ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ಮಂಜುನಾಥ ನಾಯ್ಕ (41), ತಂದೆ: ಅಪ್ಪು ನಾಯ್ಕ್, ವಾಸ: ಕೆರೆಮುಲ್ಲಿಮನೆ ಹೇರೂರು ಗ್ರಾಮ ರಾಗಿಹಕ್ಲು ಅಂಚೆ, ಬೈಂದೂರು ತಾಲೂಕು ಇವರು ದಿನಾಂಕ 30/09/2022 ರಂದು ಬೆಳಿಗ್ಗೆ ಕೃಷಿ ಕೆಲಸಕ್ಕೆ ನೀರಿನ ಪೈಪ್ ತರಲು ಮನೆಯಿಂದ ಪಿಕಪ್ ವಾಹನದಲ್ಲಿ ಹೊರಟು ಬಂದು ಬಳಿ ಬೆಳಿಗ್ಗೆ 9:20 ಗಂಟೆಯ ಸುಮಾರಿಗೆ ಕಿರಿಮಂಜೇಶ್ವರ ಗ್ರಾಮದ ಅರೆಹೊಳೆ ಜಂಕ್ಷನ್ ಬಳಿ ರಾಹೆ 66 ನೇ ಚತುಷ್ಪಥ ರಸ್ತೆಯ ಪೂರ್ವ  ಬದಿಯ ರಸ್ತೆಯ ತಲುಪಿದಾಗ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ APM ಬಸ್ ನಂಬ್ರ KA-20-AA-2097 ನೇಯದು ವೇಗವಾಗಿ ಬರುವುದನ್ನು ನೋಡಿ ಪಿಕಪ್ ವಾಹನವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿಕೊಂಡಿರುವಾಗ, APM ಬಸ್ ನಂಬ್ರ KA-20-AA-2097 ನ್ನು ಚಾಲಕ ಗಂಗಪ್ಪ ರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಎಡಭಾಗಕ್ಕೆ ಚಲಾಯಿಸಿ, ಗಣೇಶ ರವರ ಬೈಕ್ ಗ್ಯಾರೇಜ್ ನ ಬಳಿ ರಸ್ತೆಯ ಬದಿಯಲ್ಲಿ ಬಸ್ ಗಾಗಿ ಕಾದು ನಿಂತುಕೊಂಡಿದ್ದ ಆನಂದ ಶೆಟ್ಟಿ (70) ರವರಿಗೆ ಢಿಕ್ಕಿ ಹೊಡೆದ ಪರಿಣಾಮ ಆನಂದ ಶೆಟ್ಟಿ ಮಣ್ಣು ರಸ್ತೆಗೆ ಬಿದ್ದು ಮುಖಕ್ಕೆ ಗಂಭೀರ ಸ್ವರೂಪದ ರಕ್ತಗಾಯವಾಗಿದ್ದು, ಕೈ ಕಾಲಿಗೆ ತರಚಿದ ಗಾಯಗಳಾಗಿದ್ದು, ಪಿರ್ಯಾದಿದಾರರು ಹಾಗೂ ಇತರರು ಗಾಯಾಳು ಆನಂದ ಶೆಟ್ಟಿ ರವರನ್ನು ಉಪಚರಿಸಿ,  ಸಮರ ಶೆಟ್ಟಿ ರವರ ಕಾರಿನಲ್ಲಿ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲಕ್ಕೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಮಧ್ಯಾಹ್ನ 3:00 ಗಂಟೆಗೆ  ಮೃತಪಟ್ಟಿರುತ್ತಾರೆ.  ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 194/2022 ಕಲಂ:  279 , 304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಶಂಕರನಾರಾಯಣ: ದಿನಾಂಕ 29/09/2022 ರಂದು 21:15  ಗಂಟೆಗೆ  ಕುಂದಾಪುರ ತಾಲೂಕು  28  ಹಾಲಾಡಿ ಗ್ರಾಮದ ಹಾಲಾಡಿ ಪೇಟೆಯ ಹಾಲಾಡಿ ಜಂಕ್ಷನ್‌ಬಳಿಯ ಹಾಲಾಡಿ ಶಂಕರನಾರಾಯಣ ರಸ್ತೆಯ ಮಣ್ಣು  ರಸ್ತೆಯಲ್ಲಿ ಆರೋಪಿತರಾದ KA-51-AF-6832 ನೇ ಬಸ್ ಚಾಲಕ ನೀಲಕಂಠ ರವರು ತಾನು ಚಲಾಯಿಸುತ್ತಿದ್ದ ಬಸ್‌‌ನ್ನು ಬಿದ್ಕಲ್‌ಕಟ್ಟೆ ಕಡೆಯಿಂದ  ಶಂಕರನಾರಾಯಣ ಕಡಗೆ  ಅತೀ ವೇಗ ಮತ್ತು  ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಯ ಬದಿಯ ಮಣ್ಣು ರಸ್ತೆಯಲ್ಲಿ ನಿಂತುಕೊಂಡಿದ್ದ ಪಾದಾಚಾರಿ ಪಿರ್ಯಾದಿದಾರರಾದ ಸಚಿನ್‌ ಪೂಜಾರಿ (23), ತಂದೆ: ಪರಶುರಾಮ್‌, ವಾಸ: ಕಳವಾಡಿ ಮೈಯಾಡಿ  ಅಂಚೆ  & ಗ್ರಾಮ ಬೈಂದೂರು   ತಾಲೂಕು  ಉಡುಪಿ ಜಿಲ್ಲೆ ಇವರ ಎಡ ಕಾಲಿನ ಪಾದದ ಮಲೆ ಬಸ್‌ನ ಎಡ ಮುಂಬದಿಯ ಚಕ್ರ ಚಲಿಸಿ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಎಡ ಕಾಲಿನ ಐದು ಬೆರಳುಗಳಿಗೆ ಮೂಳೆ ಮುರಿತದ  ಗಂಬೀರ ಸ್ವರೂಪದ  ರಕ್ತ ಗಾಯವಾಗಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 99/2022  ಕಲಂ: 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಕಾರ್ಕಳ: ಕಾರ್ಕಳ ತಾಲೂಕು ಸೂಡ ಗ್ರಾಮದ ಗಾಣದ ಬೆಟ್ಟು ಎಂಬಲ್ಲಿ ವಾಸವಾಗಿರುವ    ಶ್ರೀಮತಿ ಸುಗುಣ (58) ಇವರು ಕೃಷಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 30/09/2022 ರಂದು ಮನೆಯ ಪಕ್ಕದ ಸುನೀಲ್ ಎಂಬುವವರ  ಭತ್ತದ ಗದ್ದೆಯಲ್ಲಿ  ಭತ್ತದ ಕಳೆ ತೆಗೆಯುವ ಕೆಲಸಕ್ಕೆ ಹೋಗಿದ್ದು, ಅವರು ಮಧ್ಯಾಹ್ನ ಊಟ ಮಾಡಲೆಂದು ಮನೆಗೆ ಬರುವಾಗ ಬೆಳಿಗ್ಗೆ 11:30 ಗಂಟೆಯಿಂದ ಮಧ್ಯಾಹ್ನ 13:00 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಪಕ್ಕದ ನೀರು ತುಂಬಿರುವ  ಕೃಷಿಗಾಗಿ ಮಾಡಿದ ಹೊಂಡದಲ್ಲಿ ಕೈ-ಕಾಲು ತೊಳೆಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೃಷಿಗಾಗಿ ಮಾಡಿದ ಹೊಂಡದ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿಮೃತಪಟ್ಟಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 34/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ಶ್ರೀಮತಿ ನವ್ಯ (25), ಗಂಡ: ಸುಕೇಶ್‌, ವಾಸ: ಸೌರಿಬೈಲು, ಕಾರ್ಕಡ ಅಂಚೆ, ಸಾಲಿಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ ಇವರು 1 ನೇ  ಅಪಾದಿತ ಸುಕೇಶ್‌ ((33  ಇವರೊಂದಿಗೆ ದಿನಾಂಕ 24/04/2022 ರಂದು ಕುಂದಾಪುರ ತಾಲೂಕು ಕೋಟೇಶ್ವರದ ಕಮಲಮ್ಮಸರ್ವೋತ್ತಮ್ಮಬುಧ್ಯ ಕಲಾ ಮಂಟಪದಲ್ಲಿ ಜಾತಿ ಪದ್ದತಿಯಂತೆ ಮದುವೆಯಾಗಿದ್ದು, ಮದುವೆಯ ಮೊದಲು ದಿನಾಂಕ 10/04/2022 ರಂದು ಆರೋಪಿತರಾದ 1) ಸುಕೇಶ್‌((33 , 2) ಪರಮೇಶ್ವರ ಆಚಾರ್ಯ(65) , 3) ಸುಶೀಲ(58) , 4)ಸಂದೇಶ(30) , 5) ಶ್ರೀಮತಿ ಮಾಲತಿ (45) , 6) ಪ್ರಮೋದ್  (21) ಇವರು ಮದುವೆಯ ಮಾತುಕತೆ ಮಾಡಲು ಕಾರ್ಕಡ ಗ್ರಾಮದ ಸಾಲಿಗ್ರಾಮ ಸೌರಿಬೈಲಿನಲ್ಲಿರುವ ಪಿರ್ಯಾದಿದಾರರ ಮನೆಗೆ ಬಂದಿದ್ದು, ಮಾತುಕತೆ ಸಮಯ 40 ಪವನ್ ಚಿನ್ನಾಭರಣ ಹಾಗೂ 50 ಲಕ್ಷ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದು, ಪಿರ್ಯಾದಿದಾರರ ತಂದೆ ವರದಕ್ಷಿಣೆ ನೀಡಲು ನಿರಾಕರಿಸಿದಾಗ ಆರೋಪಿತರೆಲ್ಲರೂ ವರದಕ್ಷಿಣೆ ನೀಡದಿದ್ದರೆ ಮದುವೆಯ ಪ್ರಸ್ತಾಪ ಮುರಿಯುದಾಗಿ ಹೆದರಿಸಿದ್ದು, ಪಿರ್ಯಾದಿದಾರರ ತಂದೆ ಆರೋಪಿತರ ಒತ್ತಡಕ್ಕೆ ಒಳಗಾಗಿ 20 ಪವನ್‌ ಚಿನ್ನಾಭರಣ ಹಾಗೂ 20 ಲಕ್ಷ ನಗದು ವರದಕ್ಷಿಣೆ ನೀಡಲು ಒಪ್ಪಿ 20 ಲಕ್ಷ ರೂಪಾಯಿ ಹಣವನ್ನು ಮದುವೆಯ ಪೂರ್ವದಲ್ಲಿ   1ನೇ ಆರೋಪಿಯ ಬಳಿ ನೀಡಿದ್ದು, ಮದುವೆಯ ಸಮಯ ಪಿರ್ಯಾದಿದಾರರಿಗೆ 20 ಪವನ್‌ಚಿನ್ನಾಭರಣ ಹಾಕಿರುತ್ತಾರೆ. ಮದುವೆಯ ನಂತರ ಆರೋಪಿತರುಗಳೆಲ್ಲರೂ ಇನ್ನೂ ಹೆಚ್ಚಿನ ವರದಕ್ಷಿಣೆಗೆ ಬೇಡಿಕೆ ಇಟ್ಟು, ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು, ಹೊಡೆದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುತ್ತಾರೆ. ಮದುವೆಯಾಗಿ 20 ದಿನದಲ್ಲಿ 1ನೇ ಆರೋಪಿ ವಿದೇಶಕ್ಕೆ ಹೋಗಿದ್ದು, ವಿದೇಶಕ್ಕೆ ಹೋದ 1 ವಾರ ಮಾತ್ರ ಪಿರ್ಯಾದಿದಾರರೊಂದಿಗೆ  ಮಾತ್ರ ಒಳ್ಳೆಯ ರೀತಿಯಲ್ಲಿ ಮಾತನಾಡಿಕೊಂಡಿದ್ದು, ನಂತರ ಮಾತುಕತೆ ನಿಲ್ಲಿಸಿರುತ್ತಾನೆ. 2 ರಿಂದ 6ನೇ ಆರೋಪಿತರು 1ನೇ ಆರೋಪಿ ಪಿರ್ಯಾದಿದಾರರಿಗೆ ಡೈವರ್ಸ್ ಕೊಡಿಸುವಂತೆ ಮಾಡುತ್ತೇವೆ ಎಂದು ಹೇಳಿ ದಿನಾಂಕ 04/07/2022 ರಂದು ಪಿರ್ಯಾದಿದಾರರನ್ನು  ಮನೆಯಿಂದ ಹೊರಗೆ ಹಾಕಿರುತ್ತಾರೆ. ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 64/2022  ಕಲಂ: 498(ಎ), 504 ಜೊತೆಗೆ 34 ಐಪಿಸಿ ಮತ್ತು 3, 4 ಡಿ.ಪಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.       
