ಅಭಿಪ್ರಾಯ / ಸಲಹೆಗಳು

ಪಿರ್ಯಾದಿದಾರರಾದ ಬ್ರೈಟಿಲ್ ಬಿಜು (23) ರವರು ಮಣಿಪಾಲದ ಉಡುಪಿ ನರ್ಸಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು,  ಬಿಡುವಿನ  ವೇಳೆಯಲ್ಲಿ  ತನ್ನ ನಾಲ್ಕು ಜನ ಸ್ನೇಹಿತರೊಂದಿಗೆ ಕೇಟರಿಂಗ್ ಕೆಲಸ ಕೂಡ ಮಾಡಿಕೊಂಡಿದ್ದು, ದಿನಾಂಕ 30/08/2022ರಂದು ಸಾಯಂಕಾಲ ತರಗತಿ ಮುಗಿದ ಬಳಿಕ ಉಡುಪಿಯ ಮಣಿಪಾಲ ಇನ್ ಹೋಟೇಲಿಗೆ ಕ್ಯಾಟರಿಂಗ್ ಕೆಲಸಕ್ಕೆ ಹೋಗಿ ಕ್ಯಾಟರಿಂಗ್ ಕೆಲಸವನ್ನು ಮುಗಿಸಿ, ವಾಪಸ್ಸು ಮಣಿಪಾಲ ಕಡೆಗೆ ತನ್ನ ಸ್ನೇಹಿತ  ಸಿನಾನ್‌ರವರೊಂದಿಗೆ ನಡೆದುಕೊಂಡು ಬರುತ್ತಿದ್ದಾಗ ,ಮಧ್ಯ ರಾತ್ರಿ 12:45 ಗಂಟೆಗೆ ಉಡುಪಿಯ ಕಲ್ಸಂಕ ಜಂಕ್ಷನ್ ನಿಂದ 100 ಮೀಟರ್ ದೂರ ಮುಂದೆ ಹೋಗುವಾಗ ಡ್ರಾಪ್ ಕೇಳಲೆಂದು ಉಡುಪಿ ಸಿಟಿ ಬಸ್‌ ನಿಲ್ದಾಣ ಕಡೆಯಿಂದ ಬಂದ KA-01-MA-5287ನೇ  ಕಾರನ್ನು ಕೈ ತೋರಿಸಿ ಅಡ್ಡ ಹಾಕಿದ್ದು, ನಿಲ್ಲಿಸಿದ  ಕಾರಿನೊಳಗಿಂದ ಕೆಟ್ಟ ವಾಸನೆ ಬರುತ್ತಿರುವುದನ್ನು ಕಂಡ ಬ್ರೈಟಿಲ್ ಬಿಜು ಮತ್ತು ಅವರ ಸ್ನೇಹಿತ ಸಿನಾನ್ ಕಾರಿನೊಳಗೆ ಬರಲು ನಿರಾಕರಿಸಿದಾಗ ಕಾರಿನೊಳಗಿದ್ದ ನಾಲ್ವರ  ಪೈಕಿ ಒಬ್ಬಾತನು ಕಾರಿನಿಂದ ಇಳಿದು ಬಂದು, ' ಮತ್ತೆ ಯಾಕೆ ಕೈ ತೋರಿಸಿ ಕಾರು ನಿಲ್ಲಿಸಿದ್ದು?'  ಎಂದು ಹೇಳಿ, ತನ್ನ ಸೊಂಟದ ಒಳಗಿನಿಂದ ಒಂದು ಚೂರಿಯನ್ನು ತೆಗೆದು, ' ಮರ್ಯಾದೆಯಲ್ಲಿ ಕಾರಿನೊಳಗೆ ಕೂತುಕೊಳ್ಳಿ' ಎಂದು ಹೇಳಿ  ಬಲಾತ್ಕಾರವಾಗಿ ಕಾರಿನೊಳಗೆ ಕೂರಿಸಿ ಮಣಿಪಾಲ ಕಡೆಗೆ ಕಾರನ್ನು ಚಲಾಯಿಸಿಕೊಂಡು ಕರೆದುಕೊಂಡು  ಹೋಗಿ, ಕಾರಿನಲ್ಲಿ  ಪಿರ್ಯಾದಿದಾರರ  ಮತ್ತು  ಅವರ  ಸ್ನೇಹಿತನ ಮೊಬೈಲ್‌  ಫೋನ್‌ ಗಳನ್ನು  ಬಲಾತ್ಕಾರವಾಗಿ  ಕಸಿದುಕೊಂಡಿದ್ದಲ್ಲದೇ, ಕೈಗಳಿಂದ ಹೊಡೆದು  ಹಲ್ಲೆ  ಮಾಡಿ, ನಂತರ ಆರೋಪಿತರು ಕಾರನ್ನು ದೊಡ್ಡಣಗುಡ್ಡೆಯ ಒಂದು ಪಾರ್ಕ್‌ ಬಳಿ ಕರೆದುಕೊಂಡು ಹೋಗಿ, ಅಲ್ಲಿ ಕೋಲಿನಿಂದ ಮತ್ತು ಕೈಯಿಂದ ತಲೆಗೆ, ಕಾಲಿಗೆ ಮತ್ತು ಬೆನ್ನಿಗೆ ಹಲ್ಲೆ ಮಾಡಿದ್ದಲ್ಲದೇ, ' 2 ಲಕ್ಷ ತಂದು ಕೊಡುವಂತೆ, ತಂದುಕೊಡದಿದ್ದರೆ ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಬೆದರಿಕೆ ಹಾಕಿದ್ದು, ಆ ಸಮಯ  ಪಿರ್ಯಾದಿದಾರರು ಅವರಿಂದ ತಪ್ಪಿಸಿಕೊಂಡು ಬಂದಿರುವುದಾಗಿ ಬ್ರೈಟಿಲ್ ಬಿಜುರವರು ನೀಡಿದ ದೂರಿನನ್ವಯ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ  ಕೈಗೊಳ್ಳಲಾಗಿರುತ್ತದೆ.

