ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಶಂಕರನಾರಾಯಣ: ದಿನಾಂಕ 31.10.2022  ರಂದು ಫಿರ್ಯಾದಿ ಸಂತೋಷ  ಪೂಜಾರಿ   ಇವರು  ಕೆಎ, 20 ಬಿ.4347 ನೇ ನಂಬ್ರದ ಗೂಡ್ಸ  407 ಟೆಂಪೋದಲ್ಲಿ   ಬೀಜಾಡಿ ಎಂಬಲ್ಲಿದ   ಟೈಲ್ ಮತ್ತು   ಗ್ರಾನೇಟ್  ತುಂಬಿಸಿಕೊಂಡು  ಅದರಲ್ಲಿ ಕ್ಲೀನರ್   ಹಾಗೂ ಲೋಡರ ಆದ  ಶಿವ ಭಾದು ಷಾ  ಎಂಬುವರನ್ನು ಹಿಂಬದಿ  ಕುಳ್ಳಿರಿಸಿಕೊಂಡು 16;00  ಘಂಟೆಗೆ  ಕುಂದಾಪುರ  ತಾಲೂಕಿನ ಸಿದ್ದಾಪುರ ಗ್ರಾಮದ ಹೆಗ್ಗೇರಿ  ಕ್ರಾಸ್ ಎಂಬಲ್ಲಿ ವಾಹನವನ್ನು  ತಿರುಗಿಸುತ್ತಿರುವಾಗ ಹಿಂದುಗಡೆಯಿದ  ಅಂದರೆ ಕುಂದಾಪುರ  ಕಡೆಯಿಂದ  ಕೆಎ.20 ಸಿ.6090 ನೇ ನಂಬ್ರದ    ಲಾರಿಯನ್ನು ಅದರ ಚಾಲಕ ಅತೀ ವೇಗ ಹಾಗೂ  ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು  ಕೆಎ, 20 ಬಿ.4347ನೇ ನಂಬ್ರದ ಗೂಡ್ಸ 407 ಟೆಂಪೋಕ್ಕೆ ಹಿಂಬದಿಯಿಂದ  ಡಿಕ್ಕಿ  ಹೊಡೆದಿರು ತ್ತಾನೆ, ಇದರ  ಪರಿಣಾಮ  ಕೆಎ, 20 ಬಿ.4347ನೇ  ನಂಬ್ರದ  ಗೂಡ್ಸ  407 ಟೆಂಪೋದ ಹಿಂಬದಿ   ಜಖಂಗೊಂಡು ಅದರೊಳಗೆ   ಇದ್ದ  ಟೈಲ್ಸ  ಹಾಗೂ ಗ್ರಾನೇಟ್  ಜಖಂಗೊಂಡು ಹಿಂಬದಿ ಕುಳಿತ್ತಿದ್ದ ಶಿವ ಭಾದು ಷಾ  ಈತನಿಗೆ  ತೀವ್ರ ಸ್ವರೂಪದ ಗಾಯವಾಗಿದ್ದು, ಚಿಕಿತ್ಸೆಯ  ಬಗ್ಗೆ  ಕುಂದಾಪುರ ಸರಕಾರಿ ಆಸ್ಪತ್ರೆಗೆ 108 ವಾಹನದಲ್ಲಿ ಕರೆದು ಕೊಂಡು  ಹೋದಾಗ  ಅಲ್ಲಿ  ಶಿವ  ಬಾಧು ಷಾ ಈತನನ್ನು  ಪರೀಕ್ಷಿಸಿದ  ವೈಧ್ಯರು  ಮೃತಪಟ್ಟಿರುತ್ತಾರೆ ಎಂದು  ತಿಳಿಸಿರುತ್ತಾರೆ . ಅಪಘಾತ  ಸಮಯ  ಲಾರಿ ಚಾಲಕ  ಗಾಯಾಳುವಿಗೆ  ಯಾವುದೇ   ಆರೈಕ  ಮಾಡದೇ   ಹತ್ತಿರದ ಪೊಲೀಸ್ ಠಾಣೆಗೆ ಯಾವುದೇ ಮಾಹಿತಿ  ನೀಡದೇ   ಲಾರಿಯನ್ನು  ಸ್ಥಳದಲ್ಲಿ ಬಿಟ್ಟು ಪರಾರಿ ಆಗಿರುತ್ತಾನೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 114/2022  ಕಲಂ: 279,304(ಎ)    ಐ.ಪಿಸಿ   134(ಎ&ಬಿ)  ಮೊ.ವಾ  ಕಾಯ್ದೆ ಯಂತೆ  ಪ್ರಕರಣ ದಾಖಲಾಗಿರುತ್ತದೆ.