 • ಕುಂದಾಪುರ: ಪಿರ್ಯಾದಿದಾರರಾದ ಜೋನ್ ಕೋತಾ (60), ತಂದೆ: ಕಾಶ್ಮೀರ್ ಕೋತಾ, ವಾಸ: ಕಳಂಜೆ, ಆನಗಳ್ಳಿ ಗ್ರಾಮ, ಕುಂದಾಪುರ ತಾಲೂಕು ಇವರು ದಿನಾಂಕ 29/09/2022 ರಂದು ಸಂಜೆ 07:00 ಗಂಟೆಗೆ ಕೆಲಸ ಮುಗಿಸಿ ಆನಗಳ್ಳಿ ಗ್ರಾಮದ ಕಳಂಜೆ ಬಳಿ ಇರುವ ಪಿರ್ಯಾದಿದಾರರ ಅಕ್ಕನ ಮನೆ ಬಳಿ ತನ್ನ ಮನೆ ಕಡೆಗೆ ರಸ್ತೆಯ ಅಂಚಿನಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಪಿರ್ಯಾದಿದಾರರ ಅಕ್ಕ ದುಲ್ಸಿನ್ ಕೋತಾ ಮತ್ತು ಆಕೆಯ ಗಂಡನಾದ ವಿನ್ಸೆಂಟ್ ಡಿಸೋಜಾರವರು, ಪಿರ್ಯಾದಿದಾರರನ್ನು ಅಡ್ಡಗಟ್ಟಿ ನಮ್ಮ ಮನೆ ಬಳಿ ಯಾಕೆ ಬರುತ್ತೀಯಾ ಎಂದು ಹೇಳಿ ಅವರಿಬ್ಬರ ಕೈಯಲ್ಲಿದ್ದ ಮರದ ರೀಪಿನಿಂದ ಪಿರ್ಯಾದಿದಾರರ ಎಡಬದಿಯ ಹಣೆಗೆ ಮತ್ತು ಎರಡೂ ಕಾಲಿನ ತೊಡೆಯ ಭಾಗಕ್ಕೆ ಹೊಡೆದು, ಕೊಲ್ಲದೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಲ್ಲದೇ ಅವಾಚ್ಯ ಶಬ್ದದಿಂದ ಬೈಯ್ದಿರುವುದಾಗಿದೆ. ಆಪಾದಿತರ ಕೃತ್ಯದಿಂದ ಪಿರ್ಯಾದಿದಾರರಿಗೆ ಹಣೆಯ ಭಾಗದಲ್ಲಿ ರಕ್ತ ಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಕುಂದಾಪುರ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 108/2022 ಕಲಂ: 341, 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .  
