ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿ ಸುಮಂತ ಇವರು ದಿನಾಂಕ 28-11-2021 ರಂದು ತಮ್ಮ ತಂದೆಯ ಮನೆಯಾದ ಬಡಾಕೆರೆಯಿಂದ ತಾಯಿ ಮನೆಯಾದ ಉಪ್ರಳ್ಳಿಗೆ ಹೋಗುವರೇ ಪಿರ್ಯಾದಿದಾರರ ಚಿಕ್ಕಪ್ಪ  ಶ್ರೀಧರ್ ರವರ ಬಾಬ್ತು KA 20 EF 2505 ನೇ ಮೋಟಾರು ಸೈಕಲ್  ನಲ್ಲಿ ಸಹ ಸವಾರರಾಗಿ ಕುಳಿತುಕೊಂಡಿದ್ದು ಆಪಾದಿತ ಶ್ರೀಧರ್ ರವರು ಬೈಕ ನ್ನು ಚಲಾಯಿಸುತ್ತಿದ್ದು , ಬೈಕನ್ನು ಅತೀ ವೇಗವಾಗಿ ಚಲಾಯಿಸಿಕೊಂಡು  ಎನ್ ಹೆಚ್ 66 ರ ಪಶ್ಚಿಮ ಬದಿಯ ರಸ್ತೆಯಲ್ಲಿ ಚಲಾಯಿಸಿಕೊಂಡು ಬರುತ್ತಿರುವಾಗ ಸಮಯ ಸುಮಾರು ರಾತ್ರಿ 10;30 ಗಂಟೆಗೆ ನಾವುಂದ ಗ್ರಾಮದ ಮಸ್ಕಿ ಗೋಪಾಲ ಕೃಷ್ಣ ದೇವಸ್ಥಾನದಿಂದ ಸ್ವಲ್ಪ ಹಿಂದೆ ನಾಯಿಗಳು ಕಚ್ಚಾಡಿಕೊಂಡು ರಸ್ತೆಗೆ ಬೈಕಿನ ಎದುರು ಓಡಿ ಬಂದಾಗ ಬೈಕಿನ ಚಾಲಕರು ಒಮ್ಮೆಲೇ ಬ್ರೇಕ್ ಹಾಕಿದಾಗ ಬೈಕ್ ಚಾಲಕನ ಹತೋಟಿ ತಪ್ಪಿ ರಸ್ತೆಗೆಬಿದ್ದುಪಿರ್ಯಾದುದಾರರ ಎಡ ಕೈ ಮತ್ತು ಎರಡೂ ಕಾಲಿನ ಮುಂಗಾಲಿಗೆರಕ್ತ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರಚಿನ್ಮಯಿ ಆಸ್ಪತ್ರೆಗೆ ಹೋದಲ್ಲಿ ವ್ಯೆದ್ಯರ ಸಲಹೆಯ ಮೇರೆಗೆ ಕೆ.ಎಂ.ಸಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ. ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ  ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 189/2021 ಕಲಂ. 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ಫಿರ್ಯಾದಿದಾರರಾದ ರವೀಂದ್ರ ರವರು ದಿನಾಂಕ: 30-11-2021 ರಂದು ತನ್ನ ಬಾಬ್ತು KA-20-EA-4750 ನೇ ಮೋಟಾರ್‌ಸೈಕಲ್‌ ನಲ್ಲಿ ತನ್ನ ಹೆಂಡತಿ ಶೋಭಾ ರವರನ್ನು ಸಹ ಸವಾರಳನ್ನಾಗಿ ಕುಳ್ಳಿರಿಸಿಕೊಂಡು ನಾಗೂರಿನಿಂದ ಶಂಕರನಾರಾಯಣ ಕಡೆಗೆ ರಾ.ಹೆ 66 ರ ರಸ್ತೆಯಲ್ಲಿ ಹೋಗುತ್ತಿರುವಾಗ ತ್ರಾಸಿ ಗ್ರಾಮದ ತ್ರಾಸಿ ಬೀಚ್‌ ಪ್ರವಾಸಿ ಮಂದಿರದ ಬಳಿ ತಲುಪುವಾಗ್ಯೆ ಸಮಯ ಸುಮಾರು ಮಧ್ಯಾಹ್ನ 2:30 ಗಂಟೆಗೆ ಪಿರ್ಯಾದಿದಾರರ ಹಿಂದಿನಿಂದ  KA-03-AE-6999 ನೇ ಟ್ಯಾಂಕರ್‌  ಅನ್ನು  ಅದರ ಚಾಲಕ  ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೇ ಎಡಕ್ಕೆ ಚಲಾಯಿಸಿ ಪಿರ್ಯಾದಿದಾರರ ಬಾಬ್ತು ಮೋಟಾರ್‌ ಸೈಕಲ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಸಹಸವಾರೆ ಶೋಭಾರವರು ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಬಲ ಕೈಗೆ ಒಳ ಜಖಂ ಹಾಗೂ ರಕ್ತಗಾಯವಾಗಿದ್ದು ಹಾಗೂ ಅವರ ಹೆಂಡತಿ ಶೋಭಾ ರವರಿಗೆ ಎಡ ಹಣೆಗೆ,ಕೆನ್ನೆಗೆ ಒಳಜಖಂ, ತುಟಿಗೆ ಗಾಯ, ಎಡ ಕೈಗೆ ಒಳಜಖಂ ಮತ್ತು ತರಚಿದ ಗಾಯ ಹಾಗೂ ಬಲಕಾಲಿನ ಪಾದದ ಮೇಲೆ ತರಚಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ  ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಡಿಕ್ಕಿ ಹೊಡೆದ KA-03-AE-6999 ನೇ ಟ್ಯಾಂಕರ್‌  ಚಾಲಕನು ವಾಹನವನ್ನು ನಿಲ್ಲಿಸದೇ  ಗಾಯಾಳುಗಳನ್ನು ಉಪಚರಿಸದೇ ಹೋಗಿರುತ್ತಾನೆ. ಈ  ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 111/2021  ಕಲಂ: 279, 337 ಐಪಿಸಿ  & 134(ಎ)(ಬಿ) ಐ.ಎಮ್.ವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 30/11/2021 ರಂದು ಪಿರ್ಯಾದಿ ಬಿ. ಪ್ರಕಾಶ್ಚಂದ್ರ ಹೆಗ್ಡೆ ಇವರು ಅವರ ಬಾಬ್ತು KA-20-P-1131 ನೇ ಕಾರಿನಲ್ಲಿ ಹಂಗಳೂರುನಿಂದ ಹೊರಟು ವಾರಂಬಳ್ಳಿ ಗ್ರಾಮದ ಭರಣಿ ಪೆಟ್ರೋಲ್‌ ಬಂಕ್ ಎದುರುಗಡೆ ರಾ.ಹೆ 66 ರ ಬಲ ಬದಿಯಲ್ಲಿ ಬ್ರಹ್ಮಾವರದ ಕಡೆಗೆ ಬರುವಾಗ ಮಧ್ಯಾಹ್ನ ಸುಮಾರು 1:30 ಗಂಟೆಗೆ ಸಾಲಿಗ್ರಾಮದ ಬದಿಯಿಂದ ಆರೋಪಿಯು ಅವರ ಬಾಬ್ತು KA-11-2631 ನೇ ಗೂಡ್ಸ್ ಟೆಂಪೊವನ್ನು ಅತೀ ವೇಗ ದಿಂದ ರಸ್ತೆಯ ಎಡಬದಿಯಲ್ಲಿ ಟೋ ಮಾಡಿಕೊಂಡು ಹೋಗುತ್ತಿರುವ ವಾಹನವನ್ನು ಓವರ್‌ಟೆಕ್ ಮಾಡಿ ಪಿರ್ಯಾದಿದಾರರ ಕಾರಿನ ಎಡ ಬದಿಯ ಮುಂಭಾಗಕ್ಕೆ ಡಿಕ್ಕಿ ಹೊಡೆದು, ವಾಹನವನ್ನು ನಿಲ್ಲಿಸದೇ ಹೋಗಿರುತ್ತಾನೆ.  ಸದ್ರಿ ಡಿಕ್ಕಿಯಿಂದ ಪಿರ್ಯಾದಿದಾರರು ಕಾರಿನ ಮೇಲಿನ ಹಿಡಿತವನ್ನು ಕಳೆದುಕೊಂಡು ಕಾರು ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ ಹತ್ತಿ ಮುಂದೆ ಇರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಆಗಿರುತ್ತದೆ.  ಈ ಅಪಘಾತದ ಪರಿಣಾಮ ಪಿರ್ಯಾದಿದಾರರ ಕಾರು ಜಖಂ ಗೊಂಡು ಯಾವುದೇ ರಕ್ತಗಾಯ ಆಗಿರುವುದಿಲ್ಲ. ಹಾಗೂ ಸದ್ರಿ ಅಪಘಾತದಿಂದ ವಿದ್ಯುತ್ ಕಂಬ ಜಖಂಗೊಂಡಿರುತ್ತದೆ. ಈ  ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 196/2021 ಕಲಂ 279 ಐಪಿಸಿ & 134 (A & B) RW 187 IMV ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಮಣಿಪಾಲ: ದಿನಾಂಕ 24/11/2021 ರಂದು 16:00 ಗಂಟೆ ಸಮಯಕ್ಕೆ ಠಾಣಾ ಎ.