ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ; ದಿನಾಂಕ 01/01/2022 ರಂದು ಪಿರ್ಯಾದಿದಾರರಾದ ಪ್ರಭಾಕರ ಕಾಮತ್‌‌‌(60), ತಂದೆ: ದಿ. ವೈ.ದೇವದಾಸ್‌‌ಕಾಮತ್‌‌, ವಾಸ: ವಿಜಯ ದೇವ ನಿಲಯ, ಯಡ್ತಾಡಿ,ಯಡ್ತಾಡಿ ಗ್ರಾಮ, ಬ್ರಹ್ಮಾವರ ಇವರು ತನ್ನ ಆಟೋ ರಿಕ್ಷಾ KA-20-D-1745 ನೇದರಲ್ಲಿ ತನ್ನ ಹೆಂಡತಿ ಗೀತಾ ಕಾಮತ್‌‌‌ಳೊಂದಿಗೆ ಮನೆಯಿಂದ ಬ್ರಹ್ಮಾವರಕ್ಕೆ ಬಂದು ಸಾಮಾನುಗಳನ್ನು ಖರೀದಿಸಿ ವಾಪಾಸು ಮನೆ ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರ ಉಡುಪಿ-ಕುಂದಾಪುರ ಏಕಮುಖ ರಸ್ತೆಯಲ್ಲಿ ಹೋಗುತ್ತಾ ವಾರಂಬಳ್ಳಿ ಗ್ರಾಮದ ಆಕಾಶವಾಣಿ ಸಮೀಪ ವಿನಾಯಕ ಟೋಟಲ್‌‌ಗ್ಯಾಸ್‌‌‌‌ನ ಎದುರು ತಲುಪುವಾಗ ಸಮಯ ಸುಮಾರು ಸಂಜೆ 5:30 ಗಂಟೆ ಸುಮಾರಿಗೆ ಹಿಂದಿನಿಂದ ಅಂದರೆ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ KA-20-N-0632 ನೇ ಮಾರುತಿ 800 ಕಾರಿನ ಚಾಲಕ ಜೆಕೋಬ್‌ ‌ಲೂವೀಸ್‌ ‌ಎಂಬವರು ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿದಾರರ ಆಟೋ ರಿಕ್ಷಾದ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಅವರ ಹೆಂಡತಿ ರಿಕ್ಷಾ ಸಮೇತ ಡಿವೈಡರ್‌‌ನಿಂದ ಕ್ರಾಸ್‌ ಆಗಿ ಕುಂದಾಪುರ-ಉಡುಪಿ ಏಕಮುಖ ರಸ್ತೆಗೆ ಹೋಗಿ ಬಿದ್ದಿದ್ದು, ಪ್ರಭಾಕರ ಕಾಮತ್‌ ಇವರಿಗೆ ಎಡ ಕೈ, ಬಲಕಾಲಿಗೆ, ರಕ್ತಗಾಯ, ಬಲ ಪಕ್ಕೆಲುಬು ಹಾಗೂ ಭುಜಕ್ಕೆ ಒಳ ಜಖಂ ಉಂಟಾಗಿರುತ್ತದೆ. ಗೀತಾ ಕಾಮತ್‌‌ಳಿಗೆ ತಲೆಯ ಹಿಂಭಾಗಕ್ಕೆ ರಕ್ತಗಾಯ, ಬಲ ಕೈಗೆ ಮೂಳೆ ಮುರಿತದ ಗಾಯ, ಎಡಕೈಗೂ ಕೂಡಾ ರಕ್ತಗಾಯವಾಗಿರುತ್ತದೆ. ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್‌‌ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಅಪಘಾತದಿಂದ ಆರೋಪಿ ಕಾರಿನ ಮುಂಭಾಗ ಹಾಗೂ ಪಿರ್ಯಾದಿದಾರರ ರಿಕ್ಷಾದ ಹಿಂಭಾಗ ಜಖಂ ಗೊಂಡಿರುವುದಾಗಿದೆ. ಆರೋಪಿ ಕಾರಿನ ಚಾಲಕನು ವೈದ್ಯಕೀಯ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದು, ಈ ದಿನ ವೈದ್ಯಕೀಯ ವೆಚ್ಚ ಜಾಸ್ತಿಯಾಗಿರುವುದರಿಂದ ನೀಡಲು ನಿರಾಕ ರಿಸಿದ ಕಾರಣ  ಠಾಣೆಗೆ ಬುಂದು ದೂರು ನೀಡುವಾಗ ವಿಳಂಬವಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ ೦1/2022 ಕಲಂ; 279, 337, 338 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ; ದಿನಾಂಕ 02/01/2022 ರಂದು ಬೆಳಿಗ್ಗೆ ಸುಮಾರು 11:20 ಗಂಟೆಗೆ ಕುಂದಾಪುರ ತಾಲೂಕಿನ ಬಸ್ರೂರು ಗ್ರಾಮದ ಮಾರ್ಗೊಳಿ ನಾಗೇಶ ಶೇರಿಗಾರ ರವರ ಮನೆಯ ಎದುರು ರಾಜ್ಯ ಹೆದ್ದಾರಿ 52  ರಸ್ತೆಯಲ್ಲಿ, ಆಪಾದಿತ ಮಹೇಶ್ ಎಂಬವರು KA-15 EE-0308 ನೇ ಸ್ಕೂಟರನ್ನು ಸಿದ್ದಾಪುರ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು, ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ  ಪಿರ್ಯಾದಿದಾರರಾದ  ಬೋಜು ಪೂಜಾರಿ (58) ತಂದೆ :  ದಿ.ಗಿರಿಯ ಪೂಜಾರಿ ವಾಸ:  ಗುಡ್ಡಿಮನೆ, ಹೊಸಾಳು  ಗ್ರಾಮ ಬ್ರಹ್ಮಾವರ   ಯವರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು ಸ್ಕೂಟರ ಸವಾರ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರವರಿಗೆ ಎಡಕೈ ಮೊಣಗಂಟಿಗೆ ಮೂಳೆ ಮುರಿತ ಹಾಗೂ ಬಲ ಕೈ ಮೊಣಗಂಟಿಗೆ ತರಚಿದ ಗಾಯವಾಗಿದ್ದು  ಹಾಗೂ  ಸ್ಕೂಟರ ಸವಾರ ಮಹೇಶ ರವರಿಗೆ ಎದೆಯ ಭಾಗಕ್ಕೆ ಒಳನೋವು ಉಂಟಾಗಿದ್ದು  ಚಿನ್ಮಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ ೦1/2022 ಕಲಂ; 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೊಲ್ಲೂರು; ಪಿರ್ಯಾದಿದಾರರಾದ ಪ್ರತ್ಯಕ್ಷ ಶೆಟ್ಟಿ (19) ತಂದೆ: ಕುಶಲ ಶೆಟ್ಟಿ ವಾಸ: ಚಿತ್ತೂರು ಸೂರು ಕುಂದ ಚಿತ್ತೂರು ಗ್ರಾಮ ಕುಂದಾಪುರ ಇವರು ದಿನಾಂಕ 01/01/2022 ರಂದು ತನ್ನ ಚಿಕ್ಕಪ್ಪನಾದ ಭಾಸ್ಕರ ಶೆಟ್ಟಿಯವರ KA-20-EP-4571 ನೇ ಮೋಟಾರ್ ಸೈಕಲ್ ನಲ್ಲಿ  ಹಿಂಬದಿ ಸಹ ಸವಾರರಾಗಿ ತನ್ನ ಚಿಕ್ಕಮ್ಮ ಜ್ಯೊತಿ ಶೆಟ್ಟಿ ಮತ್ತು ಅವರ ಮಗು ಶಯನ್ ಶೆಟ್ಟಿ 6 ವರ್ಷ ಅವರನ್ನು ಕುಳ್ಳಿರಿಕೊಂಡು