ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಲ್ಪೆ ಪಿರ್ಯಾದಿ ಕೃಷ್ಣ(48) ತಂದೆ: ನರಸಿಂಹ ಮರಕಾಲ ವಾಸ: ಗುರಿಕಾರರ ,ಮನೆ ಕೋಟತಟ್ಟು ಪಡುಕೆರೆ ಉಡುಪಿ ಇವರ ಅಳಿಯನಾದ ಮಹೇಶ (36)ಮಲ್ಪೆಯಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು , ದಿನಾಂಕ 31/12/2021 ರಂದು ರಾತ್ರಿ ಮಲ್ಪೆ ಬಂದರಿನ ಗೇಟಿನ ಬಳಿ ನಡೆದುಕೊಂಡು ಹೋಗುತ್ತಿರುವಾಗ ಯಾವುದೋ ವಾಹನ ಢಿಕ್ಕಿ ಹೊಡೆದು ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟಿರುವುದಾಗಿ ಪಿರ್ಯಾಧಿ ನೀಡಿದಂತೆ ಮಲ್ಪೆ ಠಾಣೆಯಲ್ಲಿ 174 ಸಿಆರ್ ಪಿಸಿ ಪ್ರಕರಣ ದಾಖಲಾಗಿರುತ್ತದೆ. ನಂತರ ಕೃಷ್ಣ ರವರು ದಿನಾಂಕ 01/01/2022 ರಂದು ಸಂಜೆಯ ವೇಳೆಗೆ ಮಲ್ಪೆ ಬಂದರಿ ಗೇಟಿನ ಬಳಿ ಕೆಲಸಗಾರರಾದ ಶಾಹೀದ್ ರವರಲ್ಲಿ ವಿಚಾರಿಸಲಾಗಿ ದಿನಾಂಕ 31/12/2021 ರಂದು ರಾತ್ರಿ 7:00 ಗಂಟೆ ಸುಮಾರಿಗೆ ಮಲ್ಪೆ ಬಸ್ ನಿಲ್ದಾಣದ ಕಡೆಯಿಂದ KA -09-A-5611 ನೇ ನಂಬ್ರದ ಗೂಡ್ಸ್ ಟೇಂಪೋಚಾಲಕನು ಮಲ್ಪೆ ಬಂದರಿಗೆ ಹೋಗುವ ಎಡಬದಿಯ ಗೇಟಿನ ರಸ್ತೆಯಲ್ಲಿ ತನ್ನ ವಾಹನವನ್ನು ಅತೀವೇಗ, ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ತೀರ ಎಡಬದಿಗೆ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಓರ್ವ ಗಂಡಸಿಗೆ ಢಿಕ್ಕಿದ ಪರಿಣಾಮ ಆತ ಅಲ್ಲೆ ಕುಸಿದು ಬಿದ್ದು ನಂತರ ಸ್ವಲ್ಪ ಸಮಯದ ನಂತರ ಆ ವ್ಯಕ್ತಿ ಬಂದರಿನ ಗೇಟಿನ ಹೊರಗಡೆ ಬಂದು ರಸ್ತೆ ಬದಿಯಲ್ಲಿ ತೀವ್ರ ಅಸ್ವಸ್ಥಗೊಂಡು ಬಿದ್ದಿದ್ದು ,ಆತನನ್ನು ಚಿಕಿತ್ಸೆಯ ಬಗ್ಗೆ ಈಶ್ವರ ಮಲ್ಪೆ ರವರು ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿಸಿರುತ್ತಾನೆ .. ಈ ಅಫಘಾತಕ್ಕೆ KA -09-A-5611 ನೇ ನಂಬ್ರದ ಗೂಡ್ಸ್ ಟೇಂಪೋ ಚಾಲಕ ನು ಅತೀ ವೇಗ, ಅಜಾಗರೂಕತೆ ಮತ್ತು ನಿರ್ಲಕ್ಷ್ಯತನ ದಿಂದ ವಾಹನವನ್ನು ಚಲಾಯಿಸಿಕೊಂಡು ಮಹೇಶನಿಗೆ ಢಿಕ್ಕಿ ಹೊಡೆದ ಪರಿಣಾಮ ಮಹೇಶನು ಮಾರಾಣಾಂತಿಕವಾಗಿ ಒಳ ಜಖಂಗೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 