  • ಅಮಾಸೆಬೈಲು: ಫಿರ್ಯಾದಿ ರೆಹಮಾನ್ ಹೆಚ್ ಇವರು ವೈಶಾಲಿ ಕನ್ಸ್ ಸ್ಟ್ರಕ್ಷನ್ ರಲ್ಲಿ ರಸ್ತೆ ಕಾಮಗಾರಿ ಕೆಲಸ ಮಾಡುತ್ತಿದ್ದು ದಿನಾಂಕ 30-10-2022 ರಂದು ಹೊಸಂಗಡಿ ಗ್ರಾಮದ ಬಾಳೆಬರೆ ಘಾಟಿ ರಸ್ತೆಯಲ್ಲಿ ಬೀರನ ಬೈಲು ಕ್ರಾಸ್ ಬಳಿ ಹೊಸಂಗಡಿ ಹುಲಿಕಲ್ ರಸ್ತೆಯಲ್ಲಿ ರಸ್ತೆ ಕಾಮಗಾರಿ ಕೆಲಸ ಮಾಡುತ್ತಿರುವಾಗ 17:15  ಗಂಟೆ ಸಮಯಕ್ಕೆ TATA HITACHI E/70 ನೇದರ  ಚಾಲಕ ಹಿಟಾಚಿಯನ್ನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಹಿಟಾಚಿಯು ಫಿರ್ಯಾದಿದಾರರ ಎಡಕಾಲಿನ ಮೇಲೆ ಚಲಿಸಿದ ಪರಿಣಾಮ ಎಡಕಾಲಿನ ಮೊಣಗಂಟಿನ  ಕೆಳಗೆ ರಕ್ತ ಗಾಯವಾಗಿದ್ದು ಫಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ  ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 28/2022  ಕಲಂ 279, 337,  ಐಪಿಸಿ ಯಂತೆ  ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಫಿರ್ಯಾದಿ ಪ್ರಕಾಶ್‌ ಜೋಗಿ ಇವರು ದಿನಾಂಕ: 31.10.2022 ರಂದು ಸಂಜೆ ಸಮಯ 6:10 ಗಂಟೆಗೆ ರಾ.ಹೆ. 66 ಉಡುಪಿ - ಕುಂದಾಪುರ ಮುಖ್ಯರಸ್ತೆಯ ಪಶ್ಚಿಮ ದಿಕ್ಕಿನ ಸರ್ವಿಸ್‌ ರಸ್ತೆಯಲ್ಲಿರುವ ತಮ್ಮ ಅಂಗಡಿಯ ಮುಂದೆ ನಿಂತುಕೊಂಡಿರುವಾಗ ಉದಯ ಜೋಗಿ (63 ವರ್ಷ) ಎಂಬವರು ತಮ್ಮ ಬಾಬ್ತು ನಂ. KA 20 EP 7807 ನೇ ಸ್ಕೂಟಿಯನ್ನು ಶ್ರೀಅಮೃತೇಶ್ವರಿ ದೇವಸ್ಥಾನ ಕಡೆ ರಸ್ತೆಯಿಂದ ಸವಾರಿ ಮಾಡಿಕೊಂಡು ಬಂದು ರಾ.ಹೆ. 66 ರ ಉಡುಪಿ - ಕುಂದಾಪುರ ಮುಖ್ಯರಸ್ತೆ ದಾಟಿ ಉಡುಪಿ ಕಡೆಗೆ ಹೋಗುವರೇ ರಸ್ತೆಮಧ್ಯೆ ಸ್ಕೂಟಿ ನಿಲ್ಲಿಸಿಕೊಂಡಿರುವಾಗ, ರಾ.ಹೆ. 66 ಕುಂದಾಪುರ - ಉಡುಪಿ ಮುಖ್ಯರಸ್ತೆಯಲ್ಲಿ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ನಂ. KA 20 EX 1449 ನೇ ಮೋಟಾರ್‌ ಸೈಕಲ್‌ ಅನ್ನು ಅದರ ಸವಾರ ಸುದೀಪನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ತನ್ನ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ರಸ್ತೆ ದಾಟಲು ನಿಂತಿದ್ದ ಉದಯ ಜೋಗಿ ರವರ ಸ್ಕೂಟಿಗೆ ಢಿಕ್ಕಿ ಹೊಡೆದನು. ಅಪಘಾತದಲ್ಲಿ 2 ದ್ವಿಚಕ್ರ ವಾಹನದ ಸವಾರರು ರಸ್ತೆಗೆ ಬಿದ್ದಿದ್ದು ಪರಿಣಾಮ ಸ್ಕೂಟಿ ಸವಾರ ಉದಯ ಜೋಗಿ ರವರ ಎಡಕಾಲಿನ ಮೂಳೆ ಮುರಿತ ಮತ್ತು ಇತರ ಕಡೆಗಳಿಗೆ ತರಚಿದ ಗಾಯಗಳೂ ಹಾಗೂ ಬೈಕ್‌ ಸವಾರ ಸುದೀಪನಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತದೆ. ಗಾಯಾಳುಗಳನ್ನು ಖಾಸಗಿ ಆಂಬುಲೆನ್ಸ್ ನಲ್ಲಿ ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ದಾಖಲಿಸಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 189/2022 ಕಲಂ: 279, 338 ಐಪಿಸಿ ಯಂತೆ  ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ದಿನಾಂಕ 29/10/2022 ರಂದು ಸಂಜೆ ಸಮಯ ಫಿರ್ಯಾದಿ ದೀಪಕ್‌ ಹಣಬ ಇವರಿಗೆ ಉಮೇಶ ಮಲ್ಯ ರವರು ಕರೆ ಮಾಡಿ ಫಿರ್ಯಾದುದಾರರ ತಂದೆ ಮಂಜುನಾಥ ಹಣಬ ರವರಿಗೆ ಅಪಘಾತವಾಗಿರುವುದಾಗಿ ಚಿಕಿತ್ಸೆಯ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದಂತೆ, ಫಿರ್ಯಾದು ಕುಂದಾಪುರ ಸರಕಾರಿ ಆಸ್ಪತ್ರೆಗೆ ಹೋದಾಗ, ಉಮೇಶ ಮಲ್ಯ ರವರು ಫಿರ್ಯಾದುದಾರರಿಗೆ, ಮಂಜುನಾಥ ಹಣಬರ ರವರು ತಮ್ಮ ಮೊಟಾರು ಸೈಕಲ್ ನಂಬ್ರ KA20EB8317 ರಲ್ಲಿ ರಾಹೆ 66 ನೇದರ ಪೂರ್ವ ಬದಿಯ ರಸ್ತೆಯಲ್ಲಿ ಬೈಂದೂರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ, ಸಂಜೆ 5:30 ಗಂಟೆಗೆ ಭಟ್ಕಳ ಕಡೆಯಿಂದ ಕಾರು ನಂಬ್ರ KA20MC5904 ನೇಯದನ್ನು ಚಾಲಕ ಅಬ್ದುಲ್ ಝಮೀರ್ ರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶಿರೂರು ಗ್ರಾಮದ ಬುಕಾರಿ ಕಾಲೋನಿ ದರ್ಗಾದ ಬಳಿ ಒಮ್ಮೇಲೆ ಯಾವುದೇ ಸೂಚನೆಯನ್ನು ನೀಡದೇ ರಸ್ತೆ ಎಡಕ್ಕೆ ತಿರುಗಿಸಿ ಚಲಾಯಿಸಿದಾಗ, ಮಂಜುನಾಥ ಹಣಬರ ರವರು ಚಲಾಯಿಸಿಕೊಂಡಿದ್ದ ಮೋಟಾರು ಸೈಕಲ್ ಕಾರಿನ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ, ಮಂಜುನಾಥ ಹಣಬರ ರವರು ಮೊಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು, ತಲೆಗೆ ರಕ್ತಗಾಯ,  ಎಡಭುಜ ಹಾಗೂ ಮುಖಕ್ಕೆ ತರಚಿದ ಗಾಯ ವಾಗಿದ್ದು, ಚಿಕಿತ್ಸೆಯ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾಗಿ ತಿಳಿಸಿರುತ್ತಾರೆ.  ಮಂಜುನಾಥ ಹಣಬರ ರವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 216/2022 ಕಲಂ. 279 , 337 ಐಪಿಸಿ ಯಂತೆ  ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ದಿನಾಂಕ: 30/10/2022 ರಂದು ರಾತ್ರಿ  ವಿನಯ ಎಂ ಕೊರ್ಲಹಳ್ಳಿ, ಪೊಲೀಸ್ ಉಪನಿರೀಕ್ಷಕರು,ಗಂಗೊಳ್ಳಿ ಪೊಲಿಸ್ ಠಾಣೆ ಇವರು ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಸಮೀಪದ ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಬಂಕ್‌ ಬಳಿ 5 ಜನ ಅನುಮಾನಾಸ್ಪದ ವ್ಯಕ್ತಿಗಳು ಇರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ದಿನಾಂಕ: 31/10/2022 ರಂದು 00:05 ಗಂಟೆಗೆ ಕುಂದಾಪುರ ತಾಲೂಕು ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಸಮೀಪದ ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಬಂಕ್‌ ನಿಂದ ಸ್ವಲ್ಪ ಹಿಂದೆ ಜೀಪನ್ನು ನಿಲ್ಲಿಸಿ ನೋಡಲಾಗಿ ರಾ.ಹೆ-66 ರ ರಸ್ತೆಯ ಬದಿಯಲ್ಲಿ ಒಂದು ಸಿಲ್ವರ್‌ ಬಣ್ಣದ ಕಾರು ನಿಂತಿದ್ದು, ಅಲ್ಲಿ 5 ಜನರು ಇದ್ದು, ಅವರಲ್ಲಿ ಮೂವರು ಮುಖಕ್ಕೆ ಕರ್ಚಿಪ್‌ ಕಟ್ಟಿಕೊಂಡಿದ್ದು, ಇಬ್ಬರು ತಮ್ಮ ಕೈಯಲ್ಲಿ ಮರದ ದೊಣ್ಣೆಗಳನ್ನು ಹಿಡಿದುಕೊಂಡು ನಿಂತಿರುವುದು ಕಂಡು ಬಂದಿರುತ್ತದೆ.  ಸಮವಸ್ತ್ರದಲ್ಲಿದ್ದ ಪಿರ್ಯಾದಿದಾರರನ್ನು  ಕಂಡು ದೊಣ್ಣೆಯನ್ನು ಅಲ್ಲಿಯೇ ಬಿಸಾಡಿ, ಓಡಿ ಹೋಗಿದ್ದು ಇವರುಗಳಲ್ಲಿ  ಇಬ್ಬರನ್ನು ಗುರುತಿಸಿದ್ದು ಪರಿಚಯದ ರಿಲ್ವಾನ್‌@ ರಿಝ್ವಾನ್‌ ಹಾಗೂ ಮೊಹಮ್ಮದ್‌ ಆಸಿಫ್‌ ಎಂಬವರಾಗಿರುತ್ತಾರೆ. ನಂತರ ಬಿಟ್ಟು ಹೋದ ಕಾರನ್ನು ಪರಿಶೀಲಿಸಿದಲ್ಲಿ ಕಾರಿನಲ್ಲಿ 2 ಪ್ಯಾಕೇಟ್ ಮೆಣಸಿನ ಹುಡಿ ಹಾಗೂ ಆಪಾದಿತ 2 ನೇಯವನ ಬಾಬ್ತು ಆಧಾರ ಕಾರ್ಡ, ಬ್ಯಾಂಕ್‌ ಪಾಸ್‌ಪುಸ್ತಕ, ಚೆಕ್‌ಪುಸ್ತಕ ಇರುವುದು ಕಂಡುಬಂದಿರುತ್ತದೆ. ಆಪಾದಿತರಾದ ರಿಲ್ವಾನ್@ರಿಝ್ವಾನ್ , ಮೊಹಮ್ಮದ್ ಆಸಿಫ್ ಹಾಗೂ ಇತರ ಅಪರಿಚಿತ 3 ಜನರು ಸೇರಿ ರಾ.ಹೆ -66 ರಲ್ಲಿ ದರೋಡೆ ಮಾಡುವ ಉದ್ದೇಶದಿಂದ ಮಾರಕ ಆಯುಧಗಳನ್ನು ಹಿಡಿದುಕೊಂಡು ಸೇರಿರುವುದಾಗಿದೆ ಎಂಬಿತ್ಯಾದಿಯಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 97/2022 ಕಲಂ: 399, 402 ಐಪಿಸಿ ಯಂತೆ  ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ

  • ಗಂಗೊಳ್ಳಿ: ಫಿರ್ಯಾದಿದಾರರಾದ  M ವಿನಾಯಕ ರಾವ್‌ ರವರ ಮಗನಾದ  ವಿಜಯ ಕುಮಾರ್‌ M (33 ವರ್ಷ), ರವರು ದಿನಾಂಕ: 25.10.2022 ರಂದು ಬೆಳಿಗ್ಗೆ 08:30 ಗಂಟೆಗೆ ಬೈಂದೂರು  ತಾಲೂಕು ಮರವಂತೆ  ಗ್ರಾಮದ ಮೂಡು ಮರವಂತೆ ಎಂಬಲ್ಲಿರುವ ಪಿರ್ಯಾದಿದಾರರ ಮನೆಯಿಂದ  ತಲ್ಲೂರು SCDCC ಬ್ಯಾಂಕ್‌ಗೆ ಕೆಲಸಕ್ಕೆ  ಹೋದವರು  ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ.  ಈ ಬಗ್ಗೆ ಸಂಬಂಧಿಕರಲ್ಲಿ  ಹಾಗೂ ಅವರ ಸ್ನೇಹಿತರಲ್ಲಿ ವಿಚಾರಿಸಿ ಹುಡುಕಾಡಿದಲ್ಲಿ ಈ ತನಕ ಪತ್ತೆಯಾಗಿರುವುದಿಲ್ಲ.  ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 98/2022  ಕಲಂ: ಗಂಡಸು   ಕಾಣೆ ಯಂತೆ  ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 01-11-2022 10:20 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080