ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಹೆಬ್ರಿ: ದಿನಾಂಕ 30/08/2022 ರಂದು ಪಿರ್ಯಾದಿದಾರರಾದ ಶಂಕರ ಶೆಟ್ಟಿ (49), ತಂದೆ: ದಿ. ಅಚ್ಚಣ್ಣ ಶೆಟ್ಟಿ,  ವಾಸ:ಶಶಿ ನಿವಾಸ ಬಲ್ಲಾಡಿ, ಮುದ್ರಾಡಿ ಗ್ರಾಮ ಹೆಬ್ರಿ ತಾಲೂಕು ಇವರ ತಮ್ಮ ಸುಕೇಶ ಇವರು ತನ್ನ KA-20-D-8719 ನೇ ಅಟೋರಿಕ್ಷಾವನ್ನು ವರಂಗ ಕಡೆಯಿಂದ ಹೆಬ್ರಿ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದು. ಅವರ ಮುಂದುಗಡೆಯಿಂದ ಅಂದರೆ ಹೆಬ್ರಿ ಕಡೆಗೆ ಹೋಗುತ್ತಿದ್ದ KA-04-C-6300 ನೇ ಬಸ್ಸನ್ನು ಅದರ ಚಾಲಕ ಜನಾರ್ಧನ ಇವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಸಂಜೆ 06:15 ಗಂಟೆಗೆ ವರಂಗ ಗ್ರಾಮದ ವರಂಗ ವ್ಯವಸಾಯ ಸಹಕಾರಿ ಸಂಘದ ಎದುರುಗಡೆ ತಲುಪಿ ಯಾವುದೇ ಸೂಚನೆಯನ್ನು ನೀಡದೇ ನಿರ್ಲಕ್ಷತನದಿಂದ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ  ಬಸ್ಸಿನ ಹಿಂದುಗಡೆಯಿಂದ ಸುಕೇಶ್ ಇವರು ಚಲಾಯಿಸಿಕೊಂಡು ಬರುತ್ತಿದ್ದ KA-20-D-8719 ನೇ ಅಟೋರಿಕ್ಷಾವು ಬಸ್ಸಿನ ಹಿಂಭಾಗಕ್ಕೆ ತಾಗಿದ ಪರಿಣಾಮ ಅಟೋರಿಕ್ಷಾದ ಮುಂದಿನ ಭಾಗವು ಜಖಂ ಅಗಿರುವುದಲ್ಲದೇ ಚಾಲಕ ಸುಕೇಶ್ ರವರಿನಿಗೆ ಬಲಕಾಲಿನ ಗಂಟಿನ ಬಳಿ ಮೂಳೆ ಮುರಿತವಾಗಿದ್ದು.  ಎಡಕಾಲಿನ ಗಂಟಿನ ಬಳಿ ಮತ್ತು ಕೈಗಳಿಗೆ ಗಾಯವಾಗಿರುತ್ತದೆ.  ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 38/2022 ಕಲಂ: 279 ,337 ,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಗಣಪತಿ (46), ತಂದೆ: ಕಾಳ, ವಾಸ: ಕಟ್ಕೇರೆ, ಕೋಣಿ ಗ್ರಾಮ, ಕುಂದಾಪುರ ತಾಲೂಕು ಇವರು ಸೆಂಟ್ರಿಂಗ್ ಗುತ್ತಿಗೆದಾರ ಕೆಲಸ ಮಾಡಿಕೊಂಡಿದ್ದು,  ದಿನಾಂಕ 31/08/2022 ರಂದು ಸಂಜೆ 06:00 ಗಂಟೆಗೆ ಮೂಡುಗೋಪಾಡಿಯ ಅಶೋಕನಗರ ಎಂಬಲ್ಲಿ ಕೆಲಸದ ಬಗ್ಗೆ  125 ಸೀಟುಗಳು ಮತ್ತು 500 ಕೆ.ಜಿ ಕಬ್ಬಿಣದ ರಾಡು ಇಟ್ಟುಹೋಗಿದ್ದು, ದಿನಾಂಕ 31/08/2022 ರಂದು ಬೆಳಿಗ್ಗೆ 08:00 ಗಂಟೆಗೆ ಬಂದು ನೋಡುವಾಗ ಸ್ಥಳದಲ್ಲಿ ಇಟ್ಟಿದ್ದ ಕಬ್ಬಿಣದ ಸೀಟು ಹಾಗೂ ರಾಡುಗಳು ಇಲ್ಲದೇ ಇದ್ದು ಯಾರೋ ಕಳ್ಳರು  ಕಳವು ಮಾಡಿಕೊಂಡು ಹೋಗಿರುವುದಾಗಿದೆ.  ಕಳವಾದ ಕಬ್ಬಿಣದ ಸೀಟುಗಳ ಮೌಲ್ಯ 1,25,000/- ರೂಪಾಯಿ ಮತ್ತು ಕಬ್ಬಿಣದ ರಾಡುಗಳ ಮೌಲ್ಯ 40,000/- ರೂಪಾಯಿ ಆಗಿದ್ದು, ಸ್ವತ್ತಿನ  ಒಟ್ಟು ಮೌಲ್ಯ 1,65,000/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 95/2022 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