01/2022 ಕಲಂ: 279, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ವಿದ್ಯಾ (22) ತಂದೆ: ರಮೇಶ್ ಜಿ ಕರ್ಕೇರ ವಾಸ: 1-90 ಪಡು ಮೂಳೂರು ಗ್ರಾಮ ಉಚ್ಚಿಲ ಪೋಸ್ಟ್ ಇವರಿಗೆ ದಿನಾಂಕ 0/01/2022 ರಂದು ಸಮಯ ಸಂಜೆ 06:30 ಗಂಟೆಗೆ ತಾಯಿ ಫೋನ್ ಮಾಡಿ ನಿನ್ನ ತಂದೆ ರಮೇಶ್ ಜಿ ಕರ್ಕೇರ (72) ರವರು ಮೂಳೂರು ಪೇಟೆಗೆ ಹೋಗಿ ವಾಪಾಸ್ಸು ಮನೆಗೆ ಬರಲು ಸಾಗರ ಎಕ್ಸಿಕ್ಯುಟಿವ್ ಎಂಬಲ್ಲಿ ಉಡುಪಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ 66 ದಾಟಲು ಡಿವೈಡರ್ ನಲ್ಲಿ ನಿಂತುಕೊಂಡಿರುವಾಗ ಸಂಜೆ 6:20 ಗಂಟೆಗೆ ಮಂಗಳೂರು ಕಡೆಯಿಂದ ಬಸ್ಸಿನ ಚಾಲಕ ತನ್ನ ಬಸ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ತೀರ ಬಲ ಬದಿಗೆ ಚಲಾಯಿಸಿಕೊಂಡು ಬಂದು ರಸ್ತೆ ದಾಟಲು ನಿಂತಿದ್ದ ನಿನ್ನ ತಂದೆಗೆ ಬಸ್ಸು ಡಿಕ್ಕಿ ಹೊಡೆದಿರುವುದಾಗಿ ಮಾಹಿತಿ ನೀಡಿದಾಗ ವಿದ್ಯಾ ರವರು ಕೂಡಲೇ ಸ್ಥಳಕ್ಕೆ ಬಂದು ನೋಡಲಾಗಿ ಇವರ ತಂದೆಗೆ ಸ್ಥಳೀಯರು ಆಂಬುಲೆನ್ಸ್ ನಲ್ಲಿ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿರುವ ವಿಚಾರ ತಿಳಿಯಿತು. ವಿದ್ಯಾ ರವರು ಆಸ್ಪತ್ರೆಗೆ ಕರೆದುಕೊಂಡು ಹೋದವರ ಹತ್ತಿರ ಕೇಳಲಾಗಿ ನಿನ್ನ ತಂದೆಯ ತಲೆಗೆ ತೀವ್ರವಾದ ಗಾಯವಾಗಿ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿರುವುದಾಗಿ ಹೇಳಿರುತ್ತಾರೆ. ಪಿರ್ಯಾದಿದಾರರ ತಂದೆಗೆ ಡಿಕ್ಕಿ ಹೊಡೆದ ಬಸ್ ನಂಬ್ರ ನೋಡಲಾಗಿ KA-70-1437 ಅಗಿದ್ದು ಬಸ್ ಚಾಲಕನ ಹೆಸರು ಪ್ರದೀಪ್ ಪೂಜಾರಿ ಎಂಬುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 01/2022 ಕಲಂ: 279, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಪ್ರಮೀಳಾ(29) ಗಂಡ: ರಾಜೇಶ ಆಚಾರ್ಯ ವಾಸ; ಮನೆ ನಂಬ್ರ 4-112/A 2 ಪಣಿಯೂರು ಸೆಂಟರ್ ಎಲ್ಲೂರು ಗ್ರಾಮ, ಪಣಿಯೂರು ಅಂಚೆ, ಕಾಪು ತಾಲೂಕು ಉಡುಪಿ ಇವರ ಗಂಡ ರಾಜೇಶ ಆಚಾರ್ಯ ಎಂಬುವವರು ದಿನಾಂಕ 01/01/2022 ರಂದು ತನ್ನ KA-20 