ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 30/11/2022 ರಂದು ಪಿರ್ಯಾದಿದಾರರಾದ ಬಾಬು ದೇವಾಸಾಯಂ (39), ತಂದೆ: ದೇವಸಾಯ, ವಾಸ: ಬ್ಯಾಂಕರ್ಸ್‌ ಕಾಲೋನಿ, ಧರ್ಮಾವರಂ ಆಡಿಟೋರಿಯಮ್‌ ಎದುರು ಹಂದಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಇವರು  ವಾಕಿಂಗ್‌ ಮಾಡುತ್ತಾ ರಾತ್ರಿ 8:57 ಗಂಟೆಯ ಸಮಯಕ್ಕೆ ವಾರಂಬಳ್ಳಿ ಗ್ರಾಮದ ಬ್ರಹ್ಮಾವರ ಭರಣಿ ಪೆಟ್ರೋಲ್‌ ಬಂಕ್‌ ಎದುರು ತಲುಪುವಾಗ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ  ಆರೋಪಿ ಮಹಮ್ಮದ್‌ ರಫೀಕ್‌  KA-20-D-2979 ನೇ ಭಾರತಿ ಬಸ್ಸ್‌ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಭರಣಿ ಪೆಟ್ರೋಲ್‌ ಬಂಕ್‌ ಎದುರು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ರಸ್ತೆ ದಾಟಲು ನಿಂತಿದ್ದ ಇಂದುಶೇಖರ್‌  ರವರಿಗೆ ಡಿಕ್ಕಿ ಹೊಡೆದಿದ್ದು, ಈ ಅಪಘಾತದ ಪರಿಣಾಮ ಇಂದುಶೇಖರ್‌  ರಸ್ತೆಗೆ ಬಿದ್ದು ಬಸ್ಸಿನ ಟಯರ್‌ಗೆ ಸಿಕ್ಕಿ, ಬಸ್ಸು ಸ್ವಲ್ಪ ದೂರ ಎಳೆದು ಕೊಂಡು  ಹೋಗಿ ಅವರ  ದೇಹವು  ಚೆಲ್ಲಾಪಿಲ್ಲಿಯಾಗಿದ್ದು, ಬಲಕಾಲಿನ ಸೊಂಟದ ಕೆಳಗೆ ತುಂಡಾಗಿ ದೇಹದಿಂದ ಸ್ವಲ್ಪ ದೂರದಲ್ಲಿ ಬಿದ್ದಿದ್ದು, ಇಂದುಶೇಖರ್‌  ರವರು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾರೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 204/2022 ಕಲಂ : 279, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 29/11/2022 ರಂದು ಪಿರ್ಯಾದಿದಾರರಾದ ಅನೀಶ್‌ ಮ್ಯಾಥ್ಯೂ (42), ತಂದೆ: ಮ್ಯಾಥ್ಯು ಜೊಸೇಫ್‌, ವಾಸ: ಮನೆ ನಂ 4-68, ಮಲ್ಲಿಕೆರೆ, ಕೆಂಜೂರು ಅಂಚೆ & ಗ್ರಾಮ, ಬ್ರಹ್ಮಾವರ ತಾಲೂಕು ಇವರುರು ಮಗಳನ್ನು ಶಾಲಾ ಬಸ್ಸಿನಿಂದ ಮನೆಗೆ ಕರೆದುಕೊಂಡು ಬರುವ ಬಗ್ಗೆ ತನ್ನ KA-20-EL-3623 ನೇ  TVS Wego ದ್ವಿಚಕ್ರ ವಾಹನದಲ್ಲಿ  ಮಗಳು ಅಲ್ವಿಟಾ ಥೆರಸಾ (4) ಹಾಗೂ ಅವರ ಹೆಂಡತಿ ಡೊನ್ಸಿ ರವರನ್ನು ಸಹಸವಾರಿಣಿಯರನ್ನಾಗಿ ಕುಳ್ಳಿರಿಸಿಕೊಂಡು  ಕೆಳ ಕರ್ಜೆ ಯಿಂದ ಮನೆಗೆ  ಹೋಗಲು  ಬ್ರಹ್ಮಾವರ ಹೆಬ್ರಿ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ  ಸಂಜೆ ಸುಮಾರು 4:30 ಗಂಟೆಗೆ ಹೊಸೂರು ಗ್ರಾಮದ ಕೆಳಕರ್ಜೆ  ಯಲ್ಲಿರುವ ಶಂಕರ ರವರ ಮನೆಯ ಎದುರು ತಲುಪುವಾಗ  ಹೆಬ್ರಿ ಕಡೆಯಿಂದ ಬ್ರಹ್ಮಾವರ  ಕಡೆಗೆ ಆರೋಪಿ KA-15-Q-2562 ನೇ ಮೋಟಾರ ಸೈಕಲ್‌ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಆತನ  ಎದುರಿನಲ್ಲಿ ಹೋಗುತ್ತಿದ್ದ ಒಂದು ಟೆಂಪೋವನ್ನು  ಓವರ್‌ ಟೇಕ್‌ ಮಾಡಿಕೊಂಡು ರಸ್ತೆಯ ಬಲ ಬದಿಗೆ ಬಂದು, ಪಿರ್ಯಾದಿದಾರರ  ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಆರೋಪಿಯು  ವಾಹನ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಮಗಳಾದ ಅಲ್ವಿಟಾ ಥೆರಸಾಳ ಹಣೆ ಹಾಗೂ ಮೂಗಿನ ಬಳಿ ರಕ್ತಗಾಯ, ಬಲ ಭುಜದ ಬಳಿ ಒಳ ಜಖಂ ಹಾಗೂ ಅವರ  ಹೆಂಡತಿ ಡೊನ್ಸಿರವರ  ತುಟಿ ಬಳಿ ರಕ್ತಗಾಯ ಹಾಗೂ ಎಡ ಕಾಲಿನ ಮೊಣಗಂಟಿನ ಕೆಳಗೆ ಮೂಳೆ ಮುರಿತದ ಜಖಂ ವುಂಟಾಗಿರುತ್ತದೆ. ಪಿರ್ಯಾದಿದಾರರಿಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 203/2022 ಕಲಂ : 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

  • ಕುಂದಾಪುರ: ಪಿರ್ಯದಿದಾರರಾದ ಜ್ಯೋತಿ (33), ಗಂಡ: ವಿಘ್ನೇಶ್ವರ ಪೂಜಾರಿ , ವಾಸ: ಮನೆ ನಂಬ್ರ: 3/57/1 ಹಟ್ಟಿಮನೆ ಕೆಂಪಣ್ಣ ತೊಪ್ಪಲು ಆನಗಳ್ಳಿ ಗ್ರಾಮ ಕುಂದಾಪುರ ತಾಲೂಕು, ಉಡುಪಿ ಇವರ ಗಂಡ ವಿಘ್ನೇಶ್ವರ ಪೂಜಾರಿ (37) ಇವರು ಮಂಗಳೂರು, ಸಿದ್ದಾಪುರ, ಹೊಸನಗರ ಮುಂತಾದ ಕಡೆಗಳಲ್ಲಿ ಅಲ್ಯೂಮಿನಿಯಮ್ ಕೆಲಸ  ಮಾಡಿಕೊಂಡಿದ್ದು ದಿನಾಂಕ 31/10/2022 ರಂದು ಬೆಳಿಗ್ಗೆ 08:45 ಗಂಟೆಗೆ ಪಿರ್ಯಾದಿದಾರರ ಮನೆಯಾದ ಆನಗಳ್ಳಿಯಿಂದ ಕೆಲಸದ ಬಗ್ಗೆ  ಸಾಗರಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ವಾಪಾಸು ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೇ, ಸಾಗರದ ಕೆಲಸ ಮಾಡುವ ಸ್ಥಳಕ್ಕೂ ತೆರಳದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 127/2022 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಪಾಂಡುರಂಗ (55), ತಂದೆ: ಶೇಖರ ಸೇರಿಗಾರ, ವಾಸ: ಫ್ಲ್ಯಾಟ್‌ನಂ:9, ಗ್ರೀನ್‌ಪಾರ್ಕ್‌ ಅಪಾರ್ಟ್‌ಮೆಂಟ್‌ ವಿ.ಮ್‌ನಗರ ನಿಟ್ಟೂರು, ಪುತ್ತೂರು ಗ್ರಾಮ ಉಡುಪಿ ಇವರು ಆರ್‌.ಸಿ ಮಾಲಕರಾಗಿರುವ ಪಲ್ಸರ್‌ 125 ಮೋಟಾರ್‌ಸೈಕಲ್‌ ನಂಬ್ರ KA-20-EY-8331 (Chassis No: MD2B64BX6NWM12821 & Engine No: DHXWNM30442) ನೇದನ್ನು ದಿನಾಂಕ 29/11/2022ರಂದು 18:30 ಗಂಟೆಗೆ ಉಡುಪಿ ತಾಲೂಕು ಪುತ್ತೂರು ಗ್ರಾಮದ ಫ್ಲ್ಯಾಟ್‌ನಂ:9, ಗ್ರೀನ್‌ಪಾರ್ಕ್‌ಅಪಾರ್ಟ್‌ಮೆಂಟ್‌ವಿ.ಮ್‌ನಗರ ನಿಟ್ಟೂರು, ಉಡುಪಿ ಇಲ್ಲಿ ಪ್ರತಿದಿನ ನಿಲ್ಲಿಸುವ ಸ್ಥಳದಲ್ಲಿ ಮೋಟಾರ್‌ಸೈಕಲ್‌ನಿ ಲ್ಲಿಸಿದ್ದು, ವಾಪಾಸು ದಿನಾಂಕ 30/11/2022 ರಂದು ಬೆಳಿಗ್ಗೆ 06:30 ಗಂಟೆಗೆ ಬಂದು ನೋಡಿದಾಗ ಮೋಟಾರ್‌ ಸೈಕಲ್‌ ನಿಲ್ಲಿಸಿದ ಸ್ಥಳದಲ್ಲಿ ಇಲ್ಲದೆ ಇದ್ದು, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟಾರ್‌ಸೈಕಲ್‌ನ  ಮೌಲ್ಯ ರೂಪಾಯಿ  95,000/- ಆಗಿರುತ್ತದೆ . ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 175/2022 ಕಲಂ:  379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಆ್ಯಕ್ಲಿನ್ ಜೊಯೆಲ್ ಪಿಂಟೋ (27), ತಂದೆ: ಆಲ್ವಿನ್ ಥೋಮಸ್ ಪಿಂಟೋ,  ವಾಸ: ಬಿ ಟಿ ಆರ್ ರಸ್ತೆ ವಡೇರಹೋಬಳಿ ಗ್ರಾಮ ಕುಂದಾಪುರ  ತಾಲೂಕು ಉಡುಪಿ  ಜಿಲ್ಲೆ ಇವರ  ತಂದೆ ಆಲ್ವಿನ್ ಥೋಮಸ್ ಪಿಂಟೋ (60) ರವರಿಗೆ ವಿಪರೀತ ಮಧ್ಯ ಸೇವನೆ ಮಾಡುವ ಅಭ್ಯಾಸವಿದ್ದು ಇದೇ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಅವರಿಗಿದ್ದ ರಕ್ತದೊತ್ತಡ ಮತ್ತು ಸಕ್ಕರೆ ಖಾಯಿಲೆಯ ಮಾತ್ರೆಗಳನ್ನು ದಿನಾಂಕ 29/11/2022 ರಂದು 12:30 ಗಂಟೆ ಸಮಯಕ್ಕೆ ಮನೆಯಲ್ಲಿ ಸೇವಿಸಿ ವಿಚಾರ ತಿಳಿದು ಅವರ ತಾಯಿ ಪಿರ್ಯಾದಿದಾರರ ತಂದೆಯವರನ್ನು ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಹೋಗಿ ದಾಖಲಿಸಿದ್ದು ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ 30/11/2022 ರಂದು ಬೆಳಿಗ್ಗೆ 05:20 ಗಂಟೆ ಸಮಯಕ್ಕೆ ಮೃತ ಪಟ್ಟಿರುವುದಾಗಿದೆ.  ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 43/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಮಲ್ಲಿಕಾರ್ಜುನ ಶೆಟ್ಟಿ (22), ತಂದೆ: ರಮೇಶ್ ಶೆಟ್ಟಿ, ವಾಸ: ಇಡೂರು ಕುಂಜ್ಞಾಡಿ ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಇವರು ಚಂದ್ರಶೇಖರ ಶೆಟ್ಟಿರವರ ಮಾಲಕತ್ವದ ಇಡೂರು ಕುಂಜ್ಞಾಡಿಯಲ್ಲಿರುವ ಮಾತೃಶ್ರೀ ಎಂಟರ್ ಪ್ರೈಸಸ್ ಪೆಟ್ರೋಲ್ ಬಂಕ್ ನಲ್ಲಿ ಮ್ಯಾನೇಜರ್ ಆಗಿರುತ್ತಾರೆ.  2 ವರ್ಷಗಳ ಹಿಂದೆ FINO bank ವತಿಯಿಂದ mini ATM ನ್ನು ಪೆಟ್ರೋಲ್ ಬಂಕ್ ನ ವ್ಯವಹಾರಗಳ ಬಗ್ಗೆ ಪಡೆದಿರುತ್ತಾರೆ. ಇದರಲ್ಲಿ ವ್ಯವಹಾರಕ್ಕೆ ಬಳಸಿದ ಹಣವು FINO bank ನ ಚಂದ್ರಶೇಖರ್ ಶೆಟ್ಟಿ ರವರ ಖಾತೆಗೆ ಜಮೆಗೊಳ್ಳುತ್ತಿದ್ದು, ಇದನ್ನು ಪಿರ್ಯಾದಿದಾರರು ಪ್ರತಿ ದಿನ ಸಂಜೆ ಮೊಬೈಲ್ ಗೆ ಬಂದ OTP ಯನ್ನು ಪಡೆದು ಚಂದ್ರಶೇಖರ್ ಶೆಟ್ಟಿ ಯವರ ಕೆನರಾ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತಿರುವುದಾಗಿದೆ. ಆದರೆ ದಿನಾಂಕ 23/11/2022 ರಂದು ಸಂಜೆ ಪಿರ್ಯಾದಿದಾರರು ಮಾಲಕರ ಖಾತೆಗೆ ವರ್ಗಾವಣೆ ಮಾಡಲು mini ATM ನ್ನು ಪರಿಶೀಲಿಸಿದಲ್ಲಿ  pino ಅಕೌಂಟ್ ನಲ್ಲಿ ರೂಪಾಯಿ 12.24 ಹಣ ಇರುವುದನ್ನು ಗಮನಿಸಿ, FINO bank ಸ್ಟೇಟ್ ಮೆಂಟ್ ಪಡೆದು ಪರಿಶೀಲಿಸಿದಲ್ಲಿ ಅದೇ ದಿನ ರೂಪಾಯಿ 38,550/- ಹಣವು ಯಾವುದೋ ಅಪರಿಚಿತ ಮೊಬೈಲ್ ನಂಬ್ರಕ್ಕೆ ಹಣ ವರ್ಗಾವಣೆಯಾಗಿರುವ ಬಗ್ಗೆ ತಿಳಿದುಬಂದಿರುತ್ತದೆ.       