ವಂಡ್ಸೆ ಹರ್ಷ ವೈದ್ಯರಲ್ಲಿ  ಹೋಗಿ ವಾಪಾಸ್ ವಂಡ್ಸೆಯಿಂದ  ಮಾರಣಕಟ್ಟೆ  ಕಡೆಗೆ  ಚಲಾಯಿಸಿಕೊಂಡು ಬರುತ್ತಿರುವಾಗ ಸಂಜೆ  ಸಮಯ 07:00 ಗಂಟೆಗೆ ವಂಡ್ಸೆ ಕೊರಾಡಿ ಮನೆ ನೂಜಾಡಿ ಕ್ರಾಸ್ ಬಳಿ ತಲುಪಿದಾಗ ಎದುರಿನಿಂದ ಅಂದರೆ ಮಾರಣಕಟ್ಟೆಯಿಂದ ವಂಡ್ಸೆ ಕಡೆಗೆ KA-20 P-5160 ನೇ JCB ವಾಹನದ ಚಾಲಕನ್ನು ತನ್ನ ವಾಹನವನ್ನು  ರಸ್ತೆಯ ತೀರ ಬಲಭಾಗಕ್ಕೆಚಲಾಯಿಸಿಕೊಂಡು ಬಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ  ಮೋಟಾರ್ ಸೈಕಲ್  ಸಮೇತ ರಸ್ತೆಗೆ ಬಿದ್ದ ಪರಿಣಾಮ ಪ್ರತ್ಯಕ್ಷ ಶೆಟ್ಟಿ ರವರಿಗೆ ಮೂಗಿಗೆ ಗುದ್ದಿದ ಒಳ ಜಖಂ ಹಾಗೂ ಮುಖ, ಎಡ & ಬಲ ಕಾಲುಗಳಿಗೆ ತರಚಿದ ರಕ್ತವಾಗಿದ್ದು. ಹಿಂಬದಿ ಸಹ ಸವಾರರಾದ ಜ್ಯೋತಿಯವರಿಗೆ ಬಲಕಾಲಿನ ಮೊಣಗಂಟಿನ ಕೆಳಗೆ ಮೂಳೆ ಮುರಿತ ಹಾಗೂ ಎಡ ಭುಜಕ್ಕೆ ಗುದ್ದಿನ ಒಳ ಜಖಂವಾಗಿರುತ್ತದೆ. ಶಯನ್ ಶೆಟ್ಟಿ (6) ರವರಿಗೆ ಬಲಕಾಲಿನ ಮೊಣಗಂಟಿನ ಮೂಳೆ ಮುರಿತ ಹಾಗೂ ಬಲ ಅಂಗೈ ಗೆ ರಕ್ತಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಬಗ್ಗೆ ಮಣಿಪಾಲ ಕೆ. ಎಮ್ ಸಿ  ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ ೦1/2022 ಕಲಂ; 279, 337, 338 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

  • ಉಡುಪಿ; ಪಿರ್ಯಾದಿದಾರರಾದ ಪ್ರೇಮಾ(49) ಗಂಡ: ಪ್ರಭಾಕರ ಎನ್‌ವಾಸ: ಅಂಬಲಪಾಡಿಗ್ರಾಮದ ಆನಂದರಾವ್‌ರಸ್ತೆ, ವಿಶ್ವಾಸ್‌ ಕಂಪೌಂಡ್‌ ಉಡುಪಿ ಇವರ ಗಂಡ ಪ್ರಭಾಕರ ಎನ್‌ (61) ಎಂಬವರಿಗೆ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದು ತುಂಬಾ ನಿಶ್ಶಕ್ತರಾಗಿರುತ್ತಾರೆ. ದಿನಾಂಕ 31/12/2021 ರಂದು ಸಂಜೆ 17:00 ಗಂಟೆಗೆ ಉಡುಪಿ ತಾಲೂಕು ಅಂಬಲಪಾಡಿ ಗ್ರಾಮದ ಆನಂದರಾವ್‌ ರಸ್ತೆ, ವಿಶ್ವಾಸ್‌ ಕಂಪೌಂಡ್‌ ಎಂಬ ಬಾಡಿಗೆ ಮನೆಯಿಂದ ಯಾರಿಗೂ ತಿಳಿಸದೇ ಮನೆ ಬಿಟ್ಟು ಹೋಗಿದ್ದು,ಹೋಗುವಾಗ ಅವರ ಬಳಿ ಚಿನ್ನದ ಸರ, ಎಟಿಎಂ ಕಾರ್ಡ್‌ಹಾಗೂ ನಗದನ್ನು ಹಿಡಿದುಕೊಂಡು ಹೋಗಿರುತ್ತಾರೆ. ಆದರೆ ಈವರೆಗೂ ವಾಪಾಸು ಮನೆಗೂಬಾರದೇ ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿರುತ್ತಾರೆ. ಕಾಣೆಯಾದ ಪ್ರಭಾಕರ ಎನ್‌ರವರನ್ನು ಸಂಬಂಧಿಕರ ಮನೆಗಳಲ್ಲಿ ಹಾಗೂ ಎಲ್ಲಾ ಕಡೆಗಳಲ್ಲಿ ಹುಡುಕಾಡಿ ಸಿಗದೇ ಇದ್ದುದರಿಂದ ದೂರನ್ನು ನೀಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 02/2022 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ; ಪಿರ್ಯಾದುದಾರರಾದ ವಾಸಪ್ಪನಾಯ್ಕ್‌, PSI ,ಉಡುಪಿ ನಗರ ಪೊಲೀಸ್‌ ಠಾಣೆ ಇವರು ದಿನಾಂಕ 02/01/2022 ರಂದು ಉಡುಪಿ ನಗರ ಠಾಣಾ ಪಿ.ಐ. ರವರ ಸೂಚನೆಯ ಮೇರೆಗೆ ರಾತ್ರಿ ರೌಂಡ್ಸ್‌ ಅಧಿಕಾರಿಯವರಾದ ಠಾಣಾ ಪ್ರೊಬೇಷನರಿ ಪಿಎಸ್ಐ, ಮತ್ತು ಗಸ್ತು ಸಿಬ್ಬಂದಿಯವರೊಂದಿಗೆ ಉಡುಪಿ ತಾಲೂಕು ಬಡಗುಬೆಟ್ಟು ಗ್ರಾಮದ ಪಣಿಯಾಡಿ ಎಂಬಲ್ಲಿಗೆ ಹೋಗಿ ಪರಿಶೀಲಿಸಲಾಗಿ ಶಿವರಾಮ್‌ ಶೆಟ್ಟಿಗಾರ್‌ ಎಂಬವರ ಮನೆಯಲ್ಲಿ ಅವರ ಮಗ ಧೀರಜ್‌ ರವರ ಮದುವೆ ರಿಸೆಪ್ಷನ್‌ ಕಾರ್ಯಕ್ರಮದ ಅಂಗವಾಗಿ ಯಾವುದೇ ಪರವಾನಿಗೆ ಅಥವಾ ಪೂರ್ವಾನುಮತಿ ಇಲ್ಲದೆ, ಪ್ರಸ್ತುತ ಕೊರೊನ ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗಟ್ಟುವ ಸಲುವಾಗಿ ರಾಜ್ಯ ಸರ್ಕಾರವು ಹೊರಡಿಸಿರುವ ರಾತ್ರಿ ಕರ್ಫ್ಯೂ ಆದೇಶ ಮತ್ತು ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಇರುವ ನಿಯಮಗಳನ್ನು ಹಾಗೂ ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ, ಅತೀಕರ್ಕಶವಾಗಿ ಡಿಜೆಸೌಂಡ್‌ ಹಾಕಿಕೊಂಡು, ದಿನಾಂಕ 02/01/2022 ರಂದು 00:15 ಗಂಟೆಯ ತನಕ ನೃತ್ಯ ಮಾಡಿಕೊಂಡಿದ್ದು, ಸದ್ರಿ ಸ್ಥಳದಲ್ಲಿದ್ದ ಎರಡು ಡಿಜೆ ಸೌಂಡ್‌ ಬಾಕ್ಸ್‌ಗಳನ್ನು ವಶಕ್ಕೆ ಪಡೆದು ಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 01/2022 ಕಲಂ: 269 IPC  &  109  KP Actಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 02-01-2022 06:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080