EH-9580 ನೇ ಮೋಟಾರ್ ಸೈಕಲನ್ನು ಐಡಿಯಲ್ ಜಂಕ್ಷನ್ ಕಡೆಯಿಂದ ಚಿತ್ರರಂಜನ್ ಜಂಕ್ಷನ್ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 09:00 ಗಂಟೆಗೆ ಮಿತ್ರ ಜಂಕ್ಷನ್ ತಲುಪುವಾಗ KA-53 MA-1249ನೇ ಕಾರಿನ ಚಾಲಕ ಗಣೇಶ್ ಎಂಬುವವರು ತನ್ನ ಕಾರನ್ನು ಚಿತ್ರರಂಜನ್ ಸರ್ಕಲ್ ಕಡೆಯಿಂದ ಮಿತ್ರ ಜಂಕ್ಷನ್ ಕಡೆಗೆ ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಾಜೇಶ ಆಚಾರ್ಯ ರವರ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ, ರಾಜೇಶ ಆಚಾರ್ಯ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ರಾಜೇಶ ಆಚಾರ್ಯ ರವರ ಬಲ ಕಾಲಿನ ಮೂಳೆ ಮುರಿತ ಉಂಟಾಗಿದ್ದು ಕೆಎಂಸಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 02/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಅಜೆಕಾರು: ಪಿರ್ಯಾದಿದಾರರಾದ ಅಬಿಷೇಕ್ (21) ತಂದೆ: ಭೂತಮಾರ್ ಮನೆ, ಕಾಡುಹೊಳೆ ಮರ್ಣೆ ಗ್ರಾಮ ಕಾರ್ಕಳ ತಾಲೂಕು ಉಡುಪಿ ಇವರ ತಂಗಿಯಾದ ಅಭಿಜ್ಞಾಳು ಉಡುಪಿಯ ಉಡುಪಿಯ ತ್ರಿಷಾ ಕಾಲೇಜಿನಲ್ಲಿ ಸಿ.ಎ ವಿಧ್ಯಾಭ್ಯಾಸವನ್ನು ಮಾಡಿಕೊಂಡಿದ್ದು, ಬೆಳಿಗ್ಗೆ 7:15 ಗಂಟೆಗೆ ಬಸ್ಸಿನಲ್ಲಿ ಕಾಲೇಜಿಗೆ ಹೋಗಿ ವಾಪಾಸ್ಸು 3:10 ಗಂಟೆಗೆ ಮನೆಗೆ ಬರುವುದಾಗಿದೆ. ದಿನಾಂಕ 01/01/2022 ರಂದು ಎಂದಿನಂತೆ ತಂಗಿ ಅಭಿಜ್ಞಾಳು ಬೆಳಿಗ್ಗೆ ಕಾಲೇಜಿಗೆ ಹೋಗಿದ್ದು, ಮಧ್ಯಾಹ್ನ 3:10 ಗಂಟೆಯ ಸುಮಾರಿಗೆ ಅಜೆಕಾರು ಕಡೆಯಿಂದ ಲಕ್ಷ್ಮೀಶ ಬಸ್ಸು ಬಂದು ಕಾಡುಹೊಳೆ ಜಂಕ್ಷನ್ ನಲ್ಲಿ ನಿಂತಿದ್ದು, ಬಸ್ಸಿನ ಮುಂದಿನ ಬಾಗಿಲಿನಿಂದ ಅಭಿಜ್ಞಾ ಳು ಇಳಿಯುತ್ತಿದ್ದಾಗ ಬಸ್ಸಿನ ಚಾಲಕನು ಒಮ್ಮೇಲೆ ಬಸ್ಸನ್ನು ಅಜಾಗರೂಕತೆಯಿಂದ ಮುಂದಕ್ಕೆ ಚಲಾಯಿಸಿದಾಗ ಅಭಿಜ್ಞಾಳು ಬಸ್ಸಿನ ಬಾಗಿಲಿನಿಂದ ಒಮ್ಮೇಲೆ ಕೆಳಗೆ ಬಿದ್ದಿರುತ್ತಾಳೆ. ಬಸ್ಸಿನಿಂದ ಕೆಳಗೆ ಬಿದ್ದ ಪರಿಣಾಮ ಅಭಿಜ್ಞಾಳಿಗೆ ಎಡಗೈ ನ ಭುಜ ತೀವ್ರವಾಗಿ ಜಖಂ ಆಗಿದ್ದು, ಬಲಕಾಲಿನ ಪಾದದ ಬಳಿ ಒಳ ಜಖಂ ಆಗಿ ಊದಿಕೊಂಡಿರುತ್ತದೆ. ಬಸ್ಸಿನ ಡ್ರೈವರ್, ಕಂಡಕ್ಟರ್ ಬಸ್ಸಿನಿಂದ ಇಳಿದು ಅಲ್ಲಿ ಸೇರಿದ್ದ ಸಾರ್ವಜನಿಕರ ಸಹಾಯದಿಂದ ಅವಳನ್ನು ಕೂಡಲೇ ಒಂದು ಖಾಸಗಿ ಕಾರಿನಲ್ಲಿ ಹಾಕಿದ್ದು, ಫಿರ್ಯಾದುದಾರರು ಅವಳನ್ನು ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುತ್ತಾರೆ.