ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಪಡುಬಿದ್ರಿ: ಪಿರ್ಯಾದಿದಾರರಾದ ಪ್ರಮೋದ್ ಕುಮಾರ್, ಪ್ರಾಯ 27 ವರ್ಷ, ತಂದೆ; ಮಾಧವ ಆಚಾರ್ಯ, ವಾಸ: ವಿಶ್ವಕರ್ಮ ಅನುಗ್ರಹ, ಭಾಸ್ಕರ ನಗರ, ಉಚ್ಚಿಲ ಬಡಾ ಅಂಚೆ, ಉಚ್ಚಿಲ ಕಾಪು ತಾಲೂಕು ಇವರು ದಿನಾಂಕ 31/10/2021 ರಂದು ತನ್ನ ಚಿಕ್ಕಪ್ಪ ಶ್ರೀಧರ್ ಆಚಾರ್ಯ ಎಂಬುವವರನ್ನು ಬೇಟಿಯಾಗಲು ಉಚ್ಚಿಲ ಪೇಟೆ ಎನ್.ಹೆಚ್.66 ಪಣಿಯೂರು ಜಂಕ್ಷನ್ ಹತ್ತಿರ ಕಾಯುತ್ತಿರುವಾಗ ರಾತ್ರಿ 21:30 ಗಂಟೆಗೆ ಪಿರ್ಯಾದಿದಾರರ ಚಿಕ್ಕಪ್ಪ ಅವರ KA-20-EW-6455 ನೇ ಸ್ಕೂಟಿಯಲ್ಲಿ ಪಡುಬಿದ್ರಿಯಿಂದ ಉಚ್ಚಿಲ ಕಡೆಗೆ ಎನ್.ಹೆಚ್-66 ಏಕಮುಖ ಸಂಚಾರ ರಸ್ತೆಯಲ್ಲಿ ಬಂದು ಉಚ್ಚಿಲ ಪೇಟೆಯಿಂದ ಪಣಿಯೂರು ರಸ್ತೆಗೆ ಹೋಗಲು ಡಿವೈಡರ್ ಹತ್ತಿರ ಬಂದು ನಿಲ್ಲಿಸಿ. ಅವರ ಸ್ಕೂಟಿರ್ ನ್ನು ನಿಧಾನವಾಗಿ ಉಡುಪಿಯಿಂದ- ಮಂಗಳೂರು ಕಡೆಗೆ ಹೋಗುವ ಏಕಮುಖ ಸಂಚಾರ ರಸ್ತೆಯಲ್ಲಿ ಚಲಿಸಿ ಪಣಿಯೂರು ರಸ್ತೆಗೆ ಹೋಗುತ್ತಿರುವಾಗ ಅದೇ ಸಮಯದಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ಏಕಮುಖ ಸಂಚಾರ ರಸ್ತೆಯಲ್ಲಿ KA-25-D-3288 ನೇ ನಂಬ್ರದ ಲಾರಿ ಚಾಲಕ ಶಿವರಾಜ್ ಕೊಡೇರಿ ಬೈಂದೂರು ಎಂಬುವವರು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಲಾರಿ ಚಲಾಯಿಸಿಕೊಂಡು ಬಂದು ಶ್ರೀಧರ್ ಆಚಾರ್ಯರವರು ಚಲಿಸುತ್ತಿರುವ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಶ್ರೀಧರ್ ಆಚಾರ್ಯರವರು ಸ್ಕೂಟಿ ಸಮೇತವಾಗಿ ಲಾರಿ ಎದುರಿನ ಬಂಪರಿಗೆ ಸಿಕ್ಕಿಕೊಂಡಿದ್ದು ಲಾರಿಯು ಸ್ವಲ್ಪ ಮುಂದೆ ಹೋಗಿ ಮಣ್ಣು ರಸ್ತೆಯಲ್ಲಿ ನಿಂತಿದ್ದು, ಪಿರ್ಯಾದಿದಾರರು ಸಾರ್ವಜನಿಕರ ಸಹಾಯದಿಂದ ಲಾರಿಗೆ ಸಿಕ್ಕಿಕೊಂಡಿದ್ದ ಚಿಕ್ಕಪ್ಪನನ್ನು ಹೊರತೆಗೆದು ನೋಡಲಾಗಿ ಅವರ ತಲೆ ಭಾಗಕ್ಕೆ ಕಿವಿ, ಬಾಯಿ ಹಾಗೂ ಕೈಗೆ ತೀವ್ರ ತರದ ಗಾಯವಾಗಿರುತ್ತದೆ. ಪಿರ್ಯಾದಿದಾರರು ಅಂಬ್ಯುಲೆನ್ಸ್ ನಲ್ಲಿ ರಾತ್ರಿ 10:00 ಗಂಟೆಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈಧ್ಯರು ಪರೀಕ್ಷಿಸಿ ಶ್ರೀಧರ್ ಆಚಾರ್ಯರವರು ಮೃತಪಟ್ಟಿರುತ್ತಾರೆ ಎಂಬುದಾಗಿ ತಿಳಿಸಿರುತ್ತಾರೆ. ಈ ಅಪಘಾತದಿಂದ ಸ್ಕೂಟಿ ಸಂಪೂರ್ಣ ಜಖಂಗೊಂಡು ಹಾಗೂ ಲಾರಿಯ ಬಂಪರ್ ಜಖಂಗೊಂಡಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 106/2021 ಕಲಂ: 279, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ 

  • ಕಾರ್ಕಳ : ಪಿರ್ಯಾದಿದಾರರಾದ ದಯಾನಂದ ಪ್ರಭು (37), ತಂದೆ: ವಿಠಲ ಪ್ರಭು, ವಾಸ: ಮಹಾಕಾಳಿ ಮಠ, ಪಳ್ಳಿ ಅಂಚೆ, ಕಾರ್ಕಳ ತಾಲೂಕು ಇವರ ಅಣ್ಣ ನಿತ್ಯಾನಂದ ಪ್ರಭು(41) ರವರು ಕೃಷಿ ಕೂಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ 31/10/2021 ರಂದು ಹಗಲು 11:30 ಗಂಟೆಗೆ ತಮ್ಮ ಮನೆಯ ತೆಂಗಿನ ಮರಕ್ಕೆ ಕಾಯಿ ಕೀಳಲು ಹತ್ತಿದವರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ತಲೆಗೆ ಮತ್ತು ಕೈ ಕಾಲುಗಳಿಗೆ ಗಂಭೀರ ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿ ನಂತರ ಆಸ್ಪತ್ರೆಯ ಖರ್ಚು ಜಾಸ್ತಿಯಾಗುತ್ತದೆಯೆಂದು ಮಣಿಪಾಲ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಿನಾಂಕ 31/10/2021 ರಂದು ಸಂಜೆ 05:00 ಗಂಟೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 01/11/2021 ರಂದು ಬೆಳಿಗ್ಗೆ 09:15 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 36/2021 ಕಲಂ :174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 01-11-2021 06:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080