ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿ ಎಂ.ಎ. ರಾಮಚಂದ್ರ ಮಡಿವಾಳ ಇವರು ದಿನಾಂಕ  27/09/2022  ರಂದು  ರಾತ್ರಿ  ಸಾಲಿಗ್ರಾಮ ಮೊಗವೀರ  ಸಭಾ  ಭವನದಲ್ಲಿ  ನಡೆದ  ಪರಿಚಯದವರ  ಮದುವೆ  ಕಾರ್ಯಕ್ರಮದ  ಬಗ್ಗೆ ಹೋಗಿ  ವಾಪಾಸು  ತನ್ನ ಬಾಬ್ತು   ಮೋಟಾರು  ಸೈಕಲ್‌‌‌‌‌‌ನಲ್ಲಿ  ರಾತ್ರಿ  ಸುಮಾರು  10:45  ಗಂಟೆಗೆ  ಹೊರಟಿದ್ದು   ಅದೇ  ಸಮಯಕ್ಕೆ  ಪಿರ್ಯಾದಿದಾರರ ತಮ್ಮ  ವಾಸುದೇವ ಸ್ಕೂಟಿ  ಕೆ.ಎ-20-ಇಝಡ್‌‌‌-1817  ರಲ್ಲಿ ಹಿಂಬದಿ  ಆದಿತ್ಯ  ನನ್ನು  ಕುಳ್ಳಿರಿಸಿಕೊಂಡು ಸಾಲಿಗ್ರಾಮ  ಜಂಕ್ಷನ್‌‌‌‌‌‌‌‌‌‌ ಆಗಿ  ಸಾಸ್ತಾನ  ಪೆಟ್ರೋಲ್‌‌‌‌‌‌‌‌‌‌‌‌ ಬಂಕ್‌‌‌‌ಗೆ  ಹೋಗಲು  ಪಿರ್ಯಾದಿದಾರರು ತಿರುಗಿದಾಗ  ಅವರೂ  ಕೂಡಾ  ಪಿರ್ಯಾದಿದಾರರ   ಎದುರಿನಿಂದ  ಸಾಸ್ತಾನ  ಕಡೆಗೆ  ತಿರುಗಿಸಿ  ಹೋಗುತ್ತಿದ್ದರು. .  ವಾಸುದೇವನು  ಸ್ಕೂಟಿಯನ್ನು ಅತೀವೇಗ  ಹಾಗೂ  ಅಜಾಗರೂಕತೆಯಿಂದ  ಸವಾರಿ  ಮಾಡಿಕೊಂಡು  ಹೋಗಿ  ಚೇಂಪಿ  ವಿಶ್ವಕರ್ಮ  ಸಭಾ ಭವನದ  ಎದುರು  ಕುಂದಾಪುರ -  ಉಡುಪಿ  ರಾ.ಹೆ.  66  ರಲ್ಲಿ  ಸ್ಕೂಟಿ  ಸ್ಕಿಡ್‌‌‌‌‌‌‌ ಆಗಿ  ಸವಾರರಿಬ್ಬರೂ  ರಸ್ತೆಗೆ  ಬಿದ್ದರು.  ಆಗ  ಸುಮಾರು  ರಾತ್ರಿ  10:50  ಗಂಟೆಯಾಗಬಹುದು.  ಪರಿಣಾಮ ವಾಸುದೇವನ  ಎಡಕೈಗೆ ತರಚಿದ  ಗಾಯವಾಗಿದ್ದು,  ಹಿಂಬದಿ  ಕುಳಿತ  ಆದಿತ್ಯ (26), ನಿಗೆ  ಎಡಕೈಯ  ಗಂಟಿಗೆ  ಮೂಳೆ  ಮುರಿತದ  ಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 163/2022 ಕಲಂ: 279.338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ದಿನಾಂಕ: 28-09-2022 ರಂದು ಸೆನ್ ಠಾಣಾ ಸಿಬ್ಬಂದಿ ಮಾಯಪ್ಪ ಇವರು ಅಕ್ರಮ ಗಾಂಜಾ ಮಾರಾಟ ಮತ್ತು ಸೇವನೆ ಬಗ್ಗೆ ಮಾಹಿತಿ ಸಂಗ್ರಹಣೆ ಬಗ್ಗೆ ಉಡುಪಿ, ಮಣಿಪಾಲ ಕಡೆಗಳಲ್ಲಿ ಸಂಚರಿಸಿಕೊಂಡಿರುವಾಗ, ಖಚಿತ ಮಾಹಿತಿ ಮೇರೆಗೆ ಉಡುಪಿ ತಾಲೂಕು, ಹೆರ್ಗ ಗ್ರಾಮದ, ಈಶ್ವರ ನಗರ, ವಿಜಯದುರ್ಗ ಅಪಾರ್ಟ್‌ಮೆಂಟ್ ಬಳಿ ಸಾರ್ವಜನಿಕ ಸ್ಥಳದಲ್ಲಿಮೇಲ್ನೋಟಕ್ಕೆ ಮಾದಕ ವಸ್ತು ಸೇವಿಸಿರುವಂತೆ ಕಂಡು ಬಂದ ಮೊಹಮ್ಮದ್ ಹಜೀಮ್ ಎಂ.