ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಅಜೆಕಾರು. ಪಿರ್ಯಾದಿದಾರರಾದ ಲಾರೆನ್ಸ್ ರೂಬನ್ (23)ರವರು ದಿನಾಂಕ: 31/10/2022 ರಂದು ಸಂಜೆ ಸುಮಾರು 4:50 ಗಂಟೆಗೆ ತನ್ನ ಬಾಬ್ತು  KA 20 EG 8920  ನೇ  ಸ್ಕೂಟರ್ ನಲ್ಲಿ ಅಜೆಕಾರು ಪೇಟೆಯಿಂದಾಗಿ ಅಜೆಕಾರು ಸೇಕ್ರೆಡ್ ಹಾರ್ಟ್ ಚರ್ಚ್ ಗೆ ಹೋಗುವರೇ ತನ್ನಸ್ಕೂಟರನ್ನು ಬಲಕ್ಕೆ ತಿರುಗಿಸಿ ಚರ್ಚ್ ನ ದ್ವಾರದ ಸಮೀಪ ರಸ್ತೆಯ ಬಲಭಾಗದ ಬದಿಯಲ್ಲಿ ತಿರುಗಿಸುತ್ತಿರುವಾಗ ಕಾರ್ಕಳ ಕಡೆಯಿಂದ ಅಜೆಕಾರು ಕಡೆಗೆ ಓರ್ವ ಟೆಂಪೂ ಚಾಲಕನು ತನ್ನ ಬಾಬ್ತು ಟೆಂಪೋವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿಯ ಬಾಬ್ತು ಸ್ಕೂಟರ್ ನ ಹಿಂಬದಿಯ ಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಕೆಳಗೆ ರಸ್ತೆಗೆ ಬಿದ್ದ ಪರಿಣಾಮ ಎಡಗೈ ಮುಂಗಟ್ಟು.ಎಡಗಾಲಿನ ಗಂಟಿಗೆ ,ತಲೆಯ ಎಡಭಾಗಕ್ಕೆ ಹಾಗೂ ಬಲಗೈ ಹಾಗೂ ಎದೆಗೆ  ತರಚಿದ ಗಾಯ ಉಂಟಾಗಿದ್ದು, ಪಿರ್ಯಾದಿದಾರರು ಟೆಂಪೂ ವಾಹನದ ನಂಬ್ರ ನೋಡಲಾಗಿ  KA 20 B 3170 ನೇ ದಾಗಿದ್ದು  , ಈ ಅಪಘಾತಕ್ಕೆ KA 20 B 3170 ನೇ ಟೆಂಪೂ ಚಾಲಕ ದಿವಾಕರರವರ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ  ಕಾರಣವಾಗಿರುತ್ತದೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 34/2022 ಕಲಂ 279, 337 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ

 • ಕಾರ್ಕಳ: ಪ್ರಕರಣದ ಸಾರಾಂಶವೇನೆಂದರೆ  ಶ್ರೇಯಸ್ ಪ್ರಾಯ : 23 ವರ್ಷ ಇವರು ರವರು ಮೂಡಬಿದ್ರೆಯ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂ.ಬಿ.