ಈ ಅಪಘಾತಕ್ಕೆ KA-20 AA-8533 ನೇ ನಂಬ್ರದ ಬಸ್ಸಿನ ಚಾಲಕ ಶ್ರೀಕಾಂತ್ ರವರ ಅತೀ ವೇಗ ಮತ್ತು ಅಜಾರೂಕತೆಯ ಚಾಲನೆಯೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 01/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಶ್ರೀಮತಿ ಸುಮತಿ (56) ಗಂಡ: ವಿಠಲ ಜತ್ತನ್ ವಾಸ: ಮಹಿಳಾ ರಕ್ಷಕಿ ಸರಕಾರಿ ಬಾಲಕಿಯರ ಬಾಲಮಂದಿರ ನಿಟ್ಟೂರು ಅಂಚೆ, ಪುತ್ತೂರು ಗ್ರಾಮ ಉಡುಪಿ ತಾಲೂಕು ಇವರು ದಿನಾಂಕ 01/01/2022 ರಂದು ಉಡುಪಿ ಹನುಮಂತ ನಗರ ಹಿ.ಪ್ರಾ ಶಾಲೆ ಹಾಗೂ ಪೌಢಶಾಲೆಯಿಂದ ಶಾಲೆ ಬಿಟ್ಟ ನಂತರ ತಮ್ಮ ಸಂಸ್ಥೆಯ ಮಕ್ಕಳನ್ನು ವಾಪಾಸು ಸರಕಾರಿ ಬಾಲಮಂದಿರ ನಿಟ್ಟೂರು ಗೆ ಕರೆದುಕೊಂಡು ಬರುತ್ತಿರುವಾಗ ಸಮಯ ಸುಮಾರು ಮಧ್ಯಾಹ್ನ 1:00 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 66ರ ನಿಟ್ಟೂರು ಜಂಕ್ಷನ್ ಬಳಿ ರಸ್ತೆ ದಾಟಲು ನಿಂತಿರುವಾಗ ಉಡುಪಿ ಕರಾವಳಿ ಜಂಕ್ಷನ್ ಕಡೆಯಿಂದ ಸಂತೆಕಟ್ಟೆ ಕಡೆಗೆ KA-05 EQ-6730ನೇ ಮೋಟಾರು ಸೈಕಲ್ ಸವಾರ ಶ್ರೀಕಾಂತ್ ಎಂಬಾತನು ತನ್ನ ಮೋಟಾರು ಸೈಕಲ್ ನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ದಾಟಲು ನಿಂತಿರುವ ಸೌಭಾಗ್ಯಳಿಗೆ (09) ಡಿಕ್ಕಿ ಹೊಡೆದ ಪರಿಣಾಮ ಸೌಭಾಗ್ಯಳು ರಸ್ತೆಗೆ ಬಿದ್ದು, ಚಿಕಿತ್ಸೆಯ ಬಗ್ಗೆ ಜಿಲ್ಲಾ ಮಕ್ಕಳಾ ರಕ್ಷಣಾ ಘಟಕದ ರಕ್ಷಣಾಧಿಕಾರಿ ಮಹೇಶ್ ದೇವಾಡಿಗರವರು ಹೈಟೆಕ್ ಆಸ್ಪತ್ರೆಗೆ ದಾಖಲಿಸಿದ್ದು ತಲೆಗೆ ಸಾದಾ ಗಾಯವಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 03/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 02-01-2022 09:04 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080