Feedback / Suggestions

 ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 02/01/2023 ರಂದು 11:00 ಗಂಟೆಗೆ  ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ಪಾಜಿಗುಡ್ಡೆ ಎಂಬಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿಯ ಇಳಿಜಾರಿನಲ್ಲಿ KA06B9684 ನೇ ನಂಬ್ರದ ಬಸ್ ಚಾಲಕ ಮಂಜಯ್ಯ ನಾಯ್ಕ್ ಎಂಬಾತನು ತನ್ನ ಬಾಬ್ತು ಬಸ್ ನ್ನು  ಬೆಳ್ತಂಗಡಿ ಕಡೆಯಿಂದ ಕಾರ್ಕಳ ಕಡೆಗೆ ರಸ್ತೆಯ ತೀರಾ ತಿರುವಿನಲ್ಲಿ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಹತೋಟಿ ತಪ್ಪಿ ರಸ್ತೆಗೆ ಎಡಮಗ್ಗುಲಾಗಿ ಬಿದ್ದ ಪರಿಣಾಮ ಬಸ್ಸಿನಲ್ಲಿದ್ದ 20 ಮಕ್ಕಳು ಹಾಗೂ ಶಿಕ್ಷಕರಿಗೆ ರಕ್ತಗಾಯ ಹಾಗೂ ತರಚಿದ ಗಾಯವಾಗಿದ್ದು,ಇನ್ನು  ಕೆಲವು ಮಕ್ಕಳಿಗೆ ಗುದ್ದಿದ್ದ ನೋವಾಗಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 02/2023 ಕಲಂ 279, 337  ಐಪಿಸಿ ಯಂತೆ  ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ ‌‌

  • ಮಲ್ಪೆ: ಪಿರ್ಯಾಧಿ ಯೋಗೇಂದ್ರ ಇವರ ಅಣ್ಣ ಪ್ರವೀಣಕುಮಾರ (41 ವರ್ಷ) ಎಂಬುವವರು ವಿಪರೀತ ಮದ್ಯ ವ್ಯಸನಿಯಾಗಿದ್ದು ಸರಿಯಾಗಿ ಮನೆಗೆ ಹೋಗದೆ ಮಲ್ಪೆಯಲ್ಲಿ ತಿರುಗಾಡಿಕೊಂಡಿದ್ದು ದಿನಾಂಕ 01-01-2023 ರಂದು ಮದ್ಯರಾತ್ರಿ 12:30 ಗಂಟೆ ಸುಮಾರಿಗೆ ಮಲ್ಪೆ ಬಸ್ ಸ್ಟ್ಯಾಂಡ್ ಹತ್ತಿರ ಒಂದು ಅಂಗಡಿ ಬಳಿ ನಿಂತಿರುವಾಗ ಏಕಾಏಕಿ ಆಯತಪ್ಪಿ ಕೆಳಗೆ ಬಿದ್ದ ಪರಿಣಾಮ ಅವರ ತಲೆಗೆ ಅಂಗಡಿಯ ಶಟರ್ ಗೆ ತಾಗಿ ಬಿದ್ದವರನ್ನು ಮಲ್ಪೆಯ ಈಶ್ವರ ಪುತ್ರನ್ ಎಂಬುವವರು ತಮ್ಮ ಅಂಬುಲೆನ್ಸ್ ನಲ್ಲಿ ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಸದ್ರಿ ಯವರು ಚಿಕಿತ್ಸೆ ಫಲಕಾರಿಯಾಗದೆ ಸಂಜೆ 07:50 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯು.ಡಿ.ಆರ್ 01/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾರ್ಕಳ: ಕಾರ್ಕಳ ತಾಲೂಕು ಮಾಳ ಗ್ರಾಮದ ಕಡಾರಿ ಪೂರ್ವಿಕ ನಿವಾಸದಲ್ಲಿ ವಾಸವಾಗಿರುವ ಪಿರ್ಯಾದು ಪೂರ್ಣೆಶ್ ಇವರ ತಂದೆ ಮೃತ ಕೆ ಪೂವಯ್ಯ (66) ಇವರಿಗೆ 5 ವರ್ಷದ ಹಿಂದೆ ಹೃದಯ ಶಸ್ತ್ರ ಚಿಕಿತ್ಸೆ(BYPASS SURGERY ) ಆಗಿದ್ದು ನಾಲ್ಕು ದಿನದಿಂದ ಜ್ವರದಿಂದ ಬಳಲುತ್ತಿದ್ದು ಈ ಬಗ್ಗೆ  ಬಜಗೋಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು  ದಿನಾಂಕ 01/01/2023 ರಂದು ಕೆ ಪೂವಯ್ಯ ಊಟ ಮಾಡಿ ಮಲಗಿದ್ದು ಈ ದಿನ ದಿನಾಂಕ 02/01/2023 ಬೆಳಿಗ್ಗೆ ಸುಮಾರು 04:00 ಗಂಟೆಗೆ ಶ್ವಾಸ ತೆಗೆಯಲು ಕಷ್ಟವಾಗಿರುವುದಾಗಿ ತಿಳಿಸಿದಂತೆ ಕೂಡಲೇ  ಅವರನ್ನು ಉಪಚರಿಸಿ ಚಿಕಿತ್ಸೆಯ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಅಲ್ಲಿನ ವೈದ್ಯರು ಪಿರ್ಯಾದುದಾರರ ತಂದೆ ಕೆ ಪೂವಯ್ಯ ನಾಯ್ಕ್ ರವರು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯು.ಡಿ.ಆರ್ 01/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾರ್ಕಳ: ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಟಿ.ಟಿ ಕ್ರಾಸ್‌ ನ ಕುಂಟಿನಿ ನಿವಾಸದಲ್ಲಿ ವಾಸವಾಗಿರುವ ಪಿರ್ಯಾದಿ ವೆಂಕಟೇಶ್‌ ಇವರ ಭಾವ ವಿರೇಂದ್ರ ಪ್ರಾಯ 44 ವರ್ಷ ಇವರು ವಿಪರೀತ ಮಧ್ಯ ಸೇವನೆ ಮಾಡುತ್ತಿದ್ದು, ಇದರಿಂದ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದರು.  ದಿನಾಂಕ 30/12/2022 ರಂದು ವಿರೇಂದ್ರರವರು ಪಿರ್ಯಾದಿದಾರರ ಮನೆಯಾದ ಕಾರ್ಕಳ ತಾಲೂಕು ಬೆಳ್ಮಣ್‌ ಗ್ರಾಮದ ಜಂತ್ರಕ್ಕೆ ಬಂದಿದ್ದು, ಮಾನಸಿಕವಾಗಿ ನೊಂದು ದಿನಾಂಕ 31/12/2022 ರ ಬೆಳಿಗ್ಗೆ 03:30 ಗಂಟೆಯಿಂದ ದಿನಾಂಕ 02/01/2023 ರ ಬೆಳಿಗ್ಗೆ 08:00 ಗಂಟೆಯ ನಡುವಿನ ಅವಧಿಯಲ್ಲಿ  ಪಿರ್ಯಾದಿದಾರರ ಮನೆಯ ಬಳಿ ಇರುವ ಹಾಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯು.ಡಿ.ಆರ್ 02/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

 

Last Updated: 02-01-2023 06:22 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080