ಎ ವ್ಯಾಸಾಂಗ ಮಾಡುತ್ತಿದ್ದು ರಜೆಯಲ್ಲಿ ಇಂಟೆನ್ ಶಿಫ್ ಮಾಡಲು ದಿನಾಂಕ: 31.10.2022 ರಂದು ಬೆಳಗ್ಗೆ 10:00 ಗಂಟೆಗೆ ಕಾರ್ಕಳದಿಂದ ಮಂಗಳೂರಿಗೆ ಹೋಗುವುದಾಗಿ ಹೊರಟಿದ್ದು, ಪಿರ್ಯಾದಿ ಸತೀಶ್ ಎಸ್ ಮಾಬೆನ್ ಇವರು ಕಾರ್ಕಳ ಬಸ್ ನಿಲ್ದಾಣಕ್ಕೆ ಶ್ರೇಯಸ್ ರವರನ್ನು ಬಿಟ್ಟಿರುತ್ತಾರೆ. ಆದರೆ ಶ್ರೇಯಸ್ ರವರು ಸಂಜೆಯಾದರು ಪೋನ್ ಮಾಡದೇ, ಮನೆಗೂ ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಕಾಲೇಜಿನಲ್ಲಿ ವಿಚಾರಿಸಿದಾಗ ಶ್ರೇಯಸ್ ರವರು ಅಲ್ಲಿಗೆ ಬಂದಿರುವುದಿಲ್ಲವಾಗಿ  ತಿಳಿಸಿರುತ್ತಾರೆ.ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 136/2022  ಕಲಂ ಗಂಡಸು ಕಾಣೆ ಯಂತೆ  ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ ‌

 • ಕಾರ್ಕಳ: ದಿನಾಂಕ: 01-11-2022 ರಂದು ಫಿರ್ಯಾದುದಾರರಾದ  ದಿನೇಶ ನಾಯ್ಕ ಎಂಬವರ ತಂದೆ ರಾಮಕೃಷ್ಣ ನಾಯ್ಕ ಪ್ರಾಯ 54 ವರ್ಷ ಎಂಬವರು ಎಂದಿನಂತೆ ಬೆಳಿಗ್ಗೆ 05-00 ಗಂಟೆಗೆ ಮನೆಯಿಂದ  ರಸ್ತೆ ಬದಿ ಬಿದ್ದಿದ್ದ  ಗುಜುರಿ ವಸ್ತುಗಳನ್ನು ಹೆಕ್ಕಲು ಹೋಗಿದ್ದು ಬೆಳಿಗ್ಗೆ 07-15 ಗಂಟೆಗೆ ಪರಿಚಯದವರು ಫೋನ್  ಮಾಡಿ ಫಿರ್ಯಾದುದಾರರ  ತಂದೆ ಕುಕ್ಕುಂದೂರು ಗ್ರಾಮದ ಜೋಡುರಸ್ತೆ  ಎಂಬಲ್ಲಿ  ಸುರೇಶ ಎಂಬವರ  ಹೂವಿನ ಅಂಗಡಿಯ ಹತ್ತಿರ ರಸ್ತೆಯ ಬಿದಿಯಲ್ಲಿ  ಗುಜುರಿ  ಹೆಕ್ಕುತ್ತಿದ್ದ ಪ್ಲಾಸ್ಟಿಕ್ ಗೋಣಿ ಚೀಲದ ಮೇಲೆ ಬಿದ್ದುಕೊಂಡಿರುತ್ತಾರೆಂದು ತಿಳಿಸಿದ್ದು ಸ್ಥಳಕ್ಕೆ  ಬಂದು ನೋಡಿದಾಗ ಹತ್ತಿರದಲ್ಲಿರುವ ವಿದ್ಯುತ್ ಕಂಬದಲ್ಲಿ  ವಿದ್ಯುತ್ ತಂತಿ ತುಂಡಾಗಿ ನೆಲಮಟ್ಟದವರೆಗೆ ನೇತಾಡುತ್ತಿದ್ದು, ತಂದೆಯನ್ನು ಕೂಡಲೇ ಕಾರ್ಕಳ ಸರಕಾರಿ ಆಸ್ಪತ್ರೆಗೆ  ಕರೆದುಕೊಂಡು ಹೋದಾಗ  ವೈದ್ಯರು ತಂದೆಯು ಮೃತಪಟ್ಟಿರುವುದಾಗಿ ತಿಳಿಸಿದರು.  ಫಿರ್ಯಾದುದಾರರ ತಂದೆಯು ಈ ದಿನ ದಿನಾಂಕ 01-11-2022 ರಂದು ಬೆಳಿಗ್ಗೆ  05-00 ಗಂಟೆಯಿಂದ ಬೆಳಿಗ್ಗೆ 07-15 ಗಂಟೆಯ ಮಧ್ಯೆ ಗುಜುರಿ ವಸ್ತುಗಳನ್ನು ಹೆಕ್ಕುತ್ತಿರುವ ಸಮಯ ಕುಕ್ಕುಂದೂರು ಗ್ರಾಮದ ಜೋಡುರಸ್ತೆ ಸುರೇಶರವರ ಅಂಗಡಿ ಬಳಿ ವಿದ್ಯುತ್ ಕಂಬದಲ್ಲಿ ನೇತಾಡುತ್ತಿದ್ದ ವಿದ್ಯುತ್ ವಯರನ್ನು ಆಕಸ್ಮಿಕವಾಗಿ ಮುಟ್ಟಿದ ಪರಿಣಾಮ ವಿದ್ಯುತ್ ಶಾಕ್‌ನಿಂದ ಮೃತಪಟ್ಟಿದ್ದಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಯು.ಡಿ.ಆರ್ 48/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಪಡುಬಿದ್ರಿ: ಪಿರ್ಯಾದಿ ರಾಧಕೃಷ್ಣ ಗಡಿಯಾರ ಇವರ ತಾಯಿ ಜಯಂತಿ ಎಸ್‌ ಗಡಿಯಾರ (54) ಎಂಬುವರು ಎಸ್.ಕೋಡಿಯ ಖಾಸಗಿ ಶಾಲೆಯಲ್ಲಿ   ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದು, ಕಳೆದ ತಿಂಗಳು ಅಕ್ಟೋಬರ್ 19 ನೇ ತಾರೀಕಿನಿಂದ ತಮಗೆ ವಿಪರೀತ ಮಾನಸಿಕ ಒತ್ತಡ ಆಗುತ್ತಿರುವುದಾಗಿ ತಿಳಿಸಿ ಕೆಲಸಕ್ಕೆ ಹೋಗಿರುವುದಿಲ್ಲ. ನಂತರ ಈ ಬಗ್ಗೆ  ಬೆಳ್ಮಣ್‌‌ನ ವೈದ್ಯರಲ್ಲಿ ಚಿಕಿತ್ಸೆ ಕೊಡಿಸಿದ್ದು, ನಂತರ ವೈದ್ಯರ ಸಲಹೆಯಂತೆ ಸ್ಥಳ ಬದಲಾವಣೆಗಾಗಿ ಬೆಂಗಳೂರಿನಲ್ಲಿರುವ ಪಿರ್ಯಾದಿದಾರರ ಅಕ್ಕನ ಮನೆಗೆ ಹೋಗಿ, ಅಲ್ಲಿ ಚಿಕಿತ್ಸೆ ಕೊಡಿಸಿದ್ದು, ನಿನ್ನೆ ದಿನ ದಿನಾಂಕ: 31.10.2022 ರಂದು ವಾಪಾಸ್ಸು ಕಾಪು ತಾಲೂಕು ಹೆಜಮಾಡಿ ಗ್ರಾಮದಲ್ಲಿರುವ ಅವರ ಮನೆಗೆ ಬಂದಿರುತ್ತಾರೆ. ನಂತರ ನಿನ್ನೆ ದಿನ ದಿನಾಂಕ: 31.10.2022 ರಂದು ರಾತ್ರಿ 10:00 ಗಂಟೆಯ ವೇಳೆಗೆ ಊಟ ಮಾಡಿ ಮಲಗಿದ್ದು, ನಂತರ ದಿನಾಂಕ: 01.11.2022 ರಂದು ಮಧ್ಯರಾತ್ರಿ 02:20 ಗಂಟೆಯ ಮಧ್ಯಾವಧಿಯಲ್ಲಿ ಜಯಂತಿ ಎಸ್‌ ಗಡಿಯಾರ ರವರು ಅವರ ಮನೆಯ ಹೊರಗೆ ಇರುವ ಬಾವಿಯ ನೀರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ತಕ್ಷಣ ಅವರನ್ನು ನೀರಿನಿಂದ ಮೇಲಕ್ಕೆತ್ತಿ ಚಿಕಿತ್ಸೆಯ ಬಗ್ಗೆ ಮೂಲ್ಕಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದಲ್ಲಿ, ಅಲ್ಲಿನ ವೈದ್ಯರು ಪರೀಕ್ಷಿಸಿ, ಸದ್ರಿ ಜಯಂತಿ ಎಸ್‌ ಗಡಿಯಾರ ರವರು ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಯು.ಡಿ.ಆರ್ 26/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 01-11-2022 04:38 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080