ಯಾರೋ ಅಪರಿಚಿತ ವ್ಯಕ್ತಿಗಳು FINO bank ನ mini ATM ಮೆಷಿನ್ ನ್ನು ಹ್ಯಾಕ್ ಮಾಡಿ, ಪಿರ್ಯಾದಿದಾರರು ಕೆಲಸ ಮಾಡಿಕೊಂಡಿರುವ ಸಂಸ್ಥೆಯ ರೂಪಾಯಿ 38,550/- ಹಣವನ್ನು ಮೋಸದಿಂದ ಪಡೆದು ಸಂಸ್ಥೆಗೆ ನಷ್ಟ ಉಂಟು ಮಾಡಿರುವುದಾಗಿ ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 90/2022 ಕಲಂ:  66(C) ಐ.ಟಿ. ಆಕ್ಟ್  ರಂತೆ ಪ್ರಕರಣ ದಾಖಲಾಗಿರುತ್ತದೆ .   
  • ಅಜೆಕಾರು: ಪಿರ್ಯಾದಿದಾರರಾದ ರೇಖಾ (29) , ಗಂಡ : ಹರೀಶ್ ನಾಯಕ್, ವಾಸ: ಶ್ರೀ ಲಕ್ಷ್ಮೀ ರವಳನಾಥನಿಲಯ ಶಿರ್ಲಲು ಅಂಜನೇಯ ನಗರ ಶಿರ್ಲಾಲು ಗ್ರಾಮ ಕಾರ್ಕಳ ತಾಲೂಕು ಇವರು ತನ್ನ ಗಂಡ,ಅತ್ತೆ,ಮಾವರವರೊಂದಿಗೆ ವಾಸ ಮಾಡಿಕೊಂಡಿದ್ದು, ದಿನಾಂಕ :30/11/2022 ರಂದು ಸಂಜೆ 5:00 ಗಂಟೆಗೆ ಪಿರ್ಯಾದಿದಾರರ ಮಾವ ನಾರಾಯಣ ನಾಯಕ್ ರವರು ಮನೆಯ ಬಲ ಬದಿಯಲ್ಲಿರುವ ಅಡಿಕೆ ತೋಟದಲ್ಲಿ ಅಡಿಕೆ ಹೆಕ್ಕುತ್ತಿರುವಾಗ ಪಕ್ಕದ ಮನೆಯ ಪಾಂಡುರಂಗ ನಾಯಕ್ ರವರು ಪಿರ್ಯಾದಿದಾರರ ಮಾವನವರಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವುದನ್ನು ಕೇಳಿ ಪಿರ್ಯಾದಿದಾರರು ಅಲ್ಲಿಗೆ ಹೋಗಿ ಸಮದಾನ ಮಾಡಿ ಮಾವನವರನ್ನು ಕರೆದುಕೊಂಡು ಮನೆಗೆ ಹೊರಟಾಗ ಪಾಂಡುರಂಗ ನಾಯಕ್ ರವರು ಪಿರ್ಯಾದಿದಾರರನ್ನು ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಹೊಡೆದಿದ್ದು ತಪ್ಪಿಸಿಕೊಂಡು ಮನೆಗೆ ಬರುವಷ್ಟರಲ್ಲಿ, ಪಿರ್ಯಾದಿದಾರರ ತೋಟಕ್ಕೆ ಬಂದು ತಡೆದು ನಿಲ್ಲಿಸಿ ಪಿರ್ಯಾದಿದಾರರನ್ನು ಕೈಯಿಂದ ತಳ್ಳಿ ಬೆದರಿಕೆ ಹಾಕಿ ಹಾಕಿರುವುದಾಗಿ ನೀಡಿದ ದೂರಿನಂತೆ ಅಜೆಕಾರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 37/2022 ಕಲಂ: 447, 354, 341, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 01-12-2022 09:19 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080