ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 •  ಶಿರ್ವ: ಪಿರ್ಯಾದಿ ಶ್ರೀನಿವಾಸ ಇವರ  ತಮ್ಮ ರಾಘವೇಂದ್ರ  ಆಚಾರ್ಯ(38) ಈತನು  ಮನೆ  ಸಮೀಪದಲ್ಲಿಯೇ   ದಿನಾಂಕ: 29.11.2022  ರಂದು  ಸಂಜೆ ಸಮಯ ಸುಮಾರು 17:30 ಗಂಟೆಗೆ ಬೆಳಪುನಿಂದ  ಪಣಿಯೂರು ಕಡಗೆ ಸಾಗಿರುವ  ಸಾರ್ವಜನಿಕ ರಸ್ತೆಯ ಬೆಳಪು   ಇಂಡಸ್ಟ್ರೀಯಲ್‌  ಏರಿಯಾದ  ಬಳಿ   ಸಾರ್ವಜನಿಕ ರಸ್ತೆ   ಬದಿ  ನಡೆದುಕೊಂಡು ಹೋಗುತ್ತಿದ್ದ  ಸಮಯದಲ್ಲಿ  KA20EG 4113 ನೇ  ನೊಂದಣಿ  ಸಂಖ್ಯೆಯ   ಸ್ಕೂಟರನ್ನು ಅದರ ಸವಾರನು  ಪಣಿಯೂರು  ಕಡೆಯಿಂದ ಬೆಳಪು  ಕಡೆಗೆ  ಅತೀ  ವೇಗ  ಮತ್ತು  ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು  ಬಂದು ರಾಘವೇಂದ್ರನಿಗೆ  ಡಿಕ್ಕಿಹೊಡೆದಿದ್ದು ಆತನ ತಲೆಯ  ಹಿಂಬದಿಗೆ ತೀವ್ರ ತರದ ರಕ್ತಗಾಯವಾಗಿದ್ದು, ಕೈಗಳಿಗೆ  ತರಚಿದ ಗಾಯವಾಗಿರುತ್ತದೆ. ಅಪಘಾತಪಡಿಸಿದ ಸ್ಕೂಟರ್‌ ಸವಾರನ ಹೆಸರು  ಕೇಳಲಾಗಿ ಚಂದ್ರಶೇಖರ ಬಿ ನಾಯ್ಕ್‌ ಎಂಬುದಾಗಿರುತ್ತದೆ. ಈ ಬಗ್ಗೆ ಶಿರ್ವ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 86/22 ಕಲಂ 279,   338 ಐಪಿಸಿ ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಕೋಟ: ಮಾನ್ಯ ನ್ಯಾಯಾಲಯದ ಖಾಸಗಿ ಪಿರ್ಯಾದಿ ಸಾರಾಂಶವೇನೆಂದರೆ ಪಿರ್ಯಾದಿ ಚಂದ್ರ ಶೇಖರ ಇವರು ಶ್ರೀರಾಮ್ ಕ್ಯಾಶ್ಯೂ  ಇಂಡಸ್ಟ್ರೀಸ್ ನಂಚಾರು ಇದರ ಮಾಲೀಕರಾಗಿದ್ದು ,ಗೋಡಂಬಿ ಸಂಸ್ಕರಣ ವ್ಯವಹಾರವನ್ನು ನಡೆಸುತ್ತಿರುವುದಾಗಿದೆ. ಆರೋಪಿತ ಜಿ ಎನ್ ಟ್ರೇಡಿಂಗ್ ಕಂಪೆನಿ  ಮಾರ್ಕೆಟ್ ಯಾರ್ಡ ಪೂನಾ ಮಹಾರಾಷ್ಟ್ರ ಕಂಪೆನಿಯು ಪಿರ್ಯಾದುದಾರರ ಗ್ರಾಹಕರಾಗಿದ್ದು ಸುಮಾರು 2008 ನೇ ಇಸವಿಯಿಂದ ಸಂಸ್ಕರಿತ ಗೋಡಂಬಿಯನ್ನು ಖರೀದಿಸುತ್ತಿದ್ದು, ಆರೋಪಿತ ಕಂಪೆನಿಯು 2020-21 ನೇ ಸಾಲಿನಲ್ಲಿ ಪಿರ್ಯಾದಿದಾರರಿಗೆ  ಗೋಡಂಬಿ ಖರೀದಿಸಿದ ಬಗ್ಗೆ  16,28,559/- ಹಣವನ್ನು ಪಾವತಿಸಲು ಬಾಕಿಯಿದ್ದು , ಬರಬೇಕಾದ ಹಣಕ್ಕಾಗಿ ಕರೆ ಮಾಡಿದಾಗ ವಿಜಯ ಜಗ್ವಾನಿ 57 ವರ್ಷ  ಮಾಲೀಕರು ಜಿ ಎನ್ ಟ್ರೇಡಿಂಗ್ ಕಂಪೆನಿ  ಮಾರ್ಕೆಟ್ ಯಾರ್ಡ ಪೂನಾ ಮಹಾರಾಷ್ಟ್ರ  ಹಿಂದಿ ಭಾಷೆಯಲ್ಲಿ ಅವಾಚ್ಯವಾಗಿ ನಿಂದಿಸಿ ಕೊಲೆ ಮಾಡಿಸುವುದಾಗಿ  ಜೀವ ಬೆದರಿಕೆಯನ್ನು  ಹಾಕಿರುತ್ತಾನೆ.  ಹಾಗೂ ಮೋಸ ಮಾಡುವ ಉದ್ದೇಶದಿಂದ ಗೋಡಂಬಿಯನ್ನು ಕ್ರೆಡಿಟ್ ನಲ್ಲಿ ಖರೀದಿಸಿ  ಹಣವನ್ನು ವಾಪಾಸ್ಸು ನೀಡದೇ ಮೋಸ ಮಾಡಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 211/2022 ಕಲಂ: 406. 409. 417. 418. 420. 504. 506 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ಬ್ರಹ್ಮಾವರ ತಾಲೂಕು ಹೊಸೂರು ಗ್ರಾಮ, ಕರ್ಜೆ ಅಂಚೆ, ಕದಂಗೋಡು ಎಂಬಲ್ಲಿ ಸರ್ವೇ ನಂ 123/2 ರ ಪಟ್ಟಾ ಜಾಗದಲ್ಲಿ ಫಿರ್ಯಾದಿ ಲಕ್ಷ್ಮೀ ಇವರು ತನ್ನ ಗಂಡ ಹರೀಶ ನಾಯ್ಕ, ಮಕ್ಕಳೊಂದಿಗೆ  ಸುಮಾರು 30 ವರ್ಷಗಳಿಂದ ವಾಸವಾಗಿದ್ದು. ಅವರು ಪರಿಷಿಷ್ಟ ಪಂಗಡದ ಮರಾಠಿ ಜಾತಿಗೆ ಸೇರಿದವರಾಗಿರುತ್ತಾರೆ. ದಿನಾಂಕ 31.05.2022 ರಂದು ಫಿರ್ಯಾದುದಾರರು ತನ್ನ ಗಂಡ ಮಕ್ಕಳೊಂದಿಗೆ ಅವರ ಬಾಬ್ತು ಗದ್ದೆಯ ಬದಿಯಲ್ಲಿ ಅಡಿಕೆ ಸಸಿ ನೆಡುತ್ತಿರುವಾಗ ಮಧ್ಯಾಹ್ನ 1:00 ಗಂಟೆಯ ಸುಮಾರಿಗೆ ಊರಿನವರಾದ 1 ನೇ ಆರೋಪಿ ಶ್ರೀನಿವಾಸ ಭಟ್‌,  19 ನೇ ಕರ್ಜೆ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ 2ನೇ ಆರೋಪಿ  ರಾಘವೇಂದ್ರ ಶೆಟ್ಟಿ ಹಾಗೂ ಪಂಚಾಯತ್‌ ಪಿಡಿಓ ರವರಾದ 3 ನೇ ಆರೋಪಿ ಪ್ರಮೀತಾರವರು ಏಕಾ ಏಕಿ ಅಕ್ರಮವಾಗಿ ಫಿರ್ಯಾದುದಾರರ ಜಾಗಕ್ಕೆ ಬಂದು ರಸ್ತೆಯನ್ನು ನಿರ್ಮಿಸಲು  ಮುಂದಾಗಿದ್ದು, ಆಗ ಅಲ್ಲೇ ಗದ್ದೆಯ ಬದಿ ಇದ್ದ ಫಿರ್ಯಾದಿದಾರರು ಹಾಗೂ ಅವರ ಗಂಡ ಮಕ್ಕಳು ಅದನ್ನು ಕೇಳಲು ಹೋದಾಗ ಆರೋಪಿಗಳು ಸೇರಿ  ಅವಾಚ್ಯ ಶಬ್ದಗಳನ್ನು ಉಪಯೋಗಿಸಿ ಜಾತಿ ನಿಂದನೆಯನ್ನು ಮಾಡಿರುತ್ತಾರೆ.  