 • ಮಣಿಪಾಲ: ದಿನಾಂಕ  28/09/2022 ರಂದು ಮಣಿಪಾಲ ಪೊಲೀಸ್‌  ಠಾಣಾ  ಪೊಲೀಸ್‌ ಉಪನಿರೀಕ್ಷಕರಾದ ರಾಜಶೇಖರ ವಂದಲಿ ಇವರಿಗೆ ದೊರೆತ ಖಚಿತ ಮೇರೆಗೆ ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ಆರೋಪಿ ‌ಆಯುಶ್‌ ಕುಮಾರ್‌ (21) ಎಂಬಾತನನ್ನು  ವಶಕ್ಕೆ ಪಡೆದು ಅದೇ ದಿನ ಗಾಂಜಾ  ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ  ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು,  ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದಿನಾಂಕ 30/09/2022 ರಂದು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 157/2022 ಕಲಂ: 27 (b) NDPS ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ದಿನಾಂಕ  28/09/2022 ರಂದು ಮಣಿಪಾಲ ಪೊಲೀಸ್‌  ಠಾಣಾ  ಪೊಲೀಸ್‌ ಉಪನಿರೀಕ್ಷಕರಾದ ರಾಜಶೇಖರ ವಂದಲಿ ಇವರಿಗೆ ದೊರೆತ ಖಚಿತ ಮೇರೆಗೆ ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ಆರೋಪಿ ಹರ್ಷ ಕುಮಾರ್(21) ಎಂಬಾತನನ್ನು  ವಶಕ್ಕೆ ಪಡೆದು ಅದೇ ದಿನ ಗಾಂಜಾ  ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ  ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು,  ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದಿನಾಂಕ 30/09/2022 ರಂದು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 158/2022 ಕಲಂ: 27 (b) NDPS ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ದಿನಾಂಕ  28/09/2022 ರಂದು ಮಣಿಪಾಲ ಪೊಲೀಸ್‌  ಠಾಣಾ  ಪೊಲೀಸ್‌ ಉಪನಿರೀಕ್ಷಕರಾದ ರಾಜಶೇಖರ ವಂದಲಿ ಇವರಿಗೆ ದೊರೆತ ಖಚಿತ ಮೇರೆಗೆ ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ಆರೋಪಿ ಮೊಹಮ್ಮದ್‌ ಹಸನ್‌ ರಾಜಾ(21) ಎಂಬಾತನನ್ನು  ವಶಕ್ಕೆ ಪಡೆದು ಅದೇ ದಿನ ಗಾಂಜಾ  ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ  ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು,  ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದಿನಾಂಕ 30/09/2022 ರಂದು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 159/2022 ಕಲಂ: 27 (b) NDPS ರಂತೆ ಪ್ರಕರಣ ದಾಖಲಾಗಿರುತ್ತದೆ. ‌
