂಕ : 31.01.2021 ರಂದು ಮದ್ಯಾಹ್ನ 12.15 ಗಂಟೆಗೆ ಅಪಾದಿತ ಕಿಶನ್ ದೇವಾಡಿಗ ಎಂಬಾತನು ಪಿರ್ಯಾದಿ ಕೆ. ರಾಧಾಕೃಷ್ಣ ಶೆಟ್ಟಿಗಾರ್ ಇವರ ಮನೆಗೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರ ಹೆಂಡತಿ, ಮಗಳು ಹಾಗು ಮಗನ ಎದುರಿಗೆ ಅವಾಚ್ಯ ಶಬ್ದಗಳಿಂದ ಬೈದುದಲ್ಲದೆ ಕೊಲೆ ಬೆದರಿಕೆ ಒಡ್ಡಿರುತ್ತಾನೆ. ಬಳಿಕ  ಪಿರ್ಯಾದಿದಾರರನ್ನು ಮನೆಯಿಂದ ಹೊರಗೆ ಕರೆದು ಕೈಯಿಂದ ಪಿರ್ಯಾದಿದಾರರನ್ನು ದೂಡಿದ್ದು, ಕೆಳಗೆ ಬಿದ್ದ ಪಿರ್ಯಾದಿದಾರರಿಗೆ ಕಾಲಿನಿಂದ ತುಳಿದು ಹಲ್ಲೆ ಮಾಡಿರುತ್ತಾನೆ. ಹಾಗು ಮುಂದೆ ಪರಿಚಯದ ಗೂಂಡಾಗಳಿಂದ ನಿಮ್ಮ ಮನೆಗೆ ಬಂದು ನಿಮ್ಮ ಮನೆಯವರನ್ನು ನೋಡಿಕೊಳ್ಳುತ್ತೇನೆ ಎಂಬುದಾಗಿ ಬೆದರಿಕೆ ಹಾಕಿರುತ್ತಾನೆ ಅಲ್ಲದೆ ಸಾಯಂಕಾಲ ಅಪಾದಿತ ಕಿಶನ್ ರವರ ತಂದೆ ಪಿರ್ಯಾದಿದಾರರ ಮನೆಗೆ ಬಂದು ಮನೆಯಲ್ಲಿದ್ದ ಪಿರ್ಯಾದಿದಾರರ ಹೆಂಡತಿ ಹಾಗು ಮಗಳಿಗೆ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಈ ಬಗ್ಗೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ: 16/2021 ಕಲಂ:448,504,323,506, ಜೊತೆಗೆ 34   ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ : ದಿನಾಂಕ : 31.01.2021 ರಂದು ಮದ್ಯಾಹ್ನ 12.30 ಗಂಟೆಗೆ ಪಿರ್ಯಾದಿ ಕಿಶನ್ ಇವರು ರಾಂಪುರ ಮತ್ತು ಜೋಡು ರಸ್ತೆಯಲ್ಲಿ ತನ್ನ ಗೆಳೆಯನ ಬಾಬ್ತು ಸ್ಕೂಟರ್ ನಲ್ಲಿ ಉಡುಪಿಗೆ ಹೋಗುತ್ತಿರುವಾಗ ಅಪಾದಿತರಾದ ರಾಧಾಕೃಷ್ಣ ಶೆಟ್ಟಿಗಾರ್ ಮತ್ತು ವಿಕ್ರಮ್ ಶೆಟ್ಟಿಗಾರ್ ಎಂಬವರು ಪಿರ್ಯಾದಿದಾರರನ್ನು ಅಡ್ಡಗಟ್ಟಿ ಕಬ್ಬಿಣದ ರಾಡ್ ನಿಂದ ಪಿರ್ಯಾದಿದಾರರ ಎಡ ಕಾಲಿಗೆ ಮತ್ತು ಎಡ ಕೈಗೆ ಹಲ್ಲೆ ನಡೆಸಿದ್ದು, ಈ ಬಗ್ಗೆ ಪಿರ್ಯಾದಿದಾರರು ವಿಚಾರಿಸಿದಕ್ಕೆ ಅರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ನಿನ್ನೆ ದಿನ ಎಷ್ಟು ಹಾರ್ನ್ ಹಾಕಿದ್ದರು ನೀನು ನನಗೆ ಸೈಡ್ ಕೊಡಲಿಲ್ಲ ಎಂದು ಕಾರಣ ಹೇಳಿದ್ದಾರೆ ಎಂಬಿತ್ಯಾದಿ. ಈ ಬಗ್ಗೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ: 15/2021 ಕಲಂ: 341, 324, 504 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಹಿರಿಯಡ್ಕ: ಪಿರ್ಯಾಧಿ ರಂಗಪ್ಪ ಕರಡಿ ಗುದ್ದೆ  ಇವರ 2ನೇ ಮಗನಾದ ಪುಂಡಲೀಕನು ಸುಮಾರು 2 ವರ್ಷದಿಂದ ಉಡುಪಿ ಜಿಲ್ಲೆ ಬೊಮ್ಮರಬೆಟ್ಟು ಗ್ರಾಮದ ಪಂಚನಬೆಟ್ಟು ಮಾಡಗುಡ್ಡೆಯಲ್ಲಿ ಪಿರ್ಯಾದಿದಾರರ ತಂಗಿಯ ಗಂಡ ಈರಪ್ಪ ಬರಗಣಿ ಅವರ ಮನೆಯಲ್ಲಿ ಇದ್ದು ಇಲ್ಲಿಯೇ ಕೂಲಿ ಕೆಲಸ ಮಾಡಿಕೊಂಡು ಇರುವುದಾಗಿದೆ. ಆಗಾಗ ಫಿರ್ಯಾದಿ ಮನೆಗೆ ಬಂದು ಹೋಗುತ್ತಿದ್ದನು. ಸುಮಾರು 1 ವಾರದ ಹಿಂದೆ ಪುಂಡಲಿಕನು ಫಿರ್ಯಾದಿದಾರರ ಮನೆಗೆ ಬಂದಿದ್ದು 2  ದಿನ ಮನೆಯಲ್ಲೆ ಇದ್ದು ನಂತರ  ಮನೆಯಿಂದ ಲಾರಿ ಕ್ಲೀನರ್ ಕೆಲಸಕ್ಕೆ ಹೋಗಿರುತ್ತಾನೆ. ದಿನಾಂಕ 30/೦1/2021 ರಂದು ಈರಪ್ಪ ಬರಗಣಿ ಪಿರ್ಯಾದಿದಾರರಿಗೆ ಕರೆ ಮಾಡಿ ಪುಂಡಲೀಕನು ಲಾರಿಯಲ್ಲಿ ಕ್ಲೀನರ್ ಕೆಲಸಕ್ಕೆ ಮೈಸೂರಿಗೆ ಹೋಗಿದ್ದಾಗ ಹುಷಾರ್ ಇಲ್ಲದೆ ಕಾಲುಗಳು ಸ್ವಾಧೀನ ಕಳೆದುಕೊಂಡು ನಡೆಯಲು ಆಗುವುದಿಲ್ಲ ಎಂಬುದಾಗಿ ಕರೆ  ಮಾಡಿದ್ದಾಗಿಯೂ,  ತಾನು ಅಲ್ಲಿಗೆ ಹೋಗಿ ಆತನನ್ನು ಕರೆದುಕೊಂಡು ಬರುವುದಾಗಿ ತಿಳಿಸಿರುತ್ತಾರೆ. ನಿನ್ನೆ ದಿನ ದಿನಾಂಕ 01/02/2021 ರಂದು ಪಂಚನಬೆಟ್ಟು ಮಾಡಗುಡ್ಡೆಯ ಈರಪ್ಪ ಬರಗಣಿಯವರ ಮನೆಗೆ ಪಿರ್ಯಾದಿದಾರರು ಬಂದು ಮಗನನ್ನು ನೋಡಲಾಗಿ ಆತನು  ಹುಷಾರಿಲ್ಲದೆ ಕೈ ಕಾಲುಗಳು ಸ್ವಾಧೀನ ಕಳೆದುಕೊಂಡು ನಡೆಯಲು ಆಗದೆ ಮಲಗಿಕೊಂಡಿರುತ್ತಾನೆ. ಆತನನ್ನು   ವಿಚಾರಿಸಲಾಗಿ ತಾನು ಕ್ಲೀನರ್ ಕೆಲಸದಲ್ಲಿ ಮೈಸೂರಿಗೆ ಹೋಗಿದ್ದಾಗ ಕಾಲುಗಳಲ್ಲಿ ನೋವು  ಕಾಣಿಸಿಕೊಂಡು ಕಾಲುಗಳು ಸ್ವಾದೀನ ಕಳೆದು ಕೊಂಡು ನಡೆಯಲು ಸಾಧ್ಯವಾಗದೆ, ಊಟ ತಿಂಡಿ ಮಾಡಲು ಆಗುವುದಿಲ್ಲ ಎಂಬುದಾಗಿ ತಿಳಿಸಿರುತ್ತಾನೆ. ಬಳಿಕ ಸಂಜೆ 7:00 ಗಂಟೆಗೆ ಪುಂಡಲೀಕ ಮೂರ್ಛೆ ತಪ್ಪಿದ್ದು ಆತನನ್ನು ಕೂಡಲೇ ಗುಡ್ಡೆಯಂಗಡಿ  ಪೂಪಾಡಿಕಲ್ಲು ವೈದ್ಯರಾದ  ಸೂರಜ್ ರವರ  ಕ್ಲೀನಿಕ್ ಗೆ ಕರೆದುಕೊಂಡು ಹೋದಾಗ ಅವರು ಮೆದುಳಿಗೆ ಸಮಸ್ಯೆ ಆಗಿರುವುದಾಗಿ ಕೂಡಲೆ ಅಜ್ಜರಕಾಡು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ  ತಿಳಿಸಿದ ಮೇರೆಗೆ ಒಂದು ವಾಹನದಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ  ರಾತ್ರಿ 12:30 ಗಂಟೆಗೆ ತೋರಿಸಿದಲ್ಲಿ ವೈದ್ಯರು ದಾರಿ ಮದ್ಯೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 04/2021 ಕಲಂ: 174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 02-02-2021 06:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