ಅಲ್ಲದೇ  ಆರೋಪಿಗಳು ಜನರನ್ನು ಸೇರಿಸಿ ಫಿರ್ಯಾದುದಾರರ ಗಂಡನನ್ನು ತಳ್ಳಿ ಬೇಲಿಗೆ ಹಾಕಿದ ಕಲ್ಲಿನ ಕಂಬವನ್ನು ಪುಡಿ ಮಾಡಿರುತ್ತಾರೆ. ಅದೇ ಸಮಯ ಅಲ್ಲೇ ನಿಂತು ವಿಡಿಯೋ ಮಾಡುತ್ತಿದ್ದ ಫಿರ್ಯಾದುದಾರರ ಮಗ ಮತ್ತು ಮಗಳ ಮೊಬೈಲ್‌ ನ್ನು ಕಸಿದು ವಿಡಿಯೋವನ್ನು ನಾಶಮಾಡಿರುತ್ತಾರೆ. ಈ ವಿಷಯವನ್ನು ಎಲ್ಲಿಯೂ ತಿಳಿಸದಂತೆ , ಯಾವ ಸಂಘ ಸಂಸ್ಥೆಗಳ ಬಳಿ ಹೋಗದಂತೆ ಆರೋಪಿಗಳು ಜೀವ ಬೆದರಿಕೆಯನ್ನು ಹಾಕಿರುತ್ತಾರೆ. 1 ನೇ ಆರೋಪಿಯು ಫಿರ್ಯಾದಿದಾರರಿಗೆ ಇನ್ನೊಂದು ಬಾರಿ ಈ ವಿಷಯ ಬಾಯಿಯಿಂದ ಹೊರ ಬಂದರೆ ಹೊಡೆಸುತ್ತೇನೆ ಎಂದು ಧಮುಕಿ ಹಾಕಿರುತ್ತಾರೆ. ಬೆದರಿಕೆ ಒಡ್ಡಿರುತ್ತಾರೆ ನಂತರ ದಿನಾಂಕ 19/07/2022 ರಂದು ಆರೋಪಿಗಳು ಅಕ್ರಮವಾಗಿ ಜಲ್ಲಿಯನ್ನು ತಂದು ಅಕ್ರಮವಾಗಿ ರಸ್ತೆಯನ್ನು ನಿರ್ಮಿಸಲು ಯತ್ನಿಸಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 205/2022 ಕಲಂ : 447, 427, 323,  504, 506 R/w 34 IPC & 3(1)(r), 3(1)(s), 3(2)(v-a ) SC/ST ACT ನಂತೆ  ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿ ನೊಂದ ಮಹಿಳೆಗೆ ಸೆಪ್ಟೆಂಬರ್‌ ತಿಂಗಳಿನಲ್ಲಿ ಸಾಮಾಜಿಕ ಜಾಲತಾಣವಾದ ಇನ್ಟಾಗ್ರಾಮ್ ನಲ್ಲಿ Leonard Hanks ಎಂಬ ಎಂಬ ವ್ಯಕ್ತಿ ತಾನು ಸಾಟ್ಕ್ಲ್ಯಾಂಡ್‌ನಲ್ಲಿ  ಡಾಕ್ಟರ್ ಎಂಬುದಾಗಿ ಪರಿಚಯಿಸಿಕೊಂಡು, ನಂತರ ವಾಟ್ಸ್ಅಪ್ ಮುಖೇನ ಚಾಟಿಂಗ್ ನಡೆಸಿ, ಸ್ನೇಹಿತರಾಗಿದ್ದು, ನವಂಬರ್‌ ಮೊದಲನೇ ವಾರದಲ್ಲಿ ಆತನು ಕೋರಿಯರ್‌ ಪಾರ್ಸೆಲ್‌ ಮುಖೇನಾ ಗಿಫ್ಟ್‌ ನ್ನು ಕಳುಹಿಸುವುದಾಗಿ ಪಿರ್ಯಾದಿದಾರರನ್ನು ನಂಬಿಸಿದ್ದು, ಅದಾದ ಬಳಿಕ ನವಹೆಲಿ ಇಂಟರ್‌ ನ್ಯಾಶನಲ್‌ ಎರ್‌ಪೋಟ್‌‌ ಕೊರಿಯರ್‌ ಕಚೇರಿಯಿಂದ ಅಪರಿಚಿತ ವ್ಯಕ್ತಿ ಕರೆ ಮಾಡಿ ಸಾಟ್ಕ್ಲ್ಯಾಂಡ್‌ದಿಂದ ಬಂದಿರುವ ಪಾರ್ಸೆಲ್ ಗೆ ಪಾರ್ಸೆಲ್ ಚಾರ್ಜ್‌, ಇನ್‌ಕಮ್‌ ಟ್ಯಾಕ್ಸ್, ಪೌಂಡ್‌ ಹಣವನ್ನು ಭಾರತೀಯ ರೂಪಾಯಿಗೆ ಬದಲಾಯಿಸಲು ಹಣ ಪಾವತಿಸಬೇಕು ಎಂದು ತಿಳಿಸಿದ್ದು, ಪಿರ್ಯಾದಿದಾರರು ಅದನ್ನು ನಂಬಿ, ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ರೂ. 6,91,000/- ಹಣವನ್ನು ಪಾವತಿಸಿರುತ್ತಾರೆ. ಆರೋಪಿಗಳು ಡಾಕ್ಟರ್ ಎಂದು, ಗಿಫ್ಟ್ ಪಾರ್ಸೆಲ್  ಕಳಿಸುವುದಾಗಿ ನಂಬಿಸಿ, ನವದೆಹಲಿಯ ಇಂಟರ್‌ ನ್ಯಾಶನಲ್‌ ಎರ್‌ಪೋಟ್‌‌ ಕೊರಿಯರ್‌ ಕಚೇರಿಯಿಂದ ಬಿಂಬಿಸಿ, ಪಿರ್ಯಾದಿದಾರರಿಂದ  ಒಟ್ಟು ರೂ. 6,91,000/- ಹಣವನ್ನು ಪಡೆದು, ಪಾರ್ಸೆಲ್ ಕಳುಹಿಸದೇ, ಕಳುಹಿಸಿದ ಹಣವನ್ನು ವಾಪಾಸು ನೀಡದೇ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಉಡುಪಿ ಸೆನ್‌  91/2022  ಕಲಂ 66(c), 66(D), ಐ.ಟಿ. ಆಕ್ಟ್ ನಂತೆ  ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

 • ಗಂಗೊಳ್ಳಿ:  ಫಿರ್ಯಾದಿ ಪ್ರಭಾಕರ ಖಾರ್ವಿ ಇವರು “ಶ್ರೀ ಯಕ್ಷೇಶ್ವರಿ” ಎಂಬ ಭೋಟಿನ ಮಾಲಕರಾಗಿರುತ್ತಾರೆ. ಸದ್ರಿ ಬೋಟ್‌ನಲ್ಲಿ ಪ್ರಮೋದ ಮಿನ್ಜ, ಆನಂದ ತರಕ್ಕಿ , ಪ್ರಮೋದ ತೋಪು ಹಾಗೂ ಇತರರು ಸೇರಿ ಆಳ ಸಮುದ್ರದ ಮೀನುಗಾರಿಕೆ ಮಾಡಿ ವಾಪಾಸ್ಸು  ದಿನಾಂಕ:30/11/2022 ರಂದು ಗಂಗೊಳ್ಳಿ ಗ್ರಾಮದ ಗಂಗೊಳ್ಳಿ ಬಂದರ ಬಳಿ ಪಂಚಗಂಗಾವಳಿ ನದಿಯಲ್ಲಿ ಬೋಟನ್ನು ನಿಲ್ಲಿಸಿ 21:30 ಗಂಟೆಗೆ ಬೋಟಿನಿಂದ ಮೀನನ್ನು ಖಾಲಿ ಮಾಡುತ್ತೀರುವಾಗ ಬೋಟಿನಲ್ಲಿ ಕೆಲಸ ಮಾಡುತ್ತಿದ್ದ ಪ್ರಮೋದ ಮಿನ್ಜ್‌ ಪ್ರಾಯ: 32 ವರ್ಷ ರವರು  ಆಕಸ್ಮಿಕವಾಗಿ ಆಯಾತಪ್ಪಿ ಬೋಟ್‌ನಿಂದ ಪಂಚಗಂಗಾವಳಿ ನದಿಯ ನೀರಿಗೆ  ಬಿದ್ದು ಕಾಣೆಯಾಗಿರುವುದಾಗಿದೆ.   ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 108/2022  ಕಲಂ: ಗಂಡಸು ಕಾಣೆಯಂತೆ  ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಉಡುಪಿ: ಉಡುಪಿ ತಾಲೂಕು ಅಂಬಲ್ಪಾಡಿ ಜಂಕ್ಷನ್‌ ಬಳಿ ಇರುವ ಅಭಿನಂದನ್‌ ಪೆಟ್ರೋಲ್‌ ಬಂಕ್‌ ನಲ್ಲಿ ದಿನಾಂಕ 01/12/2022 ರಂದು ಬೆಳಗಿನ ಜಾವ 04:00 ಗಂಟೆಗೆ 3 ಜನ ಕಳ್ಳರು ಮಹೀಂದ್ರ ವಾಹನ ನಂಬ್ರ KA 20 D 6875 ನೇದರಲ್ಲಿ ಬಂದು, ಸದರಿ ಪೆಟ್ರೋಲ್‌ ಬಂಕ್‌ನಲ್ಲಿ ಪ್ರತಿದಿನ ರಾತ್ರಿ ವೇಳೆ ನಿಲುಗಡೆ ಮಾಡುವ ಲಾರಿ ನಂಬ್ರ KA 20 D 6707 ನೇದರಿಂದ 20 ಲೀಟರ್‌ ಡಿಸೇಲ್‌ ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸ್ವತ್ತಿನ ಮೌಲ್ಯ ರೂ. 1,748/- ಆಗಬಹುದು ಎಂಬಿತ್ಯಾದಿ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 176/2022 ಕಲಂ:  379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ಅಸ್ವಾಭಾವಿಕ ಮರಣ ಪ್ರಕರಣ ‌

 • ಕುಂದಾಪುರ: ಫಿರ್ಯಾದಿ ಗಣೇಶ್.ಎಮ್‌ ಇವರು ಕಟ್‌ಬೆಲ್ತೂರು ಗ್ರಾಮ ಪಂಚಾಯತ್‌ನ ಅಭಿವೃದ್ದಿ ಅಧಿಕಾರಿಗಳಾಗಿದ್ದು, ಕಟ್‌ಬೆಲ್ತೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕಳೆದ ಸುಮಾರು 30 ವರ್ಷಗಳಿಂದ ಕೇರಳ ಮೂಲದ ರಾಜು ಎಂಬವರು ಕೂಲಿ ಕೆಲಸ ಮಾಡಿಕೊಂಡು ಏಕಾಂಗಿಯಾಗಿ ವಾಸವಾಗಿದ್ದು, ಆತನು ಅನಾರೋಗ್ಯದ ನಿಮಿತ್ತ ಚಿಕಿತ್ಸೆಗೆ ಉಡುಪಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಆದರೆ ವೈದ್ಯರು ನೀಡಿದ ಚಿಕಿತ್ಸೆ ಫಲಕಾರಿಯಾಗದೇ ಆತನು ದಿನಾಂಕ: 30.11.2022 ರಂದು 16:00 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಯು.ಡಿ.