ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾರ್ಕಳ: ದಿನಾಂಕ 01/01/2023 ರಂದು 10:00 ಗಂಟೆಗೆ  ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ಬೆಳ್ಮಣ್ ಬಸ್ ನಿಲ್ದಾಣದ ಬಳಿ ಪಿರ್ಯಾದಿದಾರರಾದ ಮಂಜುನಾಥ ಶೆಟ್ಟಿ (31), ತಂದೆ: ಶೇಖರ ಶೆಟ್ಟಿ, ವಾಸ: ಅತಿಥಿ ನಿಲಯ ಕುಂಟಲಪಾಡಿ ಸಾಣೂರು ಕಾರ್ಕಳ ತಾಲೂಕು, ಉಡುಪಿ  ಜಿಲ್ಲೆ ಇವರು ನಿಂತುಕೊಂಡಿರುವಾಗ KA-21-L-6896 ನೇ ನಂಬ್ರದ ಸ್ಕೂಟಿ ಸವಾರ ಸನ್ಮಾನ್ ತನ್ನ ಸ್ಕೂಟಿಯಲ್ಲಿ ಸಹಸವಾರೆಯಾಗಿ ಪ್ರವಿತರವರ ಕುಳ್ಳಿರಿಸಿಕೊಂಡು ಪಡುಬಿದ್ರೆ ಕಡೆಯಿಂದ ನಿಟ್ಟೆ ಕಡೆಗೆ ಬರುತ್ತಿರುವಾಗ ಶಿರ್ವಾ ಕಡೆಯಿಂದ ಬೆಳ್ಮಣ್ ಜಂಕ್ಷನ್ ನಲ್ಲಿ ಹಾದುಹೋಗುವ ರಾಜ್ಯ ಹೆದ್ದಾರಿ ಕಡೆಗೆ KA-20-Z-4947 ನೇ ನಂಬ್ರದ ಓಮಿನ್ನಿ ಕಾರು ಚಾಲಕ ತನ್ನ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಹಾಗೂ ಸಹಸವಾರೆ ಸ್ಕೂಟಿ ಸಮೇತ ರಸ್ತೆಗೆ ಬಿದ್ದಿದ್ದು,ಸವಾರೆ ಪ್ರವಿತರವರ ಎಡಕಾಲಿನ ಕೋಲುಕಾಲಿಗೆ ಗಾಯವಾಗಿದ್ದು,ಸವಾರ ಸನ್ಮಾನ್ ನ ಎಡಕೈಗೆ ತರಚಿದ ಗಾಯವಾಗಿರುತ್ತದೆ. ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 01/2023 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
 • ಅಜೆಕಾರು: ಪಿರ್ಯಾದಿದಾರರಾದ ಗೋಪಾಲಕೃಷ್ಣ ನಾಯಕ್ (70), ತಂದೆ: ಪಟ್ಟು ನಾಯಕ್, ವಾಸ: ದುರ್ಗ ನಿವಾಸ, ನೂಜಿ, ಅಜೆಕಾರು, ಮರ್ಣೆ ಗ್ರಾಮ, ಕಾರ್ಕಳ ತಾಲೂಕು ಇವರು ತನ್ನ ಮಗ ರವಿಕಿರಣ ಮತ್ತು ಮಗನ ಸ್ನೇಹಿತನಾದ ಸುಜೀತ್ ರವರೊಂದಿಗೆ KA-20-P-4710 ನೇ ಕಾರಿನಲ್ಲಿ ಬೆಂಗಳೂರಿನಿಂದ ಅಜೆಕಾರಿಗೆ ಬರುತ್ತಿರುವ ಸಮಯ ದಿನಾಂಕ 01/01/2023 ರಂದು ಬೆಳಿಗ್ಗೆ 07:00 ಗಂಟೆಗೆ ಅಂಡಾರು ಗ್ರಾಮದ ಅಂಡಾರು ಜಂಕ್ಷನ್ ಗಿಂತ ಸ್ವಲ್ಪ ಮುಂದೆ, ಪಿರ್ಯಾದಿದಾರರ ಮಗ ರವಿಕಿರಣನು ಕಾರನ್ನು  ಅತೀ ವೇಗ ಮತ್ತು ಅಜಾಗರೂಕತೆಯಿಂದ ರಸ್ತೆಯ  ತೀರ ಬಲ ಬದಿಗೆ ಚಲಾಯಿಸಿದ ಪರಿಣಾಮ ಕಾರು ಚರಂಡಿಗೆ ಬಿದ್ದು ಪಲ್ಟಿ ಆಗಿ ರಸ್ತೆ ಬದಿಗೆ ಹೋಗಿ ನಿಂತಿರುತ್ತದೆ. ಈ ಅಪಘಾತದಿಂದ ಕಾರಿನ ಹಿಂಬದಿ ಸೀಟಿನಲ್ಲಿದ್ದ ಪಿರ್ಯಾದಿದಾರರ ಮೈಕೈಗೆ ಗುದ್ದಿದ ನೋವಾಗಿದ್ದು, ಚಾಲಕನ ಪಕ್ಕದಲ್ಲಿ ಕುಳಿತಿದ್ದ ಸುಜೀತನು ಕಾರಿನಿಂದ ಹೊರಗೆ ಎಸೆಯಲ್ಪಟ್ಟು ಅವನ ಮುಖಕ್ಕೆ ಮತ್ತು ಬಲಕೈಗೆ ಗಾಯವಾಗಿದ್ದುಮತ್ತು ಸೊಂಟಕ್ಕೆ ನೋವಾಗಿದ್ದು, ಕೂಡಲೇ ರವಿಕಿರಣನು ಅಲ್ಲಿ ಬರುತ್ತಿದ್ದ ಒಂದು ಕಾರಿನಲ್ಲಿ ಚಿಕಿತ್ಸೆ ಬಗ್ಗೆ ಸುಜೀತ್ ನನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿದ್ದು, ಸುಜೀತ್ ನಿಗೆ ಬಲಕೈಯ ಮೂಳೆ ಮುರಿತ ಮತ್ತು ಸೊಂಟಕ್ಕೆ ಗಾಯವಾಗಿರುವ ವಿಚಾರ ಚಿಕಿತ್ಸೆ ವೇಳೆ ತಿಳಿದು ಬಂದಿರುವುದಾಗಿದೆ. ಈ ಬಗ್ಗೆ  ಅಜೆಕಾರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 01/2023 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

 • ಹೆಬ್ರಿ: ಪಿರ್ಯಾದಿದಾರರಾದ ಮಾಲಿನಿ (24), ಗಂಡ; ರಾಜೇಶ, ವಾಸ: ಜರವತ್ತು ಮುದ್ರಾಡಿ ಗ್ರಾಮ ಹೆಬ್ರಿ ತಾಲೂಕು  ಇವರ ಗಂಡ ರಾಜೇಶ (34) ಇವರು ಜೀವನದಲ್ಲಿ ಜಿಗುಪ್ಸೆಗೊಂಡು ಮಾನಸಿಕ ಖಿನ್ನತೆಗೆ ಒಳಗಾಗಿ ದಿನಾಂಕ 01/01/2023 ರಂದು ರಾತ್ರಿ 07:30 ಗಂಟೆಯಿಂದ 08:30 ಗಂಟೆಯ ಮಧ್ಯಾವಧಿಯಲ್ಲಿ ಮುದ್ರಾಡಿ ಗ್ರಾಮದ ಜರವತ್ತು ಎಂಬಲ್ಲಿರುವ ಅವರ ಮನೆಯ ಅಂಗಳದಲ್ಲಿರುವ ಗೊಬ್ಬರ ಮರಕ್ಕೆ ಚೂಡಿದಾರ ವೇಲ್‌ ನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 01/2023 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣ

 • ಮಣಿಪಾಲ: ದಿನಾಂಕ 31/12/2022 ರಂದು 21:45 ಗಂಟೆಗೆ ಪಿರ್ಯಾದಿದಾರರಾದ ಪ್ರಶಾಂತ್‌ (23), ತಂದೆ: ಚಂದ್ರಶೇಖರ್‌,  ವಾಸ: : 11-3-20 ದೂಮಾವತಿ ರಸ್ತೆ ಕವಿತ ಕಂಪೌಂಡ, ಕಾಡಬೆಟ್ಟು ಮೂಡನಿಡಬೂರು ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ಉಡುಪಿ ತಾಲೂಕು 80 ಬಡಗಬೆಟ್ಟು ಗ್ರಾಮದ ರಿಂಗ್‌ಜೋನ್‌ಎಂಬ ಪಬ್‌ನಲ್ಲಿರುವಾಗ ಇಬ್ಬರು ಅಪರಿಚಿತರು ಪಿರ್ಯಾದಿದಾರರನ್ನು ಉದ್ದೇಶಿಸಿ, ಪಚ್ಚು ಎಂದರೆ ನೀನೆನಾ? ಹೊರಗೆ ಬಾ ಎಂದು ಹೇಳಿ ಹೋರಗೆ ಹೋಗಿ ಲೇಕ್‌ವೂ ಹೊಟೇಲ್‌ ಕಡೆಗೆ ಹೋದಾಗ ಪಿರ್ಯಾದಿದಾರರು ಅವರನ್ನು ಹಿಂಬಾಲಿಸಿ ಹೋದಾಗ ಪಿರ್ಯಾದಿದಾರರ ಪರಿಚಯದ ರತನ್‌ ಮತ್ತು ಇತರ ಇಬ್ಬರು ಸೇರಿ ಪಿರ್ಯಾದಿದಾರರ ತಲೆಗೆ, ಮುಖಕ್ಕೆ, ಬೆನ್ನಿಗೆ ಬೇಸ್‌ ಬ್ಯಾಟ್ ನಿಂದ ಹಲ್ಲೆ ಮಾಡಿದ್ದು, ಓರ್ವ ಆರೋಪಿಯು ಪಿರ್ಯಾದಿದಾರರ ಬಲಕಣ್ಣಿನ ಕೆಳಬಾಗಕ್ಕೆ ಚೂರಿಯಿಂದ ಚುಚ್ಚಿ ಗಾಯಗೊಳಿಸಿದ್ದು, ಅಷ್ಟರಲ್ಲಿ ಅಲ್ಲಿ ಜನರು ಸೇರಿದಾಗ ಆಪಾದಿತರು ಪಿರ್ಯಾದಿದಾರನ್ನು ಉದ್ದೇಶಿಸಿ  ಜೀವ ಬೆದರಿಕೆ ಒಡ್ಡಿರುವುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 02/2023 ಕಲಂ: : 504, 506, 324 ಜೊತೆಗೆ 34 ಐಪಿಸಿ ಮತ್ತು 3(1)(r), 3(2)(va), SC ST POA Act ರಂತೆ ಪ್ರಕರಣ ದಾಖಲಾಗಿರುತ್ತದೆ .