 • ಮಣಿಪಾಲ: ದಿನಾಂಕ  28/09/2022 ರಂದು ಮಣಿಪಾಲ ಪೊಲೀಸ್‌  ಠಾಣಾ  ಪೊಲೀಸ್‌ ಉಪನಿರೀಕ್ಷಕರಾದ ರಾಜಶೇಖರ ವಂದಲಿ ಇವರಿಗೆ ದೊರೆತ ಖಚಿತ ಮೇರೆಗೆ ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ಆರೋಪಿ ಯಶ್‌ ಚಹಲ್‌ (21) ಎಂಬಾತನನ್ನು  ವಶಕ್ಕೆ ಪಡೆದು ಅದೇ ದಿನ ಗಾಂಜಾ  ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ  ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು,  ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದಿನಾಂಕ 30/09/2022 ರಂದು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 160/2022 ಕಲಂ: 27 (b) NDPS ರಂತೆ ಪ್ರಕರಣ ದಾಖಲಾಗಿರುತ್ತದೆ. ‌
 • ಮಣಿಪಾಲ: ದಿನಾಂಕ  28/09/2022 ರಂದು ಮಣಿಪಾಲ ಪೊಲೀಸ್‌  ಠಾಣಾ  ಪೊಲೀಸ್‌ ಉಪನಿರೀಕ್ಷಕರಾದ ರಾಜಶೇಖರ ವಂದಲಿ ಇವರಿಗೆ ದೊರೆತ ಖಚಿತ ಮೇರೆಗೆ ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ಆರೋಪಿ ಆಕಾಶ್ ಅಗರ್ವಾಲ್‌ (19)  ಎಂಬಾತನನ್ನು  ವಶಕ್ಕೆ ಪಡೆದು ಅದೇ ದಿನ ಗಾಂಜಾ  ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ  ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು,  ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದಿನಾಂಕ 30/09/2022 ರಂದು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 161/2022 ಕಲಂ: 27 (b) NDPS ರಂತೆ ಪ್ರಕರಣ ದಾಖಲಾಗಿರುತ್ತದೆ. ‌
 • ಮಣಿಪಾಲ: ದಿನಾಂಕ  28/09/2022 ರಂದು ಮಣಿಪಾಲ ಪೊಲೀಸ್‌  ಠಾಣಾ  ಪೊಲೀಸ್‌ ಉಪನಿರೀಕ್ಷಕರಾದ ರಾಜಶೇಖರ ವಂದಲಿ ಇವರಿಗೆ ದೊರೆತ ಖಚಿತ ಮೇರೆಗೆ ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ಆರೋಪಿ ಅರಮಾನ್‌ ಗಂಧರ್ವ ಕೊಟ್ಟಾಯ್‌ ಕುಮಾರ್(21)‌ ಎಂಬಾತನನ್ನು  ವಶಕ್ಕೆ ಪಡೆದು ಅದೇ ದಿನ ಗಾಂಜಾ  ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ  ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು,  ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದಿನಾಂಕ 30/09/2022 ರಂದು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 162/2022 ಕಲಂ: 27 (b) NDPS ರಂತೆ ಪ್ರಕರಣ ದಾಖಲಾಗಿರುತ್ತದೆ. ‌
 • ಮಣಿಪಾಲ: ದಿನಾಂಕ  28/09/2022 ರಂದು ಮಣಿಪಾಲ ಪೊಲೀಸ್‌  ಠಾಣಾ  ಪೊಲೀಸ್‌ ಉಪನಿರೀಕ್ಷಕರಾದ ರಾಜಶೇಖರ ವಂದಲಿ ಇವರಿಗೆ ದೊರೆತ ಖಚಿತ ಮೇರೆಗೆ ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ಆರೋಪಿ ಅನನ್ಯಗರ್ಗ(21) ಎಂಬಾತನನ್ನು  ವಶಕ್ಕೆ ಪಡೆದು ಅದೇ ದಿನ ಗಾಂಜಾ  ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ  ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು,  ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದಿನಾಂಕ 30/09/2022 ರಂದು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 163/2022 ಕಲಂ: 27 (b) NDPS ರಂತೆ ಪ್ರಕರಣ ದಾಖಲಾಗಿರುತ್ತದೆ. ‌