ಆರ್ 34/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಬ್ರಹ್ಮಾವರ: ಫಿರ್ಯಾದಿ ವಸಂತ ಶೆಟ್ಟಿ ಇವರ ತಮ್ಮ ಸಂತೋಷ ಶೆಟ್ಟಿ ಪ್ರಾಯ 49 ವರ್ಷ ರವರು ಬ್ರಹ್ಮಾವರ  ತಾಲೂಕು, ಗರಿಕೆ ಮಠದಲ್ಲಿ ರಿಕ್ಷಾ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದು  ದಿನಾಂಕ: 30/11/2022 ರಂದು ಬೆಳಿಗ್ಗೆ 10:15 ಗಂಟೆಗೆ ರಿಕ್ಷಾ ನಿಲ್ದಾಣದಿಂದ ಬಾಡಿಗೆಯ ಬಗ್ಗೆ  ಹೊರಗಡೆ ಹೋದವರು ವಾಪಾಸ್ಸು ರಿಕ್ಷಾ ನಿಲ್ದಾಣಕ್ಕೆ  ಬಾರದೇ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಮೃತ ಸಂತೋಷ ಶೆಟ್ಟಿ ಆತನ ಸ್ನೇಹಿತ ವಿಕ್ರಂ ನೊಂದಿಗೆ ಆಗಾಗ ಯಡ್ತಾಡಿ  ಕೊಡ್ಲಿ ರಸ್ತೆಯಲ್ಲಿರುವ ಕಲ್ಲು ಕೋರೆಯಲ್ಲಿರುವ ಮೀನುಗಳಿಗೆ ಆಹಾರ ಹಾಕುವ ಅಭ್ಯಾಸ ಹೊಂದಿರುತ್ತಾರೆ.  ಈ ದಿನ ದಿನಾಂಕ: 01/12/2022 ರಂದು ಬೆಳಿಗ್ಗೆ ಫಿರ್ಯಾದಿದಾರರಿಗೆ ಯಡ್ತಾಡಿ ಪರಿಸರದ ಸಾರ್ವಜನಿಕರೊಬ್ಬರು  ಕರೆ ಮಾಡಿ ಯಡ್ತಾಡಿ ಗ್ರಾಮದ ಕೊಡ್ಲಿ  ರಸ್ತೆಯ ಕಲ್ಲು ಕೋರೆಯ ಹತ್ತಿರದ ರಸ್ತೆಯ ಪ್ಕ್ಕದಲ್ಲಿ ರಿಕ್ಷಾ ಒಂದು ನಿಂತ್ತಿರುವ ಬಗ್ಗೆ ಮಾಹಿತಿ ನೀಡಿದ್ದು  ಅದರಂತೆ ಸ್ಥಳಕ್ಕೆ ಹೋಗಿ ನೋಡಿದಾಗ ರಿಕ್ಷಾ ನಿಂತ್ತಿದ್ದು ಇದು ನನ್ನ ತಮ್ಮ ಸಂತೋಷ ಶೆಟ್ಟಿಯ ರಿಕ್ಷಾ ಆಗಿದ್ದು ನಂತರ ಕಲ್ಲುಕೊರೆಯ ಅಸುಪಾಸಿನಲ್ಲಿ ಹುಡುಕಾಡಿರುತ್ತೇವೆ. ನಂತರ ಬೆಳಿಗ್ಗೆ 6:30 ಗಂಟೆ ಸುಮಾರಿಗೆ  ಯಡ್ತಾಡಿ ಸ್ಥಳಿಯ ನಿವಾಸಿಯೊಬ್ಬರು ಕಲ್ಲು ಕೋರೆಯಲ್ಲಿ ಒಂದು ಮೃತ ದೇಹ ಇರುವ ಬಗ್ಗೆ ಮಾಹಿತಿ ನೀಡಿದ್ದು ಅದರಂತೆ ಸ್ಥಳಕ್ಕೆ ಹೋಗಿ ನೋಡಿದಾಗ ಕಲ್ಲಿ ಕೊರೆಯಲ್ಲಿ ಕೌಚಿ ಮಲಗಿದ್ದ ಸ್ಥಿತಿಯಲ್ಲಿ ಮೃತ ದೇಹ ತೇಲುತ್ತಿದ್ದು  ಮೃತ ದೇಹದ ಮೇಲಿನ ಬಟ್ಟೆಗಳನ್ನು ನೋಡಿ ಗುರುತಿಸಿರುವುದಾಗಿದೆ. ಸಂತೋಷ ಶೆಟ್ಟಿ ದಿನಾಂಕ: 30/11/2022 ರಂದು ಬೆಳಿಗ್ಗೆ 10:15 ಗಂಟೆಯೀಮದ ಈ ದಿನ ದಿನಾಂಕ: 01/12/2022 ರ ಬೆಳಿಗ್ಗೆ 6:3ಗಂಟೆಯ ಮಧ್ಯಾವಧಿಯಲ್ಲಿ ಕಲ್ಲುಕೋರೆಯ ನೀರಿನಲ್ಲಿರುವ ಮೀನುಗಳಿಗೆ ಆಹಾರವನ್ನು ಹಾಕುವಾಗ ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದು ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯು.ಡಿ.ಆರ್ 60/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಕಾರ್ಕಳ: ಪಿರ್ಯಾದುದಾರರಾದ ವಲೈಂಟಿನ್ ಯಾನೆ ವಾಲ್ಟರ್  ಜೋನ್ ಮೊಂತೇರೊ ಇವರ ಮಗ ರಿತೇಶ್ ನೀಲ್ ಮೊಂತೆರೊ ಪ್ರಾಯ:35 ವರ್ಷ ಇತನು ದುಬೈಯಲ್ಲಿ ಉದ್ಯೊಗ ಮಾಡಿಕೊಂಡಿದ್ದು ಇತ್ತಿಚೆಗೆ ವಿದೇಶದಿಂದ ಊರಿಗೆ ಬಂದವನು ದಿನಾಂಕ 15/11/2022 ರಂದು ಮುಡಬಿದ್ರೆಯ ಗಂಟಲ್ ಕಟ್ಟೆ ಎಂಬಲ್ಲಿರುವ ಆತನ ನಾದಿನಿಯ ಮನೆಗೆ ಹೋದಾಗ  ಅವರ ಮನೆಯ ಅಂಗಳದಲ್ಲಿ  ಆಕಸ್ಮಿಕವಾಗಿ ಬಿದ್ದು ಆತನ ಎಡಕಾಲಿನ ಮೊಣಕಾಲಿನ ಬಳಿ ಮೂಳೆಮುರಿತವಾಗಿದ್ದು ಈ ಬಗ್ಗೆ ಮೂಡಬಿದ್ರೆಯ ಆಳ್ವಾಸ್ ಹಾಗೂ ಮಂಗಳೂರಿನ ಎ ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪಿರ್ಯಾದುದಾರರೊಂದಿಗೆ ಬೆಳ್ಮಣ್ ಗ್ರಾಮದ ಬೆಳ್ಮಣ್ ಚರ್ಚ್ ಬಳಿ  ಮನೆಯಲ್ಲಿ ವಿಶ್ರಾಂತಿಯಲ್ಲಿದ್ದವನು ದಿನಾಂಕ 30/11/2022 ರಂದು ರಾತ್ರಿ ಊಟ ಮಾಡಿ ಮಲಗಿದ್ದು ಪಿರ್ಯಾದುದಾರರು ದಿನಾಂಕ 01/12/2022 ರಂದು ಬೆಳಿಗ್ಗೆ ಸುಮಾರು 05:00 ಗಂಟೆಗೆ  ನೊಡಿದಾಗ ರಿತೇಶ್ ನೀಲ್ ಮೋಂತೆರೊ ನೇರವಾಗಿ ಮಲಗಿದ್ದು ವಾಪಾಸು ಬೆಳಿಗ್ಗೆ 07:25 ಗಂಟೆಗೆ ಎದ್ದು ನೋಡಿದಾಗ ಆತನು ಕವುಚಿ ಮಲಗಿಕೊಂಡಂತೆ ಇದ್ದವನನ್ನು ಎಬ್ಬಿಸಿದಾಗ ಆತನು ಮಾತನಾಡದೆ ಇರುವುದರಿಂದ ಆತನನ್ನು ಉಪಚರಿಸಿ ಬೆಳ್ಮಣನಿನ ವೈದ್ಯರನ್ನು ಮನೆಗೆ ಕರೆಸಿ ತೋರಿಸಿದಲ್ಲಿ ವೈದ್ಯರು ರಿತೇಶ್ ನೀಲ್ ಮೊಂತೆರೊ ಮೃತ ಪಟ್ಟ ಬಗ್ಗೆ ತಿಳಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯು.ಡಿ.ಆರ್ 38/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 01-12-2022 06:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080