ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ ಪ್ರಕರಣ

  • ಕೋಟ: ಪಿರ್ಯಾದಿ ಶೇಖರ ದೇವಾಡಿಗ ಇವರ ಮಗನಾದ ಅಭಿಷೇಕ ದೇವಾಡಿಗ ಪ್ರಾಯ 21 ವರ್ಷ ಈತನು ಐಟಿಐ ವ್ಯಾಸಂಗವನ್ನು ಮುಗಿಸಿ ಬೆಂಗಳೂರು ಕಡೆಯಲ್ಲಿ  ಕೆಲಸಮಾಡಿಕೊಂಡು ಅನಂತರ ಕಳೆದ ಸುಮಾರು ಒಂದು ವರ್ಷದ ಹಿಂದೆ ಉಡುಪಿಯ ಸೋನಿ ಶೋರೂಂ ನಲ್ಲಿ ಕೆಲಸವನ್ನು ಮಾಡಿಕೊಂಡಿದ್ದವನು ಅಲ್ಲಿಂದ ಕೆಲಸವನ್ನು ಬಿಟ್ಟು  ಕಳೆದ ಸುಮಾರು 15 ದಿನಗಳಿಂದ ಮನೆಯಲ್ಲಿಯೇ ಇದ್ದನು  ದಿನಾಂಕ 29/11/2021 ರಂದು ಬೆಳಿಗ್ಗೆ 09.30 ಗಂಟೆಗೆ ಉಡುಪಿಗೆ ಹೋಗಿ ಬರುವುದಾಗಿ  ಹೇಳಿ ಮನೆಯಿಂದ ಹೊರಗೆ ಹೋಗಿದ್ದು ಮಧ್ಯಾಹ್ನದ ಸಮಯವಾದರೂ ಮನೆಗೆ ಬಾರದೇ ಇದ್ದಾಗ ಮಧ್ಯಾಹ್ನ 01.00 ಗಂಟೆಯ ಸುಮಾರಿಗೆ  ಸಂಬಂಧಿ ರೂಪಾರವರು ಅಭಿಷೇಕನ ಮೊಬೈಲ್ ಗೆ ಕರೆ ಮಾಡಿದಾಗ ಮನೆಗೆ ಬರುವುದಾಗಿ ತಿಳಿಸಿದ್ದು ಕೆಲವು ಹೊತ್ತಾದರೂ ಮನೆಗೆ ಬಾರದೇ ಇದ್ದುದನ್ನು  ಕಂಡು  ಪಿರ್ಯಾದಿದಾರರು ಮನೆಗೆ ಬಂದು ವಿಚಾರಿಸಿ ನೆರೆಕೆರೆಯವರಲ್ಲಿ ಸಂಬಂಧಿಕರಲ್ಲಿ ಆತನ ಸ್ನೇಹಿತ ರಲ್ಲಿ ವಿಚಾರಿಸಿದಲ್ಲಿ ಈ ತನಕ ಪತ್ತೆಯಾಗಿರುವುದಿಲ್ಲ. ಈ  ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 205/2021 ಕಲಂ:ಹುಡುಗ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಕುಂದಾಪುರ: ಪಿರ್ಯಾದಿ ರಮೇಶ್‌ ಕುಮಾರ ಇವರು ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿರುವ ಓರಾ ಫೈನ್‌ ಜ್ಯುವೆಲರಿ. ಪ್ರೈ. ಲಿ . ಸಂಸ್ಥೆಯ ಬಾಬ್ತು ಚಿನ್ನ ಮತ್ತು ವಜ್ರಾಭರಣಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಯನ್ನು ಕುಂದಾಪುರ ತಾಲ್ಲೂಕಿನ  ಕೋಟೇಶ್ವರದ ಯುವ ಮೆರಿಡಿಯನ್‌ ಬ್ಯಾಂಕೆಟ್‌ ಹಾಲ್‌ನಲ್ಲಿ ದಿನಾಂಕ:  27/11/2021 ರಿಂದ 29/11/2021ವರೆಗೆ 3 ದಿನಗಳ ಕಾಲ ತೆರೆದಿದ್ದು ದಿನಾಂಕ 29-11-2021 ರಂದು 12:17 ಗಂಟೆಯಿಂದ 12:20 ಗಂಟೆ ಸಮಯದಲ್ಲಿ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷನು ಗ್ರಾಹಕರಂತೆ ಮಾರಾಟ ಮಳಿಗೆಗೆ  ಬಂದು  2 ಜೊತೆ ಚಿನ್ನದ ಬಳೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಸಿಸಿಟಿವಿ ಪೋಟೇಜ್‌ ಪರಿಶೀಲನೆ ವೇಳೆ ಗೊತ್ತಾಗಿದ್ದು  ಕಳವಾದ  2 ಚಿನ್ನದ ಬಳೆಗಳು ಸುಮಾರು 43 ಗ್ರಾಂ ಇದ್ದು, ಅವುಗಳ ಅಂದಾಜು ಮೌಲ್ಯ ರೂ 2,86,000/- ಆಗಬಹುದು. ಈ  ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 128/2021  ಕಲಂ: 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

  • ಬೈಂದೂರು: ಫಿರ್ಯಾದಿ ಮಂಜುನಾಥ ಪೂಜಾರಿ ಇವರು ಕೆರ್ಗಾಲು ಗ್ರಾಮದ ಶ್ರೀ ವನದುರ್ಗ ದೇವಿ ದೇವಸ್ಥಾನದ ಮೇಲ್ವಿಚಾರಕರಾಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 30-11-2021 ರಂದು ದೇವಸ್ಥಾನದ ಪೂಜಾ ಕಾರ್ಯಗಳು ಮುಗಿದ ಬಳಿಕ ರಾತ್ರಿ 9:30 ಗಂಟೆಗೆ ದೇವಸ್ಥಾನದ ಬಾಗಿಲು ಹಾಕಿ ಹೋಗಿದ್ದು ನ ದಿನಾಂಕ 01-12-2021 ರಂದು ಬೆಳಿಗ್ಗೆ 05:30 ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯಲು ಹೋದಾಗ ಯಾರೋ ಕಳ್ಳರು  ದೇವಸ್ಥಾನದ  ಮುಖ್ಯ ದ್ವಾರದ ಬಾಗಿಲಿಗೆ ಹಾಕಿದ  ಬೀಗವನ್ನುತುಂಡು ಮಾಡಿ ದೇವಸ್ಥಾನದ ಒಳಗೆ ಪ್ರವೇಶಿಸಿ ದೇವಸ್ಥಾನದ ಒಳಗೆ ಇದ್ದ 3 ಸ್ಟೀಲ್ ನ ಕಾಣಿಕೆ ಹುಂಡಿಗಳನ್ನು ಒಡೆದು ಸುಮಾರು 20,000/- ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ  ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 191/2021  ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 01-12-2021 06:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080