 • ಶಂಕರನಾರಾಯಣ: ಪಿರ್ಯಾದಿದಾರರಾದ ಸುಕೇತ್ (30), ತಂದೆ: ಮಂಜು ಕುಲಾಲ್, ವಾಸ: ದಾಸರಮಕ್ಕಿ ಅಂಪಾರು ಗ್ರಾಮ ಕುಂದಾಪುರ  ತಾಲೂಕು ಹಾಗೂ   ಅವರ  ಸಹೋದರ  ಸಮಾಜ ಸೇವೆ ಮಾಡುತ್ತಿದ್ದು ಈ ವಿಷಯದಲ್ಲಿ  ಆರೋಪಿ ರಂಜೀತ್  ಅಂಪಾರು  ಗ್ರಾಮ ಸಾಮಾಜಿಕ  ಜಾಲತಾಣವಾದ  ವಾಟ್ಸಾಪ್‌‌ನಲ್ಲಿ ಅವಹೇಳನಕಾರಿ ಮೆಸೇಜ್   ಹಾಕುತ್ತಿದ್ದನು, ಅದರಂತೆ ಈಗ  ಅಂಪಾರು ಮಹಿಷ  ಮರ್ಧಿನಿ  ದೇವಸ್ಥಾನದಲ್ಲಿ  ನಡೆಯುವ  ಊರಿನವರ ನವರಾತ್ರಿ  ಪೂಜೆಯ ಬಗ್ಗೆ  ಹಣ ಸಂಗ್ರಹಿಸುವಂತೆ  ಪಿರ್ಯಾದಿದಾರರ ಅಣ್ಣನಿಗೆ  ಹೇಳಿರುತ್ತಾರೆ ಅದರಂತೆ  ದಿನಾಂಕ  29/09/2022  ರಂದು  ವ್ಯಾಟ್ಟಾಪ್  ಗ್ರೂಪ್‌ನಲ್ಲಿ  ನವರಾತ್ರಿ  ಪೂಜೆಗೆ ಹಣ  ನೀಡುವವರು  ಅಜಿತ್ ನಲ್ಲಿ ನೀಡಿ ಎಂದು  ಮೆಸೇಜ್  ಹಾಕಿದ್ದು, ಈ  ಬಗ್ಗೆ   ಆರೋಪಿಯು  ವ್ಯಾಟ್ಸಾಪ್‌ ಗ್ರೂಪನಲ್ಲಿ  ಅವಹೇಳನ ಮಾಡುವ  ರೀತಿಯಲ್ಲಿ ಮೆಸೇಜ್  ಮಾಡಿರುತ್ತಾನೆ. ಈ ಬಗ್ಗೆ  ವಿಚಾರಿಸಲು ದಿನಾಂಕ  30/09/2022 ರಂದು  ಪಿರ್ಯಾದಿದಾರರು  ಹಾಗೂ ಸಹೋದರ ಅಜತ್ ನೊಂದಿಗೆ  ಅಂಪಾರು  ಗ್ರಾಮದ ಅಂಪಾರು ಆಟೋರಿಕ್ಷಾ ನಿಲ್ದಾಣಕ್ಕೆ ಹೋಗಿ  ಅಲ್ಲಿ  ಆರೋಪಿಯಲ್ಲಿ ವಿಚಾರಿಸಿದಾಗ  ಆರೋಪಿಯು  ಏಕಾಏಕೀ ಅಕ್ರಮವಾಗಿ ತಡೆದು   ನಿಲ್ಲಿಸಿ   ಕೈಯಿಂದ  ಪಿರ್ಯಾದಿದಾರರರ   ತುಟಿಗೆ ಹಾಗೂ  ಅಜಿತ್ ಇವರ  ಕಣ್ಣಿನ ಬಳಿ   ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 100/2022  ಕಲಂ: 341,323 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಶಂಕರನಾರಾಯಣ: ಪಿರ್ಯಾದಿದಾರರಾದ ನೂರುಲ್ಹಾ (28), ತಂದೆ: ಮಹಮ್ಮದ್ ಗೌಸ, ವಾಸ: ರಜಿಯಾ ಮಂಜಿಲ್  ಹಾಡಿಮನೆ  ಹೈಕಾಡಿ  ಹಿಲಿಯಾಣ ಗ್ರಾಮ ಬ್ರಹ್ಮಾವರ ಉಡುಪಿ ಇವರಿಗೆ  ಆರೋಪಿ ಅಜೀಮ್,  ತಂದೆ: ಭಾಷಾ  ಸಾಹೇಬ್, ವಾಸ: ಹೈಕಾಡಿ ಹಿಲಿಯಾಣ ಗ್ರಾಮ ಬ್ರಹ್ಮಾವರ  ತಾಲೂಕು ಇವರು ಈ ಹಿಂದೆ ಯಾವಾಗಲೂ ತೊಂದರೆ  ಮಾಡುತ್ತಿದ್ದು,  ದಿನಾಂಕ 30/09/2022 ರಂದು ಪಿರ್ಯಾದಿದಾರರು ಶುಕ್ರವಾರದ ಪ್ರಾರ್ಥನೆಗೆ ಎಂದು ಬ್ರಹ್ಮಾವರ   ತಾಲೂಕಿನ  ಹಿಲಿಯಾಣ ಗ್ರಾಮದ ಹೈಕಾಡಿ ಮಸೀದಿಗೆ  ಹೋಗಿದ್ದು, ನಂತರ  ಪ್ರಾರ್ಥನೆ  ಮುಗಿಸಿ ಮಸೀದಿಯ  ಎದುರಿನ ಅಂಗಡಿಯ  ಬಳಿ  ರಸ್ತೆಯಲ್ಲಿ  ನಡೆದುಕೊಂಡು ಹೋಗುತ್ತಿರುವಾಗ   ಆರೋಪಿಯು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ  ಕೈಯಿಂದ ಕೆನ್ನೆಗೆ ಹೊಡೆದು  ನಿನ್ನನು  ಬಿಡುವುದಿಲ್ಲ ಎಂದು   ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 101/2022  ಕಲಂ: 341,323 ,504,506  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.           

ಇತ್ತೀಚಿನ ನವೀಕರಣ​ : 01-10-2022 09:50 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080