ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ : ದಿನಾಂಕ 30/10/2021 ರಂದು ಮಧ್ಯಾಹ್ನ 03:15 ಗಂಟೆಗೆ ಕುಂದಾಪುರ  ತಾಲೂಕಿನ, ಹಂಗಳೂರು  ಗ್ರಾಮದ ಕಾಮತ್‌ ಮೋಟಾರ್ಸ್‌ ‌ಬಳಿ ಪೂರ್ವ ಬದಿಯ NH 66 ರಸ್ತೆಯಲ್ಲಿ ಆಪಾದಿತೆ ವಾಣಿ ಗಣೇಶ ಭಟ್‌ ‌ಎಂಬುವವರು KA-47-M-8790ನೇ ಮಾರುತಿ ಎಸ್‌‌‌‌ಪ್ರೆಸೋ ಕಾರನ್ನು ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಅತೀವೇಗವಾಗಿ  ಚಲಾಯಿಸಿಕೊಂಡು ಬಂದು NH 66 ರಸ್ತೆಯಲ್ಲಿ ಹಾಕಿದ ಬ್ಯಾರಿಕೇಡ್‌ನ್ನು ನೋಡಿ ಒಮ್ಮೇಲೆ ನಿಧಾನಿಸಿ NH 66 ರಸ್ತೆಯ ಎಡಬದಿಗೆ ಹೋಗುವಾಗ ಕಾರಿನ ಹಿಂಬದಿಯಲ್ಲಿ ಅದೇ ದಿಕ್ಕಿನಲ್ಲಿ ನವೀನ್‌ ಎಂಬುವವರು KA-20-EV-5417ನೇ ಸವಾರಿ ಮಾಡಿಕೊಂಡು ಬಂದು, ಕಾರಿನ ಬಲಬದಿಯಿಂದ ಮುಂದಕ್ಕೆ ಹೋಗುತ್ತಿರುವಾಗ  ಆಪಾದಿತೆ ಕಾರನ್ನು  ಒಮ್ಮೇಲೆ ಯಾವುದೇ  ಸೂಚನೆ ನೀಡದೇ NH 66 ರಸ್ತೆಯ ಬಲಬದಿಗೆ  ನಿರ್ಲಕ್ಷ್ಯತನದಿಂದ  ಚಲಾಯಿಸಿದಾಗ  ಬೈಕ್‌  ಕಾರಿನ ಹಿಂಭಾಗದ ಬಲಬದಿಗೆ  ತಾಗಿ  ಅಪಘಾತಕ್ಕೆ ಒಳಗಾಗಿ  ಬೈಕ್‌ ಸಮೇತ ರಸ್ತೆಯಲ್ಲಿ ಬಿದ್ದು,  ನವೀನ್‌‌ರವರ ಗಲ್ಲಕ್ಕೆ, ಮೂಗಿಗೆ, ಹೊಟ್ಟೆ, ಎದೆಗೆ  ಹಾಗೂ   ಕೈ ಕಾಲುಗಳಿಗೆ  ರಕ್ತಗಾಯ ಹಾಗೂ ಒಳ ಜಖಂ ಉಂಟಾಗಿ ಕೊಟೇಶ್ವರ  ಎನ್..ಆರ್‌ಆಚಾರ್ಯ  ಆಸ್ಪತ್ರೆಯಲ್ಲಿ  ಪ್ರಥಮ  ಚಿಕಿತ್ಸೆ  ಪಡೆದು  ಹೆಚ್ಚಿನ ಚಿಕಿತ್ಸೆ  ಬಗ್ಗೆ ಮಣಿಪಾಲ  ಕೆ.ಎಂ.ಸಿ  ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 86/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 31/10/2021 ರಂದು ಸಂಜೆ 5:45 ಗಂಟೆಗೆ ಕಾರ್ಕಳ ತಾಲೂಕು, ಬೆಳ್ಮಣ್ ಗ್ರಾಮದ ಇಂದಾರು ಎಂಬಲ್ಲಿ ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿ ರಸ್ತೆಯ ಎಡ ಬದಿಯಲ್ಲಿ ಪಿರ್ಯಾದಿದಾರರಾದ ಉಮೇಶ್ ಆಚಾರ್ಯ (40), ತಂದೆ: ಗೋಪಾ ಆಚಾರ್ಯ, ವಾಸ:  ದರ್ಖಾಸ್ ಹೌಸ್ ನಂದಳಿಕೆ ಗ್ರಾಮ ಕಾರ್ಕಳ ತಾಲೂಕು ಇವರು ತನ್ನ KA-20-N-1098 ಕಾರನ್ನು ನಿಲ್ಲಿಸಿದ್ದು ಅದೇ ಸಮಯಕ್ಕೆ KA-19-AA-4618 ನೇ ಬೋಲೆರೋ ಪಿಕ್ ಅಪ್ ವಾಹನದ ಚಾಲಕ ತನ್ನ ವಾಹನವನ್ನು ಬೆಳ್ಮಣ್ ಕಡೆಯಿಂದ ಪಡುಬಿದ್ರೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಭಾಗಕ್ಕೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಹಿಂಬಾಗಕ್ಕೆ ಡಿಕ್ಕಿ ಹೊಡೆದಿದ್ದು, ಎರಡು ವಾಹನಗಳು ಜಖಂ ಗೊಂಡಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 127/2021 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೊಲ್ಲೂರು: ಪಿರ್ಯಾದಿದಾರರಾದ ಮಂಜುನಾಥ(40), ತಂದೆ: ದಿ. ಸಂಜೀವ ಶೆಟ್ಟಿ, ವಾಸ:  ನಂಬ್ರ 306, ರಾಮ ಮಂದಿರ  ಬೀದಿ ಕಗ್ಗಲೀಪುರ   ಕನಕಪುರ ರಸ್ತೆ ಬೆಂಗಳೂರು  ದಕ್ಷಿಣ ತಾಲೂಕು ಬೆಂಗಳೂರು ಇವರು ದಿನಾಂಕ 31/10/2021 ರಂದು ಬೆಳಿಗ್ಗೆ 11:30 ಗಂಟೆಗೆ  KA-05-MW-4934 ನೇ ಮಾರುತಿ ಎರ್ಟಿಗಾ ಕಾರಿನಲ್ಲಿ ತನ್ನ ಹೆಂಡತಿ ಕಲ್ಪನ ಮಕ್ಕಳಾದ ತರುಣಿಕ ಮತ್ತು ಯಧುನಂದ ಹಾಗೂ ಮಾವ ಕೃಷ್ಣನ್, ಅತ್ತೆ ಭಾಗ್ಯಮ್ಮ, ಹಾಗೂ ಅಜ್ಜಿ  ಸಂಪಂಗಮ್ಮ ಅವರನ್ನು ಕುಳ್ಳಿರಿಸಿಕೊಂಡು ಬೆಂಗಳೂರಿ ನಿಂದ ಕೊಲ್ಲೂರು ದೇವಸ್ಥಾನಕ್ಕೆ ಬಂದು  ಬಳಿಕ  ಕೊಲ್ಲೂರಿ ನಿಂದ ಶೃಂಗೇರಿ ದೇವಸ್ಥಾನಕ್ಕೆ ಹೊರಟು ಕಾರನ್ನು ಕೊಲ್ಲೂರು ಕಡೆಯಿಂದ ನಿಟ್ಟೂರು ಕಡೆಗೆ  ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕೊಲ್ಲೂರು ಗ್ರಾಮದ ನಾಗೋಡಿ ಘಾಟಿಯ ವಾಟೆಮೋರಿ ಎಂಬಲ್ಲಿ  ತಿರುವು ರಸ್ತೆಯಲ್ಲಿ ತಲುಪಿದಾಗ ನಿಟ್ಟೂರು ಕಡೆಯಿಂದ ಕೊಲ್ಲೂರು ಕಡೆಗೆ ಆರೋಪಿ ಹೇಮಂತ್ ಕುಮಾರ್ KA-05-ME-5176 ನೇ ಕಾರನ್ನು ಅತೀ ವೇಗವಾಗಿ ಅಜಾಗರೂಕತೆಯಿಂದ ತೀರ ಬಲಕ್ಕೆ ಚಲಾಯಿಸಿ ಪಿರ್ಯಾದಿದಾರರ ಕಾರಿಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕಲ್ಪನಾರವರಿಗೆ ಎಡಕೈ ಮೊಣಗಂಟು ಬಳಿ ಗುದ್ದಿದ ಒಳನೋವಾಗಿದ್ದು, ಸಂಪಂಗಮ್ಮ ರವರಿಗೆ ಹಣೆಗೆ ರಕ್ತಗಾಯ ಉಂಟಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ. ಹಾಗೂ ಭಾಗ್ಯಮ್ಮ ರವರಿಗೆ ಬಲ ದವಡೆಗೆ ಗುದ್ದಿದ ಊತವಾಗಿದ್ದು ಕೃಷ್ಣರವರಿಗೆ ಹಣೆಗೆ ಸಣ್ಣಪುಟ್ಟ ರಕ್ತಗಾಯವಾಗಿದ್ದು ಮಕ್ಕಳಾದ ತರುಣಿಕ ಮತ್ತು ಯಧುನಂದ ರವರಿಗೂ ಸಣ್ಣಪುಟ್ಟ ಗುದ್ದಿದ ನೋವಾಗಿರುತ್ತದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 39/2021  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಿರ್ವಾ: ದಿನಾಂಕ 30/10/2021 ರಂದು ಪಿರ್ಯಾದಿದಾರರಾದ ಜಬೀನ (37), ಗಂಡ: ಇಸ್ಮಾಯಿಲ್, ವಾಸ: ಸುಭಾಸ್ ನಗರ, ಚೊಕ್ಕಾಡಿ ಮಸೀದಿ ಬಳಿ, ಮೂಡಬೆಟ್ಟು ಗ್ರಾಮ, ಶಾಮನ್ ರವರ ಬಾಡಿಗೆ ಮನೆ, ಕಾಪು ತಾಲೂಕು ಉಡುಪಿ ಜಿಲ್ಲೆ ಇವರ ತಾಯಿ ಸಾರಂಭಿ (71) ರವರು ಸುಭಾಸ್ ನಗರದಿಂದ ಹಾಲು ತೆಗೆದುಕೊಂಡು ಮನೆ ಕಡೆಗೆ ಹೊರಟು ಸುಬಾಸ್ ನಗರ ಪೆಟ್ರೋಲ್ ಪಂಪ್  ನ ಬಳಿ ನರೇಂದ್ರ ಕಾಂಪ್ಲೆಕ್ಸ್ ಎದುರುಗಡೆ ನಡೆದುಕೊಂಡು ಹೋಗುತ್ತಿರುವಾಗ ಬೆಳಿಗ್ಗೆ 09:30 ಗಂಟೆಗೆ KA-20-D-2947 ನೇ ಕಾರಿನ ಚಾಲಕನು ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಯ ತೀರಾ ಎಡಬದಿಗೆ ಬಂದು ಪಿರ್ಯಾದಿದಾರರ ತಾಯಿ ಸಾರಂಭಿರವರಿಗೆ ಹಿಂದಿನಿಂದ ಬಂದು ಢಿಕ್ಕಿಹೊಡೆದ ಪರಿಣಾಮ ಸಾರಂಭಿರವರು ರಸ್ತೆಗೆ ಬಿದ್ದು ಬಲಕೈಯ ಮೊಣಗಂಟಿಗೆ ಮೂಳೆ ಮುರಿತದ ಒಳಜಖಂ ಮತ್ತು ಸೊಂಟಕ್ಕೆ ಗುದ್ದಿದ ಒಳ ಜಖಂ ಆಗಿರುತ್ತದೆ. ಅಲ್ಲದೇ ಆರೋಪಿ ಅಫಘಾತವಾದ ಬಗ್ಗೆ ಸ್ಥಳೀಯ ಠಾಣೆಗೆ ಯಾವುದೇ ಮಾಹಿತಿಯನ್ನು ನೀಡಿರುವುದಿಲ್ಲ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 63/2021 ಕಲಂ: 279,  338 ಐಪಿಸಿ & 134(B) IMV Act ರಂತೆ ಪ್ರಕರಣ ದಾಖಲಾಗಿರುತ್ತದೆ. 

ಅಸ್ವಾಭಾವಿಕ ಮರಣ ಪ್ರಕರಣ

  • ಅಜೆಕಾರು: ಪಿರ್ಯಾದಿದಾರರಾದ ನಿತಿನ್ ಜೋನ್ಸನ್ ತೋಮಸ್ (36), ತಂದೆ ಮೈಕಲ್ ತೋಮಸ್,  ವಾಸ: 1-155-1ಕಾವಾಟು ಚಿರ ಮನೆ ಪಡುಬೈಂತ್ಲ ರಸ್ತೆ ಕುಕ್ಕುಜೆ ಗ್ರಾಮ ಕಾರ್ಕಳ ತಾಲೂಕು ಇವರ ತಂದೆ ಮೈಕಲ್ ತೋಮಸ್  (66) ರವರು ಕುಕ್ಕುಜೆಯಲ್ಲಿ ವಾಸ ಮಾಡಿಕೊಂಡಿದ್ದು, ಕೃಷಿ ಕೆಲಸವನ್ನು ಮಾಡಿಕೊಂಡಿದ್ದು  ಅವರು ದಿನಾಂಕ  29/10/2021 ರಂದು ಸಂಜೆ 5:00 ಗಂಟೆಗೆ ತನ್ನ ಮನೆಯ ಎದುರುಗಡೆ ಇರುವ ಹಲಸಿನ ಮರದ ಗೆಲ್ಲು ಕಡಿಯಲು ಮರಕ್ಕೆ ಅಲ್ಯುಮಿನಿಯಂ ಏಣಿ ಇಟ್ಟು. ಏಣಿ ಮುಖಾಂತರ ಮರಕ್ಕೆ ಹೋಗುತ್ತಿರುವಾಗ ಏಣಿ ಜ್ಯಾರಿ ನೆಲಕ್ಕ ಬಿದ್ದು ಬೆನ್ನಿಗೆ ಹಾಗೂ ಕೈಗೆ ಗುದ್ದಿದ ಗಾಯವಾದವರನ್ನು ಕೂಡಲೇ ಪಿರ್ಯಾದಿದಾರರು ತನ್ನ ಕಾರಿನಲ್ಲಿ ಉಡುಪಿಯ ನ್ಯೂಸಿಟಿ ಆಸ್ವತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿ ಚಕಿತ್ಸೆ ನೀಡಿ, ನಂತರ ಅಲ್ಲಿನ ವೈದ್ಯರು ಮಣಿಪಾಲಕ್ಕೆ ಕರೆದುಕೊಂಡು ಹೋಗಲು ತಿಳಿಸಿದ ಮೇರೆಗೆ ಮಣಿಪಾಲ ಆಸ್ವತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಿದ್ದು ಅವರು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 31/10/2021 ರಂದು 11:30  ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 19/2021 ಕಲಂ: 174 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ಗಿರೀಶ್ , ತಂದೆ: ಪರಮೇಶ್ವರ ರಾವ್, ವಾಸ: ಗರಡಿ ಮಜಲು ತೆಂಕನಿಡಿಯೂರು ಇವರು ದಿನಾಂಕ  31/10/2021 ರಂದು  ಬೆಳಿಗ್ಗೆ 11:30 ಗಂಟೆಗೆ ಅತ್ತಿಗೆ ಪ್ರೇಮ ರವರ  ಮನೆಯಲ್ಲಿ  ಟಿವಿ ನೋಡುತ್ತಿರುವ ಸಮಯ  ಪಿರ್ಯಾದಿದಾರರ ಪರಿಚಯದ ಸಂದೀಪ್ ಏಕಾಏಕಿ ಮನೆಯ ಒಳಗೆ ನುಗ್ಗಿ ಪಿರ್ಯಾದಿದಾರರಿಗೆ ಕಲ್ಲಿನಿಂದ ತಲೆಗೆ ಹೊಡೆದು ಕಾಲಿನಿಂದ ಎದೆಗೆ ತುಳಿದು ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುತ್ತಾನೆ, ಪಿರ್ಯಾದಿದಾರರಿಗೆ ಸಂದೀಪನು ಕಲ್ಲಿನಿಂದ ಹೊಡೆದ ಪರಿಣಾಮ ರಕ್ತಗಾಯವಾಗಿದ್ದು , ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 119/2021 ಕಲಂ: 324, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿದಾರರಾದ ಸಂದೀಪ್ (32), ತಂದೆ: ಸೋಮಪ್ಪ ಪೂಜಾರಿ, ವಾಸ: ಗರಡಿಮಜಲು , ತೆಂಕನಿಡಿಯೂರು ಇವರ ಪರಿಚಯದ  ಗಿರೀಶ್ ಎಂಬುವವರ ಹೆಂಡತಿ ಶಶಿಕಲಾ ರವರಿಗೆ ಮೂರು ತಿಂಗಳ ಹಿಂದೆ 30 ಸಾವಿರ ರೂಪಾಯಿ ಸಾಲ ನೀಡಿದ್ದು ದಿನಾಂಕ 31/10/2021 ರಂದು 11:30 ಗಂಟೆಗೆ ಗಿರೀಶನು ಅವರ ಸಂಬಂಧಿಕರ ಮನೆಯಲ್ಲಿ ಇರುವಾಗ ಪಿರ್ಯಾದಿದಾರರು ಹಣವನ್ನು ವಾಪಸ್ಸು ಕೇಳಲು ಹೋದಾಗ ಆರೋಪಿ ಗಿರೀಶನು ಪಿರ್ಯಾದಿದಾರರ ತಂದೆ, ತಾಯಿ ಮತ್ತು ಅಕ್ಕನಿಗೆ ಅವಾಚ್ಯ ಶಬ್ದಗಳಿಂದ ಬೈದು  ಒಂದು ಸುತ್ತಿಗೆಯಿಂದ  ಪಿರ್ಯಾದಿದಾರರ ಎಡ ಕಿವಿಗೆ ಹೊಡೆದಿದ್ದು ರಕ್ತಗಾಯವಾಗಿ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 120/2021 ಕಲಂ: 324, 504 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಮಲ್ಪೆ: ಅರೋಪಿತ 1) ಸರ್ಫರಾಜ್  ಮುನಾಫ್ ( 42), ತಂದೆ: ಅಬ್ದುಲ್  ಮುನಾಫ್ ಇವರು ಕೊಡವೂರು ಗ್ರಾಮದ ಬೀಚ್ ರಸ್ತೆಯ ಬಳಿ ಸರ್ವೆ ನಂಬ್ರ 323/7 ರಲ್ಲಿ ಸುಮಾರು 4000 ಸಾವಿರ ಚದರ ಅಡಿಯ ನಿವೇಶನ ಹೊಂದಿದ್ದು ನಿವೇಶನದಲ್ಲಿ ಕಟ್ಟಡ ಕಟ್ಟಲು ಭಟ್ಕಳದ ಜಲೀಲ್ ಎಂಬುವವರೊಂದಿಗೆ ಲೀಸ್ ಅಗ್ರಿಮೇಂಟ್ ಮಾಡಿಕೊಂಡಿದ್ದು, ಅದರೆ ಭಟ್ಕಳ್ ಜಲೀಲ್ ಕಟ್ಟಡದ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿರುತ್ತಾರೆ. ಪಿರ್ಯಾದಿದಾರರಾದ ನಕ್ವಾ ಯಾಹು ಸಾಹೇಬ (44), ತಂದೆ:ನಕ್ವಾ ಬಾಪು ಸಾಹೇಬ, ನಕ್ವಾ ಹೌಸ್  ಉದ್ದಿನಹಿತ್ಲು  ಕೊಡವೂರು ಇವರು  ಹೋಟೆಲ್ ವ್ಯವಹಾರವನ್ನು ನಡೆಸಲು ನಿವೇಶನವನ್ನು ಹುಡುಕುತ್ತಿರುವಾಗ ಅರೋಪಿತನು