 • ಮಣಿಪಾಲ: ಪಿರ್ಯಾದಿದಾರರಾದ ರತನ್ (28), ತಂದೆ: ರಾಜು ಪೂಜಾರಿ, ವಾಸ: 26-62 ಕಲ್ಮಾಡಿ ಚರ್ಚ ಹತ್ತಿರ್ ಮಲ್ಪೆ ಪೊಸ್ಟ್, ಕೊಡವೂರು ಗ್ರಾಮ ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ದಿನಾಂಕ  31/12/2022 ರಂದು 22:00 ಗಂಟೆಗೆ ಪರಿಚಯದ ಲೋಯ್ಡ್‌  ಬಳಿ ಹಣ ಪಡೆಯಲು ಮಣಿಪಾಲದ ಲೇಕ್ ವ್ಯೂ ಬಳಿ ಬಂದು ಲೋಯ್ಡ್ ನಿಗೆ ಕರೆ ಮಾಡಿದಾಗ ಬೇರೆ ಯಾರೋ ಪೋನ್ ಸ್ವೀಕರಿಸಿ ನಾನು ಪಚ್ಚು ಯಾನೆ ಪ್ರಶಾಂತ್ ಮಾತನಾಡೋದು ಎಂದು ಹೇಳಿ ಹಣವನ್ನು ಪಡೆದುಕೊಳ್ಳಲು ಸಿಗ್ಮಾ ಬಾರ್‌ ಬಳಿ ಇರುವ ರಿಂಗ್ ಜೋನ್ ಗೆ ಬರಲು ತಿಳಿಸಿದ್ದು ಪಿರ್ಯಾದಿದಾರರು ರಿಂಗ್ ಜೋನ್ ಬಳಿ ಹೋದಾಗ ಲೋಯ್ಡ್‌ ಇಲ್ಲದೇ ಇದ್ದು ಅಲ್ಲಿ ಪ್ರಶಾಂತ ಯಾನೆ ಪಚ್ಚು ಇದ್ದು ಆತ  ಪಿರ್ಯಾದಿದಾರರಿಗೆ ಹಣ ಕೊಡಲು ಆಗುವುದಿಲ್ಲ ಏನೂ ಮಾಡಿಕೊಳ್ಳುತ್ತಿಯಾ ಮಾಡಕೋ ಎಂದು ಹೇಳಿ ಚೂರಿಯಿಂದ ಪಿರ್ಯಾದಿದಾರರಿಗೆ ತಿವಿಯಲು ಬಂದಾಗ ಪಿರ್ಯಾದಿದಾರರು ತಪ್ಪಿಸಿಕೊಂಡಾಗ ಎದೆಯ ಎಡ ಬದಿ ಚೂರಿ ತಾಗಿ ಗಾಯವಾಗಿರುತ್ತದೆ, ಪಿರ್ಯಾದಿದಾರು ತಪ್ಪಿಸಿಕೊಂಡು ಒಡಿ ಹೋಗುವಾಗ ಪ್ರಶಾಂತ @ ಪಚ್ಚು ಎಂಬಾತ ಅಟ್ಟಿಸಿಕೊಂಡು ಬಂದು ಪಿರ್ಯಾದಿದಾರರನ್ನು ಉದ್ದೇಶಿಸಿ  ಬೆದರಿಕೆ ಹಾಕಿರುತ್ತಾನೆ. ಆರೋಪಿ ಪ್ರಶಾಂತ @ ಪಚ್ಚು ಪಿರ್ಯಾದಿದಾರರನ್ನು ಅಟ್ಟಿಸಿಕೊಂಡು ಓಡುವಾಗ ಎಡವಿ ಬಿದ್ದು ಆತನ ಕಣ್ನಿಗೂ ಗಾಯವಾಗಿರುವುದಾಗಿ ನೀಡಿ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 01/2023 ಕಲಂ: : 504, 506, 324 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 02-01-2023 09:44 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080