 ಕಾಣೆ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಗಿರೀಶ್(44), ತಂದೆ: ಜಿನ್ನಪ್ಪ ನಾಯ್ಕ್, ವಾಸ: ಗಿರಿನಿವಾಸ ಇಂದಿರಾ ನಗರ ಕೋಟೆ ಗ್ರಾಮ ಕಟಪಾಡಿ, ಕಾಫು ತಾಲೂಕು ಇವರ  ತಂಗಿಯ ಗಂಡ ವೆಂಕಟೇಶ್ ಪುತ್ರನ್‌ (40) ಎಂಬುವವರು ಮಲ್ಪೆಯಲ್ಲಿ ಮೀನುಗಾರಿಕೆ ಕೆಲಸಮಾಡಿಕೊಂಡಿದ್ದು, ಅವರು ಅವರ ಮನೆಯಾದ ಕಾಪು ತಾಲೂಕು ಉಳಿಯಾರ ಗೋಳಿ ಗ್ರಾಮದ ಕೋತಲಕಟ್ಟೆ ಎಂಬಲ್ಲಿ ವಾಸಮಾಡಿಕೊಂಡಿರುತ್ತಾರೆ. ದಿನಾಂಕ 30/08/2022 ರಂದು ಸಂಜೆ 7:00 ಗಂಟೆಗೆ ಪಿರ್ಯಾದಿದಾರರ ಹೆಂಡತಿ ವೆಂಕಟೇಶರವರ ಮೊಬೈಲ್ ಗೆ ಕರೆಮಾಡಿದಾಗ ಅವರ ಮೊಬೈಲ್ ಸ್ವಿಚ್ ಬರುತ್ತಿರುವುದಾಗಿ ಪಿರ್ಯಾದಿದಾರರಿಗೆ ತಿಳಿಸಿದ್ದು, ಪಿರ್ಯಾದಿದಾರರು ಕೂಡಲೇ ಕೋತಲಕಟ್ಟೆಗೆ ವೆಂಕಟೇಶ್‌ ರವರ ಮನೆಗೆ ಹೋಗಿ ನೋಡಲಾಗಿ ಅವರ ಮನೆಗೆ ಬೀಗ ಹಾಕಿದ್ದು ಅಕ್ಕ ಪಕ್ಕದ ಮನೆಯವರಲ್ಲಿ ವಿಚಾರಿಸಲಾಗಿ ಅವರು ಮಧ್ಯಾಹ್ಯ 2:00 ಗಂಟೆಯ ತನಕ ಮನೆಯಲ್ಲಿ ಇದ್ದರು  ಎಂಬುದಾಗಿ ತಿಳಿಸಿರುತ್ತಾರೆ. ನಂತರ ಸ್ನೇಹಿತರಲ್ಲಿ ಹಾಗೂ ನೆರೆಕರೆಯವರಲ್ಲಿ ಸಂಬಂಧಿಕರಲ್ಲಿ ವಿಚಾರಿಸಿದ್ದಲ್ಲಿ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 95/2022  ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಿರ್ವಾ: ಪಿರ್ಯಾದಿದಾರರಾದ ಶ್ರೀಮತಿ ರಾಧ (35), ಗಂಡ: ರಮೇಶ, ವಾಸ:  ಕುತ್ಯಾರು ರೋಡ್‌, ತೊಟ್ಲಗುರಿ, ಮರದ ಮಿಲ್‌ ಬಳಿ, ಶಿರ್ವ  ಅಂಚೆ  ಮತ್ತು  ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರ ಗಂಡ ರಮೇಶ (40) ರವರು  ಪೀಡ್ಸ್‌ ಖಾಯಿಲೆಯಿಂದ  ಬಳಲುತ್ತಿದ್ದು, ದಿನಾಂಕ 30/08/2022 ರಂದು ರಾತ್ರಿ 20:45 ಗಂಟೆಯಿಂದ  ದಿನಾಂಕ 31/08/2022 ರಂದು ಬೆಳಿಗ್ಗೆ  8:20  ಗಂಟೆಯ ನಡುವಿನ  ಅವಧಿಯಲ್ಲಿ ಶಿರ್ವ ಗ್ರಾಮದ ತೊಟ್ಲಗುರಿ ಎಂಬಲ್ಲಿ ಪಿರ್ಯಾದಿದಾರರ ವಾಸದ ಮನೆಯಲ್ಲಿ ಯಾರು  ಇಲ್ಲದ  ಸಮಯ  ಮನೆಯ ಮಾಡಿನ ಮರದ  ಜಂತಿಗೆ  ನೈಲಾನ್‌ ಸೀರೆಯನ್ನು ಕುತ್ತಿಗೆ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.  ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 23/2022  ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ವಸಂತ ಕುಲಾಲ್‌ (33), ತಂದೆ: ಶೀನ ಮರಕಾಲ, ವಾಸ: ಬೀಡ್ನಾಡಿ, ಆಜ್ರಿ ಅಂಚೆ & ಗ್ರಾಮ ಕುಂದಾಪುರ ತಾಲೂಕು ಇವರ ತಂಗಿ ಉಷಾ (31) ಎಂಬುವವರನ್ನು 11 ವರ್ಷಗಳ ಹಿಂದೆ ಕುಟುಂಬದವರು ಸೇರಿ ಆರೋಪಿ ಚಂದ್ರಹಾಂಡ ರವರೊಂದಿಗೆ  ಮದುವೆ ಮಾಡಿಸಿದ್ದು, ಅವರಿಗೆ ಪ್ರಸ್ತುತ ಒಂದು ಗಂಡು ಮಗು ಇರುತ್ತದೆ. ಮದುವೆ ನಂತರ ಅವರು ಬೆಂಗಳೂರಿನಲ್ಲಿ ವಾಸವಿದ್ದು ನಂತರ ಈಗ 8 ತಿಂಗಳಿನಿಂದ ಬ್ರಹ್ಮಾವರ ತಾಲೂಕು ಹೇರೂರು ಗ್ರಾಮದ, ಹೇರೂರು ಮೇಸ್ಕಾಂ ಕ್ವಾಟ್ರಸ್‌ ಸಮೀಪ ಇರುವ ಬಾಡಿಗ ಮನೆಯಲ್ಲಿ ವಾಸವಾಗಿದ್ದು ಇಬ್ಬರೂ ಪೇತ್ರಿಯ ಗಾರ್ಮೆಂಟ್ಸ್‌ ಪ್ಯಾಕ್ಟರಿಯಲ್ಲಿ ಟೈಲರಿಂಗ್‌ ಕೆಲಸ ಮಾಡಿಕೊಂಡಿರುತ್ತಾರೆ. ಆರೋಪಿಯು ಉಷಾ ರವರನ್ನು ಮದುವೆಯಾದ ಬಳಿಕ ಬೆಂಗಳೂರಿನಲ್ಲಿ ಇರುವಾಗ ಆರೋಪಿಗೆ ವ್ಯವಹಾರದಲ್ಲಿ ಆದ ನಷ್ಟದ ಬಗ್ಗೆ ವಿನ: ಕಾರಣ ಉಷಾ ರವರಿಗೆ ಬೈಯುವುದು ಹಾಗೂ  ತವರು ಮನೆಯಲ್ಲಿ ಇರುವಾಗ ಆರೋಪಿಗೆ ತವರು ಮನೆಯಲ್ಲಿ ಮರ್ಯಾದೆ ಸಿಕ್ಕುತ್ತಿಲ್ಲ ಎಂದು ಮನೆಯಲ್ಲಿ ಆಗಾಗ ಗಲಾಟೆ ಮಾಡುತ್ತಿರುವ ಬಗ್ಗೆ ಉಷಾ ರವರು ಪಿರ್ಯಾದಿದಾರರಿಗೆ ತಿಳಿಸಿದ್ದು, ಅಲ್ಲದೇ ಉಷಾ ರವರ  ಅತ್ತೆಯಾದ  ರೇವತಿ ಆರೋಪಿಗೆ ಫೋನ್‌ ಮಾಡಿ ಮಾತನಾಡುತ್ತಿರುವ ಬಗ್ಗೆ ಉಷಾ ಬೇಜಾರಿನಲ್ಲಿರುವ ಬಗ್ಗೆ ಪಿರ್ಯಾದಿದಾರರಿಗೆ ತಿಳಿದಿರುತ್ತದೆ.  ದಿನಾಂಕ 30/08/2022 ರಂದು ಸಂಜೆ 6:45 ಗಂಟೆಗೆ ಉಷಾ ಹಾಗೂ ಆರೋಪಿಯ ನಡುವೆ ಗಲಾಟೆಯಾಗಿದ್ದು ಆನಂತರ ಉಷಾ  ಬೇಸರಗೊಂಡು ಬೆಡ್‌ ರೂಮ್‌ಗೆ ಹೋಗಿ ಒಳಗಿನಿಂದ ಲಾಕ್‌ ಮಾಡಿಕೊಂಡವರನ್ನು  ದಿನಾಂಕ 31/08/2022 ಬೆಳಿಗ್ಗೆ 06:30  ಗಂಟೆಗೆ ಬೆಡ್‌ ರೂಮ್‌ನ ಕಿಟಕಿಯ ಸ್ಲೈಡಿಂಗ್‌ ಡೋರ್‌ನ್ನು ತೆರೆದು ನೋಡಿದಾಗ  ಉಷಾ ರವರು ಬೆಡ್‌ ರೂಮ್‌ನ ಸೀಲಿಂಗ್‌ ಫ್ಯಾನ್‌ಗೆ ಚೂಡಿದಾರದ ವೇಲ್‌ ನ್ನು ಬಿಗಿದು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.  ಉಷಾರವರ ಸಾವಿಗೆ ಆರೋಪಿಯ ದುಷ್ಪ್ರೇರಣಯೇ  ಕಾರಣವಾಗಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 145/2022 ಕಲಂ : 306 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 01-09-2022 09:42 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080