            ಅದರಂತೆ ದೂರಿನಲ್ಲಿ ತಿಳಿಸಿದ್ದ ಆರೋಪಿತರ ಕಾರು ನಂಬ್ರ KA-01-MA-5287ನೇದರ ಜಾಡು ಹಿಡಿದು, ತನಿಖೆ  ಕೈಗೊಂಡು  ಆರೋಪಿತರಾದ 1) ಮೊಹಮ್ಮದ್‌ ರಜಿನ್‌,  2) ಝಕ್ರಿಯಾ , 3)  ಖಾಲಿದ್‌ ಇವರನ್ನು ದಿನಾಂಕ 31/08/2022ರಂದು ಶಿರ್ವಾದ ಹಾಲು ಡೈರಿಯ ಬಳಿ ವಶಕ್ಕೆ  ಪಡೆದು, ಮಾನ್ಯ ನ್ಯಾಯಾಲಯದ ಮುಂದೆ  ಹಾಜರುಪಡಿಸಲಾಗಿ ಆರೋಪಿತರಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿರುತ್ತದೆ. ಪ್ರಕರಣದಲ್ಲಿ ಇನ್ನೊಬ್ಬ ಆರೋಪಿತನಾದ ರೆಹಮಾನ್‌ ಎಂಬಾತನು ತಲೆ  ಮರೆಸಿಕೊಂಡಿದ್ದು,  ಆತನ ದಸ್ತಗಿರಿಗೆ ಬಾಕಿಯಿರುತ್ತದೆ.  

            ಪ್ರಕರಣದಲ್ಲಿ ಆರೋಪಿತರ ಪತ್ತೆಯ ಬಗ್ಗೆ ಮಾನ್ಯ ಪೊಲೀಸ್‌ ಅಧೀಕ್ಷಕರಾದ ಹಾಕೆ ಅಕ್ಷಯ್‌ ಮಚ್ಚಿಂದ್ರ, ಐಪಿಎಸ್, ಉಡುಪಿ ಜಿಲ್ಲೆರವರ ಆದೇಶದಂತೆ, ಸಿದ್ಧಲಿಂಗಪ್ಪ S.T., ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು,  ಸುಧಾಕರ ಸದಾನಂದ ನಾಯ್ಕ್, ಡಿವೈಎಸ್‌ಪಿ ಉಡುಪಿ ಉಪವಿಭಾಗರವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಮೋದ ಕುಮಾರ್ ಪಿ,  ಪಿಎಸ್‌ಐ ವಾಸಪ್ಪ ನಾಯ್ಕ್, ಹಾಗೂ ಸಿಬ್ಬಂದಿಯವರಾದ ಸತೀಶ್‌, ಹರೀಶ್‌  ನಾಯ್ಕ್‌, ರಿಯಾಝ್‌ ಅಹ್ಮದ್‌, ಶ್ರೀಮತಿ ನೇತ್ರಾವತಿ, ಕಿರಣ್‌,  ಆನಂದ, ಹೇಮಂತ್‌, ಹಾಗೂ ಚಾಲಕರಾದ ಸಂತೋಷ್, ರಾಘವೇಂದ್ರರವರು ಪ್ರಕರಣದಲ್ಲಿನ ತನಿಖೆ ಹಾಗೂ ಆರೋಪಿ ಪತ್ತೆಯ ಬಗ್ಗೆ‌ ಕಾರ್ಯ ನಿರ್ವಹಿಸಿರುತ್ತಾರೆ.

ಇತ್ತೀಚಿನ ನವೀಕರಣ​ : 01-09-2022 03:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080