ಪಿ ಈತನನ್ನು 12.35 ಗಂಟೆಗೆ ವಶಕ್ಕೆ ಪಡೆದು, ಠಾಣೆಗೆ ಕರೆತಂದು ವರದಿಯೊಂದಿಗೆ ಹಾಜರುಪಡಿಸಿದ್ದು, ಠಾಣಾಧಿಕಾರಿಯವರು ಆತನ ಸಮ್ಮತಿ ಪಡೆದು, ಮೆಡಿಕಲ್ ತಪಾಸಣೆಗೊಳಪಡಿಸಿ, ದಿನಾಂಕ 01.10.2022 ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ತಜ್ಞ ವರದಿಯನ್ನು 10:15 ಗಂಟೆಗೆ ಸ್ವೀಕರಿಸಿ, ವರದಿಯಲ್ಲಿ ಮೊಹಮ್ಮದ್ ಹಜೀಮ್ ಈತನು ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದರಿಂದ ಈ ಬಗ್ಗೆ ಸೆನ್‌ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 80/2022  ಕಲಂ 27 (b) ಎನ್‌.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ: 28-09-2022 ರಂದು ಸೆನ್ ಠಾಣಾ ಸಿಬ್ಬಂದಿ ಜೀವನ್ ಇವರು ಅಕ್ರಮ ಗಾಂಜಾ ಮಾರಾಟ ಮತ್ತು ಸೇವನೆ ಬಗ್ಗೆ ಮಾಹಿತಿ ಸಂಗ್ರಹಣೆ ಬಗ್ಗೆ ಉಡುಪಿ, ಮಣಿಪಾಲ ಕಡೆಗಳಲ್ಲಿ ಸಂಚರಿಸಿಕೊಂಡಿರುವಾಗ, ಖಚಿತ ಮಾಹಿತಿ ಮೇರೆಗೆ ಉಡುಪಿ ತಾಲೂಕು, ಹೆರ್ಗ ಗ್ರಾಮದ, ಈಶ್ವರ ನಗರ, ವಿಜಯದುರ್ಗ ಅಪಾರ್ಟ್‌ಮೆಂಟ್ ಬಳಿ ಸಾರ್ವಜನಿಕ ಸ್ಥಳದಲ್ಲಿಮೇಲ್ನೋಟಕ್ಕೆ ಮಾದಕ ವಸ್ತು ಸೇವಿಸಿರುವಂತೆ ಕಂಡು ಬಂದ ಆದಿತ್ಯ ಅನಿಲ್ ಈತನನ್ನು 12.40 ಗಂಟೆಗೆ ವಶಕ್ಕೆ ಪಡೆದು, ಠಾಣೆಗೆ ಕರೆತಂದು ವರದಿಯೊಂದಿಗೆ ಹಾಜರುಪಡಿಸಿದ್ದು, ಠಾಣಾಧಿಕಾರಿಯವರು ಆತನ ಸಮ್ಮತಿ ಪಡೆದು, ಮೆಡಿಕಲ್ ತಪಾಸಣೆಗೊಳಪಡಿಸಿ, ದಿನಾಂಕ 01.10.2022 ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ತಜ್ಞ ವರದಿಯನ್ನು 10:15 ಗಂಟೆಗೆ ಸ್ವೀಕರಿಸಿ, ವರದಿಯಲ್ಲಿ ಆದಿತ್ಯ ಅನಿಲ್ ಈತನು ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದರಿಂದ ಈ ಬಗ್ಗೆ ಸೆನ್‌ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 81/2022  ಕಲಂ 27 (b) ಎನ್‌.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 01-10-2022 06:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080