ಪಿರ್ಯಾದಿದಾರರ ಸ್ನೇಹಿತರ ಮುಖಾಂತರ ಸಂಪರ್ಕಿಸಿ ಪಿರ್ಯಾದಿದಾರರು ಮತ್ತು ಅರೋಪಿತರು ಮಾತುಕತೆಯಾಗಿ ಭಟ್ಕಳ್ ಜಲೀಲ್ ನಿರ್ಮಿಸಿದ ಕಟ್ಟಡ ಕ್ಕೆ ಜಲೀಲ್ ಗೆ 24 ಲಕ್ಷ ರೂಪಾಯಿ ಹಣವನ್ನು ಪಿರ್ಯಾದಿದಾರರು ಪಾವತಿಸುವುದು ಅದರಂತೆ ಪಿರ್ಯಾದಿದಾರರು ದಿನಾಂಕ 10/12/2016 ರಂದು ರೂಪಾಯಿ 24 ಲಕ್ಷ ನಗದು ರೂಪದಲ್ಲಿ ಭಟ್ಕಳ್ ಜಲೀಲ್ ರವರಿಗೆ ಪಾವತಿಸಿರುತ್ತಾರೆ. ದಿನಾಂಕ 14/12/2016 ರಂದು ಪಿರ್ಯಾದಿದಾರರು ಮತ್ತು ಅರೋಪಿತರಿಗೆ ಲೀಸ್ ಅಗ್ರಿಮೇಂಟ್ ಆಗಿದ್ದು, ಅಗ್ರಿಮೇಂಟ್ 7 ವರ್ಷ ಚಾಲ್ತಿಯಲ್ಲಿದ್ದು, ಪಿರ್ಯಾದಿದಾರರು ಅರ್ಧ ನಿಂತ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಿದ್ದು ಆ ಬಗ್ಗೆ ಹೆಚ್ಚುವರಿಯಾಗಿ 15 ಲಕ್ಷದ 21 ಸಾವಿರ ಖರ್ಚ  ಮಾಡಿರುತ್ತಾರೆ. ಪಿರ್ಯಾದಿದಾರರು ಅರೋಪಿತರಲ್ಲಿ ಕಟ್ಟಡದ ಕಾಮಗಾರಿಯ ಖರ್ಚನ್ನು ಪಾವತಿಸುವಂತೆ ಕೋರಿ ಕೊಂಡಿದ್ದು ಅದರೆ ಅರೋಪಿತನು ಅರ್ಥಿಕವಾಗಿ ಖರ್ಚನ್ನು ಭರಿಸಲು ಅಸಾದ್ಯವಾದ ಕಾರಣ ಪಿರ್ಯಾದಿದಾರರು ಅರೋಪಿತನಿಗೆ ತಿಂಗಳಿಗೆ ನೀಡುವ ಬಾಡಿಗೆಯಲ್ಲಿ ಸರಿದೂಗಿಸಿ ಕೊಳ್ಳವುವಂತೆ ಪಿರ್ಯಾದಿದಾರರು ಮತ್ತು ಅರೋಪಿಗೆ ಮೌಖಿಕವಾಗಿ ಒಪ್ಪಂದವಾಗಿದ್ದು ಲೀಸ್ ಅಗ್ರಿಮೇಂಟ್ ನಂತೆ ತಿಂಗಳಿಗೆ 60 ಸಾವಿರ ಬಾಡಿಗೆ ನಿಗದಿ ಪಡಿಸಿದ್ದು, ಕಟ್ಟಡ ನಿರ್ಮಾಣದ 45,500/- ರೂಪಾಯಿಯನ್ನು ಪಾವತಿಸಿರುತ್ತಾರೆ. ಅಲ್ಲದೆ ಪಿರ್ಯಾದಿದಾರರು ಲೀಸ್ ಅಗ್ರಿಮೇಂಟ್ ಪ್ರಕಾರ ಅರೋಪಿತರಲ್ಲಿ ಭದ್ರತೆಯಾಗಿ ರೂಪಾಯಿ 6 ಲಕ್ಷನ್ನು ಡಿಪಾಸಿಟ್ ಇಟ್ಟಿದ್ದು ,ಅಲ್ಲದೆ  ರೂಪಾಯಿ 48 ಲಕ್ಷದ 50 ಸಾವಿರ ರೂಪಾಯಿ ಹೋಟೆಲ್ ಸಾಮಾನು ಗಳನ್ನು ಖರಿದಿಸಿರುತ್ತಾರೆ. ಅಲ್ಲದೆ 5 ಲಕ್ಷ ಹಣವನ್ನು ಗ್ರಾಹಕರ ವಾಶ್ ರೂಮ್ ಮತ್ತು ಐಸ್ ಕ್ರಿಮ್ ಪಾರ್ಲರ್ ಗೆ ಉಪಯೋಗಿಸಿರುತ್ತಾರೆ. ಅಲ್ಲದೆ ಅರೋಪಿತನು ಪಿರ್ಯಾದಿದಾರರಿಂದ ಕೈ ಸಾಲ ವಾಗಿ 45,000/- ರೂಪಾಯಿ, 90,000/- ರೂಪಾಯಿ ಮತ್ತು 5 ಲಕ್ಷ ರೂಪಾಯಿಯನ್ನು ಪಡೆದು ಕೊಂಡಿದ್ದು ಇದುವರೆಗೂ ಪಾವತಿಸಿರುವುದಿಲ್ಲ. ನಂತರ ಪಿರ್ಯಾದಿದಾರರು ಮತ್ತು ಅತೋಪಿತರು 08/07/2019 ರಂದು 2 ನೇ ಲೀಸ್ ಅಗ್ರಿಮೇಂಟ್ ನ್ನು 15 ವರ್ಷ ಕ್ಕೆ ಮಾಡಿಕೊಂಡು ರೂಪಾಯಿ 16,40,000/- ರೂಪಾಯಿಯನ್ಹು  ಡಿಪಾಸಿಟ್  ಮತ್ತು 60,000 ರೂಪಾಯಿ ನಗದು ನೀಡಿರುತ್ತಾರೆ. ಪಿರ್ಯಾದಿದಾರರು ಲೀಸ್ ಅಗ್ರಿಮೇಂಟ್ ನಂತೆ ಸಮಯಕ್ಕೆ ಸರಿಯಾಗಿ ಬಾಡಿಗೆಯನ್ನು ಪಾವತಿಸುತ್ತಿದ್ದು 2020 ರ ಮಾರ್ಚ ನಲ್ಲಿ ಕೊವಿಡ್ ಇದ್ದುದರಿಂದ ರೆಸ್ಟೋರೆಂಟ್ ಮುಚ್ಚಿದ್ದು ಅಗಸ್ಟ್ ನಲ್ಲಿ ಹೋಟೆಲ್ ಒಪನ್ ಮಾಡಲು ಹೋದಾಗ ಅರೋಪಿತನು ಒಪನ್ ಮಾಡಲು ಬಿಡದೆ ಇದ್ದು ಅಲ್ಲದೆ ಪಿರ್ಯಾದಿದಾರರು  ಬಾಡಿಗೆಯನ್ನು ಕಡಿಮೆ ಮಾಡಲು ಹೇಳಿದರೂ ಅರೋಪಿತನು ಒಪ್ಪಿರುವುದಿಲ್ಲ. ಅಲ್ಲದೆ ಒಂದು ದಿನ ಅರೋಪಿತರು ಇತರ ವ್ಯಕ್ತಿಗಳೊಂದಿಗೆ ಸೇರಿ ಸಮಾನ ಉದ್ದೇಶದಿಂದ  ಹೋಟೆಲ್ ಗೆ ಬಂದು ಪಿರ್ಯಾದಿದಾರರು ಇಲ್ಲದ ಸಮಯ ಹೋಟೆಲ್ ಕಾರ್ಮಿಕರನ್ನು ಬಲವಂತ ದಿಂದ ಹೊರಗೆ ಹಾಕಿ ಬೀಗ ಹಾಕಿ ಹೋಗಿರುತ್ತಾರೆ.ಅರೋಪಿತರಾದ 1 ಮತ್ತು 2) ಶಾಮಿಮ ಭಾನು, ಗಂಡ:  ಅಬ್ದುಲ್ ಮುನಾಫ್, ವಾಸ: ವಿ ಬಿ ರೋಡ್  ಮಲ್ಪೆ ಬೀಚ್  ಹತ್ತಿರ ಕೊಡವೂರು ಗ್ರಾಮ ಇವರು ಪಿರ್ಯಾದಿದಾರರ ಹೊಟೇಲ್ ಗೆ ಬಲವಂತ ದಿಂದ ಪ್ರವೇಶಿಸಿ ಕೆಲಸದವರನ್ನು ಹೊರ ಹಾಕಿ, ವಸ್ತುಗಳನ್ನು ಹಾಳುಗೆಡವಿ ಲೀಸ್ ಎಗ್ರಿಮೇಂಟ್ ಕರಾರನ್ನು ಪಾಲಿಸದೆ ಪಿರ್ಯಾದಿದಾರರನ್ನು ನಂಬಿಸಿ ಸುಮಾರು 83,66,000/- ರೂಪಾಯಿ ಮೋಸ ಮಾಡಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 118/2021 ಕಲಂ: 204 , 209, 211, 405, 406, 415, 462, ,420, 441,  ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
     

ಇತ್ತೀಚಿನ ನವೀಕರಣ​ : 01-11-2021 10:34 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080