ಎಸ್.ಐ  ಶೀನ ಸಾಲಿಯಾನ್‌ ರವರು ಪ್ರೋ.ಪಿ.ಎಸ್.ಐ ವಿನಯ್, ಸಿಬ್ಬಂದಿ ಸಂಗಮೇಶ್ ಮತ್ತು ಅಣ್ಣಪ್ಪರವರೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ  16:00 ಗಂಟೆ ಸಮಯಕ್ಕೆ ನೇತಾಜಿ ನಗರ  ಸಾರ್ವಜನಿಕ ರಸ್ತೆಯಲ್ಲಿ ಆರೋಪಿಗಳಾದ ಶ್ರೇಯಸ್‌, ಪೆಮಿಸ್ಟನ್, ಚೈತನ್ಯ.ಎಸ್.ಕುಂದರ್,  ಮತ್ತು  ಮೊಹಮ್ಮದ್ ಅಬ್ದುಲ್ ರಜಾಕ್ , ರವರು  ಅನುಮಾನಾಸ್ಪದವಾಗಿ ಕಂಡು ಬಂದಿದ್ದು, ಅವರನ್ನು ವಿಚಾರಣೆ ನಡೆಸಿದಾಗ ಅವರ ಬಾಯಿಯಿಂದ ಗಾಂಜಾದ ಘಾಟು ವಾಸನೆ ಬರುತ್ತಿದ್ದು,  ಸದರಿ ಆರೋಪಿಗಳು  ಗಾಂಜಾ ಸೇವಿಸಿದ ಬಗ್ಗೆ ಅನುಮಾನ ಬಂದ  ಕಾರಣ ಎ.ಎಸ್.ಐ ಶೀನ ಸಾಲಿಯಾನ್‌ ರವರು ವಶಕ್ಕೆ  ಪಡೆದು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ  ವೈದ್ಯರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು  ಸದರಿ ಆರೋಪಿಗಳು ಗಾಂಜಾವನ್ನು  ಸೇವಿಸಿದ ಬಗ್ಗೆ ಮಣಿಪಾಲ ಕೆ.ಎಂ.ಸಿ ಪೊರೆನ್ಸಿಕ್ ವಿಭಾಗದ ವೈದ್ಯರು ದಿನಾಂಕ  30/11/2021  ರಂದು ದೃಢ ಪತ್ರ ನೀಡಿರುತ್ತಾರೆ. ಈ  ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 157/2021 ಕಲಂ: 27 (B) NDPS ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ : ದಿನಾಂಕ 30/11/2021 ರಂದು ಪಿ.ಎಸ್‌.ಐ ಗಂಗೊಳ್ಳಿ ಯವರಿಗೆ ದೊರೆತ ಖಚಿತ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ 11:30 ಗಂಟೆಗೆ ತ್ರಾಸಿ ಗ್ರಾಮದ ತ್ರಾಸಿ ಪೆಟ್ರೋಲ್‌ ಬಂಕ್‌ ಹಿಂದುಗಡೆ ತ್ರಾಸಿ ಗಂಗೊಳ್ಳಿ ರಸ್ತೆ ಬದಿಯಲ್ಲಿ ಸಾರ್ವಜನಿಕ ಸ್ಥಳಕ್ಕೆ ಹೋಗಿ ಧಾಳಿ ಮಾಡಿ, ಮಟ್ಕಾ ಜುಗಾರಿ ನಡೆಸುತ್ತಿದ್ದ ನಾಗರಾಜ (40 ವರ್ಷ), ತಂದೆ; ರಾಮ ವಾಸ: ಚರ್ಚ್‌ ರಸ್ತೆ  ತ್ರಾಸಿ ಗ್ರಾಮ, ಕುಂದಾಪುರ ತಾಲೂಕು ಇವರನ್ನು ವಶಕ್ಕೆ ಪಡೆದು ವಿಚಾರಿಸಿದಲ್ಲಿ ತಾನು ಸ್ವಂತ ಲಾಭಕ್ಕೋಸ್ಕರ ಮಟ್ಕ ಚೀಟಿ ಬರೆಯುತ್ತಿರುವುದಾಗಿ ತಿಳಿಸಿದ್ದು, ಮಟ್ಕಾ ಜುಗಾರಿಗೆ ಬಳಸಿದ ಮಟ್ಕ ಚೀಟಿ-1, ಬಾಲ್ ಪೆನ್ನು-1 ಹಾಗೂ 1,010/-ರೂ ನಗದನ್ನು ಸ್ವಾಧೀನ ಪಡಿಸಿಕೊಂಡಿದ್ದು ಈ  ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 110/2021 ಕಲಂ:78(I),78(III) ಕೆ.ಪಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪ್ರಮೋದ್‌ ಕುಮಾರ್‌.ಪಿ, ಪೊಲೀಸ್‌ ನಿರೀಕ್ಷಕರು, ಉಡುಪಿ ನಗರ ಪೊಲೀಸ್‌ ಠಾಣೆ ಇವರು ದಿನಾಂಕ: 30/11/2021 ರಂದು 17:15 ಗಂಟೆಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು 76-ಬಡಗುಬೆಟ್ಟು ಗ್ರಾಮದ ಬೀಡಿನಗುಡ್ಡೆ ಅಂಗನವಾಡಿ ಬಳಿಯ ಗೂಡಂಗಡಿಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿ ಮಟ್ಕಾ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿರುವುದಾಗಿ ಖಚಿತ ಮಾಹಿತಿ ದೊರೆತ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ತೆರಳಿ ಖಚಿತಪಡಿಸಿಕೊಂಡು 17:45 ಗಂಟೆಗೆ ದಾಳಿ ನಡೆಸಿ ಮಟ್ಕಾ ಜುಗಾರಿ ಆಟಕ್ಕೆ ನಡೆಸುತ್ತಿದ್ದ ಪುಷ್ಪರಾಜ್‌ ಶೆಟ್ಟಿ, ಪ್ರಾಯ: 52  ವರ್ಷ, ತಂದೆ: ದಿ|| ಶೇಷಪ್ಪ ಶೆಟ್ಟಿ,  ವಾಸ: ಧೂಮಾವತಿ 2ನೇ ಅಡ್ಡರಸ್ತೆ, ಸಗ್ರಿ,  ಕುಂಜಿಬೆಟ್ಟು ಅಂಚೆ, ಶಿವಳ್ಳಿ  ಗ್ರಾಮ,  ಉಡುಪಿಟಿ ಎಂಬವರನ್ನು ವಶಕ್ಕೆ ಪಡೆದು ಆಪಾದಿತನನ್ನು ವಿಚಾರಿಸಿದಾಗ ತಾನು ಕಮೀಷನ್‌ ಹಣಕೋಸ್ಕರ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟದ ಬಗ್ಗೆ ಹಣವನ್ನು ಸಂಗ್ರಹಿಸುತ್ತಿದ್ದು, ಸಂಗ್ರಹಿಸಿದ ಹಣವನ್ನು ಲಿಯೋ ಎಂಬವರಿಗೆ ಅವರ ಹೆಂಡತಿಯಾದ ಶ್ರೀಮತಿ ಗ್ರೆಟ್ಟಾ ಬಾಯಿ  ಎಂಬುವರಲ್ಲಿ ನೀಡುತ್ತಿರುವುದಾಗಿ ತಿಳಿಸಿರುತ್ತಾನೆ. ಆಪಾದಿತನಿಂದ ಮಟ್ಕಾ ಜುಗಾರಿ ಆಟಕ್ಕೆ ಸಂಗ್ರಹಿಸಿದ ನಗದು ರೂ 4,040/-  ಮತ್ತು ಮಟ್ಕಾ ನಂಬ್ರ ಬರೆದ ಚೀಟಿ- 1,  ಬಾಲ್‌ಪೆನ್‌-1 ಮತ್ತು KA20EW1401ನೇ ಹೋಂಡಾ ಆ್ಯಕ್ಟಿವಾ ಮೋಟಾರ್‌ ಸೈಕಲ್‌, ರೆಡ್‌ಮೀ ಮೊಬೈಲ್‌ ಫೋನ್‌-1, ಸ್ಯಾಮ್‌ಸಂಗ್‌ ಕೀಪ್ಯಾಡ್‌ ಮೊಬೈಲ್‌ ಫೋನ್‌-1 ನ್ನು ಸ್ವಾಧೀನಪಡಿಸಿಕೊಂಡು ಪ್ರಕರಣ ದಾಖಲಿಸಿರುವುದಾಗಿದೆ. ಈ  ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 177/2021 ಕಲಂ: 78 (i) (iii) Karnataka Police (Amendment)  ACT-2021 ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿ ಪ್ರವೀಣ ಇವರು ಪರಿಶಿಷ್ಟ ಜಾತಿಯ ಕೊರಗ ಜನಾಂಗಕ್ಕೆ ಸೇರಿದವರಾಗಿದ್ದು, ಸ್ವಂತ ಆಟೋ ರಿಕ್ಷಾವನ್ನು ಹೊಂದಿರುತ್ತಾರೆ. ದಿನಾಂಕ 28/11/2021 ರಂದು 17:30 ಗಂಟೆಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಜಾಮೀಯ ಮಸೀದಿ ಬಳಿ ರಿಕ್ಷಾ ನಿಲ್ಲಿಸಿ ಗ್ರಾಹಕರಿಗೆ ಕಾಯುತ್ತ ಇರುವಾಗ ಆಪಾದಿತ ಮುನೀರ್‌ ಎಂಬಾತನು ತನ್ನ ರಿಕ್ಷಾದೊಂದಿಗೆ ಬಂದು ಪಿರ್ಯಾದುದಾರರ ರಿಕ್ಷಾಗೆ ಅಡ್ಡ ನಿಲ್ಲಿಸಿ  ರಿಕ್ಷಾ ತೆಗಿ, ನಿಮಗೆ ಇಲ್ಲಿ ನಿಲ್ಲಿಸಲು ಯಾರು ಹೇಳಿದರು, ನೀನು ಕೊರಗ ಇಲ್ಲಿಂದ ಹೋಗು’ ಎಂದು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದ್ದಲ್ಲದೆ, ಇತರ ಮೂರು ಜನ ಸೇರಿ ಹೊಡೆಯಲು ಬಂದಿರುತ್ತಾರೆ ಎಂಬಿತ್ಯಾದಿ. ಈ  ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ 178/2021  ಕಲಂ: 3(1)(r), 3(1)(s)  SC/ST ACT 1989   ಕಲಂ: 341, 504  ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು : ಪಿರ್ಯಾದಿ ಕಾಪ್ಸಿ ನೂರ್ ಮೊಹಮ್ಮದ್ ಇವರ ಚಿಕ್ಕಪ್ಪನ ಮಗಳು ಕಾಪ್ಸಿ ರಾಬಿಯಾ ಪ್ರಾಯ:57 ವರ್ಷ ರವರು ಮದುವೆಯಾಗದೇ ಇದ್ದು ತಮ್ಮ  ಮತ್ತು ತಮ್ಮನ ಹೆಂಡತಿಯ ಜೊತೆಯಲ್ಲಿ ಇದ್ದು ಬುದ್ದಿಮಾಂದ್ಯರಾಗಿರುತ್ತಾರೆ. ದಿನಾಂಕ:12/11/2021 ರಂದು ಕಾಪ್ಸಿ ರಾಬಿಯಾ ರವರು ಮದ್ಯಾಹ್ನ ಸಮಯ ಸುಮಾರು 3:00 ಗಂಟೆಗೆ ಬಚ್ಚಲು ಮನೆಯ ಸ್ನಾನಕ್ಕೆ ಹೋದಾಗ ಬಚ್ಚಲು ಮನೆಯ ಒಲೆಯ ಬೆಂಕಿಯು ಕಾಪ್ಸಿ ರಾಬಿಯಾರವರು ಧರಿಸಿದ ಬಟ್ಟೆಗೆ ತಗುಲಿಕೊಂಡು ಉರಿಯುತ್ತಿರುವುದನ್ನು ಕಂಡು ಕಾಪ್ಸಿ ರಾಬಿಯ ತಮ್ಮನ ಹೆಂಡತಿ ಕಾಪ್ಸಿ ಸಯಿದಾರವರು ನೀರು ಹಾಕಿ ಬೆಂಕಿ ನಂದಿಸಿದ್ದು ಮೈ ಸುಟ್ಟು ಹೋಗಿದ್ದರಿಂದ ಚಿಕಿತ್ಸೆ ಬಗ್ಗೆ ಭಟ್ಕಳ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು ಕಾಪ್ಸಿ ರಾಬಿಯಾರವರು ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 30-11-2021 ರಂದು ಮಧ್ಯಾಹ್ನ 3:15 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 49/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 01-12-2021 10:46 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080